120 ಹನುಮದ್ರಾಮಾಯಣ. ಬಿನದದೆ ಕರೆದುಯೋಡೆ ಮೀನು | ಮಿನುಗುವುದಾತಂಗೆ ಕೀರ್ತಿಯವನೀತಳದೊಳ್ ||೯೭|| ನೀನರಿಯದಾತನೇಂ ಪವ | ಮಾನಾತ್ಮಜ ವೇಗದಿಂದೆ ಪೋಗೆನುತಾಗಳ್ || ಜಾನಕಿ ಕಣ್ಣನಿದುಂಬುತೆ | ತಾನಪ್ಪಣೆಗೊಟ್ಟು ಕಳಿಸಿದಳ್ ಮಾರುತಿಯಂ | Fಲೆ || ಅತಿಭಕ್ತಿಯೋಳಂ ಮಾರುತ || ಸುತನವನಿಜೆಯಂಘಿಗೆರಗಿ ಬೀಳ್ಕೊಂಡು ಮಹಾ || ಕ್ಷಿತಿಧರಮನಡರ್ದು೦ ರಘು | ಪತಿಯಂ ಮನದಲ್ಲಿ ನೆನೆದು ಗಳಿಲನೆ ಪಾರ್ದಂ || ೯೯ |! ಮಿಾರಿರೆ ರಭಸಂ ಕುಸಿದುದು | ಧಾರಿಣಿಯಾ ತಳಕೆ ಶೈಲಮನಿಲಕುಮಾರಂ || ನೀರದಪಧದೊಳ್ ಬಲ್ಲ || ದೋರುತೆ ಬರುತಿರ್ದ್ದನಂಡಲಾಧೀಶನ ವೊಲ್ | ೫೦ | ಈ ನಿಸ್ತನದಿಂ ಹನುಮಂ || ಜಾನಕಿಯಂ ಕಂಡುಬಂದುದದು ನಿಜಮೆನುತುಂ || ಮಾನದೆ ಕುಣಿದಾಡುತ್ಯಂ | ವಾನರರಿರಲಿಳಿದನಲ್ಲಿ ಮಾರುತವುತ್ರಂ || ೧೦೧ } ಕವಿಕವಿದು ಕಪಿಗಳೆಲ್ಲರ್ | ಪವಮಾನನ ಮಗನನ್ನೆದೆ ತಳ್ಳಿ ಸುತಂ ವಾ || ಲವನುರೆ ಚುಂಬಿಸಿ ಕುಣಿವು | ತ್ಯವಿರಳತೋಷದೊಳಮಿರ್ದ್ದರದನೇವೇಳೋಂ || ೧೦೨ || ವಿಧಿತನುಜಾತಾಂಗದರತಿ | ಮುದದಿಂ ತಳ್ಳಯ್ಕೆ ಮುದ್ದಿಡುತ್ತುಂ ನಲವಿಂ | ಸದಮಲ ನಿರುಪಮ ಕರುಣಾ | ನಿಧಿಯೇ ನೀನೆಮ್ಮನಿಂದು ಸಲಹಿದೆಯೆಂದರ್ || ೧೦೩ || ಕಂಡೆಯ ಸೀತೆಯನಸುರರ | ಗಂಡಂ ತಾನಿರ್ಪನೆಂತು ಬಲಮೆಂತಿರ್ಕ್ಕುಂ || ಚಂಡಪರಾಕ್ರಮಿ ಪೇಳೆನೆ | ಗಂಡುಗಲಿ ಮಹಾನಿಲಾತ್ಮಸಂಭವನುಸಿರ್ದo | ೧೪ |
ಪುಟ:ಹನುಮದ್ದ್ರಾಮಾಯಣಂ.djvu/೧೨೮
ಗೋಚರ