ಪುಟ:ಹನುಮದ್ದ್ರಾಮಾಯಣಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟಮಾಶ್ವಾಸ. ಕರಿಕಲಭಕೆ ಬೆದರುಗುಮೇ | ಹರಿಶಾಬಂ ಘೋರಸಮರಕಳ್ಳುವನೇನಯ್ || ನರವಾನರರಂ ಯಮಮಂ | ದಿರಕಟ್ಟುವುದೇನಸಾಧ್ಯವೆನಗೆಲೆ ವೃದ್ದಾ 11 ೧೫ | ಇನ್ನೇನಂ ಬಗುಳದೆ ನಡೆ 1 ನಿನ್ನಯೆ ನೆಲೆಗೆಂದು ಕೋಪಿಸುತೆ ನುಡಿಯಲ್ಬಂ ! ಮುನ್ನಿನ ಗುಣಮಿಲ್ಲಂ ತ್ರಿಜ | ಗನ್ನಿಲಯಂ ಕೊಲ್ವನಿವನನೆಂದುಂ ಪೋದಂ | ೧೬ 11, ಬಲಮೆಯ್ತರೆ ದನುಜೇಂದ್ರ | ಕೆಲಬಲಮಂ ನೋಡಿ ಸಾಹಸಿಗಳಂ ಕರೆದುಂ || ಅಲಸದೆ ನಗರದ್ವಾರಂ || ಗಳನುರೆ ಕಾದಿರ್ಷ್ಕದೆನುತೆ ನೇಮಮನಿತ್ತಂ | ೧೬ || ಸುರಪದಿಶೆಯೊಳ್ ಪ್ರಹಸ್ಯಂ || ತರಣಿಕುಮಾರಕನ ದಿಶೆಗೆ ಸುಮಹಾಪಾರ್ಶ್ವo || ವರುಣಾಶೆಗೆ ಸುರಪಜಿದು | ತರದ ಮಹಾದ್ವಾರಕ್ಕೆದೆ ಸಾರಣದನುಜಂ || ೧೮ | ಕರಿತುರಗಂದನಪದ || ಚರಕುಲಮಂ ಕೂಡಿ ನಡೆದು ವೀರಾರ್ಭಟೆಯಿಂ || ದರಿಬಲಮಂ ಲೆಕ್ಕಿಸದುರು || ತರಜಾಗ್ರತರಾಗುತಿರ್ದ್ದರವರಾಯೆಡೆಯೊಳ್ 11 W || ಬಳಸಿದ ಕೊಂಟೆಯ ಸುತ್ತಲ್ | ಬಳಯುತರಾದಖಿಳದ್ಧ ತರಂ ಬೇಗದೊಳಂ | ನಿಲಿಸುತೆ ಬಡಗಲ ಗೋಹುರ || ಕಲಸದೆ ನಡೆತಂದು ನಿಂದನಾ ದಶಕಂಠಂ | ೨೦ | ಚೊಕ್ಕಳಿಕೆಯ ಕೊಡೆಸಾಸಿರ | ದಿಕ್ಕೆಲದಸುರರ ಸಮೂಹದರ್ಯಮರುಚಿಯಂ | ಲೆಕ್ಕಿಸದುರು ಮಣಿಮುಕುಟದ | ರಕ್ಕಸರಧಿನಾಥನೊಪ್ಪೆ ಕಂಡಂ ರಾಮಂ | ೨೧ | ಇವನಾರತಿವಿಭವದೊಳೊ || ಪುವನೆನುತೆ ವಿಭೀಷಣಾಸುರೇಶನೊಳಂ ಕಾ |