ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಹನುಮದ್ರಾಮಾಯಣ. ಕೆಡೆಪಿ ನರಾಧಮರಂ ಸದೆ | ಬಡಿದುಂ ನೀಂ ಬರ್ಪುದೆಂದು ನೇಮಮನಿತ್ತಂ || ೧೨೭ 11 ಜೀಯ್ಯ ಪಸಾದಮೆನುತ್ತಂ ! ಕಯ್ಯಂ ಮುಗಿದೇರ್ದು ರಥಮನುರುಭರದಿಂದೆ || ಡ್ರೈಯ್ಯನ ಮಾಳ್ಮೆಯೊಳಂ ಜಗ | ದಯ್ಯನ ಸಮರಕ್ಕೆ ಬಂದನಾ ಧೂಮ್ರಾಕ್ಷಂ | ೧೨೮ | ವಾರಣತುರಗವರೂಧದ || ವಾರಮನೊಡಗೊಂಡು ಸರ್ವಸನ್ನಾಹದೊಳಂ || ವಾರಿದನಿಸ್ವನದಿಂ ಪರಿ | ವಾರಸಹಿತನಾಗಿ ಬಂದನುರುಕೊಪದೊಳಂ | | ೧೨೯ || ಶರವರ್ಷoಗರೆಯುತ್ತುರು | ತರತೋಮರಖಡ್ಡ ಭಿಂಡಿವಾಳಗಳಿಂ ವಾ || ನರಬಲಮಂ ಸದೆವ ನಿಶಾ | ಚರಕುಲಮಂ ಕಂಡು ಪವನಜಂ ನಡೆತಂದಂ 11 ೧೩೦ | ತೇರ್ಗಳನುರೆ ಮುರಿದುಂ ಸುಭ | ಟರ್ಗಳನರಿದರಿದು ವಾರಣವಾಜಿಕುಳಮಂ || ನೀರ್ಗುಡಿಯೆ ಕಳಿಸಿದಂ ನೇ | ಸರ್ಗುವರನ ಪುರಕೆ ವೇಗದಿಂದಾ ಹನುಮಂ 11 ೧೩೧ || ಮುಂಬರೆದುಂ ವಾನರನಿಕು || ರುಂಬಮನೆಳ್ಳಟ್ಟಿ ಕೊಲ್ಕ ಧೂಮ್ರಾಕ್ಷಕನಂ || ಬೆಂಬತ್ತಿ ಪಿಡಿದು ಭರದಿಂ | ಕುಂಬಿಣಿಯೊಳ್ ಕೆಡೆಪಿ ಗುರ್ದ್ದಿ ಕೊಂದಂ ಹನುಮಂ || ೧೩೨ ! ಸುರತತಿ ಹರಿಸದೆ ಪೂವಳೆ | ಸುರಿದುದು ಮಾರುತಿಯ ದಿವ್ಯಮಕುಟದೊಳಂ ವಾ || ನರರುರ್ಬಿದರಾ ಮನುಜೇ || ಶ್ವರನುರೆ ಕೊಂಡಾಡುತಿರ್ದ್ದನನಿಲಾತ್ಮಜನಂ || ೧೩೩ || ಈ ಸುದ್ದಿಯನುರೆ ಕೇಳು ಮ || ಹಾಸುರನಾ ವಜ್ರದಂಷ್ಟಖಳನಂ ಕರೆದುಂ || ಕೀಶನರಾಧಮರಂ ಕೀ | ನಾಶನ ಪುರಕಟ್ಟಿ ರ್ಬುದೆಂದುಂ ಪೇಳ್ತಂ [] ೧೩೪ ||