188 ಹನುಮದ್ರಾಮಾಯಣ. ಜ್ವಲಿತಕ್ರೋಧದೆ ರಘುಜಂ | ತಳೆದೈಂದ್ರಾಶುಗಮನೈದೆ ತೆಗೆದಿಸಲಾಗಳ್ | ತಲೆಯಂ ಮಿಗೆ ಕತ್ತರಿಸುತೆ | ನಿಲದೋಲ್ ಪೊಳಲೆಡೆಗೆ ಬಿಸುಟು ಬಂದುದು ಡೊಣೆಗಂ ||೧೨೦|| ದುಂದುಭಿ ಮೊಳಗಿದುದಮರರ | ಬೃಂದಂ ಸುಮವೃಷ್ಟಿಗರೆದುದಾನಂದದೊಳಂ | ಬಂದಂ ನಾರದಮುನಿ ನಲ || ವಿಂದಂ ಶ್ರೀರಾಮನೆಡೆಗೆ ಗಗನಾಂಗಣದಿಂ || ೧೫೧ || ದೇವ ಜಗನ್ಮಯ ಭವರಾ || ಜೀವಾಸನವಂದ್ಯಚರಣ ಚಿನ್ಮಯ ಮುನಿಸಂ || ಭಾವಿತವಿಗ್ರಹ ನಿರುಪಮ | ಪಾವನ ಸುಚರಿತ್ರ ರಾಮ ಜಯಜಯ ಎಂದಂ !! ೧೨೨ || ಮುನ್ನಮಯೋಧ್ಯಾಪುರದೊಳ್ | ನಿನ್ನೆಡೆಗಾಂ ಒಂದು ಬಿನ್ನವಿಸಿದಂದದೊಳಂ | ರನ್ನವಸರವಳ ಬಲ್ಗೊರೆ | ಯನ್ನಿಗಿದೆ ವಧಿಸಿ ಕುಂಭಕರ್ಣಾಸುರನಂ | ೧೨೩ || ಸುರಪತಿರಿಪು ಸೌಮಿತ್ರಿಯ | ಶರದಿಂ ಹತನಪ್ಪನೈದೆ ಮರ್ಬ್ಬಿಗರಾಣಂ || ಧುರದೊಳ್ ಮಡಿವಂ ನಿನ್ನು ರು | ತರವಿಶಿಖದೊಳೆಂದು ನಾರದಂ ಪೋದನಣಂ | ೧೨೪ || ಬೀಳುತೇಳುತೆ ದಾನವ | ಜಾಳದೊಳಳಿದುಳಿದ ಜಾಳುರಕ್ಕಸರೆಯ್ತಂ || ದಾಳಿದಗೀ ಪದನಂ ತವೆ ! ಪೇಳಿಯರೆದು ಬಿಳನಾ ದಶಕಂಠಂ ದಶಕಂಠಂ | ೧೨೫ | ಮಗುಳೆಳ್ಳು ಕುಂಭಕರ್ಣನ | ಬಗೆಯಂ ನೆನೆನೆನೆದು ಪಂಬಲಿಪ ಸಮಯದೊಳಂ || ದುಗುಡಮಿದೇತಕೆ ರಾಮನ | ಖಗಹತಿಗಾರ್ ನಿಲ್ಟರೆಂದನಂದತಿಕಾಯಂ ( ೧೨೬ | ಜಗಮಂ ಸೃಷ್ಟಿಸಿ ಪಾಲಿಸಿ | ಮಿಗೆ ಹರಿಸುವ ದೇವದೇವನೀ ರಘುಜನಲಾ ||
ಪುಟ:ಹನುಮದ್ದ್ರಾಮಾಯಣಂ.djvu/೧೯೬
ಗೋಚರ