244 ಹನುಮದ್ರಾಮಾಯಣ. ಇಡಿಕಿರಿದ ದನುಜಕುಲಮಂ | ಬಡಿದುಂ ದಧಿವಕ್ತನೆಂಬ ಖಳನಂ ಸದೆದುಂ || ಕಡುಪಿ ಸೂಚೀಮುಖನಂ | ಪಿಡಿದುಡಿದುಂ ಗುರ್ಬ್ಬಿ ಕೊಂದನತಿವೇಗದೊಳಂ | ೯೦ | ಅಸುರರನೊಂದೇ ಕ್ಷಣದೊಳ | ಗಸಿಯರೆದುಂ ವಜ್ರದಂಷ್ಟನೆಂಬಾಸುರನಂ | ರಸೆಯೋಳ್ಳೆಡೆವುತೆ ಮೆಟ್ಟಿದ | ನಸಮಾಂಬಕಸದೃಶನಾಗೆ ಸತ್ವರದಿಂದಂ | | ೯೧ || ಅನಿತರೊಳಸುರನ ಮಾನಿನಿ || ಕನಸು ಕಂಡಳು ಬಂದು ನಿಜನಾಧನೊಳಂ || ವಿನಯದೊಳೆಂದಳ್ ಕೇಳು ೦ | ತನಗಂ ದುಃಸ್ವಪ್ನವೊಂದು ಸಂಘಟಿಸಿರ್ಕ್ಕು೦ \ ೯೨ | ಸರಸಿಜನಾಳದೊಳಿಳಿದೀ | ಧರಣಿಗೆ ನಡೆತಂದು ಹನುಮನೆಂಬ ಕಮೀಶಂ |! ತರಿದುಂ ನಿಮ್ಮ ಸಿರಿಯಂ | ದುರುದುಂಡಿಯ ತನುಜಗಿನೆಂದಾಂ ಕಂಡೆಂ ! ೯೩ | ನರನಾಥಂ ಹರಿ ಗಡ ವಾ | ನರನಿಕರಂ ದೇವವಿತತಿ ಗಡ ಖಳರಂ ಸಂ || ಹರಿಸಲ್ ಬಂದರ್ ಗಡ ಕೇಳ್ | ಪರಿಯರಿಯದೆ ತಂದೆ ಭೂಮಿಪಾಲರನಿವರಂ | ೯೪ | ಇನ್ನಾದೊಡೆಯುಂ ಹನುಮನ | ನುಂ ನೆರೆ ಮನ್ನಿಸುತೆ ಭೂಮಿಪಾಲರನುಳಿದುಂ 11, ಚೆನ್ನಾಗಿರೆ ಸುಖವೆಂದುಂ || ಜನ್ನಯೀದಳವನ ಪತ್ನಿ ಸಂಧ್ಯೆಯೆನಿಪ್ಪಲ್ 1 ೯೫ ? ಭ್ರಾಂತಿಯ ಕನಸಿದು ಮನದೊಳ್ || ಚಿಂತಿಸದಿರ್ ಮಾಯೆಯಿಂದ ಬಂಧಿಸುವೆಂ ಕಾ || ಲಾಂತಕವಿಧಿಸುರಪಾದ್ಯರ | ಸಂತೆಯನೆನೆ ಕೇಳಿಸಿತ್ತು ಘನಘನಿನಾದ || ೯೬ !! ಏನಿದೆ ಎನುತಂ ಭಯದಿಂ | ದಾನವನತಿವೇಗದಿಂದೆ ರಾಜಾಂಗಣಕಂ ||
ಪುಟ:ಹನುಮದ್ದ್ರಾಮಾಯಣಂ.djvu/೨೫೨
ಗೋಚರ