248 ಹನುಮದಾಮಾಯಣ. ದೇವರ ಶರದಿದಿರಿನೊಳಂ | ರಾವಣನೇಂ ನಿಲ್ಲಲಾರ್ಪ್ಪನೀ ದಿವಸದೊಳಂ || ಜೀವಿಸಿ ಪೋಪನೆ ತವಪದ | ಸೇವಕನೀ ಹನುಮನಸಕಮಂ ನೀನರಿಯಾ || ೧೨೦ || ಈ ರಾವಣದಾನವನಾ || ಮೈರಾವಣನೆಂಬ ದನುಜನಂ ಕಳಿಪಲ್ಕಂ || ಕಾರಿರುಳೆ ವಿಭೀಷಣನಾ || ಕಾರದೊಳಂ ಬಂದು ಮಾಯೆಯಿಂದೊಳವೊಕ್ಕಂ || ೧೨೧ | ಎಮ್ಮಂ ವಂಚಿಸಿ ದೈತ್ಯಂ | ನಿಮ್ಮಂ ಸೌಮಿತ್ರಿವೆರಸು ಪಾತಾಳಕ್ಕಂ || ಗಮ್ಮನೆ ಕೊಂಡುಯ್ಯಲ್ಯಾಂ || ದುಮ್ಮಾನದೊಳಿರ್ದ್ದೆನಾತ್ಮಮಿಲ್ಲದ ತನುವೊಳ್ ||೧೨೨ !! ತನುವೋಲ್ || ೧೨೨ | ಅನಿತರೊಳೀ ಹನುಮಂ ಕಮ | ಹಿನಿಯ ಸುನಾಳದೊಳವೊಕ್ಕು ನಡೆದಾ ಪುಟಛೇ | ದನಮಂ ಸಾರ್ದ್ಭು೦ ತಟ್ಟೆ | ತ್ಯನನುರೆ ಸಂಹರಿಸಿ ನಿಮ್ಮಲ್ಲಿಗೆ ತಂದಂ || ೧೨೩ || ಈತನ ದೆಸೆಯಿಂ ಪ್ಲವಗ | ವಾತಂ ಜೀವಿಸಿದುದೆಂದು ರವಿಚಂ ಪೊಗಳಲ್ | ಸೀತಾನೇತಂ ಪರಮ | ಪ್ರೀತಿಯೊಳಂ ವಾತಸುತನನಪ್ಪಿದನಾಗಳ್ || ೧೨೪ || ಇವನ ಸಹಾಯಮದಿಲ್ಲದೊ | ಡವಿರಳಜಯಮೆಮಗದೆಂತು ಸಾಧ್ಯಂ ಸತತಂ || ರವಿವಂಶಜರಂ ಪಾಲಿಫೋ | ಡವತರಿಸಿದನ ಗಿರಿಶನೀ ರೂಪದೊಳಂ | || ೧೨೫ || ಈ ಮಹಿಮನ ಪಾವನತರ | ನಾಮಗಳಂ ಜಪಿಸುವಂಗೆ ಸಂಪದಮಕ್ಕುಂ || ಕ್ಷೇಮಂಕರಸಿವನೆನುತಂ || ರಾಮಂ ಪೊಗಳುತ್ತುಮಿರ್ದ್ದನೆಂದಂ ಸೂತಂ || ೧೨೬ | ~-೫೨೫-----
ಪುಟ:ಹನುಮದ್ದ್ರಾಮಾಯಣಂ.djvu/೨೫೬
ಗೋಚರ