ಪುಟ:ಹನುಮದ್ದ್ರಾಮಾಯಣಂ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ಯಾಸ. 281 ಅಂಬರಪಥದೊಳ್ ಬರೆವರೆ | ಕುಂಭಿನಿಯ ಕುಮಾರಿಗೈದೆ ತೋರ್ದಂ ರಾಮಂ || ಅಂಬುಜಲೋಚನೆ ನೋಡಿದೊ | ಶಂಭುವಿರಾಜಿತವಿಲಾಸಪಂಪಾಕ್ಷೇತ್ರಂ \ ೯೦ | ಪಕ್ಷೀಶಂ ನಿನಗೋಸುಗ | ಊಾ ಕೃತಿಯೋಳ್ ತನುವನಿತ್ತನೆನಲಾ ನೆಲನಂ || ಈಕ್ಷಿಸಿ ಧರಣೀಜಾತೆ ನಿ | ಜಾಕ್ಷಿಯಿನಶ್ರುವರ್ಷಮಂ ಕರೆದಳಣಂ | ೯೧ | ಖರಮುಖ್ಯಾಸುರರಂ ಸಂ | ಹರಿಸಿದುದೀ ತಾಣದೆ ರಾಜಿಪ ಗೋದಾ | ವರಿಯೆಂಬ ಮಹಾನದಿಯಿದು | ಸರಸದೊಳಾಮಿರ್ದ್ದ ಪರ್ಣಕುಟಿಯಿದು ನೋಡಾ || ೯೨ | ಇದು ಕುಂಭೋದ್ಭವನಾಶ್ರಮ | ಮಿದು ತತ್ತೋದರನ ಶಾಲೆ ಶರಭಂಗಂ ಸ || ತ್ಪದವಿಯನೆಯ್ದಿದ ಧಾರಿಣಿ | ಯಿದುಮಿಮುನೀಶಕುಟಜಮಿಾಕ್ಷಿವುದಬಲೇ | | ೯೩ | ಭರತಂ ಬಂದೆಮ್ಮಂ ಕಂ | ಡುರುತರಕಾರ್ಪಣ್ಯ ವಚನದಿಂ ಪಾದುಕೆಯಂ || ಭರದಿಂ ಕಯ್ಯೋಂಡ ಮಹಾ || ಗಿರಿಯಿದು ನೋಡಬಲೆ ಚಿತ್ರಕೂಟಾಚಲಮಂ || ೯೪ || ಯಮುನಾಗಂಗಾತೀರದೊ | ತಮಿತಮಹಾಪುಷ್ಪ ಸುಫಲವೂಗಾತಮಾ | ಶ್ರಮಮದು ಪಾವನಗಾತ್ರಂ || ಯಮಿಪಭರದ್ವಾಜನಿರ್ಷ್ಪ ತಾಣಂ ನೋಡಾ 11 ೯೫ | ಅದು ಗುಹನಿರ್ಷ್ಪ ಗೃಹಂ ಮೇ | ಇದರಾಚೆಯೊಳವಿತದಿವ್ಯ ರತ್ನ ಪ್ರಭೆಯಿಂ || ದುದಯದ ರವಿವೊಲ್ ಶೋಭಾ | ಸ್ಪದವೆನಿಸುವ ನಗರಮದುವೆ ಸಾಕೇತಾಖ್ಯಂ || ೯೬ | ವಂದಿಸು ತತ್ಸುರಕೆನೆ ಭೂ | ನಂದನೆ ಕಯ್ಯುಗಿಯೆ ಕಾಣುತ್ತಿಲ್ಲರ್‌ ಮಣಿದರ್ ||