294 ಹನುಮದ್ರಾಮಾಯಣ. ಸೀತೆಯದೇಂ ಸಾಧಿಯೋ ರಘು | ನಾಧ್ಯಂ ರಾಕ್ಷಸರನ್ನೆದೆ ಸಂಹರಿಸುತೆ ಸಂ || ಪ್ರೀತಿಯೋಳೆಳ್ಯರ್ಪ್ಪನೆನು | ತಾ ತರುಣಿಯರಾಡುತಿರ್ದ್ದರತಿಮೋದದೊಳಂ | ೧೫ | ಮುನಿವೇಷಮನಾಂತುಂ ಪಾ | ಅನಗೆಯ್ಯುಂ ಸಕಲಮುನಿಗಳಂ ಬರ್ಪ್ಪನನು | ತನುವಿಂ ಮಂತ್ರಾಕ್ಷತೆಯಂ || ವನಜಾಕ್ಷನ ಮೇಲೆ ಸೂಸುತಿರ್ದ್ದರ್ ವಿಪ್ರರ್ || ೧೬ || ಶರನಿಧಿಯ ಒಂಧಿಸಿ ದಶ | ಶಿರನಂ ಸಂಹರಿಸಿ ಬಂದನೀತಂಗಣೆಯಂ || ನರವರರೊಳ್ ಕಾಣೆಮೆನು || ತೊರೆದು ನುತಿಗೆಯುದೈದೆ ಭೂಭುಜನಿಕರಂ_!! ೧೭ || ಪರಿಪರಿಯ ಸುರಗಳಂ | ಪರಿಮಳಿಸುವ ಮಲಯಚಾತಕರ್ಪೂರಗಳಂ || ಪರಿತೋಷದಿಸಿರ್ಕೈಲದೊಳ್ || ಪರಿತಂದರ್ಪಿಸುತುಮಿರ್ದುದಾ ವೈಶ್ಯಕುಲಂ | || ೧೮ | ವಂದನಗೆಯ್ಯುತ್ತಂ ನಂ || ವಿಂದ ಪದಚಾತರೆದೆ ನುತಿಸುತ್ತಿರ್ದ್ದ‌್ರ | ಪೊಂದಳಿಗೆಯೋಳಾರತಿಯಂ | ತಂದು ಸುಳಿಯುತ್ತುಮಿರ್ದ್ದರಬಲಾಜನಗಳ್ || ೧೯ || ಕುಶಿಕಸುತಾರಪಾಲಕ | ಶಶಿಧರವರತಾಪಭಂಗ ಭಾರ್ಗವಗರ್ವ | ಪ್ರಸರವಿದಾರಾ ರಾಘವ || ವಸುಧೇಶ್ವರ ಜಯವೆನುತ್ತೆ ಪೊಗಳ್ ಸೂತರ್ || ೨೦ || ಗುರುವಚನೋದ್ಧಾರಕ ಮುನಿ | ವರಪಾಲಕ ದೈತ್ಯಭಂಗ ದಳಿತವಿರಾಧಾ || ಖರಸಂಹಾರಾ ಪಕ್ಷಿ | ಸ್ವರಮೋಕ್ಷದ ಜಿತಕದಂಬ ಜಯಜಯಮೆಂದರ್ | ೨೧ || ಸುರಪಕುಮಾರಕಮರ್ದನ | ಖರಕರಸುತಪೋಷ ವಿನತದೈತ್ಯಾನುಜ ಸಾ ||
ಪುಟ:ಹನುಮದ್ದ್ರಾಮಾಯಣಂ.djvu/೩೦೨
ಗೋಚರ