ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಹನುಮದ್ರಾಮಾಯಣ. ಮನುಜಾಧಮ ನಿನ್ನಿಂ ರಾ | ವಣನಂ ಕೊಲೆ ಸಾಧ್ಯ ಮಹುದೆ ಮರುಳಾದೆಯಲಾ || ೧೬೫ !! ರವಿವಂಶದ ಭೂಪಾಲ | ರ್ಸುವಿವೇಕಿಗಳನಘರವರ ಗೋತ್ರದೊಳಂ ಸಂ | ಭವಿಸಿದೊಡೇಂ ಕಡುಪಾಪದ | ಭವನಮನುರೆ ಪೊಕ್ಕರುಂಟೆ ನೀನನಲಾ || ೧೬೬ !! ವಾನರಮಾಂಸಮಪೂತಂ | ನೀನೆನ್ನಂ ಕೊಂದು ಪಡೆದ ಮಿಗೆ ದುರ್ಯಶಮಂ | ಮಾನವ ನಿನಗರಿಸಿದ ಗುರು | ತಾನಾವನೊ ಎಂದು ತೂಗಿದಂ ಮಸ್ತಕಮಂ || ೧೬೭ | ಮರನಂ ಮರೆಗೊಂಡೆನ್ನಂ | ಬರಿದೇ ನೀನೇತಕೆಚ್ಚು ಕೊಂದಯ್ ದಶಕಂ || ಧರನಂ ತತ್ಪುರಸಹಿತಂ | ತರಲಿರ್ದ್ದೆ೦ ತಿಳಿಯದಾದೆ ಮತ್ಸಾಹಸಮಂ || Mಲೆ || ಕಪಿವರ ಕೇಳ್ಳದ್ದರ್ಮಕೆ | ವಿಪರೀತಂ ಪಥದೆ ನಡೆದರಂ ಶಿಕ್ಷಿಪುದುಂ | ತಪನಾನ್ವಯಸಂಭವಿಭೂ | ಮಿಪಪದ್ದತಿಯೆನುತೆ ತಿಳಿವುದೆಂದಂ ರಘುಜಂ || ೧೬೯ | ಅನುಜನ ಸತಿಯಂ ರಮಿಸಿದ | ಘನಪಾತಕಿಯಪ್ಪ ಕಾರಣಂ ಘಾತಿಸಿದೆ || ಮನಮಂ ಸಂಚಲಿಸದೆ ಮ | ತನುವಂ ನೋಡೆಂದು ಹೇಳಲವನೀಕ್ಷಿಸಿದಂ || ೧೭೦ { ನೀನಕ್ಕೆ ಪರಮಪುರುಷಂ | ಜ್ಞಾನವಿವರ್ಜಿತನುವಾಗಿ ನಿಂದಿಸಿದೆಂ ಮ | ಝೂನು ಮಹಾಬಲಿಯಿವನಂ | ಸಾನಂದಂ ರಕ್ಷಿಸೆಂದನಮರೇಂದ್ರಭವಂ || ೧ || ನೀಲನಿಭಾಂಗನೆ ಕೃಪೆಯಿಂ | ಕೋಲಂ ಕಳೆದೆನ್ನನುದ್ದರಿಪುದೆನೆ ಭರದಿಂ || ಕಿಳಂಬಂ ವರಪರ | ಮಾಲಯಮಂ ಸಾರ್ದನವನ ಸುಕೃತಮದೆನಿತೋ || ೧೭೨ ||