ಈ ಪುಟವನ್ನು ಪರಿಶೀಲಿಸಲಾಗಿಲ್ಲ.
44 ಹನುಮದ್ರಾಮಾಯಣ. ಬರಲನುಚಿತಮಯ್ ರಾಜ್ಯಕೆ | ದೊರೆಯಾಗು ಸರಾಗದಿಂದಮೆಂದಂ ರಾಮಂ || ೧೮೦ || ಬಾ ಲಕ್ಷ್ಮಣ ನಡೆ ನಗರ || ಕ್ಯಾಲಸ್ಯಂಗೆಯ್ಯದಿನಜನಭಿಷೇಚನಮಂ || ಲೀಲೆಯೋಳಾಗಿಸಿ ವಾಲಿಯ | ಬಾಲಕನಂ ನಿಲಿಸು ಯೌವರಾಜ್ಯ ಸ್ಥಿತಿಯೋಳ್ | ೧೮೧ | ರಾಘವನಿಂತೆನೆ ಲಕ್ಷಣ | ನಾಗಳೆ ಸುಗ್ರೀವವಾಲಿಜರನೊಡಗೊಂಡುಂ || ವೇಗದೆ ಕಿಪ್ಪಿಂಧಾದ್ರಿ || ಪಾಗಾರಮನಯ್ ಪೊಕ್ಕನತಿ ವಿಭವದೊಳಂ | ೧೮೨ || ಭೂಸುರಮತದಿಂ ರವಿಜಗೆ | ಭಾಸುರಪಟ್ಟಾಭಿಷೇಕಮಂ ವಿರಚಿಸಿ ಸಂ || ತೋಷದೊಳಾ ವಾಲಿಜಗ | ಲೇಸೆನೆ ಯುವರಾಜಯೋಗ್ಯಪದವಿಯನಿತ್ತಂ || ೧ಲೆಃ | ತರಣಜನಂ ಬೀಳ್ಕೊಂಡೆ | ಝರಲಾ ಸೌಮಿತ್ರಿ ರಾಮನೆಡೆಗಂ ಭರದಿಂ | ಹರಿಸದೆ ಮನ್ನಿಸಿಯವನಂ | ಕರುಣಾಭರಣಂ ಪ್ರವರ್ಷಣಾದ್ರಿಯೊಳಿರ್ದ್ದ || ೧೮ಳಿ | ಅನುದಿನಮಗಲದೆ ರಾಮನ || ಸನಿಹದೊಳತಿ ಭಕ್ತಿಯಿಂದ ಲಕ್ಷ್ಮಣದೇವಂ | ಅನುಚರರಂದದೊಳಿರ್ದ್ದ | ಮುನಿವರ್ಯರೆ ಕೇಳಿಯೆಂದು ಪೇಳಂ ಸೂತಂ | ೧೮೫ | -++ಳಿತ+