ಪುಟ:ಹಳ್ಳಿಯ ಚಿತ್ರಗಳು.djvu/೧೦೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೯೧
ನಗೆಯ ನೀತಿ

ಸಾಯಂಕಾಲ ೬ ಗಂಟೆ ಆಯಿತು. ನಾವು ೩-೪ ಸಲ ಕಾಫಿ ತಿಂಡಿ ಹೊಡೆದುಬಿಟ್ಟಿದ್ದುದರಿಂದ, ನಮಗೆ ಹಸಿವು ತೋರಲಿಲ್ಲ. ವಿನೋದ ಮಾತ್ರ ಉಂಟಾಯಿತು. ನಮ್ಮ ತಂದೆಯವರು-

“ಕಾಲು ಜೋಗು ಹಿಡಿದು ಹೋಯಿತು. ಇನ್ನು ಕೂತಿರೋದಕ್ಕೆ ಆಗೋದಿಲ್ಲ” ಎಂದರು.

ಇನ್ನೊಬ್ಬ ಬ್ರಾಹ್ಮಣರು (ಅವರಿಗೆ ವಯಸ್ಸು ೬೫ ಆಗಿದ್ದಿತು) "ಜಲಸ್ಪರ್ಶಕ್ಕೆ ಹೋಗಬೇಕಯ್ಯ; ಇನ್ನು ಕೂತಿರೋಕೆ ಆಗೋದಿಲ್ಲ" ಅಂದರು.

ನಮ್ಮ ಭಾವನವರು ಯಾವುದಕ್ಕೂ ಅವಕಾಶ ಕೊಡಲಿಲ್ಲ.

"ಇಂತಹ ಸಮಯದಲ್ಲಿ ನೀವು ಮಾತನಾಡುವುದೂ ಕೂಡ ತಪ್ಪು, ಅದಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ" ಎಂದರು.

ಕೊನೆಗೆ ಹುಡುಕಿ ಹುಡುಕಿ ಬೇಸರಿಕೆಯಾಗುವ ಸಮಯಕ್ಕೆ ಯಾವುದೋ ಪ್ರಯೋಗ ಪಾರಿಜಾತದಲ್ಲಿ ಈ ರೀತಿ ಒಂದು ವಾಕ್ಯವು ದೊರೆಯಿತು.

“ಶ್ರಾದ್ಧದ ದಿವಸ ಶೂದ್ರನು ನಮ್ಮೊಂದಿಗೆ ಮಾತನಾಡಿದರೆ ಪರವಾಯಿಲ್ಲ. ಆದರೆ ನಾವು ಅವನೊಂದಿಗೆ ಮಾತನಾಡಕೂಡದು."

ಆದರೆ ನಮ್ಮ ಭಾವನವರು ಅದಕ್ಕೂ ಕೂಡ ಒಪ್ಪಲಿಲ್ಲ. “ನಾನು ಅವನನ್ನು 'ವಿಧವಾಪತಿ ಪಿಶಾಚಿ' ಎಂದೆನೆಲ್ಲ? ಅದರಿಂದ ಅವನೊಂದಿಗೆ ಮಾತನಾಡಿದಂತೆ ಆಯಿತೆಲ್ಲ” ಎಂದು ಪ್ರಾರಂಭಿಸಿದರು. ಕೊನೆಗೆ ತಾವು ಅವನೊಂದಿಗೆ ಮಾತನಾಡಲಿಲ್ಲವೆಂದೂ, ತಮ್ಮ ಪಾಡಿಗೆ ತಾವು ಮಾತನಾಡಿ ಕೊಂಡೆವೆಂದೂ ತೀರ್ಮಾನಿಸಿಕೊಂಡರು. ಅಂತೂ ರಾತ್ರಿ ೮ ಗಂಟೆಗೆ "ಬ್ರಾಹ್ಮಣರು” ಎದ್ದರು. ೧೦ ಗಂಟೆಗೆ ನಮಗೆಲ್ಲ ಊಟವಾಯಿತು.

ಮಾರನೆ ವರುಷ ನಮ್ಮ ಭಾವನರು ಮತ್ತೆ “ಬ್ರಾಹ್ಮಣಾರ್ಥಕ್ಕೆ" ಆಹ್ವಾನಿಸಬೇಕೆಂದು ಆ ಮುದುಕರ ಮನೆಗೆ ಹೋದರು. ಇವರನ್ನು ಕಂಡ ಕೂಡಲೆ ಮುದುಕರು-