ಪುಟ:ಹಳ್ಳಿಯ ಚಿತ್ರಗಳು.djvu/೫೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೪೫
ನಮ್ಮ ಜೋಡಿದಾರರ ಕೆಲವು ಚಿತ್ರಗಳು

ಭಾಷ್ಯಕಾರರ ಶಿಷ್ಯರು ಮಾರನೆ ದಿವಸ ಹುಳಿಯನ್ನ ಮಾಡಿಸಿ ಹೊಡೆದು ಬಿಡುತ್ತಾರೆ. ಅಥವ ಬಡಬಗ್ಗರಿಗೆ ಕೊಡುವುದೂ ಉಂಟು.

ಇಂತಹ ಒಂದು ತಿರುನಕ್ಷತ್ರದ ದಿವಸ ಜೋಡಿದಾರರು (ಅಂದರೆ ಚಿಕ್ಕ ೧೫ ವರುಷದ ಈ ಹುಡುಗ. ಈಗಿನ ಜೋಡಿದಾರ) ಎಲ್ಲರಂತೆ ನಾಮದ ಬಣ್ಣ ಹಾಕಿಕೊಂಡಮೇಲೆ, ಆ ದಿವಸ ಅವನನ್ನೇ ಭಾಷ್ಯಕಾರನನ್ನಾಗಿ ಆರಿಸಿಬಿಟ್ಟರು. ಅವನು ಗಂಭೀರನಾಗಿಯೇ ಇದ್ದ. ಕೆಲವು ಮನೆಗಳಲ್ಲಿ ಸ್ತ್ರೀಯರೂ ಸಹ ಇವನಿಗೆ ಅಡ್ಡಬಿದ್ದರು. ಉಳಿದ ಕೆಲವರು ಇವನು ರಾಮಾನುಜಾಚಾರ್ಯರಂತೆಯೇ ಕಾಣುತ್ತಾನೆ ಎಂದರು. ಅವರ ತಂದೆಯವರಿಗೂ ಕೂಡ ಇವನ ವೇಷವನ್ನೂ ಗಾಂಭೀರವನ್ನೂ ನೋಡಿ ಆನಂದವಾಯಿತು. ಊರು ಒಂದು ಸುತ್ತು ಬರುವ ವೇಳೆಗೆ ೫ ಗಂಟೆಯಾಯಿತು. ದೇವರ ಉತ್ಸವವು ರಾತ್ರಿ ೮ ಗಂಟೆಗೆ ಮುಂಚೆ ಹೊರಡುವುದಾಗಿರಲಿಲ್ಲ. ೮ ಗಂಟೆಯವರೆಗೆ ಮಾಡುವುದೇನೆಂದು ಈ ಅಭಿನವ ಭಾಷ್ಯಕಾರನು ತನ್ನ ೩ ಜನ ಸ್ನೇಹಿತರೊಂದಿಗೆ ಆಲೋಚಿಸಿದನು. ಅಷ್ಟು ಹೊತ್ತಿಗೆ ನಾಮದಿಂದ ಮೈ ಬಿಗಿಯಹತ್ತಿತು. ಗಟ್ಟಿಯಾಗಿ ಕೂಗುತ್ತ ಊರೆಲ್ಲಾ ಅಲೆದುದರಿಂದ ಶಖೆಯಾಗಿ ಮೈ ಬೆವತಿತು. ಸ್ನೇಹಿತನೊಬ್ಬನು “ಬನ್ನಿ ನದಿಗೆ ಹೋಗಿ ಈಜೋಣ" ಎಂದನು. ಆ ಸೂಚನೆಯನ್ನು ಎಲ್ಲರೂ ಒಪ್ಪಿದರು. ಜೋಡಿದಾರನೊಂದಿಗೆ ಅವನ ೩ ಜನ ಸ್ನೇಹಿತರೂ ನದಿಯ ಬಳಿಗೆ ಹೋದರು. ಅಲ್ಲಿ ಸಂಧ್ಯಾವಂದನೆಗೆಂದು ಹೋಗಿದ್ದ ಊರಿನವರನೇಕರು ನಶ್ಯವನ್ನು ತೀಡುತ್ತಾ ಕುಳಿತಿದ್ದರು. “ಇದು ಪ್ರಯೋಜನವಿಲ್ಲ. ಪೂರ್ವದಿಕ್ಕಿನ ಕಾಲುವೆಗೆ ಹೋಗಿಬಿಡೋಣ. ಅರಸನ ಅಂಕೆ ಇಲ್ಲ. ದೆವ್ವದ ಕಾಟವಿಲ್ಲ. ಹೇಳೋರಿಲ್ಲ ಕೇಳೋರ್‍ಮೊದಲೇ ಇಲ್ಲ. ಅಲ್ಲದೆ ಕಾಲುವೆಯ ಸೇತುವೆಯ ಕೆಳಗೆ ಈಜಲು ಬಹಳ ಆನಂದ. ಸೇತುವೆಗೆ ನೀರು ತಗಲಿ ಡಬ ಡಬ ಎಂದು ಸದ್ದಾಗುವುದು. ರಾತ್ರಿ ಉತ್ಸವದ ಓಲಗ ಕೇಳಿಸುವವರೆಗೆ ಈಚಾಡೋಣ ಬನ್ನಿ” ಎಂದು ಎಲ್ಲರೂ ಹೊರಟುಹೋದರು.

ಸೂರ್‍ಯನು ಮುಳುಗುವುದರಲ್ಲಿದ್ದನು. ಅವನ ಹೊನ್ನಿನ ಕಿರಣವು ಬೆಟ್ಟದ ತುದಿಯಲ್ಲಿಯೂ, ಮರಗಳ ಎಲೆಗಳ ಅಂಚಿನಲ್ಲಿಯೂ, ಹೋಗಲೋ