ಪುಟ:ಹಳ್ಳಿಯ ಚಿತ್ರಗಳು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೪೭

ಮತ್ತಾವುದೂ ಬಟ್ಟೆಗಳಿರಲಿಲ್ಲ. ಅವರಿಗೆ ಚಳಿಯ ಭಯ ಅಷ್ಟೇನೂ ಇರಲಿಲ್ಲ. ಆದರೆ ಒಂದು ಮೈಲು ನಡೆದುಕೊಂಡು ಊರಿಗೆ ಹೋಗಬೇಕಲ್ಲ? ಈ ನಿರ್ವಾಣದಲ್ಲಿ ಹೋಗುವುದೆಂತು? ಎಂಬುದೇ ದೊಡ್ಡ ಪ್ರಶ್ನೆ ಯಾಯಿತು. ಜೋಡಿದಾರನಿಗಂತೂ ಇಲ್ಲಿಗೂ ನಮ್ಮ ಮನೆ ಮುದುಕಿಯು ಬಂದಿದ್ದಳೇನೋ ಎಂಬ ಸಂದೇಹವುಂಟಾಯಿತು. ಊರೊಳಕ್ಕೆ ಒಬ್ಬನು ಹೋಗಿ ಎಲ್ಲರ ಬಟ್ಟೆಗಳನ್ನೂ ತರಬೇಕೆಂದು ಜೋಡಿದಾರನು ಸೂಚಿಸಿದನು. ಆದರೆ ಹೋಗುವುದಕ್ಕೆ ಯಾರೂ ಒಪ್ಪಲಿಲ್ಲ. ಅಲ್ಲದೆ ತರುವುದಕ್ಕೆ ಬಟ್ಟೆ ಎಲ್ಲಿದೆ? ಈ ವಿಚಾರ ದೊಡ್ಡವರಿಗೆ ತಿಳಿದರೆ ರಾದ್ಧಾಂತವಾಗುವುದು. ದೊಡ್ಡವರಿಗೆ ತಿಳಿಯದಂತೆ ಊರನ್ನು ಸೇರಬೇಕೆಂಬುದೇ ಎಲ್ಲರ ಅಭಿಪ್ರಾಯವೂ ಆಶಯ ಆಗಿದ್ದಿತು. ಅವರವರು ತಮತಮಗೆ ತೋರಿದಂತೆ ತಮ್ಮ ಮನೆಗಳಿಗೆ ಹೋಗಿ ಸೇರಿಕೊಳ್ಳಬಹುದೆಂದು ತೀರ್ಮಾನವಾಯಿತು.

ನಮ್ಮ ಜೋಡಿದಾರ, ನಿರ್ಜನವಾದ ಕೋಟೆಯನ್ನು ಬಳಸಿಕೊಂಡು ಮರದ ನೆರಳಿನ ಆಶ್ರಯದಲ್ಲಿ ಅವಿತುಕೊಳ್ಳುತ್ತಾ ಗುಳ್ಳೆಯ ನರಿಯಂತೆ ತಮ್ಮ ಮನೆಯ ಹಿಂದಕ್ಕೆ ಬಂದನು. ಆ ವೇಳೆಗೆ ರಾತ್ರಿ ೭-೩೦-೮ ಗಂಟೆಗಳ ಸಮಯ. ಹಿತ್ತಲ ಬಾಗಲನ್ನು ಒಳಗಡೆಯಿಂದ ಅಗಣಿ ಹಾಕಿಬಿಟ್ಟಿರುವರೆಂದು ಇವನಿಗೆ ಗೊತ್ತಿದ್ದಿತು. ಬೀದಿಯ ಬಾಗಲಿನಿಂದ ಹೋಗೋಣವೆಂದರೆ, ಉತ್ಸವವನ್ನು ನೋಡುವುದಕ್ಕಾಗಿ ಆ ದಿವಸ ಜೋಡಿದಾರರೊಂದಿಗೆ ಮಾತನಾಡುತ್ತಾ ಊರಿನ ಅರ್ಧ ಜನರೆಲ್ಲರೂ ಜಗಲಿಯ ಮೇಲೆ ಕುಳಿತುಬಿಟ್ಟಿದ್ದರು. ನಮ್ಮ ನಿರ್ವಾಣ ಬ್ರಾಹ್ಮಣನಿಗೆ ಅವರನ್ನೆಲ್ಲಾ ತಿನ್ನುವಷ್ಟು ಸಿಟ್ಟು ಬಂದಿತು. ಅವರಾರೂ ಇಲ್ಲದಿದ್ದರೆ, ಜೋಡಿದಾರರು ಸಂಧ್ಯಾವಂದನೆಯಾದನಂತರ ಕೋಣೆಗೆ ಹೋಗಿ ದೇವರ ಪೂಜೆಮಾಡುತ್ತಾ ಸ್ತೋತ್ರಗಳನ್ನು ಹೇಳುತ್ತಿರುವಾಗ, ಉಪಾಯವಾಗಿ ಬಾಗಲನ್ನು ತೆಗೆಸಿ ಒಳಗೆ ಸೇರಿಬಿಡಬಹುದಾಗಿದ್ದಿತು. ಈಗ ಅದು ಸಾಧ್ಯವಿಲ್ಲದುದರಿಂದ ಅವನು ಹಿತ್ತಲ ಗೋಡೆಯನ್ನು ಹತ್ತಿ ಒಳಗಡೆಗೆ ಹಾರಿದನು. ಪಾಪ ಬೇಟೆಗಾರರಿಂದ ಅಟ್ಟಲ್ಪಟ್ಟ ಜಿಂಕೆಯಂತೆ ಅವನ ಮೈಯೆಲ್ಲವೂ ತರದು ಹೋಯಿತು. ಹಿತ್ತಲ ಬಾಗಲಿಗೆ ಬಂದನು. ಅದರ ಆಚೆಗೆ ತೊಟ್ಟಿಯ ಬಾಗಲು. ತೊಟ್ಟಿಯಲ್ಲಿ ನಮ್ಮ ನಾಯಕನ ತಂಗಿ ತಾಯಿಯೊಂದಿಗೆ