ಪುಟ:Abhaya.pdf/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


-ಎಂದಳು, ಮಲಗಿದ್ದಲ್ಲಿಂದಲೇ ಎಲ್ಲವನ್ನೂ ಎವೆಯಿಕ್ಕದೆ ನೋಡುತಿದ್ದ ಜಲಜ. ಆಗ್ರಹವಿತ್ತು ಆ ಧ್ವನಿಯಲ್ಲಿ. "ಹೂಂ," ಎಂದರು ದೊಡ್ಡಮ್ಮ. ಜ್ವರ ಪೀಡಿತಳಾಗಿದ್ದ ಜಲಜಳ ಮಾತು ಅವರ ಹೃದಯವನ್ನು ಮತ್ತಷ್ಟು ಕೋಮಲಗೊಳಿಸಿತು. "ಸಾವಿತ್ರಿ, ಇನ್ನೊಂದು ಹಾಸಿಗೆ ತಂದ್ಕೊಡಮ್ಮಾ....ಹಾಗೇ ಒಂದಿಷ್ಟು ತಿಳಿಗಂಜಿ ಮಾಡ್ಕೊಂಡ್ಬಾ..." ತುಂಗಮ್ಮ ಪ್ರಜ್ಞೆ ಇಲ್ಲದೆ ಬಿದ್ದಿದ್ದವರೆಗೂ ಎಲ್ಲರ ಆಸಕ್ತಿಯ ಕೇಂದ್ರವಾಗಿದ್ದಳು. ಪ್ರಜ್ಞೆ ಬಂದ ಬಳಿಕ, ಇತರ ಹುಡುಗಿಯರ ಪಾಲಿಗೆ ವಿಶೇಷವಾದುದೇನೂ ಉಳಿದಿರಲಿಲ್ಲ ತಮ್ಮ ಹಾಗೆಯೇ ಇನ್ನೂ ಒಬ್ಬಳು.---ಮೂವತ್ತರ ಜತೆಗೆ ಮೂವತ್ತೊಂದನೆಯ ಸಂಖ್ಯೆ. ಆದರೆ ಸರಸಮ್ಮನ ದೃಷ್ಟಿಯಲ್ಲಿ ಆಕೆ, ಬದುಕಿಸಿ ಮಾನವಳಾಗಿ ಮಾಡಬೇಕಾದ ಇನ್ನೊಂದು ಜೀವ. ಅವರು, ಮಲಗಿದ್ದ ಆ ಹೆಣ್ಣನ್ನು ನೋಡಿದರು ದೃಷ್ಟಿ ತಾಕಬೇಕೆಂದು ಲಟಿಕೆ ಮುರಿಯಬೇಕಾದ ಸುಂದರಿಯೇನೂ ಅಲ್ಲ ಆದರೂ ಆಕರ್ಷಣೀಯವಾದ ಮುಖ