ಪುಟ:Epigraphia carnatica - Volume I.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

8

ಅಧ್ಯಯನ ಸಂಸ್ಥೆಯ ನಿರ್ದೇಶಕರು ಯೋಜನೆಯನ್ನು ವಿಶ್ವವಿದ್ಯಾನಿಲಯದ ಮೂಲಕ ೪-೬-೧೯೭೦ರಂದು ಸರ್ಕಾರಕ್ಕೆ ಕಳಿಸಿದರು. ಸರ್ಕಾರ ಯೋಜನೆಯನ್ನು ಒಪ್ಪಿ ೧೬-೩-೧೯೭೧ರಂದು ಆಜ್ಞೆ ಹೊರಡಿಸಿತಾದರೂ, ಎಲ್ಲ ತಾಂತ್ರಿಕ ಅಡಚಣೆಗಳನ್ನೂ ದಾಟಿಕೊಂಡು ಕಾರಾರಂಭವಾಗಲು ಸಾಧ್ಯವಾದದ್ದು ೧೯೭೧ರ ಡಿಸೆಂಬರ್ ೧೬ರಿಂದ, ಈ ಯೋಜನೆಯ ಕಾಠ್ಯದಲ್ಲಿ ಸಲಹೆ ನೀಡಲು ವಿಶ್ವವಿದ್ಯಾನಿಲಯ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಸಲಹಾ ಸಮಿತಿಯನ್ನು ನೇಮಿಸಿತು. ಅವರಲ್ಲಿ ರಾಜ್ಯದ ಪುರಾತತ್ವ ಇಲಾಖೆಯ ನಿರ್ದೇಶಕರೂ, ಭಾರತ ಸರ್ಕಾರದ ಮುಖ್ಯ ಶಾಸನಾಧಿಕಾರಿಗಳೂ, ಮೈಸೂರು, ಬೆಂಗಳೂರು ಕರ್ನಾಟಕ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯಗಳ ಕೆಲವು ವಿದ್ವಾಂಸರೂ ಸದಸ್ಯರಾಗಿದ್ದಾರೆ. ಈ ಸಮಿತಿ ಮೊದಲಬಾರಿಗೆ ೨೪-೧೨-೧೯೭೧ರಂದು ಸಭೆ ಸೇರಿ 'ಎಪಿಗ್ರಾಫಿಯ ಕರ್ನಾಟಿಕ' ಸಂಪುಟಗಳನ್ನು ಯಾವ ದಿಕ್ಕಿನಲ್ಲಿ ಪರಿಷ್ಕರಿಸಬೇಕೆಂದು ವಿವರವಾಗಿ ಚರ್ಚಿಸಿತು ; ಸ್ಕೂಲವಾದ ಧೋರಣೆಗಳನ್ನು ರೂಪಿಸಿತು. ಸಮಿತಿ ಕೈಗೊಂಡ ಕೆಲವು ಮುಖ್ಯ ತೀರ್ಮಾನಗಳು ಇವು : ಕನ್ನಡ ಶಾಸನಗಳ ರೋಮನ್ ಲಿಪ್ಯಂತರ ಕೊಡಬೇಕಾಗಿಲ್ಲ ; ಅಕನ್ನಡ ಶಾಸನಗಳನ್ನು ಕನ್ನಡ ಲಿಪಿಯಲ್ಲಿ ರೋಮನ್ ಲಿಪ್ಯಂತರದೊಡನೆ ಕೊಡಬೇಕು ; ಬೇರೆ ಬೇರೆ ಮೂಲಗಳಲ್ಲಿ ಪ್ರಕಟವಾಗಿರುವ ಶಾಸನಗಳನ್ನು ಒಂದೆಡೆ ತರಬೇಕು ; ಪ್ರತಿಯೊಂದು ಶಾಸನಕ್ಕೂ ಮೊದಲು ಅದರ ಚಿಕ್ಕ ಪರಿಚಯ ಕೊಡಬೇಕು ; ಅಗತ್ಯವೆನಿಸುವ ಉಪಯುಕ್ತ ಅನುಬಂಧಗಳನ್ನು ಸೇರಿಸಬೇಕು ; ಪೀಠಿಕೆಯನ್ನೂ ಪಠ್ಯಗಳನ್ನೂ ಅನುವಾದಗಳನ್ನೂ ಸೂಕ್ತ ಆಧಾರಗಳ ನೆರವಿನಿಂದ ಪರಿಷ್ಕರಿಸಬೇಕು.

ಸಲಹಾ ಸಮಿತಿಯ ಸಲಹೆಗಳಿಗನುಸಾರವಾಗಿ 'ಎಪಿಗ್ರಾಫಿಯ ಕರ್ನಾಟಿಕ' ಸಂಪುಟಗಳ ಪರಿಷ್ಕರಣಕಾರ ಗಿದ್ದು ಈಗ ಮೊದಲನೆಯ ಸಂಪುಟ ಪ್ರಕಟವಾಗುತ್ತಿದೆ. ಈ ಸಂಪುಟದಲ್ಲಿ ಕೊಡಗು ಜಿಲ್ಲೆಯ ೧೦೬ ಶಾಸನ ಗಳಿವೆ. ಬಿ. ಎಲ್. ರೈಸ್ ಅವರು ತಮ್ಮ ಶಾಸನ ಸಂಪುಟಗಳ ಮಾಲೆಯಲ್ಲಿ ಇದನ್ನು ಮೊದಲ ಸಂಪುಟವನ್ನಾಗಿ ೧೮೮೬ರಲ್ಲಿ ಪ್ರಕಟಿಸಿದರು. ಇದರಲ್ಲಿ ಕೊಡಗಿನ ೨೩ ಶಾಸನಗಳು ಭಾಷಾಂತರ ಮತ್ತು ಲಿಪ್ಯಂತರಗಳೊಡನೆ ಪ್ರಕಟವಾದುವು. 'ನ್ಯೂ ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯಾ ಕ್ಯಾಗಿ ಕೊಡಗಿನ ಗೆಜೆಟಿಯರನ್ನು ಸಿದ್ಧಪಡಿಸಬೇಕಾಗಿ ಬಂದಾಗ ಪುನರ್ಪರಿವೀಕ್ಷಣಕಾರ ಅಗತ್ಯವೆಂದು ರೈಸ್ ಭಾವಿಸಿದರು. ಅದರ ಫಲವಾಗಿ ದೊರೆತ ಹೊಸ ಶಾಸನಗಳನ್ನು 'ಎಪಿಗ್ರಾಫಿಯ ಕರ್ನಾಟಿಕ'ದ ಬೆಂಗಳೂರು ಮತ್ತು ತುಮಕೂರು ಸಂಪುಟಗಳ (೯ ಮತ್ತು ೧೨-ಪ್ರಥಮ ಆವೃತ್ತಿ) ಅನುಬಂಧಗಳಲ್ಲಿ ಸೇರಿಸಿದರು. ಈ ಎಲ್ಲ ಶಾಸನಗಳನ್ನೂ ಒಟ್ಟಿಗೆ ಸೇರಿಸಿ ೧೯೧೪ರಲ್ಲಿ ರೈಸರು ಕೊಡಗು ಶಾಸನಗಳ ಪರಿಷ್ಕೃತ ಆವೃತ್ತಿ ಯನ್ನು ಪ್ರಕಟಿಸಿದರು. ಈ ಆವೃತ್ತಿಯಲ್ಲಿ ಸೇರಿದ ಶಾಸನಗಳ ಸಂಖ್ಯೆ ೭೫, 'ಎಪಿಗ್ರಾಫಿಯ ಕರ್ನಾಟಿಕ' ಸಂಪುಟಗಳ ಪರಿಷ್ಕರಣ ಹಾಗೂ ಪುನರ್ಮುದ್ರಣ ಯೋಜನೆಯಂತೆ ಈಗ ಈ ಸಂಪುಟವನ್ನು ಮತ್ತೆ ಪರಿಷ್ಕರಿಸಲಾಗಿದೆ. ಈ ಸಂದರ್ಭ ದಲ್ಲಿ ಪ್ರಕಟಿತ ಶಾಸನಗಳ ಪಾಠಗಳನ್ನು ಮೂಲದೊಂದಿಗೆ ತಾಳೆ ನೋಡುವ ಸಲುವಾಗಿ ಎರಡು ಪರಿವೀಕ್ಷಣ ಪ್ರವಾಸಗಳನ್ನು ಕೈಗೊಳ್ಳಲಾಗಿತ್ತು. ಅನೇಕ ಶಾಸನಗಳನ್ನು ಮಲದೊಡನೆ ಹೋಲಿಸಿ ಅಗತ್ಯವೆನಿಸಿದಲ್ಲಿ ತಿದ್ದುಪಡಿ ಮಾಡಲಾಗಿದೆ. ಮೂಲಶಾಸನಗಳು ದೊರೆಯದ ಸಂದರ್ಭದಲ್ಲಿ ಮಾತ್ರ ಅವುಗಳ ಪಾಠಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಓದಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಹಿಂದಿನ ಆವೃತ್ತಿಯ ೭೨ನೆಯ ಶಾಸನವನ್ನು ಕೈಬಿಡಲಾಗಿದೆ. ಈ ಸಂಪುಟದ ಒಂದು ವಿಶೇಷವೆಂದರೆ, ಇದುವರೆಗೆ ಗಮನಕ್ಕೆ ಬಾರದಿದ್ದ ಮೂವತ್ತೆರಡು ಹೊಸ ಶಾಸನಗಳನ್ನು ಇದು ಒಳಗೊಂಡಿದೆ. ಹೊಸ ಶಾಸನಗಳಿಗಾಗಿ ಪರಿವೀಕ್ಷಣೆ ನಡೆಸುವುದು ನಮ್ಮ ಯೋಜನೆಯಲ್ಲಿ ಸೇರಿಲ್ಲ, ನಿಜ. ಆದರೆ ಅನಾಯಾಸವಾಗಿ ದೊರೆತ ಶಾಸನಗಳನ್ನು ಬಿಡಬಾರದೆಂದು ಅವನ್ನು ಇಲ್ಲಿ ಸೇರಿಸಿದ್ದೇವೆ, ಈ ದಿಕ್ಕಿನಲ್ಲಿ ಆಗಬೇಕಾದ ಕೆಲಸ ಇನ್ನೂ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ. ಸಮಗ್ರವಾದ ಹೊಸ ಪರಿವೀಕ್ಷಣೆಯೊಂದರ ಅಗತ್ಯ ಬಹುವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಅಜ್ಞಾತವಾಸದಲ್ಲಿರುವ ಈ ಶಾಸನಗಳು ಅಂತಿಮವಾಗಿ ಕಣ್ಮರೆಯಾಗಿ ಹೋಗುವ ಮೊದಲೇ ಈ ಕಾರವನ್ನು ಕೈಗೊಳ್ಳಬೇಕಾಗಿದೆ.

ಹಿಂದಿನ ಮುದ್ರಣಕ್ಕೆ ಹೋಲಿಸಿದರೆ ಈ ಮುದ್ರಣದ ಇನ್ನೂ ಕೆಲವು ವಿಶೇಷಗಳು ಇವು : ರೈಸರು ಬರೆದಿದ್ದ ಪೀಠಿಕೆಗೆ ಬದಲಾಗಿ ಹೊಸ ಪೀಠಿಕೆಯನ್ನು ಸೇರಿಸಿದೆ; ಪ್ರತಿಯೊಂದು ಶಾಸನಕ್ಕೂ ಪರಿಚಯದ ಟಿಪ್ಪಣಿಯನ್ನು ಕೊಟ್ಟಿದೆ; ಆಧುನಿಕ ಆವಶ್ಯಕತೆಗಳಿಗೆ ಅನುಗುಣವಾಗಿ ಕೆಲವು ಅನುಬಂಧಗಳನ್ನು ಜೋಡಿಸಿದೆ. ಇವೆಲ್ಲವನ್ನೂ ಸಂಪಾದಕೀಯ ಸಮಿತಿಯ ಸಲಹೆಗಳನ್ನನುಸರಿಸಿಯೇ ಮಾಡಿದೆ.

ಇಂಥ ಕೆಲಸಗಳಲ್ಲಿ ಪರಿಷ್ಕರಣ ಎನ್ನುವುದು ಕೊನೆಯ ಮಾತಾಗುವುದು ಸಾಧ್ಯವಿಲ್ಲ. ವ್ಯಕ್ತಿಗಾಗಲಿ ಸಂಸ್ಥೆ ಗಾಗಲಿ ಸೀಮಿತಗಳಿದ್ದೆ ಇರುತ್ತವೆ. ಯಾವುದೇ ಪರಿಷ್ಕರಣವನ್ನಾದರೂ ಕೈಗೊಳ್ಳುವವರು ಕೆಲವು ವ್ಯಕ್ತಿಗಳೇ ಆಗಿರುವುವ ರಿಂದ ಅವರ ದೃಷ್ಟಿ, ಧೋರಣೆ, ಅಧ್ಯಯನ, ಸಂಶೋಧನೆಗಳಿಂದ ಅವರ ಕೆಲಸವನ್ನು ಬೇರ್ಪಡಿಸಲು ಬರುವುದಿಲ್ಲ. ಬೇರೆಯವರಿಗೆ ಬೇರೆಯದೇ ಆದ ದೃಷ್ಟಿ, ಧೋರಣೆಗಳಿರುವುದು ಸಹಜ. ಆದುದರಿಂದ ಈ ಮಹತ್ಕಾರ್ಯದಲ್ಲಿ ನಾವು ಎಲ್ಲ