ಪುಟ:Epigraphia carnatica - Volume I.djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

9


ಆಸಕ್ತರ ವಿದ್ವಾಂಸರ ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಇದು ನಾಡಿನ ಕೆಲಸ, ಎಲ್ಲರ ಹೊಣೆ, ಒಂದು ದೃಷ್ಟಿಯಿಂದ ಈ ಮೊದಲ ಸಂಪುಟ ಮಾದರಿ ಸಂಪುಟ. ಇದರ ಪರಿಷ್ಕರಣ ವಿನ್ಯಾಸಗಳ ಬಗೆಗೆ ದೊರೆಯುವ ವಿಮರ್ಶೆಗಳ ಬೆಳಕಿನಲ್ಲಿ ಮುಂದಿನ ಸಂಪುಟಗಳ ಪರಿಷ್ಕರಣಕಾರ ಇನ್ನೂ ಉತ್ತಮಗೊಳ್ಳುವುದೆಂದು ನಾವು ನಿರೀಕ್ಷಿಸಿದ್ದೇವೆ. ಈ ಸಂಪುಟದಲ್ಲಿ ಕೆಲವು ಸ್ಟಾಲಿತ್ಯಗಳು ಉಳಿಯುವುದು ಅನಿವಾರವಾಯಿತು. ಅವುಗಳ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಕೊಟ್ಟಿದ್ದೇವೆ. ವಾಚಕರು ಅದನ್ನು ಕೃಪೆಯಿಟ್ಟು ಗಮನಿಸಬೇಕು.

*****

ಈ ಯೋಜನೆ ಕಾರರೂಪಕ್ಕೆ ಬಂದದ್ದು ಮೈಸೂರು ಸರ್ಕಾರದ ಔದಾರ್ಯದಿಂದ; ಅದರ ಸಂಸ್ಕೃತಿ ಪ್ರೇಮದಿಂದ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರೇಂದ್ರ ಪಾಟೀಲರು, ಶಿಕ್ಷಣ ಸಚಿವರಾಗಿದ್ದ ಶ್ರೀ ಕೆ. ವಿ. ಶಂಕರಗೌಡರು ಮತ್ತು ಹಣಕಾಸಿನ ಸಚಿವರಾಗಿದ್ದ ಶ್ರೀ ರಾಮಕೃಷ್ಣ ಹೆಗ್ಗಡೆ ಅವರುಗಳು ಈ ಯೋಜನೆಯಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರದಿದ್ದಿದ್ದರೆ ಈ ದೊಡ್ಡ ಯೋಜನೆ ಬಹು ಸುಲಭವಾಗಿ ಸರ್ಕಾರದ ಒಪ್ಪಿಗೆ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಈ ಮೂವರು ಮಹನೀಯರು ತಮ್ಮ ಭಾಷೆ ಸಾಹಿತ್ಯಗಳ ಮೇಲಿನ ಪ್ರೀತಿ ದೂರದೃಷ್ಟಿಗಳಿಂದ ಕೈಗೊಂಡ ಮಹತ್ವದ ಯೋಜನೆಗಳಲ್ಲಿ ಇದೂ ಒಂದಾಗಿದೆ. ಈ ಹೊತ್ತು ಅವರನ್ನು ನೆನೆಯುವುದು ನನಗೆ ತುಂಬ ಸಂತೋಷದ ಕೆಲಸ. ಹಿಂದಿನ ಸರ್ಕಾರದ ಇಂಥ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಮಾತ್ರವಲ್ಲದೆ ಹೊಸ ಹೊಸ ಯೋಜನೆಗಳನ್ನು ಕಾರರೂಪಕ್ಕೆ ತರುವುದರಲ್ಲಿಯೂ ಆಸಕ್ತಿ ವಹಿಸಿರುವ ಇಂದಿನ ಸರ್ಕಾರಕ್ಕೂ ನಮ್ಮ ಕೃತಜ್ಞತೆಯ ವಂದನೆಗಳು ಸಲ್ಲಬೇಕು. ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರ ದಿಟ್ಟ ನಾಯಕತ್ವದಲ್ಲಿ ಸರ್ಕಾರ ಈಗಾಗಲೇ ಕೈಗೊಂಡಿರುವ ಅನೇಕ ನಿರ್ಣಯಗಳು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಹತ್ವವವಾಗಿವೆ. ಹಣಕಾಸಿನ ಸಚಿವರಾದ ಶ್ರೀ ಎಂ. ವೈ. ಘೋರ್ಪಡೆಯವರು ಮತ್ತು ಶಿಕ್ಷಣ ಸಚಿವರಾದ ಶ್ರೀ ಎ. ಆರ್. ಬದರಿನಾರಾಯಣ ಅವರು ಇಂಥ ವಿಚಾರಗಳಲ್ಲಿ ವಿಶೇಷ ಆಸಕ್ತಿ ವಹಿಸಿರುವುದು ನಾಡಿನ ಜನತೆಗೆ ಹೆಚ್ಚಿನ ಸಂತೋಷನ್ನುಂಟುಮಾಡಿದೆ ನಾಡಿನ ಇತಿಹಾಸವನ್ನೇ ಬದಲಿಸಲು ಸಮರ್ಥವಾದ ಈ ಸರ್ಕಾರ ನಾಡಿನ ಭವಿಷ್ಯವನ್ನು ಉಜ್ವಲನಾಗಿ ರೂಪಿಸುತ್ತದೆಂಬುದ ರಲ್ಲಿ ಸಂದೇಹವಿಲ್ಲ.

'ಎಪಿಗ್ರಾಫಿಯ ಕರ್ನಾಟಿಕ' ಪರಿಷ್ಕರಣ ಹಾಗೂ ಪುನರ್ಮುದ್ರಣ ಯೋಜನೆಯಲ್ಲಿ, ಹಿಂದೆ ಶಿಕ್ಷಣ ಇಲಾಖೆಯ ಕಾಠ್ಯದರ್ಶಿಯಾಗಿದ್ದ ಶ್ರೀ ಕೆ. ಆರ್. ರಾಮಚಂದ್ರನ್ ಅವರೂ, ಈಗ ಆ ಸ್ಥಾನದಲ್ಲಿರುವ ಶ್ರೀ ಸ್ಯಾಮ್ಯುಯಲ್ ಅಪ್ಪಾಜಿ ಯವರೂ ತುಂಬ ಸಹಕಾರ ನೀಡಿದ್ದಾರೆ. ಭಾರತದ ಪುರಾತತ್ವ ಇಲಾಖೆಯ ಶ್ರೀ ಎಸ್. ಆರ್. ರಾವ್ ಅವರು ನಾನು ಮೊದಲ ಸಲ ಈ ಯೋಜನೆಯನ್ನು ಸಮಿತಿಯ ಮುಂದಿಟ್ಟಾಗ ಹೆಚ್ಚಿನ ಬೆಂಬಲಕೊಟ್ಟರು; ಉತ್ಸಾಹದ ಮಾತಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ತ್ವ ಶಾಸ್ತ್ರ ಶಾಖೆಯ ಮುಖ್ಯರಾಗಿರುವ ಡಾ. ಎ. ವಿ. ನರಸಿಂಹಮೂರ್ತಿಯವರು ಈ ಯೋಜನೆಯಲ್ಲಿ ಮೊದಲಿನಿಂದಲೂ ನನಗೆ ನೆರವು ನೀಡಿದ್ದಾರೆ. ಒಂದು ದೃಷ್ಟಿಯಲ್ಲಿ ಅವರೇ ಈ ಯೋಜನೆಯ ಮೂಲಕರ್ತೃವೆಂದರೂ ಸಲ್ಲುತ್ತದೆ. ಅನೇಕ ರೀತಿಯಲ್ಲಿ ನನಗೆ ಮಾರ್ಗದರ್ಶನ ಮಾಡುತ್ತಿದ್ದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಎಂ. ಶೇಷಾದ್ರಿಯವರು ಮೊದಲ ಸಂಪುಟ ಪ್ರಕಟವಾಗುವ ಮೊದಲೇ ತೀರಿಕೊಂಡಿರುವುದು ನನಗೆ ತುಂಬ ವ್ಯಥೆಯನ್ನುಂಟುಮಾಡಿದೆ. ಭಾರತ ಸರ್ಕಾರದ ಮುಖ್ಯ ಶಾಸನಾಧಿ ಕಾರಿಗಳಾದ ಡಾ. ಜಿ. ಎಸ್. ಗಾಯಿ ಅವರು ಮತ್ತು ಅವರ ಸಹೋದ್ಯೋಗಿಗಳು ನನಗೆ ಹೆಜ್ಜೆ ಹೆಜ್ಜೆಗೂ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಡಾ. ಗಾಯಿ ಮತ್ತು ಡಾ. ಕೆ. ವಿ. ರಮೇಶ್ ನನಗೆ ಸಮಸ್ಯೆಗಳು ಬಂದಾಗಲೆಲ್ಲ ಸಹಾಯಮಾಡಿದ್ದಾರೆ; ಈ ಸಂಪುಟದ ಕೆಲ ಭಾಗಗಳನ್ನು ನೋಡಿಕೊಟ್ಟಿದ್ದಾರೆ. ಅಂಥ ವಿದ್ವಾಂಸರ ನೆರವು ಈ ಯೋಜನೆಗೆ ದೊರಕಿರುವುದು ಒಂದು ಅದೃಷ್ಟ ಸಂಪಾದಕೀಯ ಸಮಿತಿಯ ಸದಸ್ಯರೆಲ್ಲರೂ ತಮ್ಮ ಅನುಭವದ ವಿದ್ವತ್ತಿನ ತಜ್ಞ ಮಾರ್ಗದರ್ಶನವನ್ನು ನೀಡಿ ಉಪಕರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮುದ್ರಣಾಲಯದ ನಿರ್ದೇಶಕ ರಾದ ಶ್ರೀ ಎಚ್. ನರಸಣ್ಣನವರೂ ಅವರ ಸಿಬ್ಬಂದಿ ವರ್ಗದವರೂ ಅಷ್ಟು ಸುಲಭವಲ್ಲದ ಈ ಕೆಲಸದಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಛಾಯಾ ಚಿತ್ರಗ್ರಾಹಕ ಶ್ರೀ ಕೆ. ಆರ್, ಸುಂದರರಾಜ್ ಈ ಸಂಪುಟ ವನ್ನು ಸಚಿತ್ರವಾಗಿಸುವಲ್ಲಿ ಆಸಕ್ತಿ ವಹಿಸಿದ್ದಾರೆ. ಹಂತ ಹಂತಗಳಲ್ಲಿ ವಿಶ್ವವಿದ್ಯಾನಿಲಯದ ಅಧಿಕಾರಿಗಳೂ, ಅಧ್ಯಯನ ಸಂಸ್ಥೆಯ ವಿವಿಧ ವಿಭಾಗಗಳ ನನ್ನ ಸಹೋದ್ಯೋಗಿಗಳೂ ಸಹಕರಿಸಿ ನನ್ನ ಜವಾಬ್ದಾರಿಯ ಭಾರವನ್ನು ಕಡಿಮೆ ಮಾಡಿದ್ದಾರೆ. ಈ ಸಂಪುಟವನ್ನು ಪರಿಷ್ಕರಿಸಿ ಪ್ರಕಟಿಸಲು ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಅವರು ಸಮ್ಮತಿ ನೀಡಿದ್ದಾರೆ. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.