ಪುಟ:Keladinrupa Vijayam.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xv ಗಳಿಂದ ಕೂಡಿದ ಕಟ್ಟಡಗಳು ಕಟ್ಟಲ್ಪಟ್ಟುವು. ಹಿರಿಯ ವೆಂಕಟಪ್ಪ ನಾಯಕನು ಇಕ್ಕೇರಿಯ ಅರಮನೆಯೊಳಿ ವಿಚಿತ್ರತರರಚನಾಕೌಶ ಲ್ಯದಿಂ ನಾಟಕಶಾಲೆಯಂ ನಿರ್ಮಾಣಂಗೈಸಿದನು, ಆತನು ವಿದ್ಯಾ೦ ಸರಿಗೆ ಕೊಟ್ಟ ಆಶ್ರಯದಿಂದ ತಿರುಮಲಭಟ್ಟರ ಕರ್ಣಾಟ ಶಿವಗೀತೆ, ಶಿವಾಪ್ಪಪದಿ, ಗೀತಗೌರೀವರ, ರಂಗನಾಥದೀಕ್ಷಿತನ ತಂತ್ರಸಾರವ್ಯಾಖ್ಯಾನ ಮುಂತಾದ ಗ್ರಂಥಗಳು ಹುಟ್ಟಿದುವು. ಆಮೇಲೆ “ ಸೂರಿನಿಕರ ಕಲ್ಪದ್ರುಮ ” ನೆಂದು ಹೊಗಳಿಸಿಕೊಂಡ ಹಿರಿಯ ಬಸಪ್ಪನಾಯಕನು ಕೊಟ್ಟ ಪ್ರೋತ್ಸಾಹದಿಂದ ಮಂತ್ರಿಷಡಕ್ಷರಯ್ಯನ ವೀರಶೈವಧರ್ಮ ಶಿರೋಮಣಿ, ಸಂಗಮೇಶ್ವರನ ವಸಹಸ್ರನಾಮವ್ಯಾಖ್ಯಾ, ಮರಿತೋಂ ಟದಾರ್ಯನ ವೀರಶೈವಾನಂದಚಂದ್ರಿಕೆ ಮುಂತಾದ ಗ್ರಂಥಗಳು ಹುಟ್ಟಿ ದುವು. ಹಿರಿಯ ಬಸಪ್ಪನಾಯಕನ ಹೆಸರಿನಲ್ಲಿಯೇ ಶಿವತತ್ತ್ವರತ್ನಾಕರ, ವೀರಶೈವಸಂಜೀವಿನೀ, ಸುಭಾಷಿತಸುರದ್ರುಮ, ಸೂಕ್ತಿಸುಧಾಕರ ಎಂಬ ನಾಲ್ಕು ಸಂಸ್ಕೃತಗ್ರಂಥಗಳಿವೆ. ಇವಲ್ಲದೆ ಇವರ ಕಾಲದಲ್ಲಿ ಇನ್ನೂ ಹಲವುಗ್ರಂಥಗಳು ಹುಟ್ಟಿದುವೆಂದು ಊಹಿಸುವುದಕ್ಕೆ ಕಾರಣ ವಿದೆ. ಕೆಳದಿನೃಪವಿಜಯವು ಚಂಪೂಗ್ರಂಥ ; ನಾವು ನೋಡಿದ ನಾಲ್ಕು ಪ್ರತಿಗಳಲ್ಲಿ ಒಂದರಲ್ಲಿಯೂ ಇದರ ಪೀಠಿಕಾಪ್ರಕರಣವು ಕಂಡುಬರುವು ದಿಲ್ಲ. ಈ ಪ್ರತಿಗಳಿಗೆಲ್ಲ ಮೂಲವಾಗಿದ್ದಿರಬಹುದಾದ ಮಾತೃಕೆಯಲ್ಲಿಯೇ ಗ್ರಂಥಪಾತವಾಗಿ ಈ ಭಾಗವು ಬಿಟ್ಟುಹೋಗಿತ್ತೋ, ಅಥವಾ ಕವಿಯು ಬರೆಯಲೇ ಇಲ್ಲವೋ ತಿಳಿಯದು. ಅಂತು ಇತರ ಚಂಪೂಗ್ರಂಥಗಳ ಬ್ಲಿರುವಹಾಗೆ ಕವಿಸಂಪ್ರದಾಯವನ್ನನುಸರಿಸಿ ಸಮುದ್ರವರ್ಣನೆ, ಮೇರು ಪರ್ವತದ ವರ್ಣನೆ, ಜಂಬೂದ್ವೀಪದ ವರ್ಣನೆ, ಕರ್ನಾಟಕದೇಶದ ವರ್ಣನೆ ಮುಂತಾದವುಗಳು ಕ್ರಮವಾಗಿ ಬರುತ್ತವೆ. ಆದಿಭಾಗದಲ್ಲಿ ವಿಶೇಷವಾಗಿ ಮುಂದೆ ಅಲ್ಪಸ್ವಲ್ಪವಾಗಿಯೂ ಶಬ್ದಾಲಂಕಾರ ಅರ್ಥಾಲಂಕಾರ ಮುಂತಾದ ಕಾವೇಚಮತ್ಕಾರಗಳು ಕಂಡುಬರುತ್ತವೆ. ಇಷ್ಮಪಟ್ಟರೆ ಕವಿಯು ಪ್ರೌಢವಾಗಿಯೂ