ಪುಟ:Keladinrupa Vijayam.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xvi ಮನೋಹರವಾಗಿಯೂ ಬರೆಯ ಬಲ್ಲನು. 1 ಸಂಕಣನಾಯಕನು ಅಂಕು ಶಖಾನನೊಡನೆ ಮಾಡಿದ ಕಾಳಗವು ಬಹು ಸ್ವಾರಸ್ಯವಾಗಿ ವರ್ಣಿಸಲ್ಪ ಟ್ಟಿದೆ. ಆದರೆ ಒಟ್ಟಿನಮೇಲೆ ನೋಡಿದರೆ ಚರಿತ್ರಕಥನಕ್ಕೆ ಹೆಚ್ಚು ಪ್ರಶಸ್ತಿ ಕೊಟ್ಟಿರುವಹಾಗೂ ಪ್ರೌಢಕಾವ್ಯರಚನೆಯನ್ನೆ ಮುಖ್ಯೋದ್ದೇಶ್ಯವನ್ನಾಗಿಟ್ಟುಕೊಳ್ಳದಿದ್ದಂತೆಯೂ ಕಾಣುತ್ತದೆ. ಅದರಿಂದಲೇ ಇದರಲ್ಲಿ ದೊಡ್ಡದೊಡ್ಡ ವ್ಯತ್ಯಗಳು ಕಡಿಮೆ; ಕಂದಗಳು 2 ಮತ್ತು ಗದ್ಭವೇ ಹೆಚ್ಚಾಗಿ ಉಪಯೋಗಿಸಲ್ಪಟ್ಟಿವೆ. ಭಾಷೆಯು ಸುಲಭವಾಗಿದೆ. ಹಳಗನ್ನಡವಾದರೂ ಅದರ ಬಿಗಿಯಿಲ್ಲ; ಹೊಸಗನ್ನಡರೂಪಗಳ ಪ್ರಯೋಗಗಳ ಹೇರಳವಾಗಿವೆ; ಮರಾಟ ಅಥವಾ ಹಿಂದೂಸ್ತಾನಿಯ ಪದಗಳು ಅಲ್ಲಿ ಉಪಯೋಗಿಸಲ್ಪಟ್ಟಿವೆ. ಉದಾ:-ಗಮ, ಜಿಲೆಯ, ತಕತೆ, ಬಕತರ, ಬೊಕ್ಕಸೀಸ, ಮೇರು ಮಾನಿ, ಸಲಾಮು, ಹುಕುಂ, ಇತ್ಯಾದಿ. ಈತನು - ಅನಂತರ ' ಎಂಬ ಅರ್ಥದಲ್ಲಿ “ನಂತರ ' ಎಂಬ ಪದವನ್ನು ಉಪಯೋಗಿಸುತ್ತಾನೆ. ಇದನ್ನು ಸಾಧುವೆಂದು ಹೇಳುವುದಕ್ಕಾಗುವುದಿಲ್ಲ. ಆದರೂ ಮರಾಟ ಯಲ್ಲಿ ಈ ರೂಪವುಂಟು. ಆದುದರಿಂದ ಇದು ತದ್ವರೂಪವೆಂದು 1 ಇದಕ್ಕೆ ಉದಾಹರಣೆಯಾಗಿ II ೪೨, ರ್೬, III ೬೫; ೬೬: V 4: VII ೧, ೨, ೪೦; ಈ ಪದ್ಯಗಳನ್ನು ಹೇಳಬಹುದು, 2 ಈ ಕವಿಯು ಕಂದದ ಮೊದಲನೆಯ ಮತ್ತು ಮಾರನೆಯ ನಾದಗ ಳಲ್ಲಿ ನಾಲ್ಕು ನಾಲ್ಕು ಮಾತ್ರೆಗಳ ಮರುಮುರು ಗಣಗಳಿರಬೇಕೆಂಬ ನಿಯಮವ ನಿಟ್ಟುಕೊಂಡಂತಿಲ್ಲ. ಒಟ್ಟು ಹನ್ನೆರಡು ಮಾತ್ರೆಗಳಾದರೆ ಸರಿಯೆಂದು ಭಾವಿಸಿದ ಹಾಗೆ ತೋರುತ್ತದೆ. ಆದುದರಿಂದ ಅಲ್ಲಲ್ಲೇ ಮಗುವಾಯ ಬಂದು ಗಣ , ಐದುವಾತ್ರೆಯ ಒಂದುಗ, ಆಮೇಲೆ ನಾಲ್ಕು ಮಾತ್ರೆಯ ಒಂದುಗಣ ಈ.ತಿ ಹನ್ನೆರಡು ವಷತ್ರಗಳುಳ್ಳ ಎಷ್ಟೋ ಕಂದಪಾದಗಳು ಕಂಡುಬರುತ್ತವೆ. ಅಂಥ ಪದಗಳನ್ನು ನಕ್ಷತು ಚಿಹ್ನೆಯಿಂದ ಗುರುತುಮಾಡಿದ್ದೇವೆ. ಹೀಗೆಯೇ 'ಜಗಣಂ ವಿಷಮದೊಳಗದು, ಜಗಣಂ ಮೇಣ ನಗಣಮಕ್ಕೆ ಯಾರನೆಯಡಿಯೊಳೆ 'ಎಂಬ ಸೂತ ವಿರೋಧವಾಗಿ ಬರೆದ ಕಲವು ಕಂದಗಳಿವೆ. ಉದಾ:-X 103, XI 5, XII 2,