ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಕರಕುಂತಖಡ್ಗ ಹತಿಯಿಂ ತರುಬಿದ ತೌರುಪ್ಪ ಸೈನ್ಯಮಂ ಬರಿಕೈದಂ | ಇಂತೊಳಪೊಕ್ಕು ಕೈಗೆ ಸದಾಶಿವರಾಯನದಟನಾಂಪೊಡತಕ್ಕ ಮಾಗಿ ನಿತ್ತರಿಸಲಮ್ಮದೆ || * ನೊಂದು ನುಗ್ಗಾಗಿ ಭಂಗಕೆ ಬಂದುರೆ ಕೈದುಗಳನಿಕ್ಕಿ ಕೈ ಮುಗಿದು ಪೊಗ 1 * ರುಂದಿ ಪಾಡಳಿದು ಮಡಮುರಿ ದಂದಿರದೆಣ್ಣೆಸೆಗೆ ಪರಿದುದರಿಬಲದದಟ೮ || ಮುರಿವಡೆವಾತ್ಮಸೈನ್ಯವನಭೀಕ್ಷಿಸಿ ಪಿರೆದಾಬರೀದನ ತುರತರಕೊಪದಿಂದುಳಿದಿಭಾಶ್ಚಪದಾತಿಸಮೇತನಾಗಿ ಸಂ | ಗರದೊಳಿದಿರ್ಚಿ ನಿಂದುರೆ ಸದಾಶಿವರಾಯನ ಸಂಮುಖಕ್ಕೆ ಭಾ ಸುರಮದದಂತಿಯಂ ಭರದೆ ನೂಂಕುತೆ ತುಳ್ಳಿದನಂಬಿನಲ್ಲಿ ಯಂ ॥ ೩೫ ಮದದಂತಿಯೆಂಬ ಬೆಟ್ಟದ ತುದಿಯೊಳಗಿರ್ದಾ ಬರೀದನೆನಿಸುವ ವಿಲಯಾಂ | ಬುದವಂಬಿನ ಮಳಯಂ ಕರೆ ದುದು ಧರೆಯೊಳೆ ಶೋಣಿತಾಂಬು ನೆರೆ ಸರಿವಿನೆಗಂ || ಇಸುವಂಬಿನುರುಬೆಯಂ ಸೈ ರಿಸುತತ್ತ್ವವನ್ನೆದೆ ಮೀಂಟಿ ಕರಸಿಯಿಂ ಚ | ರಿಸುತೊಳಪೊಕ್ಕುರುಬುವ ಯುವ ನಸಮಹಾ ಶನುರುಬೆಗಂದಿದಿರಾಂತಂ | ೩೩ ಇಂತಾ ಬರೀದಪಾತುಶಾಹಂಗಿದಿರ್ಚಿ ನಿಂದಿರಕ್ಕೆಲಗಳು ರುಬಿ ತರುಬಿ ಮುಸುಂಕಿ ಕೈಗೆದಟರ್ಕಳನಾತ್ಮಕರಾಕುಂತಯಮ ದಂಖ್ಯಾ ನಿಶಾತಸಾಯಕಮುಖವಿಘಾತಿಯಿಂ ವಿಂದೆಗೆಸಿ ಬರೀದಪತುಶಾ ಹನಡರ್ದ ಮದೇಭದ ಸಮ್ಮುಖಕ್ಕಂ ತದೂರ್ಧ್ವಮುಖಕ್ಕಂ ತಾನೇರ್ದ