ಪುಟ:Keladinrupa Vijayam.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

44 ಕೆಳದಿ ನೃಪವಿಜಯಂ ನುಜ ಚಿಕ್ಕಸಂಕಣನಾಯಕಂಗೆ ನಿಯಾಸಿ ಕುಟುಂಬಸಹಿತಮಾ ದೊಡ್ಡ ಸಂಕಣನಾಯಕಂ ತೆರಳು ವಿದ್ಯಾನಗರಿಗೈದಿ ರಾಮರಾಯರಂ ಸಂಧಿಸಿ ಜಂಬೂರುಡುಗುಣಿಗಳನಾ ವಿರುಪಣವೊಡೆಯರಿಂಗಿತ್ತು ನೀಂ ಹುಜರೊಳಿರ್ಪುದೆಂದು ನಿಯಾಮಿಸಲಿಂತು ರಾಯರ ಸಮೀಪದೊಳೆ ತದ್ರಾಹಕಾರಾನುಕೂಲಿಯಾಗಿ ಕತಿಷಯವತ್ಪರಂ ವರ್ತಿಸುತ್ತು ಮಿರಲಾ ಪ್ರಸ್ತಾವದೊಳೆ || ಮೆರೆವಾಸಂಕಣಭೂಮಿ ಸ್ಪರಗಿರ್ವಕೆ ಪುತ್ರರೊಗೆದರವರೊರಿಯಂ | ಧುರಧೀರರಾಮರಾಜಲ ಕಿರಿಯಂ ವೆಂಕಟನ್ನಪಾಲನರಿಕುಲಕಾಲಂ | ಆ ಇಂತೊಗೆದ ಸತ್ಪುತ್ರನಿರ್ವದಿ- ನದಿನಂಗಳಳಭಿವರ್ಧಿಸಿ ಮನೋ ಹರಾಕಾರಯುಕ್ತರಾಗಿ ಭೂಮಂಡಲಕ್ಕವತರಿಸಿದ ರವಿಚಂದ್ರರೆಂಬಿನಂ ವಿರಾಜಿಸುತ್ತುಂ ಬಾಲಲೀಲೆಯಂ ನಟಿಸುತ್ತುಮಿರಲಾ ಪುತ್ರರಿರ್ವರಂ ರಾಯರ್ಗೆ ಕೌಣಿಸಲವರ್ಗಳ ರೂಪರೇಖಾವಿಶೇಷಂಗಳಂ ನಿಟ್ಟಿಸಿ ಮುಂತೀಭಾಲಕರ ಮಹಾವರ್ಧಿಸು ಗಳಪ್ಪರೆಂದತ್ಯಂತ ಹರ್ಪಿತನಾಗಿ ಏಂತಮ್ಮ ಸಂಸ್ಥಾನದ ರಾಜಕಾರ್ಯಂಗಳ ತಿಸಾಹಸಂಗೈದು ಜಯ ಕಜ್ಜಂಗಳನಾಗಿಸಿದ ಸದಾಶಿವರಾಯನಾಯಕನ ಮೊಮ್ಮದಿರೆಂಬ ವಾತ್ಸಲ್ಯ, ದಿಂದಾಕುಮಾರರ್ಗೆ ಪಲ್ಲೆಣ್ಣೆಯುಂಬಳಗೆಂದು ನಿಯಾಮಿ || ೫ ಮಾಸೂರಂ ಮಲ್ಲೂರು ಭಾಸುರಮೆನಿಸಿರ್ಸ ಸೊಳೆಯನ್ನೂ ರಂ ಭೂ | ವಾಸವ ಸಂಕಣಭೂಪಂ ಗಾಸಮಯದೊಳಿತ್ತು ಪೆರ್ಮೆಯಿಂ ಮನ್ನಿಸಿದಂ || * ಮತ್ತವಾ ಬಾಲರಿಂಗ ತ್ಯುತ್ತಮಷಯದಿವ್ಯಭೂಷಣಾಂಬರಗಳನೊ