________________
ತದ್ಭವಗಳ 441 ಅನ್ವಯಂ. ಪೂರ್ವದ ಸೂತ್ರವಿಧಾನದಿಂದ ಕತಸಕ್ಕೆ ತೃತೀಯತೆ ಉದಪುದು; ಉತ್ತರಪದದ ಮೊದಲೊಳ ಲೋಪ ಒದರೆ ಪೂರ್ವಪದಾಂತ್ಯದೊಳ್ ದೀರ್ಘ೦ ತಗುಳ್ಳುದು. - ಟೀಕು.-ಪೂರ್ವದ = ಮೊದಲ ಸಂಧಿಪ್ರಕರಣದ; ಸೂತ್ರವಿಧಾನದಿಂದ = ಸೂತ್ರದ ಎಧಿಯಿಂದೆ; ಕತಪಕ್ಕ = ಕಕಾರ ತಕಾರ ಪಕಾರಗಳೆ ; ತೃತೀಯತೆ = ಮೂರನೆಯ ಕ್ಷರದ ಭಾವಂ; ಉದಯಿಪುದು = ಹುಟ್ಟುವುದು; ಉತ್ತರಪದದ = ಮು೦ದಣ ಪದದ; ಮೊದಲೋಆದಿಯಲ್ಲಿ ; ಲೋಪಂ = ಅ ದರ್ಶನಂ; ಒದ ವಿರೆ = ಬಂದಿರೆ; ಪೂರ್ವಪದಾಂತ್ಯದೊಳ್ = ಮೊದಲ ಪದದ ಕಡೆಯಲ್ಲಿ; ದೀರ್ಘ = ದೀರ್ಘ೦; ತಗುಳ್ಳುದು= ಎಯ್ದು ವುದು, ಒರ್ಪದೆಂಬುದರ್ಥ೦. ವೃತ್ತಿ. ಪೂರ್ವೋಕ್ತಸೂತ್ರದಿಂ ಪರದ ಕತಪಕ್ಕೆ ತೃತೀಯತೆಯಕ್ಕುಂ; ಪೂರ್ವಪದಾಂತ್ಯಕ್ಕೆ ದೀರ್ಘಮುಮುತ್ತರಪದದಾದಿಗೆ ಲೋಪಮುಮುಕ್ಕುಂ. ಪ್ರಯೋಗ-ಕಕಾರತೃತೀಯತೆಗೆ - ಮಾನುಷಕಾವ್ಯಂ = ಮಾನಸ ಗಬ್ಬಂ; ಕರ್ಪೂರಕರಂಡಕಂ= ಕಪ್ಪುರಗರಡಗೆ; ಸಂಭಾರಕಬಳಂ=ಸಂಬರಗ ವಳಂ; ರತ್ನಕಂಬಳಂ= ರತ್ನಗಂಬಳಿ; ಕಾಶಾಕರ್ಪಟಂ= ಕಾಸಿಗಪ್ಪಡಂ (0. T. ಕಸಗಪ್ಪಡಂ). ತಕಾರತೃತೀಯತೆಗೆ ಖದಿರತಾಂಬೂಲಂ= ಕೈರದಂಬುಲಂ; ಮಾಲಾ ತೋರಣಂ= ಮಾಲೆದೋರಣಂ; ಕಾಕತುಂಡಿ=ಕಾಗದೊಂಡೆ; ಅನ್ಸತುವರಿ= ಅಚ್ಚದೊವರಿ (0. T, ಅಡ್ಡದೊಗರಿ); ಸಂಘಾತತಾಳಂ=ಸಂಗಡದಾಳಂ. ಪಕಾರತೃತೀಯತೆಯಂ ಪ್ರಯೋಗದೊಳ್ ನೋಡಿ ಕೊಳ್ಳುದು. ಪೂರ್ವಪದಾಂತ್ಯಕ್ಕೆ ದೀರ್ಘಮುಂ ಉತ್ತರಪದಾದಿಗೆ ಲೋಪಮುಮಾ ಗಿ- ಧರ್ಮಪಾನೀಯಕ್ಕೆ ದಮ್ರಾಣಿ, ಕಾಂಸ್ಯತಾಳಕ್ಕೆ ಕಂಸಾಳಂ ಎಂ ದಾಯ್ತು. ಸೂತ್ರಂ | ೨೯೫ || Further, in com ಪರಪದದಾದಿಗೆ ಲೋಪಂ | pounds sometimes ದೊರೆಕೊಳುಂ ಕೆಲವರಿಲ್ಲಿ ಪೂರ್ವಪದಾಂತ್ಯ - 1 the first syllable of the second word ಹಿರದಕ್ಕುಂ ಲೋಪಂ ವ್ಯವ- || suffers Elision; - ಹರಿಪ ಸಮಾಸಂಗಳಲ್ಲಿ ಕೆಲಕೆಲವೆಡೆಯೊಳ್ || ೩೦೯ || sometimes the last syllable of the first word is elided.