ಪ್ರೇಮರಾಗ ಹಾಡು ಗೆಳತ - ಬಾ ಬಾರೆ..

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಚಿತ್ರ: ಪ್ರೇಮರಾಗ ಹಾಡು ಗೆಳತಿ
ಸಾಹಿತ್ಯ: ಎಸ್.ಎಂ. ಪಾಟಿಲ್
ಸಂಗೀತ: ಇಳಯರಾಜ
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಂದ್ರಿಕ


ಬಾ ಬಾರೆ .. ಓ ಗೆಳತಿ
ಬಾ ಬಾರೆ .. ಓ ಗೆಳತಿ
ನಿನಗಾಗಿಯೆ ಮನ ಹಾಡಿದೆ ..
ನಲಿದಾಡಿದೆ ಬಾ!
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು
ಬಾ ಬಾರೆ .. ಓ ಗೆಳತಿ
ಬಾ ಬಾರೆ!

ಸಂಭ್ರಮ .. ಎಲ್ಲೆ ಮೀರಿದೆ
ಸಡಗರವೆ ಹೃದಯ ತುಂಬಿದೆ
ನಿನ್ನ ಸ್ಪಂದನ .. ತಂದ ಕಂಪನ
ನಲ್ಲ ಬಳಿಗೆ ಸೆಳೆದು ತಂದಿದೆ

ಓ ಚೆಲುವೆ ಎಲ್ಲಿಂದ ಬಂದೆ ..
ಬಂದ ಹಾಗೆ ಮನ ತುಂಬಿಕೊಂಡೆ!
ನದಿ ಸಾಗರವ ಸೇರುವಂತೆ
ನಿನ್ನ ಕಾಣದೆ ನಾ ಹರಿದು ಬಂದೆ!
ನಿನ್ನ ನೋಟದಿ .. ಸೆರೆಯಾದೆ ನಾ
ಸವಿ ಮಾತಾಡು ಬಾ!

ಬಾ ಬಾರೊ .. ಓ ಗೆಳೆಯ
ಬಾ ಬಾರೊ!

ಸಂಧ್ಯೆಯ .. ಬಾನಂಚಲಿ ನಿನ್ನ ನಗೆಯು ಹರಡಿದಂತಿದೆ
ಇಲ್ಲಿ ಚುಂಬಕ .. ಧ್ವನಿ ತೇಲಿದೆ
ನಿನ್ನ ಸ್ವರದ ಇಂಪು ಚೆಲ್ಲಿದೆ
ಮಲೆನಾಡೆ ಕಂಗೊಳಿಸುವಂತೆ ..
ನೀ ಚೈತ್ರದ ಋತುವಾಗಿ ಬಂದೆ
ಹಿತ ನೀಡೊ ತಂಗಾಳಿಯಂತೆ ..
ಮೈ ಮನವ ನೀ ಬಳಸಿ ಬಂದೆ
ಅನುರಾಗದ .. ಸುಧೆ ನೀಡಿದೆ
ಜೊತೆ ನೀನಾಗು ಬಾ!

ಬಾ ಬಾರೊ .. ಓ ಗೆಳೆಯ
ಬಾ ಬಾರೊ .. ಓ ಗೆಳೆಯ
ನಿನಗಾಗಿಯೆ ಮನ ಹಾಡಿದೆ ..
ನಲಿದಾಡಿದೆ ಬಾ!
ಎದೆಯೊಳಗೆ ಜೀವ ನೀನು
ಮನದೊಳಗೆ ಭಾವ ನೀನು

ಬಾ ಬಾರೆ .. ಓ ಗೆಳತಿ
ಬಾ ಬಾರೆ!


ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ