ಪ್ರೇಮಾನುಬಂಧ - ಹೊಸ ಹೊಸ ಬಯಕೆಯ
ಚಿತ್ರ: ಪ್ರೇಮಾನುಬಂಧ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು
ಎಸ್.ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಹೊಸ ಹೊಸ ಬಯಕೆಯ ಮಿಂಚಿನಲ್ಲೀ
ಮುದ್ದು ಮುದ್ದು ಮಾತಿನ ಮಳೆಯಲೀ
ಛಳಿಯಾ ನೀನು ತಂದೇ
ಸನಿಹಾ ನಾನು ಬಂದೇ
ನಾ ನಿನ್ನ ನೋಡಿದಾಗಾ ನೀ ನನ್ನ ಸೋಕಿದಾಗಾ
ಇಂಥಾ ಸಂತೋಷವೇಕೇ..
ಹೊಸ ಹೊಸ ಬಯಕೆಯ ಮಿಂಚಿನಲ್ಲೀ
ಮುದ್ದು ಮುದ್ದು ಮಾತಿನ ಮಳೆಯಲೀ
ಛಳಿಯಾ ನೀನು ತಂದೇ
ಸನಿಹಾ ನಾನು ಬಂದೇ
....||ಪಲ್ಲವಿ||
ಚಲುವಾದ ಕೆನ್ನೆಯೇತಕೇ ನಸುಗೆಂಪಗಾಗಿದೇ
ಮೃದುವಾದ ತುಟಿಗಳೇತಕೇ ಬಳಿ ನನ್ನ ಕೂಗಿದೇ
ಪ್ರೇಮದಾ ಚಲ್ಲಾಟಕೇ ಉಲ್ಲಾಸ ತುಂಬಿ ಬಂದೂ
ಮನಸಾರ ನನ್ನ ಪ್ರೀತಿಸೂ ಸಂಗಾತಿ ಎಂದಿದೇ
ಸವಿಯಾದ ಒಂದು ಕಾಣಿಕೇ ಕೊಡು ಎಂದು ಬೇಡಿದೇ
ನಲ್ಲೆಯಾ ಸವಿ ಮಾತಿಗೇ ಬೆರಗಾಗಿ ಸೋತೆನಿಂದೂ
ಬೆರಗಾಗಿ ಸೋತೆನಿಂದೂ
.... ||ಹೊಸ ಹೊಸ||
ನೀನಾಡೊ ಮಾತು ಕೇಳುತಾ ನೂರಾಸೆ ನನ್ನಲೀ
ತಾನಾಗೆ ಮೂಡಿ ಬಂದಿತೂ ಈಗೇನು ಮಾಡಲೀ
ಆಸೆಯಾ ಪೂರೈಸಲೂ ನಾನಿಲ್ಲಿ ಇಲ್ಲವೇನೂ
ಒಲವಿಂದ ಬಳಸು ನನ್ನನೂ ಹಿತವಾಗಿ ತೋಳಲೀ
ಸೊಗಸಾದ ಕನಸೂ ಕಾಣುವೇ ಈ ನನ್ನ ಬಾಳಲೀ
ಹೀಗೆಯೆ ಅನುಗಾಲವೂ ಜೊತೆಯಾಗಿ ಇರುವೆ ನಾನೂ
ಜೊತೆಯಾಗೆ ಇರುವೆ ನಾನೂ
....||ಹೊಸ ಹೊಸ||