ವಿಷಯಕ್ಕೆ ಹೋಗು

ಮುನಿಯನ ಮಾದರಿ - ಹಳ್ಳಿ ದಾರಿಯಲ್ಲಿ

ವಿಕಿಸೋರ್ಸ್ದಿಂದ

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ ಬಾಲಸುಬ್ರಹ್ಮಣ್ಯಂ


ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು

ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು

ಹೈ ಸ್ಕೂಲು ದಾಟಿರುವ, ಕಾಲೇಜು ಮುಟ್ಟಿರುವ, ಭೂಪ ಹಳ್ಳೀಗೆ ಬಂದಾಗ
ಸೂಟನ್ನು ಧರಿಸಿರುವ, ಹ್ಯಾಟನ್ನು ಹಾಕಿರುವ, ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ, ವೆಲ್ಕಂ ಹೇಳದೆಲೆ, ಏಕೆ ನಿಂತಿರುವೆ?
ಹೇಳೆ ನನ್ನ್ ಅತ್ತೆ ಮಗಳೆ

ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು

ಹುರಿ ಮೀಸೆ ಬಂದಾಯ್ತು, ನನಗೀಗ ವಯಸಾಯ್ತು, ನೋಡು ಟಚ್ಮಾಡಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು, ನನ್ನಾಸೆ ಹೆಚ್ಚಾಯ್ತು, ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ, ಜೂಲಿಯಟ್ ನೀನಾಗಿ, ಲವ್ವು ಮಾಡುವೆನು
ಕೇಳೆ ನನ್ನ್ ಮಾವನ್ ಮಗಳೆ

ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ