ಯಮನೆಲ್ಲೋ ಕಾಣೆನೆಂದ್ಹೇಳಬೇಡ

ವಿಕಿಸೋರ್ಸ್ದಿಂದ
(ಯಮನೆಲ್ಲೋ ಕಾಣೆನೆಂದಹೇಳಬೇಡ ಇಂದ ಪುನರ್ನಿರ್ದೇಶಿತ)

ಯಮನೆಲ್ಲೋ ಕಾಣೆನೆಂದ್ಹೇಳಬೇಡ[ಸಂಪಾದಿಸಿ]

ರಾಗ: ಶಂಕರಾಭರಣ ತಾಳ: ಆದಿ

ಯಮನೆಲ್ಲೋ ಕಾಣೆನೆಂದಹೇಳಬೇಡ
ಯಮನೆ ಶ್ರೀರಾಮನು ಸಂದೇಹ ಬೇಡ ||ಪ||

ನಂಬಿದ ವಿಭೀಷಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನಾದ ||೧||

ನಂಬಿದ ಅರ್ಜುನನಿಗೆ ಭೃತ್ಯನಾದ
ನಂಬದ ದುರ್ಯೋಧನನಿಗೆ ಮೃತ್ಯುವಾದ ||೨||

ನಂಬಿದ ಪ್ರಹ್ಲಾದನಿಗೆ ಹರಿಯಾದ
ನಂಬದ ಹಿರಣ್ಯಕನಿಗೆ ಉರಿಯಾದ ||೩||

ನಂಬಿದ ಉಗ್ರಸೇನಗೆ ಮಿತ್ರನಾದ
ನಂಬದಿದ್ದ ಕಂಸನಿಗೆ ಶತ್ರುವಾದ ||೪||

ನಂಬಿಕೊಳ್ಳಿ ಬೇಗ ಶ್ರೀಕೃಷ್ಣದೇವನ
ಕಂಬು ಚಕ್ರಧಾರಿ ಪುರಂದರವಿಠಲನ ||೫||
 ರಚನೆ:- ಪುರಂದರದಾಸರು.[೧]

ನೋಡಿ[ಸಂಪಾದಿಸಿ]

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ದಾಸವಾಣಿ