ವಿಷಯಕ್ಕೆ ಹೋಗು

ಯಾದವ ನೀ ಬಾ ಯದುಕುಲ ನಂದನ

ವಿಕಿಸೋರ್ಸ್ದಿಂದ

ಯಾದವ ನೀ ಬಾ ಯದುಕುಲ ನಂದನ

[ಸಂಪಾದಿಸಿ]
ರಾಗ: ಜುಲಾಪ್, ತಾಳ: ಅಟ್ಟ;


ಯಾದವ ನೀ ಬಾ ಯದುಕುಲ ನಂದನ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೊ ||ಪ||

ಸೋದರಮಾವನ ಮಧುರೆಲಿ ಮಡುಹಿದ ಯ-
ಶೋದೆ ನಂದನ ನೀ ಬಾರೊ || ೧ ||

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣಿಕೋಲ್ ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ || ೨ ||

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೊ
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೊ || ೩ ||

ಖಗವಾಹನನೆ ಬಗೆಬಗೆಯಿಂದಲಿ
ನಗೆಮೊಗದರಸನೆ ನೀ ಬಾರೊ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೊ || ೪ ||[]
ರಚನೆ ಪುರಂದರ ದಾಸರು.

ಪರಿವಿಡಿ

[ಸಂಪಾದಿಸಿ]


ಉಲ್ಲೇಖ

[ಸಂಪಾದಿಸಿ]
  1. ದಾಸವಾಣಿ