ಯಾರೇ ನೀನು ಚೆಲುವೆ - ಕುಶಲವೇ ಕ್ಷೇಮವೇ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
  • ಚಿತ್ರ: ಯಾರೇ ನೀನೇ ಚೆಲುವೆ
  • ಸಾಹಿತ್ಯ : ಹಂಸಲೇಖ
  • ಸಂಗೀತ: ಹಂಸಲೇಖ
  • ಗಾಯನ: ಶ್ರೀನಿವಾಸನ್, ಅನುರಾಧಾ ಶ್ರೀರಾಂ


[ಗಂಡು]
ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ
ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ

[ಹೆಣ್ಣು]
ಕುಶಲವೇ ಕ್ಷೇಮವೇ ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ

ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ...ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
ಓಲೆಗಳಿಗ್ಯಾರು ಈ ರಾಯಭಾರ ತಂದಾರೋ

ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
ಯಾರೋ ನೀನು ಚೆಲುವಾ ಅಂದಿದೇ

||ಕುಶಲವೇ||

ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರವಾದರೂ
ನಾವಿಂದು ದೂರ ಇದ್ದರೂ
ವಿರಹಗಳೆ ನಮ್ಮ ಮಿತ್ರರೂ
ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ
ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು
ದೂರಾನೇ ಆರಂಭ, ಸೇರೋದೇ ಅಂತಿಮ
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು
ದೂರದಲೇ ಹಾಯಾಗಿದೇ
ಕಾಯುವುದೇ ಸುಖವಾಗಿದೇ
ಯಾರೇ ನೀನೂ ಚೆಲುವೇ ಅಂದಿದೇ..

||ಕುಶಲವೇ||

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ