ವಿಷಯಕ್ಕೆ ಹೋಗು

ವಿಮೋಚನೆ/ಭಾನುವಾರ

ವಿಕಿಸೋರ್ಸ್ದಿಂದ
11215ವಿಮೋಚನೆ — ಭಾನುವಾರನಿರಂಜನ


...ಭಾನುವಾರ

ಭಾನುವಾರ ಎಂದೊಡನೆ ವಿಶಿಷ್ಟ ಭಾವನೆಗಳು ಉಂಟಾಗುತ್ತದೆ. ದುಡಿಯುವವರಲ್ಲಿ. ಅದು ರಜಾ ದಿನ, ಕಂಪನಿ ಸರಕಾರದ ಕೆಳಗೆ ನಾವು ಗುಮಾಸ್ತೆಗಳಾಗತೊಡಗಿದಂದಿನಿಂದ, ತಲೆತಲಾಂತರಗಳಿಂದ, ಈ ದೇಶದಲ್ಲಿ ಭಾನುವಾರದೊಂದು ರಜಾ ದಿನವಾಗಿದೆ.

ಆದರೆ ನನ್ನ ಪಾಲಿಗೆ ಎಲ್ಲವೂ ರಜಾದಿನಗಳೇ...ಎಲ್ಲವೂ ದುಡಿ ಯುವ ದಿನಗಳೇ. ಈಗ ಈ ಸೆರೆಮನೆಯಲ್ಲೂ ಅಷ್ಟೇ: ಹಿಂದೆ ಆ ಸೆರೆ ಮನೆಯಲ್ಲೂ ಅಷ್ಟೆ.

ಹಿಂದಿನ ಆ ಸೆರೆಮನೆಯೆಂದು ಸಂಬೋಧಿಸುತ್ತಿರುವುದು, ನಾನು ವಾಸವಾಗಿದ್ದ ಬಾಹ್ಯ ಜಗತ್ತನ್ನು.

ಬಿಡುಗಡೆಯನ್ನು ಇದಿರುನೋಡುತ್ತಿರುವ ನಾನೀಗ ಮುಖ ಕ್ಷೌರದ ಗೊಡವೆಗೆ ಹೋಗಬೇಕಾಗಿದ್ದಿಲ್ಲ. ಯಾರ ಪ್ರಿತ್ಯರ್ಥಕ್ಕಾಗಿ ಸಂತೃಪ್ತಿಗಾಗಿ ಈ ಮುಖ ಕ್ಷೌರ? ನನ್ನ ನುಣ್ಣನೆಯ ಮುಖವನ್ನು ಇನ್ನೊಬ್ಬರು ನೋಡುವುದರಿಂದ, ನನಗಿನ್ನು ಆಗಬೇಕಾದ ಲಾಭ ವೇನೂ ಇಲ್ಲ

ಹನ್ನೆರಡು ವರುಷಗಳಿಗೆ ಹಿಂದೆ, ನಾನು ಇಪ್ಪತ್ತಾರರ ಯುವಕ ನಾಗಿದ್ದಾಗಲೂ, ಹಾಗೆಯೇ ಆಯಿತು. ಆಗ ನಾನು ಪ್ರಪಂಚದ ಮೇಲೆಯೇ ಮುನಿದು ದೂರವಾಗಿದ್ದೆ. ಕಾದು ಬೆಂದಿದ್ದ ಹೃದಯದ ಮೇಲೆ ನಿರಾಸೆಯ ತಣ್ಣೀರೆರಚಿ ಕೆಡಿಸಿದ್ದರು ಕೆಟ್ಟವರು. ಹೆಣ್ಣೊಂದು ನನ್ನ ಜೀವನದ ಒಳ ಪ್ರವೇಶಿಸಿದಾಗ, ನೇರವಾದೊಂದು ಹೊಸ ದಾರಿ ಯನ್ನು ಹಿಡಿಯಲು ನಾನು ಇಚ್ಚಿಸಿದೆ. ಆದರೆ ಅವರು ಬರಬೇಡ ವೆಂದರು. ಆ ಹೆಣ್ಣು ನನ್ನನ್ನು ಅಣಕಿಸಿ ಅವಮಾನಿಸಿತು....ಆಗ ಎಷ್ಟೋ ದಿನ ನಾನು ಮುಖ ಕ್ಷೌರಮಾಡಿಕೊಳ್ಳುತಿರಲಿಲ್ಲ. ಬಟ್ಟೆಗಳು ಮಾಸಿರುತಿದ್ದುವು. ಪ್ರೇತಕಳೆಯಿತ್ತು ಮುಖದ ಮೇಲೆ. ಮಾನವ ರಿಂದ ದೂರ ಹೋಗಲು ನಾನು ಬಯಸುತಿದ್ದೆ. ಮನುಷ್ಯರು ಯಾರ ಸಹವಾಸವೂ ನನಗೆ ಬೇಕಾಗಿರಲಿಲ್ಲ.

ಅದರ ಬದಲಾಗಿ ನಾನು ಬಾಟಲಿಯ ಸಹವಾಸಮಾಡಿದೆ. ಮುಗುಳು ನಗು ಬರಿಸಿದ ಮೊದಲ ಗುಟುಕು.....ಆ ಬಳಿಕ ಎಂದಿಗೂ ತೃಪ್ತಿಕೊಡದೇ ಹೋದ ಬರಿದು ಬಾಟಲಿಗಳು.......ದುಡ್ಡಿನ ಪ್ರಮಾ ಣಕ್ಕೆ ಅನುಸಾರವಾಗಿ ಬಾಟಲಿಯ ಗುಣವಿರುತಿತ್ತು. ಹಣದ ಪರಿ ಮಾಣ ಹೆಚ್ಚುತಿತ್ತು ದ್ರಾವಕದ ಗುಣ. ಕುಡಿತ ಅಧಃಪತನದ ಚಿಹ್ನೆ ಎಂದು ಆರೋಪಿಸುವವರಿದ್ದಾರೆ. ಅದು ನನ್ನ ಅಭಿಪ್ರಾಯವಲ್ಲ. ಒಳ್ಳೆಯ ಮನುಷ್ಯರು ಹಾಗೆ ಹೇಳ ಬಹುದು. ಆದರೆ ನಾನು ಒಳ್ಳೆಯ ಮನುಷ್ಯನೆಂದು ಯಾವ ದಿನ ಸಾಧಿಸಿದ್ದೆ? ಇನ್ನೊಬ್ಬರ ಸಂಪಾದನೆಯಿಂದ ಒಂದಂಶವನ್ನು ಕಸಿದು ಜೀವಿಸಿದ ನಾನು ಒಳ್ಳೆಯವನೆಂದು ಹೇಳುವುದು ಹೇಗೆ ಸಾಧ್ಯ?

ಜನ, ಯುದ್ದದ ಮಾತನ್ನಾಡುತಿದ್ದರು. ಜಗತ್ತನ್ನು ಆವರಿಸಿದ ಎರಡನೆಯ ಘೋರ ಮಹಾಯುದ್ಧ. ಒಂದು ವರ್ಷ, ಎರಡು ವರ್ಷ,... ಯಾರು ಯಾರೋ ಎಲ್ಲೋ ಕಾಳೆಗ ನಡೆಸಿದ್ದರು. ಬಾಂಬು- ಅಗ್ನಿ ವರ್ಷ- ಟ್ಯಾಂಕು ತೋಫುಗಳು- ಮೃಗಮಾನವರು. ಪ್ರಜಾಪ್ರಭುತ್ವದ ಸ್ವಾತಂತ್ರ್ಯದ ಮಾತುಗಳು ಕೇಳಿ ಬರುತಿದ್ದುವು- ಅರ್ಥವಿಲ್ಲದ ಮಾತುಗಳು.

ಆದರೆ ಬೀದಿಗಳಲ್ಲಿ ಖಾಕಿ ಜವಾನರು ಓಡಿಯಾಡುತ್ತಿದ್ದರು. ಯಾವುದೋ ದೇಶಗಳ ಬಿಳಿಯ ಸೈನಿಕರು ನಮ್ಮ ಗಲ್ಲಿಗಳನ್ನು ಗಲೀಜು ಮಾಡುತಿದ್ದರು. ಅವರು ಮನುಷ್ಯರಾಗಿರಲಿಲ್ಲ. ಹಾಗೆಂದೇ ಅವರ ಸಮಾಪ್ಯದಲ್ಲಿದ್ದು ಸಮಯ ಕಳೆಯಬೇಕು ಎನಿಸುತಿತ್ತು. ಆದರೆ ಅದಕ್ಕೆ ಅವಕಾಶವಿರಲಿಲ್ಲ. ನಾನು ಮಿಲಿಟರಿ ಸೇರಿದರೆ? ಮಿಲಿಟರಿ ಸೇರುವುದರಿಂದ ನನ್ನ ವೈಯುಕ್ತಿಕ ಸಮಸ್ಯೆ ಪರಿಹಾರವಾಗುವುದಲ್ಲವೆ?...... ಆದರೆ ಪೋಲೀಸರು ಫೈಲು ಸಿದ್ಧಗೊಳಿಸಿರುವ ನನ್ನಂಥವನಿಗೆ ಖಾಕಿ.

ಬಟ್ಟೆಯ ರಕ್ಷಣೆ ದೊರೆಯುವುದು ಸಾಧ್ಯವಿರಲಿಲ್ಲ..... ದಿನಕಳೆದಂತೆ ಸೈನ್ಯದ ಕರೆ ಮಾತ್ರ ಹೆಚ್ಚು ಹೆಚ್ಚಾಗಿ ಕೇಳಿಸು ತಿತ್ತು. ದೇಶದ ಸ್ವಾತಂತ್ರ್ಯದ ಹೆಸರಲ್ಲಿ ಜನಯುದ್ಧದ ಹೆಸರಲ್ಲಿ ಆ ಕರೆ ಬರುತಿರಲಿಲ್ಲ. ನನ್ನ ಪಾಲಿಗೆ ಅದು ಸಾವು ಎಸೆಯುತಿದ್ದ ಸಮ್ಮೋಹನಾಸ್ತ್ರ. ಆಳವರಿಯದ ಆ ನೀರಿಗೆ ಇಳಿದು ಬಿಡಲು ಮನ ಸಾಗುತಿತ್ತು. ಹಾಗೆ ಮಾಡಬೇಕಾದರೆ ತಲೆ ಮರೆಸಿಕೊಂಡು ಬೇರೆ ಊರಿಗೆ ಸುಳ್ಳು ಹೇಳಿ ಸೈನ್ಯ ಸೇರಬೇಕು......

ಮತ್ತೆಯೂ ನಾಲ್ಕು ದಿನ ಅವಕಾಶ ದೊರೆತಿದ್ದರೆ ಹಾಗೆಯೇ ಮಾಡುತಿದ್ದೆನೇನೋ. ಆದರೆ-

ಸಿಗರೇಟಿನ ಹೊಗೆಯ ತೆರೆಯ ಹಿಂದೆ ಮುಖ ಮರೆಸಿ, ಆ ಬಾರ್ ನಲ್ಲಿ ಕುಳಿತಿದ್ದ ನನಗೆ ಕರೆ ಬಂತು:

"ಚಂದ್ರೂ........."

ಎಷ್ಟು ಒತಕರವಾಗಿತ್ತು ಆ ಸಂಬೋಧನೆ! ಎಂಥ ದೀರ್ಘ ಅವಧಿಯ ಬಳಿಕ ಆ ಪದೋಚ್ಚಾರಣೆಯನ್ನು ಕೇಳುತ್ತಿದ್ದೆ! "ಚಂದ್ರೂ!"

ನಾನು ಉತ್ತರವೀಯಲಿಲ್ಲ. ಮತ್ತೊಮ್ಮೆ ಆ ಹೆಸರನ್ನು ಕೇಳುವ ಭಾಗ್ಯ ನನ್ನದಾಗಬಾರದೆ?

ಈ ಸಾರೆ ಬಲು ಹತ್ತಿರದಲ್ಲೆ ಸ್ವರ ಕೇಳಿಸಿತು.

"ಚಂದ್ರೂ!"

"ಆಂ?"

ಅವನು ನಗುತ್ತಿದ್ದ- ಶ್ರೀಕಂಠ.

"ಸೈತಾನ ಕಣೋ ನೀನು. ಈ ದೇಶದಲ್ಲೇ ನೀನಿಲ್ಲಾಂತಿದ್ದೆ. ಅಂತೂ ಸಿಕ್ದೆ"

"ಬಾ ಕಂಠಿ."

ಹಾಗೆ ನಾನು ಸಲಿಗೆಯಿಂದ ಇನ್ನೊಬ್ಬರನ್ನು ಕರೆಯದೆ ಬಹಳ ದಿನಗಳಾಗಿದ್ದುವಲ್ಲವೆ? ವನಜಾ-ವನೂ; ಶ್ರೀಕಂಠ-ಕಂಠಿ......

ಆತ ಕುಳಿತುಕೊಂಡ.

"ಏನು ತರಿಸ್ಲಿ ಹೇಳು?"

"ಚಂದ್ರೂ....ನಾನು ಇಲ್ಲಿ ಕೂತಿರೋಕೆ ಆಗಲ್ಲ. ಕೊಂಡು ಕೊಂಡದ್ದಾಯ್ತು. ಇನ್ನು ಮನೆಗೆ....ನಡಿ ಹೋಗೋಣ."

"ನಾನು? ನಾನು?"

"ನೀನೆ. ನಡಿ ಹೋಗೋಣ."

ಯೋಚಿಸಲು ಸಮಯವಿರಲಿಲ್ಲ. ಸಮಯವಿದ್ದಳೂ ಯೋಚಿ ಸುತಿದ್ದೆನೋ ಇಲ್ಲವೋ.. ಹಣದ ಪಾಕೀಟಗಾಗಿ ನಾನು ತಡವರಿಸಿದೆ. ಶೀಕಂಠ ಬಿಲ್ ನೋಡುತ್ತ ರೂಪಾಯಿಯ ಮೂರು ನಾಣ್ಯಗಳನ್ನು ಟ್ರೀಯ ಮೇಲಿರಿಸಿದ. ಕಾಣಿಕೆಯ ಎರಡಾಣೆಯೂ ಹೊರಬಿತ್ತು.

ಹೊರಗೆ ಕಾರು ನಿಂತಿತ್ತು. ಶ್ರೀಕಂಠನೇ ಚಾಲಕ. ಶಾರದಾ ಇರಲಿಲ್ಲ........ಯಾರೂ ಇರಲಿಲ್ಲ....

"ಒಬ್ನೇ ಇದೀಯೇನು?"

ಆತ ಮಾತನಾಡಲಿಲ್ಲ. ವೇಗ ವೇಗವಾಗಿ ಕಾರು ಓಡಿಸಿದ.

ಊರಿನ ಹೊರಗೆ ವಿಸ್ತರಣದಲ್ಲಿ ಸೊಗಸಾದ ಆ ಮಹಡಿ ಮನೆ ಇತ್ತು. ಹೆಬ್ಬಾಗಿಲಲ್ಲೆ ಆಲ್ಸೇಷಿಯನ್ ನಾಯಿಯ ಸ್ವಾಗತ." ಬುದ್ದೀ ಬುದ್ದೀ" ಎನ್ನುತ್ತ ಬಾಗಿ ಬಾಗಿ ಓಡುತಿದ್ದ ಆಳುಮಕ್ಕಳಿಬ್ಬರು.

ಕಾರಿನೊಳಗಿದ್ದ ಪತ್ರಿಕೆ ಪುಸ್ತಕ ಬಾಟಲಿಗಳು ಮೇಲೆಹೋದುವು.

"ಬಾ ಚಂದ್ರೂ. ಮೇಲಕ್ಕೆ ಬಾ....ನನ್ ರೂಮಿಗೆ."

..ಹಾಗೆ ನಾನು ಮೇಲಕ್ಕೆ ಹೋದೆ. ನನ್ನದಲ್ಲದ ಒಂದು ಲೋಕ ಮತ್ತೆ ಕರೆದಿತ್ತು.

"ಚಂದ್ರೂ ಹೀಗ್ಯಾಕಿದೀಯಾ?"

"ಹ್ಯಾಗಿದೀನಿ?"

"ಕನ್ನಡೀಲಿ ನೋಡ್ಕೊ."

ಆ ಕೊಠಡಿಯಲ್ಲಿ ಎರಡು ದೊಡ್ಡ ನಿಲುವುಗನ್ನಡಿಗಳಿದ್ದುವು. ಪ್ರತಿ ಹೆಚ್ಚೆಗೂ ಪ್ರತಿಬಿಂಬ ಕಾಣುವಂತೆ ಯಾಕೆ ಆಂಥ ಕನ್ನಡಿಗಳನ್ನಿ ಡುವರೊ! ವಿಸ್ತ್ತಾರವಾದ ಜಾಗದಲ್ಲಿ ಓರಣವಾಗಿ ಸೋಫಾಗಳನ್ನಿರಿಸಿ ದ್ದರು. ಯಾವುದೋ ದೇಶದ ನಿಸರ್ಗ ಸೌಂದರ್ಯವನ್ನು ತೋರಿಸುವ ಎರಡು ಮೂರು ಚಿತ್ರಗಳಿದ್ದುವು ಗೋಡೆಯ ಮೇಲೆ. ವಿಶಾಲವಾದ ಕಿಟಕಿಗಳಿಗೆ ತೆಳುವಾದ ಬಣ್ಣದ ಬಟ್ಟೆಯ ಕಮಾನು ಕಟ್ಟದ್ದರು. ಆ ಕಿಟಿಕಿಯಾಚೆ ನಮ್ಮೂರು ಕಾಣಿಸುತ್ತಿತ್ತು-ಇನ್ನೂ ಎಚ್ಚರವಿದ್ದ ನಮ್ಮೂರು. ಸಹಸ್ರ ಚಿಕ್ಕೆಗ‍ಳಾಗಿ ವಿದ್ಯುದ್ದೀಪಗ‍ಳು ಕಾಣಿಸುತಿದ್ದುವು ....ಅಲ್ಲೇ ಎಲ್ಲೋ ಒಂದೆಡೆ ನನ್ನ ಮನೆ ಇರಬೇಕು....ಅದರಾಚೆಗೆ ಎಲ್ಲೋ ಆ ಹುಡುಗಿ....

"ಏನೋ ಇದು? ಕವಿ ನಿಂತ ಹಾಗೆ ನಿಂತೀದೀಯಲ್ಲೋ?"

ರಾತ್ರೆಯ ಪಾಯಜಾಮೆ ಗೌನು ತೊಟ್ಟು ಶ್ರೀಕಂಠ ನಗುತ್ತ ಕೇ‍ಳುತ್ತಿದ್ದ. ಅವನ ಅಂಗಾಂಗಗಳು ತುಂಬಿಕೊಂಡಿದ್ದುವು. ಆ ಕಣ್ಣುಗಳಲ್ಲಿ ದಿಟ್ಟತನವಿತ್ತು.

"ಸಂಕೋಚ ಪಟ್ಕೋಬೇಡವಮ್ಮಾ. ನಾನೊಬ್ನೇ ಇದೀನಿ

.......ಒಳಗೆ ವಾಷ್ ಬೇಸಿನ್ನಿದೆ, ಮುಖ ತೊಳಕೊ. ಬಟ್ಟೆ ಇಟ್ಟಿ ದೀನಿ, ಬದಲಾಯಿಸ್ನೊ."

........ನಾನು ಹೊಸಬನಾಗಿ ತೋರುತ್ತ ಕೊಠಡಿಗೆ ಹಿಂತಿರುಗಿ ಸೋಫಾದ ಮೇಲೆ ಒರಗಿ ಕುಳಿತೆ. ಕೇಳಿಯೂ ಕೇಳಿಸದಂತೆ ರೇಡಿಯೋ ಹಾಕುತ್ತ ಶ್ರೀಕಂಠನೆಂದ.

"ಇನ್ನು ಹೇಳು ನಿನ್ಕತೆ."

"ನಮ್ಮ ಬೊಂಬಾಯಿ ಫರ್ಮು ದಿವಾಳಿ ಎದ್ದೋಯ್ತು ಕಂಠಿ. ಸದ್ಯಕ್ಕೆ ಬೀದೀಲಿದೀನಿ."

"ಸರಿ. ಒಬ್ನೇನೊ ಇನ್ನೊ?"

"ಹೂನಪ್ಪಾ."

"ಭಾಗ್ಯವಂತ ನೀನು!"

ಆಡುಗೆಯ ಹುಡುಗ ಬಂದು ಹೋದ. ಇಬ್ಬರೂ ಊಟದ ಕೊಠಡಿಗೆ ಹೋದೆವು. ಆ ಕುರ್ಚಿ ಮೇಜು ಬಿಳಿಬಟ್ಟೆ ಸ್ವಚ್ಛವಾ ಗಿದ್ದುವು. ಊಟವೂ ಅಷ್ಟ. ಆದರೆ ನನಗೆ ಏನೂ ಸೇರಲಿಲ್ಲ. ಕತ್ತಲು ಕವಿದಿದ್ದ ಮೆದುಳಿಗೆ ಹೆದರಿ ನಾಲಿಗೆ ನಿರಾಕರಿಸಿತ್ತು. ಶ್ರೀ ಕಂಠನೂ ಉಂಡುದು ಸ್ವಲ್ಫವೇ........

ಕೊಠಡಿ ಸೇರಿದ ಮೇಲೆ ಗ್ಲಾಸುಗಳ ಸದ್ದು. ಶ್ರೀಕಂಠ ಬಾಗಿಲಿಗೆ

ಆಗಣಿ ತಗಲಿಸಿದ, ಆತ ವ್ಹಿಸ್ಕಿ-ಸೋಡಾಗಳನ್ನು ಬೆರೆಸುತಿದ್ದಾಗ ಕೇಳಿದೆ.

"ಯಾವತ್ತಿಂದ ಆಭ್ಯಾಸ?"

"ಮೂರು ವರ್ಷಗಳಾದುವು ಚಂದ್ರೂ. ನಮ್ಮ ಶಾರದಾ ಮೊದಲ ಕಹಿ ಗುಟುಕು ಕೋಟ್ಟಮೇಲೆ ಇದಕ್ಕೆ ಆತುಕೊಂಡಿದ್ದೀನಿ."

"ಆದೇನು ಒಗಟು?"

ಅವನು ನೋವಿನ ನಗೆ ನಕ್ಕು. ಎರಡು ಗ್ಲಾಸುಗಳಲ್ಲೆ ಸುಲಭ ವಾಗಿ ಅವನ ನಾಲಿಗೆ ಸಡಿಲಿಕೊಂಡಿತು. ಆತನ ಆತ್ಮ ಕಥೆಯನ್ನು ಕೇಳುತ್ತ ಕುಳಿತೆ.

ಬಿ.ಎಸ್ ಸಿ. ಮುಗಿಸಿದ ಶ್ರೀಕಂಠ ಉದ್ಯೋಗ ಹುಡುಕಿಕೊಂಡು ಹೋಗಲಿಲ್ಲ , ಕುಳಿತಲ್ಲೆ ಹಣಸಂಪಾದಿಸುತಿದ್ದ ರಖಂ ವ್ಯಾಪಾರಿ ಯಾದ ಆತನ ಮಾವ ,ಆಳಿಯ ದೇವರನ್ನು ಪರೀಕ್ಷಿಸಿ ನೋಡಿದರು. ಅವರ ಒಬ್ಬಳೇ ಮಗಳು ಗಂಡ, ಸಾವಿರ -ಸಾವಿರದ ವ್ಯಾಪಾರದಲ್ಲಿ ನಿಷ್ಣಾ ತನಾಗಿ ಕಂಡುಬಂದ. ಊರ ವಿಸ್ತರಣದಲ್ಲಿ ನವ ದಂಪತಿಗಳಿಗಾಗಿ ಸ್ವಂತದ ಮನೆಯನ್ನು ಕಡಿಮೆಗೆ ಕೊಂಡುದಾಯಿತು.......ಶಾರದಾ ಬಂದಳು...... ಎಲ್ಲ ಸೌಕರ್ಯಗಳೂ ಬಂದವು. ಆದರೆ ಸುಖ- ಶಾಂತಿ?

"ಗಂಡ-ಹೆಂಡತಿ ಆಂದರೆ ಏನು ಚಂದ್ರೂ ? ಅದೇನು ಒಪ್ಪಂ ದವಾ ? ಆಕೆ ಪೂರ್ತಿ ಒಪ್ಪಿಗೆಯಿಲ್ಲದೆ, ಎಷ್ಟು ಬೇಕೊ ಅಷ್ಟನ್ನೇ ಕೊಡ್ತಿದ್ಲು. ಶ್ರೀಮಂತರ ಹುಡುಗೀನಪ್ಪಾ!......ಅದರೆ ನಾನು ಎಂಥಾ ಫೂಟ! ದುಡ್ದೊಂದಿದ್ದರೆ ಧಿಮಾಕು.. ಸ್ಥಾನ ಮಾನ ಏನು ಬೇ ಕಾದರೂ ಕೊಂಡ್ಕೋಬದಹುದು.......ಹುಂ. ಶಾರದಾ.....ನೀನು ಭಾಗ್ಯವಂತ ಚಂದ್ರೂ.....ನೀನು ಮದುವೆ ಬೇಡಿ ತೋಟ್ಕೂಂಡಿಲ್ಲ .......ವಿಷಯ ಗೊತ್ತೆ ಚಂದ್ರೂ?.......ಶಾರದಾ ಸ್ವಲ್ವ ವಿಚಿತ್ರ ಪಾಣಿ. ದೊಡ್ದ ಮನೆತನಾಂತ ಹೇಳಿದೆನಲ್ಲ? ಸಂಬಂಧಿಕರು ಗೆಳೆಯರು ಯಾರು ಯಾರೋ ಬರ್ತಿದ್ರು - ಹೋಗ್ತಿದ್ರು. ಅಂತೂ ಯಾರನ್ನೋ ಆಗ ಆಕೆ ಮೇಚ್ಚಿರಬೇಕು....ಈಗ? ಅವಳ್ನ ದೂರಬಾ ರೇನೋ ಅದು ನಿಜಾನ್ನು. ಆದರೆ ಒಮ್ಮೆ ನನ್ನ ಬಲಿ ತೆಗೆದುಕೊಂಡ್ಮೇಲೆ, ಹೊಸ ಎಂಟ್ರೀ ಪುಸ್ತಕ ಷುರು ಮಾಡ್ಮೇಕೋ ಬೇಡ್ವೊ?"....... "

ವೈಮನಸ್ಸು ಅನ್ನು ಹಾಗಾದರೆ. ಇಲ್ಲಿಗೆ ಬರೋದೇ ಇಲ್ವೇನು ಈಗ ?"

"ಹಾಗೇನಿಲ್ವಪ್ಪಾ....ಹೆರಿಗೆಗೆ ಹೋಗಿದಾರೆ ಸಾಹೇಬರು!.... ಇದೇ ಊರಲ್ಲೇ --ಆರು ಮೈಲ್ಲಿ ಆಚೆ ಇರೋ ತವರ್ಮನೆಗೆ !"

"ಅಭಿನಂದನೆ."

" ಥೂ!......"

....... ಶ್ರೀಕಂಠ, ತನ್ನ ಮಲಗುವ ಕೊಠಡಿಗೆ ನನ್ನನ್ನು ಒಯ್ದ. ಬೇರೆ ಬೇರೆ ಭಾಗಗಳಲ್ಲಿ ಕಿಟಕಿಗಳಿಗೆ ಸಮಿಸನಾಗಿದ್ದ. ಕೆತ್ತನೆಯ ಕೆಲ ಸದ ಮಂಚಗಳು .ಇಳಿಬಿಟ್ಟದ್ದ ಸೊಳ್ಳೆಯ ಪರದೆ. ಎಲ್ಲವೂ ಶುಭ್ರ ಶುಭ್ರವಾಗಿದ್ದ ಹಾಸಿಗೆ-ದಿಂಬು ಹೊದಿಕೆಗಳು.

"ಆದು ಶಾರದಾ ಹಾಸಿಗೆ ಆಲ್ಲೇ ಮಲಕೋ."

"ಉಂಟೇ ಎಲ್ಲಾದರೂ? ಅವರೇನೆಂದಾರು.?"

"ಒಳ್ಳೇ ಹುಡುಗಿ ಶಾರದಾ.ಅವಳೇನೂ ಆಕ್ಷೇಪಿಸೋಲ್ಲ."

ಉದ್ವಿಗ್ನಗೊಂಡಿದ್ದ ಶ್ರೀಕಂಠನನ್ನು ಸಂತವಿಸುವ ಮಾತು ಗಳನ್ನಾಡಬೇಕೆಂದು. ಮನಸ್ಸು ಬಯನಿತು. ಆದರೆ ಸರಿಯಾದ ಮಾತೇ ಹೊಳೆಯಲಿಲ್ಲಿ .ಶ್ರೀಕಂಠನನ್ನು ಕಹಿಯಾಗಿ ನಗುತ್ತ ಹೇಳಿದ:

"ಅದು ಬರೇ ಹಾಸಿಗೆ ಕಣೋ..ಹೆದರುಕೊಬೇಡ. ನಾನು ಮಲಕೋತೀನಿ..ನಿದ್ದೆ .ಬರುತ್ತೆ ನನಗೆ ..ಫ್ಯಾನ್ ಹಾಕೋ. ಪೇಪರ್ ಓದೋ ಹಾಗಿದ್ರಿ.ಓದು ....ನೆದ್ದೆ ಬಂದ್ರೆ ದೀಪ ಆರಿಸ್ಬೆಡು.ನಿನ್ತಲೇ ಮೇಲ್ಗಡೇನೇ ಸ್ವಿಚ್ಚಿದೆ......."

ಬಹಳ ಹೊತ್ತು ನನಗೆ ನಿದ್ದೆ ಬರಲಿಲ್ಲ. ಎಷ್ಟೋ ಕಾಲದಿಂದ ನಿದ್ದೆಹೋಗಿದ್ದ ಮನಸ್ಸು ಜಾಗೃತವಾಗಿತ್ತು ...ಜೀವನ ಹೀಗೂ ಇದೆ ಆಲ್ಲವೆ? ಮೇಲ್ಮಟ್ಟದ ಜೀವನ ರಂಗಕ್ಕೆ ಶ್ರೀಕಂಠ ಕಾಲಿರಿಸಿದ್ದ. ಆದರೆ ಭಾರವಾದ ಹೂವಿನ ಹಾರ ಆವನ ಕೊರಳನ್ನು ಬಾಗಿಸಿ ಉಸಿರು ಕಟ್ಟಿ. ಸಿತ್ತು...ದೀಪ ಅರಿಸಿದರೂ ನನಗೆ ನಿದ್ದೆ ಬರಲಿಲ್ಲ... ಎವೆ ತೆರೆದೇ, ಕತ್ತಲು-ಬಿಳುಪಿನ ಮಿಲನದ ಮಸಕು ರೂಪವನ್ನು ನಾನು ಕಂಡೆ. ಶಾರದಾ ರಸಿಕಳಿರಬೇಕು...ಸಿಂಗರಿಸಿದ್ದ ಆ ಕೊಠಡಿ...ನನ್ನ ಮುಖ ದಿಂಬನ್ನು ಮುಟ್ಟಿತು...ಆಕೆಯೂ... ಥೂ...ಎಂಥ ಸುವಾಸನೆ!... ಆದರೆ ಆ ದಿನ ಸಾಯುತ್ತಿದ್ದ ಅಜ್ಜಿಯ ದೇಹದಿಂದ ಹೊಂಟ ಆ ದುರ್ಗಂಧ?... ಹುಚ್ಛು ಯೋಚನೆಗಳು... ಮುಂದೇನು ಇನ್ನು? ನಿದ್ದೆ ಯಾಕೆ ಬರಬಾರದು? ಶಾರದಾ-ಶ್ರೀಕಂಠ ಈ ಹಾಸಿಗೆಯ ಮೇಲೆಯೇ ...ಊ...ವನಜಾ-ವನಜಾ...

ಬಲು ಪ್ರಯಾಸಪಟ್ಟು ನಿದ್ದೆ ಹೋದೆನಾದರೂ ಮರುದಿನ ಬೆಳಿಗ್ಗೆ ನಾನೇ ಮೊದಲು ಎದ್ದಿದ್ದೆ.

ಅಡುಗೆಯವನು ಬಂದು ಹೇಳಿದ:

"ಸಾಹೇಬರು ಏಳೋದು ಎಂಟು ಘಂಟೆಗೆ. ನೀವು ಕಾಫಿ ತಗೊಳ್ಳಿ..." ಆ ಕಾಫಿ ರುಚಿಕರವಾಗಿತ್ತು.

ಎಂಟು ಘಂಟೆಗೆ ಶ್ರೀಕಂಠ ಮಲಗುವ ಕೊಠಡಿಯಿಂದ ಎದ್ದು ಬಂದ.

"ಅಂತೂ ಇದೀಯಲ್ಲಾ! ಹೊರಟೀ ಹೋಗಿರುತ್ತಿಯೇನೋ ಆಂತಿದ್ದೆ."

"ಹೋಗಿ ಮಾಡ್ಬೇಕಾದ್ದೇನು?"

"ಹುಂ...ನಿನ್ನೆ ರಾತ್ರೆ ನಾನು ಏನೇನ್ಮಾತಾಡ್ದೆ ಸ್ವಲ್ಪ ಹೇಳು."

"ಒಂದೂ ನೆನಪಿಲ್ಲಾ."

"Good. ಒಂದೂ ನೆನಪಿಟ್ಕೋ ಬೇಡ. ನಾನು ಹೇಳಿದ್ದೆಲ್ಲಾ ಸುಳ್ಳು."

ಅವನು ಹೇಳಿದ್ದೆಲ್ಲವೂ ಸತ್ಯವಾಗಿತ್ತು. ತನ್ನ ಮನಸ್ಸಿನ ಅಳುಕನ್ನು ತಾನೇ ಬಗೆಹರಿಸಲು ಆತ ಯತ್ನಿಸುತ್ತಿದ್ದ--ಅಷ್ಟೆ, ಆ

ಮೇಲೆ ಅನಿರೀಕ್ಷಿತವಾಗಿ ಅವನು ಕೇಳಿದ:

"ತಿಂಗಳಿಗೆ ಎಷ್ಟಪ್ಪಾ ನಿನ್ಸಂಪಾದ್ನೆ?"

"ಲೆಕ್ಕವಿಟ್ಟದ್ದರೆ ತಾನೆ?"

"ಬ್ಯಾಂಕ್ ನಲ್ಲೇನೂ ಇಟ್ಟಿಲ್ಲ ಅನ್ನು."

ನನಗೆ ನಗುಬಂತು. ಆದರೆ ಶ್ರೀಕಂಠ ನಗಲಿಲ್ಲ. ಆತ ಏನನ್ನೋ ಯೋಚಿಸುತ್ತಲಿದ್ದ. ಆ ಬಳಿಕ ಆತ ಬಾಯ್ತೆರೆದಾಗ ನಿರ್ಧಾರದ ಸ್ವರವಿತ್ತು ಆ ಮಾತಿನಲ್ಲಿ.

"ಚಂದ್ರೂ... ಏನೂ ತಪ್ಪು ತಿಳ್ಕೋಬೇಡ. ನನ್ಜತೇಲೆ ಇರ್ತಿಯೇನು? ಯಾರಾದರೂ ನನ್ನ ಸಮೀಪದಲ್ಲೇ ಇದ್ದು ನಂಬಿಕಯ ಸ್ನೇಹಿತರಾಗಿರ್ಬೇಕು."

ಸಿಗರೇಟು ಹಚ್ಚುತ್ತಾ ಯೋಚಿಸಲೆತ್ನಿಸಿದೆ. ಆದರೆ ಮೆದುಳು ನಿಷ್ಕ್ರಿಯವಾಗಿತ್ತು.

" ನಿನಗೆ ಯಾವುದಕ್ಕೂ ಕಡಿಮೆಯಾಗೋದಿಲ್ಲ. ಪ್ರತಿ ತಿಂಗಳೂ ನಿನಗೆ ಬೇಕಷ್ಟು ಕೇಳಿ ತಗೋ. ಶಾರದಾ ಬರೋತನಕ ಈ ಮನೇಲೆ ಇರು. ಅಷ್ಟೊತ್ತಿಗೆ ನೀನು ಇರೋಕೆ ಬೇರೆ ಏರ್ಪಾಟು ಮಾಡ್ತೀನಿ. ಈಗ ನೀನಿರೋ ಜಾಗದಲ್ಲೆ ಇರ್ತೀಯಾದರೆ ಅದೂ ಸರಿಯೆ...... ಏನಂತೀಯಾ?

"ಮೌನವಾಗಿದ್ದರೆ ಏನರ್ಥ ಹೇಳು?"

"ಅರ್ಥ ಒಪ್ಪಿಗೇಂತ."

"ಇಲ್ಲ, ಪೂರ್ತಿ ಒಪ್ಪಿಗೆ."

"ಥ್ಯಾಂಕ್ಸ್ ಚಂದ್ರೂ....."

ಮತ್ತೆ ಜೀವನ ರಥ ಚಲಿಸಿತು.

ಅದು ಸೋಮಾರಿ ಜೀವನ, ಸುಖವಾಗಿ ತಿಂದುಣ್ಣುವುದು. ಒಳ್ಳೆಯ ಬಟ್ಟೆ ಬರೆ. ಸಂಜೆ ಜತೆಯಾಗಿಯೇ ವಿಹಾರ. ಶ್ರೀಕಂಠ ಹಗಲು ಸ್ವಲ್ಪ ಹೊತ್ತು ಮಾವನ ಮಳಿಗೆಯಲ್ಲಿರುತಿದ್ದ. ಶಾರದಾಳನ್ನು ಕಂಡು ಬರುತಿದ್ದ. ನನಗೆ ಅಷ್ಟು ಕೆಲಸವೂ ಇರಲಿಲ್ಲ.

ಒಮ್ಮೆ, ಲಕ್ಷಲಕ್ಷ ರೂಪಾಯಿ ಸಂಪಾದನೆಯಾಗುವ ಒಂದು ಸನ್ನಿವೇಶ ಒದಗಿ ಬಂತು. ಮಿಲಿಟರಿಯವರಿಗೆ ವಿಧವಿಧದ ಸಾಮಗ್ರಿ ಗಳನ್ನು ಪೂರೈಸುವ ಜವಾಬ್ದಾರಿ. ಮಿಲಿಟರಿ ಅಧಿಕಾರಿಯೊಬ್ಬ-- ಶ್ರೀಕಂಠನನ್ನು ಕಾಣಲು ಬಂದ. ಆತನನ್ನು ಇದಿರ್ಗೊಳ್ಳಲು ರಾಜ-ಸತ್ಕಾರವನ್ನೆ ಏರ್ಪಡಿಸಿದೆವು.

ಅವನೆದುರು ಶ್ರೀಕಂಠ ಹೇಳಿದ:

ಇವರು ಮಿಸ್ಟರ್ ಚಂದ್ರಶೇಖರ್, ನನ್ನ ಕಾರ್ಯದರ್ಶಿ.

” ಕಾರ್ಯದರ್ಶಿ! ನನ್ನ ಮುಖ ಉರಿಯಿತು ಕ್ಷಣಕಾಲ, ಆದರೆ ಹೌಡ್ಯುಡುಗಳ ನಡುವೆ ಚೇತರಿಸಿಕೊಂಡೆ, ಜೇಬುಗಳ್ಳ ಎನಿಸಿಕೊಳ್ಳು ವುದಕ್ಕಿಂತ ಕಾರ್ಯದರ್ಶಿ ಎಂದು ಕರೆಸಿಕೊಳ್ಳುವುದು ಮೇಲಾಗಿತ್ತಲ್ಲವೆ?

ಆ ಬಂಗಾಳಿ ಹೊರಟು ಹೋದ ಮೇಲೆ ಶ್ರೀಕಂಠನೆಂದ:

"ಈ ಕಂಟ್ರಾಕ್ಟು ದೊರಕ್ಸೊಕೆ ಅರ್ಧ ಲಕ್ಷ ಖರ್ಚಾಗುತ್ತೆ. ಆದರೆ ಆ ಮೇಲೆ ತೊಂದರೆ ಇರೋಲ್ಲ, ಯುದ್ಧ ಇರೋವಷ್ಟು ಕಾಲವೂ ಮಜಾ, ಏನ೦ತೀಯಾ ಕಾರ್ಯದರ್ಶಿ ?"

ನಾನು ಮೆಚ್ಚುಗೆಯ ಮುಗುಳು ನಗು ಸೂಸಿದೆ.

ಶ್ರೀಕಂಠನಿಗೆ ಸ್ವಂತದ ವ್ಯಕ್ತಿತ್ವವಿಲ್ಲವೆಂದು ನಾನು ಭಾವಿಸಿದ್ದು ತಪ್ಪಾಗಿತ್ತು, ಆ ಬಾಲ್ಯದ ಸಹಪಾಠಿ ಬೆಳೆದು ಹೊಸ ವ್ಯಕ್ತಿಯಾಗಿದ್ದ. ಹಣ ಅವನಿಗೆ ಸಮಾಜದಲ್ಲಿ ಮನ್ನಣೆಯ ಸ್ಥಾನವನ್ನು ದೊರಕಿಸಿ ಕೊಟ್ಟಿತ್ತು, ಆತ್ಮ ವಿಶ್ವಾಸದಿಂದ ಅತ ವ್ಯವಹಾರ ನಡೆಸುತ್ತಿದ್ದ. ದರ್ಪದ ರೀವಿಯಿಂದ ಇತರರೊಡನೆ ವರ್ತಿಸುತ್ತಿದ್ದ, ಮೂವತ್ತರ ಯುವಕನಾಗಿದ್ದರೇನಾಯಿತು? ಅವನ ಮಾತಿಗೆ ಬೆಲೆ ಇರುತಿತ್ತು. ಶ್ರೀಕಂಠನ ಮತ್ತು ಅವನ ಮಾವನ ಹೆಸರೆತ್ತಿದರೆ ಸಾಕು, ಸರಕಾರಿ ವೃತ್ತಗಳಲ್ಲಿ ಗೌರವ ಕಾಣಬರುತಿತ್ತು.

ರಾಜ್ಯ ಯಂತ್ರ ಮತ್ತು ಶ್ರೀಮಂತಿಕೆ.....

ಅದೊಂದು ಸಂಜೆ ಶ್ರೀಕಂಠ ನನ್ನನ್ನು ಕಂಡಾಗ, ಬಲವಾಗಿ ಕೈ ಹಿಡಿದು ಕುಲುಕಿ, ನನ್ನ ಬೆನ್ನು ತಟ್ಟಿ, ಹೇಳಿದ.

ಏನೋಂತಿದ್ದೆ. ಭೇಷ್... ನಿನ್ನ ಸ್ನೇಹಿತನಾದು ಸಾರ್ಥಕ ವಾಯ್ತು."

ಏನ್ಸಮಾಚಾರ?"

"ಐ ಜಿ ಪಿ ಫೋನ್ ಮಾಡಿದ್ರು ಕಣೋ..

"ನನ್ನ ಮುಖ ಕಪ್ಪಿಟ್ಟಿತು. ನನ್ನ ಹಿಂದೆಯೇ ಬಂದಿದ್ದ ಶನೀಶ್ವರ. ಒಂದಲ್ಲ ಒಂದು ದಿನ ಶ್ರೀಕಂಠನಿಗೆ ನನ್ನ ಗತ ಜೀವನದ ಅರಿವಾಗುತ್ತದೆಂಬುದು ನನಗೆ ಗೊತ್ತಿತ್ತು. ಆದರೂ-

"ಏನೂ ಗಾಬರಿ ಬೀಳ್ಬೇಡ. ಆತ ನಮ್ಜನವೇ."

"ಏನಂತೆ ಅವರಿಗೆ?"

"ನಿನ್ನ ಸಾಹಸದ ವಿಷಯ ಚುಟುಕಾಗಿ ವರದಿಕೊಟ್ಟ. ಅದನ್ನ ಕೇಳ್ತಾ ಇದ್ದರೆ ಥ್ರಿಲ್ ಆಯ್ತು."

"ಹುಂ.ಆ ಮೇಲೆ?"

"ನೀನು ನನ್ನ ಕಾರ್ಯದರ್ಶೀಂತ ಹೇಳ್ಪೆ. ತೆಪ್ಪಗಾದ."

"ಅಷ್ಟೇನೆ?"

"ನಾನು ಹುಷಾರಾಗಿರ್ಬೇಕೂಂತ ಎಚ್ಚರಿಕೆ ಕೊಟ್ಟ!"

"ಹೌದು ಕಂಠಿ. ಬಹಳ ದಿವಸ್ದಿಂದ ನಾನೂ ನಿನಗೆ ಹೇಳ್ಬೇ ಕೂಂತಲೇ ಇದ್ದೆ. ನನ್ನ ವಿಷಯ ನೀನು ಯೋಚಿಸ್ಬೇಕಾದ್ದೇ."

"ಹುಚ್ಚನ ಹಾಗೆ ಆಡ್ಬೇಡ.ನಾನಿರೋವರೆಗೂ ಪೋಲೀಸರನ್ನ ಮರೆತ್ಬಿಡು."

"ನಾನೇ ನಿನಗೇನಾದರೂ ಮೋಸ ಮಾಡಿದ್ರೆ?"

"ಒಳ್ಳೇ ಜೋಕು. ಮಾಡು. ನೋಡೊಣ."

.......ಆ ದಿನ ನನ್ನ ತಂದೆ ಹರಕು ಕಂಬಳಿ ಹೊದ್ದು ಬಂದು ಜಾಮೀನು ನಿಲ್ಲುವೆನೆಂದಿದ್ದ. ಆದರೆ ಇನ್ಸ್ಪೆಕ್ಟರ್ ಮರಿ ಸಾಹೇ ಬರು ನನ್ನನ್ನು ಬಿಟ್ಟುಕೊಟ್ಟಿರಲ್ಲಿಲ್ಲ. ಈಗ ನಗರದ ಗಣ್ಯವ್ಯಕ್ತಿ ಯೊಬ್ಬರ ಆಶ್ವಾಸನೆ ಕೇಳಿ,ಸ್ವತಃ ಐ ಜಿ ಸಿ ಹಿರಿ ಸಾಹೇಬರೇ ತೃಪ್ತರಾ ಗಿದ್ದರು.ದೂರದಿಂದ ನೋಡಿದಾಗ ರಾಜ್ಯ ಯಂತ್ರ ಗಂಭೀರವಾಗಿ ಭೀತಿಕಾರಕವಾಗಿ ಕಾಣುತಿತ್ತು. ಆದರೆ ಹತ್ತಿರಬಂದಾಗ? ಪರೀಕ್ಷಿಸಿ ದಾಗ? ಎಷ್ಟೊಂದು ಸುಲಭವಾಗಿತ್ತು ಅದರ ಯಾಂತ್ರಿಕ ರಚನೆ!.... ಹತ್ತಿರ ಬರುವ ಭಾಗ್ಯ ಮಾತ್ರ ಎಲ್ಲರಿಗೂ ಇರಲ್ಲಿಲ್ಲ,ಅಷ್ಟೆ.

ಶಾರದಾ,ಕುಮಾರ ಕಂಠೀರವನನ್ನು ಹೆತ್ತಳು. ಶ್ರೀಕಂಠ ಆ ದಿನ ಸಂತೋಷದಿಂದ ಮಿತಿಮೀರಿ ಕುಡಿದ.ತನಗೊಬ್ಬ ಮಗನನ್ನು ಕೊಟ್ಟ ಶಾರದೆಯನ್ನು ಆತ ಆಗ ದೇವಿಯೆಂದು ಕರೆದ.

ಆದರೆ ಶಾರದಾ ಬೇಗನೆ ಮನೆಗೆ ಬರಲಿಲ್ಲ. ಮಗುವನ್ನು ನೋಡಿಕೊಳ್ಳುವ ಸಂಭ್ರಮದಲ್ಲಿ ಆಕೆ ಶ್ರೀಕಂಠನನ್ನು ಮರೆತಳು. ಅಥವಾ ಮಗುವನ್ನೆ ನೆಪವಾಗಿರಿಸಿ ಆವನನ್ನು ದೂರವಿಟ್ಟಳೇನೊ ! ಎರಡು ಮೂರು ಸಾರಿ ನಾನು ಶ್ರೀಕಂಠನೊದನೆ ಅವರ ಮಾವನ ಮನೆಗೆ ಹೋಗಿ, ಮಹಾರಾಣಿಗೂ ರಾಜಕುಮರನಿಗೂ ಗೌರವ ಸಲ್ಲಿಸಿ ಬಂದೆ. ಆಗ ಶಾರದಾ ನನ್ನನ್ನು ಕಂಡು ಮುಗಳ್ನಗುತಿದ್ದಳು. ಅದು ಭಾವನೆಗಳಿಗೆಲ್ಲ ಮುಖವಾಡವಾದ ಮುಗುಳ್ನಗು.

ಶ್ರೀಕಂಠನ ಪಾಲಿಗೆ ಮಗನ ಆಗಮನದ ಸಂಭ್ರಮ ಬಹಳ ದಿನ ಉಳಿಯಲಿಲ್ಲಿ. ನಾವಿಬ್ಬರೇ ಇದ್ದಾಗ ಪದೇ ಪದೇ ಶಾರದಾಳ ಮಾತು ಬರುತಿತ್ತು.

"ಚಂದ್ರೂ......ನಾನು ಸ್ವಾರ್ಥಿ.....ಒಪ್ಕೋತೀನಿ. ನಾವು ಗಂಡಸರೆಲ್ಲಾ ಹೀಗೆಯೊ ಏನೊ. ನಾನು ಶಾರದಾನ ಪ್ರೀತಿಸ್ತೀನಿ. ಅವಳು ನನ್ನ ಪ್ರೀತಿಸ್ತಾಳೆ. ಆದರೂ ಅದು ಸಾಲದು ಅನ್ನಿಸುತ್ತೆ..... ಏನಂತೀಯಾ?"

ಅಂಥ ಸಂದರ್ಭಗಳಲ್ಲಿ ನಾನು ಸುಮ್ಮನಿರ ಬಯಸುತ್ತಿದ್ದೆ.

"ಅಲ್ಲ ಚಂದ್ರೂ...ಈ ಪ್ರೇಮ ಅಂತಾರಲ್ಲ, ಅದೇನು ಹೇಳು. ಓದಿ ತಿಳ್ದೋನು-ನಾಲ್ಕು ಊರು ನೋಡಿರೋನು-ನೀನೇ ಹೇಳಪ್ಪ ಸ್ವಲ್ಪ....ಪ್ರೇಮ ಮತ್ತು ಕಾಮ, ಅದೇನು ನಿಷಯ ಹೇಳ್ನೋ ಡೋಣ....."

"ಯಾಕೊ ಸುಮ್ನಿದೀಯ? ನಿನ್ನ ಈ ಮುಚ್ಚುಮರೆ ನನ ಗಾಗೊಲ್ಲ ನೋಡು."

...ಯಾವುದೋ ಥಿಯೇಟರಿನ ಬಳಿ ಕಾರು ನಿಂತಿತು. ಅದನ್ನು ಅಲ್ಲಿ ಬಿಟ್ಟು, ಶ್ರಿಕಂಠ ನನ್ನನ್ನು ಕರೆದುಕೊಂಡು ನೇರವಾದ ಬೀದಿ ಯಿಂದ ಸ್ವಲ್ಪ ದೂರ ನಡೆದು ಹೋದ.

"ಎಲ್ಲಿಗೆ?" ಎಂದೆ.

"ಬಾ, ಇಲ್ಲೊಬ್ಬರು ಸ್ನೇಹಿತರಿದ್ದಾರೆ. ಪರಿಚಯ ಮಾಡ್ಕೊ

ಡ್ತೀನಿ."

"ಶ್ರೀಕಂಠನನ್ನು-ಅವನ ಜತೆಯಲ್ಲಿದ್ದುದರಿಂದ ನನ್ನನ್ನೂ–ಅಲ್ಲಿ ಆದರದಿಂದ ಕಂಡರು. ಅಲ್ಲಿದ್ದ ಒಬ್ಬನೆ ಯುವಕ ಹುಡುಗ ಸಾರ್ ಸಾರ್" ಎನ್ನುತ್ತ ಶ್ರೀಕಂಠನ ಹಿಂದೂ ಮುಂದೂ ಓಡಾಡುತಿದ್ದ.

ತಿಂಡಿ ಬಂತು; ಕುಡಿತ ಬಂತು; ಆ ಬಳಿಕ....

ಮನೆಯೊಡತಿಗೆ ಶ್ರೀಕಂಠ ಹೇಳಿದ: '

'ಅಮ್ಮಾ, ಈತ ನನ್ನ ಪ್ರಾಣ ಸ್ನೇಹಿತ. ಯಾರಾದರೂ ಒಳ್ಳೆಯವರ ಪರಿಚಯ ಮಾಡಿಸ್ಕೊಡಿ .. ಬರ್ತೀನಪ್ಪ ಚಂದ್ರೂ .. ಆ ಮೇಲೆ ಸಿಗ್ತೀನಿ ."

ಅಷ್ಟು ಹೇಳಿ ಅವನು ಮಹಡಿಯ ಮೆಟ್ಟಿಲೇರಿ ಹೊದ.

....ಭ್ರಮೆಗೊಂಡು ಅಂತರ್ಮುಖಿಯಾಗಿ ಕುಳಿತಿದ್ದ ನನ್ನ ಕೊರಳನ್ನು ಮೃದುವಾದ ಬಾಹುಗಳೆರಡು ಬಳಸಿದುವು. ನಾನು ಎದು ವಿಧೇಯನಾಗಿ ಅವಳನ್ನು ಹಿಂಬಾಲಿಸಿದೆ..... ಅಚ್ಚುಕಟ್ಟಾಗಿದ್ದ ಶಯಾಗೃಹ. ಗೋಡೆಯ ಮೇಲೆ ಪಾಶ್ಚಾತ್ಯ ನಟಿಯರ ಅಂಗವಿನ್ಯಾಸ ಗಳ ಭಾವಚಿತ್ರಗಳು. ಆಕೆ ಆಹ್ವಾನದ ನೋಟದೊಡನೆ ನನ್ನೆದುರು ನಿಂತಿದ್ದಳು– ಹೆಣ್ಣು, ನೀಳವಾದ ನನ್ನ ಕ್ರಾಪನ್ನು ಬದಿಗೆ ಸರಿಸಿ, ಒಲಿಯುವ ದೃಷ್ಟಿ ಯಿಂದ, ಅವಳಿಗೆಂದೆ:

"ಇಲ್ಲಿ ಬಾ."

ಆಕೆ ಬಂದಳು. ನಾನವಳನ್ನು ಬರಸೆಳೆದು ಅಪ್ಪಿಕೊಂಡೆ. ದೀರ್ಘ ಕಾಲ ಪ್ರೇಮದ ಕಾಹಿಲೆಯಿಂದ ನಾನು ನರಳಿದ್ದಾಗ, ಚುಂಬನ ನನಗೆ ದೊರೆತಿರಲಿಲ್ಲ. ಇಲ್ಲಿ ಗುರುತು ಪರಿಚಯವಿಲ್ಲದ ಹೆಣ್ಣು ನನ ಗದನ್ನು ಕೊಟ್ಟಳು–ನನ್ನು ಮೆಚ್ಚಿಸುವ ಆತುರದಿಂದ ಬಗೆ ಬಗೆ ಯಾಗಿ ಕೊಟ್ಟಳು.

ಹೃದಯದಲ್ಲಿ ಎಲ್ಲಿಯೋ ಒಂದೆಡೆ ನನಗೆ ನೋವಾಗುತಿತ್ತು. ಯಾವುದೋ ಕೀಲಿ ಕಳಚಿಕೊಂಡಿತ್ತು. ದೇಹದ ಚಲನ ವಲನಗಳು ನನ್ನ ಹಿಡಿತದಲ್ಲಿರಲಿಲ್ಲ.

ನಾನು ವನಜಳನ್ನು ಸ್ಮರಿಸಲಿಲ್ಲ. ಯಾವ ಹುಡುಗಿಯನ್ನೂ ಸ್ಮರಿಸಲಿಲ್ಲ. ಆ ಹುಡುಗಿಯ ಮುಖವನ್ನೂ ನೆನಪಿಡಲಿಲ್ಲ. ಅಥವಾ ನಾನು ಕಂಡಿದ್ದ ಎಲ್ಲ ಹುಡುಗಿಯರ ಯುವತಿಯರ ಪ್ರತಿಮೂರ್ತಿ ಅವಳೆಂದು ಭ್ರಮಿಸಿದೆನೇನೋ.

ಆ ಹೆಣ್ಣು, ಯಾರು ಆಕೆ ? ಆ ಜೀವಕ್ಕೆ ಹೃದಯವಿತ್ತೊ ಇಲ್ಲವೋ. ಹೋಗಲಿ, ನನಗಾದರೂ ಹೃದಯವಿತ್ತೆ?.... .

...ಮತ್ತೆ ಉಡಿ ಬಿಗಿದಕೊಂಡು, ಹಾಸಿಗೆಯ ಮೇಲೊರಗಿ, ಆರೆತೆರೆದ ಕಣ್ಣುಗಳಿಂದ ಅವಳು ನನ್ನನ್ನೆ ನೋಡುತಿದ್ದಳು.

ನಾಳೇನೂ ಬರ್ತಿರಾ?"

"ಏನು"

"ಮೌನ.... ಆ ಮೇಲೆ ಅಳು....

"ಯಾಕೆ-ಏನಾಯ್ತು?"

"ನನ್ನಿಂದ ತೃಪ್ತಿಯಾಗಲಿಲ್ಲವೆ ನಿಮಗೆ?"

"ಯಾರು ಹಾಗೆಂದರು?”

ನೀವು ನಾಳೇನೂ ಬರದೇ ಇದ್ದರೆ, ಈ ಮನೆಯವರು ನನ್ನ ಇನ್ನು ಕರೆಯೋಲ್ಲ, ಕರೆದರೂ ಕೈ ಬಿಗಿ ಹಿಡೀತಾರೆ.'

ಇದು ದುಡ್ಡಿನ ಲೆಕ್ಕಾಚಾರ. ಮತ್ತೊಂದು ಪ್ರಶ್ನೆ ಕೇಳಿದೆ ನೆಂದರೆ ಗೋಳಿನ ಕತೆ ಹೊರ ಬರುವುದೇನೋ, ಹದಿನೆಂಟು-ಇಪ್ಪ ತ್ತರ ಆ ವಯಸ್ಸಿನಲ್ಲಿ ಆಕೆ ಅಲ್ಲಿಗೆ ಬರಲೇಬೇಕಾಗಿ ಬಂದ ಅನಿವಾ ರ್ಯತೆ..ಒಡೆದುಹೋದ ಕನಸುಗಳು... ಆ ಬಳಿಕ

ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ನಾನು ಇಳಿದು ಬರುತಿದ್ದೆ. ಆಗಬಾರದುದೇನೋ ಆಯಿತೆನ್ನು ನನ್ನೆದೆ ಡವಡವನೆ ಹೊಡೆದು ಕೊಳ್ಳುತಿತ್ತು. ನಾನೆದ್ದು, ಕೋಟನ್ನೆತ್ತಿಕೊಂಡು ಅದರ ಒಳ ಜೇಬಿ ನಲ್ಲಿದ್ದುದನ್ನೆಲ್ಲ ಹೊರತೆಗೆದೆ. ಹತ್ತು ರೂಪಾಯಿಯ ಐದು ನೋಟು ಗಳಿದ್ದುವು.

"ತಗೋ,” ಎಂದೆ.

ನಂಬಿಕೆ ಹುಟ್ಟಿದವಳಂತೆ ನನ್ನನ್ನೆ ಅವಳು ನೋಡಿದಳು.

"ತಗೋ ಎಂದೆ. ಕೇಳಿಸ್ಲಿಲ್ವಾ? "

ಅವಳು ಎದ್ದು ಕುಳಿತಳು.

"ನಾನು ಕಣ್ಣೀರು ಹಾಕ್ದೆ ಅಂತಾನಾ ?

ಬಿಗಿಹಿಡಿದಿದ್ದ ಅವಳ ಅಂಗೈ ತೆರೆದು ಆ ಹಣವಿಟ್ಟ, ಆಕೆಯ ಮುಂಗುರುಳನ್ನು ನೇವರಿಸಿದೆ.

"ಇದು ನಿನ್ನ ಹಣ. ತಿಳೀತೆ?"

"ಹೊರಡೋ ಹೊತ್ತಿಗೆ ಮನೆಯವರು ಅರ್ಧ ಕಸಕೋತಾರೆ."

ಮತ್ತೆ ಸುಲಿಗೆಯ ಮಾತು.. ನನಗೆ ಅದು ಅಸಹ್ಯವೆನಿಸಿತು. ಉಸಿರು ಕಟ್ಟಿದ ಹಾಗಾಗುತಿತ್ತು ನನಗೆ ಬಹಳ ಹೊತ್ತು ಅಲ್ಲಿರಲಾರದೆ ಹೊರಟು ನಿಂತೆ. ಆಕೆ ನನ್ನೆದೆಯಲ್ಲಿ ಮುಖವಿಟ್ಟಳು. ಕನಿಕರದಿಂದ ನಾನು ಅವಳನ್ನು ಚುಂಬಿಸಿದೆ.

ಸ್ವಲ್ಪ ಹೊತ್ತಿನಲ್ಲೇ ಶ್ರೀಕಂಠನೂ ಬಂದ.

"ಹೊರಡೋಣ್ವೇನೋ ದೊರೆ?" '

'ಹೊಂ."

ಥಿಯೇಟರಿಗೆ ಬಂದು ಸ್ವಲ್ಪ ಹೊತ್ತು ಚಿತ್ರ ನೋಡಿದೆವು. ನಡುವೆ, ತಪ್ಪೊಪ್ಪಿಕೊಳ್ಳುವವನ ಹಾಗೆ, ಶ್ರೀಕಂಠನೆಂದ.

"ಇದು ಆಗಾಗ್ಗೆ ನಾನು ಬಂದು ಹೋಗೋ ಮನೆ. ಯಾವತ್ತೆ ನಿನಗೆ ಹೇಳ್ಳೆಕೂಂತಿದ್ದೆ, ಅನುಭವಿಯಾದ ನೀನೇ ಮಾತಾಡ್ರೀ ಯಾಂತ ನಂಬಿಕೆ ಇತ್ತು, ಬೊಂಬಾಯಿ ಗಿಂಬಾಯಿಾಲಿ ಮಜಾ ಮಾಡ್ರೋನು...ಆದರೆ ನೀನೊ-ಮಹಾ ರಹಸ್ಯಮಯಿ..ನಿನಗೆ ಮೆಚ್ಚೆ ಆಯ್ಯೋ ಇಲ್ಲವೋ...ಕರಕೊಂಡು ಬಂದೆ ಅಂತೂ...'

"ಥ್ಯಾಂಕ್ಸ್ ಕೊಡ್ಲೇನು?"

"ಆಂಥ ಔದಾರ್ಯ ನಿನಗೆಲ್ಬಂತು ?" ಪ್ರಯೋಜನವಿರಲಿಲ್ಲ–ನಾನು ಹೆಣ್ಣಿನ ಸಂಗಮಾಡಿದುದು ಅದೇ ಮೊದಲೆಂದು ಅವನೊಡನೆ ಹೇಳುವುದರಿಂದ ಪ್ರಯೋಜನವಿರ ಲಿಲ್ಲ. ಅವನ ಮಾತಿಗೆ ಪ್ರತಿಯಾಗಿ ನಾನು ನಕ್ಕು, ಸಿಗರೇಟು ಹಚ್ಚಿದೆ.

ಸ್ವಲ್ಪ ಹೊತ್ತಾದಮೇಲೆ, ಚಲಚ್ಚಿತ್ರದ ಆದರ್ಶಪ್ರಣಯಿಗಳನ್ನು ತೆರೆಯ ಮೇಲೆಯೆ, ಅವರ ಸಂಕಟಗಳ ನಡುವೆ ಬಿಟ್ಟು, ನಾವು ಮನೆಗೆ ಹೊರಟೆವು.

ಮನಸ್ಸು ಅಳುಕುತ್ತಿದೆ. ಏನೆಂದು ಬರೆಯಲಿ ? ನನ್ನ ಲೈಂಗಿಕ ಜೀವನದ ಬಗ್ಗೆ ಏನೆಂದು ಬರೆಯಲಿ ? ಆದನ್ನು ಮುಚ್ಚು ಮರೆಯಿಲ್ಲದೆ ಬರದು ನಾನು 'ಮಹಾತ್ಮ' ತನ ಗಲಸಿಕೊಳ್ಳಬೇಕಾದ್ದಿಲ್ಲ. ಅದು ನನ್ನಿಂದ ಸಾಧ್ಯವೂ ಇಲ್ಲ.

ನಿಜ ಸಂಗತಿಯೆಂದರೆ, ಯಾವನೇ ವ್ಯಕ್ತಿ---ಗಂಡಾಗಲಿ, ಹೆಣ್ಣಾ ಗಲಿ---ತನ್ನ ಲೈಂಗಿಕ ಜೀವನದ ಬಗ್ಗೆ ಸತ್ಯನಿಷ್ಟಯಿಂದ ಬರೆಯಬಲ್ಲು ದೆಂದು ನಾನು ನಂಬುವುದಿಲ್ಲ. ಯಾವಾಗಲೂ ಒಂದು ತೂಕ ಕಡಿಮೆ ಇಲ್ಲವೆ ಒಂದು ತೂಕ ಹೆಚ್ಚು....ಹೆಚ್ಚೆಂದರೆ, ಸುಳ್ಳಿನ ಆರಡಿ ನೀರಿನಲ್ಲಿ ಸತ್ಯದ ಒಂದಿಷ್ಟು ಬೆಣ್ಣೆ ತೇಲಬಹುದು, ಅಷ್ಟೆ.

ವನಜಳನ್ನು---ಪ್ರೇಮದ ಪ್ರಕರಣವನ್ನು---ಮರೆಯಲ್ಲು, ನಾನು ದೊಡ್ಡ ಬೆಲೆಯನೇ ತೆತ್ತಹಾಗಾಯಿತ್ತು : ಮೊದಲು ಕುಡಿತ, ಬಳಿಕ ಹೆಣ್ಣು.

ನೈತಿಕ ಅಧ:ಪತನದ ಜಾರುಗುಂಡಿಯಲ್ಲಿ ನಾನು ಕೆಳಕೆ ಇಳಿ ಯುತ್ತ ಹೋದೆ----ಎಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಲೆ?

ಮಾರನೆ ದಿನವೂ ಸಂಜೆ ಶ್ರೀಕಂಠ ಕೇಳಿದ.

"ಏನಪ್ಪಾ ಚಂದ್ರೂ ? ಹೋಗೋಣವೊ ?" ಆದರೆ ನನ್ನ ಉತ್ತರ !

"ನನ್ನ ದೊಂದು ಕೆಟ್ಟ ಅಭ್ಯಾಸ ಕಂಠಿ. ಒಮ್ಮೆನೋಡಿದ್ಮೇಲೆ ತಿರುಗಿ ಅದೇ ಹೆಣ್ಣಿನ ಮುಖ ನಾನು ನೋಡೋದಿಲ್ಲ."

"ಊಂ?!"

"ಅದೊಂದು ಪ್ರತಿಜ್ಞೆ`` ಇದ್ದ ಹಾಗೆ. ಅದಕ್ಕೇ ನಾನು ಜಾಸ್ತಿ ಹೋಗೋದೇ ಇಲ್ಲ."

ಕ್ಷಣ ಕಾಲ ಶ್ರಿಕಂಠ ಹುಬ್ಬ ಗಂಟಿಕ್ಕಿದ. ಆಮೇಲೆ ಮುಖ

ಸಡಿಲಿಸಿ ನಕ್ಕು, "ನಿನ್ನಿಷ್ಟ" ಎಂದ. ಬಹಳ ದಿನಗಳ ಮೇಲೆ ಅವನೇ ಆ ವಿಷಯವೆತ್ತಿದ.

"ನಿನಗೋಸ್ಕರ ಏರ್ಪಾಟು ಮಾಡಿದೀನಪ್ಪ. ನಾಳೆ ಬೇರೆ ಮನೆ ತೋರಿಸ್ತಿನಿ. ನೀನು ಬೇಕು ಅಂದಾಗ ಹೊಸಬರ್ನ ಅಲ್ಲಿಗೆ ಕರಸ್ತಾರೆ."

ಅದು ನಾನಿಟ್ಟ ಇನ್ನೊಂದು ಹೆಜ್ಜೆ. ಮಾನವ ಜೀವನದ ಕಟ್ಟು ಪಾಡುಗಳನ್ನು ಬಿಟ್ಟು ಸ್ವಲ್ಪ ಹೊತ್ತು ಮೃಗವಾಗುವುದು. ಬಳಿಕ ಅದನ್ನು ಸ್ಮರಣೆಯಿಂದ ತೊಡೆದು ಹಾಕುವುದು...

ಹಣದ ಏಣಿಯಲ್ಲಿ ಶ್ರೀಕಂಠ ಮೇಲಕ್ಕೇರುತಿದ್ದ. ಮಿಲಿಟರಿ ಗಾಗಿ ದೊರಗು ಬಟ್ಟಿ ತಯಾರಿಸುವ ಆರ್ದರು ದೊರಕಿಸಿಕೊಂಡ ಆತನ ಮಾವ, ಅಳಿಯನಿಗಾಗಿ ಸಣ್ಣ ಬಟ್ಟಿ-ಕಾರ್ಖಾನೆಯೊಂದನ್ನು ಸಂಪಾದಿಸಿಕೊಟ್ಟರು. ಹಿಂದಿನ ಯಜಮಾನ ಸಾಲಮಾಡಿದ್ದ; ಯಂತ್ರಗಳು ಸವೆದು ಹೋಗಿದ್ದುವು. ಇವರು ನಗದು ಹಣ ತೆತ್ತು, ಕಾರ್ಖಾನೆಯನ್ನು ಪಡೆದರು.

ಸವೆದು ಹೋಗಿದ್ಗ ಯಂತ್ರಗಳು ದುರಸ್ತಿಯಾದುವು. ಒಟ್ಟು ಸಾವಿರದೈನೂರು ಜನ ಮೂರು ಪಾಳಿಗಳಲ್ಲಿ ದುಡಿದರು...ಇಲ್ಲಿಂದ ಬಟ್ಟೆಯ ಬೇಲುಗಳು ಹೋದಂತೆ, ಅಲ್ಲಿಂದ ನೋಟನ ಕಟ್ಟುಗಳು ಬಂದವು.

ಒಂದು ಕಾಲದಲ್ಲಿ, ಹೋಗೆಯುಗುಳುತಿದ್ದ ಬಟ್ಟೆ ಕಾರ್ಖಾನೆ ಯಲ್ಲಿ ಅರಳಿ ಹಿಂಜುವ ಕೆಲಸವಿತ್ತು ನನ್ನ ತಂದೆಗೆ. ಈಗ ಅಂಥ ವೊಂದು ಕಾರ್ಖಾನೆಯ ಒಡೆಯನ ಆಪ್ತ ಸಚಿವ ನಾನು. .

..ಅಜ್ಜಿಯ ಮನೆಯನ್ನು ನಾನು ಎಂಟು ರೂಪಾಯಿ ಬಾಡಿಗೆಗೆ ಬೇರೆಯವರಿಗೆ ಕೊಟ್ಟೆ.

ನನಗೋಸ್ಕರ, ಒಂದು ಹೋಟೆಲಿನ ಬಳಿಯಲ್ಲೆ, ಹೆಚ್ಚು ಅನುಕೂಲತೆಗಳಿದ್ದ ಪುಟ್ಟ ಮನೆಯೊಂದನ್ನು, ಬಾಡಿಗೆಗೆ ಹಿಡಿದೆ.

ಶಾರದಾ, ಮಗುವಿನೊಡನೆ ಗಂಡನ ಮನೆಗೆ ಬಂದಳು.

ಇವರಿಬ್ಬರ ಆಗಮನದಿಂದ ಶ್ರೀಕಂಠನ ಜೀವನ ಕ್ರಮ ಸ್ವಲ್ಪ ಅಸ್ತವ್ಯಸ್ತವಾದಂತೆ ತೋರಿದುದು ಸ್ವಲ್ಪ ದಿನ ಮಾತ್ರ. ಹಲವು ಸಂಜೆಗಳು ಮಿಲಿಟರಿ ಕ್ಯಾಂಪಿನವರ ಸಹ ವಾಸದಲ್ಲಿ ಕಳೆದು ಹೋಗುತಿದ್ದುವು. ರಾತ್ರೆಗಳಲೆಲ್ಲಾ ಹಲವೊಮ್ಮೆ ಕಾರಖಾನೆಯ ನೆಪ ಹೇಳಿ ಶ್ರೀಕಂತಠ ಹೋರಗೇ ಉಳಿಯುತಿದ್ದ.

ಮೊದಲು ಕೆಲವೊಮ್ಮೆ ಗಂಡನ ತಿರುಗಾಟನನ್ನು ಶಾರದಾ ನಿರೀಕ್ಷಿಸಿದ್ದುಂಟು. ರಾತ್ರೆ ಹೊತ್ತು ಗಂಡನಿಗಾಗಿ ಫ್ಯಾಕ್ಟರಿಗೆ ಫೋನ್ ಮಾಡಿದ್ದುಂಟು. ಹಾಗೆ ಮಾಡಿದುದು ಕೆಲವು ದಿನ ಮಾತ್ರ....ಆ ಮೇಲೆ ಅವಳಿಗೆ ಬಿಡುವಿರಲಿಲ್ಲ. ದಾದಿಯ ಕೈಯಲ್ಲಿ ಮಗುವನ್ನು ಬಿಟ್ಟು ಶಾರದಾ ದಿನವೂ ಲೇಡೀಸ್ ಕ್ಲಬ್ಬಿಗೆ ಹೋದಳು. ಯುದ್ಢ ರಂಗದಲ್ಲಿರುವ ಹುಡುಗರಿಗಾಗಿ ಸ್ಟೆಟರ್-ಕಾಲುಚೀಲ ಹೆಣೆಯುವ ಪರೋಪಕಾರಿ ಸ್ತ್ರೀಯರ ಸಮಿತಿಗೆ ಆಕೆ ಅಧ್ಯಕ್ಷೆಯಾದಳು.

"ನಮ್ಮ ಶಾರದಾ-" ಎಂದ ಶ್ರೀಕಂಠ, ಒಮ್ಮೆ.

"ಏನು?"

"ಮಿಲಿಟರಿ ವೃತ್ತದಲ್ಲಿ ಎಲ್ಲರ ಮೆಚ್ಗೆ ಪಡೆದಿದ್ದಾಳೆ."

ಅಸ್ವಾಭಾವಿಕವಾದ ನಗು ಮುಗಿದಮೇಲೆ ಮತ್ತೆ ಮಾತು:

"ಒಳ್ಳೇದೇ ಆಯ್ತೂಂತಿಟ್ಕೊ. ಲಕ್ಷಾಧೀಶ್ವರನ ಹೆಂಡತಿ ಆಧು ನಿಕಳಾಗಿರ್ಬೇಕು. ಹಾಗಿದ್ದರೇನೇ ನನಗೆ ಲಾಭ."

ನಾನು ಸಿಗರೇಟಗೆ ಕೈ ಹಾಕಿದೆ.

"ಹಚ್ಚಬೇಡ ಕಣೋ-ಜಾಸ್ತಿ ಭೈರಿಗೆ ಕೊರೆಯೊಲ್ಲ........ ಒಂದೇ ಪ್ರಶ್ನೆ........ನಾನು ಶಾರದಾ ಮೇಲೆ ದೂರು ಹೊರಿಸಿ, ಬೇರೆ ಹೆಣ್ಣಿನ ಕಡೆ ಹೋಗ್ತೀನಿ. ಶಾರದಾ, ನನ್ಮೇಲೆ ದೂರು ಹಾಕಿ ಬೇರೆ ಗಂಡಿನ ಕಡೆಗೆ ಹೋದರೆ? ಆಕೆ ಹಾಗ್ಮಾಡೋದು ತಪ್ಪು ಅನ್ನೋ ಣವೆ?....ಏನಂತೀಯಾ?"

"ಕಂಠಿ, ಇದೆಲ್ಲಾ ಯೋಚಿಸಿ ಯಾಕ್ಸುಮ್ನೆ ತಲೆ ಕೆಡಿಸ್ಕೊ ಳ್ತೀಯಾ?"

"ಯೋಚಿಸ್ಲೇ ಬಾರ್ದು ಆ೦ತಿಯೇನು? ಸರಿ ಹಾಗಾದರೆ."

ಆದರೆ ಎ೦ದಾದರೊಮ್ಮೆ ನಾನು ಯೊಚಿಸಬೇಕಾಗುತಿತ್ತು. ಅಂಥ ಕೆಲವು ಸನ್ನಿವೇಶಗಳು ಒದಗಿ ಬರುತ್ತಿದ್ದವು.

ಅದೊಂದು ಸನ್ನಿವೇಶ-?

ನಾಲ್ವತ್ತೆರಡರ ಚಳವಳಿ ಆರಂಭವಾಗಿ ಆರೆಂಟು ತಿಂಗಳುಗಳಾ ಗಿಡದ್ದುವು. ದೇಶದ ಹಲವೆಡೆಗಳಲ್ಲಿ ಅರಾಜಕತೆ ನೆಲೆಸಿತ್ತು. ಹಿಂದೆ ಯಾಗಿದ್ದರೆ ನನಗೆ ನಿಮಿಷವೂ ಬಿಡುವೇ ಇರುತಿರಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೊಂಬಾಯಿಯ ಚೌಪಾಟಯಲ್ಲಿ ಉಪ್ಪಿನ ಸತ್ಯಾ ಗ್ರಹವನ್ನು ಅಮಿರನೊದನೆ ನೋಡಿದ್ದೆ. ದೆಶಪ್ರೇಮಿ ಜೀಬುಗಳ್ಳ ರಗಿ ನಾವು ಕಂಡಿದ್ದ ಲಾಕಪ್ಪು.... ಆದರೆ ಈ ಚಳವಳಿ ಭಿನ್ನವಾಗಿತ್ತು ಅತ್ಯಂತ ಸಮರ್ಥನಾದ ರಾಜಕಾರಣಿಯಂತೆ ನನಗೆ ಯಾವಾಗಲೂ ಕಾಣಿಸುತಿದ್ದ. ಗಾಂದೀಜಿ ಕರೆಕೊತಟ್ಟಿದ್ದರು: "ಮಾಡು ಇಲ್ಲವೆ ಮಡಿ!" ತಂತಿಗಳು ಕತ್ತರಿಸಿ ಬೀಳುತಿದ್ದುವು; ಮಿಲಿಟರಿಗೆ ಸಾಮಗ್ರಿ ಒಯ್ಯುವ ರೈಲುಗಳು ಉರುಳಿ ಹೋಗುತಿದ್ದವು; ಈ ದೇಶದಲ್ಲಿ ಸುಭಧ್ರವಾಗಿದ್ದಂತೆ ತೋರಿದ ವಿದೇಶೀಯ ರಾಜ್ಯವ್ಯವಸ್ಥೆಯ ಕಾಂಡ ವನ್ನೆ ಕೋಟಿ ಕೈಗಳು ಹಿಡಿದು ಭೀಮಶಕ್ತಿಯಿಂದ ಅಲುಗಿಸುತಿದ್ದುವು; ಜನ ಮಾಡುತಿದ್ದರು,ಇಲ್ಲವೆ ಮಡಿಯುತಿದ್ದರು.ಆಗಲೊಮ್ಮೆ___

ಮಳೆಧೋ ಎಂದು ಸುರಿತಯುತಿದ್ದಾಗಲೆ ಶ್ರೀಕಂಟಠ ಕಾರು ಓಡಿಸಿ ಕೊಂಡುಬಂದ.ಅವನೊಡನೆ ಗಾತ್ರದ ಒಬ್ಬ ವ್ಯಕ್ತಿಯೂ ಕೆಳಕ್ಕಿಳಿದು, ನನ್ನ ಮನೆಯನ್ನು ಹೊಕ್ಕಿತು.

"ಚಂದ್ರೂ...ಇವರು ನಮ್ಮ ಮಾವನ ಸ್ನೆಹಿತರು...ಇವರು ಇರೋಕೆ ಮಾವ ಬೇರೆ ಕಡೆ ಏರ್ಪಾಟು ಮಾದಡ್ತರೆ. ಆದರೆ ಅವರಿಗೆ ___ಎರಡು ಮೂವರು ದಿವಸ__ಇಲ್ಲೇ ಇರುಸ್ಕೊ. ಈ ವಿಷಯ ಯಾರಿಗು ತಿಳೀಬಾರ್ದು."

ಆ ವ್ಯಕ್ತಿಯನ್ನು ಸೂಖಕ್ಷ್ಮವಾಗಿ ನೋಡಿದೆ.ಆ ಉಣ್ಣೆಯ ಪೋಷಖಕಿನೊಳಗೆ ಯಾರೋಬ ದೇಶಭಕ್ತರಿರಬೇಕು ಎನ್ನಿಸಿತು. ಆ ಮುಖ ಅಷ್ಟು ಅಪರಿಚಿತವಾಗಿರಲಿಲ್ಲ. ಆತ ಸಾರ್ವಜನಿಕ ಭಾಷಣ ಜಡಿಯುತಿದ್ದಾಗ, ನಾನೆಲ್ಲಿಯೋ ಆತನನ್ನು ನೋಡಿದ ಹಾಗಿತ್ತು .

ಹೊರಬರುತ " ಚಳವಲಳಿಯವರೇನೋ? " ಎಂದು ಶ್ರೀಕಂಠ ನನ್ನು ಕೇಳಿದೆ.

"ಹೂನಪ್ಪಾ. ಹುಷಾರಾಗಿ ನೊಡ್ಕೊ . ಭಾರಿ ಕುಳ."

ನನ್ನ ಕುತೂಹಲ ಕೆರಳಿದರೂ ಸುಮ್ಮನಾದೆ......ಆ ವ್ಯಕ್ತಿಗಾ ದರೋ ಬಾರಿಬಾರಿಗೂ ಊಟ ಉಪಚಾರಗಳ ಅವಶ್ಯತೆ ಇತ್ತು. ನಾನು ಮೈ ಸರಿ ಇಲ್ಲದವನಂತೆ ನಟೀಸಿ, ಹೋಟಿಲಿನಿಂದ ನನಗಾಗಿ ತಿಂಡಿ- ಊಟ ತರಿಸುತ್ತಿದ್ದ. ಒಳಗಿನ ಕೊಠಡಿಯಲ್ಲಿದ್ದ ದೇಶಭಕ್ತರು ಕೈಬಾಯಿಗೆ ಕೆಲಸ ಕೊಡುತಿದ್ದರು.....

ಹೊರಗಾದರೋ ಘೋಷ ಕೇಳಿಸುತ್ತಿತ್ತು: " ಮಾಡು ಇಲ್ಲವೆ ಮಡಿ!" ಯಾರಾದರೂ ವಿಸ್ಮಯಗೊಳ್ಳುವಂತೆ ಜನ ಸಾಮಾನ್ಯರು ಹೋರಾಡುತ್ತಿದ್ದರು. ಸ್ವಾತಂತ್ರ್ಯದ ಸ್ವರ್ಣ ಭೂಮಿ ಸೇರಲೆಂದು, ಮುಗ್ಗರಿಸಿ ಬಿದ್ದರೂ ಎದ್ದು. ಜನಕೋಟಿ ಓಡುತಿತ್ತು ನನಗೆ ಅದು ಅರ್ಥವಾಗಲಿಲ್ಲ. ಜನ ಜೀವನದಿಂದ ನಾನು ಬಲು ದೂರ ಸಾಗ್ತಿದೆ ರಿಂದಲೋ ಏನೋ, ನನಗದು ಅರ್ಥವಾಗಲಿಲ್ಲ.

ಆದರೆ ಶ್ರೀಕಠನಿಗೆ?. ಅವರ ಮಾವನಿಗೆ? ಅವರ ಮನೆಯಲ್ಲಿ ದೇಶಪ್ರೇಮವಿತ್ತೆಂದು ನನಗೆ ಆ ವರೆಗೂ ಹೊತ್ತಿರಲಿಲ್ಲ ದಿವಾನರ ಬೀಗರಂತೆ ವರ್ತಿಸುತ್ತಿದ್ದ ಇವರು,ತ್ರಿರಂಗಿ ಬಾವುಟವನ್ನು ಮುಟ್ಟ -ಬಯಸಿದ್ದುಂಟು?ಅಥವಾ-

ನನ್ನ ಸಂದೇಹವೇ ಸರಿಯಾಗಿತ್ತು. ಮಾರನೆ ದಿನ ಶ್ರೀಕಂಠ ಹೇಳಿದ

"ಶಾರದಾ ತಂದೆ ಸಾಮಾನ್ಯ ವ್ಯಕ್ತಿ ಅಲ್ಲ ಕನೊ. ಹ್ಯಾಗಿದೆ ಥೋರಣೆ? ಹೊರಗೆ ನಾವು ನಿಷ್ಠಾವಂತರಾದ ರಾಜಭಕ್ತರು. ಯುದ್ಧ ನಿಧಿ ಸಮಿತ್ಲೆಲ್ಲಾ ನಾವೇ ಇರೋದು. ಇತ್ತ ಗುಪ್ತವಾಗಿ ನಾವು ನೆರವಾಗೋದು ರಾಜದ್ರೋಹಿಗಳಿಗೆ!"

"ಬಹಳ ಕಾಲದಿಂದಲೂ ಹೀಗೇ ನಡೀತಾ ಇದೆಯೇನು?"

"ಛೆ! ಛೆ! ಮೊನ್ನೆವರೆಗೂ ಕಾಂಗ್ರೆಸು ಕಂಡರಾಗ್ತಿರಿಲ್ಲ ಮಾ ನಿಗೆ. ಇನ್ನು ಹ್ಯಾಗೆ ಹೇಳೋಕಾಗತ್ತೆ ? ನಾಳೆ ಏನಾಗುತ್ತೋ ಯಾ ರು ಬಲ್ಲರು ? ಈಗಿನಿಂದ್ಲೀ ಹುಷಾರಾಗಿರೋದು ಮೇಲಲ್ವಾ ?"

"ಚೆನ್ನಾಗಿದೆ ರಾಜಕಾರಣ !"

"ಪಾಲಿಟಿಕ್ಸ್ ಅನ್ನೋದೇ ಅದಕ್ಕೆ ಚಂದ್ರು. ನಮ್ಮ ಮಾಃ ಮಾಡ್ತಿರೋದೋ ಸರಿ ಅನಿಸುತ್ತೆ ನನಗೂ...... ಏನಂತೀಯಾ ?"

"ತಲೆದೂಗ್ದೆ."

"ಆತ ಹ್ಯಾಗಿದಾನೆ-ಭೂಪತಿ ?"

"ಸದ್ಯಃ ಬೇರೆಲ್ಲಿಗಾದರೂ ಸಾಗ್ಸವ್ವಾ....ಅವನ ಸಹಾವಾ ಸ ಇನ್ನು ಹೆಚ್ಚು ದಿವ್ಸ ಮಾಡೋಕಾಗಲ್ಲ. ಎಂಥ ಬೂರ್ ! ಎಂಥ ಬೋರ್ ! ಇನ್ನೂ ನಾಲ್ಕು ದಿವಸ ನಮ್ಮಲ್ಲೇ ಆವನಿದ್ದಾಂತಂದ್ರೆ ಅ ವನ ಕತ್ತು ಹಿಸಕ್ತೀನಿ ಅಷ್ಟೆ. ದೇಶಭಕ್ತರ ಬಲಿದಾನ-ಅಂಥ ಪೇಪರ್ರ್ನೋರು ಪ್ರಿಂಟು ಮಾಡ್ತಾರೆ! "

"ಹುಚ್ಚಪ್ಪಾ, ಹಾಗೇನಾದರೂ ಮಾಡಿ ನನ್ನ ಕುತ್ಗೆಗೆ ತಂದಿ ಟ್ವೀಯೆ !" .

..ನಾವು ಊರ ಹೊರಗೆ ಹೋದೆವು. ಇಲ್ಲದ ಬಿಡುವನ್ನು ದೊರಕಿಸಿಕೊಂಡು ಶ್ರೀಕಂಠ ನನಗೆ ಡ್ರೈವಿಂಗ್ ಕಲಿಸಿದ....

ಯುದ್ಧದ ಐದನೆಯ ವರ್ಷ. ನಾಲ್ವತ್ತೆರದರ ಚಳವಳಿಯೂ ನಿಂತು ಹೋಗಿತ್ತು-ಮಳೆ ಬಂದು ನಿಂತ ಹಾಗೆ, ಒಬ್ಬ ಪಾವಟಿಗೆ ಜಾರುವಂತೆ, ಅಲ್ಲೊಂದು ಇಲ್ಲೊಂದು ಬಂಧನ-ಬಿಡುಗಡೆಯ ವಾರ್ತೆ ಮಾತ್ರ ಕೇಳಿಬರುತ್ತಿತ್ತು, ಆಗಾಗ್ಗೆ.

ಆ ಅವಧಿಯಲ್ಲಿ ನಾನು ಬಾಳ್ವೆಯ ಇನ್ನೋಂದು ರೂಪವನ್ನು ಕಂಡೆ.

ಎಂದಿಗೆ ಯುದ್ಢ ನಿಂತು ಸಾಮಗ್ರಿಗಳ ಬೆಲೆ ಇಳಿಯುವುದೋ ಎಂದು ಬಡ ಸಂಸಾರಗಳು ಕಾದು ಕುಳಿತಿದ್ದರೆ, ಯುದ್ಢ ಇನ್ನು ನಿಂತು ತಮಗೆ ತೊಂದರೆಯಾಗುವುದಲ್ಲಾ-ಎಂದು ಲಕ್ಷಾಧೀಶರು ವ್ಯಥೆಪಡು ತಿದ್ದರು. ಶ್ರೀಕ೦ಠ ಮತ್ತು ಆತನ ಮಾವ ಮಾತನಾಡುತಿದ್ದಾಗ ಲೊಮ್ಮೆ, ವಿಷಾದದ ಛಾಯೆ ಅವರ ಮುಖಗಳ ಮೇಲೆ ಸುಳಿದುದನ್ನು ಕ೦ಡೆ ಆ ದೃಶ್ಯ. ಸೋಜಿಗವನ್ನು೦ಟುಮಾಡಿತು. ಮನುಷ್ಯನ ಆಸೆಗೆ ಮಿತಿಯೇ ಇಲ್ಲವೆ ಹಾಗಾದರೆ? ಹಲವು ಲಕ್ಷಗಳನ್ನು ಸುಲಭವಾಗಿ ಸ೦ಪಾದಿಸಿದ ಮೇಲೂ ತೃಪ್ತಿ ಇಲ್ಲವೆ ಇವರಿಗೆ? ಸುಖಜೀವನ ನಡೆ ಸಲು ಒಬ್ಬ ಮನುಷ್ಯನಿಗೆ ಎಷ್ಟು ಹಣ ಬೇಕು? ಹಾಗಾದರೆ ದೊಡ್ಡ ಮನುಷ್ಯರಾಗಿ ಬಾಳಲು ಎಷ್ಟು ಹಣಬೇಕು?

ಒ೦ದು ಸ೦ಜೆ ಶ್ರೀಕ೦ಠ ವ್ಯಗ್ರನಾಗದ್ದ.

ಏನಾಯ್ತು? ಎ೦ದು ಕೇಳಿದೆ.

ಒ೦ದು ಹೊಸ ಪಿಡುಗು ಬ೦ದಿದೆ ಅಷ್ಟೆ

ಪಿಡುಗು?

ಸ೦ಘ ಕಣಯ್ಯ- ಕೂಲಿಕಾರರ ಸ೦ಘ, ಯೂನಿಯನ್ನು. ಫ್ಯಾಕ್ಟರೀನ ತಮ್ಮ ವಶಕ್ಕೇ ತಗೋತಾರ೦ತೆ ಬಡ್ಡೀಮಕ್ಕಳು.

ಓ! ಸ್ವಾರಸ್ಯವಾಗಿದೆ

ನಿನ್ನ ಸಿನಿಕ ಬುದ್ಧಿ ಬಿಟ್ಬಿಡು. ಈ ಗಲಾಟೆ, ಕಾಲರಾಗಿ೦ತ, ಹೆಚ್ಛು ಅಪಾಯಕಾರಿ

ಗಲಾಟಿ ಮಾಡ್ತಿರೋರು ಯಾರು? ಅವರೇನೇ ನಿರುದ್ಯೋಗಿಗ್ಳು. ಎಲ್ಲರೂ ಲೀಡರ್‍ರ್ಸಾಗ್ಬಿಟ್ಟಿದಾರೆ,

ಅವಂರ್ದೊದು ಹಾಡೂ ಇದೆ ಗೋತ್ತಾ? ಕೈಲಿ-ಕೆಂಪು-ಬಾ-ವು-ಟಾ.... ಹೊ ಹ್ಹೋ!"

"ರಸಿಕ ಕಣಯ್ಯ ನೀನು"

" ಸ್ಕಲ್ಸ್ . ಬಂದೂಕು ತಗೊಂಡು ಸುಟ್‌‌‌‌‌‌‌‍ಹಾಕ್ಬಿಡೋಣಾಂತ ಅನಿಸುತ್ತೆ,"

ಹಿಂದೆ ಸಂಘಗಳು ಇರಲಿಲ್ಲವೆಂದಲ್ಲ. ಒಂದು ಕಾರ್ಖಾನೆಗೆ ಒಂದರಂತೆ ಸಂಘವಿರುತಿತ್ತು. ತಮಗೆ ಬೇಕಾದವರನ್ನು ಮಾಲೀ ಕರೇ ಆಯ್ದು ಕೂಲಿಕಾರ ಮುಖಂಡರಾಗಿ ನೇಮಿಸುತಿದ್ದರು. ಆದರೆ ಕೆಂಪು ಬಾವುಟ ಬಂದು,ಒಂದು ಉದ್ಯಮಕ್ಕೆ ಒಂದೇ ಸಂಘ-ಎಂದು ಘೋಷಿಸಿತು. ನಮ್ಮ ನಗರದ ಆರು ಕಾರ್ಖಾನೆಗಳ ಕೂಲಿಗಾರರೂ ಒಂದಾದರು. ಬೇರೆ ಬೇರೆ ಬೀದಿಗಳಲ್ಲಿ ಪ್ರತ್ಯೇಕವಾಗಿ ಮೆರ ವಣಿಗೆಗಳು ಬಂದು, ಒಂದೇ ಒಂದಾದ ದೊಡ್ಡ ಪ್ರವಾಹ ಭೋರ್ಗರೆ ಯುತ್ತ ಹರಿಯಿತು....ಇಪ್ಪತ್ತು ಸಾವಿರ ಕೂಲಿಗಾರರು ಬೀದಿಯಲ್ಲಿ! ಮೊರೆಯುತ್ತಿದ್ದ ಘೋಷವಿದು: "ಮೂರು ತಿಂಗಳ ಬೋನಸ್ !" "ಯುದ್ಡ ಕಾಲದ ಲಾಭದಲ್ಲಿ ನಮಗೂ ಒಂದು ಪಾಲು ಕೊಡಿ!".... ಆ ಬಳಿಕ ಭಾಷಣಗಳು....ಮಾಲೀಕರನ್ನೆಲ್ಲ ಕಾಣಲು ಆರು ಜನರ ಒಂದು ನಿಯೋಗದ ಆಯ್ಕೆ.

ಮಾಲೀಕರ ಕೊಠಡಿಗಲಿಂದ ಫೋನ್ ಗಳು ಟ್ರನ್ ಗುಟ್ಟಿದುವು. ಸ್ವಲ್ಪ ಹೊತ್ತಿನಲ್ಲೆ, ನಗರದ ಅತಿ ದೊಡ್ಡ ಹೊಟೇಲಿನಲ್ಲಿ ತಮ್ಮ ತಮ್ಮ ಮ್ಯಾನೇಜರರೊಡನೆ ಅವರು ಒಂದುಗೂಡಿದರು. ನನ್ನನ್ನೂ ಕರೆ ದೊಯ್ದ ಶ್ರೀಕಂಠ. ಬಲು ಶಾಂತವಾಗಿ ಮಾತುಗಳು ಅತ್ತಿತ್ತ ತೇಲಿ ಹೋದವು.

"ಕೊಡದೇ ಇದ್ದರೆ ‌‌‍ಏನಂತೆ ಇವರು ಮಾಡೋದು?"

"ಗೊತ್ತೇ ಇದೆಯಲ್ಲ-ಮುಷ್ಕರ!"

"ಉಪವಾಸ ಬಿದ್ದು ಸಾಯ್ತರೆ, ಅಷ್ಟೆ."

"ಒಂದು ತಿಂಗಳೇನಾದರೂ ಮುಷ್ಕರ ನಡೀತೂಂತಂದ್ರೆ ಒಟ್ಟು ನಮಗಾಗೋ ನಷ್ಟ ಎಷ್ಟು ಯೋಚೀಸಿದ್ದೀರಾ?"

"ಒಂದು ದಿನ ಕೆಲಸ ನಿಂತರೂ ದೊಡ್ಡ ನಷ್ಟವೇ!"

"ಮತ್ತೆ!?"

"ಅವರ ನಿಯೋಗದ ಮುಖಂಡರ ಅರೆಸ್ಟ ಮಾಡಿಸೋಣ."

"ಮಾಡಿಸೋದು ಸುಲಭ. ಮುಮದಿನ ಗತಿ? ಮುಷ್ಕರ ತಪ್ಪಿಸ್ಬೇಕೂಂತಿದ್ದರೆ, ನಾವು ದುಡುಕ್ಬಾರ್ದು."

"ಅದು ನಿಜ. ನಿಯೋಗದವರ್ನ ನಾವು ಜತೆಯಾಗಿಯೇ ಕಾಣೋಣ. ಮೊದಲು ನಕಾರದ ಉತ್ತರ. ಅ ಮೇಲೆ ನೋಡಿ ಕೊಂಡರಾಯ್ತು"

ಹೀಗೆ ಒಬ್ಬೊಬ್ಬರು ಒಂದೊಂದು ವಿಧವಾಗಿ ಮಾತನಾಡಿದರು. ಮಾತಿನಲ್ಲಿ ವೈವಿಧ್ಯವಿತ್ತು. ಆದರೆ ಉದ್ದೇಶ ಒಂದೇ-ಒಂದೇ.

ನಗರದ ಗಣ್ಯರು ಆಡ್ರ್ಯರೂ ಆದ ಆರು ಜನ ಪ್ರಮುಖರನ್ನು ಕೂಲಿಗಾರರ ಪರವಾಗಿ ಆರು ಜನ ಭೇಟಿಯಾದ ಆ ದೃಶ್ಯವನ್ನು ಸುಲಭವಾಗಿ ಮರೆಯುವುದು ಸಾಧ್ಯವಿಲ್ಲ.

ಎಸ್ಮೀನಾ ಕಾರಖಾನೆಯ ಮಾಲಿಕರ ಭವ್ಯಗೃಹಕ್ಕೆ ಬಡವರ ಆ ನಿಯೋಗ ಬ೦ದಿತು. ದೊಡ್ಡ ಹಾಲ್ ನಲ್ಲಿ ನೀಳವಾದೊ೦ದು ಮೇಜಿನ ಒ೦ದು ಪಾಶ್ವ೯ದಲ್ಲಿ ಆ ಆರು ಜನ ಕುಳಿತಿದ್ದರು - ಶ್ರೀಕ೦ಠ ನನ್ನು ಒಳಗೊ೦ಡು. ನಾವು ಬೀರೆ ನಾಲ್ವರು, ಕುಳಿತವರ ಹಿ೦ಬದಿ ಯಲ್ಲಿ ನಿ೦ತಿದ್ದೆವು. ಆ ಆರು ಜನ ಒಬ್ಬರ ಹಿ೦ದೊಬ್ಬರಾಗಿ ಸಾಲಗಿ ಬ೦ದು ನಿ೦ತರು. ಕೊನೆಯದಾಗಿ ಬ೦ದವನು ನಾಯಕ- ಸ೦ಘದ ಕರ್ಯದರ್ಶಿ. " ನಿಮ್ಮೆಲ್ಲರನ್ನು ಬಲ್ಲೆ " ಎನ್ನುವ ನೋಟವಿತ್ತು ಅವನ ಕಣ್ಣುಗಳಲ್ಲಿ. ಮೋಹಕವಾದೊ೦ದು ಮುಗುಳುನಗೆ ತೇಲು ತಿತ್ತು ಆ ತುಟಿಗಳ ಮೇಲೆ. ಆ ಷರಟು, ಪ್ಯಾ೦ಟು ಪಠಾಣ ಚಪ್ಪಲಿ. ವಯಸಿನಲ್ಲಿ ನನಗಿ೦ತ ಚಿಕ್ಕವನಾಗಿದ್ದ. ಇನ್ನೊಬ್ಬ ವಯಸ್ಸಾದವನು- ಮುಖದ ಮೇಲೆ ನರೆತ ಗದ್ದವಿತ್ತು. ಇಬ್ಬರು ನಡುವಯಸ್ಕರು. ನಾಲ್ಕನೆಯವನು-

ನನ್ನ ಕಣ್ಣುಗಳನ್ನು ನಾನು ನ೦ಬಲಿಲ್ಲ ! ಅಲ್ಲಿ ನಾರಯಣ ನಿದ್ದ- ಶ್ರೀಕ೦ಠನಿಗೂ ನನಗೂ ಸಹಪಾಠಿಯಾಗಿದ್ದ ನಾಣಿ !

ಬ೦ದವರು ಕ್ಷಣಕಾಲ ಹಾಗೆಯೇ ನಿ೦ತರು.

ಎಲ್ಲವು ಮೊದಲೇ ನಿಶ್ಚಿತವಾಗಿದ್ದ೦ತೆ, ಮಾಲೀಕರ ಪರವಾಗಿ ಎಸ್ಮೀನಾ ಕಾರಖಾನೆಯ ಯಜಮಾನರು ಹೇಳಿದರು:

" ಬೋರಾ ! ರ೦ಗಾ ! ನಿಯೋಗದವರಿಗೆ ಕುರ್ಚಿ ತ೦ದ್ಹಾಕಿ! "

ಐದು ಬಡಕಲು ಕುರ್ಚಿಗಳು ಬ೦ದವು.

" ನಾನು ನಿ೦ತೇ ಇರುತ್ತೇನೆ, " ಎ೦ದನೊಬ್ಬ ಕೂಲಿಕಾರ

ಆದರೆ ಯಾರು ಕುಳಿತುಕೊಳ್ಳಲಿಲ್ಲ- ಆರನೆಯ ಕುರ್ಚಿ ಬರುವ ತನಕವೂ ಕುಳಿತು ಕೊಳ್ಳಲಿಲ್ಲ.

ಆ ಮುಖ೦ಡ ಮಾತನಡಿದ.

"ಆರಂಭಿಸೋಣವೇ ?"

"ನೀವು ಯಾವ ಮಿಲ್ಲಿನವರು ?"

"ನಾನು ಸಂಘದ ಕಾರ್ಯದರ್ಶಿ,ನಿಯೋಗದ ಮುಖಂಡ.... ಇವರು - ಇವರು -"

ಆತ ನಿಯೋಗದ ಸದಸ್ಯರ ಹೆಸರುಗಳನ್ನು ಹೇಳುತಿದ್ದ .

ಮತ್ತೆ ಆ ಹೆಸರು:ಟಿ.ಜಿ.ನಾರಾಯಣ್ - ನಾರಾಯಣ.

ಶ್ರೀಕಂಠನ ಮುಖ ನೋಡಿದೆ. ಆತ ನಾರಾಯಣನನ್ನು ನೋಡಿದ್ದ-ಗುರುತು ಹಿಡಿದಿದ್ದ. ನಾರಾಯಣನೂ ನಮ್ಮಿಬ್ಬರನ್ನು ನೋಡಿದ. ಆದರೆ ಆ ಕಣ್ಣುಗಳು ನಿಶ್ಚಲವಾಗಿದ್ದುವು. ತುಟಿಗಳು ಬಾಡಿಬಿಗಿದಿದ್ದುವು .

"ಮಾಲೀಕರೊಡನೆ ಕೆಲಸಗಾರರೇ ಮಾತನಾಡ್ಬೆಬೇಕು ."

"ಇಪ್ಪತ್ತು ಸಾವಿರ ಕೆಲಸಗಾರರು ನಮ್ಮನ್ನು ಚುನಾಯಿ ಸಿದ್ದಾರೆ. ನಾವೆಲ್ಲರೂ ನಿಮ್ಜತೇಲಿ ಮಾತನಾಡ್ತೀವಿ. ಆದರೆ ವ್ಯವಹಾರದ ಅನುಕೂಲಕ್ಕಾಗಿ ಯಾರಾದರೊಬ್ಬರು ನಿಯೋಗದ ಮುಖಂಡರಾಗಿರೋದು ಪದ್ಧತಿ-ನೀವು ಏರ್ಪಾಟು ಮಾಡಿಕೊಂಡಿ ರೋ ಹಾಗೆ !"

ಆ ಅಧಿಕಾರವಾಣಿಯನ್ನು ಹೆದರಿಕೆ ಬೆದರಿಕೆಗಳಿಂದ ನಡುಗಿಸು ವುದು ಸಾಧ್ಯವಿರಲಿಲ್ಲ.

ಅದು ನನಗೆ ವಿಚಿತ್ರವಾಗಿ ತೋರಿತು. ಅತ್ತಿತ್ತ ಮಾತುಗಳು ಹಾರಾಡುತ್ತಿದ್ದರೂ ನಾನು ಕಿವಿಗೊಡಲಿಲ್ಲ. ಬೇರೆಯೇ ಯೋಚನೆ ಗಳು ನನ್ನನ್ನು ಮುತ್ತುತ್ತಿದ್ದುವು .

ಪರಸ್ಪರ ಎದುರು ಬದುರಾಗಿ ನಿಂತಿದ್ದ ಈ ಎರಡು ಶಕ್ತಿಗಳು! ಆ ವರೆಗೆ ಹಣವಂತರು ಪಕ್ಷವೊಂದೇ ದೊಡ್ಡ ಶಕ್ತಿಯೆಂದು ನಾನು ಬಗೆದಿದ್ದೆ. ಅದು ನಿಜವಾಗಿರಲಿಲ್ಲ. ಇಲ್ಲಿ ಇನ್ನೊಂದು ಶಕ್ತಿಯಿತ್ತು -ಹಣವಿಲ್ಲದವರ ಶಕ್ತಿ ....

ಈ ಎರಡು ಶಕ್ತಿಗಳ ನಡುವೆ ನಾನು ಎಲ್ಲಿದ್ದೆ? ದರಿದ್ರರಾದ ಅ ಕೆಲಸಗಾರರ ಪಕ್ಷ ನನ್ನದಾಗಿರಲಿಲ್ಲ....ನನ್ನ ತಂದೆ ಹಿಂದೆ ಅದೇ ಜಾತಿಗೆ ಸೇರಿದ್ದ.....ಆದರೆ ನಾನು ಅಲ್ಲಿರುವುದು ಸಾಧ್ಯವಿರಲಿಲ್ಲ. ಆ ಇನ್ನೊಂದು ಪಕ್ಷ? ಅದು ಶ್ರೀಕಂಠನದು, ನನ್ನದಲ್ಲ.. ನಾನು ಶ್ರೀಕಂಠನ ಸ್ನೇಹಿತ ಅಷ್ಟೆ-ಪರೋಪಜೀವಿ.

ಒಂದು ವೇಳೆ ನನ್ನ ತಂದೆ ಬದುಕಿ ಉಳಿದಿದ್ದರೆ? ಇಷ್ಟು ವರ್ಷ ಗಳ ಕಾಲ ಆತ ದುಡಿಯುವುದು ಸಾಧ್ಯವೇ ಇರಲಿಲ್ಲ. ಆದರೆ ಒಂದು ವೇಳೆ ದುಡಿಯುತ್ತಿದ್ದರೆ? ಆಗ ಮೆರವಣಿಗೆಯಲ್ಲಿ ಅವನೂ ಇರುತಿದ್ದ. ನಿಯೋಗದ ಆಯ್ಕೆಗೆ ಸಂಬಂಧಿಸಿ ಅವನೂ ಅಭಿಪ್ರಾಯ ವ್ಯಕ್ತಪಡಿಸು ತಿದ್ದ.ಅಥವಾ ಅವನನ್ನೂ ನಿಯೋಗಕ್ಕೆ ಆರಿಸುತಿದ್ದರೋ ಎನೋ... ಹಾಗಾದರೆ,ಅದು ಅವನ ಪಕ್ಷವಾಗುತಿತ್ತು.

ತಂದೆಯ ಪಕ್ಷ....ಇಲ್ಲ,ನಾನು ದೂರಬಂದಿದ್ದೆ.ಆ ಪಕ್ಷವನ್ನು ನಾನು ಸೇರುವುದು ಸಾಧ್ಯವಿರಲಿಲ್ಲ.ಆದರೆ ಆ ಇನ್ನೋಂದು ಪಕ್ಷ?

ಇನ್ನೋಂದು ಪಕ್ಷದ ಪ್ರಮುಖರು ಏರಿದ ಸ್ವರದಲ್ಲಿ ಹೇಳು ತಿದ್ದರು:

"ಮುನಿಸ್ವಾಮಪ್ಪ,ಇದು ಯುಧಕಾಲ.ಈಗ ಇಂಧ ಕೇಳಿಕೆ ಮುಂದಿಡೋದು ಕಾನೂನು ಬದ್ಧ ಅಂತ ತಿಳ್ಕೋಂಡಿದೀರಾ?"

ಕಾರ್ಯದರ್ಶಿಯ ಉತ್ತರ ಬರುತಿತ್ತು:

"ಕಾನೂನು ನಿರ್ಮಿಸಿರೋದು ಮನುಷ್ಯರೇ ಅನ್ನೊ ವಿಷಯ ತಮ್ಮೆಲ್ಲರಿಗೂ ತಿಳಿದಿರಬಹುದು."

"ಪೋಲೀಸರಿಗೆ ತಿಳಿಸಿದರೆ ಏನಾಗುತ್ತೆ ಗೊತ್ತೋ?"

"ನಮ್ಮೆಲ್ಲರನ್ನೂ ಅರೆಸ್ಟ್ ಮಾಡಿಸೋ ಸಾಮರ್ಥ್ಯ ನಿಮಗಿದೇ ಅನೋದು ಹೊಸ ವಿಷಯವೇನೂ ಅಲ್ಲ."

"ಖಡಖಂಡಿತವಾಗಿ ಹೇಳ್ತೀನಿ:ಇನ್ನೊಂದು ವರ್ಷದ ವರೆಗೆ ಬೋನಸ್ ಕೊಡೋದು ಸಾಧ್ಯವಿಲ್ಲ!"

"ನಾವು ಅಷ್ಟೇ ಖಡಾಖಂಡಿತವಾಗಿ ಹೇಳ್ತೀನಿ: ಒಂದು ನಿಮಿಷವು ಇನ್ನು ತಡೆಯೋದು ಸಾಧ್ಯವಿಲ್ಲ!"

"ನೀವಿನ್ನು ಹೊರಡಬಹುದು"

"ಹೊರಡ್ತೇನೆ. ಇಪ್ಪತ್ತು ಸಹಸ್ರ ಕೆಲಸಗಾರರು ನಾವೇನು ಸುದ್ದಿ ತರ್ತೀವೋ ಆಂತ ಆತುರದಿ೦ದ ಹಾದಿ ನೋಡ್ತಿದ್ದಾರೆ.

ಎಂಥ ಗಡಸು ವೈಖರಿ! ಹೊರಡುವಾಗಲೂ ಮಾತಿನ ಗುಂಡು. ಇಪ್ಪತ್ತು ಸಹಸ್ರ ಜನ ಕೆಲಸಗಾರರ ಮಾತೆತ್ತಿದಾಗ,ಮಾಲೀಕರ ಎದೆಗಳಲ್ಲಿ ನಡುಕ ಹುಟ್ಟಿತ್ತು!

ಆ ಆರು ಜನರೂ ಹೊರಟು ಹೋದರು- ನಾರಾಯಣನೂ ಕೂಡಾ.

ಉಳಿದವರು-ಮಾಲೀಕರು-ತಮ್ಮ ತಮ್ಮೊಳಗೆ ಮಾತನಾಡಿ ಕೊಂಡರು.

"ಒಂದು ತಿಂಗಳ ಬೋನಸಿಗಾದರೆ ಒಪ್ತೀವಿ ಅಂತ ಹೇಳ್ಬಹು ದಾಗಿತ್ತೇನೊ?

"ಅದ್ಯಾಕ್ಸಾರ್ ?"

"ಒಂದು ತಿಂಗಳಿನ್ದಲ್ಲ, ಎರಡು ತಿಂಗಳಿನ್ದೇ ಕೊಟ್ಟರೂ ಕೊಡ ಬಹುದು. ಆದರೆ ಈಗಲ್ಲ.ಆವರನ ಹಣ್ಣು ಮಾಡಿ ಹಾದಿಗೆ ತರಬೇಕು; ಆ ಮೇಲೆ ಭಿಕ್ಷೆ ಅಂತ ನೀಡ್ಬೇಕು."

"ಸರಿ!"

ಶ್ರೀಕಂಠ ನನ್ನ ಬೆನ್ನು ಮುಟ್ಟಿ, "ಹೊರಡೋಣ ಚಂದ್ರೂ," ಎಂದ.

ಮನೆಗೆ ಹೋಗುವುದರ ಬದಲು, ಮಧ್ಯಾಹ್ನದ ಊಟಕ್ಕಾಗಿ ಯಾವುದೋ ಹೋಟೆಲು ಸೇರಿದೆವು.

ನಾನು ನಾರಾಯಣನ ಪ್ರಸ್ತಾಪವೆತ್ತಿದೆ.

"ನಾಣಿನ ನೋಡಿದೆಯೋ ಇಲ್ಲವೋ..."

"ಅವನನ್ನ ನೆನೆಸಿಕೊಂಡರೆ ವಾಕರಿಕೆ ಬರುತ್ತೆ. ಎಷ್ಟು ಒರ ಟಾಗಿದಾನೆ ನೋಡು!"

"ಅವನೊ ಮಿಲ್ ಸೇರಿದ್ನಲ್ಲಾ."

ಹುಂ.ಲಿಸ್ಟ್ ನೋಡ್ದೆ. ಸೂಯರ್ಕಾಂತಿ ಮಿಲ್ನಲ್ಲಿದಾನೆ. ಗುಮಾಸ್ತೆ.....ಅವನು ಮುಂದೆ ಹೀಗೆಯೇ ಆಗ್ತಾನೇಂತ ನನ್ಗೆ ಆಗಲೇ ಗೊತ್ತಿತ್ತು...."

ದೊಡ್ದ ಮಾತುಗಳು. ನಾನು ಕೂಡಾ ಹೀಗೆಯೇ ಆಗುವೆ

ನೆಂದು ಆತ ತಿಳಿದಿದ್ದನೇನೊ? ನನಗೆ ಆ ಮಾತು ರುಚಿಸಲಿಲ್ಲ. ಆದರೆ ಶೀಕಂಠೋಪಜೀವಿಯಾದ ನನಗೆ ಹಾಗೆಂದು ಹೇಳುವ ಸ್ವಾತಂತ್ರ್ಯ ವಿರಲಿಲ್ಲ. ಆತನ ತಂಗಿ ಬಾಣಂತಿಯಾಗಿ ಸತ್ತ ಮರುದಿನ ನಾರಾ ಯಣನನ್ನು ನಾನು ಕಂಡಿದ್ದೆ. ಹೋಟೆಲು ತಿಂಡಿ ಮಾತುಕತೆ... ಆಗ ಅವನಿಗೆ ಉದ್ಯೋಗವಿರಲಿಲ್ಲ. ಈಗ ಉದ್ಯೋಗ ದೊರೆತಿತ್ತು... ಆದಾದಮೇಲೆ ತನ್ನದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಆತ ನಿಯೋಗದ ಒಬ್ಬ ಸದಸ್ಯನಾಗಿದ್ದ.

"ಏನು ಯೋಚಿಸ್ತಾ ಇದೀಯಾ, ಚಂದ್ರು?"

"ನೀನೋಂದು ಮಾತು ಹೇಳಿದರೆ ನಾರಾಯಣ ಕೇಳಿದ್ರೂ ಕೇಳ್ಬಹುದು."

"ಸಾಧ್ಯವಿಲ್ಲದ ವಿಷಯ. ಆಗ ನೋಡಿದಿಯೋ ಇಲ್ಲವೊ ? ನಮಸ್ಕಾರ ಅಂತಾದರೂ ಅಂದ್ನೆ ಆತ ?"

ಆದರೆ, ನಾರಾಯಣನಿಗೆ ಸಂಬಂಧಿಸಿ ಅಂತಹ ಕಾಠಿನ್ಯ ಅವಶ್ಯ ವಿತ್ತೆ ? ಒಂದು ವೇಳೆ ನಾನೇ ನಾರಾಯಣನ ಸ್ಥಿತಿಯಲ್ಲಿ ಇದ್ದಿದ್ದರೆ? ಅಥಾವಾ ಶ್ರೀಮಂತ ಮಾವ ದೊರೆಯುವುದರ ಬದಲು ಸ್ವತ ಶ್ರೀಕಂಠನೇ ದೇಹಶ್ರಮ ಮಾರುವ ಉದ್ಯೋಗಿಯಾಗಬೇಕಾದ ಪರಿಸ್ಥಿತಿ ಬದಗಿದ್ದರೆ?

ಶ್ರೀಕಂಠ-ನಾರಾಯಣರ ನಡುವೆ ಬೆಳೆದು ಬಂದ ಆ ಅಡ್ಡ ಗೋಡೆ.....

ಐ. ಜಿ.ಪಿ. ಯ ಫೂನ್ ಮಾಡಿ ಕೇಳಿದ್ದರು.

"ಏನ್ಮಾಡ್ತೀರಾ? ನಮ್ಮಿಂದ ಏನಾದರೂ ಆಗ್ಬೇಕಾಗಿದ್ದರೆ ಹೇಳಿ."

"ಯೂನಿಯನ್ನಿನವರು ಹದಿನಾಲ್ಕು ದಿನಗಳ ಮುಷ್ಕರ ನೋ ಟೀಸು ಕೋಟ್ಟಿದ್ದಾರೆ...... ಇನ್ನೊಂದು ವಾರ ಕಾದು ನೋಡೋಣ ಹೇಳ್ತೀನಿ."

ಕಾದು ನೋಡಿದ್ದಾಯಿತು ; ಹೇಳಿದ್ದಾಯಿತು.

ಮುಷ್ಕರದ ಸಿದ್ದತೆ ನಡೆದಿತ್ತು. ಆರಂಭಕ್ಕೆ ನಾಲ್ಕು ದಿನಗ ಳಿದ್ದಾಗ ಮಾಲಿಕರ ಸೂಚನೆಯಂತೆ ಕಾನೂನು- ನೆಮ್ಮದಿಯ ರಕ್ಷ ಕರು ಮುಂಜಾಗ್ರತೆಯ ಕ್ರಮ ಕೈಕೊಂಡರು.ನಿಯೋಗ ಬಂದಿದ್ದ ಆರು ಜನರೂ ಬಂಧಿಸಲ್ಪಟ್ಟರು. ಸಭೆ ಮೆರವಣಿಗಳನ್ನು ನಿಷೇಧಿ ಸುವ ಆಜ್ನೆ ಜಾರಿಯಾಯಿತು.

ಬಂಧನವಾದುದು ರಾತ್ರೆ ಹೊತ್ತು. ಸುದ್ದಿ ಮಾತ್ರ ಆಗಲೆ ಕಾಳ್ಗಿಚ್ಚಿನಂತೆ ಹಬ್ಬಿತು. ರಾತ್ರೆ ಷಿಫ್ಟಿಗೆ ಹೋಗಿದ್ದ ಕಾರ್ಮಿಕರು ಹೊರಬಂದು ವಿದ್ಯುಶ್ ಮುಶ್ಕರ ನಡೆದಿತ್ತು.

ಮರು ದಿನ ಒಂದೇ ಒಂದು ಬಟ್ಟೆ ಕಾರ್ಖಾನೆಯೂ ತೆರೆಯ ಲ್ಲಿಲ. ಕೂಲಿಕಾರರು ವಾಸವಾಗಿದ್ದ ಪ್ರದೆಶಗಲ್ಲೆಲಾ ಮಿಂಚಿನ ಸಂಚಾರವಾಗಿತ್ತು. ಆ ಗುಜು ಗುಜು ಮಾತು- ಚೈತನ್ಯ ಸೂಸುತಿದ್ದ ಕಣ್ಣುಗಳು . ಅದು ಸಾದ್ಯವಿತ್ತಲ್ಲವೆ? ನಾನು ಅಂಥ ಘಟನೆಯನ್ನು ಎಂದೂ ನಿರೀಕ್ಶಿಸಿರಲಿಲ್ಲ. ತಲೆ ಬಾಗಿ ನಡೆಯುವ ಬಡ ಕೂಲಿಗಾರ ಸೆಟಿದು ನಿಲ್ಲುವುದು ಸಾಧ್ಯವಿತ್ತಲವೆ?

ಆದರೆ ಆಗ ನನಗಿನ್ನೂ ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿಲ್ಲ. ಸಾರ್ಕಾರದ ಬೆಂಬಲವಿದ್ದ ಬಲಾಢ್ಯ ಶಕ್ತಿಗಳೆದು ರಲ್ಲಿ ಕೂಲಿಕಾರರ ಪ್ರತಿಭಟನೆ ಖಂಡಿತ ಮುಣ್ಣುಗೂಡುವುದೆಂದು ನಾನು ತಿಳಿದಿದ್ದೆ.

......... ಆ ತಿಳಿವಳಿಕೆ ತಪ್ಪಗಿತ್ತು.

ಶ್ರೀಕಂಠ ಹೇಳಿದ.

"ನೋಡಿದಿಯಾ ಚಂದ್ರು ?ಈ ಕೂಲಿಕಾರರ ಪ್ರಶ್ನೆ ಇನ್ನು ಯಾವಾಗ್ಲೂ ಉಳಿಯುತ್ತೆ.ಈ ಸಾರೆ ಉಪಾಯವೇ ಇಲ್ಲ. ಒಂದು ದಿನ ಕಾರ್ಖನೆ ಮುಚ್ಚಿದರೂ ನಷ್ಟವಾಗತ್ತೆ....."

"ಏನ್ಮಾಡ್ಬೇಕೂಂತಿದೀರಾ?"

"ನಾಳೆಯಿಂದ್ಲೇ ಮಾತುಕತೆ ಷುರು ಮಾಡ್ಬೇಕು."

ಕಾಂಗ್ರೆಸ್ ಮುಖಂಡರೊಬ್ಬರು ರಾಯಭಾರದ ಭಾರಹೊತ್ತರು. ಅವರು ಮಾಡುತಿದ್ದ ಸ್ತುತ್ಯಯತ್ನವನ್ನು ಹೊಗಳಿ ಪತ್ರಿಕೆಗಳಲ್ಲಿ ವರದಿಗಳು ಬಂದವು.

ಮೊದಲ ದಿನ ಮಾಲೀಕರೆಂದರು.

"ಒಂದು ತಿಂಗಳ ಬೋನಸ್ ಕೊಡ್ತೀವಿ."

ಬಂಧಿತರಾದವರು ಒಪ್ಪಲಿಲ್ಲ. ಆದಾದ ಮೇಲೆ ಇನ್ನೊಂದು ಉತ್ತರ ಹೋಯ್ತು.

"ಎರಡು ತಿಂಗಳ ಬೋನಸ್ ಕೊಡ್ತೀವಿ."

"ಮುಷ್ಕರ ಸಮಿತಿ ಸದಸ್ಯರನ್ನ ನಾವು ಕಂಡು ಮಾತನಾಡ್ಬೇಕು."

ಆದಕ್ಕೆ ಪೋಲೀಸ್ ಅಧಿಕಾರಿಗಳು ಸಮ್ಮತಿ ಇತ್ತರು. ಲಾಕ ಕಪ್ಪಿನ ಒಳಗೆ ಆರು ಜನ ,ಹೊರಗೆ ಸಮಿತಿ ಸದಸ್ಯರು, ನಿಂತು ಸಭೆ ಜರಗಿತು.

ಆ ಉತ್ತರದಲ್ಲಿ ದಿಟ್ಟತನವಿತ್ತು:

"ಮೂರು ತಿಂಗಳ ಬೋನಸ್ ದೊರೆಯುವವರೆಗೂ ನಮ್ಮ ಮುಷ್ಕರ.ನಮ್ಮ ಮುಖಂಡರೆಲ್ಲರ ಬಿಡುಗಡೆಯಾಗ್ಬೇಕು. ಯಾರೊ ಬ್ಬರನ್ನೂ ಕೆಲಸದಿಂದ ತೆಗೆದು ಹಾಕಕೂಡದು."

"ಸಾಧ್ಯವಿಲ್ಲ," ಎಂದರು ಮಾಲೀಕರು.

ಮರುದಿನ ನಗರದ ಇತರ ಕೈಗಾರಿಕೋದ್ಯಮದ ಕಾರ್ಮಿಕರೂ ಸಹಾನುಭೂತಿಯ ಮುಷ್ಕರ ಹೂಡಿದರು. ಪೋಸ್ಟರು ಅಂಟಿಸುತಿದ್ದ ಹಲವರ ಬಂಧನವಾಯಿತು.ಬೀದಿಗಳಿಂದ ಮುಖ್ಯ ಮುಖ್ಯರಾದ ಕೆಲಸಗಾರರನ್ನು ಸ್ಟೇಷನ್ನಿಗೆ ಕರೆದೊಯ್ದರು.ನಗರದ ಎರಡು ಮೂರು ಲಾಕಪ್ಪುಗಳು ಕೂಡುದೊಡ್ಡಿಗಳಾದುವು.

"ನಾಳೆಯಿಂದ ಕಾರಖಾನೆ ಶುರುವಾಗುತ್ತಪ್ಪ," ಎಂದ ಶ್ರೀ ಕಂಠ.

"ಅಂದರೆ?"

"ಕಾಣಿಸೋದಿಲ್ವೇನು?ಹ್ಯಾಗಿದಾರೆ ಸೂಳೇ ಮಕ್ಳು ! ನಾವೇ ಸೋತ ಹಾಗಾಯ್ತು ಅಂತೂ"

"ಮೂರು ತಿಂಗಳ ಬೋನಸ್ ಕೊಡೋದೂಂತ ತೀರ್ಮಾನಿಸಿ ದೀರಾ?"

"ಈಗ ತಾನೇ ನಿರ್ಧಾರವಾಯ್ತು. ನನಗೊಬ್ಬನಿಗೇ ಇದರಿಂದ ಸುಮಾರು ಎರಡೂವರೆ ಲಕ್ಷ ಕೈ ಬಿಡುತ್ತೆ.ಎರಡೂವರೆ ಲಕ್ಷ !"

ಶಾರದಾ ಬಂದು ಕೇಳಿದಳು.

"ಸಾಯಂಕಾಲ ಸಾಧನಾ ಬೋಸ್ ನೃತ್ಯ ....ಬರ್ತೀರಿ ತಾನೆ?"

ಶ್ರೀಕಂಠ ನನ್ನ ಮುಖ ನೋಡಿ,"ಏನಪ್ಪಾ,ಬೇರೇನಾದರೂ ಕಾರ್ಯಕ್ರಮ ಇದೆಯೇನಪ್ಪ?"ಎಂದು ಕೇಳಿದ.

"ಯಜಮಾನಿತಿ ಕೇಳ್ತಾ ಇದಾರೆ ಅಂದ್ಮೇಲೆ,ಉಳಿದ ಕಾರ್ಯ ಕ್ರಮವೆಲ್ಲಾ ಮನ್ನಾ"

"ಇಷ್ಟು ಹೊತ್ತಿಗೆ ಬಾಕ್ಸು ಟಿಕೆಟು ಸಿಗುತ್ತೋ ಇಲ್ಲವೋ?"

"ನಾನು ಈಗಾಗಲೇ ಮೂರು ಸೀಟು ಬುಕ್ ಮಾಡ್ಸಿದೀನಿ, "ಎಂದಳು ಶಾರದಾ.

"ಒಪ್ಪಿಗೆ.ಐದು ಘಂಟೆಗೇ ಸಿದ್ದವಾಗಿರ್ತೀವಿ....ಆದರೆ ಸಾಧನಾ ಬೋಸ್ ಗೆ ವಯಸ್ಸಾಯ್ತು,ಅಲ್ವೇನೋ ಚಂದ್ರು?"

ಮುಖ ಕೊಂಕಿಸದೆ ಶಾರದಾ ಹೇಳಿದಳು.

"ಇದೇ ಕೊನೇ ದಿಗ್ವಿಜಯ. ಇನ್ನು ಆಕೆ ಟೂರ್ ಬರೋಲ್ಲ. ಇದೊಂದ್ಸಲ ನೋಡಿ...ಅವಳ ಜತೆಗಾರನೊಬ್ಬ ಚೆನ್ನಾಗಿದಾನಂತೆ ಗೊತ್ತೆ?"

ಶ್ರೀಕಂಠ "ಹುಂ!"ಎಂದ;ಬೇರೆ ಉತ್ತರವೀಯಲಿಲ್ಲ.

ಶಾರದಾ ನೆಟ್ಟ ದೃಷ್ಟಿಯಿಂದ ನನ್ನನ್ನೆ ನೋಡಿ,ಹೊರಡುವ ಸಿಧ್ದತೆಗಾಗಿ ಒಳಹೋದಳು.

.....ಬಂಗಾಳದ ಪ್ರಖ್ಯಾತ ನೃತ್ಯಕಲಾವಿದೆ! ಸಾಧನಾ ಬೋಸ್ ಗೆ ಪುರಭವನದಲ್ಲಿ ಸಂಭ್ರಮದ ಸ್ವಾಗತವೇರ್ಪಟಿತ್ತು..... ಕಿಕ್ಕಿರಿಂದ ತುಂಬಿತ್ತು ಸಭಾಭವನ.....ಸಾಧನಾ ಬೋಸ್ ರಾಜ ನರ್ತಕಿಯಾಗಿ ಕುಣಿದಳು...ಮತ್ಸ್ಯಗಂಧಿಯಾದಳು..ಕಥಕ್ ..ಮಣಿಪುರಿ....ಆಕೆ ಬೆಡಗುಗಾತಿಯಾದ ಬಿನ್ನಾಣಗಿತ್ತಿ ಯಾಗಿರಲಿಲ್ಲ.ಆದರೆ ಆ ಮುಖಮುದ್ರೆ ಆಕರ್ಷಣೀಯವಾಗಿತ್ತು. ಮೈ ಕಟ್ಟಿನ ಗಾತ್ರ ದ್ರೋಹ ಬಗೆಯುತಿದ್ದರೂ ಅದರ ಮೇಲೆ ಆಕೆ ಪ್ರಭುತ್ವ ಸ್ತಾಪಿಸುತ್ತಿದ್ದಳು.........

ನನ್ನ ಮನಸ್ಸು ಎಲ್ಲೆಲ್ಲೋ ಓಡಾಡುತ್ತಿತ್ತು. ನಡುವಿನಲ್ಲಿ ಕುಳಿತಿದ್ದ ಶ್ರಿಕಂಠನಿಗೂ ನೆಮ್ಮದಿ ಇದ್ದಂತೆ ತೊರಲ್ಲಿಲ್ಲ.

ಅವನೆಂದ:

"ಇಷ್ಟೊತ್ತಿಗೆ ಎಲ್ಲವೂ ಮುಗಿದಿರತ್ತೆ. ಅವರ್ನೆಲ್ಲಾ ಬಿಟ್ಟಿದಾರೆ. ಆ ನಾರಾಯಣ್ನನ್ನೂ ಕೂಡಾ......"

ಅವನ ಕಣ್ಣುಗಳು ಸಾಧನಾ ಬೋಸನ್ನು ನೋಡುತ್ತಿದ್ದರೆ, ಮನಸ್ಸು ಹೊರಗೆ ಸುತ್ತಾಡುತಿತ್ತು.

ಶಾರದಾಗೆ ನಮ್ಮ ಮಾತಿನಿಂದ ಬೇಸರವಾಯಿತೇನೋ. ಶ್ರಿಕಂಠ, ನಾನು ಮತ್ತು ಶಾರದಾ ನಡುವೆ ಗೋಡೆಯಾಗಿದ್ದ-ಯಾ ವಾಗಲೂ. ಅವಳ ಬಗೆಗೆ ತಿಳಿಯುವ ಇಚ್ಛೆ ಎಂದೂ ನನಗೆ ಆಗುತ್ತಿರ ಲಿಲ್ಲ. ಆಕೆ ನನ್ನನ್ನು ಆಗಾಗ ಶೂನ್ಯದೃಷ್ಟಿಯಿಂದ ನೋಡುತ್ತಿದ್ದಳು. ಆದರೆ ಶೂನ್ಯದೃಷ್ಟಿಯಲ್ಲಿ ಎಂದೂ ಯಾವ ಅರ್ಥವೂ ಇರುವುದಿಲ್ಲ- ಅಲ್ಲವೆ?

ಪುರಭವನದಿಂದ ಹೊರಬಿದ್ದ ಮೇಲೆ, ನಮ್ಮ ಕಾರು ಮಾನವ ಸಾಗರದಲ್ಲಿ ಈಸಬೇಕಾಗಿ ಬಂತು.

"ಬರ್ತಾ ಇದೆ ಕಂಠಿ, ಮೆರವಣಿಗೆ!"

"ಹುಂ. ಬೇರೆ ಹಾದಿಗೆ ತಿರುಗಿಕೊಳ್ಳಪ್ಪಾ......."

ಕಾರನ್ನು ಹಿಂದೆಕ್ಕೆ ಸರಿಸಿ ಎಡಕ್ಕೆ ತಿರುವಿದೆ.

"ಸ್ವಲ್ಪ ನಿಲ್ಸು ಚಂದ್ರೂ.......ಕಾಮ್ರಿಕರ ವಿಜಯೊತ್ಸವ ನೋಡೋಣ."

ಶಾರದಾಗೆ ಬೇಸರವಾಯಿತು. ಪ್ರತಿಭಟನೆಯ ಸ್ವರದಲ್ಲಿ ಆಕೆ ಎಂದಳು:

"ಏನದು? ಮನೆಗೆ ಹೋಗ್ಬಾರ್ದಾ?"

"ನೋಡಿ ಸ್ವಲ್ಪ........ ಇದೇ ಈಗ ನಮ್ಮ ಎರಡೂವರೆ ಲಕ್ಷ ಕ್ಷೌರ ಮಾದಿದಾರೆ. ಹೊಟ್ಟೆ ಉರಿದು ಹೋಗ್ತಾ ಇದೆ ಇಲ್ಲಿ.........

೨೬೮
ವಿಮೋಚನೆ

ನೋಡಿಯಾದರೂ ನೋಡೋಣ ಅವರ ಸಂಭ್ರಮಾನಾ......"

ಘೋಷಣೆಗಳು- ಜಯಕಾರಗಳು; ಕ್ರಾಂತಿಗೆ ವಿಜಯವಾಗಲಿ, ಎಂಬ ಹಾರೈಕೆ; ನಿಯೋಗದ ಪ್ರತಿಯೊಬ್ಬ ಸದಸ್ಯನ ಹೆಸರಲ್ಲೂ ಜಯಕಾರ.......

" ಕಾಣಿಸ್ತಾ ಇದಾನೇನೋ ನಿನ್ ಸ್ನೇಹಿತ?"

" ಯಾರು ಕಂಠಿ?"

" ಅವ್ನೇ ನಾಣಿ..."

" ಪಾಪ! ಎಲ್ಲಿದಾನೊ...ನೀನು ಅನ್ಯಾಯವಾಗಿ ಅವನ್ನ ಹೀನೈಸ್ತೀಯಾ."

ಯಾವುದೋ ಹಳೆಯ ನೆನಪು ನನ್ನನ್ನು ಕಾಡಿಸಿ ಆ ಮಾತು ಹೇಳಿಸಿತು. ಆ ನಾಣಿಯ ಜೀವನದ ಬಗೆಗೆ ನನಗೆ ಗೌರವ ವಿತ್ತೇನೊ.

" ನನ್ಗೊತ್ತು ಚಂದ್ರು...ನೀನು ಬಹಳ ಮೃದು...ನಾಣಿಯಂ ಥವರಿಂದಾನೆ ನಮಗೆ ಆಪತ್ತು ಬರೋದು. ಆ ನನ್ಮಕ್ಳು, ಒಂದು ನೋಡಿದರೆ ಕೂಲಿಕಾರರೂ ಅಲ್ಲ-ಈಚೆಗೆ ನಮ್ಮವರೂ ಅಲ್ಲ. ಈ ವಿದ್ಯಾವಂತ ಬಡ ಮಧ್ಯಮವರ್ಗ... ನಾನ್ಹೇಳ್ತೀನಿ ಚಂದ್ರೂ- ಈ ಲೋಕ್ದಲ್ಲಿ ಇರ್ರ್ಬೇಕಾದ್ದು ಎರಡೇ ವರ್ಗ: ನಮ್ಮದು-ಅವರದು. ನಡುವೆ ಮಧ್ಯಮವರ್ಗಾಂತಿರೋದರಲ್ಲಿ ಅರ್ಥವಿಲ್ಲ...."

" ನಿನ್ದೆಲ್ಲಾ ಕಟ್ಟು ನಿಟ್ಟಾದ ಸ್ಪಷ್ಟವಾದ ಅಭಿಪ್ರಾಯ ಕಂಠಿ." ನಾನು ಹಾಗೆ ಹೇಳಿದೆ. ಆದರೆ ಹೇಳದ ಒಂದು ವಿಷಯ ವಿತ್ತು. " ನಿನ್ನ ಹಾಗಲ್ಲ ನಾನು. ನನ್ನದು ಅನಿಶ್ಚಯದ ಓಲ ಡುವ ರ್ದುಬಲ ಮನಸ್ಸು-" ಎಂದು ಆತನಿಗೆ ತಿಳಿಸಬೇಕಾ ಗಿತ್ತು. ಆದರೆ ಹಾಗೆಂದು ಮಾತುಗಳಲ್ಲಿ ಹೇಳುವಂತಿರಲಿಲ್ಲ.

ಶಾರದಾಳನ್ನು ಮನೆಯಲ್ಲಿ ಬಿಟ್ಟ ಮೇಲೆ, ನಾವು ನನ್ನ ವಸತಿಗೆ ನಡೆದು ಬಂದೆವು.

" ಏನೇನಿದೆ ನೋಡು ಚಂದ್ರೂ... ಬೀರ್ ನಿಂದ ಹಿಡ್ಡು ಏನಿದ್ದರೂ ಸರಿಯೆ-ಎಲ್ಲಾ ತೆಗೆ."

ವಿಮೋಚನೆ
೨೬೯

ನಾನು ಎಲ್ಲವನ್ನೂ ತೆಗೆದೆ. ಶ್ರೀಕಂಠ ಮಿತಿಮೀರಿ ಕುಡಿದ.

"ಶ್ರೀ ಚೀಯರ್ಸ್...ಸಾಧನಾ ಬೋಸ್‍ಗೆ, ಶಾರದಾ ದೇವಿಗೆ, ಮುನಿಸ್ವಾಮಪ್ನಿಗೆ....ಕೆಂಪು ಬಾವುಟಕ್ಕೆ...ಹಿಕ್..."

ಆ ದಿನ ಅವನು ವಾಪಸು ಹೋಗುವುದು ಸಾಧ್ಯವಿರಲಿಲ್ಲ. ನನ್ನ ಹಾಸಿಗೆಯನ್ನೆ ಎರಡು ಭಾಗಮಾಡಿ, ಮಂಚದ ಮೇಲೆ ಅವ ನನ್ನು ಮಲಗಿಸಿದೆ. ಮಗುವಿನಂತೆ ತೊದಲುತ್ತ ತೊದಲುತ್ತ ನಿದ್ದೆ ಹೋದ ಅವನನ್ನೆ ನೋಡುತ್ತ , ನನ್ನ ಹೃದಯ ಮುದುಡಿಕೊಂಡಿತು.

...ಆತ ಸುಖವಿಲ್ಲದ ಪ್ರಾಣಿ . ಹಣವಿತ್ತು - ಸಿರಿವಂತಿಕೆ ಯಿತ್ತು. ಸ್ಥಾನಮಾನಗಳಿದ್ದುವು. ಅದು ಜೀವನದ ಏಣಿಯಲ್ಲಿ ಮೇಲು ಭಾಗ. ಬಲು ಸುಲಭವಾಗಿ ಅದನ್ನವನು ತಲಪಿದ್ದ.

ನಾನು ಏಣಿಯ ಕೆಳ ಭಾಗದಿಂದ ಬಂದಿದ್ದೆ. ಅಲ್ಲಿ ಹಣವಿರ ಲಿಲ್ಲ- ಸಿರಿವಂತಿಕೆ ಇರಲಿಲ್ಲ. ಸ್ಥಾನಮಾನಗಳಿರಲಿಲ್ಲ. ಸುಖವೂ ಇರಲಿಲ್ಲ. ಜೀವನ ಅಲ್ಲಿ ಅಸಹ್ಯವಾಗಿತ್ತು.

ಆದರೆ ಈ ಮೇಲಿನ ಮಹಡಿಯಲ್ಲೂ ಜೀವನ ಅಸಹ್ಯ ವಾಗಿತ್ತಲ್ಲವೆ ?

ಇದು ಯಾಕೆ ಹೀಗೆ? ಹೀಗೆ ಯಾಕೆ?

ಹಾಗಾದರೆ ಸುಖವೆನ್ನುವುದು ಎಲ್ಲಿತ್ತು ? ಏಣಿಯ ಯಾವ ಹಂತದಲ್ಲಿತ್ತು ? ಸಮಾಜದಲ್ಲಿ ಯಾವನು ಸುಖವಾಗಿದ್ದ ಹಾಗಾದರೆ ?

....ಆ ಸುಖವೆನ್ನುವ ವಸ್ತು ಸಿಗುವುದು ಸಾಧ್ಯವೇ ಇಲ್ಲವೆ ? ನಡುವಿರುಳು ದಾಟಿಯೂ ಬಲು ಹೊತ್ತಾದ ಮೇಲೆ ನನಗೆ ನಿದ್ದೆ ಬಂತು.

ಬೆಳಿಗ್ಗೆ ಎದ್ದು ನಾನು ಬಾಗಿಲು ತೆರೆದಾಗ , ಶ್ರೀಕಂಠನ ಮನೆಯ ಹಿರಿಯ ಆಳು ಮಗ ಹೊರಗೆ ಕುಳಿತಿದ್ದ.

"ಏನೋ ?"

"ಅಮ್ಮಾವ್ರು ಕಳ್ಸವ್ರೆ. ಮೊಗೀಗೆ ಜರ . ಸಾಹೇಬ್ರು ಇದ್ರೆ ತಷ್ಣ ಕರ್ಕೊಂಬಾ ಅಂದ್ರು........"

೨೭೦
ವಿಮೋಚನೆ

"ಓ! ಅಗ್ಲೇ ಎಬ್ಬಿಸ್ಬೇಕಾಗಿತ್ತು."

ಆದರೆ ಹಾಗೆ ಬಾಗಿಲುತಟ್ಟಿ ಎಬ್ಬಿಸುವ ಧೈರ್ರ್ಯ ಅವನಿಗಿರಲಿಲ್ಲ.

ನಾನು ಶ್ರೀಕಂಠನನ್ನು ಕರದೆ.

"ಕಂಠೀ ಕಂಠೀ.........ಮಗೂಗೆ ಮೈ ಚೆನ್ನಾಗಿಲ್ವಂತೆ ಕಣೋ ........ಏಳು, ಏಳು."

ಧಿಗ್ಗನೆದ್ದು ಅವನು ಕಣ್ಣು ಹಿಸಕಿಕೊಳ್ಳುತ್ತಾ ಸುತ್ತಲೂ ನೋಡೆದ. ತಾನು ಎಲ್ಲಿದ್ದೆ ನೆಂಬುದನ್ನೂ ಅಲ್ಲಿದ್ದುದರ ಕಾರಣವನ್ನೂ ಆತ ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು.

"ಯಾರ್ಬಂದಿದಾರೆ?"

"ನಾಗ."
"ನಾಗ! ನಾಗ!"

"ಬಂದೆ ಬುದ್ದಿ" ಎನ್ನುತ ಅವನು ಒಳಬಂದು, ಮತ್ತೊಮ್ಮೆ ಆದೇ ಸಂದೇಶವನ್ನಿತ್ತ.

ನಾವಿಬ್ಬರೂ ಹೊರಬಿದ್ದೆವು. ಹಾದಿಯಲ್ಲಿ ಯಾವ ಟ್ಯಾಕ್ಸಿಯೂ ಸಿಗಲಿಲ್ಲ. ಜಟಕಾ ಮಾಡಿಕೊಂಡು ಮನೆಸೇರಿದೆವು. ಆಳು ನಾಗ ನಮ್ಮನ್ನು ಹಿಂಬಾಲಿಸಿ ಬಂದ, ನಡೆಯುತ್ತ.

ಡಾಕ್ಟರು ಆಗಲೆ ಬಂದಿದ್ದರು. ಮೂರು ವರ್ಷ ದಾಟಿದ್ದ ಪುಟ್ಟ ಹುಡುಗ ಜ್ವರಡದಿಂದ ತಪ್ತನಾಗಿ ಕನವರಿಸುತಿದ್ದ: "ಅಮ್ಮಾ-ಅಪ್ಪಾ

ದಾದಿ ಮುಖ ಬಾಡಿಸಿ ನಿಂತಿದ್ದಳು.

ಶ್ರೀಕಂಠ ರೇಗುತ್ತ ಕೇಳಿದ:

"ಎಷ್ಟೊತ್ನಿಂದ ಬೇಬಿ ಹೀಗಿದಾನೆ?"

"ಅಂತೂ ಸುಖದುಃಖ ವಿಚಾರಿಸ್ತೀರಲ್ಲ!"

"ಶಾರದಾ-ಪ್ರಶ್ನೆಗೆ ಉತ್ತರಕೊದಡು."

"ಕೊಡ್ತೀನಿ. ನಾನು

ರಾತ್ರೆ ವಾಪಸು ಬ್ಂದಾಗಲೇ ಮೈ

ಬೆಚ್ಚಗಿತ್ತು. ನೀವು ಮೇಲಕ್ಕೂ ಬರ್ಲಿಲ್ಲ........"

ಡಾಕ್ಟರೆಂದರು:

" ಮಗು ನೀರ್ನ್ನಲ್ಲಿ ನೆನೆದಿರಬೇಕು."

ತಾಯಿ ಹೇಳಿದಳು :

'"ನಿನ್ನೆ ಮಳೆ ಇರ್ಲಿಲ್ವಲ್ಲ ಡಾಕ್ಟ್ರೇ."

ಆ ಡಾದಿ ಆಗ ಬಿಕ್ಕಿ,ಬಿಕ್ಕಿ, ಅಳುತ್ತ ಎ೦ದಳು:

"ನನ್ತಪ್ಪು........ನ೦ದು.......ನೀವು ಡ್ಯಾನ್ಸಿಗೆ ಹೋದ್ಮೇಲೆ, ನಾನು ಮನೆಗೆ ಹೋಗ್ಬ೦ದೆ. ಬೇಗ್ನೆ ಬ೦ದೆ. ಆದ್ರೆ ಬೇಬಿ ಸ್ನಾನದ ಮನೇಗೆ ಹೋಗಿ ಕೊಳಾಯಿ ತಿರುಗ್ಸಿ, ಸ್ಪ್ರೇ ಸ್ನಾನ ಮಾಡ್ಕೊ೦ಡಿದ್ದ. ಎಷ್ಟೊತ್ತು ನೀರಲ್ಲಿದ್ನೋ...-"

"ಆ!" ಎ೦ದು ಶಾರದಾ ಹಲ್ಲು ಕಡಿದಳು: "ನಾನಿದ್ದಾಗ ಮನೆಗೆ ಹೋಗಿ ಬರ್ಬಾರ್ದ್ದಗಿತ್ತೆ?"

ಡಾಕ್ಟರು ಮಗುವಿನ ಕೊಠಡಿಯಿ೦ದ ನಮ್ಮನ್ನೆಲ್ಲ ಹೊರಹಾಕಿ ದರು

ಚಿಕಿತ್ಸೆ ನಡೆಯಿತು. ಮಗುವಿಗೆ ಕಾಯಿಲೆ, ಆ ದ೦ಪತಿಗಳನ್ನು ಮತ್ತೆ ಒ೦ದುಕೂಡಿಸಿದ೦ತೆ ತೋರಿತು.

....-ಮಗುವಿನ ಕಾಹಿಲೆ ಗುಣವಾಯಿತು. ಗ೦ಡ ಹೆ೦ಡತಿ ಹಿ೦ದಿನ೦ತೆಯೇ ಉತ್ತರ ದಕ್ಷಿಣಗಳಾದರು.

ಅವರ ಜಗಳಗಳೂ ಹೆಚ್ಚುತಿದ್ದವು.

ಕ೦ಠಿ ಕೇಳುತಿದ್ದ,ನೋಯಿಸಿ-ಕೆದಕಿ ಕೇಳುತಿದ್ದ :

" ಏನ್ರೀ ಶಾರದಾ ದೇವಿ,ರಾತ್ರೆ ಒಮ್ಮೊಮ್ಮೆ ನಾನು ಮನೆಗೆ ಬರದೇ ಇದ್ರೇ ಸುಮ್ಮಗಿದೀರಲ್ಲ."

"ವಿಚಾರಣೆ ನಡೆಸ್ಬೇಕೇನು?"

.ಅಲ್ಲ ,ನೀವು ಕೂಡಾ ಎಲ್ಲಾದರೂ ಹೋದರೆ ಬ೦ದರೆ ನಾನೂ ಕೇಳುವ ಹಾಗಿಲ್ವೇನೋ?"

".ಕೇಳೋ ಅಗತ್ಯ ತೋರುತೊ?" ಆಮೇಲೆ ಉದ್ವಿಗ್ನತೆ.

"ಶಾರದಾ ಯಾಕೆ ಹೀಗ್ಮಾತಾಡ್ತೀಯಾ?"

"ಹ್ಯಾಗ್ಮಾತಾಡ್ತೀನಿ?"

"ಡಾಮಿಟ್."

ಇಂಥ ಸಂಭಾಷಣೆಯನ್ನು ನಾನು ಕೇಳುತಿದ್ದೆ. ನನಗದು ಆಭಾಸವಾಗಿತ್ತು. ಬೋರ್ಗಲ್ಲ ಮೇಲೆ ನೀರು ಸುರಿದು ಹರಿದು ಹೋದ ಹಾಗೆ. ಆದರೆ ನಾನು ಕಲ್ಲಾಗಿದ್ದೆನೆ? ಅದು ಸಂದೇಹದ ವಿಷಯ. ಆದರೆ ನನ್ನ ಕಾಲುಗಳು ಮಾತ್ರ ಕೆಸರಿನಲ್ಲಿ ಹೂತು ಹೋಗಿದ್ದ ಹಾಗೆ ಭಾಸವಾಗುತಿತ್ತು.

ಈ ರೀತಿಯ ಜೀವನ ನನಗೆ ಬೇಸರ ಬಂದರೆ ಆಶ್ಚರ್ಯಪಡ ಬೇಕಾದ್ದೇನೂ ಇರಲಿಲ್ಲ. ಆದರೆ ನಾನೇನು ಮಾಡುವುದು ಸಾಧ್ಯ ವಿತ್ತು ? ಮತ್ತೆ ಸಾಯುವ ಬಯಕೆ.....ಏನಾಗಿ ಬಿಟ್ಟೆ ನಾನು!

ಆದರೆ ಬೇಬಿ......ಶ್ರೀಕಂಠ–ಶಾರದೆಯರ ನಡುವೆ ಯಾತನೆ ಗೊಳಗಾಗಿ ಬೆಳೆಯುತಿದ್ದ ಆ ಬೇಬಿ.....ಜೀವನದಲ್ಲಿ ಅತ್ಯುನ್ನತ ವಾದ ಅವಸ್ಥೆಯೊಂದಿದ್ದರೆ ಅದು ಶೈಶವ. ಮಗುತನಕ್ಕಿಂತ ಹಿರಿ ದಾದುದು ಇನ್ನೊಂದಿಲ್ಲ. ಮಕ್ಕಳು ದೇವರಿದ್ದ ಹಾಗೆ ಎನ್ನುವು ದುಂಟು. ದೇವರು ಎಂದರೆ ಇಂಥದೇ ಎಂಬ ಕಲ್ಪನೆ ಹಿಂದೆ ನನ ಗಿತ್ತು, ಈಗ ಅದು ಮಾಸಿಹೋಗಿರುವ ಚಿತ್ರ. ಆದರೆ ಮಕ್ಕಳ ಹಾಗೆ ದೇವರು ಇರುವುದು ನಿಜವಾದರೆ, ನಾನು ದೇವರನ್ನೂ ಪ್ರೀತಿಸುವೆ. ದೇವರೆಂಬವನು ಸೃಸ್ಟಿ ಲಯ ಕರ್ತೃ ಎಂದು ಹೇಳುತ್ತಾರೆ. ಅದು ನಿಜವಾದರೆ, ದೇವರು ಮಕ್ಕಳ ಹಾಗಿರುವುದು ಸಾಧ್ಯವಿಲ್ಲ.

ಹಸುಳೆಯ ಮುಗುಳು ನಗು.....ನಾನು ಅವರ ಬೇಬಿಯನ್ನು ಪ್ರೀತಿಸಿದೆ. ಆವನನ್ನು ನಾನು ಎತ್ತಿ ಮುದ್ದಾಡದ ದಿನವಿರಲಿಲ್ಲ ಆ ಮಗು ನನ್ನನ್ನು " ಮಾಮಾ" ಎಂದು ಕರೆಯುತ್ತಿದ್ದ. ಯಾವ ಮಾವನೋ ಏನೋ ....ಆದರೆ ಆ ಪದ ನನ್ನ ಮತ್ತು ಆತನ ಸಂ ಬಂಧವನ್ನು ಸ್ಧಿರಗೊಳಿಸಿತ್ತು.

ಅವನ ನಾಲ್ಕನೆಯ ವರ್ಷ – ಎಷ್ಟೊಂದು ಕುತೂಹಲಿಯಾಗಿ ಆತ ಬೆಳೆಯುತಿದ್ದ ! ಸಾವಿರ ಪ್ರಶ್ನೆಗಳನ್ನು ಕೇಳುವ ಅಭಾಸ ಅವ ನದು. "ಮಾಮಾ, ನಂಗೆ ನಾಯ್ಮರಿ ಬೇಕು." " ಮಾಮಾ, ಕೂಚ್ಮರಿ ಯಾರು ಮಾಮಾ?" " ಆಕಾಶ್ದಲ್ಲಿ ಸ್ವಿಚ್ಚು ಹಾಕಿ ಉರಿಸೋನು ಯಾರು ಮಾಮಾ?" "ದೇವರು ಉರಿಸ್ತಾನೆ-ಅಂತಾಳಲ್ಲ ಆಯಾ. ದೇವರು ಹ್ಯಾಗಿದಾನೆ ಮಾಮಾ?" "ಜ್ವರ ಬಂದರೆ ಚೆನ್ನಾಗಿರತ್ತೆ ಆಲ್ವಾ? ಬೆಚ್ಚಗೆ ಮಲಕೋಬಹುದು."

ಮಗು ಯಾರದು? ಯಾರ ಮಗ ಈತ? ಚಿರಜವ್ವನೆಯಾಗಿ ಇರಲು ಸರ್ವಪ್ರಯತ್ನ ಮಾಡುತ್ತಿದ್ದ ಶಾರದಾ ಅವನನ್ನು ಹೆಚ್ಚು ಮುದ್ದಾಡುತ್ತಿರಲಿಲ್ಲ. ಶ್ರೀಕಂಠ "ಎಲ್ಲೋ-ಏನೋ-ಯಾಕೋ-" ಎಂದು ದಿನಕ್ಕೊಮ್ಮೆ ಮಗನನ್ನು ಕೇಳಿದರೆ ಕೇಳಿದ, ಬಿಟ್ಟರೆ ಬಿಟ್ಟ. ಆತ ಮಗುವಿನೊಡನೆ ಮಾತನಾಡತೊಡಗಿದಾಗ ಮಾತ್ರ, ಶಾರದಳೂ ಮಾತನಾಡುತಿದ್ದಳು. ಮಗುವನ್ನೆಲ್ಲಿ ಆತ ತನ್ನದಾಗಿ ಮಾಡುವನೋ ಎಂಬ ಶಂಕೆ ಆವಳನ್ನು ಬಾಧಿಸುತ್ತಿದ್ದಿರಬೇಕು.

ಆದರೆ ವಾಸ್ತವವಾಗಿ ಮಗು ಅವರದಾಗಿರಲಿಲ್ಲ. ನನ್ನದಾ ಗಿತ್ತು. ಬೆಳಿಗ್ಗೆ ನಾನು ಬರುವುದು ತಡವಾದರೆ ಬೇಬಿ ನನಗಾಗಿ ಕಾದಿರುತಿದ್ದ. "ಮಾಮಾ ಬಂದ್ಮೇಲೆ ಬೇಫಾಸ್ಟು" ಎನ್ನುತಿದ್ದ. ಆಡುವಾಗಲೂ ಅಷ್ಟೆ; ಉಣ್ಣುವಾಗಲೂ ಅಷ್ಟೆ.

ಅದನ್ನು ಕಂಡು ಶಾರದೆಗೆ ಅಸೂಯೆಯಾಗುತಿತ್ತು.

"ಎಲ್ಲರೂ ಸೇರಿ ಮಗೂನ ಕೆಡಿಸಿದ್ರು," ಎಂದು ಅವಳು ಆಗಾಗ್ಗೆ ಆಕ್ರೋಶಮಾಡುತಿದ್ದಳು. ಆದರೆ ಎಂದೂ ನೇರವಾಗಿ ನನ್ನನ್ನು ಬಯ್ಯುತ್ತಿರಲಿಲ್ಲ. ನನ್ನೊಡನೆ ಮಗುವಿನ ಬಗ್ಗೆ ಮಾತನಾ ಡುತ್ತಿರಲಿಲ್ಲ.

ಪುತ್ರಸಂತಾನವಾಗದೇ ಹೋದರೆ ಮೋಕ್ಷ ಸಿಗುವುದಿಲ್ಲವಂತೆ. ಇನ್ನೊ೦ದು ಲೋಕದ ಯೋಚನೆಯನ್ನೆ೦ದೂ ನಾನು ಮಾಡಿದವನಲ್ಲ. ಈ ಲೋಕದಲ್ಲಿ ಮಾನವನಾಗಿ ಬಾಳಬೇಕೆಂಬುದಷ್ಟೇ ನನಗಿದ್ದ ಆಪೇಕ್ಷೆ ನನ್ನ ಪಾಲಿಗೆ ಅದು ಫಲಿಸದೇ ಹೋದ ಅಪೇಕ್ಷೆ.

ಇನ್ನು ಪುತ್ರ ಸಂತಾನ? ಆಗಲೆ ಹೇಳಿದೆನಲ್ಲ? ಮಕ್ಕಳನ್ನು ನಾನು ಪ್ರೀತಿಸುತಿದ್ದ. ಆದರೆ, 'ವಂಶದ ಕುಡಿ' ಯಾಗಿ ನನ್ನದೊಂದು ಮಗುವಿರಬೇಕೆಂದು ನಾನೆಂದೂ ಬಯಸಲಿಲ್ಲ. ಮುದ್ದಾದ ಎಳೆಯ ಕೈಯನ್ನು ನನ್ನದರಲ್ಲಿಟ್ಟು ಪುಟ್ಟ ಹೆಜ್ಜೆಗಳನ್ನಿಡುತ್ತ ನನ್ನ ಜತೆಯಲ್ಲಿ ನಡೆದು ಬರುವ ಒಂದು ಮಗುವಿದ್ದರಾಯಿತು. ಅದು ಯಾರದಾದರೂ ಸರಿಯೆ. ಅದಕ್ಕಿಂತ ಹೆಚ್ಚು ನನಗೆ ಬೇಕಾಗಿರಲಿಲ್ಲ......

ಯುದ್ಧ ಮುಕ್ತಾಯವಾಗಿತ್ತು ಆಗಲೆ. ಆದರೆ, ಆ ಯುದ್ಧದ ಶನಿ ಸಂತಾನಗಳಾಗಿದ್ದ ಕಳ್ಳಪೇಟೆ, ದಾಸ್ತಾನುಗಾರಿಕೆ, ಸತ್ತಿರಲ್ಲಿಲ್ಲ. ಜನರು ಎಲುಬುಗೂಡುಗಳ ಮೇಲೆ ಹಣದ ಕಟ್ಟಿದವರು, ಕಟ್ಟು ತ್ತಲೇ ಹೋದರು.

ಜನರ ಎಲುಬು ಗೂಡು ಮತ್ತು ಹಣದ ಥೈಲಿ. ಜನರು ಎಂದರೆ ಯಾರು? ಎಲುಬು ಗೂಡುಗಳಂತಹ ಶರೀರಗಳಿದ್ದ ಜನರ ಬಗ್ಗೆ ನನಗೆ ಕನಿಕರವಿತ್ತೆ? ದುರ್ಬಲರನ್ನು ಎಂದೂ ನಾನು ಪ್ರೀತಿಸಿದವ ನಲ್ಲ. ದುರ್ಬಲನಾದ ವ್ಯಕ್ತಿಯೂ ಒಂದೇ - ಸತ್ತೆ ಇಲಿಯೂ ಒಂದೇ. ಆದರೆ, ಒಂದೇ ಸಮನೆ ಇಲಿ ಸತ್ತರೆ ಅಂಟು ಜಾಡ್ಯ ಬರುವುದಲ್ಲವೆ ? ಹಾಗೆಯೇ, ಥೈಲಿಯ ಭಾರದಿಂದ ಎಲುಬು ಗೂಡುಗಳೂ ಪುಡಿ? ಯಾದರೆ?....... ಎಲ್ಲವೂ ದುರಂತವಾಗಿಯೇ ತೋರುತಿತ್ತು - ಎಲ್ಲವೂ.

ಶ್ರೀಕಂಠ ಹೇಳುತ್ತಿದ್ದ:

"ಚಂದ್ರೂ , ನೀನು ನಿರಾಶಾವಾದಿ ಕಣೊ."

ನಿಜವಿದ್ದಿರಬಹುದು. ಆದರೆ ಹಾಗೆ ಹೇಳಿದ ಅವನನ್ನು ಆಶಾ ವಾದಿ ಎನ್ನುವುದು ಸಾಧ್ಯವಿತ್ತೆ ? ಅವನ ಆಶಾವಾದದಿಂದ, ಅವನಿ ಗೊಬ್ಬನಿಗೇ ಲಾಭವಾಗುತ್ತಿತ್ತು-ಇತರರಿಗಲ್ಲ. ಅವನ ದೃಷ್ಟಿಯಲ್ಲಿ ಎಲ್ಲವೂ ಸ್ಪಷ್ಟವಾಗಿತ್ತು : ಈ ಜಗತ್ತು ಸಮರ್ಥರದು ; ಬಾಯಿ ಇದ್ದ ವನೇ ಬದುಕಿದ ; ಹಣ ಸಂಪಾದಿಸಿ ಬಲಾಢ್ಯನಾದವನೇ ಮಾನವ. ಅಲ್ಲಿ ಸಂಧಾನಕ್ಕೆ ಅವಕಾಶವಿರಲಿಲ್ಲ. ರಿಯಾಯತಿಯ ಮಾತಿರಲಿಲ್ಲ. ಎಲ್ಲವೂ ಕಟ್ಟುನಿಟ್ಟಿನ ಏರ್ಪಾಟು. ಒಂದು ಕಡಿತ ಎರಡು ತುಂಡು.

ಹಾಗಿದ್ದೂ ಅವನು ತನ್ನ ಆವರಣದ ಕೈದಿಯಾಗಿದ್ದ. ಬಾರಿ ಬಾರಿಗೂ ಆತೆ ಮಿತಿಮೀರಿ ಕುಡಿದಾಗ ನನಗೆ ವಿಷಾದನೆನಿಸುತಿತ್ತು.

"ಕಂಠಿ, ಒಂದ್ಮಾತು ಹೇಳ್ತೀನಿ. ಕೋಪಿಸ್ಕೋತೀಯಾ?"

"ಯಾರಿಗೂ ಇಲ್ಲದ ಸ್ವಾತಂತ್ರ್ಯ ನಿನಗಿದೆ. ಹೇಳು."

"ಇಂಥ ಕುಡಿತದಿಂದ ಹಿತವಿಲ್ಲ. ನಿನ್ನ ಆರೋಗ್ಯದ ಗತಿ ಏನು? ನಾಳೆ ಏನಾದರೂ ಆದರೆ?"

"ಏನು ಆಗೋದು? ಸುಮ್ನಿರು ಚಂದ್ರೂ........ನಾಳೆಯ ಯೋಚ್ನೆ ನನಗಿಲ್ಲ. ಈ ಪ್ರಪಂಚ್ದಲ್ಲಿ ಇರ್ಬೇಕಾದಷ್ಟು ದಿನ ಜರ್ಬಿನಲ್ಲೇ ಇರ್ತೀನಿ."

ನಾಳೆಯ ಯೋಚನೆ ನನಗೂ ಇರಲಿಲ್ಲ. ನನ್ನ ಆರೋಗ್ಯದ ಬಗೆಗೆ ನಾನೂ ಆಸಕ್ತಿ ವಹಿಸುತಿರಲಿಲ್ಲ. ಆದರೆ ಆ ಜೀವ ಸಂಕಟಪಡು ತಿದ್ದುದನ್ನು ಕಂಡಾಗ ಏನನ್ನಾದರೂ ಹೇಳಬೇಕೆನಿಸುತಿತ್ತು...........

ನನ್ನ ಆರೋಗ್ಯ ವನಜಳ ಪ್ರಕರಣವಾದ ಮೇಲೆ ಆ ಹೊಟ್ಟೆಯ ಬಾಧೆ ನನಗೆ ತಗಲಿರಬೇಕು. ವನಜಳಿಗೂ ಅದಕ್ಕೂ ಸಂಬಂಧವಿತ್ತು ಎಂದರೆ ಯಾರಾದರೂ ನಗಬಹುದು. ಅಂಥದೇನೂ ಇರಲಿಲ್ಲ. ಅದರೆ ಆ ವರೆಗಿನ ನನ್ನ ಜೀವನಕ್ರಮ, ಸಣ್ಣ ಪ್ರಮಾಣದ ಉಡುಗೊರೆ ಯಾಗಿ ಆ ಕರುಳಿನ ಕಾಯಿಲೆಯನ್ನು ನನಗೆ ಕೊಟ್ಟಿತು. ಆ ಮೇಲೆ ಒಂದರ ಬಳಿಕ ಒಂದಾಗಿ ಹಲವು ವರ್ಷಗಳು. ಅಸಲು ಬಡ್ಡಿ ಸೇರಿ, ಬಡ್ಡಿಗೆ ಬಡ್ಡಿಯಾಗಿ, ಕಾಹಿಲೆ ಬೄಹತ್ ರೂಪ ತಾಳುತಿತ್ತು. ನಾನು ಅದನ್ನು ಗಮನಿಸುತಿರಲಿಲ್ಲ. ನನಗೆ ಅದರ ಗೊಡವೆ ಇರಲಿಲ್ಲ.

ಮಿಲಿಟರಿಗೆ ಸಾಮಾನು ಪೂರೈಕೆ ನಿಂತಿತು. ಕಾರಖಾನೆಯಲ್ಲೂ ಒಂದು ಪರಿಮಿತಿಯೊಳಗೆ ಮಾತ್ರ ಲಾಭ ಬರುವುದು ಆರಂಭವಾಯಿತು.

ಅಷ್ಟಿದ್ದರೂ ಅದು ಕಡಿಮೆ ಲಾಭವೇನೂ ಆಗಿರಲಿಲ್ಲ.

..........ಅಂಥ ಒಂದು ದಿನ ಶ್ರೀಕಂಠ ಮತ್ತು ನಾನು ಬಲು ಸಂಭ್ರಮದಿಂದ ಹೊತ್ತು ಕಳೆದೆವು.

ಆ ಸಂಜೆ ಶ್ರೀಕಂಠ ಕೇಳಿದ:

"ಗೊತ್ತಿದೆಯೇನೋ?"

"ಹೂನಪ್ಪಾ, ಪತ್ರಿಕೇಲಿ ಓದಿದೀನಿ."

"ಇವತ್ತು ನಡು ರಾತ್ರೆ ದಾಟಿದ್ಮೇಲೆ ನಾವು ಸ್ವತಂತ್ರರು!"

ಹಿಂದೊಮ್ಮೆ ನಾನು ರಕ್ಶಣೆಕೊಟ್ಟಿದ್ದ ದೇಶಭಕ್ತರ ನೆನಪಾಯಿತು

"ಅವರೆಲ್ಲೊ ಕಂಠಿ, ಆ ದೇಶಭಕ್ತರು?"

"ತಾಳಮ್ಮಾ ,ತಾಳು."

ಕತ್ತಲಾದಮೇಲೆ ನಾವು, 'ಸೈಮನ್ಸ್'ಗೆ ಹೋದೆವು ಎಸ್ಮೀನಾ ಕಾರ್ಖಾನೆಯ ಮಾಲೀಕರ ಮಗನಬ್ಬ ನಮ್ಮನ್ನು ಸೇರಿ ಕೊಂಡ. ತಿಂಡಿ, ಕುಡಿತ, ಧೂಮಪಾನ.... ಕೈ ಕೈ ಹಿಡಿದು ಕುಣಿತ.... ಮೈಗೆ ಮೈತಗುಲಿಸಿ ಕುಣಿತ.

ಆಂಗ್ಲರೂ ನಾವೂ ಅಂದಿನಿಂದ ಮಿತ್ರರು. ಅವರ ಸಂಸ್ಕ್ರತಿ ಯನ್ನು ಒಪ್ಪಿಕೊಳ್ಳುವುದರಲ್ಲಿ ಅಪ್ಪಿಕೊಳ್ಳುವುದರಲ್ಲಿ ತಪ್ಪಿರಲಿಲ್ಲ ಹಾಗೆ ಮಾಡುವುದು ನ್ಯಾಯವಾಗಿತ್ತು. ದೇಶ ಸ್ವತಂತ್ರ್ಯವಾದ ಆನಂ ದೋನ್ಮಾದದಾಲ್ಲಿ ಯಾರದೋ ಬಾಹು ಯಾರದೋ ನಡುವನ್ನು ಬಳಸಿ ದರೆ, ಅದರಲ್ಲಿ ಅನ್ಯಾಯವೇನೂ ಇರಲಿಲ್ಲ

ಯಾರೋ ಕೇಳುತ್ತಿದ್ದರು:

"ಒಬ್ಬರೇ ಬಂದಿದ್ದೀರಲ್ಲ? ಶ್ರೀಮತಿ ಶ್ರೀಕಂಠರು ಕಾಣಿಸ್ತಾ ಇಲ್ಲ!"

ಶ್ರೀಕಂಠ ನನ್ನೆಡೆಗೆ ತಿರುಗಿ ಕೇಳಿದ:

"ಯಾರೋ ಆ ಪ್ರಶ್ನೆ ಕೇಳ್ತಿರೋನು? ಏನಾಗ್ಬೇಕಂತೋ ಅವನ್ಗೆ?"

ನಾನು ವಿನಯದಿಂದ ಉತ್ತರವಿತ್ತೆ:

"ಲೇಡಿ ಶ್ರೀಕಂಠರಿಗೆ ಆರೋಗ್ಯ ಸರಿಯಾಗಿಲ್ಲ ಸಾರ್."

ಸ್ವಲ್ಪ ಹೊತ್ತಾದ ಮೇಲೆ ಶ್ರೀಕಂಠ ಪ್ರಶ್ನಿಸಿದ:

"ನೀನೇನೋ ಹಾಗಂದೆ. ಆದರೆ ಶಾರದಾ ಎಲ್ಲಿಗೆ ಹೋಗಿ ದಾಳೋ ಯಾರಿಗೆ ಗೊತ್ತು?..... ಏನಪ್ಪ ........ ನಮ್ಮವರು ಇಷ್ಟೊತ್ತಿಗೆ ಮನೇಲೇ ಇರ್ತಾರೆ ಅಂತೀಯಾ?"

"ಈ ದಿವಸವೂ ಅದೇ ವಿಷಯ ಚರ್ಚಿಸ್ಬೇಕೆ?"

"ಸರಿ, ಬಿಟ್ಟಡೋಣ ಅದನ್ನ.... ಅಲ್ಲ ಚಂದ್ರೂ, ನಾನು ಇಲ್ಲಿ ಈರೀತಿ ಇರೋದು ಅವಳು ಮಾತ್ರ ಪತಿಭಕ್ತೆ ಪರಾಯಣೆ ಯಾಗಿರ್ಬೇಕೊಂತ ಭಾವಿಸೋದು-ಇದು ಸರಿಯಾ?"

"ನೋಡಪ್ಪಾ ಕಂಠಿ. ಈ ವಿಷಯ ನಿಲ್ಲಿಸ್ದೇ ಇದ್ದರೆ, ಹೊರ ಗ್ಹೋಗಿ ನಿಂತಿರ್ತ್ತಿನಿ."

"ತಪ್ಪಾಯ್ತು."

ನಮ್ಮ ಜತೆಯಲ್ಲಿದ್ದವನು ಅದಾಗಲೇ ಯಾವುದೋ ಮೂಲೆ ಸೇರಿದ್ದ. ಎಂಥೆಂಥ ಜನರಿದ್ದರು ಅಲ್ಲಿ! ಸ್ವಾತಂತ್ರ್ಯದ ಮಂಗಳೋದ ಯವನ್ನು ಇದಿರುನೋಡುತ್ತ ಉನ್ನತ ಅಧಿಕಾರಿಗಳು ಡ್ಯುಟಯ ಮೇಲಿದ್ದರು ನಿಜ. ಆದರೆ ಅವರ ಪತ್ನಿಯರು ಅಲ್ಲಿಗೆ ಬಂದಿದ್ದರು. ನಗರದ ಗಣ್ಯರು-ಸುಸಂಸ್ಕ್ರತರು-ದೊಡ್ದ ಮನುಷ್ಯರು ಅಲ್ಲಿ ದ್ದರು. ಹೇಳಲು ಅಡ್ರೆಸಿದ್ದ ವ್ಯಕ್ತಿಗಳು, ಎರಡೆರಡು ಫೋನ್ ನಂಬ ರಿದ್ದವರು,ಇಂಥ ಮನೆತನದವರೆಂದು ಹೇಳಿಕೊಳ್ಳುವ ಸೌಲಭ್ಯವಿದ್ದ ವರು....... ಅದು ಸಮಾಜದ ಸೌರಭ..........

ಎಂಥ ಸೌರಭ!....... ನನಗೆ ವಾಕರಿಕೆ ಬರುತಿತ್ತು. ಮೂಗು ಮುಚ್ಚಿಕೊಳ್ಳಬೇಕೆನಿಸುತಿತ್ತು.

ಶ್ರೀಕಂಠನನ್ನೆಳೆದುಕೊಂಡು ಬಾಲ್ಕನಿಗೆ ಹೋದೆ. ಹನ್ನೆರಡು ಹೊಡೆಯುವ ಹೊತ್ತು. ಸಿಂಗರಿಸಿದ್ದ ಬೀದಿಗಳು ವಿದ್ಯುದ್ದೀಪಗಳ ಹಾಲು ಬೆಳಕಿನಲ್ಲಿ ಹಗಲಿನಂತೆ ಕಾಣಿಸುತ್ತಿದ್ದವು......... ಆ ಜನ ಜಂಗುಳಿ! ಜನರಿಗೆ ಹುಚ್ಚುಹಿಡಿಯಿತೇನು ಹಾಗಾದರೆ? ಆ ಸಂತೋಷ ಕೋಲಾಹಲ... ಹಾಗಾದರೆ ನಾಳೆಯಿಂದ ನಿಜವಾಗಿಯೂ ಜಗತ್ತು- ನಮ್ಮ ಜಗತ್ತು- ಬದಲಾಗುವುದೆ? ಮಾನವ ಬದಲಾಗುವನೆ? ಶ್ರೀಕಂಠ ಇನ್ನು ನಾರಾಯಣನನ್ನು ಅವಹೇಳನ ಮಾಡಲಾರನೆ?

ಬೆತ್ತದ ಎರಡು ಕುರ್ಚಿಗಳನ್ನು ತರಿಸಿ ನಾವು ಅಲ್ಲಿ ಕುಳಿತೆವು. 'ಸೈಮನ್ಸ್'ನವರು ದೇಶಪ್ರೇಮಿಗಳಾಗಿ ಮಾರ್ಪಟ್ಟಿದ್ದರು...... ಒಂದು ಹಿಂದೀ ಗೀತ..... ಆ ಬಳಿಕ ಒಂದು ಇಂಗ್ಲಿಷ್....... ಗಾಳಿ ತಣ್ಣನೆ ಬೀಸುತಿತ್ತು. ನನ್ನ ಎವೆಗಳು ಮುಚ್ಚಿಕೊಂಡವು. ಕೈ ಬೆರಳುಗಳ ನಡುವೆ ಸಿಗರೇಟು ಉರಿಯುತ್ತಲೇ ಇತ್ತು.....

ಸ್ಫೋಟನವಾದಂತೆ ಸದ್ದು! ನಾನು ಬೆಚ್ಚಿ ಬಿದ್ದೆ. ನಿದ್ದೆ ಹೋ ಗಿದ್ದ ನನಗೆ ಎಚ್ಚರವಾಯಿತು.

"ಕಂಠಿ ! ಏನಾಯ್ತು? ಏನು?"

"ಕುಶಾಲು ತೋಫು ಹಾರಿಸಿದರು ಕಣೋ. ಸ್ವಾತಂತ್ರ್ಯ ಬಂದು ಆಗಲೇ ಒಂದು ನಿಮಿಷವಾಯ್ತು. ಸ್ವಾತಂತ್ರ್ಯ ಬಂದ ಶುಭ ಘಳಿಗೇಲೆ ನಿದ್ದೆ ಹೋದೆಯಲ್ಲೊ ಭೂಪ!"

ನಾನು ಆಕಳಿಸಿದೆ.

"ಬಾ ಚಂದ್ರೂ.........ಡಾನ್ಸಿಂಗ್ ಹಾಲ್ನಲ್ಲಿ ವಂದೇ ಮಾತರಂ ಹಾಡ್ತಿದಾರೆ ಬಾ....."

ನಾನು ಅವನನ್ನು ಹಿಂಬಾಲಿಸಿದೆ.

"ಸಸ್ಯ ಶ್ಯಾಮಲಾ ಮಾತರಂ-ವಂದೇ ಮಾತರಂ...... ........

ನಾವು ಬೀದಿಗಿಳಿದೆವು. ಜನ ಹುಚ್ಚೆದ್ದು ಕುಣಿದಾಡುತಿದ್ದರು. ಅವರೊಡನೆ ಬೆರೆಯಬೇಕೆಂಬ ಆಸೆಯಾಯಿತು ನನಗೆ. ಆ ಪ್ರವಾಹ ದೊಡನೆ ತೇಲಿಹೋಗುವುದೇ ಜೀವನವೋ ಏನೊ! ಜನರ ಅಳುವಿ ನೊಡನೆ ನಗುವಿನೊಡನೆ ಸಹಭಾಗಿಯಾಗುವುದು........ಜನರು ಇದು ಸ್ವಾತಂತ್ರ್ಯವೆಂದು ನಂಬಿ ಸಂತೋಷಪಡುತ್ತಿರುವಾಗ ನಾನೂ ಸಂ ತೋಷ ಪಡಬೇಕು. ಅದು ಕ್ಷೆಣಿಕವಾದರೆ ಕ್ಷಣಿಕವಾಗಲಿ. ತಪ್ಪೇನು ಅದರಲ್ಲಿ?

"ಕಂಠಿ....ಇಲ್ನೋಡು, ಎಷ್ಟೊಂದು ಜನ ಸಂತೋಷ ದಿಂದಿದಾರೆ"

"ಎಲ್ಲಿ?"

"ಈ ಬೀದೀಲಿ"

"ಇವರ್ನ ಜನರೂಂತ ಕರೀತಿಯೇನು?...........ಹುಂ. ಇನ್ನು ಇವರ್ಜತೇಲಿ ಕುಣಿಯೋಣ ಅಂತ ಬೇರೆ ಹೇಳ್ಬೇಡ."

ನನ್ನ ಉಸಿರು ಕಟ್ಟಿಹೋಯಿತು.

"ಚಂದ್ರೂ, ಯಾಕೋ ಮೈಭಾರವಾಗ್ತಿದೆ. ಡ್ರೈವ್ ಮಾಡೋ ಸ್ಠಿತೀಲಿ ಇದೀಯೊ?"

"ಬಾ ಕಂಠಿ.....ಹೋಗೋಣ....ಜನರಿಂದ....ದೂರ

ವಾಗಿ, ನಿರ್ಜನ ಬೀದಿ ಇದ್ದರೆ ಆ ಹಾದೀಲಿ,ಹೊರಟು ಹೋಗೋಣ."

"ಎಲ್ಲಿದೆ ಕಾರು?"

"ಅಲ್ಲೇ ನಿಂತಿದೆ. ಮನೆಗೆ ತಾನೆ?"

"ನಮ್ಮನೇಗಲ್ಲ. ಶಾರದಾ ನೆನಪು ಆಗದ ಹಾಗೆ ನಿಮ್ಮನೇಗೆ ಹೋಗೋಣ. ಇದು ಸ್ವಾತಂತ್ರ್ಯದ ರಾತ್ರಿ....ಅಲ್ಲ, ಸ್ವಾತಂತ್ರ್ಯದ ಬೆಳಗು...."

ನಾನು ವ್ಹೀಲಿನ ಬಳಿ ಕುಳಿತೆ. ಅವನು ಹಿಂಬದಿಯಲ್ಲಿ ಉರುಳಿ ಕೊಂಡ.

"ಚಂದ್ರೂ.......ಏನಾದರೂ ಹಾಡೋ ದೊರೆ."

"ಕತ್ತೆಗಳು ಕಾರ್ನ ಅಟ್ಟಿಸ್ಕೊಂಡು ಬರಬಹುದು!"

....ನಾನು ಎಚ್ಚೆತ್ತಿದ್ದೆ;ಆದರೆ ಶ್ರೀಕಂಠ ನಿದ್ದೆ ಹೋಗಿದ್ದ.

....ಇನ್ನೂ ನಾನು ಈ ರಾತ್ರೇ ಎಚ್ಚೆತ್ತೇ ಇದ್ದೇನೆ.ಆದರೆ ಈ ದಿನ ಇಲ್ಲಿಗೆ ಈ ಕಥೆಯನ್ನು ನಿಲ್ಲಿಸಬೇಕು.ದೇಶದ ಇತಿಹಾಸದಲ್ಲಿ ಒಂದು ಅಧ್ಯಾಯ ಮುಗಿಯಿತು.ಆ ದಿನ-ಸ್ವಾತಂತ್ರ್ಯ ಬಂದ ದಿನ. ಅದೊಂದು ಮುಖ್ಯ ಮೈಲಿಗಲ್ಲು.

ನನ್ನ ಜೀವನದಲ್ಲಿ ಸರಿಯಾಗಿ ಅಳತೆ ಮಾಡಿ ಮೈಲುಗಲ್ಲುಗಳನ್ನು ಹಾಕಿಯೇ ಇಲ್ಲ.ಅದು ಸಿಮೆಂಟ್ ಕಾಂಕ್ರೀಟಿನ ನೇರವಾದ ರಸ್ತೆಯಾಗಿರಲೇ ಇಲ್ಲವಲ್ಲ! ಹಾಗಿರುತ್ತ,ಸ್ವಾತಂತ್ರ್ಯ ದಿನದಂದು ನನ್ನ ಜೀವಿತ ವೃತ್ತದ ಒಂದು ಅಧ್ಯಾಯವನ್ನು ನಾನು ಮುಗಿಸಿದರೆ ತಪ್ಪಾಗಲಾರದು-ಅಲ್ಲವೇ?ಯಾರೂ ತಪ್ಪೆಣಿಸಲಾರರು-ಅಲ್ಲವೇ?

ಇನ್ನು ಎರಡು ದಿನಗಳುಳಿದಿವೆ-ನಾಳೆಮತ್ತು ನಾಡದು. ಅನಂತರದ ಅನಂತ ವಿಸ್ತಾರ ಎಷ್ಟೊಂದು ಮೋಹಕವಾಗಿದೆ!

ಕನಸು ಕಾಣುವುದರಲ್ಲಿ ಒಂದು ರೀತಿಯ ಸೊಗಸಿರುತ್ತದೆ. ನಾನು ಬಲ್ಲೆ.ಹಲವರ ಪಾಲಿಗಿರುವ ಭಾಗ್ಯ ಅದೊಂದೇ.

ನಾನು ಮಾತ್ರ ಇನ್ನು,ಬಾರಿ ಬಾರಿಗೂ ಕನಸು ಕಾಣ ವಂತಿಲ್ಲ. ಕನಸು ಬೀಳುವಂತಹ ನಿದ್ದೆಯೂ ನನ್ನ ಪಾಲಿಗೆ ಇನ್ನು ಇರುವಂತಿಲ್ಲ

ನನ್ನ ಜೀವನದ ಕಳೆದ ‌‌ಐದು ವರ್ಷಗಳ ಬಗ್ಗೆ ನಾನು ನಾಳೆ ಬರೆಯಬೇಕು. ಆ ಸ್ಮರಣೆಗಳೊ-ಹಸುರಾಗಿವೆ.ಮುಟ್ಟಿದರೆ ಉದುರುವ ಹಾಗೆ ಮನಸ್ಸನ್ನು ಮುತ್ತಿವೆ.ಅದಕ್ಕೊಂದು ರೂಪ ಕೊಟ್ಟು ಕಾಗದದ ಮೇಲಿಳಿಸಲು ನಾಳೆ ನಾನು ಸಮರ್ಥನಾಗಬೇಕು.

ಆ ಶಕ್ತಿಯನ್ನು ಕೊಡೆಂದು ಯಾರನ್ನಾದರೂ ನಾನು ಪ್ರಾರ್ಥಿ ಸಲೆ?

ಪ್ರಾರ್ಥನೆ ಮತ್ತು ನಾನು...ನಗು ಬರುತ್ತಿದೆ!

ನಮ್ಮ ಜನ,ತಮ್ಮ ಶಕ್ತಿಯಲ್ಲೇ ತಾವು ವಿಶ್ವಾಸವಿಡದೆ, ಹಿಡಿ ದುದು ಮುಟ್ಟಿದ್ದಕ್ಕೆಲ್ಲ ಇನ್ನೊಂದು ಶಕ್ತಿಯಲ್ಲಿ ವಿಶ್ವಾಸವಿಡುತ್ತಿರುವುದ ರಿಂದಲೇ ಹೀಗಾಗಿರುವರೋ ಏನೋ..

ಹೋಗಲಿ ಬಿಡಿ.ನನ್ನ ಅಭಿಪ್ರಾಯಕ್ಕೆನೀವು ಬೆಲೆಕೊಡ ಬೇಕಾದ್ದಿಲ್ಲ.

ಆದರೆ ನನ್ನ ಕತೆಯ ಉಳಿದ ಭಾಗವನ್ನು ನೀವು ತಿಳಿಯಲೇ ಬೇಕು.ಅದು ,ಇನ್ನೂ ಬದುಕಿರುವವನೊಬ್ಬನ ಬಯಕೆ... ನೀವು ಅದನ್ನು ಈಡೇರಿಸುವಿರೆಂದು ನಾನು ಬಲ್ಲೆ.