ವಿಮೋಚನೆ/ಸೋಮವಾರ
...ಸೋಮವಾರ
ಇದೇ ಈಗ ಸೆರೆಮನೆಯ ಪಹರಿ ಹೊಡೆದಿದ್ದಾನೆ. ಮನ ಸಿಲ್ಲದ ಮನಸಿನಿಂದ ಎದ್ದು ಕುಳಿತಿದ್ದೇನೆ. ಏಳದೆ ಹೇಗಿರಲಿ? ಸಿರಿ ವಂತಿಕೆಯ ಸೋಮಾರಿತನ ನನ್ನ ಪಾಲಿಗೆ ಇನ್ನಿಲ್ಲ, ಪಯಣ ಹೊರ ಟಿರುವ ಪ್ರತ್ತಿಕ, ಸೂರ್ಯೋದಯದಲ್ಲೆದ್ದು ಮುಂದಿನ ಮಾರ್ಗ ಕ್ರಮಿಸಲೇ ಬೇಕು. ನಿಯಮ ನಿಷ್ಟೆ ಇದ್ದರೆ ಮಾತ್ರ ಆ ಯಾತ್ರಿಕ, ಹಿಮವತ್ಪರ್ವತವನ್ನೇರಿ ಕೈಲಾಸನಾಥನನ್ನು ಕಾಣಬಲ್ಲ.
ಈ ಒಂದು ವಾರದಲ್ಲಿ ನಾನು ನಿಯಮನಿಷ್ಟೆ ಪಾಲಿಸಿದ್ದೇನೆ— ಹೊತ್ತಿಗೆ ಸರಿಯಾಗಿ ಏಳುವ ಮಟ್ಟಿಗೆ ಹೊತ್ತಾಗುವವರೆಗೂ ಬರೆ ಯುವ ಮಟ್ಟಿಗೆ.
ಹಿಂದಿನ ನನ್ನ ಜೀನನದಲ್ಲಿ ಒಂದು ಸೂತ್ರವಿತ್ತೆ, ಕ್ರಮಬದ್ಧತೆ ಯಿತ್ತೆ? ಹಾಗೆಂದು ಯಾರಾದರೂ ಕೇಳಿದರೆ ನಾನು ಕೊಡಬಹುದಾದ ಉತ್ತರವಿಷ್ಟೆ : "ಇಲ್ಲ, ಇರಲಿಲ್ಲ.” ನಾನು ಈ ಸ್ಪಿತಿಗೆ ಬಂದಿರುವು ದಕ್ಕೆ, ಅಂಥ ಸೂತ್ರ ಕ್ರಮಬದ್ಧತೆ ಇಲ್ಲದೆ ಹೋದುದೂ ಒಂದು ಕಾರಣ
ಇದು ಪ್ರಶಾಂತವಾದ ಪ್ರಾತಃಕಾಲ, ನಿಸರ್ಗದ ಮಾಧುರ್ಯ ವನ್ನು ಸವಿಯಲು ಕವಿ ಹೃದಯ ಬೇಕಂತೆ. ನನಗೆ ಕವಿ ಹೃದಯ ಇದೆಯೋ ಆ ಪರೀಕ್ಷೆಯಾಗಬೇಕಾದರೆ, ಯಾವನಾದ ರೊಬ್ಬ ಕವಿಯನ್ನು ಒರೆಗಲಾಗಿ ಮಾಡಿ ನನ್ನನ್ನು ನಾನದಕ್ಕೆ ತೀಡಿ ನೋಡಬೇಕು! ಅಂತಹ ಬೌದ್ಧಿಕ ಕಸರತ್ತಿಗೆ ನಾನು ಸಿದ್ಧನಿಲ್ಲ ; ಆ ಪಂದ್ಯಾಟಕ್ಕೆ ನನಗೆ ಪುರಸತ್ತಿಲ್ಲ!
ನನಗೆ ಈಗ ಆನಂದದ ಅನುಭವವೂ ಆಗುತ್ತಿದೆ; ನೋವಿನ ಅನುಭವವು ಆಗುತ್ತಿದೆ
ನೋವು ನನ್ನ ಕರುಳಿಗೆ ಸಂಬಂಧಿಸಿದ್ದು. ನಿದ್ದೆ ಕೆಟ್ಟಾಗ ಈ ನೋವು ಕೆರಳುತಿದೆ. ಘಂಟಿಗಟ್ಟಲೆ ಸಹಿಸಲಗದ ವೇದನೆ ಆಗ. ಮೊದಲು, ಅನ್ನಕೋಶವಿಂದ ಆರಂಭವಾಗಿ ಮೈಲುಗಳುದ್ದ ಕರುಳಿನ ದಾರಿಯಲ್ಲಿ ಯವೊದೋ ನೋವಿನ ಸಂಚಾರ. ಆ ಬಳಿಕ ಅತ್ತಿಂದಿತ್ತ ನೋವಿನ ತೀವ್ರ ಗಮನ. ದಿಂಬು ಕಚ್ಚಿಕೊಂಡು ಗೋಳಿಡುತ್ತ ಎಲ್ಲವನ್ನು ಮರೆಯುವ ಯತ್ನ..... ಹೃದಯದ ಮೆದುಳಿನ ನೋವು ಕಿತ್ತಾಟಗಳಿಗೆ, ಕಿರೀಟವಿಡುತ್ತಿದೆ ಈ ಕರುಳು.
ದೇಶಕ್ಕೆ ಸ್ವಾತಂತ್ರೈ ಬಂದಿತ್ತು. ಆದರೆ ನನ್ನ ಜಗತ್ತಿನೊಳಗೆ ನಾನೊಬ್ಬ ಕೈದಿಯಾಗಿಯೇ ಇದ್ದೆ-ನೇರಸ ಜೀವನದ ನೂರು ನಿಬ೯ಂಧಗಳ ಬೇಡಿ ತೊಟ್ಟ ಕೈದಿ.
ನಮ್ಮ ನಾಡಿನಲ್ಲಿನ್ನೂ ಹೊಸ ಬದಲಾವಣೆಯ ನಿಜಸ್ವರೊಪದ ಅರಿವು ಎಲ್ಲರಿಗು ಆಗಿರಿಲಿಲ್ಲ. ಅದಕ್ಕೋಸ್ಕರ ಇನ್ನೊಂದು ಹೋ ರಾಟ ನಡೆಯಿತು-ತ್ರಿವಣ೯ ಧ್ವಜವನ್ನು ಅರಮನೆಯ ಮೇಲೆ ಏರಿ ಸುವ ಹೋರಾಟ... ಆ ಬಳಿಕ ಮಂತ್ರಿಗಳ ಬಂದರು-ಕಾಂಗ್ರೆಸ್ ಮಂತ್ರಿಗಳು.
ತನ್ನ ಕಾರಿನ ಬಾನೆಟಗೊ ಶ್ರೇಕಠ ಮೂರು ಬಣ್ಣದೊಂದು ಬಾವುಟ್ಟ ಹಚ್ಚಿದ. ಅವನ ಕರಖಾನೆಯ ಮೇಲೆ, ಮನೆಯ ಮೇಲೆ, ರೇಷ್ಮಯ ದೊಡ್ಡ ಆಕೃತಿಯ ತ್ರಿವಣ೯ ಧ್ವಜಗಳು ಹಾರಾಡಿದುವು. ಮಗ ಬೇಬಿ ಬಾವುಟ ನೋಡಿ, ಎಲ್ಲ ಮಕ್ಕಳು ಹಾಗೆ ಕೈ ತಟ್ಟ ಕುಣಿದ. ಶ್ರೀಕಂಠನ ಮಾವನ ಮನೆಯಲ್ಲಿ ಸಚಿವ ಸಂಪುಟದ ಗೌರ ವಧ೯ ಭಾರೀ ಭೋಜನ ಕೊಟವೇಪ೯ಟ್ಟಿತು. ಶಾರದಾ ಸಮಧೆ೯ ಯಾಗಿ ಅತ್ತಿಂದಿತ್ತ ಓಡಾಡಿ ಏಪಾ೯ಟುಗಳ ಮೇಲ್ವಿಚಾರಣೆ ವಹಿಸಿ ದಳು. ಮಿಲಿಟರಿಯ ಸಶಸ್ತ್ರ ಹಿರಿಯರನ್ನೇ ತೊಗಿ ನೋಡಿದ್ದ ಶಾರದೆಗೆ, ಅಹಿಂಸೆಯ ಆರಾಧಕರಾದ ಸ್ವದೇಶೀ ಸಚಿವರನ್ನೆಲ್ಲ ಅಳೆಯುವುದು ಕಷ್ಟದ ಕೆಲಸವಾಗಿರಲಿಲ್ಲ.
ಆಮಂತ್ರಿತರನ್ನೆಲ್ಲ ಕ೦ಡು, "ಹೀಗೆ ದಯೆಮಾಡಿಸ್ಬೇಕು" ಎಂದು
ಒಳಗೆ ಕರೆದೊಯ್ದು ಶಾರದೆಯ ವಶಕ್ಕೊಪ್ಪಿಸಿ, ಕೃತಕವಾಗಿ ಬಾರಿ ಬಾರಿಗೂ ಮುಗಳ್ನಕ್ಕು ಕೈ ಜೋಡಿಸಿ ಬೇಸರವಾಗಿ, ಶ್ರೀಕಂಠ
ನನ್ನನ್ನೆಳೆದುಕೊಂಡು ಹೊರಬಂದ.ಅವನ ಮುಖ ಮ್ಲುನವಾಗಿತ್ತು. ಎಲ್ಲಿಗೋ ಓಡುತಿದ್ದ ಅವನ ಮನಸ್ಸನ್ನು ಹಿಡಿದು ತರಲೆಂದು ಕೇಳಿದೆ:
"ಅವನೆಲ್ಲೋ ಆ ಭೂಪ? ಆದಿವ್ಸ ನಮ್ಮನೇಲಿ ಅಡಗಿದ್ದು ಕ್ರಾಂತಿ ಮಾಡ್ದೋನು?"
ತನಗಿಷ್ಟವಿಲ್ಲದೆ ಇದ್ದರೂ ಅನಿವಾರ್ಯವಾಗಿ ಮುಗುಳ್ನಗುತ್ತ ಶ್ರೀಕಂಠ ಉತ್ತರವಿತ್ತ:
"ಆ ದಿವ್ಸವೇ ಹೇಳಿದ್ದೆ- ಅದು ಸಾಮನ್ಯ ಘಟ ಅಲ್ಲಾಂತ. ಆತ ಇನ್ನು ಕೆಂದ್ರದಲ್ಲೇ ಸಚಿವನಾಗ್ತಾನೆ. ಅದಕ್ಕೋಸ್ಕರ ದಿಲ್ಲಿಗೆ ಹೋಗಿದಾನೆ. ಇನ್ನು ನಾವು ದಿಲ್ಲಿಗೆ ಹೋದರೆ, ಉಳ್ಕೊಳ್ಳೋದು ಅವರ್ಮನೇಲೆ!"
ಶ್ರೀಕಂಠನಿಗೆ ಖುಷಿಯಾಗ ಬೇಕೆಂದು ನಾನು ಗಟ್ಟಯಾಗಿ ನಕ್ಕೆ. ಆದರೆ ಆತ ಸತ್ಕಾರ ಕೂಟ ನಡೆಯುತ್ತಲಿದ್ದ ಹಾಲ್‌ನತ್ತ ನೋಡುತ್ತ ಮುಖ ಗಂಟಕ್ಕಿಕೊಂಡು ಗೊಣಗಿದ:
"ಬೆಕ್ಕು! ಬೆಕ್ಕು!"
"ಕಂಠಿ...."
"ನೋಡಿದ್ಯೇನೋ ಚಂದ್ರು ಬೆಕ್ನ? ಬಿಳೇ ಹೊದಿಕೆಯ ಬಿಳೇ
ಬೆಕ್ಕು...."
ಬೆಲೆ ಬಾಳುವ ಬಿಳಿಯ ರೇಷ್ಮೆ ಸೀರೆಯುಟ್ಟು ಶುಭ್ರ ಖಾದಿಯ ವಾತಾವರಣಕ್ಕೆ ಹೊಂದಿಕೆಯಾಗುವಂತೆ ಶಾರದಾ, ಜಗತ್ತೆಲ್ಲವೂ ತನ್ನದೆಂಬ ಆತ್ಮವಿಶ್ವಾಸದಿಂದ ನಗುತ್ತಿದ್ದಳು.
"ನಡಿ ಚಂದ್ರು, ನಾಲ್ಕು ನಿಮಿಷ ಹೊರಗೆ ಹೋಗ್ಬಿಟ್ಟು
ಬರೋಣ."
ಅಳಿಯ ಹೊರ ಹೋದುದು ತಿಳಿದರೆ, ಆ ಮಾವ ಮುನಿದು
ಕೊಳ್ಳಬಹುದು ಆದರೆ ಶ್ರೀಕಂಠನ ಕೊರಗಿಗೆ ಬೇಕಾದ ಔಷಧಿಗಿಂತ, ಮಾವನ ಮುನಿಸು ಮುಖ್ಯವಾಗಿರಲಿಲ್ಲ.
ನಾವು ಬೇಗನೆ ವಾಪಸು ಬಂದೆವು. ಬಂದಾಗ ಸುಪ್ರಸಿದ್ದರು
ಪಿಟೇಲು ಬಾರಿಸುತ್ತಿದ್ದರು.
"ಇನ್ನು ಭಾಷಣ ಕಣೋ ಚಂದ್ರು. ಆಮೇಲೆ ವಂದನಾರ್ಪಣೆ."
ಮಾನ್ಯ ಮಂತ್ರಿಗಳ ಸ್ವರ ಕೇಳಿಸುತಿತ್ತು :
"ಧರ್ಮಸೇವಾಪ್ರಸಕ್ತ ಸದಾಶಿವ ಮೂರ್ತಿಯವರೇ, ಶ್ರೀ
ಮತಿ ಶಾರದಾದೇವಿಯವರೇ, ಶ್ರೀಮಾನ್ ಶ್ರೀಕಂಠಯ್ಯನವರೇ..."
"ಓ!" ಎಂದು ಆಣಕಿಸಿದ ಶ್ರೀಕಂಠ.
ಆಳೊಬ್ಬನು ಓಡಿಬಂದು ಹೇಳಿದ :
"ದೊಡ್ಡಯಜಮಾನ್ರೂ ಚಿಕ್ಕಮ್ಮಣ್ಣಿಯವರೂ ಆಗ್ಲಿಂದ
ಬುದ್ದೀರ್ರ್ನ ಕರೀತನ್ರೆ. ತಾವು ಬರಬೇಕಂತೆ..."
ಮಗನನ್ನು ಮನೆಯಲ್ಲೆ ಬಿಟ್ಟು ಬಂದ್ದಿದ್ದ ಯುವತಿ ಶಾರದಾ
ನಟನೆಯ ಬೆರಗು ನೋಟದಂದ ಮಾತಿನ ಮಳೆ ಸುರಿಸುತಿದ್ದ ಸಚೆವ ರನ್ನೇ ನೋಡುತಿದ್ದಳು. ಪಕ್ಕದಲ್ಲೇ ಒಂದು ಆಸನ ಖಾಲಿಯಾಗಿ
ಕಾದಿತ್ತು ಶ್ರೀಕಂಠನಿಗಾಗಿ."ಬುದ್ದಿಯವರಿಗೆ ಮೈ ಸರಿಯಾಗಿಲ್ವಂತೆ, ಆ ಮೇಲೆ ಬರ್ರ್ತ
ರಂತೆ-ಆಂತ ಹೋಗಿ ಹೇಳಪ್ಪ."
--ಹಾಗೆ ಹೇಳುತ್ತ ಶ್ರೀಕಂಠ, ಮೈ ಸರಿಯಾಗಿಲ್ಲವೆನ್ನುವುದಕ್ಕೆ,
ಸೂಚನೆ ಎಂಬಂತೆ, ಮೆದುಳನ್ನು ತಟ್ತುತಿದ್ದ.
ಪ್ರಶಂಸೆ ಗುಣಗಾನದ ಆ ಬಾಷಣ ಮುಗಿಯುತಿದ್ದಂತೆ ಶಾರದಳೇ
ಆಲ್ಲಿಗೆ ಬಂದಳು-ಬಿರುಗಾಳಿಯ ಹಾಗೆ.
"ಏನಿದು ನಿಮ್ತಮಾಷೆ? ಬನ್ನಿ. ಆಪ್ಪ ಕರೀತಾ ಇದಾನೆ.
ನೀವು ವಂದನಾರ್ಪಣೆ ಮಾಡ್ಬೇಕಂತೆ."
"ತಲೆ ಸಿಡೀತಾ ಇದೆ ಶಾರದಾ."
"ಇದೇ ಈಗ ಬಂತೇನೋ ಕಾಹಿಲೆ?"
"ನೀವೇ ಆರ್ಪಿಸಿ ಶಾರದಾ"
"ನಾನು ?"
"ಯಾಕೆ ? ಮಾತಾಡೋದು ಇದೇ ಮೊದಲಿನ ಸಾರಿಯೇನೂ
ಅಲ್ಲವಲ್ಲ?"
"ನಿಮ್ಮಿಷ್ಟ,"
ಸೂಜಿ ಬಿದ್ದರೂ ಸಪ್ಪಳವಾಗುವಂತಹ ನೀರವತೆಯಲ್ಲಿ ಆ ಕಂಠ
ದಿಂದ ಮಧುರವಾದ ಸ್ವರ ಹೊರಡುತಿತ್ತು. ಅರೆತೆರೆದ ಕಣ್ಣುಗಳಿಂದ, ಶ್ರೀಕಂಠ ಅವಳನ್ನೇ ನೋಡಿದ
ಕಾರ್ಯ ನಿಮಿತ್ತದಿಂದ ಶ್ರೀಕಂಠ ಮುಂಬಯಿಗೆ ಹೋದ.
ಅವನಿಲ್ಲಿದಾಗ ನಾನು ಆ ಮನೆಗೆ ಹೋಗಲು ಇಷ್ಟಪಡಲಿಲ್ಲ.... ಶ್ರೀಕಂಠನ ಹುಡುಗನನ್ನು, ಬೆಳೆಯುತಲಿದ್ದ ನಾಗರಾಜುವನ್ನು, ನೋಡದೆ ಇರುವುದು ಕಷ್ಟವಾಗಿತ್ತು. ಆದರೆ ಬೇರೆ ಹಾದಿ ಇರಲಿಲ್ಲ. ಶ್ರೀಕಂಠನಿಲ್ಲದಾಗ ಶಾರದೆಯನ್ನು ನೋಡುವ ಅಗತ್ಯ ನನಗಿರಲಿಲ್ಲ.
ಒಂದು ಮಧ್ಯಾಹ್ನ ಶ್ರೀಕಂಠನ ಮನೆಯ ಆಳು ಬಂದ-ವರ್ಷ ಗಳ ಹಿಂದೆ ಮಗು ಕಾಯಿಲೆ ಮಲಗಿದ್ದಾಗ ನಮ್ಮ ಮನೆಯಿಂದ ಶ್ರೀಕಂಠ ನನ್ನು ಕರೆದಯ್ಯಲು ಬಂದಿದ್ದನಾಗ.
"ಸ್ವಾಮಿಯೇರು ಪುರಸತ್ತು ಮಡ್ಕೊಂಡು ಬಂಧ್ಹೋಗ್ಬೇ
ಕಂತೆ."
"ಯಾಕೊ ? ಪುಟ್ಬುದ್ಢಿಯೋರಿಗೆ ಮೈ ಚೆನ್ನಾಗಿಲ್ವೇನು?"
ಚೆಂದಾಕೈತೆ........ ಪುಟ್ಬುದ್ಢಿಯೋರೂ ಸ್ವಾಮೆರ್ನ ಕೇಳ್ತಾ
ಅವ್ರೆ."
ಮನಸಿಲ್ಲಿದೆ ಇದ್ದರೂ ನಾನು ಶ್ರೀಕಂಠನ ಮನೆಗೆ ನಡೆದು
ಹೋದೆ. ತನ್ನ ಕೊಠಡಿಗೇ ಬರಹೇಳಿದಳು ಶಾರದ, ಬಾಗಿಲಲ್ಲಿ ನಾನು ನಿಂತಾಗ, ನಿಲುವುಗನ್ನದಡಿಯ ಮುಂದೆ ಕುಳಿತು ಅವಳು ಹೆರಳು ಹಾಕಿ ಕೊಳ್ಳುತಿದ್ದಳು. ಹಿಂತಿರುಗಿ ನೋಡದೆಯೇ,"ಬನ್ನಿ" ಎಂದಳು.
"ಹೊರಗೆ ಕೂತಿರ್ತೀನಿ".
"ಪರವಾಗಿಲ್ಲ. ಯಾಕೆ ಹೀಗೆ ಅಪರಿಚಿತರ ಹಾಗೆ ಮಾಡ್ತೀರಿ?"
"ಹಾಗೇನೂ ಇಲ್ಲವಲ್ಲ.
"ಒಳಗ್ಬನ್ನಿ ಹಾಗಾದರೆ ."
ಅಪ್ಪಣೆ ಕೊಡುವ ಆ ಧ್ವನಿ. ಪ್ರಾಯಶಃ ಬಹಳ ಜನ ಆ
ದ್ವನಿಗೇ ಮರುಳಾಗಿಬೇಕಲ್ಲವೆ? ಆಗಲ ಕಿರಿದಾದ ಕಟ ಭಾಗ, ತುಸು ವಿಶಾಲವೆf ಆದ ಬೆನ್ನು. ಸೆರಗು ಯಾವ ಅಳುಕೂ ಇಲ್ಲದೆ ಬದಿಗೆ ಸರಿಯುತ್ತಿದ್ಡ೦ತೆ, ಅವಳು ಬಾಹುಗಳನ್ನೆತ್ತಿ ಹೆರಳು ಬಿಗಿದುಕೂ೦ಡಳು. ನನ್ನೆದೆಯಲ್ಲಿ ಶೀತಲವಾದ ನಡುಕ ಹುಟ್ಟಿ ಕಣ್ಣುಗಳು ಭಾರವಾವಾದುವು ಕನ್ನಡಿಯಲ್ಲಿ ಆ ಸು೦ದರಿಯ ಮುಖ ಕಾಣಿಸುತಿತ್ತು. ತನ್ನನ್ನು ತಾನೆ ನೋಡುತ್ತ ಅವಳು ಮುಹಿನಿಯ ಹಾಗೆ ಮೂಗುಳ್ನಗುತಿದ್ದಳು.
ನಾನು ನೀಳವಾಗಿ ಉಸಿರೆಳೆದು ಚೇತರಿಸಿಕೊ೦ಡೆ.
"ನಾಗರಾಜು ನಿನ್ನೆ ಮೊನ್ನೆಯೆಲ್ಲಾ ಮಾಮಾ ಎಲ್ಲೀ೦ತ
ಪೀಡಿಸ್ತಲೇ ಇದ್ದ.'
"ಆವನೂಬ್ಬ ಡಾರ್ಲಿ೦ಗ್ ಎಲ್ಲಿ, ನಿದ್ದೆಹೋಗಿದಾನೇನು?"
"ಆದರೆ ನೀವೆ೦ಥವರು? ಡಾರ್ಲಿ೦ಗ್‌ನ ನೋಡೋಕೆ ನೀವೇನೂ
ಬರಲಿಲ್ಲ."
"ಏನೋ ಕೆಲಸವಿತ್ತು."
"ಸುಳ್ಳು ಹೇಳ್ಭೀಡಿ ಚ೦ದ್ರಶೇಖರ್.ನಿಮ್ಮ ಸ್ನೇಹಿತ ಶ್ರೀಕ೦ಠ
ಯ್ಯನವರು ಇರದೇ ಇದ್ದಾಗ ಬರೋಕೆ ಹಿ೦ದೇಟು ಹಾಕಿದಿರಿ. ನಿಜವಾ?"
"ಹಿ೦ದೇಟು ಹಾಕೋ ಪ್ರಶ್ನೆಯಲ್ಲ. ನನ್ನ ಸ್ವಭಾವ ಸ್ವಲ್ಪ
ನಾರ್ಮಲ್ ಅಲ್ಲ ಅನ್ನೋದು ನಿಮಗೆ ಗೊತ್ತಿದೆ ಅತ್ತಿಗೆ."
"ಅತ್ತಿಗೆ--ಚೆನ್ನಾಗಿದೆ ಸಂಬೋಧನೆ. ನಿಮ್ಮನ್ನ ಏನೂಂತ
ಕರೀಬೇಕು, ತಮ್ಮಾ ಅಂತಲೋ, ಅಣ್ಣಾ ಅಂತಲೋ?"
"ನಗಬೇಕು, ಅನಿಸುತ್ತೆ ನಿಮ್ಮ ಮಾತು ಕೇಳಿ.
"ಎಲ್ಲಿ ನಗಿ. ನೋಡ್ತೀನಿ."
ಅವಳು ಸರಕ್ಕನೆ ತಿರುಗಿ ನನ್ನನ್ನು ದಿಟ್ಟಿಸಿದಳು...... ಆ ದಿನ
ಹನ್ನೆರಡು ಹದಿಮೂರು ವರುಷಗಳಿಗೆ ಹಿಂದೆ, ಮಾರ್ಕೆಟಿನ ಬಳಿ ಮದುವೆಯ ಅನಂತರದ ಮೊದಲ ದಿನಗಳ ಹುಡುಗಿ ಶಾರದೆಯನ್ನು ಕಂಡಿದ್ದೆ. ಆಗ ಆಕೆ ಸೀರೆಯ ಸೆರಗು ಸರಿಪಡಿಸಿಕೊಂಡಿದ್ದಳು--- ಏನನ್ನೋ ಬಚ್ಚಿಡಲು ಯತ್ನಿಸಿದಂತೆ. ಕಾರನ್ನು ಒತ್ತಟ್ಟಿಗೆ ಬಿಟ್ಟು, ನಡೆಯುತ್ತ ಹೋಗುವುದು, ಜಟಕಾ-ಬಸ್ಸುಗಳಲ್ಲಿ ಪ್ರಯಾಣ ಬೆಳೆ ಸುವುದು, ಆಗ ಅವರ ಪಾಲಿನ ವಿಹಾರವಾಗಿತ್ತು.....ಈಗ ಶಾರದಾ ಯುವತಿ. ಸೆರಗಿನ ಕಡೆಗೆ ಗಮನವಿರಲಿಲ್ಲ. ಬಚ್ಚಿಡಬೇಕೆಂಬ ಬಯಕೆ ಇರಲಿಲ್ಲ.
ಹತ್ತಾರು ನೆನಪುಗಳು ನನ್ನನ್ನು ಬಾಧಿಸಿದುವು. ಎಷ್ಟು ಸಾರೆ
ಶ್ರೀಕಂಠ ಮಗುವಿನಂತೆ ನನ್ನೊಡನೆ ಶಾರದೆಯ ಬಗ್ಗೆ ಹೃದಯ ಇರಿ ಯುವ ಮಾತನ್ನಾಡಿರಲಿಲ್ಲ! ಆದನ್ನೆಲ್ಲಾ ಎಂದಾದರೂ ನಾನು ಮರೆ ಯುವುದು ಸಾಧ್ಯವಿತ್ತೆ?
ಆಕೆ ಶಾರದೆಯಲ್ಲದೆ ಬೇರೆ ಯಾರಾದರೂ ಆಗಿದ್ದರೆ, ನಾನು
ಪ್ರಾಯಶಃ ಒಲಿದ ಹೆಣ್ಣೆನೆದುರು ಒಪ್ಪಿದ ಗಂಡಾಗುತ್ತಿದ್ದೆನೇನೋ. ಆದರೆ ಇಲ್ಲಿ ಶಾರದೆಯನ್ನು ನೋಡಿದಾಗ ಆಕೆಯ ಹಿಂದೆ ಶ್ರೀಕಂಠ ಕಾಣಿಸುತಿದ್ದ....ಅವರಿಬ್ಬರಿಂದಲೂ ದೂರವಾದ ಬೇಬಿ---ನಾಗರಾಜು ...ಆ ಬಳಿಕ ನನ್ನ ಜೀವನಕ್ಕೇ ಸಂಬಂಧಿಸಿದ ಸಂಭವಗಳು.
ಶಾರದೆಯ ನೋಟವನ್ನು ಇದಿರಿಸಲಿಚ್ಛಿಸದೆ ನಾನೆಂದೆ :
" ಬಂದದ್ಡಕ್ಕೆ ಕಾಫೀನಾದರು ಕೊಡಿ ಅತ್ತಿಗೆ, ಅತಿಥಿ ಸತ್ಕಾರ
ಮಾಡೋಕೂ ತಿಳೀದು ನಿಮಗೆ."
ಸಮಾಧಾನ - ಸಂದೇಹಗಳ ಚಿಹ್ನೆಯೊಂದು ಅವಳ ಮುಖದ
ಮೇಲೆ ಮೂಡಿತು. ವಿಚಾರ ಬದಲಿಸಬೇಕೆಂದು ನಾನು ಹಾಗೆ ಹೇಳಿದ್ದರೆ, ಮತ್ತೂ ಅದೇ ವಿಚಾರಕ್ಕೆ ನಮ್ಮನ್ನು ಆ ಮಾತು ತಂದು ಮುಟ್ಟಿಸಿತ್ತು.
" ನೀವು ಅಲ್ಪ ಸಂತೋಷಿ, ಬರೇ ಕಾಫೀಲೇ ತೃಪ್ತಿ ಪಟ್ಕೋ
ತೀರಿ."
" ಮನುಷ್ಯ ಜೀವಕ್ಕೆ ಇನ್ನೆಷ್ಟು ಬೇಕು ಹೇಳಿ?'
" ನೀವು ಮತ್ತು ನಿಮ್ಮ ಶ್ರೀಕಂಠಯ್ಯ - ಇಬ್ಬರು ಈಗೀಗ
ಹೊರಗೆ ಕುಡಿಯೋದು ಜಾಸ್ತಿಯಾಗಿದೆಯಂತೆ ಹೌದೆ?""ಆಡುವವರ ಬಾಯಿಗೆ ಬೀಗ ಹಾಕೋರು ಯಾರು?"
"ನನ್ನ ವಿಷಯವಾಗಿಯೂ ಕೆಲವರು ಆಡ್ಕೋತಾರೆ, ಅಲ್ವೆ?"
"ಏನೂಂತ?"
"ನನ್ನ ಗುಣ ವರ್ಣನೆ ನಾನೇ ಮಾಡ್ಕೋ ಬೇಕೇನು?"
"ಹೋಗಲಿ ಬಿಡಿ ಅತ್ತಿಗೆ."
"....ನನಗೂ ಕುಡಿತದ ಅಭ್ಯಾಸವಿದೆ ಅಂದರೆ ನಿಮಗೆ ಆಶ್ಚರ್ಯ
ವಾಗುತ್ತೊ?"
"ನನಗೆ ಆಶ್ಚರ್ಯವಾಗೋ ವಿಷಯ ಈ ಪ್ರಪಂಚ್ದಲ್ಲಿ ಇನ್ನೇನೂ
ಉಳಿದಿರೋ ಹಾಗೆ ಕಾಣೆ."
ಕ್ಷಣಕಾಲ ಶಾರದಾ ಸುಮ್ಮನಾದಳು.ಮೇಲು ಹೊದಿಕೆಯನ್ನು
ಸರಿಪಡಿಸಿಕೊಂಡು ಕೊರಳಿನ ಮಂಗಳ ಸೂತ್ರದ ಮೇಲೆ ಕೈಯಾಡಿಸಿ ದಳು.
"ಚಂದ್ರಶೇಖರ್, ನಿಮ್ಮನ್ನ ಇಲ್ಲಿಗೆ ಯಾಕೆ ಕರಸ್ದೆ ಗೊತ್ತೆ?"
"ಇನ್ನೊಬ್ಬರ ಮನಸ್ಸನ್ನು ನಾನು ಹ್ಯಾಗೆ ಊಹಿಸ್ಲಿ?"
"ಸುಳ್ಳಾಡ್ಬೇಡಿ.ನೀವು ಊಹಿಸಿರ್ರ್ತೀರಾ.."
"ಹೋಗಲಿ....ಏನಾಯಿತೀಗ?"
"ಏನೂ ಇಲ್ಲ. ನಿಮ್ಮ ಊಹೆ ಸರಿ...."
"ಏನು?"
"ನೀವು ಅಪ್ಪಟ ಬಂಗಾರವೋ, ರೋಲ್ಡ್ ಗೋಲ್ಡೊ, ಪರೀ
ಕ್ಷಿಸೋಣಾಂತ ಕರೆದೆ."
"ಏನು ಪರೀಕ್ಷೆಯ ಫಲಿತಾಂಶ?"
"ನೀವು ಚಿನ್ನವೇ ಅಲ್ಲ---ಕಲ್ಲು---ಬರಿ ಕಲ್ಲು."
"ಸಂತೋಷ ಅತ್ತಿಗೆ....."
ಅನಿರೀಕ್ಷಿತವಾಗಿ ಶಾರದೆ ಬಿಕ್ಕಿ ಬಿಕ್ಕಿ ಅತ್ತಳು. ಇದು ಸ್ವಲ್ಪ
ವಿಚಿತ್ರವಾಗಿಯೇ ಇತ್ತು.ಅದು ಅಭಿನಯವೆ? ಅಥವಾ---
ಅಷ್ಟರಲ್ಲೆ ಆಕೆ ಚೇತರಿಸಿಕೊಂಡಳು.
"ನಾನು ಅಳೋದಿಲ್ಲ ......ನಾನು ವಿಷಯ ಲಂಪಟಿ ಅಂತ .
ತಿಳಕೊಂಡಿದ್ದಿರಿ ಅಲ್ವೆ ? ......ನಾನು ಅಷ್ಟು ಕೆಟ್ಟವಳಲ್ಲ ಚಂದ್ರ .ಶೇಖರ್....ನಿಮ್ಮ ಸ್ನೇಹಿತ ಶ‍್ರೀಕಂಠ ಗೆ ಹೇಳಿ ನಾನು ಕುಲಟೆ ಅಲ್ಲಾಂತ ಆದರೆ ಇಷ್ಟು ನಿಜ.ನನಗೂ ಅವರಿಗೂ ಹೊಂದಿಕೆ ಯಾಗೋದಿಲ್ಲ.......ಬೇರೆಯಾಗಿ ಹೋಗೋದಕ್ಕೂ ನಾನು ಸಿದ್ಧ ವಿಲ್ಲ .ಬಹುಶಃ; ಅಷ್ಟು ಧೈರ್ಯ ನನಗಿಲ್ಲವೋ ಏನೋ.... ಅದರೇ ಇನ್ನು ನನ್ನ ಹಾದಿಗೆ ನನಗೆ,ಅವರ ಹಾದಿ ಅವರಿಗೆ ."
"ಏನು ಹೇಳಬೇಕೋ ತೋಚೋದಿಲ್ಲ, ಅತ್ತಿಗೆ.".
"ಏನೂ ಹೇಳ‍್ಬೇಡಿ.ಅದೇ ಮೇಲು.ನಾನು ತಪ್ಮಾಡ್ತಿದೀ.
ನೀಂತ ನೀವೇನಾದರೂ ಹಿತವಚನ ಹೇಳೋಕೆ ಬಂದರೆ ಅದರಿಂದ .ಯಾರಿಗೂ ಏನು ಪ್ರಯೋಜನವಾಗೋದಿಲ್ಲ. ನನ್ನ ಮನಸ್ಸು ಕಹಿಯಾಗುತ್ತೆ ಅಷ್ಟೆ."
ಆಕೆ ಕರವಸ್ತ್ರವೆತ್ತಿಕೊಂಡು ಕಣ್ಣೊರೆಸಿಕೊಳ್ಳುತಿದ್ದಂತೆ ನಾಗ.
ರಾಜು ಓಡುತ್ತಾ ಬಂದ.
"ಮಾಮಾ,ಮಾಮಾ......ಎಲ್ಲೋಗಿದ್ದೆ? ಯಾಕ್ಬರ್ಲಿಲ್ಲ?.
ನಂಗ್ಬೇಜಾರಾಗ್ಬಿಟ್ಟಿತ್ತು ಮಾಮಾ.....ನೀನೂ ಅಣ್ಣನ್ಜತೇಲಿ ಬೊಂಬಾಯ್ಗೆ ಹೋದಿಯೇನೋಂತಿದ್ದೆ."
"ಇಲ್ಲ ರಾಜಾ, ನಿನ್ನ ಬಿಟ್ಬುಟ್ಟು ಹೋಗ್ತೀನಾ?".
"ನನ್ನ ಬಿಟ್ಬುಟ್ಟು ನೀನು ಯಾವತ್ತೂ ಹೋಗಲ್ಲ ಅಲ್ವಾ?" "ಹೋಗಲ್ಲ ರಾಜಾ...." ಹುಡುಗ ತಾಯಿಯ ಕಡೆ ತಿರುಗಿ ಹೇಳಿದ:
"ಅಮ್ಮಾ, ಮಾಮಾ ಒಳ್ಳೆಯವನು ಕಣೇ....ಅಮ್ಮಾ...".
"ಅದೇನು ಮರುಳುಮಾಡಿದೀರೋ ಮಗೂನ," ಎಂದಳು .
ಶಾರದೆ ನಗುತ್ತ,"ಹೋಗಪ್ಪ ರಾಜು,ಕಾಫಿ ತಗೋಂಬಾಂತ ಹೇಳು ಆಚಾರ್ರಿಗೆ"
ಮಗು ಹೋಗುತ್ತಲೇ ಶಾರದೆ ಎಂದಳು:.
"ಚಂದ್ರಶೇಖರ್,ನೀವು ಯಾಕೆ ಮದುವೆ ಆಗ್ಬಾರ್ದು? .
ನಗ್ತೀರೇನೋ ಹೀಗೆ ಕೇಳ್ದೇಂತಾ ?"
'ಯಾಕೆ ? ಮದುವೆ ಅದೋರು ಅನುಭವಿಸ್ತಿರೋ ಸುಖ
ನೋಡಿದ್ದು ಸಾಲ್ದೇನು?"
ಆಕೆಯ ಮುಖ ಸ್ವಲ್ಪ ಬಾಡಿತು.
...ದೊಡ್ಡ ಗಂಡಾಂತರದಿಂದ ಪಾರಾಗಿದ್ದೆ. ಆ ಬಳಿಕ ಶಾರದೆ
ನನ್ನೊಡನೆ ಮಾನವಳಾಗಿ ಮಾತನಾಡಿದಳು. ಕಾಫಿ ಬಂತು--- ಕುಡಿದೆವು. ತಾಯಿ, ಮಗನನ್ನು ಮುದ್ದಾಡಿದಳು. ಆದರೆ ನಾಗ ರಾಜನಿಗೆ ಅಂಥ ಮುದ್ದಾಟದ ಅಭ್ಯಾಸವಿರಲಿಲ್ಲ. ಆತ ತಾಯಿಯಿಂದ ತಪ್ಪಿಸಿಕೊಂಡು ನನ್ನೆಡೆಗೆ ಬಂದ.
"ಮೇಷ್ಟ್ರು ಬರ್ಲಿಲ್ವಾ ರಾಜು?"
"ಬರ್ತಾರೆ ಮಾಮ, ಆರು ಘಂಟೆಗೆ."
ಶಾರದೆಯತ್ತ ತಿರುಗಿ ಹೇಳಿದೆ:
"ರಾಜನ್ನ ಇನ್ನು ಸ್ಕೂಲ್ಗೆ ಸೇರಿಸ್ಬೇಕು ಅತ್ತಿಗೆ."
"ಹೌದು, ಸೇರಿಸ್ಬೇಕು....."
ಮತ್ತೆ ಸ್ವಲ್ಪ ಹೊತ್ತಿನಲ್ಲೆ ಹೊರಬಿದ್ದು, ಹಾದಿಯುದ್ದಕ್ಕೂ
ನಡೆದುಹೋದೆ, ನೆನಪುಗಳು ಬೆಂಗಾವಲಿಗೆ ನಿಂತುವು.
ಆ ದಿನ ಶಾರದೆಯನ್ನು ನಾನು "ಅತ್ತಿಗೆ" ಎಂದು ಸಂಬೋಧಿ
ಸಿದ್ದೆ. ಅದು, ಆ ಹೆಸರಿನ ಢಾಲು ಹಿಡಿದು ಆ ಹೆಣ್ಣನ್ನು ದೂರ ವಿಡಲು ನಾನುಮಾಡಿದ ಸಿದ್ಧತೆ....ಆದರೆ ಆಕೆ ಮೇಲೇರಿ ಬರಲಿಲ್ಲ. ಆ 'ಅತ್ತಿಗೆ' ಪದದಿಂದ ಮಾತ್ರ, ಕೊಂಕುತನ ಹೊರಟು ಹೋಯಿತು...ಇನ್ನು ನಾನು ಆಕೆಯನ್ನು ಅತ್ತಿಗೆಯೆಂದೇ ಕರೆಯ ಬೇಕು.
ಹದಿನೈದು ವರ್ಷಗಳಿಗೆ ಹಿಂದೆಯೊಂದು ಜೀವವನ್ನು ನಾನು
"ಅತ್ತಿಗೆ" ಎಂದು ಕರೆದ್ದಿದ್ದೆ. ಆಕೆ ಶೀಲ. ಶೀಲ-ಅಮೀರರ ಆ ಬಾಳ್ವೆಯಲ್ಲಿ ಎಷ್ಟೊಂದು ಅನುನಯವಿತ್ತು--ಅನ್ಯೋನ್ಯ ಅನುರಾಗ ವಿತ್ತು! ಇಷ್ಟು ವರ್ಷಗಳಾದ ಮೇಲೆಯೂ ಅವರನ್ನು ಸ್ಮರಿಸಿ ಕೊಂಡಾಗ, ಆಗಿನ ಅವರ ಚಿತ್ರಗಳೇ ಕಣ್ಣೆದುರು ಕಟ್ಟುತಿದ್ದುವು. ಉಲ್ಲಾಸ ಜೀವಿಗಳಾದ ಆ ಎಳೆಯರ ಬದಲು, ಹದಿನೈದು ವರ್ಷಗಳ ಅನಂತರದ ವಯಸ್ಕ್ರರಾಗಿ ಅವರನ್ನು ಚಿತ್ರಿಸಿಕೊಳ್ಳುವುದು ನನ್ನಿಂದ
ಸಾದ್ಯವಿರಲಿಲ್ಲ.ಆದರೆ ದಿನಗಳುರುಳುತಿದ್ದುವು. ಹಣೆಯ ಮುಂಭಾಗದಲ್ಲಿ
ಕೂದಲು ಸರಿಧಿ ಕಂಡೂ ಕಾಣದಂತೆ ಹಿಂದಕ್ಕೆ ಸರಿಯುತಿತ್ತು. ನೆತ್ತಿಯ ನಡುವಿನಲ್ಲೆ ತನ್ನ ಇರುವಿಕೆಯನ್ನು ಸಂಭ್ರಮದಿಂದ ಸಾರಿ ಹೇಳಿದ ನಾಲ್ಕಾರು ಬಿಳಿ ಕೂದಲು.
....ಕಾಲುಗಳು ಎತ್ತಲೋ ನನ್ನುನ್ನು ಒಯ್ದಿದ್ದುವು. ಮಸಕು
ಮಸಕಾಗಿ ಯಾವುದೋ ನೆನಪಾಗತೊಡಗಿತು ನನಗೆ. ಎಲ್ಲಿಗೆ ಬಂದಿದ್ದೆ ನಾನು? ಎಲ್ಲಿಗೆ?...ಆ ಕಾಲು ದಾರಿ, ಓಣೆ, ಮೂಲೇ ಮನೆ.. ಹುಡುಗನಾಗಿದ್ದಾಗ ಅಲ್ಲಿಗೊಮ್ಮೆ ನಾನು ಬಂದಿದ್ದೆನಲ್ಲವೆ? ಅದು ನಾರಾಯಣ ಮನೆ-ನಾಣಿಯ ಮನೆ! ಆದರೆ ಅದು ಎಷ್ಟೊಂದು ವರ್ಷಗಳ ಹಿಂದಿನ ಮಾತು! ಈಗ ಆತ ಅಲ್ಲಿದಾನೋ ಇಲ್ಲವೋ...
ಶ್ರೀಕಂಠ, ನಾಣಿಯನ್ನು ಕುರಿತು ಆಡಿದ ಕಹಿಮಾತುಗಳು ನೆನ
ಪಾದುವು...ಆಂಫ ವಿದ್ಯಾವಂತ ಬಡಪಾಯಿಗಳಿಂದಲೇ ಅಪಾಯ...
ಅವನನ್ನು ನೋಡಿ ಮಾತನಾಡಬೇಕೆಂಬ ಆಸೆ ಉತ್ಪನ್
ನ ವಾಯಿತು. ಆ ಜಾಗಿಲ ಮುಂದೆ ನಿಂತು ಕರೆವೆ.
"ನಾರಾಯಣ ! ನಾರಾಯಣ!"
ಸ್ವಲ್ಪ ತೆರೆಯಿತು ಮುಚ್ಚಿದ್ದ ಬಾಗಿಲು. ಸೊರಗಿದ ಹೆಣ್ಣು
ಮುಖವೊಂದು ಹೊರಗಿಣಿಕಿ ಹೇಳಿತು:
"ಅವರಿನ್ನೂ ಬಂದಿಲ್ಲ....ಇನ್ನೇನು ಬರೋ ಹೊತ್ತು..."
ನಾನು ಹಿಂತಿರುಗಿದೆ. ಆದರೆ ಸ್ವರ ನನ್ನನ್ನು ಹಿಂಬಾಲಿಸಿ ಕೇಳಿತು.
"ಯಾರು ಬಂದಿದ್ದರೊಂತ ಹೇಳ್ಲಿ.
"ಪರವಾಗಿಲ್ಲಮ್ಮ.....ನಾನೇ. ಆಮೇಲೆ ಬರ್ತಿನಿ."
......ನಾರಾಯಣನ ತಾಯಿ ಕಾಣಿಸಿರಲಿಲ್ಲ.....ಈಕೆ ಸೊಸೆ
ಇರಬಹುದು ಹಾಗಾದರೆ-ನಾಣಿಯ ಹೆಂಡತಿ.ನಾನು ಆ ಓಣಿಯಿ೦ದ ತಿರುಗಿಕೊಳ್ಳತಿದ್ದಾಗಲೇ ನಾರಾಯಣ
ಎದುರು ಬ೦ದ.
"ನಾಣಿ!"
"ಓ! ಬಾರಯ್ಯ ಚಂದ್ರು.........."
ಆವನ ಕಣ್ಣುಗಳು ಕುತೂಹಲದಿ೦ದ ನನ್ನನ್ನು ನೋಡುತಿದ್ದವು
ತುಟಗಳ ಮೇಲೆ ಮುಗುಳು ನಗು ಮೂಡಿತು
ನಾನು ಅವನನ್ನು ಹೆಂಬಾಲಿಸಿದೆ.
"ನಾಣಿ.....ಆ ದಿವಸ ನೀನು ಹೇಳದೆ; ತಾಯಿ ಮಾಡಿದು
ಪ್ಪಿಟ್ಟು ತಿನ್ನೊಕೆ ಬಾ ಅಂದಿದ್ದೆ."
"ಓ! ನಿನ್ನ ಸ್ಮರಣಶಕ್ತಿ ಅದ್ಭುತವಾದ್ದು ಚಂದ್ರು. ಅದಕ್ಕೇ
ಕ್ಲಾಸಲ್ಲಿ ಫಸ್ಟ್ ಬರ್ತಿದ್ದೆ. ಆದರೆ-"
ಮನೆ ಸೇರಿದೆವು. "ಕಮಲಾ" ಎಂದು ಕರೆದ ನಾಣಿ.
ಬಾಗಿಲು ತೆರೆಯಿತು.ಆಕೆ ಅವಸರ ಅವಸರವಾಗಿ ದೀಪ ಹಚ್ಚಿದಳು ಗೋಡೆಗೆ ತಗಲಿಸುವ ಲ್ಯ್ಂಪು ಹೊರಬಂತು.
"ಬಾ ಚಂದ್ರು-ಕೂತ್ಕೊ........ಕುರ್ಚಿ ಇದೆ ಕೂತ್ಕೊ"
ಅಲಿ ಒಂದೇ ಕುರ್ಚಿ ಇತ್ತ-ಬಡಕಲಾದೊಂದು ಮೇಜು.
ನಾನು ಹಾಸಿದ್ದ ಮಾಸಿದ್ದ ಚಾಪೆಯ ಮೇಲೆ ಕುಳಿತೆ.
"ಕಮಲಾ....ಈತ ಚಂದ್ರಶೇಖರಾಂತ-ಬಾಲ್ಯದ ಸಹಪಾಠಿ."
"ನಮಸ್ಥೆ"ಎಂದಳು ಆಕೆ.
"ಇವರು ಯಾರೂಂತ ಗೊತ್ತಾಯ್ತೇನಪಾ?"
ಊಹಿಸ್ಕೊಂಡಿದೀನಿ."
"ಸರಿ.......ಕಮಲಾ, ಒಂದಿಷ್ಟು ಉಪಿಟ್ಟು ಕಾಫಿ ಮಾ
ಡ್ತೀಯಾ?"
ಉತ್ತರ ನೇರವಾಗಿ ಬರಲಿಲ್ಲ .ಆಕೆ ಕರೆದಳು :
"ಇಲ್ಭನಿ..."
"ಪರವಾಗಿಲ್ಲ ಕಮ್ಲು-ಚಂದ್ರು ಎದುರಲ್ಲಿ ಹೇಳ್ಭಹುದು.
" "ಹಾಗಲ್ಲ; ಊಟಕ್ಕಾಗಿದೆ. ನಿಮ್ಮ ಸ್ನೇಹಿತರು ಊಟಕ್ಕೇ
ಏಳಬಹುದಲ್ಲಾ."
ಆ ಬಡ ಸಂಸಾರದಲ್ಲಿ ಅಂತಹ ಆದರಾತಿಥ್ಯ............
"ಅದೇ ಸರಿ......... ಏಳಯ್ಯಾ ಚಂದ್ರೂ-ಕೈಕಾಲು ತೊಳ್ಕೊ
ಳ್ಳೋಣ."
"ನಾನೊಲ್ಲೆ ನಾಣಿ........ರಾತ್ರೆ ನಾನು ಊಟಮಾಡೋಲ್ಲ.
ಹೊಟ್ಟಿ ನೋವು ನಂಗೆ."
ಇಷೊಳ್ಳೆ ಆರೋಗ್ಯ ಕಾಪಾಡ್ಕೊಂಡಿದೀಯಾ. ಊಟ
ಮಾಡೊಲ್ಲ ಅಂದರೆ ನಗ್ತಾರೆ ಯಾರಾದರೂ.'
"ತಮಾಷೆಯಲ್ಲ ನಾಣಿ, ನಿಜವಾಗ್ಲೂ ಮೈ ಚೆನ್ನಾಗಿಲ್ಲ."
"ಹೋಗಲಿ ಬಿಡು ಹಾಗಾದರೆ....ಸರಿ ಕಮ್ಲೂ, ನಿನ್ನ ಕೈ
ಸಾರು-ಅನ್ನ ಉಣ್ಣೋ ಭಾಗ್ಯ ಚಂದ್ರೂಗಿಲ್ಲ.......ಕಾಫೀನೆ ಮಾಡು.'
ನಿಯೋಗದ ಸದಸ್ಯನಾಗಿ ಬಂದಾಗ ತುಟಿ ಬಿಗಿದು ಕುಳಿತಿದ್ದ
ವನು ಇಲ್ಲಿ ಮಾತಿನಮಲ್ಲನಾಗಿದ್ದ. ಆತ ತೊಟ್ಟು ಕಳಚಿದ ತರಗೆಲೆ ಯಾಗಿ ನನಗೆ ತೋರಲಿಲ್ಲ. ಅದು ನಗುವ ಹಸುರೆಲೆಯಾಗಿತ್ತು. ಕ್ಷೀಣವಾದ ತೂತುಗಳಿದ್ದ ಹಸುರೆಲೆ ನಿಜ-ಆದರೆ ಅದು ನಗುತಿತ್ತು.
ಹಿಂದೆ ಬಂದಾಗ ಅವನ ತಾಯಿ ಹುಡುಗನಾದ ನನ್ನನ್ನು
ಕೇಳಿದ್ದರು:
"ಏನಪ್ಪಾ ಮಗು? ಚೆನ್ನಾಗಿದೀಯೇನಪ್ಪಾ?"
ಆ ಮೇಲೆ ಉಪ್ಪಿಟ್ಟು, ಕಾಫಿ. ಆ ತಾಯಿ ಮತ್ತು ನಾಣಿಯ
ತಂದೆ- ಯಾರೂ ಅಲ್ಲಿ ಕಾಣಿಸಲಿಲ್ಲ. ವಯಸ್ಸಾದ ದಂಪತಿಗಳು ಹೊರಹೋಗಿರಬಹುದು ಎಂದುಕೊಂಡೆ.
"ಅಮ್ಮ ಕಾಣಿಸ್ತಾ ಇಲ್ವಲ್ಲಾ ನಾಣಿ."
"ಓ ಹೇಳೋದಕ್ಕೇ ಮರೆತ್ನೇನು?.....ಹುಂ. ಎಲ್ಲಪ್ಪ
ಆ ಸಾರೆ ನಾನು ಕತೆ ನಿಲ್ಲಿಸಿದ್ದು? ತಂಗಿ, ಹೆರಿಗೆಗೆ ಬಂದಿದ್ದೋಳು, ತೀರ್ಕೊಂಡ ವಿಷಯ ಹೇಳಿದ್ನೋ?"
ಕೆಟ್ಟ ಸುದ್ದಿಯನ್ನು ನಿರೀಕ್ಷಿಸುತ್ತ, "ಹೂಂ," ಎಂದೆ.
"ಅದಾದ್ಮೇಲೆ ಈ ಮನೇಲಿ ಎರಡು ಸಾವುಗಳಾದುವು. ಒಂದು
ತಾಯೀದು ಮುತ್ತೈದೆ ಸಾವು........ಆ ಮೇಲೆ ತಂದೇದು.
"ತಾಯಿ ತಂದೆಯರ ಸಾವಿನ ಬಗ್ಗ ಅಷ್ಟೊಂದು ಸರಳವಾಗಿ
ಮಾತನಾಡುತ್ತಿದ್ದ ಅವನ ರೀತಿ ನನ್ನನ್ನು ಚಕಿತಗೊಳಿಸಿತು.
"ನನಗೆ ಗೊತ್ತೇ ಇರಲಿಲ್ಲ, "ಎಂದೆ. ನನ್ನ ಸ್ವರ ಎಲ್ಲೋ
ಒಳಗಿಂದ, ನನಗ ಮಾತ್ರ ಕೇಳಿಸುವಹಾಗೆ,ಕೀಣವಾಗಿ ಹೊರಡುತಿತ್ತು.
"ಎನು ಮಹಾ........ಇರಲಿ ಬಿಡು---ತಂದೆಯ ಪಾಲಿಗಂತೊ
ಸಾವು ವಿಮೋಚ್ನಯೇ ಆಗಿತ್ತಪ್ಪ. ಆ ಗೂರಲು ರೋಗ ಆಷ್ಟೊಂದು ಹಿಂಸೆ ಕೊಡುತ್ತಿತ್ತು ಅವರಿಗೆ ಇನ್ನು ತಾಯಿ ವಿಷಯ....ಬದು ಕಿದ್ದಾಗಲೆಲ್ಲ ಬಡತನದ ಗೋಳು ಕಂಡೋಳು, ಮಗಳನ್ನೊ ಮೊಮ್ಮ ಗುವನ್ನೊ ಕಣ್ಣೆದುರಲ್ಲೇ ಕಳೆದು ಕೊಂಡೋಳು ಸಾಯೋ ಕಾಲಕ್ಕೆ ಹಾಯಾಗಿದ್ಲು.ತಾನು ಮುತ್ತ್ಯದೆಯೊಗಿಯೋ ಸಾಯ್ತಿಧೀನೀಂತ ಅವಳಿಗೆ ಎಷ್ಟೋಂದು ಸಮಾಧಾನವಾಗಿತ್ತು ಗೊತ್ತೆ?........"
"ಹಳೇ ಕಾಲ್ದೋರು ಹಾಗೇ ನಾಣಿ."
"ಅದು ಆ ತಲೆಮಾರಿನ ಕತೆ....ಇನ್ನು ಈ ತಲೆಮಾರಿನ್ಪು.
ತಂದೆ ಸತ್ತು ಈ ಸೆಪ್ಥಂಬರ್‌ಗೆ ಮೂರು ವರ್ಷ್ ಆಯ್ತು. ಅದಕ್ಕೆ ಸ್ವಲ್ಪ ತಿಂಗಳ ಮುಂಚೆ ನನ್ನ ಮದುವೆಯಾಯ್ತು."
"................"
"ವರದಕ್ಷಿಣೆ ಇಲ್ಲದೆ ಮದುವೆ....ಒಲಿದು ಬಂದ ಹೆಣ್ಣು....ಆ
ದಿನ ನಿಯೋಗ ಬಂದಾಗ ನನ್ನ ಪಕ್ದಲ್ಲೇ ಕೊನೆಲಿ ಒಬ್ಬ ನಿಂತಿದ್ದ.... ನೆನಪಿದೆಯೊ? ವಿಶ‍್ವನಾಥ ಅಂತ.ಅವನ್ತಂಗಿ ಕಮಲೂ. ಯೂನಿ ಯನ್ ಗಲಾಟೇಲಿ ಅವನ ಪರಿಚಯ ಆಯ್ತು ....ಆ ಮೇಲೇ ಕಮಲೂ ಪರಿಚಯ....ನಮ್ಜನವೇಂತಿತಟ್ಕೊ.ಹಾಗಾಗಿ ತಂದೆ ಸುಮ್ಮಗಿದ್ದ.... ಅದಕ್ಕಿಂತಲೂ ಮುಖ‍್ಯವಾಗಿ ಅವನ ಅರೈಕೆಗೆ ಸೊಸೆ ಬೇಕಾಗಿದ್ಲು."
"ಅಂತೂ ನೆಮ್ಮದಿಯಾಗಿದೀಯಾ ಆನ್ನು."
"ನೋಧ್ತಾ ಇದೀಯಲ್ಲ...."
ಮಾತಿನ ಒಂದು ಪುಟ ಮುಗಿದಿತ್ತು; ಇನ್ನು ಇನ್ನೊಂಧೂ ಪುಟ.
ಅಲ್ಲ ಚಂದ್ರು. ನಿನ್ನ ವಿಷಯ ಏನಪ್ಪ? ಶ್ರೀಕಂಠೂ
ಜತೇಲಿ ಏನಾದರೂ ಮಾಡ್ಕೊಂಡು ಇದೀಯೋ?"
ಹೂನಪ್ಪಾ."
ನಿಯೋಗ ಬಂದ ಆ ದಿನದಿಂದ ಈ ವರೆಗೆ ಆಗಾಗ್ಗೆ ನಾಣಿಯ
ಬಗ್ಗೆ ಶ್ರೀಕಂಠ ಮತ್ತು ನನ್ನ ನಡುವೆ ನಡೆದುದನ್ನೆಲ್ಲ ಹೇಳಿ ಬಿಡುವ ಮನಸ್ಸಾಯಿತು. ಬಾಲ್ಯದಲಿ ಒಬ್ಬರ ಮೇಲೊಬ್ಬರು ಚಾಡಿ ಹೇಳಿ, ಗುಟ್ಟು-ಯಾರಿಗೂ ಹೇಳ್ಭೇಡ,ಎನ್ನುತ್ತಿರಲಿಲ್ಲವೆ ಹಾಗೆ.... ಆದರೆ ನನ್ನ ಮನಸ್ಸನ್ನು ಯಾವುದೋ ತೆರೆ ಕವಿಯುತಿತತ್ತು.
ಆ ಮೇಲೆ ಆ ಮಾತು ಈ ಮಾತು; ಅವರ ವಿಷಯ, ಇವರ
ವಿಷಯ. ತರಗತಿಯಲ್ಲಿ,ಮಠ್ಠಾಳಾ ಎಂದು ಶಾಪಿಸುತ್ತ ಎಲ್ಲರ ಕಿವಿ ಹಿಂಡಿ ಕೊನೆಗೆ ಎಲ್ಲರ ಪ್ರಕೋಪಕ್ಕೆ ತುತ್ತಾಗಿದ್ದ ಕನ್ನದ ಪಂಡಿ ತರನ್ನು ನೆನೆಸಿಕೊಂಡೆವು. ಆ ಮೇಲೆ ಯವುದೋ ಹುಡುಗಿಗೆ ಪ್ರೇಮ ಪಾಠ ಹೇಳಿ ಕೊಟ್ಟ ಹೊಸಬ ಉಪಧ್ಯಾಯರೊಬ್ಬರ ವಿಷಯ.
ಕಮಲ ತಯಾರಿಸಿದ ಉಪಿಟ್ಟು ಮತ್ತು ಕಾಫಿ........
ನನ್ನ ನಾಲಿಗೆಯ ರುಚಿ ಕೆಟ್ಟಿತ್ತು. ಸಿಕ್ಕಿದ್ದನ್ನು ತಿಂದು, ಸಿಕ್ಕಿ ದ್ದನ್ನು ಕುಡಿದು, ನನ್ನ ನಾಲಿಗೆ ಬೇಸತ್ತು, ಯಾವುದೂ ಬೇಡ- ಎನ್ನುತಿತ್ತು. ಆದರೂ ನಾನು, ನಾಣಿ ಪ್ರೀತಿಯಿಂದ ಮುಂದಿಟ್ಟುದನ್ನು ತಿಂದೆ-ಕುಡಿದೆ.
ಏನಾದರು ಒಳ್ಳೆಯ ಮಾತನ್ನಾಡಬೇಕೆಂದು,ಇದ್ಕೂನೂ
ನಿಮ್ತಾಯಿ ಕೋಡ್ತಿದ್ದ ಉಪ್ಪಿಟ್ಟು ರುಚೀನೇ ಇದೆ ಕಣೋ ಎಂದೆ.
ನಾಣಿ ನಕ್ಕ.
ಕಮಲೂ ನನ್ನ ಪಾಲಿಗೆ ತಾಯಿನೂ ಹೌದು ಚಂದ್ರು........
ನಮ್ಮಿಬ್ಬರ ನಡುವೆ ಸುಖ ಎಂಬ ಪದಕ್ಕೆ ಬಂದಿರೋ ಅರ್ಥವೇ ಬೇರೆ. ಸಾಮಾನ್ಯವಾಗಿ ತುಂಬಿದ ಹೊಟ್ಟೆ, ಒಳ್ಳೆಯ ಬಟ್ಟೆ, ಅಚ್ಚುಕಟ್ಟಾದ ಮನೆ, ಉಳಿತಾಯದ ಹಣ-ಇದೆಲ್ಲಾ ಇದ್ದರೆ 'ಸುಖ'ಅನ್ತಾರೆ. ನಮಗೆ, ಹೃದಯ ತುಂಬಿದ್ದರಾಯ್ತು.ಅದೇ ಸುಖ.
ನನ್ನ ಕಣ್ಣುಗಳು ಆ ದೀಪದ ಬೆಳಕಿನಲ್ಲಿ ಗೋಡೆಯ ಮೇಲೆಲ್ಲ
ಓಡಾಡಿದುವು.
"ಏನ್ನ ನೋಡ್ತೀಯಪ್ಪಾ? ದೇವರು ದಿಂಡರನ್ನೆಲ್ಲಾ ಊಟದ
ಮನೆಗೆ ವರ್ಗಾಯಿಸಿದೀನಿ. ನಮ್ಮ ಪೀಳಿಗೆಯವರ ದೈವ ಭಕ್ತಿ ವಿಷಯ ಗೊತ್ತೇ ಇದೆಯೆಲ್ಲ! ಕಮಲೂನೂ ಅಷ್ಟೆ. ದಿನವೂ ದೇವರಿಗಿಷ್ಟು ದೀಪ ಹಚ್ಚಿಡ್ತಾಳೆ. ಆಲ್ಲಿಗಾಯ್ತು........."
ಕಮಲಾ ನಮ್ಮತ್ತ ಇಣಿಕಿ ನೋಡಿ ಹೇಳಿದಳು:
"ಅವರು ಮನೆಯವರ್ನ ಕರ್ಕೊಂಡುಬರೋಕೆ ಹೇಳೀಂದ್ರೆ."
ಹುಸಿ ಮುನಿಸಿನ ಧ್ವನಿಯಲ್ಲಿ ನಾಣಿ ಉತ್ತರವಿತ್ತ:
"ನೀನೇ ಕೇಳು......ಒಬ್ಳಿಗೇ ಬೇಸರವಾಗಿದೇಂತ ಹೇಳು.
ನಿನ್ಗೆ ಸಹಾಯಾವಾಗ್ಲೀಂತಾದರೂ ಚಂದ್ರು ಮದುವೆ ಮಾಡ್ಕೋ ತಾನೆ."
ಆಕೆ ಹಿತವಾಗಿ ನಕ್ಕಳು........
ಆ ವಾತಾವರಣ ಆಹ್ಲಾದಕರವಾಗಿತ್ತು. ಜೀವನಕ್ಕೆ ಆ ಒಂದು
ಮುಖವೂ ಇದೆ ಅಲ್ಲವೆ?
......ನಾನು ಹೊರಡಲೆಂದು ಎದ್ದು ನಿಂತೆ.
"ಊಟಕ್ಕೇಳು ನಾಣಿ. ಆ ತಾಯೀನ ಕಾಯಿಸ್ಬೇಡ........"
"ಆಗಾಗ್ಗೆ ಬರ್ತಾ ಇರು ಚಂದ್ರು."
"ಹೂನಪ್ಪಾ........ನಾಣಿ,ಶ್ರೀಕಂಠನ್ನ ನೋಡೋಕೆ ಬರ್ತೀ
ಯೇನು?"
"ಖಂಡಿತವಾಗ್ಲೂ ಬರ್ತೀನಿ. ಇನ್ನೊಂದು ನಿಯೋಗ ಯಾವ
ತ್ತಾದರೂ ಬರೋದು ತಪ್ಪಿದ್ದಲ್ಲವಲ್ಲಾ!"
ಇನ್ನೊಂದು ನಿಯೋಗ.......!
ಆ ದಿನ ಇತರರೊಡನೆ ನಾರಾಯಣನನ್ನೂ ಲಾಕಪ್ಪಿನಲ್ಲಿರಿ
ಸಿದ್ದರು. ಆ ವಿಷಯ ಬಂದಾಗಲೆಲ್ಲ "ನಾನು ಲಾಕಪ್ನಲ್ಲಿದ್ದಾಗ" ಎಂದು ಅಭಿಮಾನದಿಂದಲೆ ನಾಣಿ ಮಾತನಾಡುತಿದ್ದ. ನಾನು ಕೂಡಾ ಹಾಗೆ ಹೇಳುವುದು ಸಾಧ್ಯವಿತ್ತೆ?ಲಾಕಪ್ಪಿನಲ್ಲೇನೋ ನಾನಿದ್ದೆ ಮೂರು ಬಾರಿ. ಆದರೆ ಆ ಬಗ‍್ಗೆ ಅಭಿಮಾನದಿಂದ ಹೇಳುವುದು ಸಾಧ್ಯವಿತ್ತೆ?.... ಸ್ವಾತಂತ್ರ್ಯತಂದ ದೇಶಭಕ್ತರು, "ನಾನು ಜೈಲಲ್ಲಿ ದಾಗ" ಎಂದು ಅಭಿಮಾನದಿಂದ ಮಾತನಾಡುವುದು ಸಾಮಾನ್ಯ ವಾಗಿತ್ತು. ಈಗ ಕೆಂಪು ಬಾವುಟದ ಜನ, ಲಾಕಪ್ಪು-ಜೈಲುಗಳ ಬಗ್ಗೆ ಸಲಿಗೆಯಿಂದ ಮಾತನಾಡುತಿದ್ದರು.ಆದರೆ ನಾನು?
ಶ್ರೀಕಂಠ ಬೊಂಬಾಯಿಂದ ಬಂದ. ಮಗ ನಾಗರಾಜನಿಗಾಗಿ
ನೂರಾರು ಆಟದ ಸಾಮಾನುಗಳನ್ನು ಅವನು ತಂದಿದ್ದ. ಶಾರದೆಗಾಗಿ ಸೀರೆಗಳನ್ನೂ ಕೂಡಾ.
ಮುಂಬಯಿ ಪ್ರವಾಸದ ವರದಿ
ಚುಟುಕಾಗಿತ್ತು."ನಿನಗೆ ಆಶ್ಚರ್ಯವಾದೀತು ಚಂದ್ರೂ....ಖುಷಿಯಾಗಿರೋಕೆ
ಪುರಸತ್ತೇ ಆಗ್ಲಿಲ್ಲ."
"ಏನಾದರೂ ವ್ಯಾಪಾರ
ಕುದುರ್ತೇನು?""ಪರವಾಗಿಲ್ಲ. ಇಂಡೊನೇಷ್ಯಾದಿಂದ ಒಂದಷ್ಟು ಆರ್ಡರು
ಬರತ್ತೆ...."
"ಶುಭ ವಾರ್ತೆ."
"ಹೊಸ ಯಂತ್ರಗಳಿಗೆ ಆರ್ಡರು ಬೇರೆ ಕೊಟ್ಟು ಬಂದಿದೀನಿ."
"ಹುಂ."
"ಆದಕ್ಕಿಂತಲೂ ಮುಖ್ಯ ವಿಷಯಾತಂದರೆ, ಬೊಂಬಾಯಿನ
ಎರಡು ಮೂರು ಮಿಲ್ ಗಳವರ ಜತೇಲಿ ನಾನು ಬೆಳೆಸಿರೋ ಸ್ನೆಹ...."
ಅದಾದ ಮೆಲೆ ನಾಲ್ಕಾರು ದಿನ ಎಡೆಬಿಡದ ಚಟುವಟಿಕೆಗಳಲ್ಲಿ
ಶ್ರೀಕಂಠ ನಿರತನಾದ. ಮಿಲ್ ಮಾಲೀಕರ ಸಭೆಗಳು ಜರಗಿದವು.... ಸಭೆಗಳಲ್ಲಿ ತೀರ್ಮಾನಗಳಾದವು.
ಮೂರನೆಯ ಷಿಫ್ಟ್ ನಿಲ್ಲಿಸುವುದು; ಮೂರರಲ್ಲಿ ಎರಡಂಶ
ಕಾಮಿಕರಿಗೆ ಕೆಲಸದಿಂದ ವಜಾ; ಉಳಿದವರ ತುಟ್ಟಿಭತ್ತೆಯಲ್ಲಿ ಕಡಿತ.
....ಆನಂತರದ ಘಟನೆಗಳನ್ನು ನಾನು ನಿರೀಕ್ಷಿಸಿದೆ.
"ಈ ಸಾರೆ ಯೂನಿಯನ್ನ ಪುಡಿಮಾಡ್ತೀವಿ. ಕೆಂಪು ಬಾವುಟ
ಧೂಳೆದ್ದು ಹೋಗುತ್ತೆ...ಇದು ನಮ್ಮ ಚಾನ್ಸ್...ಕೆಲಸಗಾರರನ್ನಕಡಿಮೆ ಮಾಡಿ, ಉಳಿದೋರಿಂದ ಅಷ್ಟೇ ಕೆಲಸ ತಗೋತೀವಿ.........
ನೋಡ್ತಿರು ಚಂದ್ರೂ..."
"ಆದರೆ ಕೆಲಸಗಾರರು ಸುಮ್ನಿರ್ರ್ತಾರೇನಯ್ಯ ಕಂಠಿ?"
"ನಿನ್ಗೆ ಬಂಡವಾಳದ ಎಕನಾಮಿಕ್ಸ್ ಅರ್ಥ ಚಂದ್ರು,
ಯೂನಿಯನ್ ನಲ್ಲಿ ನಮ್ಮವರೇ ಇದ್ದಿದ್ರೆ ನಾವೇ ಹೇಳ್ಸಿ ಮುಷ್ಕರ ಮಾಡಿಸ್ತಿದ್ವಿ."
"ಇರೋ ಸ್ಟಾಕು ಮುಗಿಲೀಂತ ತಾನೆ?"
"ಅದ್ಸರಿ, ಸರಿಯಾಗೇ ಊಹಿಸ್ದೆ."
ಶ್ರೀಕಂಠನ ಆತ್ಮ ವಿಶ್ವಾಸದಿಂದ ನನಗೆ ಕಸಿವಿಸಿಯಾಯಿತು.
ಹೋದ ಸಾರೆಯ ಹಾಗೆ, ಮಣ್ಣಿನ ರಾಶಿಯಿಂದೊಂದು ಬಡಕಲು ಶಕ್ತಿ ಎದ್ದು ನಿಂತು, ಒಮ್ಮೆಲೆ ಬಲಿಷ್ಠವಾಗಿ ಮೈ ಚಾಚಿ, ಜಗತ್ತಿನ ಒಂದೇ ಒಂದಾದ ಪ್ರಬಲ ಶಕ್ತಿಯನ್ನು ಈ ಬಾರಿ ಆಣಕ್ಕಿಸಲಾರದಲ್ಲವೆ? ಆ ಶಕ್ತಿಗೆ ಆಹ್ವಾನಕೊಡಲಾರದಲ್ಲವೆ?
......ಆದರೆ ಈಗ ಸ್ವಾತಂತ್ರ್ಯ ಬಂದಿತ್ತು. ಪ್ರಾಯಶಃ ಶ್ರೀಕಂಠನ
ಎಣೆಕೆ ತಪ್ಪಾಗಿತ್ತೇನೊ. ಬಡವರ ಪಕ್ಷಪಾತಿಯಾದ ಜನತಾ ಸರಕಾರ.....
ಆ ಕರಪತ್ರಗಳ ಭಾಷೆಯೊ!
ಒಂದು ದಿನ ಸೊರಗಿದ ದೇಹದ ವ್ಯಕ್ತಿಯೊಬ್ಬ ಶ್ರೀಕಂಠನನ್ನು
ಹುಡುಕಿಕೊಂಡು ಬಂದ.
"ಯಾರು ಬೇಕು?" ಎಂದು ಕೇಳಿದೆ.
"ನಾನು ಚೆಲುವಯ್ಯ. 'ವಿಶಾಲಭೂಮಿ' ಪತ್ರಿಕೆಯ ಚೀಫ್
ಅಸೋಸಿಯೇಟ್ ಎಡಿಟರ್-ಮುಖ್ಯ ಸಹಾಯಕ ಸಂಪಾದಕ. ಶ್ರೀಕಂಠಯ್ಯನವರು ಬರ ಹೇಳಿದ್ದರು."
"ಕೂತಿರಿ, ಈಗ ಬರ್ರ್ತಾರೆ."
ಆ ಪತ್ರಿಕೋದ್ಯೋಗಿ ಕೆಮ್ಮಿದ.
"ಇಲ್ಲಿ ಸಿಗರೇಟು ಸೇದ್ಬಹುದೆ ಸಾರ್?"
"ಸೇದಿ ಸೇದಿ ಅವಶ್ಯವಾಗಿ ಸೇದಿ"
ಬೂದಿ ಕರಂಡಕವನ್ನು ನಾನು ಅವನ ಬಳಿಗೆ ತಳ್ಳಿದೆ
"ಹಾಗಿದ್ದರೆ ಒಂದು ಸಿಗರೇಟು ಕೊಡಿ"
ಅದೀಗ ಸೊಗಸುಗಾರಿಗೆ!ಆತ ನನ್ನ ಬೆಳ್ಳಿಯ ಕೇಸಿನಿಂದೊಂದು
ಗೊಲ್ದ್ ಫ್ಲೇಕನ್ನೆತ್ತಿಕೊಂಡ. ನಾನೀ ಕಡ್ಡಿಗೀರಿ ಅವನಿಂದ "ಥ್ಯಾಂಕ್ ಯೂ" ಅನ್ನಿಸಿಕೂಂಡೆ. ಸುಟ್ಟುಬೂದಿ ಟ್ರೀಯ ಸುತ್ತಲೂ ಬೀಳುವಂತೆ ಆತ ಸಿಗರೇಟು ಕೊಡವುತಿದ್ದ! ನಾನು ಬಲು ಕುತೂ ಹಲದಿಂದ ಆತನ ಮಾತುಗಳನ್ನು ಕೇಳಲು ಸಿದ್ಧನಾದೆ.
ಆದರೆ ಶ್ರೀಕಂಠ ಕೂಠಡಿಯಿಂದ ಹೊರಬಂದು ನನ್ನರಸ ನಿಮಿಷ
ಗಳಿಗೆ ಭಂಗತಂದ.
ಆ ಚೀಫ್ ಆಸೋಸಿಯೇಟ್ ಎಡಿಟರ್ ಚೆಲುವಯ್ಯ ಎದ್ದು
ನಿಂತು ಬಾಗಿ ವಂದಿಸಿದ.
"ಹಾಗಾದರೆ ಒಪ್ಪಿಗೆಯೋ?"
ಅದು ಶೀಕಂಠನ ಪ್ರಶ್ನೆ. ಅವನ ರೀತಿಯೇ ಹಾಗೆ. ಇತರ
ರೊಡನೆ ಮಿತವಾದ ಮಾತು-ಎಷ್ತು ಬೇಕೋ ಅಷ್ಟು. ಇಲ್ಲಿಯೂ ಅಷ್ಟೆ....ಫ್ಹೊನೆನಲ್ಲಿ ಮೂದಲೀ ಮಾತುಕತೆಯಾಗಿರಬೇಕು. ಆದಾದ ಮೀಲೆ ಒಪ್ಪಿಗೆಯ ಮಾತು ಮಾತ್ರ.
"ಆದರೆ ಐದು ರೂಪಾಯಿ ಸಾಲದು ಸಾರ್."
"ಸಾಕು. ದಿನಕ್ಕೊಂದು ಕರಪತ್ರ. ಹತ್ತು ದಿವಸಗಳಿಗೆ, ಹತ್ತು
ಕರಪತ್ರಗಳಿಗೆ, ಐವತ್ತು ರೂಪಯಿ ಪ್ರಿಂಟಿಗೂ ನಿಮ್ಮ ಪ್ರೆಸ್ನಲ್ಲೆ ಮಾಡಿಸಿ. ಆದರ ದುಡ್ಡು ಬೇರೆ........"
ಚೆಲುವಯ್ಯ ಒಂದು ಕೈಯಿಂದ ಇನ್ನಂದನ್ನು ತೀಡುತ್ತ ನಿಂತ
ಶ್ರೀಕಂಠ ಐದು ರೂಪಾಯಿಯ ನೋಟವನ್ನು ಕೊಟ್ಟುದಾಯಿತು.
"ಸಾಯಂಕಾಲ ಬನ್ನಿ. ಪಾಯಿಂಟ್ಸ್ ಹೇಳ್ತೀನಿ. ಬರಕೂಂಡು.
ಹೋಗಿ."
"ಆಗಲಿ ಸಾರ್. ಹ್ಯಾಂಡ್ ಬಿಲ್ ಯಾರ ಹೆಸರಲ್ಲಿ ಸಾರ್
ಇರ್ಬೇಕು?" "ಕಾರ್ಮಿಕ ಹಿತೈಷಿಗಳು-ಅಂತ ಬರೆದಾಯ್ತು."
"ಐದು ಘಂಟಿಗೆ ಬರಲಾ ಹಾಗಾದರೆ?"
"ಆರು ಘಂಟೆಗೆ ಬನ್ನಿ."
ಚೆಲುವಯ್ಯ ಮತ್ತೊಮ್ಮೆ ಬಾಗಿ ನಮಿಸಿ, ನನಗೂ ಒಂದು ನಮ
ಸ್ಕಾರ ಕೊಟ್ಟು ಹೊರಟ.
"ಹ್ಯಾಗಿದಾನೆ ಚೆಲುವಯ್ಯ? ಎಂಥೆಂಥವರ ಸಂಪಾಧ್ಸಿಟ್ಟಿ
ದೀನಿ ನೋಡು!"
ನಗುತ್ತ ಹೇಳಿದೆ:
"ಚೀಪ್ ಅಸೋಸಿಯೆಟ್ ಎಡಿಟರ್ !"
"ಬಲು ಚೀಪ್.... ಆದರೆ ಬಡ್ಡ್ಡೀಮಗ ಚೆನ್ನಾಗಿ ಬರೀತಾನೆ
ಕಣೋ. ಒಂದೊಂದು ಮಾತು ಹ್ಯಾಗಿರತ್ತೆ ಅಂತೀಯಾ?"
ನಿಜವಾಗಿಯೂ ಅವನ ಶೈಲಿ ಶಕ್ತಿಪೂರ್ಣವಾಗಿತ್ತು. ಆ ಕರ
ಪತ್ರದ ಶಿರೋನಾಮೆ ಗುಡುಗುತಿತ್ತು:
"ಮಾಸ್ಕೋ ಗೂಢಚಾರರ ಫಿತೂರಿ!"
ಆ ಮೇಲೆ ವಿವರಣೆ: ದೇಶವನ್ನು ಪರರಿಗೆ ಮಾರಲೆತ್ನಿಸುವ
ಪಂಚಮದಳದವರು-ಮಹಾ ಧೂರ್ತರು. ಮಾಲೀಕರನ್ನು ಪ್ರತಿಭಟಸು ವುದರ ಮೂಲಕ, ಉಂಡ ಮನೆಗೆ ಎರಡೆಣಿಸುವ ಪಾಪಿಗಳು........
ಇನ್ನೊಂದು ಕರಪತ್ರ ಬಂತು.
"ಎಚ್ಚರ! ಕಾಲರಾ ನಿಮ್ಮ ಮನೆಗೆ ಬಂದು ಬಾಗಿಲು
ತಟ್ಟುತ್ತಿದೆ. ಎಚ್ಚರ!"
ಆ ಬಳಿಕ ಕೂಲಿಕಾರ ಮುಖಂಡರಲ್ಲಿ ಮುಖ್ಯರಾದವರನ್ನು
ಕುರಿತು ವೈಯಕ್ತಿಕ ನಿಂದೆ.
ಒಂದು ಕರ ಪತ್ರ ನಾರಾಯಣನನ್ನು ಬಲಿ ತೆಗೆದುಕೊಂಡಿತ್ತು.
ಅದರಲ್ಲಿ ಅವನ ವಿಷಯವಾಗಿಯೂ ಅವನ ಹೆಂಡತಿ ವಿಷಯವಾಗಿಯೂ ಆವಾಚ್ಯ ಮಾತುಗಳನ್ನು ಬರೆದಿದ್ದರು.
ಅದನ್ನು ಶ್ರೀಕಂಠನಿಗೆ ತೊರಿಸುತ್ತಾ ಕೇಳಿದೆ:
"ಇದಕ್ಕೂ ನೀನೆ ಪಾಯಿಂಟ್ಸ್ ಕೊಟ್ಟಿಯೋ?"
"ನನಗೆಲ್ಲಯ್ಯಾ ಗೊತ್ತು ಅವನ ಖಾಸಗಿ ಜೀವನ ? ಇದೆಲ್ಲಾ
ಮಾಹಿತಿ ತರೋರು ನಮ್ಮ ಗೂಢಾಚಾರರು."
ಸ್ವಲ್ಪ ನೊಂದ ಧ್ವನಿಯಲ್ಲಿ, " ಈ ಹ್ಯಾಂಡ್ ಬಿಲ್ಲಿಗೆ ಅರ್ಥವಿಲ್ಲ ಕಣೋ," ಎಂದೆ.
" ಯಾಕೆ? ನಾಣೀ ವಿಷಯ ಬಂದಿದೆ ಅಂತ ದುಃಖವೋ ? "
"ಹಾಗಲ್ಲ ಕಂಠಿ. ಯಾರೇ ಆಗಲಿ ಈ ರೀತೀನೂ ಬರೀ ಬಹುದೆ ? "
"ಇದೆಲ್ಲಾ ಯುದ್ಧ ಕಣೋ . ಆವರೇ ಹೇಳೋ ಹಾಗೆ ವರ್ಗ ಸಮರ . ಈ ಸಮರದಲ್ಲಿ ಉಪಯೋಗಿಸ್ದೇ ಇರೋ ಅಸ್ಥ್ರವೇ ಇಲ್ಲ."
"ನಾಳೆ ದಿವಸ ಅವರೂ ಹಾಗೇ ಬರೆದರೆ ? ನಿನ್ನ ವ್ಯೆಯಕ್ತಿಕ ಜೀವನಾನ ಬಯಲಿಗೆಳೆದರೆ ?"
"ಹುಂ. ನೊಡ್ಕೊಳ್ಳೋನಣ ಆಗ ."
ನಾನು ಮೌನ ತಳೆದೆ. ಸ್ವಲ್ಪ ಹೊತ್ತಿನಲ್ಲಿ ಶ್ರಿಕಂಠನೇ ಹೇಳಿದ :
"ಚಂದ್ರೂ, ಒಂದ್ವಿಷಯ ಹೇಳ್ತಿನೀ. ಒರಟಾಗಿಯೇ ಹೇಳ್ತೀನಿ. ಈ ಗಲಾಟೆ ಮುಗಿಯೋ ವರೆಗೂ ನೀನು ತಲೆಹರಟೆ ಮಾಡ್ಬಾರ್ದು ."
ವ್ಯಕ್ತಿತ್ವವನ್ನೂ ಕಳೆದುಕೊಂಡು,ಎಲ್ಲವನ್ನೂ ಕಳೆದುಕೊಂಡು, ತೇಜೋಹೀನ ಮಾನವ ನಾನೂ. ಬರಿಯ ನೆರಳು. ಕಾಲಗತಿಗೆ ಅನು ಸಾರವಗಿ ಅದು ಕಿರಿದಾಗಬೆಕು,ಹಿರಿದಾಗಬೇಕು. ನನಗೆ ಅದರ ಮೇಲೆ ಪ್ರಭುತ್ವವಿಲ್ಲ. ನನ್ನ ಸ್ವಂತದ್ವೆನ್ನುವಂಥಾದ್ದು ಏನೂ ಇರಲ್ಲಿಲ.
ಆ ಪತ್ರಿಕದ್ಯೊಗಿಯೂ ಅಷ್ಟೆ. ಅವನ ಸ್ವನ್ಯತದ್ವೆನ್ನುವಂ ಥಾದ್ದು ಎನಿತ್ತು?
ಆ ದಿನ ಅವನು ಬಂದಾಗ ಮಾತು ತೆಗೆದೆ:
"ಕರಪತ್ರವನ್ನು ಸೊಗಸಾಗಿ ಬರೀತೀರಿ ಚೆಲುವಯ್ಯ ಎ.೧."
"ನಿಮಗೆ ಮೆಚ್ಚಿಗೆಯಾಯ್ತು ? ಥ್ಯಾಂಕ್ಸ್."
ಆತನಿಗೊಂದು ಸಿಗರೇಟು ಕೊಟ್ಟೆ.
"ಆ ಹಾ !ಎಂಥಾ ಶೈಲಿ ನಿಮ್ಮದು!"
ಆ ತೆಳು ದೇಹವೂ ಹೊಗಳಿಕೆಗೆ ಬಲಿಯಾಗಿ ಊದಿಕೊಳ್ಳು
ತಿದ್ಡಂತೆ ಕಂಡಿತು. ಅವನ ಗಂಟಲಿನಿಂದ ಮಾತು ಹೊರಡುವುದಕ್ಕೆ ಮುಂಚೆ ನಾನೇ ಮುಂದುವರಿಸಿದೆ.
"ಎಲ್ಲ ಪತ್ರಿಕೋದ್ಯೋಗಿಗಳೂ ಹೀಗೆಯೇ ಇದಾರಾ ಚೆಲುವಯ್ಯ?"
"ಉಂಟೆ ಎಲ್ಲಾದರೂ ? ಇಂಥ ಶೈಲಿ ಬೇರೆ ಯರಿಗಿದೆ?"
"ಶೈಲಿಯಲ್ಲ, ನೀತಿ. ಏನಾದರೂ ಬರ್ಕೊಡೀಂತಂದ್ರೆ ನಿಮ್ಮ ಹಾಗೆ ಎಲ್ಲಾರೂ ಸಹಾಯವಾಗ್ತಾರಾ ?"
"ಇಲ್ಲ ಮಿಸ್ಟರ್ ಇವರೆ. ಅದು ಸಾಧ್ಯವಿಲ್ಲ... ನಮ್ಮಲ್ಲೂ ತಲೆಹರಟೆಯವರಿದ್ದಾರೆ. ತತ್ವ-ವ್ಯಕ್ತಿತ್ವ ಅಂತ ಬುರುಡೆ ಬಿಡೋರು...."
"ಐ ಸೀ"
"ನೀವು ' ವಿಶಾಲ ಭೂಮಿ' ಓದ್ತೀರಿ ತಾನೆ? ಅದರಲ್ಲಿ ' ಕೈ ಕೆಸರು ಬಾಯಿ ಮೊಸರು' ಕಾಲಂ ಬರೆಯೋನು ನಾನೇ."
"ಸಮಂಜಸವಾದ ಶಿರೋನಾಮೆ!"
ಆತನನ್ನು ಇನ್ನೂ ಒಂದಷ್ಟು ಕುಣಿಸಬೇಕೆಂದುಕೊಂಡೆ.
"ಚೆಲುವಯ್ಯ, ಆ ಯೂನಿಯನ್ ನವರು ಬಂದು ಪಾದ ಹಿಡ್ಕೊಂಡು ಬಡ್ಕೊಂಡರೂಂತಿಟ್ಕೊಳ್ಳಿ. ಫ಼ೀಸ್ನ ಪಾದ ಕಾಣ್ಕೆಯಾಗಿ ಅವರೂ ಒಪ್ಪಿಸಿದರೆ, ಕನಿಕರ ಪಟ್ಕೊಂಡು ನೀವೊಂದು ಕರ ಪತ್ರ ಅವರಿಗಾಗಿ ಬರ್ಕೊಡಲ್ವೆ?
"ನೀವು ತಾತ್ವಿಕವಾಗಿ ಕೇಳೋದಾದರೆ,--ಯಾಕಾಗ್ಬಾರ್ದು? ಆದರೆ, ಈ ಸಂದರ್ಭದಲ್ಲಿ ನಾನು ಆ ಕೆಲಸ ಮಾಡೋಕಾಗಲ್ಲ. ವಾದಿ- ಪ್ರತಿವಾದಿಗಳಿಬ್ಬರಿಂದಾನೂ ದುಡ್ದು ಕೀಳೋದು ಧರ್ಮ ವಲ್ಲ."
ಧರ್ಮ ಮತ್ತು ಚೆಲುವಯ್ಯ; ನ್ಯಾಯ ಮತ್ತು ಚೆಲುವಯ್ಯ!
ಆತ ತನ್ನ ಕೈಚೀಲದಿಂದ ಬೇರೆ ಎರಡು ಕರಪತ್ರಗಳನ್ನು ಹೊರ ತೆಗೆದ.
"ಇವುಗಳ್ನ ನೀವು ನೋಡಿಲ್ಲಾಂತ ಕಾಣುತ್ತೆ. ಯೂನಿಯನ್
ನವರು ಹೊರಡ್ಸಿದಾರೆ."
ಆ ಕರಪತ್ರಗಳನ್ನು "ಸತ್ಯದ ಬತ್ತಳಿಕೆಯಿಂದ ಮೊದಲ
ಬಾಣ," "--ಎರಡನೆ ಬಾಣ", ಎಂದು ಕರೆದಿದ್ದರು. ನಗರದ ಮಾಲೀಕರೆಲ್ಲ ಯುದ್ಧ ಕಾಲದಲ್ಲಿ ಬಹಿರಂಗವಾಗಿ ಸಂಪಾದಿಸಿದ ಲಾಭದ ವಿವರಗಳು ಆದರಲ್ಲಿದ್ದುವು. ಅ ಬಳಿಕ ಉಕ್ಕಿನಂಥ ಐಕ್ಯ ಕ್ಕಾಗಿ-- ಸಂಘಟತ ಹೋರಾಟಕ್ಕಾಗಿ--ಕರೆ.
ಯಾರೋ ಅವುಗಳನ್ನು, ಹೃದಯಕ್ಕೆ ನಾಟುವಂತೆ ಬರೆದಿದ್ದರು.
"ಇವು ಹ್ಯಾಗಿವೆ ಚೆಲುವಯ್ಯ?"
"ಹೋಪ್ ಲೆಸ್, ಕೃಷ್ಣರಾಜ್ ಕೈಲಿ ಬರೆಸಿದಾರೆ."
"ಯಾರು ಕೃಷ್ಣರಾಜ?"
"ಅವನೇ ಸಾರ್. ಲೇಖನ, ಕತೆ-ಗಿತೆ, ಬರೆದು ತಾನೂ ಒಬ್ಬ
ಪ್ರಗತಿಶೀಲ ಸಾಹಿತಿ ಅಂತ ಮೆರಿತಾನಲ್ಲ--ಅವನೇ."
ಆಗಾಗ್ಗೆ ಪತ್ರಿಕೆ ಪುಸ್ತಕಗಳನ್ನು ಓದುವ ಅಭ್ಯಾಸವಿದ್ದ ನನಗೆ
ಆ ಹೆಸರು ಅಪರಿಚಿತವಾಗಿರಲಿಲ್ಲ.
"ಯೂನಿಯನ್ ನವರು ಅಂಕೆ--ಸಂಖ್ಯೆ--ವಿವರ ಒದಗಿಸ್ತಾರೆ.
ಆತ ಬರಕೊಡ್ತಾನೆ."
"ಫೀಸು ಗೀಸು ಇವೆಯೋ--?"
"ಇಲ್ವೇ ಇರತ್ಯೆ ಸಾರ್ ...... ನೋಡಿ ಎಷ್ಟು ತುಚ್ಛವಾಗಿ
ಬರೆದಿದಾನೆ -- ಕೈಲಿ ಲೇಖನಿ ಇದೇಂತ, ಬರೆಯೋಕೆ ಕಾಗದ ಇದೇಂತ--"
ಸ್ವತಃ ತಾನೇ ಚರಂಡಿಯಲ್ಲಿ ಬ್ರಷ್ ಅದ್ದಿ ತುಚ್ಛವಾಗಿ ಬರೆಯು
ವವನ ದೃಷ್ಟಿಯಲ್ಲಿ, ಜಗತ್ತೇ ತುಚ್ಛವಾಗಿ ತೋರುತಿತ್ತು. ಕಾಮಾಲೆ ಕಾಹಿಲೆಯವನಿಗೆ ಪ್ರಪಂಚವೆಲ್ಲ ಅರಿಸಿನ-ಅರಿಸಿನವಾದ ಹಾಗೆ.... ಮುಂದೆ ಅವನ ಮಾತು ಕೇಳುವ ಇಷ್ಟ ನನಗಿರಲಿಲ್ಲ---ನಾನೆದ್ದು
ಒಳ ಹೋದೆ. ನಗರದ ಕಾರ್ಮಿಕರನ್ನು ಕಾಡಿದ್ದು, ಬಟ್ಟೆ ಕಾರಖಾನೆಗಳ
ಆರೆಂಟು ಸಾವಿರ ಜನರ ನಿರುದ್ಯೋಗದ ಪ್ರಶ್ನೆ ಮಾತ್ರವಲ್ಲ. ಇತರ ಉದ್ಯಮಗಳಲ್ಲೂ ಮಾಲೀಕರು ಅದೇ ನೀತಿಯನ್ನು ಅನುಸರಿಸಿದ್ದರು. ದುಡಿಯುವವರನ್ನು ಕಡಿಮೆ ಮಾಡುವುದು; ಶ್ರಮಭಾರ ಹೆಚ್ಚಿಸು ವುದು....
ಅದು ಎರಡು ಶಕ್ತಿಗಳೊಳಗೆ ನಡೆದ ಮಲ್ಲ ಯುದ್ಧ. ಎರಡು ಬಣ
ಗಳಲ್ಲೂ ಇದ್ದ ಐಕ್ಯ ಸೋಜಿಗವನ್ನುಂಟು ಮಾಡುತಿತ್ತು. ಮಾಲೀ ಕರು ಪ್ರತಿದಿನವೂ ಸೇರಿ ಮಂತ್ರಾಲೋಚನೆ ನಡೆಸುತಿದ್ದರು. ಕೇರಿ ಕೇರಿ ಗಳಲ್ಲಿ ಕೂಲಿಕಾರರ ಸಭೆಗಳಾಗುತಿದ್ದುವು.
ಶ್ರೀಕಂಠ ಕೇಳಿದ.
"ಯಾಕೋ ಚಂದ್ರೂ ಹೀಗಿದೀಯ?"
"ಮೈಲಿ ಹುಷಾರಾಗಿಲ್ಲ."
ಅದು ನಿಜವಾಗಿತ್ತು. ಕರುಳಿನ ಬಾಧೆ ನನ್ನ ನೆಮ್ಮದಿಯೆಲ್ಲ
ವನ್ನೂ ಕಸಿದುಕೊಂಡಿತ್ತು.
"ಊಟಿಗೆ ಹೋಗಿರ್ತೀಯೇನು ಬೇಕಾದರೆ? ವಿಶ್ರಾಂತಿ
ತಗೋ."
ಒಪ್ಪಿ ಬಿಡೋಣವೆನ್ನಿಸಿತು. ಆದರೆ ಊಟಿಗೆ ಕಳಿಸುವ ಯೋಜ
ನೆಯ ಹಿಂದೆ, ಮುಷ್ಕರದ ಸಮಯದಲ್ಲಿ ನನ್ನನ್ನು ಊರಿನಿಂದ ಹೊರ ಗಿಡುವ ಯತ್ನವನ್ನು ನಾನು ಸುಲಭವಾಗಿ ಕಂಡೆ. ನನ್ನದಲ್ಲದ ಈ ಲೋಕದಿಂದ ದೂರ ಹೋಗಿ ನಾಲ್ಕು ದಿನಗಳಿರಬೇಕು ಎನಿಸುತ್ತಿತ್ತು. ಆದರೂ ಅರ್ಧ ನೋಡಿದೊಂದು ಸ್ವಾರಸ್ಯಪೂರ್ಣ ನಾಟಕವನ್ನು ಅಲ್ಲಿಯೇ ಬಿಟ್ಟೇಳಲು ನನಗೆ ಇಷ್ಟವಾಗಲಿಲ್ಲ.
"ಬೇಡ ಕಂಠಿ. ಇಲ್ಲೇ ಔಷಧಿ ತಗೋತೀನಿ....."
ಶ್ರೀಕಂಠನ ಬಾಹ್ಯ ಜೀವನ ಮತ್ತು ಅಂತರಿಕ ಜೀವನ. ಹೊರಗೆ ಆತ ಮಾಲೀಕರ ಮುಖಂಡನಾಗಿದ್ದ ; ಒಂದು ಶಕ್ತಿಯ ಸೇನಾನಿ ಯಾಗಿದ್ದ ; ಆ ಕೈಗಾರಿಕೋದ್ಯಮದ ವೃದ್ಧರೂ ಕೂಡಾ ಶ್ರೀಕಂಠನ ಕರ್ತವ್ಯದಕ್ಷತೆಯಲ್ಲಿ ನಂಬಿಕೆ ಇಟ್ಟಿದ್ದರು. ಆದರೆ ಮನೆಯೊಳಗೆ? ಅದು ಕಲಹ ......ರೋದನಗಳ ಕುರಕ್ಷೇತ್ರವೇನೋ ಆಗಿರಲಿಲ್ಲ. ಅಲ್ಲಿ ಒಂದು ರೀತಿಯ ಮೌನ ನೆಲೆಸಿರುತಿತ್ತು. ಅತಿಥಿಗಳು ಮನೆಗೆ ಬಂದರೆ ಶಾರದೆ ಮಿಸೆಸ್ ಶ್ರೀಕಂಠಯ್ಯನಾಗುವಳು......ಉಳಿದ ಹೊತ್ತಿನಲ್ಲಿ ಆಕೆ ಏಕಾಂತ ಪ್ರಿಯೆ, ಮಿಸ್ ಶಾರದೆ....
ಈ ಗೊಂದಲದ ನಡುವೆ ಆ ಹುಡುಗನೋ? ಶಾಲೆಗೆ ಹೋಗ
ತೊಡಗಿದ್ದ ನಾಗರಾಜ, ತನ್ನ ಓರಗೆಯವರ ಸ್ನೇಹ ಸಂಪಾದನೆಯಿಂದ ತೃಪ್ತನಾಗುತಿದ್ದ. ಆತ ತನ್ನೊಡನೆ ಮನೆಗೆ ಕರೆದುಕೊಂಡು ಬರುತ್ತಿದ್ದ ಬಡ ಹುಡುಗನನೊಬ್ಬನಿದ್ದ--ಅವನ ಸಹಪಾಠಿ.ಮನೆಯ ಭವ್ಯತೆ ಯನ್ನು ಕಂಡಾಗ ಆ ಹುಡುಗನ ದೃಷ್ಟಿ ಬೆರಗುನೋಟ ಬೀರುತಿತ್ತು, ನಾಗರಾಜನ ಆಟದ ಸಾಮಾನುಗಳನ್ನು ನೋಡಿದಾಗ ಅವನ ಮುಖ ಅರಳುತಿತ್ತು: ತಿಂಡಿವಾಸನೆ ಬಂದಾಗ ಅವನ ನಾಲಿಗೆಯಲ್ಲಿ ನೀ ರೂರಿತ್ತು.
ಚಿತ್ರ ಸಂಗ್ರಾಹಾಲಯದೊಂದು ಕೃತಿಯನ್ನು ನೋಡುವಂತೆ
ನಾನು ಅವನನ್ನು ದಿಟ್ಟಸುತ್ತದ್ದೆ.
ಆ ಹುಡುಗ ಕತ್ತಲಾದಾಗ ಮನೆಗೆ ಹೊರಡುತಿದ್ದ.ನಾಗರಾಜ
ನನ್ನೂ ಆಲೋಕವನ್ನೂ ಬೀಳ್ಕೊಡಬೇಕಾದ ಪ್ರಮೇಯ ಬಂದಾಗ ಆ ಹುಡುಗನ ಕಂಠ ಗದ್ಗದಿತವಾಗುತಿತ್ತು.
ಅವನನ್ನು ಹತ್ತಿರಕ್ಕೆ ಕರೆದು,ಅವನು ಯಾರೆಂದು ಕೇಳುವ
ಆಸೆಯಾಗುತಿತ್ತು ನನಗೆ. ಆದರೆ ಮರುಕ್ಶಣವೆ ಏಕಾಂಗಿಯಾದ ನನ್ನ ದುರವಸ್ಥೆಯನ್ನು ಕಂಡು ಮನಸ್ಸು ನಗುತಿತ್ತು.
ಒಂದು ಸಂಜೆ ಶಾರದೆ ನಾಗರಾಜನಿಗೆ ಎಚ್ಚರಿಕೆ ಕೊಡುತಿದ್ದಳು.
"ಹುಷಾರಾಗಿರಬೇಕಪ್ಪ ರಾಜು. ನಿನ್ನ ಸ್ನೇಹಿತ-ಆ ಬಡ
ಮುಂಡೇದು-ಏನಾದರು ಕದ್ದು ಗಿದ್ದಾನು!"
ಕಂಟ ಬಿರಿಯುವ ಹಾಗೆ ನಾಗರಾಜ ಕೂಗಾಡಿದ:
"ನನ್ನ ಸ್ನೆಹಿತನ್ನ ಹಾಗಂತೀಯಾ! ನಾಚ್ಕೆ ಆಗ್ಬೇಕಮ್ಮ,
ನಿಂಗೆ
"ಏನಂದೆ?"
ತಾಯಿಯ ಸ್ವರ ಕಠೋರವಾಗಿತ್ತು. ಆ ಬಳಿಕ ಹೊಡೆತಗಳು.
ಒಳಗಿನಿಂದ ಶ್ರೀಕಂಠನ ಧ್ವನಿ ಕೇಳಿಸಿತು.
"ಏನೋ ಅದು ಗಲಾಟೆ?"
ನಾನು ಸಮೀಪಹೋಗಿ ನಾಗರಾಜನನ್ನು ಕರೆದುಕೊಳ್ಳುತ್ತ
ಹೇಳಿದೆ.
"ಅತ್ತಿಗೆ, ಮಗೂ ಮನಸ್ನ ಯಾಕಮ್ಮ ನೋಯಿಸ್ತೀರ?"
ಅವಮಾನಗೊಂಡು ಶಾರದೆ ಸಿಡಿನುಡಿದಳು:
"ಸಾಕು ಸುಮ್ನಿರಿ. ನಿಮ್ಮ ಹಿತೋಪದೇಶ ಯಾರೂ ಕೇಳಿಲ್ಲ.
" ನಾಗರಾಜ "ಮಾಮಾ ಮಾಮಾ" ಎನ್ನುತ್ತ ನನ್ನ ಮಡಿಲಲ್ಲಿ
ಮುಖವಿಟ್ಟ. ಬೀಗಿಕೊಂಡಿದ್ದ ಆ ಮುಖದ ಸುಂದರ ಕಣ್ಣುಗಳಿಂದ ಕಂಬನಿ ತೊಟ್ಟಿಕ್ಕುತಿತ್ತು.
ಕಂಬನಿ ತೊಟ್ಟಿಕ್ಕುವ ಮುದ್ದು ಮುಖ...
ಎಲ್ಲ ಕಾರ್ಖಾನೆಗಳ ಒಡೆಯರೂ ಏಕ ಪ್ರಕಾರವಾದ ತಮ್ಮ
ನಿರ್ಧಾರವನ್ನು ಜಾಹೀರು ಮಾಡಿದರು. ಅದು ಕಾರ್ಮಿಕರಿಗೆ ಅವರು ಕೊಟ್ಟ ನೋಟೀಸು.
ಉದ್ರೇಕಗೊಂಡ ವಾತಾವರಣದಲ್ಲಿ ಕೂಲಿಗಾರರ ಬಹಿರಂಗ
ಸಭೆಗಳಾದವು. ಸಂಘದ ಕಾರ್ಯಸಮಿತಿ ಸಭೆಸೇರಿತು. ಕ್ರಿಯಾ ಸಮಿತಿಯೊಂದು ರಚಿತವಾಯಿತು. ಅದರ ಸದಸ್ಯರೇ ನಿಯೋಗವಾಗಿ ಮಾರ್ಪಟ್ಟು ಕಾರ್ಖಾನೆಗಳ ಒಡೆಯರನ್ನು ಕಾಣಬಯಸಿದರು.
ಮಾಲೀಕರು ಪ್ರತ್ಯಪ್ರತ್ಯೇಕವಾಗಿ ಉತ್ತರಕೊಟ್ಟರು.
"ನಮ್ಮ ವ್ಯವಹಾರವೆಲ್ಲ ನಮ್ಮ ಕಾರ್ಖಾನೆಯ ಕೆಲಸಗಾರ
ರೊಡನೆ. ನಿಮ್ಮ ಸಂಘವನ್ನು ನಾವು ಮಾನ್ಯ ಮಾಡೋದಿಲ್ಲ.
" ಹಿಂದೆ ಮೂರು ತಿಂಗಳ ಬೋನಸು ಕೊಡಲೊಪ್ಪಿ ಒಪ್ಪಂದಕ್ಕೆ
ಸಹಿ ಹಾಕಿದವರು, ಈಗ ಸಂಘದ ಮೇಲಿನ ಮಾನ್ಯತೆಯನ್ನು ಹಿಂತೆಗೆ ದಿದ್ದರು.
ಮಾನ್ಯತೆಯ ನಿರಾಕರಣೆಯಿಂದ ಪರಿಸ್ಥಿತಿ ವಿಕೋಪಕ್ಕೆ
ಹೋಯಿತು.ಆಂತಿಮ ತೀರ್ಮಾನವಾಗಬೇಕೆಂದು ಎಲ್ಲ ಮಿಲ್ಲುಗಳಕೆಲಸಗಾರರ ಸಭೆ ಜರಗಿಸಲು ಏರ್ಪಾಟಾಯಿತು.
ಮನೆಯಲ್ಲಿ ಶ್ರೀಕ೦ಠ ಸೂಕ್ಸ್ಶ್ಮವಾಗಿ ನನ್ನನ್ನೆ ನೋಡುತ್ತ
ಹೇಳಿದ:
"ಆ ದಿವಸ ನಿನ್ನ ವಿಚಾರವಾಗಿ ಐ.ಜಿ.ಪಿ. ಹೇಳಿದ್ದೆಲ್ಲಾ
ಸುಳ್ಳೇನೋ ಅ೦ತ ಅನುಮಾನವಾಗ್ತಿದೆ."
"ಏನು?"
"ಏನಾದರು ಸಾಹಸದ ಕೆಲಸ ಮಾಡೋದು ನಿನ್ನಿ೦ದ
ನಿಜವಾಗಿಯೂ ಸಾಧ್ಯವಾ?"
ನಾನು ನಗತೊಡಗಿದೆ.
"ಏನ್ಕ೦ಠಿ ? ನಾನೊಬ್ಬ ಹಾಲಿವುಡ್ ಗ್ಯಾ೦ಗ್ಸ್ಟ್ರರ್ ಅ೦ತ
ತಿಳಕೊ೦ಡಿದ್ದೀಯೇನು?
"ಹೇಳಲು ಒ೦ದು ಕ್ಷಣ ಆತ ಅನುಮಾನಿಸಿದ೦ತೆ ತೋರಿತು
."ಇವತ್ತು ಸಾಯ೦ಕಾಲ ರಾತ್ರಿಯೆಲ್ಲಾ ಅವರ ಸಭೆ ಜರಗುತ್ತೆ.
ಅದಾದ್ಮೇಲೆ ಮೂರು ನಾಲ್ಕು ಜನರು ಮನೆಗೆ ಹೋಗ್ಬಾರ್ದು-ಅಷ್ಟೆ."
"ಯಾರು ಯಾರು?"
"ಅವರು ಲೀಡರು ಮುನಿಸ್ವಾಮಪ್ಪ , ಡೊಡ್ಡ ಕೆಲಸ ಮಾಡ್ತಿ
ದೀನೀ೦ತ ಇವತ್ತು ಭಾಷಣ ಕುಟ್ಟೋಕೆ ಒಪ್ಕೊ೦ಡೀದ್ದಾನ೦ತೆ-ಆ ಬರೆಯೋವ್ನು- ಕೃಷ್ಣರಾಜ...ಆ ಮೇಲೆ ಒಬ್ಬಿಬ್ಬರು_"
ಆ ಮೇಲಿನ ಒಬ್ಬಿಬ್ಬರು: ನಾರಾಯಣನ ಹೆಸರು ಅವನ
ನಾಲಿಗೆಯ ತುದಿಯ ಮೇಲೆ ಇದ್ದಿರಬೇಕು.ಆದರೆ ಆತ ಹೇಳಲಿಲ್ಲ.
"ಏನ್ಮಾಡ್ಬೇಕೂ೦ತೀಯ ಇವರ್ನೆಲ್ಲ?"
"ಮುಗಿಸ್ಬಿಡೋದರಿ೦ದ ಹಿಡಿದು ಕೈಕಾಲು ಮುರಿದ್ದಾಕೋ
ವರಗೆ ಏನು ಬೇಕಾದರೂ !"
ಸಿಗರೇಟು ಹಚ್ಚಿ ಹೊಗೆಯ ಉಗುಳು ಹೊರಹಾಕುತ್ತಾ ಹೇಳಿದೆ.
" ಸರಿ..... ಅಷ್ಟು ಮಾಡ್ತೀನಿ."!
ಆ ಸ್ವರ ನನ್ನದು ಹೌದೋ ಅಲ್ಲವೋ ಎನ್ನುವ ಹಾಗೆ ವಿರೂಪ
ವಾಗಿತ್ತು. ಶ್ರೀಕ೦ಠ ನಕ್ಕ ."ಭೇಷ್ ಆದೀಗ ಗ೦ಡಸ್ತನ ಸರಿಯಾದ ಸ್ನೇಹದ ಕಾಣಿಕೆ
.....ನೀನು ಶಾರದೇನ ಅತ್ತಿಗೆ ಆಂತ ದೂರವಿಟ್ಟಿರೋದಕ್ಕಿ೦ತಲೂ ಆದು ದೊಡ್ಡದು."
"ಸುಮ್ನಿರು ಕಂಠಿ .ಎ೦ಥ ಮಾತು!"
ಆತ ಸುಮ್ಮನಾದ.ಆ ಮೌನದ ನಿಮಿಷಗಳಲ್ಲಿ ಅವನು ಏನನ್ನೋ
ಯೋಚಿಸುತ್ತಿದ್ದಂತೆ ತೋರಿತು. ಮೌನವನ್ನು ಮುರಿದು ಅವನೆ೦ದ:
" ನಿನ್ನ ಪರೀಕ್ಷೀಸೋಣಾಂತ ಹೇಳ್ದೆ-ಅಷ್ಟೆ . ಮರೆತ್ಬಿಡು
ಅದನ್ನ."
ಅದು ನಿಜವಾಗಿತ್ತೆ? ನಾನು ಆ ಕೆಲಸವನ್ನು ಮಾಡಲಾರೆನೆಂಬ
ಸಂದೇಹದ ಕೀಟ ಅವನನ್ನು ಕೊರೆಯುತ್ತಿರಲಿಲ್ಲವೆ?
ಆ ವಿಷಯ ಹೆಚ್ಚು ಯೋಚಿಸಿ ತಲೆಕೆಡಿಸಿಕೋಳ್ಳಲು ನಾನು
ಇಷ್ಟಪಡಲಿಲ್ಲ.
ನಿನ್ನಿಷ್ಟ ಎಂದು ಸುಮ್ಮನಾದೆ.
ನಾನು ಸುಮ್ಮನಾದ್ರು ಶ್ರಿಕಂಠ ಸುಮ್ಮನಿರಲಿಲ್ಲ.
" ಎಲ್ಲಾದರು ಹೋಗೋಣವೇನೋ ಸಾಯಂಕಾಲ?"
ಎಂದು ಆತ ಕೇಳಿದ.
ನನಗೆ ಯಾವುದು ಇಷ್ಟವಿರಲಿಲ್ಲ.ಹೃದಯವನ್ನು ಯಾರೋ
ಹರಿತವಿಲ್ಲದ ಕತ್ತಿಯಿಂದ ನೋಯಿಸಿ ನೋಯಿಸಿ ಕೊಯ್ಡ ಹಾಗಾಗು ತ್ತಿತ್ತು.
ಮೈಕೈ ನೋವು ಕಂಠಿ. ಹೊಟ್ಟೀಲಿ ಏನೋ ಆಗ್ತಾ ಇದೆ.
ನಾನು ಎಲ್ಲಿಗೂ ಬರೋದಿಲ್ಲ.
ಅಸಮಾಧಾನಗೊಳ್ಳುತ್ತ ಆತ ನನನ್ನು ನೋಡಿದ.
"ದುಃಖವಾಗುತ್ತಾ ಕಂಠಿ ? ನಿರೀಕ್ಷಿಸಿದಷ್ಟು ಪ್ರಯೋಜನ
ನನ್ನಿಂದ ನಿನಗೆ ಇಗ್ತಾ ಇಲ್ಲ ಅಲ್ಲವೆ?"
"ಯಾಕೆ ಹಾಗಂತೀಯ?"
" ನಿನಗೆ ನಾನು ಸರಿಯಾದ ಜೋಡಿ ಅಲ್ಲವೇನೋ ಅಂತ
ಭಾಸವಾಗ್ತಿದೆ."
"ಸುಮ್ಮನೆ ಇಲ್ಲದ ಯೋಚ್ನೆ ಮಾಡಬೇಡ."
"ಶ್ರೀಕಂಠ ನನ್ನನ್ನು ನನ್ನ ಮನೆಯ ತನಕ ಒಯ್ದು ಮುಟ್ಟಿಸಿ,
ಒಬ್ಬನೇ ಎಲ್ಲೋ ಹೊರಟುಹೋದ.
ಬಟ್ಟೇಬರೆ ಕಳಚಿ ತಣ್ಣೀರಿನ ಸ್ನಾನಮಾಡಿ. ತಪ್ತವಾಗಿದ್ದ
ದೇಹ ತಣ್ಣಗಾಯಿತು. ಆದರೆ ಹೃದಯ ಬೇಗುದಿ ಕಡಿಮೆ ಯಾಗಲಿಲ್ಲ.
ಆ ಇಪ್ಪತ್ತು ಸಹಸ್ರ ಕೆಲಸಗಾರರ ಮಕ್ಕಳು ಮುದುಕರ
ಹೆಂಗಸರು ಗಂಡಸರ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ಸಾಗುತ್ತಿರ ಬಹುದು.... ಈ ಬೀದಿಯಲ್ಲಿ ಬರಬಹುದು ಸ್ವಲ್ಪ ಹೊತ್ತಿನಲ್ಲೆ.... ಅ ಮೇಲೆ ಅವರ ಸಭೆ...
ಆ ಘೋಷಗಳು..... ಮೊದಲು ಮೆಲ್ಲನೆ ಬಳೆಕ ಗಟ್ಟೆಯಾಗಿ
ಅವು ಕೇಳಿಸ ತೊಡಗಿದವು :
"ಒಬ್ಬನೆ ಒಬ್ಬನನ್ನು ಕೆಲಸದಿಂದ ತೆಗೆಯಬಾರದು !"
" ಸಾಮಾನಿನ ಬೆಲೆ ಇಳಿಸಿ !"
" ತುಟ್ಟ ಭತ್ತೆಯಲ್ಲಿ ಕಡಿತ ಕೂಡದು !"
"ಮಾಲೀಕರ ದಬ್ಬಾಳಿಕೆ ಕೊನೆಗಾಣಲಿ !"
"ಸ್ವರಾಜ್ಯ ಯಾರದು? ಬಡವರದು!"
.........ದೊಡ್ದದೊಂದು ಕೆಂಪು ಬಾವುಟ ಮೆರವಣಿಗೆಯ
ಮುಂಭಾಗದಲ್ಲಿ ಎತ್ತರವಾಗಿ ಹಾರಾಡುತಿತ್ತು. ಮುಂದುಗಡೆ ಎಲ್ಲ ಮುಖಂಡರು ಇರಲಿಲ್ಲ. ಸಭೆಯ ಏರ್ಪಾಟಿನಲ್ಲಿದ್ದರೇನೊ..... ಆದರೆ, ಮೆರವಣಿಗೆಯ ಮೊದಲ ನೂರು ಗಜದೊಳಗೆ ನಾರಾಯಣ ನಿದ್ದ.....
ಕಿಟಕಿಯಿಂದ ಹೊರಗಿಣಿಕಿ ನೋಡುತ್ತಿದ್ದ ನಾನು, ಆಕಸ್ಮಿಕ
ವಾಗಿಯಾದರು ಆತ ನನ್ನನ್ನು ಕಾಣಬಾರದೆಂದು, ಕಿಟಕಿಯನ್ನು ಅರ್ಧ ಮುಚ್ಚಿದೆ. ಆ ಬಳಿಕ ಉಳಿದವರು... ಬೊಂಬಾಯಿಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಗೆ ಹಿಂದೆ ಅಂಥದೇ ಮೆರವಣಿಗೆಗಳನ್ನು ನಾನು ಕಂಡಿದ್ದೆ....ಅವರು ಆಗಲೆ ಬೊಂಬಾಯಿಯ ಮುಂದುವರಿದ ಕಾರ್ಮಿಕರಾಗಿದ್ದರು. ಇಷ್ಟು ವರ್ಷಗಳ ಮೇಲೆ ನಮ್ಮವರಲ್ಲೂ ಸೆಟೆದು ನಿಲ್ಲುವ ಚೈತನ್ಯ ಮೂಡಿತ್ತು, ಸ್ವಲ್ಪ ಮೂಡಿತ್ತು, ಅಷ್ಟೆ. ಆದರೆ ನಮ್ಮವರಿನ್ನೂ ಪ್ಯಾ೦ಟು ಷರಟುಗಳ ಔದ್ಯೋಗಿಕ ಕಾರ್ಮಿಕ ರಾಗಿರಲಿಲ್ಲ. ನನ್ನ ತ೦ದೆಯ ತಲೆಯ ಮೇಲೆ ಆಗ ಇದ್ದ೦ತಹ ಜುಟ್ಟು ಈಗಲೂ ಹಲವಾರು ಕೆಲಸಗಾರರಿಗಿತ್ತು.
ನಾನು, ನನ್ನ ಕ್ರಾಪಿನ ಮೇಲೆ ಕೈಯೋಡಿಸಿದೆ. ಕೂದಲು
ನೀಳವಾಗಿ ಬೆಳೆದಿತ್ತು. ಕ್ರಾಪು ಮಾಡಿಸಬೇಕಾಗಿತ್ತು. ಆದರೆ ಅಲಕ್ಷ್ಯ ಮಾಡಿದ್ದೆ. ಬಿಳಿದು-ಕರಿದುಗಳು ಮಿಶ್ರವಾಗಿ ಬೆಳೆಯುತ್ತ ಲಿದ್ದ ಕೇಶರಾಶಿ...
ಮೆರವಣಿಗೆ ದಾಟಿ ಹೋಗಿತ್ತು...
ಭಾರವಾದ ಹೃದಯದ ಹೊರೆ ಹೊತ್ತು ಎಚ್ಚರವಿರುವುದು
ಸಾಧ್ಯವಿರಲಿಲ್ಲ. ನನಗೆ ನಿದ್ದೆ ಬೇಕಾಗಿತ್ತು-ಎಲ್ಲವನ್ನೂ ಮರೆಸ ಬಲ್ಲ೦ತಹ ನಿದ್ದೆ.
ಮಲಗುವ ಮ೦ಚದ ಮೇಲೆ ಗೋಡೆಯ ಅಲಮಾರದಲ್ಲಿ ಎರಡು
ಸೀಸೆಗಳಲ್ಲಿ ಬೀರ್ ಮೌನವಾಗಿತ್ತು.
ಹೊರ ಬಾಗಿಲಿಗೆ ಅಗಣಿ ತಗಲಿಸಿ, ಕಿಟಕಿಗಳೆಲ್ಲವನ್ನೂ ತೆರೆ
ದಿಟ್ಟು, ಎರಡು ಸೀಸೆಗಳನ್ನೂ ಬರಿದು ಮಾಡಿ ನಾನು ಹಾಸಿಗೆಯ ಮೇಲುರುಳಿದೆ.
ಮೆಲ್ಲನೆ ಬೆಳಕನ್ನೋಡಿಸಿ ಕತ್ತಲು ಒಳನುಗ್ಗುವುದು. ರಾತ್ರೆ
ಯೆಲ್ಲವೂ ಕಿಟಕಿಗಳೆಡೆಯಿ೦ದ ಗಾಳಿ ಓಡಿಯಾಡುವುದು... ನಿದ್ದೆ ದೇಹದ ನರನಾಡಿಗಳನ್ನು ಸಡಿಲಗೊಳಿಸುವ ಪರಿಸ್ಥಿತಿ.... ಆ ಬಳಿಕ ಸರಾಗವಾದ ಉಸಿರಾಟ....
ಹಾಗಾಗಲೆ೦ದು ನಾನು ಹ೦ಬಲಿಸಿದೆ... ಆದರೆ ಅ೦ಥ ಹ೦ಬಲ
ಕೂಡಾ ಈಡೇರುವುದು ಸುಲಭವಾಗಿರಲಿಲ್ಲ. ಆ ಹಗಲು ಶ್ರೀಕ೦ಠ ನನ್ನೊಡನೆ ಹೇಳಿದ ಮಾತುಗಳೆಲ್ಲ ಮತ್ತೆ ಜೀವ ತಳೆದು ನನ್ನೆದುರು ಕುಣೆಯುತ್ತಿದ್ದುವು. ಎಂಥದೊಂದು ಕೆಲಸವನ್ನು ನನಗ ವಹಿಸಿ ಕೂಡಲು ಶ್ರೀಕಂಠ ಯೋಚಿಸಿದ ನಾನು ಆ ಕೆಲಸವನ್ನು ಮಾಡ ಭೇಕೆಂಬ ಉದ್ದೇಶ ನಿಜವಾಗಿಯೂ ಆತನಿಗೆ ಇತ್ತೊ-- ಅಥವಾ ನನ್ನನ್ನು ಪರೀಕ್ಷಿಸಲೆಂದು ಹಾಗೆ ಮಾಡಿದ್ದನೊ. ಯಾವೊದೋ ಒಂದು ಘಳಿಗೆಯಲ್ಲಿ, ಅ ಕೇಲಸವನ್ನು ಮಾಡುವುದಾಗಿಯೂ ನಾನು ಒಪ್ಪಿದ್ದೆನಲ್ಲ!
ಅಂತೂ ನನ್ನ ಕೈ ಹೊಲಸಾಗಬೇಕಾಗೀದ್ದ ಫ್ರಮೇಯವೊಂದು
ತಪ್ಪಿ ಹೋಯಿತು.
ನಾಣಿ ನಾಣಿಗೆ ಏನಾದರೂ ಆಪಾಯವಾಗಲಾರದಲ್ಲವೆ?
ಒಂದು ವೇಳೆ ಶ್ರಿಕಂಠನ ಯೋಜನೆ ಕಾರ್ಯಗತವಾದುದೇ
ಆದರೆ--?
ಮನುಷ್ಯನಾದ ನಾನು, ಮುಂದಾಗಿ ಹೋಗಿ ನಾರಾಯನಣನಿಗೆ
ಗಂಡಾಂತರದ ಸೂಚನೆಕೊಡುವುದು ನ್ಯಾಯವಾಗಿತ್ತು. ಅದು ನನ್ನ ಕರ್ತವ್ಯವೂ ಆಗಿತ್ತೇನೊ?
ಆದರೆ, ಶ್ರೀಕಾಂಠ ಸಹವಾಸದಲ್ಲಿ ಇಷ್ಟು ವರ್ಷಗಳಿದ್ದ ಮೇಲೆ
ಹಾಗೆ ಮಾಡುವುದರಿಂದ, ಅತನೆಗೆ ನಾನು ಅನ್ಯಾಯ ಮಾಡಿದಂತೆ ಗೊತಿತ್ತಲ್ಲವೆ?
ಹಾಗಾದರೆ ಯಾವುದು ನ್ಯಾಯ? ಯಾವುದು ಅನ್ಯಾಯ?
ಏನಾದರೂ ಸರಿಯೆ ನಾರಾಯಣನಿಗೆ ಮಾತ್ರ ಏನು ಆಗ
ದಿರಲೆಂಬುದೇ ನನ್ನ ಹಾರೈಕೆಯಾಗಿತ್ತು.
ನಾರಾಯನಣ ಮತ್ತು ಕಮಲಾ ಒಂದು ರಥದ ಎರಡು ಗಾಲಿ
ಗಳು. ಒಂದು ಗಲಿ ಕಳಚಿದರೆ ಇನ್ನೊಂದು ಅಸಹಾಯವಾಗುವ ಸ್ಥಿತಿ... ಹಾಗಗಬಾರದು....ನಾರಾಯಣನಿಗೇನೂ ಆಗಬಾರದು.
ಅದು ನನ ಜೀವನದ ಇನ್ನೊಂದು ಕೈ ಗೂಡದ ಬಯಕೆ
ಯಾಯಿತೆಂದು ಬೆಳಗು ಮುಂಜಾನೆ ತಿಳಿಯಿತು.
ಕಾಫಿಗೆಂದು ಹೋಟಿಲಿಗೆ ಹೋದವನು, ಗಿರಾಕಿಗಳು ಹಲ
ವರ ಗುಂಪಾಗಿ ಆ ಬೆಳಗಿನ ದಿನ ಪತ್ರಿಕೆಯೋದುತ್ತಿದ್ದುದನ್ನು ಕಂಡೆಕೌಂಟರಿನ ಬಳಿ ಕುಳಿತಿದ್ದ ಮ್ಯಾನೇಜರ್ ಬೇರೆ, ಪತ್ರಿಕೆಯ ವರದಿ ಯನ್ನೇ ವಿವರಿಸಿ ಗಟ್ಟಿಯಾಗಿ ಹೇಳುತಿದ್ದ
ಕೆಲಸಗಾರರ ಸಭೆಯಲ್ಲಿ ಗಲಭೆ: ಟೀರ್‌ಗ್ಯಾಸ್:ಲಾಠೀ ಚಾರ್ಜು......ಹಲವರ ಬಂಧನ.....
ನನ್ನೆದೆ ಡವಡವನೆ ಹೊಡೆದುಕೊಳ್ಳುತಿತ್ತು. ನಾನೂ ಆ ಗುಂಪನ್ನು ಸೇರಿ ಬೇರೊಬ್ಬರ ಭುಜದ ಮೇಲಿಂದ ಹಣಿಕಿ ಹಾಕಿ ಆ ಪತ್ರಿಕೆಯನ್ನೋದಿದೆ... ಘಾತವಾಗಿತ್ತು... ಯುದ್ಧದಲ್ಲಿ ಗಾಯ ಗೊಂಡವರ ಹೆಸರುಗಳ ಪ್ರಕಟಣೆಯನ್ನು ಸಂಬಂಧಿಕರು ಪ್ರಾಯಶ: ದೃಷ್ಟಿ ಹಾಯಿಸಿದೆ. ಅಕ್ಷರಗಳು ಮಸಕಾದುವು. ಏನೂ ಕಾಣಿಸದೆ ಹೋದಾಗ ಸಮಾಧಾನದ ನಿಟ್ಟುಸಿರನ್ನು ಬಿಟ್ಟಿ.... ಆದರೆ ಆ ಸಮಾ ಧಾನ ಕ್ಷಣಿಕವಾಗಿತ್ತು. ವಾರ್ತೆಯ ಆರಂಭದಲ್ಲೇ ಆ ಹೆಸರು ಗಳಿದ್ದುವು.
".......ಕೆಲಸಗಾರರಲ್ಲಿ ಒಂದು ವಿಭಾಗದವರು ಹೊಡೆದುದರ ಫಲವಾಗಿ ಯೂನಿಯನ್ ಕಾರ್ಯದರ್ಶಿ ಮುನಿಸ್ವಾಮಪ್ಪನವರಿಗೂ ಉಪಾಧ್ಯಕ್ಷ್ ನಾರಾಯಣರಿಗೂ ತೀವ್ರ ಗಾಯಗಳಾಗಿವೆ, ಅತಿಥಿ ಭಾಷಣಕಾರರಾಗಿ ಸಭೆಗೆ ಬಂದಿದ್ದ ಸಾಹಿತಿ ಕೃಷ್ಣರಾಜರೂ ಆ ಗೊಂದ ಲದಲ್ಲಿ ಸಿಲುಕಿಕೊಂಡಿತು,ಅವರಿಗೂ ಗಾಯಗಳಾಗಿವೆ.......
ಮುನಿಸ್ವಾಮಪ್ಪ, ನಾರಾಯಣ. ಕೃಷ್ಣರಾಜರು....
ಆ ಬಳಿಕ ಸಭೆ ಚದುರಿಸಲು ಆಶ್ರುವಾಯು ಪ್ರಯೋಗ, ಶಾಂತಿ ಸ್ಥಾಪಿಸಲು ಲಾಠೀ ಚಾರ್ಜು. ಒಡೆದ ತಲೆಗಳು: ಗಲಭೆ ಮಾಡಿದ ರೆಂದು ಇಪ್ಪತ್ತೈದು ಜನರ ಬಂಧನ....
ಗಾಯಗೊಂಡವರು?--
ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು.
ಮತ್ತೊಮ್ಮೆ ನಾನು ಆ ವಾರ್ತೆಯನ್ನು ಆರಂಭದಿಣ್ದ ಕೊನೆಯ
ವರೆಗೂ ಓದಿದೆ--ಸಾವಕಾಶವಾಗಿ. ಕಾಫಿ ಹೀರುವುದು ಕಷ್ಟದ ಕೆಲಸವಾಗಿತ್ತು.........ಆದರೂ ಹೀರುವ ಯಂತ್ರದಂತೆ ಕಾಫಿ ಮುಗಿನಸಿದೆ.
ಜಿಲ್ಲಾಧಿಕಾರಿಗಳು ಸಭೆ ಮೆರವಣಿಗೆಗಳಾಗದಂತೆ ನಿಷೇಧಾಜ್ಞೆ ಹೊರಡಿಸಿದ್ದರು. ಅದು ಮೊದಲ ಕೆಲಸ. ಆ ಮೇಲೆ, ಕಾನೂನು- ನೆಮ್ಮದಿಯ ರಕ್ಷಕರಾದ ಪೋಲೀಸ್ ಅಧಿಕಾರಿಗಳು ತಮ್ಮ ಕೆಲಸ ನಡೆಸಿದ್ದರು.
....ಒಂದು ಕಾಲದಲ್ಲಿ ಆ ಕಾನೂನು-ನೆಮ್ಮದಿಯ ಶಾಖೆಗೂ ನನಗೂ ಸಮೂಹ ಸಂಬಂಧವಿತ್ತು. ಆದರೆ ಈಗ? ನಾನು ಪ್ರಭಾವ ಶಾಲಿಶಕ್ತಿಗಳ ಆಶ್ರಯದಲ್ಲಿದ್ದೆ.......ಆದಿನ. ಬಿ.ಎ.ಕಟ್ಟಿದ್ದ ಹುಡುಗನ ತಂದೆಯಾದ ಪೋಲೀಸ್ ಅಧಿಕಾರಿ ಜಂಭದಿಂದ ಆಡಿತೋರಿಸಿದ್ದ 'ಪೋಲೀಸರ ದೀರ್ಘಹಸ್ತ' ದಿಂದ ನಾನು ದೂರವಾಗಿದ್ದೆ.
ಆದರೆ ಆ ದೀರ್ಘ ಹಸ್ತವೀಗ ನಾರಾಯಣ ಮತ್ತಿತರರನ್ನು ಬಲಿ ತೆಗೆದುಕೊಳ್ಳುತಿತ್ತು-ಬೇರೆ ಕಾರಣಕ್ಕಾಗಿ.
ನಿನ್ನೆ ಶ್ರೀಕಂಠ ಪ್ರಸ್ತಾಪಿಸಿದ ಆ ವಿಷಯ ರೂಪಾ೦ತರಹೊ೦ದಿ ಈ ರೀತಿ ಪರ್ಯವಸಾನವಾಹಿತೆ ಹಾಗಾದರೆ? ಕೆಲಸಗಾರರ ಒಂದು ವಿಭಾಗದವರು ತಮ್ಮ ನಾಯಕರಿಗೇ ಹೊಡೆಯ ಹೋಗುವುದೆಂದ ರೇನು? ನಿಯೋಜಿತರಾದ ಕೆಲವರು ಆ ಕೆಲಸ ಮಾಡಿರಬೇಕು....ಆ ಸಂದರ್ಭವನ್ನಿದಿರುನೋಡುತಿದ್ದ ಪೋಲೀಸರು ಕೈಇಕ್ಕಿದುದೂ ಪೂರ್ವ ನಿಯೋಜಿತ ವ್ಯವಸ್ಥೆಗನುಸಾರನವಾಗಿಯೇ........
ಸಿಗರೇಟು ಕೋಂಡುಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತ ನಾನು ಮನೆಯತ್ತ ಸಾಗಿದೆ.
ಶ್ರೀಕಂಟನ ಕಾರು ಹೊರಗೆ ನಿಂತಿತ್ತು. ಆತ ಹಸನ್ಮುಖಿಯಾಗಿ
ಒಳಗೆ ಕುಳಿತಿದ್ದ.
"ಕಾಫಿಗೆ ಹೋಗಿದ್ದಿಯೇನಯ್ಯಾ?"
"ಹೂಂ ಎಷ್ಟೊತ್ತಾಯ್ತು ಬಂದು?"
"ಇದೇ ಈಗ್ಬಂದೆ. ನಡಿ ಒಳಕ್ಕೆ."
ನನ್ನ ಕೊಠಡಿಯಲ್ಲಿದ್ದ ಅಸ್ತವ್ಯಸ್ತವಾದ ಹಾಸಿಗೆಯನ್ನೂ ಪಕ್ಕ ದಲ್ಲೇ ಇದ್ದ ಖಾಲಿ ಬಾಟಲಿಗಳನ್ನೂ ನೋಡಿ ಶ್ರೀಕಂಠ ಮುಗುಳ್ನಕ್ಕ.
"ಹ್ಯಾಗಿದೆ ಚಂದ್ರೂ ಹೊಟ್ಟೆ ನೋವು?”
"ಸ್ವಲ್ಪ ಮೇಲು ಕಂಠಿ"
"ಷೇವ್ ಮಾಡ್ಕೊಂಡು ಬಟ್ಟೆ ಹಾಕ್ಕೊ.....ಎಸ್ಮೀನಾದವರ್ನ ನೋಡೊಂಡು ಬರೋಣ."
ನಾನು ಮುಖಕೌರ ಮಾಡಿಕೊಳ್ಳುತಿದ್ದಂತೆ, ಕನ್ನಡಿಯಲ್ಲಿ ನನ್ನ ಮುಖವನ್ನು ಪರೀಕ್ಷಿಸಿದೆ. ಮಾಟವಾಗಿಯೇ ಇದ್ದ ಆ ಮುಖದ ಆ ವರಣದ ಹಿಂದೆ ಎಂಥೆಂಥ ಭಾವನೆಗಳಿದುವು! ಆದರೆ ಹೊರಗೆ ಏನಾ ದರೂ ತೋರುತಿತ್ತೆ ? ಮುಖವೇ ಮುಖವಾಡವಾಗಿತ್ತಲ್ಲವೆ ? ಆ ಮುಸುಕನ್ನೆತಿ ಒಳಕ್ಕೆ ಇಣಕಿನೋಡುವುದು ಶ್ರೀಕಂಠನಿಗೆ ಸಾಧ್ಯವಿತ್ತೆ?
ಕನ್ನಡಿಯಲ್ಲಿ ಬಾರಿ ಬಾರಿಗೂ ಮುಖ ನೋಡುತ್ತ ನೋಡುತ್ತ ನನಗೆ ನನ್ನ ಬಗೆಗೇ ಆತ್ಮ ವಿಶ್ವಾಸವೆನಿಸುತಿತ್ತು. ನಾನು ದಿನ ದಿನಕ್ಕೂ ದುರ್ಬಲನಾಗುತಿದ್ದೆನೆಂದು ಯೋಚಿಸುತಿದ್ದುದು ತಪ್ಪಾಗಿತ್ತ ಲ್ಲವೆ? ಹೃದಯವೇನೊ ದುರ್ಬಲವಾಗುತ್ತ ಸಾಗಿರಬಹುದು. ಕರುಳಿನ ಬಾಧೆಯಿಂದ ದೇಹವೂ ದುರ್ಬಲವಾಗಿರಬಹುದು. ಆದರೆ ಮುಖ ಚರ್ಯೆ ನನಗೆ ರಕ್ಷಾಕವಚವಾಗಿತ್ತಲ್ಲವೆ ?
ಹರಿತವಾದ ಬ್ಲೇಡು ದಿನದ ಗಡ್ಡವನ್ನು ಬಲಿತೆಗೆದು ಕೊಳ್ಳು ತಿತ್ತು, ಸಿಗರೇಟು ಸೇದುತ್ತ ಸುಖಾಸೀನನಾಗಿದ್ದ ಶ್ರೀಕಂಠ ಕೇಳಿದ.
"ಪೇಪರು ಓದಿದೆಯಾ ?"
"ಈಗ್ತಾನೇ ಓದ್ದೆ."
"ನಿಜ ಹೇಳ್ತೀಸೀ ಚಂದು .... ನೀನು ನಾಣಿಗಾಗಿ ಮರು ಗೋದ್ನ ನೋಡಿ, ನನಗೂ ಅವನ್ಮೇಲೆ ಒಂದು ರೀತಿ ಕನಿಕರ ಹುಟ್ಟಿದೆ. ಆದರೆ ಏನ್ಮಾಡೋಕೆ ಸಾಧ್ಯವಿತ್ತು ಹೇಳು ?"
ಕೇಳಬಾರದೆಂದಿದ್ದರೂ ಪ್ರಶ್ನೆ ನನ್ನ ಹಿಡಿತ ತಪ್ಪಿಸಿಕೊಂಡು ಹೊರಟಿತು :
"ಆಸ್ಪತ್ರೆಲಿದಾರೇನು ಅವರೆಲ್ಲ?"
"ಫೋನ್ ಮಾಡಿದ್ದೆ ನಿನ್ನೆ ರಾತ್ರೆನೆ. ನಾಣಿ ಮತ್ತು" ಆ ಸಾಹಿತೀನ ಬ್ಯಾ೦ಡೇಜ್ ಕಟ್ಟಿದ್ಮೇಲೆ ಬಿಟ್ಬಟ್ರ೦ತೆ. ಮುನಿ ಸ್ವಾಮಪ್ಪ ಆಲೇ ಇದಾನೆ---ಇನೆರಡು ವಾರ ಅಲೇ ಇರ್ತಾನೆ. ಆದಲ್ದೆ ಒಂದ್ನಾಲಕ್ಜನ ಕೂಲಿಕಾರರಿಗೂ ಏಟು ಜೋರಾಗಿಯೇ ಬಿದ್ದಿದೆ. ಅವರಲ್ಲಿ ಇಬ್ಬರು ನಮ್ಮವರು." "ನಮ್ಮವರು ಅಂದರೆ?" ಹಾಗೆ ಕೇಳುತ್ತ ತಿರುಗಿ ನೋಡಿದೆ. ಶ್ರೀಕಂಠನ ಹುಬ್ಬುಗಳು ಗಂಟಿಕ್ಕಿದುವು. "ಚಂದ್ರೂ? ಸತ್ಯ ಹೇಳು. ನಿನ್ನ ಮನಸ್ನೆಲ್ಲೇನಿದೆ?" "ಯಾಕೆ ಹಾಗೆ ಕೇಳ್ತೀಯಾ?" ಶ್ರೀಕಂಠ ಒಂದುಕಣ ಮೌನವಾಗಿದ್ದ. "ಹೋಗಲಿ ಬಿಡು ಆ ವಿಷಯ." ಆ ದಿನ ಕೆಲಸಗಾರರು ಯಾರೂ ಕಾರಖಾನೆಗಳಿಗೆ ಹೋಗಿರಲಿಲ್ಲ. ಮಾಲೀಕರಿಗೆಲ್ಲ ಆದರಿಂದ ಸಂತೋಶವಾಗಿತ್ತು. ಅಂತೂ ಬಂದಿತ್ತು ಅವರು ಬಯಸಿ ಇದಿರುನೋಡುತಿದ್ದ ಮುಶ್ಕರ. ಯುದ್ದದ ಮೊದಲ ದಿನದಲ್ಲಿ ಅವರಿಗೇ ಜಯವಾಗಿತ್ತು."ಕ್ರಾಂತಿಗೆ ಜಯವಾಗಲಿ" ಎಂದು ಘೋಷಿಸುತಿದ್ದವರು ಗಾಯಗೊಂಡು ಬಿದ್ದಿದ್ದರು. ಸಂಜೆ ಕಾರಖಾನೆಯ ಯಜಮಾನರೆಲ್ಲರ ಸಭೆ ಕರೆದರು. ಶ್ರೀಕಂಠ ಕಾರ್ಯದಶೀಯಾಗಿ ಹೋಗಬೇಕಾಗಿದ್ದ ನಾನು ಕರುಳಿನ ಕಾಹಿಲೆಯ ಕಾರಣ ಹೇಳಿ ತಪ್ಪಿಸಿಕೊಂಡೆ. ಆದರೆ ನನ್ನ ಮನಸ್ಸು ಇನ್ನೆಲ್ಲೋ ಚಲಿಸುತಿತ್ತು... ಆ ಇಕ್ಕಟ್ಟಾದ ರಸ್ತೆ--ಓಣಿ--ಮೂಲೆ ಮನೆ--ನಾರಾಯಣ.... ಗಾಯಗೊಂಡು ಬಿದ್ದಿದ್ದ ನಾಣಿಯನ್ನು ನೋಡಲು ನಾನು ಹೋದೆ. ಉದ್ದೇಶಪೂರ್ವಕವಾಗಿಯೋ ಏನೋ, ಗಾಯಗೊಂಡವ ರನ್ನು ಪೋಲೀಸರು ಬಂದಿಸಿರಲಿಲ್ಲ. ಮುಂತಲೆಗೆ ಬ್ಯಾಂಡೆಜು ಕಟ್ಟಿದ್ದ ನಾಣಿ, ನಾಟಕದೊಂದು ಪಾತ್ರದ ಹಾಗೆ ಕುಳಿತಿದ್ದ. ಸಂಜೆಯ ಆ ಹೊತ್ತಿನಲ್ಲಿ ಆ ಮನೆ ಯೊಂದು ಜನಸಾಗರವಾಗಿತ್ತು. ಅಷ್ಟೊಂದು ಹೆಂಗಸರು-ಗಂಡ ಸರು.......ಗೋಡೆಗೊರಗಿ ನಾರಾಯಣ ವಿರಮಿಸಿದ್ದ. ಆದರೆ ಆದನ್ನು ವಿರಾಮವೆನ್ನುವುದರಲ್ಲಿ ಅರ್ಥವಿರಲಿಲ್ಲ. ಆತ ಚಿಂತಾಕ್ರಾಂತನಾಗಿ ದ್ದುದು ಸ್ವಷ್ಟವಾಗಿತ್ತು. ಹಾಗಿದ್ದರೂ ಉಳಿದವರು ಧೃತಿಗೆಡಬಾರ ದೆಂದು ಆತ ಮುಗುಳುನಗೆಯ ನಟನೆ ಮಾಡುತಿದ್ದ.
ಉಣ್ಣೆಯ ಉಡುಗೆ ಕೊಟ್ಟ ತಾನು ಆ ಹಿನ್ನೆಲೆಯಲ್ಲಿ ವಿಚಿತ್ರ ವಾಗಿ ತೋರುತ್ತಿದ್ದೆ. ಆದರೆ, ನಾಣಿಗೆ ನನ್ನನು ನೋಡಿದಾಗ ಸಂತೋಷವಾಯಿತು.
"ಬಾರಯ್ಯ ಚಂದ್ರೂ, ಘಳಿಗೆ ನೋಡಿ ಬಂದ ಹಾಗೆ ಬಂದಿದೀ ಯಲ್ಲಯ್ಯ."
"ಬೆಳಿಗ್ಗೆ ಪೇಪರ್ನಲ್ಲಿ ಓದ್ದೆ. ಔಟ್-ಪೇಷೆಂಟ್ ಅಗಿಯೇ ಇದ್ದೀಯಾ ಅನ್ನೋದೂ ತಿಳೀತು."
"ನಾನೂ ಪೇಪರ್ನ್ಲ್ಲಿ ಓದ್ದೆ-ಎರಡರಲ್ಲೂ. ಆದರೆ, ಅಲ್ಲಿ ರೋದು ಸುಳ್ಳು.ಪತ್ರಿಕೆಗಳ ಮೂಲಕ ನಮ್ಮ ವಿರುದ್ದ ಪ್ರಚಾರ ಹ್ಯಾಗೆ ಆಗತ್ತೆ ಅನ್ನೋದನ್ನ ಆ ಉದಾಹರಣೆ ಕೊಟ್ಟು ಇವರಿಗೆಲ್ಲಾ ನಾನು ವಿವರಿಸ್ತಿದ್ದೆ......ಕೆಲಸಗಾರರೊಳಗೆ ಜಗಳವಂತೆ-ಜಗಳ !"
"ಹಾಗೆ ಅಗಿರಿಲ್ವೇನು ?"
"ಒಳ್ಳೇ ಪ್ರಶ್ನೆ ಕೇಳ್ತೀಯಲ್ಲಪ್ಪ....ಸಭೆ ಮುಗಿಯೋ ಹ್ತೊತಿಗೆ ವೇದಿಕೆ ಮೇಲೆ ಧಾಳಿ ಮಾಡ್ದೋರು ಗುಂಡರು.ಮಾಲೀಕರು ದುಡ್ದು ಕೊಟ್ಟು ನೇಮಿಸ್ದೋರು. ನಾವೆಲ್ಲ ಅವರ್ನ ತಡೆಯೋಕೆ ಹೋಗಿದ್ದೇ ತಡ,ಎರಡನೇ ಪಟಾಲಂ ಬಂತು-ಪೋಲೀಸರು .ಮೊದಲು ಕಾನೂನು ನೆಮ್ಮದಿಯ ಭಕ್ಷಕರು,ಆ ಮೇಲೆ ಅದರ ರಕ್ಷಕರು!..."
ಆ ಘಟನೆಯ ಬಗ್ಗೆ ನಾನು ಊಹಿಸಿದ್ದು ಸರಿಯಾಗಿಯೇ ಇತ್ತು.
"ಇನ್ನು ಹೋಗೀಪ್ಪಾ ನೀವೆಲ್ಲ.....ಎಲ್ಲರೂ ಮನೆಗೆ ಹೋಗಿ.... ರಾತ್ರೆ ಕಮಿಟಿ ಸಭೆ ಸೇರಿ ತೀರಾನಿಸ್ತೀನಿ...ಮನೆಗೆ ಹೋಗೀಪ್ಪಾ ಎಲ್ಲಾ......"
ಆ ಜನರದು ಅದೆಂಥ ಸರಳ ಹೃದಯ! ನಿಸ್ವಾರ್ಥಬುದ್ಧಿ ಯಿಂದ ತಮ್ಮ ಪಕ್ಷ ವಹಿಸಿದವರ ಬಗ್ಗೆ ಅವರು ತೋರಿಸುವ ಆ ಪ್ರೇಮಾದರ ವಿಶಿಷ್ಟವಾಗಿತ್ತು. ಬಾಳ್ವೆಯಲ್ಲಿ ಸೋತು ಸುಣ್ಣವಾಗಿದ್ದ ಆ ಕೂಲಿಕಾರ ಹೆಂಗಸರು ತಮ್ಮೊಳಗೆ ಕಚ್ಚಾಡುವುದನ್ನು ನಾನು ಕಂಡಿದ್ಧೆ . ಒಬ್ಬರ ವಿಷಯದಲ್ಲಿ ಇನ್ನೊಬ್ಬರು ಒರಟು ಒರಟಾಗಿ ವೆರ್ತಿಸುವುದನ್ನು ನೋಡಿದ್ದೆ. ಕಪಟ--ಆಸೂಯೆ--ಮೋಸ ಅವರಲ್ಲಿ ಧಾರಳವಾಗಿತ್ತು. ಹೀಗಿದ್ದರು ತಾವೆಲ್ಲರೂ ಒಂದು ಎಂಬ ಭಾವನೆ ಅವರಲ್ಲಿ ಬೆಳೆದು ಬಂದಿತ್ತು. ಕೆಲವೇ ವರ್ಷಗಳ ಹಿಂದೆ ಪರಕೀಯ ನಾಗಿದ್ದ ನಾರಾಯಣನನ್ನು ಅವರೀಗ ತಮ್ಮವನೆಂದೇ ಭಾವಿಸಿದ್ದರು .
ಆ ಕೆಲವರು ಹೆಂಗಸರ ಕಣ್ಣುಗಳಲ್ಲಿ ತುಂಬಿ ಬಂದ ಕಣ್ಣೀರು ......
" ನಮ್ಮ ದೇವರು ಕಣಪ್ಪಾ ನೀನು. ಆ ಪಾಪಿಗ್ಳ ವಂಸ ನಾಸ್ವಾಗೆಇದ್ವಾತಾ ? ಆ ಬಗ್ವಂತ ಅವ್ರಿಗೆ ಸಾಸ್ತಿ ಮಾಡ್ದೆ ಇದ್ದಾನಾ?"
....ಅಂತೂ ಬಲು ಹೊತ್ತಾದ ಮೇಲೆ ಮನೆ ಖಾಲಿಯಾಯಿತ್ತು. ಆದರೂ ಒಬ್ಬ ಹುಡುಗ ಮಾತ್ರ ಬಾಗಿಲಲ್ಲೆ ನಿಂತಿದ್ದ.
"ನೀನೂ ಹೋಗು ಯೂಸುಫ್"
" ಓಯ್ತೀನಿ ಸಾರ್...ಹೊತ್ತಾದ್ಮೇಕೆ ಓಯ್ತೀನಿ..." ಕಮಲ ಒಳ ಬಾಗಿಲು ತೆರೆದು ನಮ್ಮನ್ನು ನೋಡುತ್ತ ನಿಂತಿ ದ್ದಳು
ಔಪಚಾರಿಕೆವಾಗಿ, " ಚೆನ್ನಗಿದಿರಾ ಅಮ್ಮ" ಎ೦ದೆ.
" ಫುಶ್ನೆ ಚೆನ್ನಾಗಿದೆ ! " ಎಂದಳು ಆಕೆ.
"ಆಯ್ಯೋ! " ಎಂದು ಅವಳು ಅಳುತಿರಲಿಲ್ಲ. ಆ ಸ್ಥೈರ್ಯ ಅಭಿಮಾನ ಪಡುವಂತಿತ್ತು.
ಅದರೆ ಅವಳು ಸಂಕೋಚವಿಲ್ಲದೆ ನನ್ನೊಡನೆ ದೂರುಕೊಟ್ಟಳು.
" ನೀವು ಸ್ವಲ್ಬ ಹೇಳ್ಬಾರ್ದ? ನಿನ್ನೆ ಹೀಗಾಯ್ತು. ನನ್ನ ತಾಳಿ ಗಟ್ಟೀಂತ ತೋರುತ್ತೆ, ಆದ್ದರಿಂದ ಆಷ್ಟೆಕ್ಕೇ ಮುಗೀತು. ಪೂತಾ೯ ಚೇತರಿಸಿಕೊಳಳ್ಳೋದಕ್ಕೂ ಇಲ್ಲ ಇನ್ನೂ, ಅಷ್ಟ್ರರಲ್ಲೆ .. ಕಮಿಟಿ ಮೀಟಿಂಗ್ ಅಂತ ಹೊರಟಿದಾರೆ."
ತುಂಟ ಹುಡುಗ ವಾದಿಸುವಂತೆ ನಾಣೆ ಹೇಳುತಿದ್ದ:
"ಜಟ್ಕಾ ಮಾಡ್ಕೊಂಡು ಹೋಗ್ತಿನೀ, ಕಮಲೂ."
"ಅದೊಂದು ಉಳಿದಿದೆ ನಮ್ಮ ಬಾಗ್ಯಕ್ಕೆ."
ನಾನಾದರೋ ಶ್ರೀಕಂಠನ ಜತೆಯಲ್ಲಿ ಕಾರಿನಲೆ ಓಡಾಡು ವವನು. ಆದರೆ ನಾಣಿಯ ಪಾಲಿಗೆ ಜಟಕಾ ಪ್ರವಾಸವೂ ದೊಢ್ಹ ವಿಷಯವೇ. ಅದು ಶ್ತೀಮಂತಿಕೆಯ ಲಕ್ಷಣವೆಂದೇ ಕಮಲೆಯ ಅಭಿಪ್ರಯ.
ಆತಿಥ್ಯ ಸ್ವೀಕರಿಸಲು ನಾನು ಅಲ್ಲಿ ನಿಲ್ಲಲಿಲ್ಲ. ಶ್ರೀಕಂಠನೆ ಲ್ಲಾದುರೂ ಮಾಲೀಕರ ಸಭೆ ಮುಗಿಸಿ ನನ್ನ ಮನಗೆ ಬರಬಹುದೆಂಬ ಸಂದೇಹ ನನಗಿತ್ತು.
ನಾನು ಅವಸರ ಅವಸರವಾಗಿ ಹೊರಟು ನಿಂತುದದನ್ನು ಕಂಡು ನಾಣಿಹೇಳಿದೆ:
"ಚಂದ್ರೊ....ಕೃಷ್ಣರಾಜರು ಗೊತ್ತೇನೋ ನಿನಗೆ?"
"ಹೆಸರು ಕೇಳಿದೀನಿ, ಅವರು ಬೆರೆದದ್ದನ್ನ ಓದಿದೀನಿ. ಯಕೆ?"
ಅವರಿಗೂ ನಿನ್ನೆ ಏಟುಬಿತ್ತು ಪಾಪ! ನಾವಾದರೂ ಇದಕ್ಕೇ ಇರೋರು. ಆದರೆ ಆತನ್ನ ಆಮಂತ್ರಣಕೊಟ್ಟು ಕರೆದಿದ್ವಿ. ಹೇ ಗಾಯ್ತು ನೋಡು!".
ನಾನು ಉತ್ತರವೀಯಲಿಲ್ಲ. ಆದರೆ ಬರಿಯ ಮೌನವೂ ಸಹಾನು ಭೂತಿಯಾಗಿ ತೋರಬಹುದಲ್ಲವೆ?
"ಮೊನ್ನೆ ಮಾತ್ನಾಡ್ತಾ ಇಧ್ಹಾಗ ನಿನ್ನೆ ವಿಷಯ ಬಂತು. ಸ್ಕೂಲ್ನಲ್ಲಿ ನಾವಿದ್ದಾಗ ನೀನು ಎಷ್ಟೊಂದು ಕಷ್ಟಪಟ್ಟಿದ್ದೆ....ಆದನ್ನೆಲ್ಲಾ ಅವರಿಗೆ ಹೇಳ್ದೆ.... ನಿನ್ನೆ ಸಾಹಸಮಯ ಜೀವನದ ಕಥೆ ಕೇಳಿ ಅವರೆಗೆ ಸಂತೋಷವಾಯ್ತು. ಯಾವತ್ತಾದರೂ ಭೇಟಿಮಾಡಿಸು ಅಂದರು..."
ನನ್ನ ಸಾಹಸ ಜೀವನದಕಥೆ ಇವನಿಗೇನು ತಿಳಿಯಬೇಕು? ಆದರೂ ಅವನಿಗೆ ತಿಳಿದಿದ್ದ ಅಲ್ಪಸ್ವಲ್ಪ ವಿಚಾರವೇ ಅವನ ದ್ರುಷ್ಟಿಯಲ್ಲಿ ದೊಡ್ಡ ವಿಷಯವಾಗಿತ್ತು......ಆ ಕೃಷ್ಣರಾಜರನ್ನು ಕಂಡು ನನಗೆ ಆಗ ಬೇಕಾದ್ದಾದರೂ ಏನು? ಆದರೆ, ಅವರ ಕರಪತ್ರ ಬರೆಯುವ ಚೆಲು. ವಯ್ಯನನ್ನು ಕಂಡಿದ್ದ ನನಗೆ, ಇವರ ಕರಪತ್ರ ಬರೆಯುವ ಕೃಷ್ಣ ರಾಜ ರನ್ನು ಕಂಡರಾದೀತೆಂದು ತೋರಿತು.
"ಯಾವತ್ತಾದರೂ ಆವಶ್ಯವಾಗಿ ಬಂದು ಭೇಟಿಯಾಗ್ತೀನಿ."
"ಯಾವತ್ತಾದರೂ ಅಂತ ಯಾಕೆ? ನಾಳೆ ಸಾಯಂಕಾಲವೇ ಹೇಳಿ ಕಳಿಸಿದ್ರು."
"ಆಗಲಿ ನಾಣಿ ."
"ಬರ್ತೀಯೇನು ಹಾಗಾದರೆ?"
"ಹೂಂ ನಾಣಿ,ನಿನ್ನ ಆರೋಗ್ಯ ನೋಡ್ಕೊ."
ಆದರೆ ನಾನು ಮರುದಿನ ಬರಲಿಲ್ಲ. ಬರುವುದಾಕ್ಕಾಗಲಿಲ್ಲ.
ಅದಕ್ಕೆ ಕಾರಣವಿತ್ತು.
ರಾತ್ರೆ ನನಗೆ ಸಿಗದೇ ಇದ್ದ ಶ್ರೀಕಂಠ, ಬೆಳಗ್ಗೆ ನಮ್ಮಲ್ಲಿಗೆ ಬಂದ.ಬಂದವನೇ ನಗುತ್ತ ಹೇಳಿದ.
"ಐ.ಜಿ.ಸಿ.-ಹೊಸಬಾಂತಿಟ್ಕೊ-ಫೋನ್ ಮಾಡಿದ್ರು."
"ನಿನ್ನೆಯೆ?"
"ಹೂಂ, ನಿನ್ನೆ ರಾತ್ರೇನೆ. ನಿನ್ನ ವಿಷಯಾನೆ."
"ನನ್ನ ವಿಷಯ!"
"ನಾಣಿ ಮನೆಗೆ ಹೋಗಿದಾನಲ್ಲ ಚಂದ್ರಶೇಖರ್-ಏನು ವಿಷಯ? ಅಂತ ನಿಚಾರಿಸಿದ್ರು."
"ಓ!"
"ಶ್ರೀಕಂಠನಿಗೆ ತಿಳಿದಿತ್ತು ಹಾಗಾದರೆ.ನನ್ನ ಚಲನವಲನ ಗಳನ್ನ ಅವನು ನಿರೀಕ್ಷಿಸಿದ್ದ.
"ಅವರಿಗೆ ಹ್ಯಾಗಂತೆ ಗೊತ್ತಾದ್ರು?"
"ನೀನೊಳ್ಳೆ ಭೂಪತಿ.....ಕೂಲಿಕಾರ ಮುಖಂಡನ ಮನೇ ಮುಂದೆ ಸ್ಪೆಷಲ್ ಬ್ರಾಂಚಿನವರು ಇಲ್ದೇ ಇರ್ತಾರೇನಯ್ಯ?ನಿನ್ನ ಅಲ್ಲಿ ನೋಡಿದ್ರು-ರಿಪೋರ್ಟ್ ಮಾಡಿದ್ರು ಅಷ್ಟೆ."
ಅದು ಸತ್ಯಾಂಶವೆಂಬುದು ನನಗೆ ಮನವರಿಕೆಯಯಿತು .
"ಅಂತೂ ನಾಣೀನ ನೀನು ಹೋಗದೇ ಇರ್ಲಿಲ್ಲ".
"ಕ್ಷಮಿಸು ಕಂಠಿ . ಅದೊಂದು ನನ್ನ ದೌರ್ಬಲ್ಯ ಅಂತಾನೆ ಇಟ್ಕೋ. ಹಾಗೆ ಗಾಳಿ ಸವಾರಿ ಹೋಗಿದ್ದೆ. ನಾಣಿ ಮನೆ ಸಿಗ್ತು .... ಒಂದು ನಿಮಿಷ ನಿಂತು ಬಂದೆ."
"ಆಗಲಿ ಬಿಡು."
"ಅಲ್ಲ ಏನ್ಹೇಳ್ದೆ ಐ.ಜಿ. ಪಿ. ಗೆ?".
"ನಿನ್ನ ನಾನೇ ಅಲ್ಲಿಗೆ ಕಳಿಸ್ಕೋಟ್ಟಿದ್ದು- ಅಂದೆ. ಬೇರೆ ಏನು ಹೇಳಬೇಕಾಗಿತ್ತು?"
"ಸಮಾಧಾನಕರ ಉತ್ತರ."
"ಅದ್ಸರಿಯೇ. ಅಲ್ಲಿ ಬೇರೆ ಯಾರು ಯಾರ್ನ ನೋಡ್ದೆ ಹೇಳು." "ಯಾರೂ ಬಂದಿರಲ್ಲ ಕಂಠಿ." ನನ್ನ ಮೇಲೆ ಸೂಕ್ಷ್ಮ ದೃಷ್ಠಿಯನ್ನೊಮ್ಮೆ ಬೀರಿ ಶ್ರೀಕಂಠ ಸುಮ್ಮನಾದ.
.... ಅಂತಹ ಪರೆಸ್ಥಿತಿಯಲ್ಲಿ ನಾನು, ಕೃಷ್ಣರಾಜನನ್ನು ಕಾಣಲು ನಾರಾಯಣನಲ್ಲಿಗೆ ಹೋಗುವುದು ಸಾಧ್ಯವಿರಲಿಲ್ಲ. ನಾನು ಹೋಗಲೇ ಇಲ್ಲ.
ಹೋಗಿದ್ದರೂ ನಾರಾಯಣನನ್ನು ಕಾಣುವುದಕ್ಕಾಗುತಿರಲಿಲ್ಲ. ಆ ದಿನ ಮಧ್ಯಾಹ್ನ ಬಂಧಿಸಲ್ಪಟ್ಟದ ಹಲವಾರು ಜನರೊಡನೆ ನಾರಾ ಯಣನನ್ನು ಲಾಕಪ್ಪಿಗೆ ಒಯ್ದಿದ್ದರು. ಅಲ್ಲಿಂದ ವಿಚಾರಣೆ ಇಲ್ಲದ ಸ್ಥಾನ ಬದ್ಧತೆಗಾಗಿ ಸೆರೆಮನೆಗೆ ಸಾಗಿಸಿದ್ದರು.
ಆ ಕಮಲಾ, ಪ್ರಾಯಶಃ ಆ ಅಗಲಿಕೆಯನ್ನೂ ದಿಟ್ಟತನ ದಿಂದ ಆಕೆ ಇದಿರಿಸಿದ್ದಳೇನೋ, ಇಬ್ಬರ ಪಾಲಿಗೂ ಬಾಳ್ವೆ, ಬೆವರು- ಕಣ್ಣೀರಿನ ಮಿಶ್ರಣವಾಗಿತ್ತು.
ಅಮೀರನಿಗೆ ಸಂಕಷ್ಟ ಓದಗಿದಾಗ ಶೀಲ ಅನುಭವಿಸುತಿದ್ದ ಯಾತನೆ...... ಚಲಂಗೆ ಅಪಾಯ ಓದಗಿದಾಗ ಸಾವಿತ್ರಿ ಸುರಿಸಿದ ಕಣ್ಣೀರು ..... ಅದಾದ ಮೇಲೆ ಈಗ ಕಮಲಾ ..........
ಆದರೆ ಇಲ್ಲೊಂದು ವ್ಯತ್ಯಾಸವಿತ್ತಲ್ಲವೇ? ಶೀಲ-ಸಾವಿತ್ರಿ
ಯರು ಬೇರೆ, ಕಮಲಾ ಬೇರೆ. ಕಮಲೆಯ ಹೃದಯದಲ್ಲಿ ದುಗುಡ ತುಂಬಿದ್ದರೂ ಮುಖದ ಮೇಲೆ ಅದು ಕಾಣಿಸುತ್ತಿರಲ್ಲಿಲ. ಸಹಸ್ರ ಜನರ ಸಹಾನುಭೂತಿಯ ಆಸರೆಯಲ್ಲಿ ಆಕೆ ಸಂಕಷ್ಟಗಳನ್ನು ದಿಟ್ಟತನ ದಿಂದ ಇದಿರಿಸುತ್ತಿದ್ದಳು.
ಸಹಸ್ರ ಜನರ ಸಹಾನುಭೂತಿ ......
ಆ ಸಹಾನುಭೂತಿ ದಿನ ಕಳೆದಂತೆ ಕರಗಿ ಮಾಯವಾದುದನ್ನು ಕಂಡೆ.
ಬಂಧನಕ್ಕೊಳಗಾದವರನ್ನು ಸರಕಾರ ಹೊರಬಿಡಲಿಲ್ಲ. ಮುಷ್ಕ್ರ ರವೇನೋ ನಡೆಯಿತು . ನಡೆದು ಮಾಲೀಕರಿಗೆಲ್ಲ್ಲ ಸಂತೋಷವನ್ನೇ ಉಂಟುಮಾಡಿತು. ಸಭೆ ಮೆರವಣೆಗೆಗಳಿರಲಿಲ್ಲ. ಯೂನಿಯನ್ನಿನ ಕರಪತ್ರಗಳಿರಲಿಲ್ಲ. ಸ್ಫೂರ್ತಿ ಹುಟ್ಟಿಸುವ ಹಾಡುಗಳಿರಲಿಲ್ಲ.....
ಶ್ರೀಕಂಠ ವಿಜಯದ ನಗು ನಗುತ್ತ ಹೇಳಿದ.
" ಮುಷ್ಕರ ನಿಧಿ ಕೂಡಿಸ್ತಾ ಇದಾರಂತೆ ಕಣೋ...ನಾವೂ ಅವರ ಡಬ್ಬಕ್ಕೆ ನಾಲ್ಕು ಕಾಸು ಹಾಕೋಣವೇನು ?"
" ಸತ್ತ ಹೆಣಾನ ಕಂಡು ನಗೋ ಚೈತನ್ಯ ನಿನಗಿದೆ ಕಂಠಿ."
" ಅಳೋದು ಮಾಮೂಲು ಕಣಪ್ಪ. ನಗೋದು ವೈಶಿಷ್ಟ್ಯಾ." ಅವನ ಆ ಮಾತುಗಳು ಬೇಸರ ಬಾರಿಸುತಿದ್ದುವು.
"ನೀನು ರಾಜಕೀಯದಲ್ಲಿ ಒಂದು ಕೈ ನೋಡ್ಬೇಕಾಗಿತ್ತು ಕಂಠಿ."
"ಅದೊಂದು ಉಳಿದಿದೆ ಎನ್ನು. ನನಗ್ಯಾತಕ್ಕಯ್ಯಾ ರಾಜ ಕೀಯ ? ರಾಜಕೀಯದವರು ಮನೆಬಾಗಿಲಿಗೀ ಬರ್ತರೆ . ಬೇಕಾದವಾರ್ನ ಕೊಂಡ್ಕೋಬಹುದು. ತಾತಾ-ಬಿರ್ಲಾರ್ನ ನೋಡು. ಅವರೇನು ಸ್ವತಃ ಎಲೆಕ್ಷನ್ನಿಗೆ ನಿಂತ್ಕೋತಾರೇನು?"
ಶ್ರೀಕಂಠ,ತಾತಾ-ಬಿರ್ಲರ ಮಾತನ್ನಾಡುವುದು, ಅವರ ಮೇಲ್ಸಂಗ್ತಿಯನ್ನು ನೋಡುವುದು, ಸ್ವಾಭಾವಿಕವಾಗಿತ್ತು.
ಏನೋ ಯೋಚಿಸುತಿದ್ದ ಶ್ರೀಕಂಠ, ವಕ್ರವಾಗಿ ನಕ್ಕು ಹೇಳಿದ:
" ಈ ವರ್ಷದ ಕೊನೇಲಿ ಸಾರ್ವತ್ರಿಕ ಎಲೆಕ್ಷನ್ ಬರತ್ತೆ, ಗೊತ್ತಾ ಚಂದ್ರು?"
"ಹೌದು, ವಯಸ್ಕರ ಮತದಾನ ಪದ್ದತಿ ಪ್ರಕಾರವಾದ ಎಲೆಕ್ಷನ್ನು."
"ಹುಂ! ಮೊನ್ನೆ ಕಾಂಗ್ರೆಸ್ ಸಮಿತಿ ಕಡೆಯಿಂದ ಕೆಲವರು ಬಂದಿದ್ರು......"
"ಏನು ಎಲೆಕ್ಷನಿಗೆ ಸಿದ್ಧತೇನಾ?"
"ಅಲ್ಲವೆ ಮತ್ತೆ? ಅದೂ ಎಂಥ ಸಿದ್ಧತೆ ಅಂತೀಯಾ? ಶಾರಾ ದಾನ ಪಶ್ಚಿಮ ವಾಡ್ನಾಲ್ಲಿ ಉಮೇದುವಾರಳಾಗಿ ನಿಲ್ಲಿಸ್ಬೇಕೂಂತ ಅವ ರೆಲ್ಲ ಅಪೇಕ್ಷೆಪಟ್ಟಿದಾರಂತೆ."
"ಓ!"
"ನಾವೇನೂ ಮಾಡ್ಪೇಕಾದ್ದೆಲ್ಲ. ಪ್ರಚಾರದ ಭಾರವೆಲ್ಲ ಅವರದೆ. ಸುಮ್ಮನೆ ಒಪ್ಪಿಕೊಂಡರಾಯ್ತು ನಾವು. ಜತೆಯಲ್ಲೆ ಒಂದೆರಡು ಲಕ್ಷ ಅವರ ಜನರಲ್ ಫಂಡಿಗೆ ಸುರಿದರಾಯ್ತು!"
"ಅತ್ತಿಗೆಗೆ ಗೊತ್ತೇನು ಈ ವಿಷಯ?"
"ಗೊತ್ತಿಲ್ವೆ! ಅವಳು ಈಗಾಗ್ಲೇ ಚುನಾಯಿತಳಾಗಿ ಅಸೆಂಬ್ಲಿ ಪಾರ್ಟೀಲಿ ಭಾಷಣ ಕೊಡೋದ್ನ ಕಲ್ಪಿಸಿ ಕೂತಿದಾಳೆ. ಅಷ್ಟೇ ಅಲ್ಲ ಮಂತ್ರಿಮಂಡಲ್ದಲ್ಲಿ ಶಾನಿರೋದನ್ನ ಕನಸಲ್ಲಿ ಕಾಣ್ತಿದ್ದರೂ ಇರ ಬಹದು."
"ಏನೋಪ್ಪ-ಈ ವಿಷಯಗಳೆಲ್ಲ!"
ಶ್ರಮಜೀವಿಗಳ ಆ ಹೋರಾಟ ಮಣ್ಣುಗೂಡಿತು. ಹೊಗೆ ಯೂಡದ ಗುಡಿಸಲುಗಳು....ಬೆನ್ನಿಗೆ ಅಂಟಿಹೋದ ಹೊಟ್ಟೆಗಳು..... ಕಂಬನಿಯನ್ನು ಮೌನವಾಗಿ ಸುರಿಸಿದ ಕಣ್ಣುಗಳು....
ಮಾಲೀಕರು ನೇಮಿಸಿದ ಗುಂಡರ ಪ್ರತಾಪ ಹೆಚ್ಚಿತು. ಕೆಂಪು ಬಾವುಟದ ಯೂನಿಯನ್ನಿನ ಕಚೇರಿ ಪುಡಿಪುಡಿಯಾಯಿತು.
ಇಪ್ಪತ್ತೋದು ದಿನ ಮುಷ್ಕರವಾದಮೇಲೆ ಓದಗಿದ ಸನ್ನಿ ವೇಶ, ಎಲವೂ ತಣ್ಣಗಿದ್ದಂತೆ ತೋರಿದಾಗ ಜಿಲ್ಲಾಧಿಕಾರಿಗಳು ಸಭೆ ಸೇರಿಸುವುದರ ಮೇಲಿನ ನಿಷೇಧಾಜ್ಞೆಯನ್ನು ರದ್ದುಗೊಳಿಸಿದರು. ಸ್ವಲ್ಪಹೊತ್ತಿನಲ್ಲೆ ಸಂಘದ ಹೆಸರಿನಲ್ಲೊಂದು ಕರಪತ್ರ ಹೊರಟಿತು. ಆ ಸಂಜೆಯ ಮುಂದಿನ ಹಾದಿಯನ್ನು ಗೊತ್ತುಮಾಡುವುದಕ್ಕಾಗಿ ಎಲ್ಲ ಕೆಲಸಗಾರರ ಬಹಿರಂಗ ಸಭೆಯನ್ನು ಕರೆಯಲಾಗಿತ್ತು.
ಸಭೆ ಜರಗಿತು.ಸಂಘದ ನಾಯಕರ ಬಿಡುಗಡೆಯಾಗಿದೆ ಎಂದು ಸುಳ್ಳುಹೇಳಿ ಕೆಲಸಗಾರರನ್ನು ಸಭೆಗೆ ಆಕರ್ಷಿಸಿದ್ದರು. ಕತ್ತ ಲಾದಾಗ ಸಭೆ ಆರಂಭವಾಯಿತು. ಶ್ರೀಕಂಠನೂ ನಾನೂ ಬಯಲಿನ ಹೊರ ಅವರಣದಲ್ಲಿ ಕಾರಿನೂಳಗೆ ಕುಳಿತು, ಧ್ವನಿವಾಹಕ ಯಂತ್ರ ದಿಂದ ಕೇಳಿಬರುತಿದ್ದ ಭಾಷಣಗಳಿಗೆ ಕಿವಿಗೊಟ್ಟವು.
"ಈ ಸಾರೆ ಮೈಕ್ರೋಫೋನಿಗೆ ನಾವೇ ದುಡ್ಕೊಟ್ಟೆವು ಕಣೋ. ಸಾಧುಪ್ರಾಣಿಗ್ಳು ಅವರ ಸಂಘದಲ್ಲಿ ಮೂರು ಕಾಸೂ ಉಳಿದಿರ್ಲಿಲ್ಲ. ಎಲ್ಲ ಹಣವನ್ನೂ ಆ ಮುಖಂಡರು ಎತ್ಪಾಕ್ಬಿಟ್ರಂತೆ......."
ಶ್ರೀಕಂಠನ ಆ ವಿವರಣೆ ಕೇಳಿದಮೇಲೆ, ಭಾಷಣವೀಯುತಿದ್ದ ವಾಚಾಳಿಯ ಮಾತಿನ ವೈಖರಿಗೆ ನನಗೆ ಅರ್ಥವಾಯಿತು. ಮುಖಂ ಡರ ಬಂಧನವಾದುದಕ್ಕೆ ಆತ ಆಕ್ರೋಶಮಾಡಿದ. ಮಾಲೀಕರು ನಿಷ್ಕರುಣಿಗಳೆಂದು ಹೇಳಿದ.ಆಮೇಲೆ ಇಪ್ಪತ್ತೊಂದು ದಿನಗಳ ಉಪ ವಾಸದಿಂದ ಆದ ಸಂಕಷ್ಟಗಳನ್ನು ಶೋಕರಸಪ್ರಧಾನವಾಗಿ ವರ್ಣಿ ಸಿದ.ಹಾಗೆ ಮಾಡಿದಾಗ ಆತನ ಕಂಠ ಗದ್ದದಿತವಾಯಿತು. ಒಂದು ನಿಮಿಷ ತಡೆದು ನಿಂತು ಕಣ್ಣೊರೆಸಿಕೊಂಡು ಅವನು ಮಾತು ಮುಂದು ವರಿಸಿದ.....
"ನೋಡಿದ್ಯೇನೋ ಮಾತಿನ ಧೋರಣೆ? ರಾಜಕೀಯದಲ್ಲಿರೋ ದಕ್ಕು ಲಾಯಕ್ಕಾಗಿದ್ದಾನೆ ಆಸಾಮಿ."
"ಯಾರು ಈತ?"
"ಸುಂದರರಾಜ ಅಂತ.ಹಿಂದೆ ಒಂದು ಕಾಲ್ಪಲ್ಲಿ ಎಸ್ಮೀನಾ ಮಿಲ್ನಲ್ಲಿ ಸಂಘ ಕಟ್ಟಿದ್ದ.ಕೆಂಪು ಬಾವುಟ ಬಂದ್ಮೇಲೆ ಅವನು ಮೂಲೆಗುಂಪಾದ ಇನ್ನು ಮುಂದೆ ಈತನೇ ಸಂಘದ ಕಾರ್ಯದರ್ಶಿ ಆಗೋದು ಖಂಡಿತ."
ಮಾಲೀಕರ ಪರವಾಗಿಯೆ ನಿಂತು ಆತ ಭಾಷಣ ಮಾಡುತ್ತಿದ್ದ ನೆಂಬುದು ನನಗೆ ಸ್ಪಷ್ಟವಾಯಿತು. ಆದರೆ ಅಷ್ಟು ಜನ ಕೆಲಸಗಾರ ರಿಗೆ ಅದೆಲ್ಲ ಅರ್ಥವಾದಂತೆ ತೋರಲಿಲ್ಲ. ಅವರು ಅವನ ಭಾಷಣಕ್ಕೆ ತಲೆದೂಗುತ್ತಿದ್ದರು.... ....
ಭಾಷಣದ ಕೊನೆಯಲ್ಲಿ ಆತ ಹೇಳಿದ:
"ನಾವೀಗ ಏನು ಮಾಡಬೇಕೋ ತಿಳೀದಾಗಿದೆ. ಹೇಗಾ ದರೂ ಮಾಡಿ, ಕೆಟ್ಟುಹೋಗಿರೋ ವಾತಾವರಣಾನ ನಾವು ಸರಿಪಡಿ ಸ್ಬೇಕು.... ಜೈಲಿನಲ್ಲಿರೋ ಮುಖಂಡರ್ನ ಬಿಡಿಸೋದು ಸಾಧ್ಯ ಆಗೋ ಹಾಗೆ ನಾವು ನಡ್ಕೋಬೇಕು."
ಸಭೆಯಲ್ಲಿದ್ದವನೊಬ್ಬ ಕೇಳಿದ:
"ಏನ್ಮಾಡ್ಬೇಕೂಂತ ನೀನು ಹೇಳೋದು?"
"ನಾವೆಲ್ಲ ವಾಪಸು ಕೆಲಸಕ್ಕೆ ಹೋಗ್ಬೇಕು... ...."
ಒಬ್ಬ ಮುದುಕ ಎದ್ದು ನಿಂತು ಕೂಗಾಡಿದ: "ಇದು ಮೋಸ. ನಾವು ಒಪ್ಕೋಬಾರ್ದು....ಕೆಲಸಕ್ಕೋದ್ಮೇಕೆ ನಮ್ಮನ್ನ ಕೇಳೋ ರಿಲ್ಲ."
ಆದರೆ ಆ ಮುದುಕನೆದುರು ಧ್ವನಿವಾಹಕ ಯಂತ್ರವಿರಲಿಲ್ಲ. ಅವನ ಮಾತು ಹಲವರಿಗೆ ಕೇಳಿಸಲಿಲ್ಲ. ಕೆಲವರು ಗಲಾಟೆ ಮಾಡಿ ಅವನನ್ನು ಹಿಡಿದು ಕುಳ್ಳಿರಿಸಿದರು.
ಶ್ರೀಕಂಠ ನಗುತ್ತ, "ಹೋಗೋಣ ಇನ್ನು. ಇಲ್ಲಿ ಎಲ್ಲವೂ ಸರಿಯಾಗಿದೆ....ಇನ್ನು ಯಾವ ಯೋಚ್ನೇನೂ ಇಲ್ಲ" ಎಂದೆ.
.... ....ಕೆಲಸಗಾರರು ಮುಂದಿನ ಎರಡು ಮೂರು ದಿನಗಳಲ್ಲಿ ಕಾರಖಾನೆಗಳಿಗೆ ಹೋದರು. ಮಾಲೀಕರೂ ಹೊರಬರಲಿಲ್ಲ. ಸುಂದರ ರಾಜನ ಗುಂಪು, ಸಂಘದ ಅಧಿಕಾರಸ್ಥಾನಕ್ಕೆ ಬಂತು. ಆಮೇಲೆ ಒಂದು ವಾರದಲ್ಲೆ ಮೂರರಲ್ಲಿ ಒಂದಂಶದಷ್ಟು ಜನ ಕೆಲಸಗಾರರು ಉದ್ಯೋಗದಿಂದ ವಜಾಮಾಡಲ್ಪಟ್ಟರು.
ಒಂದು ಕಾಲದಲ್ಲಿ ಅವರು ಸೆಟೆದು ನಿಂತಿದ್ದ ಕೂಲಿಕಾರರು. ಈಗ ಸತ್ವಹೀನರಾಗಿ ಸಪ್ಪೆಯಾಗಿದ್ದ ಬಡವರು.....
ಅದಾಗಿ ಸ್ವಲ್ಪ ದಿನಗಳಮೇಲೆ ಮುನಿಸ್ವಾಮಪ್ಪ,ನಾಣಿ ಮತ್ತಿತ ರರ ಬಿಡುಗಡೆಯಾಯಿತು.
....ಮತ್ತೆ ಶಂಕೆಗಳು ಮೂಡಿದುವು......ಪ್ರಾಯಶಃ ಪ್ರಪಂಚ ಹೀಗೆಯೇ ಇರಬೇಕೇನೊ.ಪ್ರಬಲವಾದ ಒಂದೇ ಶಕ್ತಿಗೆ ಮಣಿದು ಎಲ್ಲರೂ ಬಾಳ ಬೇಕೇನೋ. ಅದನ್ನು ತಿಳಿದೂ ತಿಳಿದೂ ಆ ಜನರು ಹೋರಾಡುವುದರಲ್ಲಿ ಅರ್ಥವೇನಿತ್ತು ? ನಾರಾಯಣನಿಗೆ ಅಷ್ಟೂ ತಿಳಿಯದೆ?
ಆ ಒಂದು ದಿನ ಹೋಟೆಲಿನಲ್ಲಿ ಯುವಕನೊಬ್ಬ "ಚೇತನಾ" ಎಂಬ ಪತ್ರಿಕೆಯನ್ನೋದುತಿದ್ದ. ಬಣ್ಣಬಣ್ಣದ ಹೊದಿಕೆಯಿತ್ತು ಹೊರಗೆ. ಬಲು ಆಸಕ್ತಿಯಿಂದ ಆ ಯುವಕ ಯಾವುದೋ ಎರಡು ಪುಟಗಳನ್ನು ಒಂದಕ್ಷರವೂ ಬಿಡದಂತೆ ಓದುತಿದ್ದ.
ಸಮೀಪ ಕುಳಿತಿದ್ದ ನಾನು, "ಯಾವ ಲೇಖನ ಓದ್ತಾ ಇದೀರಾ?" ಎಂದು ಕೇಳಿದೆ
"ಕತೆ ಸಾರ್, ಕೃಷ್ಣರಾಜರ ಕತೆ ಬಂದಿದೆ!' 'ಸೋಲಿನ ಬಳಿಕ' ಅಂತ. ಚೆನ್ನಾಗಿದೆ ಸಾರ್!"
ಕೃಷ್ಣರಾಜರ ಕತೆ. ಓದಬೇಕೆನ್ನಿಸಿತು. ಆದರೆ ಆ ಯುವಕ ಪತ್ರಿಕೆಯೊಡನೆ ಹೊರಟು ಹೋದ. ಅದು ಆತನ ಸ್ವಂತದ ಪತ್ರಿಕೆ ಯಾಗಿತ್ತು.
ನಾನು ಬೀದಿಯುದ್ದಕ್ಕೂ ಸ್ವಲ್ಪ ದೂರ ನಡೆದು ಹೋದೆ. ಅಲ್ಲೊಂದು ಪತ್ರಿಕೆಯಂಗಡಿ ಇತ್ತು, ಶೇಷಗಿರಿಯದಲ್ಲ--- ಬೇರೆ ಯಾರದೋ...... ಚೌಕದಲ್ಲಿ ಹುಡುಗರು ನಿಂತಿದ್ದರು--ಪತ್ರಿಕೆ ಮಾರುವ ಹುಡುಗರು...ಊರ ಚೌಕಗಳು..."ಪೇಪರ್ ಬೇಕೇ ಸಾರ್ ಪೇಪರ್ !"
ಮತ್ತೆ ಬಾಲ್ಯದ ನೆನಪುಗಳು.......
ನಾನು ಆ ಅಂಗಡಿಯಿಂದ "ಚೇತನಾ" ಪತ್ರಿಕೆಯ ಒಂದು ಪ್ರತಿ ಕೊಂಡುಕೊಂಡೆ. ಮನೆ ಸೇರಿ ಆ ಕಥೆಯನ್ನೋದಿದೆ.
ಎಷ್ಟೊಂದು ಸರಳವಾಗಿ ಕಲಾತ್ಮಕವಾಗಿತ್ತು ಆ ಕಥೆ! 'ಸೋಲಿನ ಬಳಿಕ'.. ಹೌದು, ಏನು ಆ ಬಳಿಕ? ಕೆಲಸಗಾರರು ನಡೆ ಸಿದ ಹೋರಾಟದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಆ ಕಥಾ ವಸ್ತು ರೂಪುಗೊಂಡಿತ್ತು... ಮೊದಲು ವಿಜಯ, ಆ ಬಳಿಕ ಸೋಲು - ಅನಿವಾರ್ಯದ ಸೋಲು. ಆಮೇಲೆ ಮತ್ತೆ ಮುನ್ನಡೆ. ಕಥೆಯ ನಾಯಕನಾದ ಸಾಮಾನ್ಯ ಕೂಲಿಗಾರನೊಬ್ಬನ ಬಾಯಿಂದ ಕತೆಯ ಕೊನೆಯಲ್ಲಿ ಮಾತುಗಳು ಹೊರಡುತ್ತಿದ್ದವು:
"ಇಂಗೇ ಇರೋಕಾತದ? ಇಂಥ ನಾಯಿ ಬಾಳು ಬಾಳೋ ಕಾತದ? ಒಂದಿವ್ಸ-ಎರಡ್ದಿವ್ಸ ಇಂಗಿರ್ಬೋದು, ಆದರೆ ಯಾವಾಗ್ಲೂ ಇಂಗೇ ಇರೋಕಾತದ? ಗಿಡ ಕಡದ್ರೆ ತಿರ್ಗಾ ಚಿಗರ್ತೇತೆ. ಮರ ಕಡಿದ್ರೆ ಬುಡ ಚಿಗರ್ಕೋತದೆ. ಹೆಂಡ್ತಿ ಬಸಿರು ಕಳ್ದೋದ್ರೆ ಮತ್ತೆ ಮಗ ಆಗಕಿಲ್ವಾ.......... ಅಂಗೇ ಕಣ್ರಪ್ಪೋ...... ತಿರ್ಗ ಚಿಗತ್ಕೋತದೆ ಸಂಘ... ಬ್ಯಾಸ್ಗೇನೆ ಯಾವಗ್ಲೂ ಇದ್ದಾತಾ? ಮಳೆ ಬತ್ತದೆ ಕಣ್ರಪೋ. ಮಳೆ ಬತ್ತದೆ.... ಬರಾಕಿಲ್ಲಾ ಅನ್ನೋಕಾದಾತಾ? ಬತ್ತದೆ ಕಣ್ರಪೋ, ಬಂದೇ ಬತ್ತದೆ..."
ಓದುತ್ತ ನನ್ನ ಕಣ್ಣು ಮಂಜಾಯಿತು... ಒಂದು ಕತೆಗೆ ಈ ರೀತಿ ಹೃದಯವನ್ನು ಹಿಡಿದು ಅಲುಗಿಸುವ ಸಾಮರ್ಥ್ಯವಿತ್ತೆಂಬುದು ನನಗೆ ಗೊತ್ತಿರಲಿಲ್ಲ. ,
ಕೃಷ್ಣರಾಜರದೊಂದು ಕತೆ....
ಶ್ರೀಕಂಠನನ್ನು ಆ ಸಂಜೆ ಕಾಣಬೇಕಾಗಿದ್ದ ನಾನು ಅತ್ತ
ಹೋಗದೆ, ನಾರಾಯಣನನ್ನು ಹುಡುಕಿಕೊಂಡು ಹೋದೆ. ಹಗುರ ವಾಗಿದ್ದ ಹೃದಯ, ನನ್ನನ್ನು ತಿಳಿದುಕೊಳ್ಳುವ ಸಾಮರ್ಥ್ಯವಿದ್ದ ಇನ್ನೊಂದು ಹೃದಯದ ಸಾಮಿಪ್ಯಕ್ಕಾಗಿ ಹಾತೊರೆಯುತಿತ್ತು.
ಬಾಗಿಲು ತೆರೆದ ಕಮಲಾ ಕೇಳಿದಳು.
"ಇದಾರೆ, ಬನ್ನಿ. ಬಹಳ ದಿನಗಳ ಮೇಲೆ ಬಂದಿದೀರಿ."
"ಹೂನಮ್ಮ, ಬರೋಕಾಗಲೇ ಇಲ್ಲ."
"ಹ್ಯಾಗಿದೆ ನಿಮ್ಮ ಹೊಟ್ಟೇ ನೋವು?"
ನನ್ನ ಹೊಟ್ಟೇ ನೋವನ್ನು ನೆನಪಿಟ್ಟುಕೊ೦ಡಿದ್ದ ಆ ತಾಯಿ!
"ಇದೆಯಮ್ಮಾ ಹಾಗೇ. ನಾಣಿ ಎಲ್ಲಿ?"
"ಬಚ್ಚಲ್ಮನೇಲಿದಾರೆ ಬನ್ನಿ..."
ಸ್ವಲ್ಪ ಹೊತ್ತಿನಲ್ಲೇ ನಾರಾಯಣ ಬ೦ದ...ಅವನಿಗೆ ಕೆಲಸ ವಿರಲಿಲ್ಲ....ಅವನನ್ನು ಹೊರ ಹಾಕಿದ್ದರು...ಸಾಲದ ಆಧಾರದ ಮೇಲೆ ಜೀವನ....ನಿನ್ನೆ ನಾಯಕನಾಗಿದ್ದವನು ಇವತ್ತು ಹೇಗಾದ...ಉರುಳಿ ಹೋದ ಮ೦ತ್ರಿ ಮ೦ಡಲದ ಸಚಿವನ ಹಾಗೆ....
"ನಾಣಿ ಈ ಬೆಳಿಗ್ಗೆ ಕೃಷ್ಣರಾಜರ ಕತೆ ಓದ್ದೆ...ಆ ಸ೦ತೋಷ್ದಲ್ಲೇ ಬ೦ದೆ ಇಲ್ಲಿಗೆ.</p[>
"ಓದ್ದೆಯಾ? ಚೆನ್ನಾಗಿದೆ ಅಲ್ವಾ? ಅವರು ಒಳ್ಳೇವರು ಚ೦ದ್ರೂ....ನೀನು ಅವರ್ನ-"
"ಆ ದಿವಸವೇ ನೀನು ಹೇಳಿದ್ದೆ. ಆದರೆ ಆಗ್ಲಿಲ್ಲ ನಾಣಿ.ಈಗ ನೋಡ್ಬೇಕೂ೦ತ ಆಸೆ..."
"ನಾಳೆ ಬ೦ದೇ ಬರ್ತಾರೆ ಹ್ಯಾಗೂ...ಇಲ್ಲಿಗೇ ಬ೦ದ್ಬಿಡು ಚ೦ದ್ರು."
ಉಪ್ಪಿಟ್ಟು-ಕಾಫಿಯ ನಿರೀಕ್ಷೆ ನನಗಿರಲಿಲ್ಲ....ಅದೇನು ಅಡುಗೆ ಮಾಡುತಿದ್ದರೋ, ಅದೇನು ತಿನ್ನುತಿದ್ದರೋ....ಬಟ್ಟಿ ಹಾಕಿಕೊಳ್ಳುವ೦ತೆ ಹೇಳಿ,ಅವನನ್ನು ಕರೆದುಕೊ೦ಡು ಹೊರಬ೦ದೆ. ಹತ್ತಿರದ ಹೋಟೆ ಲಿಗೆ ಹೋಗಿ ತಿ೦ಡಿ ತಿ೦ದೆವು......
ಕಾಫಿ ಕುಡಿಯುತ್ತಿದ್ದಾಗ ಕೇಳಿದೆ:
"ನಾಣಿ,ದುಡ್ಬೇಕಾ? ಆದರೆ ಮೊದಲೇ ಹೇಳೋದು ವಾಸಿ... ಈ ದುಡ್ಡು ನನ್ದಲ್ಲ-ಶ್ರೀಕ೦ಠನ್ದು."
ಅವನ ಕಣ್ಣುಗಳು ಮಿನುಗಿದುವು.
"ಶ್ರೀಕ೦ಠನ ದುಡ್ಡು? ಆದು ಸುಳ್ಳು ಚ೦ದ್ರೂ! ಬಡವರ ಬೆವರು ಆ ದುಡ್ಡು....ಎ೦ಥ ಮಾತಾಡ್ತೀಯಾ ನೀನು!...ಆಮೇಲೈ ಮೊದಲ್ನೇ ಪ್ರಶ್ನೆ-ಈಗ ಬೇಡ ಚ೦ದ್ರೂ...ಇದೆ. ಸಾಲ ತಗೊ೦ಡಿ
ದೀನಿ.....ಈಗ ಬೇಡ......"
ನನ್ನ ಬಗ್ಗೆ ನನಗೆ ನಾಚಿಕೆಯಾಗಿತ್ತು. ಹೇಗಾಗಿದ್ದವನು
ಹೇಗಾದೆ! ಹೇಗೆ ಆಗಬೇಕಾಗಿದ್ದವನು ಯಾವ ಸ್ಥಿತಿಗೆ ಬಂದು
ತಲಪಿದೆ!
ಕಮಲೆಗಾಗಿ ಏನಾದರೂ ನಾಣಿ ಕೈಯಲ್ಲಿ ಕಳುಹಿಕೊಡುವ
ಮನಸ್ಸಾಯಿತು. ಆದರೆ ನನಗೆ ಆ ಅಧಿಕಾರವಿತ್ತೆ? ಹಣ ಕೊಟ್ಟು
ಹೆಣ್ಣುಗಳ ಮೈಮುಟ್ಟಿದ ನಾನು, ದೇವಿಯಂಥ ಆ ಜೀವದ ಬಗ್ಗೆ
ಕನಿಕರ ವ್ಯಕ್ತಪಡಿಸುವ ಅರ್ಹತೆಯನ್ನಾದರೂ ಉಳಿಸಿಕೊಂಡಿದ್ದೆನೆ?
......ಕರುಳು, ಕಿತ್ತು ಬರುವಂತೆ ಸಿಡಿಯುತ್ತಿತ್ತು....ಹೃದಯ, ಹಲವು ಆಘಾತಗಳಿಂದ ಜರ್ಜರಿತವಾಗಿತ್ತು.....ಸಂಕಟ...
ಮರುದಿನ ಕಂಡಾಗ ಕೃಷ್ಣರಾಜರು ನನ್ನನು ಮರುಳುಗೊಳಿಸಿ
ದರು.ಎಲ್ಲ ವ್ಯಕ್ತಿಗಳನ್ನೂ ತನ್ನ ಸಮಾನರೆಂದೇ ಕಾಣುವ
ಆ ಹಿರಿತನ....
"ಅದು ಚಿನ್ನದಂಥ ಕತೆ ಸಾರ್."
" ನಿಮ್ಮ ಮೇಲೆ ಒಂದಿಷ್ಟು ಪರಿಣಾಮ ಮಾಡಿದೆಯಲ್ಲಾ,
ಅದೇ ದೊಡ್ಡ ಸಮಾಧಾನ."
ಅವರ ಸಾಮೀಷ್ಯದಲ್ಲಿ ವಿಚಿತ್ರವಾದ ಅನುಭವವಾಗುತಿತ್ತು
ನನಗೆ. ವಯಸ್ಸಿನಲ್ಲಿ ನನಗಿಂತ ಕಿರಿಯನಾದ ವ್ಯಕ್ತಿ...ಆದರೆ ಅವರ
ದೆಂತಹ ಜನೋಪಯೋಗಿ ಜೀವನ!....ನನಗೂ ಆಗಿತ್ತು ವಯಸ್ಸು
ಕೋಣನಿಗೆ ಆದ ಹಾಗೆ. ಆದರೆ ಏನು ಪ್ರಯೋಜನ? ಯಾರಿಗೇನು
ಪ್ರಯೋಜನ?
ಏನೇನೋ ವಿಷಯಗಳನ್ನು ಕುರಿತು ಅವರು ಮಾತನಾಡು
ತಿದ್ದರು. ಮೂಕನಾಗಿ ಅವರೆದುರು ನಿಂತಿರಬೇಕೆನಿಸುತ್ತಿತ್ತು.
"ನೋಡಿ ಚಂದ್ರಶೇಖರ್, ನಮ್ಮ ಪೀಳಿಗೆಯೇ ಹಾಗೆ......
ಸಮಾಜದ ವಿಷಮ ಚಕ್ರಕ್ಕೆ ನಮ್ಮ ಬಟ್ಟೆ ಬರೆ ತಗಲಿ ಹರಿದು ಚಿಂದಿ
ಯಾಗಿದೆ. ಮನಸ್ಸು ತೂಗಾಡ್ತದೆ-ಗೊತ್ತು ಗುರಿ ಇಲ್ಲದೆ.
ಮನುಷ್ನಾದ್ಮೇಲೆ ಒ೦ದು ಶ್ರದ್ದೆ ಇರಲೇಬೇಕು. ನ೦ಬುಗೆ ಇರಲೇ ಬೇಕು. ಅದಿದ್ದರೆ ಜೀವನ ತು೦ಬಿಕೊ೦ಡಿರ್ತದೆ."
" ಶ್ರದ್ದೆ-ನ೦ಬುಗೆ ಶೋಷಕ ವರ್ಗದವರಲ್ಲೂ ಇರತ್ತಲ್ವ ಕೃಷ್ಣ ರಾಜ್?
ಅದು ನಾರಾಯಣ ಕೇಳಿದ ಪ್ರಶ್ನೆ. ಆ ಪ್ರಶ್ನೆ ಎಷ್ಟೊಂದು ಸಮಂಜಸವಾಗಿತ್ತು! ಅದರ ಜತೆಯಲ್ಲೆ" ಕೃಷ್ಣ್ರರಾಜ" ಎಂಬ ಸಲಿ ಗೆಯ ಸಂಭೋಧನೆ....ನನ್ನ ಹೃದಯ ಸ್ವಲ್ಪ ನೊಂದಿತು. ಅ ಯುವಕ ಕೃಷ್ಣರಾಜನನ್ನು ಸಲಿಗೆಯಿಂದ ಸಂಭೋಧಿಸುವ ಯೊಗ್ಯತೆ ನಾರಾಯಣನಿಗಿದೆ- ನನಗಿಲ್ಲ....
"ಸರಿಯಾದ ಪ್ರಶ್ನೆ ನಾರಾಯಣ. ಒಳ್ಳಯ ಶ್ರದ್ದೆ - ನಂಬುಗೆ ಇದ್ದ ಮಾನವರು ಸದುದ್ದೇಶ ಸಾಧಿಸುತ್ತಾರೆ. ಜನರನ್ನು ಮೆಟ್ಟ ತುಳಿಯೋದರಲ್ಲೇ ಶ್ರದ್ದೆ ಇರೋರು ಸಮಾಜಕಂಟಕರಾಗ್ತಾರೆ. ನ್ಯಾ ಯದ ಪಕ್ಪ ಹೆಚ್ಚು ಬಲಶಾಲಿಯಾದ ಹಾಗೆ ಅನ್ಯಾಯದ ಪಕ್ಷ ಒಡೆದು ಮೂರಾಬಟ್ಟೆಯಾಗಿ ಮಣ್ಣು ಮುಕ್ತದೆ. ಅಲ್ವೆ?"
....ಸಾಧ್ಯವಿತ್ತೆ ಹಾಗಾದರೆ ? ನಾನು ಇನ್ನಾದರೂ ಜೀವನದಲ್ಲಿ ಶ್ರದ್ದೆ - ನಂಬುಗೆಯನ್ನು ಬಳೆಸಿಕೊಳ್ಳುವುದು ಸಧ್ಯವಿತ್ತೆ? ಇನ್ನು ಮೇಲಾದರೂ ನಾನು ನೇರವಾದೊಂದು ಹಾದಿಯಲ್ಲಿ ಸಾಗಬಲ್ಲೆನೆ?
ಆ ಮೇಲೆ ಅವರ ಹಾರೈಕೆ;
"ಬರೀರಿ ಚಂದ್ರಶೇಖರ್. ನೀವು ಬರೀರಿ...." ಆತ, ನನ್ನ ಜೀವನದ ಅನುಭವಗಳನ್ನು ನಾನು ಬರೆದರೆ ಅದೊಳ್ಳೆಯ ಸಾಹಿತ್ಯವಾದೀತೆಂದು ನನಗೆ ನಂಬುಗೆ ಹುಟ್ಟಸುವಂತೆ ಹೇಳಿದ ರೀತಿ...
ನಮ್ಮ ಜೀವನದ ಅನುಭವಗಳು!ಅವುಗಳೇನೆಂದು ತಿಳಿಯದ ನಾರಾಯಣ ಏನನ್ನೋ ಕಲ್ಪಿಸಿಕೋಂಡು ಕೃಷ್ಣರಾಜರಿಗೆ ಹೇಳಿರಬೇಕು. ಆದರೆ ನನ್ನ ಅನುಭವಗಳು ನನೋಬ್ಬನ ಆಸ್ತಿ ಮಾತ್ರ ಅಗಿದ್ದುವಲ್ಲವೆ? ನನ್ನ ಮನಸ್ಸಿನ ಆಳದ ಒಳಹೊಕ್ಕು, ಹೃದಯವನ್ನು ಕೆದಕಿ, ಆ ಸ್ಮರಣೆಯ ಭಂಡಾರದೊಳಕ್ಕೆ ಏನೇನಿತ್ತೆಂದು ಯಾರು ಕಂಡಿದ್ದರು?....
ನನ್ನ ಗತ ಜೀವನವನ್ನು ನೆನೆಸಿಕೊಂಡಾಗ ನನ್ನ ಹೃದಯ ಅಳುಕುತ್ತಿತ್ತು. ಹೀಗಾಗಿ ಹೋಯಿತಲ್ಲವೆ? ಜೀವನದಲ್ಲಿ ಒಂದು ಶ್ರದ್ಧೆ ನಂಬುಗೆ... ಇಲ್ಲ, ನನಗೆ ಅಂತಹ ಶ್ರದ್ಧೆ ನಂಬುಗೆ ಯಾವ ಕಾಲದಲ್ಲೂ ಇರಲಿಲ್ಲ...
ಕೃಷ್ಣರಾಜ ಹೇಳುತ್ತಿದ್ದರು:
"ಆಗಾಗ್ಗೆ ಸಿಗ್ತಾ ಇರಿ ಚಂದ್ರಶೇಖರ್."
ನನ್ನ ಬಾಳ್ವೆಯು ಕತೆ, ಆತನ ಕೈಯಲ್ಲಿ ರುದ್ರ ಕಾದಂಬರಿ ಯಾಗಬಹುದು, ರುದ್ರ ನಾಟಕವಾಗಬಹುದು!
ಆದರೆ ಅದು ರುದ್ರವೇ ಎಂದು ಆಗಲೀ ನಾನೇ ತೀರ್ಪು ಕೊಡ ಬೇಕೆ?
ನಾನು ಕೃಷ್ಣರಾಜರನ್ನು ಕಾಣ ಹೋಗಲಿಲ್ಲ. ಅವರು ಕೆಲ ವರ ಪ್ರಾಣಕ್ಕೆ ಎರವಾಗುವೆನೆಂದು ಒಂದು ದಿನ ಒಪ್ಪಿಕೊಂಡಿದ್ದೆ. ಹಾಗಾಗಲಿಲ್ಲ. ಆಮೀಲೆ ಕೃಷ್ಣರಾಜರ ವ್ಯಕ್ತಿತ್ವ ನನ್ನನ್ನು ಆಕರ್ಷಿ ಸಿತು... ಆ ಆಕರ್ಷ್ನಣೆಯ ಬಳಿಕ?
ನಾನು ಅವರಿಂದ ದೂರವಿದ್ದೆ... ನನ್ನ ಬಾಳ್ವೆಯ ದೋಣಿ ಬಂಡೆಗಳಲ್ಲಿಗೆ ಸಿಕ್ಕಿ ಹಲವಾರು ಬಿರುಕು ಬಿಟ್ಟತ್ತು. ಅದರ ಫಲವಾಗಿ ಹಲಿಗೆಗಳು ಒಂದೊಂದಾಗಿ ಕಳಚಿಹೊಗುತ್ತಿದ್ದುವು. ಹಾಗೆ ಕಳಚಿ ಹೋಗುತಿದ್ದ ಹಲಿಗೆಗಳನ್ನ ಮತ್ತೆ ಕೂಡಿಸಿ ಜೋಡಿಸುವುದು ಸಾಧ್ಯವಿತ್ತೆ?... ಕೃಷ್ಣರಾಜರಂಥವರು ಅದೂ ಸಾಧ್ಯ, ಅದಕ್ಕಿಂತ ಕಷ್ಟತರವಾದುದೂ ಸಾಧ್ಯ, ಎನ್ನಬಹುದು..ಇನ್ನೊಬ್ಬರಿಗೆ ಸಂಬಂಧಿಸಿ ಅಂತಹಾ ಪ್ರಯೋಗ ನಡೆದರೆ ನಾನೂ ಅದನ್ನು ಆಸಕ್ತಿಯಿಂದ ನೋಡ ಬಹುದಾಗಿತ್ತು. ಆದರೆ ಆ ಪ್ರಯೋಗ ನನಗೆ ಸಂಬಂಧಿಸಿಯೇ ನಡೆಯುವ ಯೋಚನೆ ಹಿತಕರವಾಗಿರಲಿಲ್ಲ..
ನಾನು ಮುಳುಗುತ್ತಲಿದ್ದೆ, ಸ್ವಲ್ಪ ಸ್ವಲ್ಪವಾಗಿ. ಹಾಗೆಯೇ ಮುಳುಗಿ ಹೋಗುವುದೇ ಮೇಲಾಗಿರಲಿಲ್ಲವೆ?
ಜೀವನದಲ್ಲಿ ಜಿಗುಪ್ಸೆ...
ಶ್ರದ್ದೆ-ನಂಬುಗೆ ಇಲ್ಲದ ಮಾನವನಿಗೆ ಜೀವನದಲ್ಲಿ ಜಿಗುಪ್ಸೆ...
ಹಾಗಾದರೆ ಮುಂದೇನಾಗಬೇಕಿನ್ನು?
ನನ್ನ ಬಾಳ್ವೆಯ ಅಂತಿಮ ಘಟ್ಟದ ಆ ಅತಿ ಮುಖ್ಯ ಘಟನೆಯ ನಾನು ಇನ್ನು ಬರೆಯಬೇಕು .
ಅದೂ ಎಂಥ ಘಟನೆ!
ಸಂಜೆಯಾಗಿ, ಕತ್ತಲು ಬಂದು, ನಿಮಿಷಗಳು ಘಂಟೆಗಳಾಗು ತ್ವಿವೆ.ಈಗ-ಈ ಸೋಮವಾರ. ಸಹಿಸಲಾಗದ ಹೊಟ್ಟಿಯ ನೋವಿ ನಿಂದ ನನ್ನ ಲೇಖನಿ ತಡವರಿಸುತ್ತಿದೆ.ನಾನು ಬಾರಿಬಾರಿಗೂ ಬಾಲ್ವೆಯ ಪಯಣದಲ್ಲಿ ತಡವರಿಸಿದ ಹಾಗೆ . ಆದರು ನಾನು ಆ ಘಟನೆಯ ಬಗ್ಗೆ ಬರೆಯ ಬೇಕು.
ನಗು ಬರುತ್ತಿದೆ ನನಗೆ. ನೋವಿನಲ್ಲೂ ನಗು. ದೀಪ ಗಾಳಿ ಯಲ್ಲಿ ತೂರಾಡುತ್ತಿದೆ. ನನ್ನ ಜೀವ ತೂರಾಡುತ್ತಿರುವ ಹಾಗೆ. ಆ ಗಾಳಿ ಎಲ್ಲಿಂದಲೊ ಮೂತ್ರದ ವಾಸನೆಯನ್ನು ಕಳ್ಳತನದಿಂದ ಹೊತ್ತುತರುತ್ತಿದೆ . ದೊಡ್ಡ ಬೀಗ ಹೊತ್ತಿರುವ ಬಾಗಿಲಿನ ಈ ಕಂಬಿಗಳು. ಅದರ ಹಿಂದೆ ಬರೆಯುತ್ತ ಕುಳಿತಿರುವ ನಾನು. ಎಂಥ ಸನ್ನಿವೇಶ! ನನಗೆ ನಗು ಬರುತ್ತಿದೆ.
ಎಷ್ಟೊಂದು ಅನಿರೀಕ್ಶಿತವಾಗಿ ಆ ಘಟನೆಯಾಗಿತ್ತು! ನಾವು ಬೀದಿ ನಡೆಯುತ್ತಿರುವಾಗ, ಎಲ್ಲಿಯೊ ನಿಂತಿದ್ದ ಹೋರಿ ಓಡಿ ಬಂದು ನಮಗೆ ತಿವಿದ ಹಾಗೆ!
ಆ ಹೋರಿ ನನಗೆ ತಿವಿದ ಬಗೆ!
ರಾತ್ರೆ ಹನ್ನೆರಡು ಹೊತ್ತು ಆ ದಿನ.
ಯಾರೋ ಧಪಧಪನೆ ಬಾಗಿಲು ಬಡೆಯುತ್ತಿದರು.
ನಾನೆದ್ದು, ದೀಪ ಹಾಕಿ ಕದ ತೆರೆದೆ.
ಶ್ರೀಕಂಠ ನಿಂತಿದ್ದ ಹೊರಗೆ ಥರಥರನೆ ನಡುಗುತ್ತಾ...ಕಾರಿರ ಲಿಲ್ಲ...ಆತ ನಡೆದೇ ಬಂದಿದ್ದ..ತಲೆಗೂದಲು ಕೆದರಿತ್ತು. ತುಟಿ ಗಲ್ಲುಗಳು ಅದುರುತಿದ್ದುವು. ಕಣ್ಣುಗಳಲ್ಲಿ ಕೆಂಪು ಹರಡಿ ನೋಡಲು ಆಸಹ್ಯವಾಗಿತ್ತು.
"ಎನಿದು ಕಂಠಿ ? ಕಂಠಿ ! ಕಂಠಿ !"
ಆತ ಒಳಬಂದೊಡನೆ ಬಾಗಿಲಿಗೆ ಅಗಣಿತಗಲಿಸಿದೆ.
ಶ್ರೀಕಂಠ ಸೋಫಾದ ಮೇಲೆ ಬಿದ್ದುಕೊಂಡು ನನ್ನನ್ನೆ ಬಿರಬಿರನೆ ನೋಡಿದ.v
"ಕಂಠಿ!ಏನೋ ಇದು? ಏನಾಯ್ತು ಕಂಠಿ?"
ನಾನು ಆತನ ಭುಜ ಹಿಡಿದು ಕುಲುಕಿದೆ.
"ದೀಪ.....ದೀಪ ಚಂದ್ರೂ....ದೀಪ ಆರ್ಸು...."
ಆತ ತೊದಲುತಿದ್ದ.
ನಾನು ದೀಪ ಆರಿಸಿ, ಅವನ ಬಳಿಯಲ್ಲೆ ಕುಳಿತು, ಆತನ ಮೈದಡವಿದೆ.
"ಕಂಠಿ! ಕಂಠಿ!"
ತಡೆದು ತಡೆದು ಸಂಕಟಪಟ್ಟುಕೊಳ್ಳುತ್ತಾ ಬಿಸಿಯುಸಿರು ಬಿಡುತ್ತಾ ಆತ ಏನನ್ನೋ ಹೇಳಲೆತ್ನಿಸುತ್ತಿದ.ಮಾತು ಹೊರಡಲಿಲ್ಲ.
ಕತ್ತಲೆಯಲ್ಲೆ ಎದ್ದು ಅಲಮಾರಿನ ಕದ ತೆರದು ಕೈಯಾಡಿಸಿದೆ. ಇಲ್ಲ,ಏನೂ ಇರಲಿಲ್ಲ ......
"ಚಂದ್ರೂ....ನೀ ನೀರು...." ಕತ್ತಲೆಯಲ್ಲಿ ತಡವುತ್ತ ಕೂಜೆಯನ್ನೆತ್ತಿ ಗ್ಲಾಸಿಗೆ ನೀರುಸುರಿದೆ. ......ಆ ನೀರು ಶ್ರಿಕಂಠಿ ನನ್ನು ಸ್ವಲ್ಪಮಟ್ಟಿಗೆ ಚೇತರಿಸಿತು.
"ಶಾರದಾ ಕಣೋ.....ಚಂದ್ರೂ....ಶಾರದಾ__"
"ಹೇಳು ಕಂಠಿ."
"ಶಾರದಾ ಸತ್ತೋದ್ಲು__"
ಆ ಮತನ್ನು ಹೊರಹಾಕಿ ಶ್ರಿಕಂಠಿ ಉಗುಳು ನುಂಗಿದ. ನನ್ನ ಹೃದಯದ ಬಡಿತ ನಿಂತಿತು__ಕ್ಷಣಕಾಲ . ನರನಾಡಿಗಳು ತಣ್ಣ ಗಾದುವು ಆಗ.
ಶಾರದಾ__
ಆದರೆ ಏನಾಗಿತ್ತು?
ನಾನು ಆ ಪ್ರಶ್ನೆಯನ್ನು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಮಾತಿಲ್ಲದೆ
ಸ್ಮಶಾನ ಸಮಾನವಾದ ನಿಮಿಷಗಳು ಉರುಳಿದುವು.
"ಯಾವಾಗ ಏನಾಯ್ತು ಕಂಠಿ?"
ಶ್ರೀಕಂಠ ನನ್ನ ಭುಜಕ್ಕೊರಗಿದ. ಅವನ ಕಣ್ಣುಗಳಲ್ಲಿ ನೀರು
ತೊಟ್ಟಿಕ್ಕುತಿತ್ತು... ಆಮೇಲೆ ನಿಧಾನವಾಗಿ ತಡೆದು ತಡೆದು ಒಂದೊಂದೆ
ಮಾತು ಹೊರಬಂತು.
ಶ್ರೀಕಂಠನ ಕೈಯಲ್ಲಿ ಶಾರದೆಯ ಸಾವು.
ಒಟ್ಟಿನಲ್ಲಿ ಆಗಿದ್ದುದಿಷ್ಟು:
ರಾತ್ರಿ ಶ್ರೀಕಂಠ ಮನೆಗೆ ಬಂದಾಗ ಹತ್ತು ಹೊಡೆದಿತ್ತು.
ಶಾರದೆಯ ಕೊಠಡಿಯಲ್ಲಿ ಬೆಳಕಿರಲ್ಲಿಲ್ಲ. ಮಗು ನಾಗರಾಜ ತಂದೆ
ತಾಯಿಯರ ಹಾದಿ ನೋಡದೆ ನಿದ್ದೆ ಹೋಗಿದ್ದ. ಆಡುಗೆಯ ಆಚಾರ್ಯ
ಬಂದಾಗ ಸಿಡುಕಿನಿಂದ ಮಾತನಾಡಿ ಶ್ರೀಕಂಠ ಅವನನ್ನು ಕೆಳಕ್ಕಟ್ಟಿದ.
ಹನ್ನೊಂದರ ಹೊತ್ತಿಗೆ ಶಾರದಾ ಬಂದಳು. ಅದು ಯಾರದೋ
ಕಾರು.ಆ ಸದ್ದು ಅವಳ ತಂದೆಯ ಕಾರಿನದಾಗಿರಲಿಲ್ಲ...ಆಕೆ
ಮಹಡಿಯ ಮೇಲೇರಿ ಬಂದಾಗಲೂ ಹಸನ್ಮುಖಿಯಾಗಿ ಯಾವುದೋ
ಹಾಡನ್ನು ಗುಣ ಗುಣಿಸುತ್ತಲೇ ಇದ್ದಳು. ತೆರೆದಿದ್ದ ಬಾಗಿಲಿನೆದುರು
ಆಕೆ ಹಾದು ಹೊದಾಗ,ಶ್ರೀಕಂಠ ಅವಳನ್ನು ನೋಡಿದ. ಆ ಸೀರೆ-
ಕುಪ್ಪಸ...ಆ ಶೃಂಗಾರ...ಅಸ್ತವ್ಯಸ್ತವಾಗಿದ್ದ ಕೂದಲು.....ಹಸಿವು
ಇಂಗಿ ತೃಪ್ತಿ ತೋರುತಿದ್ದ ಕಣ್ಣುಗಳು...ಮತ್ತೂ ಬೆಚ್ಚಗೆ ಇದ್ದಂತಿದ್ದ
ತುಟಗಳು...
ಶ್ರೀಕಂಠ ಆವಳನ್ನು ಕೂಗಿ ಕರೆದ:
"ಶಾರದಾ!"
ಉತ್ತರ ಬರಲಿಲ್ಲ.
ಮತ್ತೊಮ್ಮೆ ಶ್ರೀಕಂಠ ಏರಿದ ಧ್ವನಿಯಲ್ಲಿ ಕರೆದ:
"ಶಾರದಾ! ಬಂದು ಹೋಗು!"
ಅವಳು ಬರಲಿಲ್ಲ. ತನ್ನ ಕೊಠಡಿಗೆ ಹೋಗಿ ದೀಪ ಹಾಕಿದಳು.
ಅವಮಾನಿತನಾದ ಶ್ರೀಕಂಠ,ಅವಳ ಕೊಠಡಿಗೆ ನುಗ್ಗಿದ.
"ಕರೆದಿದ್ದು ಕೇಳಿಸ್ಲಿಲ್ಲ ನಿಂಗೆ."
ನಿಲುವುಗನ್ನಡಿಯ ಮುಂದೆ ಕುಳಿತು, ಆಭರಣಗಳನ್ನು ಕಳ ಚುತ್ತಲಿದ್ದ ಅವಳು ಹೇಳಿದಳು."ಕೆಲಸದಾಕೆ ಸಾಯಂಕಾಲ್ವೇ ಹೊರಟೋಗಿದ್ದಾಳೆ."
ಆ ಉತ್ತರ ಕೇಳಿ ಶ್ರೀಕಂಠನ ಮೈ ಉರಿಯಿತು.ಆತ ಕುಪಿತ ನಾಗಿ ಶಪಿಸಿದ.ಅವಳ ಬಳಿ ಸಾರುತ್ತಾ ಶ್ರೀಕಂಠ ಗುಡುಗುವ ಧ್ವನಿಯಲ್ಲಿ
ಕೇಳಿದ:"ಯಾವ ನಾಯಿ ಜತೇಲಿದ್ದೆ ಸಾಯಂಕಾಲ?"
ಆಕೆ ಜಿಗಿದೆದ್ದು ಉತ್ತರಕೊಟ್ಟಳು-.-ಶ್ರೀಕಂಠನ ಕೆನ್ನೆಯ
ಮೇಲೆ ಬಲವಾದ ಏಟು.ಆತ ಅವಳನ್ನು ಮಾತನಾಡಗೊಡಲಿಲ್ಲ. ಅವನ ಕೈಗಳೆರಡೂ ಆಕೆಯ ಕತ್ತನ್ನು ಹಿಸುಕಿದ್ದುವು...... ಅವನಿಗೆ ಮೈಮೇಲೆ ಎಚ್ಚರವಿರಲಿಲ್ಲ.ಎಷ್ಟೋ ದಿನಗಳಿಂದ ತಡೆಹಿಡಿದಿದ್ದ ಆಣೆಕಟ್ಟು ಒಮ್ಮೆಲೆ ಕಡಿದು ಹೋಯಿತೇನೊ.....ಆ ಕೈಗಳು ಮತ್ತೂ ಮತ್ತೂ ಹಿಸುಕಿದುವು....ಮೊದಲು ಪ್ರತಿಭಟಿಸಿದ ಆ ಹೆಣ್ಣು ಬರ ಬರುತ್ತ ನಿಶ್ಚೇಷ್ಟಿತವಾಯಿತು.ಶಾರದಾ ನೆಲದ ಮೇಲು ರುಳಿದಳು.ಆದರೆ ಶ್ರೀಕಂಠ ಕೈಗಳ ಹಿಡಿತವನ್ನು ಸಡಿಲಿಸಿರಲಿಲ್ಲ. ಹಿಂದೆಯೊಂದು ಕಾಲದಲ್ಲಿ ಅವನ ಕೈಹಿಡಿದಿದ್ದ ಹೆಂಗಸು-ಹಾಗೆ ಕೈ ಹಿಡಿದು ಆ ಮಹಡಿಯ ಎತ್ತರಕ್ಕೆ ಅವನನ್ನು ಕರೆದು ತಂದಿದ್ದ ಹೆಣ್ಣು.ಕೊನೆಗೆ ಬಳಲಿದ ಶ್ರೀಕಂಠ ಅವಳನ್ನು ನೆಲದಮೇಲಿನ ರತ್ನ
ಕಂಬಳಿಯ ಮೇಲೆಯೇ ಬಿಟ್ಟು,ಅಲ್ಲೇ ಒರಗು ಕುರ್ಚಿಯ ಮೇಲೆ ಕುಳಿತ.......ಆಕೆ ಎಚ್ಚರಗೊಂಡು ಏಳಬಹುದು,ಎದ್ದಾಗ ಅವಳ ಮುಖದಮೇಲೆ ಥೂ ಎಂದು ಉಗುಳಿ ಕಾಲಿನಿಂದ ಒದೆಯಬೇಕು,- ಇದೀಗ ಆತನಿಗಿದ್ದ ಯೋಚನೆ.ಆಕೆಯನ್ನು ನೋಡುತ್ತ ನೋಡುತ್ತ ಅವನು ಅಲ್ಲಿ ಕುಳಿತ.ಅವಳು ಏಳಲೇ ಇಲ್ಲ."ನಟನೆ ಸಾಕು.ಸಿನಿಮಾ ನಟನೆ.,ಏಳು!"
ಆತ ಕೂಗಿಕೊಳ್ತುತಿದ್ದ ನಿಜ; ಆದರೆ ಆಕೆ ಏಳಲಿಲ್ಲ.
ಸಂದೇಹ ತಲೆದೋರಿತು ಅವನಿಗೆ....ಆದರೆ ಏರಿದ್ದ ಕೋಪ
ಇಳಿದಿರಲಿಲ್ಲ....ಬಿದ್ದಿದವಳು ಏಳದೇ ಇದ್ದುದನ್ನು ಕಂಡು ಆ ಕೋಪ ಇಳಿಯ ತೊಡಗಿದಾಗ-ಶ್ರೀಕಂಠ ಧಿಗ್ಗನೆದ್ದು ಅವಳ ಮೈಮುಟ್ಟಿದ ಕೈಕುಲುಕಿದ......
ತಣ್ಣಗಾಗಿತ್ತು ಎಲ್ಲವೂ....ಅದು ವಿಸ್ಮಯಕರವಾದ ಸಂಗತಿ.ಹಾಗಾ ಗುವುದು ಸಾಧ್ಯವೆ ?ತನ್ನ ಪಾಲಿಗೆ ಶಾರದಾ ಇದ್ದರೂ ಸತ್ತಹಾಗೆ-ಎಂದು ಶ್ರೀಕಂಠ
ಎಷ್ಟೋ ವೇಳೆ ಭಾವಿಸಿದ್ದನೇನೋ ನಿಜ....ಆದರೆ ಅಂಥ ಸಾವು........ ಆ ಆಂಗೈಗಳು.....ಎದುರು ನಿಲವುಗನ್ನಡಿಯಿತ್ತು......ಅದರಲ್ಲಿ ತೋರ ಬಂದ ತನ್ನಮುಖ! ಓ!ಆ ಮೇಲೆ ಕೆಲವು ನಿಮಿಷಗಳು-ಸಿಡಿಯುತಿದ್ದ ಮೆದುಳು
ಹತೋಟಿಗೆ ಬಂದತನಕ.....
ಶ್ರೀಕಂಠ ಬಾಗಿಲೆಳೆದುಕೊಂಡು,ಅದಕ್ಕೆ ಅಂಟಿಕೂಂಡಿದ್ದ ಬೀಗದ
ಕೈಯನ್ನು ತಿರುವಿದ.ತನ್ನ ಕೊಠಡಿಗೂ ಬೀಗಹಾಕಿಕಕೊಂಡು ಹೊರ ಹೊರಟ.ಕೆಳಹಜಾರದಲ್ಲಿ ಉದ್ಯಾನದಲ್ಲಿದ್ದ ಸೀಮೆನಾಯಿ ಬಾಲ ವಾಡಿಸುತ್ತಾ ಬಂತು.ಅದನ್ನು ಗದರಿಕೆಯ ನಟನೆಯಿಂದ ದೂರವಿರಿಸ ಆತ ಬೀದಿಗಳಿದ.
ಅದೀಗ ಶ್ರೀಕಂಠ್ ಹೇಳಿದ ಕತೆ,
"ನೀನೇ ಹೇಳು ಚಂದ್ರೂ..... ಈಗೇನ್ಮಾಡ್ಲಿ.... ಎನ್ಮಾಡ್ಲಿ ಈಗ ?........."
ನಾನು ಶಾಂತನಾಗಿ ಯೋಚಿಸಿದೆ,ಶಾರದೆ ಸತ್ತಳೆಂದು
ಇನ್ನೊಂದು ಜೀವಕ್ಕೆ ಹಾನಿಯೊದಗುವುದರಲ್ಲಿ ಅರ್ಥವಿರಲಿಲ್ಲಿ. ಶ್ರೀಕಂಠನ ವ್ಯಕ್ತಿತ್ವಕ್ಕೆ ಕುಂದುಬರುವ ಸನ್ನಿವೇಶವನ್ನಂತೂ ಊಹಿ ಸುವುದಾದರೂ ಸಾಧ್ಯವೆ?"ಕಂಠಿ,ಮನೇಲಿ ಸ್ಲೀಪಿಂಗ್ ಟೇಬ್ಲೆಟ್ಸ್ ಇವೆಯೇನು ?"
"ಇರ್ಬೇಕು, ಇವೆ."
"ಅವಳ್ನ ಹಾಸಿಗೆ ಮೇಲೆ ಮಲಗಿಸ್ಬಿಟ್ಟು ಆ ಟೇಬ್ಲೆಟ್ಸ್ ಸೀಸೇನೂ ಒಂದೆರಡು ಟೇಬ್ಲೆಟ್ ಗಳನ್ನೂ ಹತ್ತಿರವೇ ಚೆಲ್ಲಿದರಾಯ್ತು.""ಅಷ್ಟು ಸಾಕೆ?"
"ಧಾರಾಳವಾಗಿ, ಆದರೆ ನೀನು ಶಾಂತವಾಗಿರ್ಬೆಕು. ಎನೂ ತಿಳೀದವರ ಹಾಗೆ ಇದ್ಬಿಡ್ಬೇಕು....ಅಷ್ಟು ಮಾಡಿ ಬರೋಣ...",
ಜೀವಚ್ಛವದಂತೆ ಆತ ನನ್ನನ್ನು ಹಿಂಬಾಲಿಸಿದ. ಹಾದಿಯಲ್ಲಿ ಆತ ಪಿಸುಮಾತನಾಡುತ್ತಿದ್ದ:
"ದೀಪ ಉರೀತಾನೇ ಇದೆಯೋ ಏನೋ...ದೀಪ.."
ಉರಿಯುತಿದ್ದ ದೀಪ...ರಾತ್ರೆ ಎರಡು ಘಂಟೆಯ ಆ ಹೊತ್ತಿನಲ್ಲಿ ನಾಲ್ಕಾರು ಜನ ಮಹಡಿಯ ಮೇಲಿದ್ದುದು ನಮಗೆ ಕಾಣಿಸಿತು... ಶ್ರೀಕಂಠನ ಮಾವ, ಪೋಲೀಸ್ ಅಧಿಕಾರಿ, ಪೋಲೀಸರು, ಮನೆಯ ಆಳುಗಳು....
"ಚಂದ್ರು, ಓಡಿ ಹೋಗೋಣ."
"ಹುಚ್ಚನ ಹಾಗೆ ಆಡ್ಬೇಡ."
"ಏನೂ ತಿಳೀದವರ ಹಾಗೆ, ಸಿನಿಮಾದಿಂದ ಬರ್ತಿರೋರ ಹಾಗೆ, ಒಳಕ್ಕೆ ಹೋಗೋಣ."
ನಡಗುತ್ತಿದ್ದ ಬೆರಳುಗಳಿಂದ ಶ್ರೀಕಂಠ ಕ್ರಾಪು ಸರಿಪಡಿಸಿ ಕೊಂಡ....ನಾವು ಮೆಟ್ಟಲೇರಿದೆವು.
ಶ್ರೀಕಂಠನನ್ನು ನೋಡುತ್ತಲೆ, ಅವನ ಮಾವ ಧ್ವನಿ ತೆಗೆದು ಆಳತೊಡಗಿದರು: ಪೋಲೀಸ್ ಅಧಿಕಾರಿ,ಶ್ರೀಕಂಠನ ಬದಲು ನನ್ನನ್ನೇ ನೋಡುತ್ತಾ, "ಆಭರಣಗಳ್ನ ಕದಿಯೋಕೇ ಈ ಕೊಲೆ ಆಗಿರೋದು....ಮನೆಯ ಆಳುಗಳನ್ನೆಲ್ಲ ಅರೆಸ್ಟ್ ಮಾಡ್ಬೇಕು," ಎಂದ.
...ಆಗ ನಾನು ಎಚ್ಚರವಾಗಿದ್ದೆನೆ? ಅಥವಾ ಜೀವನದಲ್ಲಿ ಧುಮುಧುಮಿಸಿ ಒಮ್ಮೆಲೆ ಬಂದ ಕಾರ್ಗತ್ತಲೆ ನನ್ನನ್ನು ಕುರುಡನಾಗಿ ಮಾಡಿತೆ" ನಾನು ಯಾಕೆ ಹಾಗೆ ಮಾಡಿದೆ?
ನನ್ನ ಸ್ವರ ಹೇಳುತಿತ್ತು.
"ಸಾರ್, ನೀವು ದರೋಡೆ ಖೋರ ಚಲ೦ ಹೆಸರು ಕೇಳಿ
ದೀರಾ?"
"ಕೇಳಿದೀವಿ...ಈ ವರ್ಷ ಅವನ ಬಿಡುಗಡೆ...ಅವನಿನ್ನೂ
ಒಳಗೇ ಇದಾನೆ. ಇದಕ್ಕೂ ಅದಕ್ಕೂ ಸ೦ಬಧ ಎಲ್ಲಿಯದು?"
"ಆದರೆ ನನಗೂ ಆ ಚಲ೦ಗೂ ಸ೦ಬ೦ಧ ಸಾರ್."
"ಏನು?"
"ಈ ಚ೦ದ್ರಶೇಖರ್‌ಗೆ ಸ೦ಬಧಿಸಿದ ಹಳೆಯ ಫ಼ೈಲೊ೦ದಿದೆ."
ಶ್ರೀಕ೦ಟನನ್ನು ನಾನು ನೋಡಲಿಲ್ಲ. ಆದರೆ ಅವನ ಮಾವ
ಕೂಗಾಡುತಿದ್ದರು:
"ಎ೦ಥಾ ರಾಸ್ಕಲ್ ಇವನು! ನನಗೆ ಮೊದಲೇ ಸ೦ಶಯ
ಬ೦ದಿತ್ತು...ಇವನ್ನ ಅರ್ರೆಸ್ಟ್ ಮಾಡಿ!"
ಅವರು ನನ್ನನ್ನು ಬ೦ಧಿಸಿದರು, ಕೈಗಳಿಗೆ ಬೇಡಿ! ಆ! ಎಷ್ಟು
ವರ್ಷಗಳ ಮೇಲೆ ಸ೦ಕೋಲೆಯೊಡನೆ ಮಿಲನ...!
.....ಕರುಳಿನ, ಹೃದಯದ, ಮೆದುಳಿನ ಕಾಹಿಲೆಯೊಡನೆ
ನಾನು ಇಲ್ಲಿಗೆ, ಸೆರೆಮನೆಗೆ, ಬ೦ದೆ.
ನಾನು ಯಾಕೆ ಹಾಗೆ ಮಾಡಿದೆ? ನನಗೆ ತಿಳಿಯದು. ಶ್ರೀಕ೦ಠ
ನಿಗೆ ಆಪಾಯ ತಟ್ಟಬಾರದೆ೦ದೆ? ಹಾಗಿರಲಾರದು. ಹಾಗಾದರೆ
ಯಾಕೆ? ಯಾಕೆ?
...ಪ್ರಾಯಶ್ಃ ಆ ಬದುಕಲ್ಲದ ಬದುಕಿನಿ೦ದ ನನಗೆ ಬೇಕಾದ
ವಿಮೋಚನೆಯನ್ನು ಹಾಗೆ ಪಡೆದೆನೆ? ಆದರೆ ಅದು ವಿಮೋಚನೆಯಾಗಿ
ರಲಿಲ್ಲ ಸ್ಥಳಾಂತರವಾಗಿತ್ತು..... ಒಂದು ಸೆರೆಮನೆಯಿಂದ ಇನೋ೦
ದಕ್ಕೆ...
ಶ್ರೀಕ೦ಠ, ಮಾವನಿಗೆ ತಿಳಿಯದ೦ತೆಯೇ ನನ್ನ ರಕ್ಷಣೆಗಾಗಿ
ಪ್ರಖ್ಯಾತನಾದೊಬ್ಬ ಯುವಕ ವಕೀಲರನ್ನು ಗೊತ್ತು ಮಾಡಿದ್ದಾನೆ...
ಆ ವಕೀಲರ ಮಿತ್ರರು, ಜೈಲಿನ ಆಧಿಕಾರಿ,ಆ ಡಾಕ್ಟರು....
ಪತ್ರಿಕೆಗಳಲ್ಲಿ ಮೊದಲ ಪುಟದಲ್ಲಿ ದಪ್ಪಕ್ಷರಗಳಲ್ಲಿ ಆ ವಾರ್ತೆ
ಶಾರದಾ ಶ್ರೀಕಂಠಯ್ಯನವರ ವಿಚಿತ್ರ ಮರಣದ ವಾರ್ತೆ. ಆ ಬಳಿಕ,
ಹಲವು ವರ್ಷಗಳಿಂದ ಮಿತ್ರನಂತೆ ನಟಿಸಿದ ದರೋಡೆ ಖೋರ
ಚಂದ್ರಶೇಖರನ ಬಂಧನ-- ಆ ಸಂಬಂಧವಾಗಿ, ಗುಮಾನೀಯ ಮೇಲೆ.
ಈಗಾಗಲೇ ಎಲ್ಲರೂ ಓದಿರುವ ವಾರ್ತೆ ಅದು : ನನ್ನ ಅಜ್ಜಿ
ಇದ್ದ ಮನೆಯ ನೆರೆಮನೆಯವರು, ವನಜಾ, ಶ್ರೀನಿವಾಸಯ್ಯ, ಮಾಧ
ವರಾವ್, ನಾರಯಣ,ಕೄಷ್ಣರಾಜರು---ಎಲ್ಲರೂ_ಎಲ್ಲರೂ !
ಕೊಲೆಪಾತಕಿಯಾಗಿರುವ ನಾನು...
ಅವರು ವಿಚಾರಣೆಮಾಡಿ ಇನ್ನೂ ತೀರ್ಪು ಕೊಡುವರು---ತೀರ್ಪು...
ಏಕಪ್ರಕಾರವಾಗಿ ಯೋಚಿಸುವ ಸಾಮರ್ಥ್ಯ ನನಗೆ ಉಳಿದಿಲ್ಲ...
.
ಯೋಚನೆಗಳು ಕಡಿದು ಕಡಿದು ಬರುತ್ತಿವೆ...ಉದರ ಶೂಲೆ...ವಾಂತಿ
ಮಾಡಬೇಕೆನ್ನುವ ಹಾಗೆ ಆಗುತ್ತಿದೆ..ಉಸಿರು ಕಟ್ಟುತ್ತಿದೆ...
..ಅಂತ್ಯವೆಲ್ಲಿದೆ? ಕೊನೆ ಎಲ್ಲಿದೆ? ಮುಕ್ತಾಯ- ಮುಕ್ತಾಯ ಎಲ್ಲಿದೆ?