ಶ್ರೀಕಂಠ ವಿಷಕಂಠ
ಚಿತ್ರ: ಅನುರಾಗ ಅರಳಿತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್
ರಾಗ:
ಶ್ರೀಕಂಠ ವಿಷಕಂಠ, ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ,
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
||ಶ್ರೀಕಂಠ ವಿಷಕಂಠ, ಶ್ರೀಕಂಠ .ವಿಷಕಂಠ||
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತ್ತಿದೆ
ಅರಳಿದ ಸುಮದಲ್ಲಿ ನಲಿಯುವ ಭ್ರಮರವು ಶಿವನಾಮ ಹಾಡುತ್ತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ್ತಾ ನಿನ್ನನೇ ಸ್ಮರಿಸುತ್ತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ್ತಾ ನಿನ್ನನೇ ಸ್ಮರಿಸುತ್ತಿದೆ
||ಶ್ರೀಕಂಠ ವಿಷಕಂಠ, ಶ್ರೀಕಂಠ .ವಿಷಕಂಠ||
ಆ ಆ ಆ
ಸಾವಿರ ಜನುಮವೇ ಬಂದರೂ, ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸು
ಉಸಿರಿನ ಉಸಿರಲು ತಂದೆಯೇ, ಎಂದು ನಿನ್ನ ನಾಮವನ್ನು ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನಡೆಸು
ಶ್ರೀಕಂಠ ವಿಷಕಂಠ, ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ,
ಲೋಕವನುಳಿಸಲು ವಿಷವನ್ನು ಕುಡಿದಾ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
ಗತಿ ನೀನೆಂದರೆ ಓಡುತ ಬರುವಾ ಕರುಣಾ ಸಾಗರನೇ .
||ಶ್ರೀಕಂಠ ವಿಷಕಂಠ, ಶ್ರೀಕಂಠ .ವಿಷಕಂಠ||
ಶ್ರೀಕಂಠಾs ವಿಷಕಂಠಾs, ಅ ಶ್ರೀಕಂಠಾs ವಿಷಕಂಠಾs
ಶ್ರೀಕಂಠಾs ವಿಷಕಂಠಾs, ಆ ಶ್ರೀಕಂಠಾs ವಿಷಕಂಠಾs