ಸದಸ್ಯ:Bschandrasgr/ನನ್ನ ಪ್ರಯೋಗಪುಟ

ವಿಕಿಸೋರ್ಸ್ ಇಂದ
Jump to navigation Jump to search

<ಕುಮಾರವ್ಯಾಸ ಭಾರತ

ಎರಡನೆಯ ಸಂಧಿ; ಪದ್ಯ : ಸೂಚನೆ[ಸಂಪಾದಿಸಿ]

ರಾಜೇಂಧ್ರ ಧರ್ಮತನಯಂ ಬಾದರಾಯಣನ |
ವಾಜಿಮೇಧಾಧ್ವರ ವಿಧಾನಮಂ ಕೇಳ್ದು ಪಂ |
ಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು ||

ಪದವಿಭಾಗ-ಅರ್ಥ:
ರಾಜೇಂದ್ರ ಧರ್ಮತನಯಂ =ರಾಜೇಂದ್ರನಾದ ಧರ್ಮರಾಯನು, ಬಾದರಾಯಣನ ವಾಜಿಮೇಧಾಧ್ವರ ವಿಧಾನಮಂ ಕೇಳ್ದು = ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಪಂಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು. ಪಂಕಜ ಪತ್ರೇಕ್ಷಣ =ಕಮಲದ ಎಸಳಿನಂತೆ ವಿಶಾಲ ಕಣ್ಣುಳ್ಳ ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
  • ತಾತ್ಪರ್ಯ: ಧರ್ಮರಾಯನು ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
(ಪದ್ಯ - ಸೂಚನಾ ಪದ್ಯ)
(ಪದ್ಯ - ಸೂಚನಾ ಪದ್ಯ)

ಪದ್ಯ:-:ಕುಮಾರವ್ಯಾಸ[ಸಂಪಾದಿಸಿ]

ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ |

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=

ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮುಸುಕಿತು ||1||

  • ತಾತ್ಪರ್ಯ:
  • (ಪದ್ಯ-೬೭.)

ಪದ್ಯ ೨[ಸಂಪಾದಿಸಿ]

ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ ||
ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು ||2||

ಪದವಿಭಾಗ-ಅರ್ಥ:
ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ

ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು

  • ತಾತ್ಪರ್ಯ:ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ

ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು (ಪದ್ಯ -೨)

ರನ್ನನ ಗದಾಯುದ್ಧದ ಭಾಗ[ಸಂಪಾದಿಸಿ]

ನೀರಿನಿಂದ ಕೌರವನ ನಿರ್ಗಮನ
ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ |
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ ॥೨೨॥
ಪದವಿಭಾಗ-ಅರ್ಥ:ನಿರ್ಜಿತ(ಮೀರಿಸಿದ)+ ಕಂಠೀರವ (ಸಿಂಹ)+ ರವಮಂ(ಸದ್ದು ಗರ್ಜನೆ)= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನ(ಮೇಘವನ್ನು ಮೀರಿಸಿದ)+ ರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.
ತಾತ್ಪರ್ಯ :- ಸಿಂಹಗರ್ಜನೆಯನ್ನೂ ಗುಡುಗಿನ ಸದ್ದನ್ನೂ ಮೀರೀಸಿದ ಭೀಮನ ಆರ್ಭಟವನ್ನು ಕೇಳಿ ಆ ಸಿಂಹನಾದವನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಕೆರಳಿ ಕೆಂಡವಾದನು. ಅವನ ಕಣ್ಣುಗಳು ಕೆಂಪಾದುವು. ಕೋಪೋದ್ರೇಕದಿಂದ ಶೀತಲವಾದ ನೀರಿನಲ್ಲಿದ್ದರೂ ಸರ್ಪಧ್ವಜನ ಮೈಬೆವರಿತು.
“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ರನ್ನನ ಈ ನುಡಿ ಪ್ರಸಿದ್ಧವಾಗಿದೆ, ಉರಗಪತಾಕಂ ಎನ್ನುವ ಪದವೂ ಇಲ್ಲಿ ಅರ್ಥವತ್ತಾಗಿ ಸೇರಿದೆ.

ರನ್ನನ ಗದಾಯುದ್ಧದ ಭಾಗ[ಸಂಪಾದಿಸಿ]

ರನ್ನನ ಗದಾಯುದ್ಧದ ಭಾಗ
ನೀರಿನಿಂದ ಕೌರವನ ನಿರ್ಗಮನ
ಆರವಮಂನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ |
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದುಂ ಬೆಮರ್ತನುರಗಪತಾಕಂ ॥೨೨॥

ಪದವಿಭಾಗ-ಅರ್ಥ:ನಿರ್ಜಿತ(ಮೀರಿಸಿದ)+ ಕಂಠೀರವ (ಸಿಂಹ)+ ರವಮಂ(ಸದ್ದು ಗರ್ಜನೆ)= ಸಿಂಹಗರ್ಜನೆಯನ್ನು ಮೀರಿಸಿದ, ನಿರಸ್ತಘನ(ಮೇಘವನ್ನು ಮೀರಿಸಿದ)+ ರವಮಂ= ಮೇಘಗರ್ಜನೆಯನ್ನು ಸೋಲಿಸಿದ, ಆ ರವಮಂ= ಆ ಗರ್ಜನೆಯನ್ನು, ಕೋಪಾರುಣನೇತ್ರಂ= ಕೋಪದಿಂದ ಕೆಂಪಾದ ಕಣ್ಣುಗಳುಳ್ಳ, ಉರಗಪತಾಕಂ= ಪನ್ನಗಕೇತನನು, (ದುರ್ಯೋಧನನು) ನೀರೊಳಗಿರ್ದುಂ= ನೀರಿನಲ್ಲಿದ್ದರೂ, ಬೆಮರ್ತಂ= ಬೆವರಿದನು.
ತಾತ್ಪರ್ಯ :- ಸಿಂಹಗರ್ಜನೆಯನ್ನೂ ಗುಡುಗಿನ ಸದ್ದನ್ನೂ ಮೀರೀಸಿದ ಭೀಮನ ಆರ್ಭಟವನ್ನು ಕೇಳಿ ಆ ಸಿಂಹನಾದವನ್ನು ಕೇಳಿ ಅಭಿಮಾನಧನನಾದ ದುರ್ಯೋಧನನು ಕೆರಳಿ ಕೆಂಡವಾದನು. ಅವನ ಕಣ್ಣುಗಳು ಕೆಂಪಾದುವು. ಕೋಪೋದ್ರೇಕದಿಂದ ಶೀತಲವಾದ ನೀರಿನಲ್ಲಿದ್ದರೂ ಸರ್ಪಧ್ವಜನ ಮೈಬೆವರಿತು.
“ನೀರೊಳಗಿರ್ದುಂ ಬೆಮರ್ತನುರಗಪತಾಕಂ “ ಎಂಬ ರನ್ನನ ಈ ನುಡಿ ಪ್ರಸಿದ್ಧವಾಗಿದೆ, ಉರಗಪತಾಕಂ ಎನ್ನುವ ಪದವೂ ಇಲ್ಲಿ ಅರ್ಥವತ್ತಾಗಿ ಸೇರಿದೆ.
ನಿಜಮಕುಟಸ್ಫುರನ್ಮಣಿಗಣಚ್ಛವಿಯಿಂ ಸುರಚಾಪಲೀಲೆ ಪಂ
ಕಜವನದೊಳ್ ಮನಂಗೊಳಿಸೆ ತನ್ನಯ ಮೇಗೊಗೆದಿರ್ದ ನೀಲನೀ |
ರಜವನದಿಂ ಕಱಂಗಿ ಕಮಲಾಕರದಿಂ ಪೊಱಮಟ್ಟನಾಗಳಾ
ಭುಜಯುಗತೋರಣಾಯಿತಗದಾಪರಿಘಂ ಫಣಿರಾಜಕೇತನಂ॥೨೭॥
ಪದವಿಭಾಗ-ಅರ್ಥ:ನಿಜಮಕುಟ= ತನ್ನ ಕಿರೀಟದಲ್ಲಿ, ಸ್ಫುರತ್=ಪ್ರಕಾಶಿಸುವ, ಮಣಿಗಣ+ ಚ್ಛವಿಯಂ=ನವರತ್ನಗಳ ಕಾಂತಿಯಿಂದ. ಪಂಕಜ+ ವನದೊಳ್= ತಾವರೆಗಳ ಸಮೂಹದಲ್ಲಿ, ಸುರಚಾಪ+ ಲೀಲೆ= ಕಾಮನಬಿಲ್ಲಿನ ಸೊಗಸು, ಮನಂಗೊಳಿಸೆ= ಮನೋಹರವಾಗಿ ತೋರುತ್ತಿರಲು, ತನ್ನಯ ಮೇಗೆ ಒಗೆದಿರ್ದ= ತನ್ನ ಮೇಲ್ಭಾಗದಲ್ಲಿದ್ದ, ನೀಲನೀರಜ ವನದಿಂ= ಕನ್ನೈದಿಲೆಗಳ ಸಮೂಹದಿಂದ, ಕಱಂಗಿ=ಕಪ್ಪಾಗಿ, ಆ ಭುಜಯುಗ ತೋರಣಾಯಿತ ಗದಾಪರಿಘಂ= ಪರಿಘ ಸದೃಶವಾದ ತನ್ನ ಗದೆಯನ್ನು ತೋರಣದಂತೆ ಆ ಎಡು ತೋಳುಗಳಲ್ಲಿ ಎತ್ತಿ ಹಿಡಿದು, ಫಣಿರಾಜಕೇತನಂ= ಸರ್ಪಧ್ವಜ ದುರ್ಯೋಧನನು, ಕಮಲಾಕರದಿಂ= ಸರೋವರದಿಂದ, ಆಗಳ್ (ಆಗ-ಕೂಡಲೆ) ಪೊರಮಟ್ಟಂ= ಆಗ ಹೊರಬಂದನು.
ತಾತ್ಪರ್ಯ :- ತನ್ನ ಕಿರೀಟದಲ್ಲಿ ಹೊಳೆಯುತ್ತಿದ್ದ ನವರತ್ನಗಳ ನವವಿಧ ಕಾಂತಿಯಿಂದ ಆ ಸರೋವರದಲ್ಲಿದ್ದ ತಾವರೆಗಳ ಸಮೂಹದಲ್ಲಿ ಇಂದ್ರಚಾಪದ ಸೊಬಗು ಮನೋಹರವಾಗಿ ಕಾಣುತ್ತಿರಲು, ತನ್ನ ಮೇಲ್ಗಡೆಯಲ್ಲಿದ್ದ ಕನ್ನೈದಿಲೆಗಳ ಕಾಂತಿಯು ಪ್ರತಿಫಲಿಸಿದುದರಿಂದ ಕ್ಷಣಕಾಲ ಕಪ್ಪಾಗಿ ತೋರುತ್ತಿರಲು, ತನ್ನ ಎರಡು ತೋಳುಗಳಲ್ಲಿ ಪರಿಘಸದೃಶವಾದ ಗದೆಯನ್ನು ತೋರಣದಂತೆ ಎತ್ತಿಹಿಡಿದುಕೊಂಡು, ಸರ್ಪಧ್ಜಜನು ಕೂಡಲೇ ಕೊಳದಿಂದ ಹೊರಬಿದ್ದನು.

೦೦೦೦೦೦೦೦೦೦೦೦೦೦೦೦೦೦೦೦೦೦೦೦============೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

ಯುದ್ಧ[ಸಂಪಾದಿಸಿ]

ರನ್ನನ ಗದಾಯುದ್ಧದ ಭಾಗ

ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ
ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂಱುಗೊಳ್ಳೆಂದು ಮ
ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥

  • ಕರಿಯಂ= ಆನೆಯನ್ನು,

ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೆ= ಕಳಿಂಗರಾಜನ ಗಜಘಟೆಗಳನ್ನು ಕೊಂದು ಕಳಿಂಗರಾಜನನ್ನು ವಧಿಸಿದ ಅಹಂಕಾರಕ್ಕೆ ( ನೊಣೆ = ನುಂಗು, ಸಂಹರಿಸು. ) ಒಂದುಗೊಳ್= ಒಂದು ಕೊಳ್= ಇದೋ ಒಂದು ಏಟು ಕೊಳ್= ತೆಗೆದುಕೊ., ಮತ್+ ಸಹೋದರರಂ ಕೋಪದೆ ತಿಂದುದರ್ಕೆ (ತಿಂದು- ಕೊಂದು)+ ಎರಡುಗೊಳ್- ಕೊಳ್= ನನ್ನ ತಮ್ಮಂದಿರನ್ನು ಕೋಪದಿಂದ ಕೊಂದುದಕ್ಕೆ ಇದೋ ಎರಡನೇ ಪೆಟ್ಟು, ದುಶ್ಯಾಸನನ ಉರಸ್ಥಳ (ಉರ= ಎದೆ) ಕ್ಷರತ್(ಬಗೆದು) ಅಸ್ರಾಂಬುವಂ(ಅಸ್ರ+ ಅಂಬುವಂ= ರಕ್ತ ಜಲ) ಆರ್ದು ಪೀರ್ದ(ಆರ್ಭಟಿಸಿ ಕುಡಿದ) ಮುಳಿಸಿಂಗಂ(ಮುಳಿಸು = ಕೋಪ) ಮೂಱುಗೊಳ್(ಮೂರನೇ ಏಟು ಕೊಳ್ ಪಡೆ,)= ದುಶ್ಯಾಸನನ ಎದೆಯಿಂದ ಚಿಮ್ಮುತ್ತಿರುವ ರಕ್ತವನ್ನು ಆರ್ಭಟಿಸಿ ಹೀರಿದ ಕೋಪಕ್ಕಾಗಿ ಇದೋ ಮೂರನೆ ಏಟು! ಎಂದು=ಎಂಬುದಾಗಿ ಹೇಳುತ್ತಾ, ಮಚ್ಚರದಿಂ= ಮತ್ಸರದಿಂದ, ಓವದೆ= ನಿರ್ದಾಕ್ಷಿಣ್ಯವಾಗಿ, ದುರ್ಯೋಧನಂ ಗದೆಯಂ ಎತ್ತಿ ಭೀಮನಂ ಪೊಯ್ದಂ= ದುರ್ಯೋಧನನು ಗದೆಯನ್ನು ಎತ್ತಿ ಭೀಮನನ್ನು ಬಲವಾಗಿ ಹೊಡೆದನು.


ತಾತ್ಪರ್ಯ :- ಕಳಿಂಗರಾಜನ ಆನೆಗಳ ಹಿಂಡನ್ನೆಲ್ಲ ಸಂಹರಿಸಿ ಕಳಿಂಗರಾಜನನ್ನು ಕೊಂದ ಅಪರಾಧಕ್ಕೆ ಇದೋ ಒಂದು ಏಟು! ನನ್ನ ತಮ್ಮಂದಿರನೆಲ್ಲ ತಿಂದುದಕ್ಕೆ ಇದೋ ಎರಡನೆಯ ಏಟು! ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನ ಎದೆಯಿಂದ ಪುಟಿಯುತ್ತಿರುವ ಕೆನ್ನೆತ್ತರನ್ನು ಆರ್ಭಟಿಸುತ್ತಾ ಹೀರಿದ ಕೋಪಕ್ಕೆ ಇದೋ ಮೂರನೇ ಏಟು! ಹೀಗೆನ್ನುತ್ತಾ ದುರ್ಯೋಧನನು ಕೋಪೋದ್ರೇಕದಿಂದ ಗದೆಯನ್ನೆತ್ತಿ ಭೀಮನನ್ನು ಹೊಡೆದನು.


ಭೀಮನು ತನಗೆ ಮಾಡಿದ ಮಹಾಪರಾಧಗಳನ್ನು ಎಣಿಸಿ ಆತನಿಗೆ ಒಂದೊಂದು ಅಪರಾಧಕ್ಕೆ ಒಂದೊಂದು ಪೆಟ್ಟಿನಂತೆ ಮೂರು ಪೆಟ್ಟುಗಳನ್ನು ಹಾಕುತ್ತಾನೆ ದುರ್ಯೋಧನ.


ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ
ಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋ
ವದೆ ಪೊಯ್ದಂ ತೋಳ್ಗಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋ
ಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ॥೧೯॥


ಭೀಮನ ದುರ್ನಯಕ್ಕೆ ದುರ್ಯೋಧನನು ಮೂರು ಏಟುಗಳನ್ನು ಬಿಗಿದರೆ ಪ್ರತಿಯಾಗಿ ದುರ್ಯೋಧನನ ಅಪರಾಧಗಳಿಗೆ ಐದು ಏಟುಗಳನ್ನು ಬಾರಿಸುತ್ತಾನೆ ಭೀಮ!


ಇದು= ಈ ಏಟು, ಲಾಕ್ಷಾಗೇಹದಾಹಕ್ಕೆ= ಅರಗಿನ ಮನೆಯನ್ನು ಸುಟ್ಟಿದ್ದಕ್ಕೆ, ಇದು = ಈ ಏಟು, ವಿಷಮ ವಿಷಾನ್ನಕ್ಕೆ= ಕ್ರೂರ ವಿಷಮಿಶ್ರಿತ ಆಹಾರವನ್ನು ತಿನ್ನಿಸಿದ್ದಕೆ, ಇದು=ಈ ಏಟು, ನಾಡಜೂದಿಂಗೆ= ಕಪಟ ದ್ಯೂತಕ್ಕೆ, ( ನಾಡ= ನಾೞ- ಮೋಸದ ನಾೞವಾಸೆಗೆ= ಮೋಸದ ದಾಳ , ಪಂಪ ಭಾರತ ೬-೬೮ ವಚನ ನೋಡಿ ) ಇದು= ಈ ಏಟು, ಪಾಂಚಾಲೀಪ್ರಪಂಚಕ್ಕೆ= ದ್ರೌಪದಿಯ ವಿಷಯಕ್ಕೆ, ( ದ್ರೌಪದಿಯನ್ನು ಅಪಮಾನಗೊಳಿಸಿದ್ದಕ್ಕೆ ) ಇದು=ಈ ಏಟು, ಕೃತಕಸಭಾ ಆಲೋಕನ ಭ್ರಾಂತಿಗೆ= ಕೃತಕ ಸಭೆಗೆ ಪಾಂಡವರನ್ನು ಆಮಂತ್ರಿಸಿದ ಹುಚ್ಚಾಟಕ್ಕೆ, ಎಂದು =ಎಂಬುದಾಗಿ
ಹೇಳುತ್ತಾ, ಓವದೆ= ನಿಷ್ಕರುಣೆಯಿಂದ, ಕಾಲ್ಗಳಂ= ಕಾಲುಗಳನ್ನು, ತೋಳ್ಗಳಂ=ಭುಜಗಳನ್ನು, ಅಗಲ್ದುರಮಂ= ಅಗಲ್ದ ಉರಮಂ= ವಿಶಾಲವಾದ ಎದೆಯನ್ನೂ, ಕೆನ್ನೆಯಂ= ಕಪೋಲವನ್ನೂ, ನೆತ್ತಿಯಂ=ನೆತ್ತಿಯನ್ನೂ, ಕೋಪದೊಳ್=ಕೋಪದಿಂದ, ಅಯ್ದು ದುರನಯಕ್ಕೆ= ಐದು ಅಪರಾಧಗಳಿಗೆ, ಅಯ್ದೆಡೆಯಂ= ಐದು ಭಾಗಗಳನ್ನು, ಉರು ಗದಾದಂಡದಿಂ= ಭಯಂಕರವಾದ ಗದಾದಂಡದಿಂದ, ಭೀಮಸೇನಂ=ಭೀಮನು, ಪೊಯ್ದಂ= ಹೊಡೆದನು.ತಾತ್ಪರ್ಯ :- ಇದೋ ಈ ಏಟು ಅರಗಿನ ಮನೆಗೆ ಬೆಂಕಿ ಹಚ್ಚಿದ್ದಕ್ಕೆ! ಇದೋ ಈ ಏಟು ವಿಷಾನ್ನವನ್ನು ಇಕ್ಕಿದ್ದಕ್ಕೆ! ಇದೋ ಈ ಏಟು ಮೋಸದ ಜೂಜಾಟಕ್ಕೆ! ಇದೋ ಈ ಏಟು ದ್ರೌಪದಿಯನ್ನು ಪರಾಭವಗೊಳಿಸಿದ್ದಕ್ಕೆ! ಇದೋ ಈ ಏಟು ಮೋಸದಿಂದ ನಮ್ಮನ್ನು ಸಭೆಗೆ ಬರಮಾಡಿದ್ದಕ್ಕೆ! ಹೀಗೆ ಹೇಳುತ್ತಾ ಭೀಮನು ಕುಪಿತನಾಗಿ ನಿರ್ದಾಕ್ಷಿಣ್ಯದಿಂದ ದುರ್ಯೋಧನನ ಕಾಲುಗಳನ್ನೂ, ತೋಳುಗಳನ್ನೂ, ಅಗಲವಾದ ಎದೆಯನ್ನೂ, ಕೆನ್ನೆಯನ್ನೂ ಮತ್ತು ನೆತ್ತಿಯನ್ನೂತನ್ನ ಭೀಕರವಾದ ಗದೆಯಿಂದ ಅಪ್ಪಳಿಸಿದನು. ದುರ್ಯೋಧನನ ಐದು ಅನ್ಯಾಯಗಳಿಗೆ ಕ್ರಮವಾಗಿ ಐದು ಏಟುಗಳನ್ನು
ಬಾರಿಸಿದನು.

೦೦೦೦೦೦೦೦೦೦೦೦೦೦೦೦೦೦೦

೫೦[ಸಂಪಾದಿಸಿ]