ಸದಸ್ಯ:Bschandrasgr

ವಿಕಿಸೋರ್ಸ್ ಇಂದ
Jump to navigation Jump to search

<ಸದಸ್ಯ:ಬಿ.ಎಸ್.ಚಂದ್ರಶೇಖರ

ಕಾಣಿಕೆಗಳು[ಸಂಪಾದಿಸಿ]

 1. ಶಿಶುನಾಳ ಷರೀಷ-ಶರೀಫ ಸಾಹಿತ್ಯ
 2. ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ
 3. ಕೋಡಗನ ಕೋಳಿ ನುಂಗಿತ್ತಾ ತಂಗಿ,
 4. ಚಂದದಿ ಕೇಳಿದರ ವಿಸ್ತಾರ
 5. ಗುಡಿಯ ನೋಡಿರಣ್ಣಾ ದೇಹದ
 6. ಸ್ನೇಹ ಮಾಡಬೇಕಿಂಥವಳ!
 7. ಮೋಹದ ಹೆಂಡತಿ ಸತ್ತ ಬಳಿಕ
 8. ಒಳ್ಳೇ ನಾರಿ ಕಂಡೆ
 9. ಅತ್ತ ಇತ್ತ ಹರಿದಾಡುವ ಮನಸಿಗೆ
 10. ಅಗ್ಗದ ಅರವಿ ತಂದು
 11. ಬಿದ್ದಿಯಬ್ಬೇ ಮುದುಕಿ
 12. ಹುಟ್ಟಿದ ಹೊಲಿಮನಿ
 13. ಸೋರುತಿಹುದು ಮನೆಯ ಮಾಳಿಗಿ
 14. ತರವಲ್ಲ ತಗಿ ನಿನ್ನ ತಂಬೂರಿ
 15. ದುಡ್ಡು ಕೆಟ್ಟದ್ದು ನೋಡಣ್ಣ
 16. ಕೂ ಕೂ ಎನುತಿದೆ ಬೆಳವಾ
 17. ಮನಸೇ ಮನಸಿನ ಮನಸ ನಿಲ್ಲಿಸುವುದು
 18. ಅಳಬೇಡ ತಂಗಿ ಅಳಬೇಡ
 19. ಗಿರಣಿ ವಿಸ್ತಾರ ನೋಡಮ್ಮ
 20. ಎಲ್ಲರಂಥವನಲ್ಲ ನನ ಗಂಡ
 21. ಚೋಳ ಕಡಿತು, ನನಗೊಂದು ಚೋಳ ಕಡಿತು
 22. ಎಡಿ ಒಯ್ಯನು ಬಾರೆ ದೇವರಿಗೆ

ಪಂಪಭಾರತ[ಸಂಪಾದಿಸಿ]

 1. ಪಂಪಭಾರತ ಪ್ರಥಮಾಶ್ವಾಸಂ--:8-1-2018--ರಿಂದ ೨೮-೧-2018
 2. ಪಂಪಭಾರತ ದ್ವಿತೀಯಾಶ್ವಾಸಂ--೨೮-೧-೨೦೧೮
 3. ಪಂಪಭಾರತ ತೃತೀಯಾಶ್ವಾಸಂ --೧೨-೨-೨೦೧೮
 4. ಪಂಪಭಾರತ ಚತುರ್ಥಾಶ್ವಾಸಂ -- -೨೫-೨-೨೦೧೮
 5. ಪಂಪಭಾರತ ಪಂಚಮಾಶ್ವಾಸಂ --೧೮ - ೩ - ೨೦೧೮- ೨೮-೩-೨೦೧೮
 6. ಪಂಪಭಾರತ ಷಷ್ಠಮಾಶ್ವಾಸಂ --- ೨೮-೩-೨೦೧೮
 7. ಪಂಪಭಾರತ ಸಪ್ತಮಾಶ್ವಾಸಂ-- -೨೮-೩-೨೦೧೮
 8. ಪಂಪಭಾರತ ಅಷ್ಠಮಾಶ್ವಾಸಂ --೧೫-೪-೨೦೧೮
 9. ಪಂಪಭಾರತ ನವಮಾಶ್ವಾಸಂ --೨೯-೪-೨೦೧೮
 10. ಪಂಪಭಾರತ ದಶಮಾಶ್ವಾಸಂ --೧೦-೫-೨೦೧೮
 11. ಪಂಪಭಾರತ ಏಕಾದಶಾಶ್ವಾಸಂ --೧- ೬ -೨೦೧೮
 12. ಪಂಪಭಾರತ ದ್ವಾದಶಾಶ್ವಾಸಂ -೦-೦- ೨೩-೬-೨೦೧೮
 13. ಪಂಪಭಾರತ ತ್ರಯೋದಶಾಶ್ವಾಸಂ --೦--೨೩-೭-೨೦೧೮
 14. ಪಂಪಭಾರತ ಚತುರ್ದಶಾಶ್ವಾಸಂ --೯-೮-೨೦೧೮ to 15-8-2018
 15. ಪಂಪ:ಕವಿ-ಕೃತಿ ಪರಿಚಯ
 16. ಅನುಬಂಧ
 17. ಪಂಪ - ಒಂದು ಚಿಂತನೆ
 18. ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ
 19. ಪಂಪನ ಆದಿಪುರಾನದ ಕಥಾಸಾರ

ಜೈಮಿನಿ ಭಾರತ[ಸಂಪಾದಿಸಿ]

 • ಪದ್ಯಗಳು- ೧೯೦೭ :ಪದವಿಭಾಗ-ಅರ್ಥ:೩೪ ಸಂಧಿಗಳು; ೧೩-೫-೨೦೧೭ಕ್ಕೆ ಪೂರ್ಣ ಪಾಠ ತುಂಬಿದೆ.(ಪದವಿಭಾಗ ಅರ್ಥ ಜೂನ್ ೧೫-೬-೨೦೧೭ ರಿಂದ ೬-೧-೨೦೧೮ರಲ್ಲಿ ಹಾಕಿದೆ)

೩೪/34- ಸಂಧಿಗಳು :ನೋಡಿ[ಸಂಪಾದಿಸಿ]

ಸಂಧಿಗಳು* 1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಕುಮಾರವ್ಯಾಸ ಭಾರತ[ಸಂಪಾದಿಸಿ]

 1. ಕುಮಾರವ್ಯಾಸನ 'ಕೃಷ್ಣ ಕಥೆ':ಕುಮಾರವ್ಯಾಸ ಭಾರತದಲ್ಲಿ 'ಕವಿಯ ತಾತ್ವಿಕ ದರ್ಶನ'
 2. ಆದಿಪರ್ವ: ೦೩. ಮೂರನೆಯ ಸಂಧಿ - ವ್ಯವಸ್ಥೆಗೊಳಿಸಿದೆ.
 3. ಆದಿಪರ್ವ: ೦೪. ನಾಲ್ಕನೆಯ ಸಂಧಿ ತುಂಬಿದೆ.
 4. ಆದಿಪರ್ವ: ೦೫. ಐದನೆಯ ಸಂಧಿತುಂಬಿದೆ.
 5. ಆದಿಪರ್ವ: ೦೬. ಆರನೆಯ ಸಂಧಿತುಂಬಿದೆ.
 6. ಆದಿಪರ್ವ: ೦೭. ಏಳನೆಯ ಸಂಧಿತುಂಬಿದೆ.
 7. ಆದಿಪರ್ವ: ೦೮. ಎಂಟನೆಯ ಸಂಧಿತುಂಬಿದೆ.

ವಿರಾಟಪರ್ವ[ಸಂಪಾದಿಸಿ]

 1. ವಿರಾಟಪರ್ವ: ೦೧. ಒಂದನೆಯ ಸಂಧಿ ತುಂಬಿದೆ.
 2. ವಿರಾಟಪರ್ವ: ೦೨. ಎರಡನೆಯ ಸಂಧಿ ತುಂಬಿದೆ.

ಉದ್ಯೋಗ ಪರ್ವ[ಸಂಪಾದಿಸಿ]

 1. ಉದ್ಯೋಗಪರ್ವ: ೦೪. ನಾಲ್ಕನೆಯ ಸಂಧಿ

ಕುಮಾರವ್ಯಾಸ ಭಾರತ - ಅರ್ಥಸಹಿತ- ಕುಮಾರವ್ಯಾಸಭಾರತ-ಸಟೀಕಾ[ಸಂಪಾದಿಸಿ]

ವಿರಾಟಪರ್ವ[ಸಂಪಾದಿಸಿ]

ಮಂಕುತಿಮ್ಮನ ಕಗ್ಗ[ಸಂಪಾದಿಸಿ]

ಕರ್ನಾಟಕ ಸರ್ಕಾರ ಸಂಸ್ಕೃತಿ ಇಲಾಖೆಯವರು ಮಂಕುತಿಮ್ಮನ 'ಕಗ್ಗ ರಸಧಾರೆ-(ವ್ಯಾಖ್ಯಾನ ಸಹಿತ' [೩]ಉಚಿತವಾಗಿ ವೆಬ್‍ನಲ್ಲಿ ಹಾಕಿದ್ದಾರೆ. ಅವರು ಈ ಜಾಲತಾಣದಲ್ಲಿ ಎಲ್ಲಿಯೂ ಕಾಪಿರೈಟ್ ಕಾದಿರಿಸಿರುವುದಾಗಿ ಹಾಕಿಲ್ಲ. ಅದು ಕನ್ನಡ ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿಯೂ ಇದೆ! ಕಗ್ಗದ ಮೊದಲ ಪುಟ -ಕೊಂಡಿಗಳ ಅಥವಾ ಲಿಂಕ್ ಪುಟ ರದ್ದಾಗಿದೆ. ಕೆಲವು ಪದ್ಯಗಳು ಉಳಿದಿದ್ದರೂ, ಪೂರ್ಣವಾಗಿ ತುಂಬಲು ಆಗಿಲ್ಲ.ಓದುಗರು ಕ್ಷಮಿಸಬೇಕು.[೪] [೫]

ಕನಕದಾಸರ ಸಾಹಿತ್ಯ[ಸಂಪಾದಿಸಿ]

(ಪೂರ್ಣ ಪಾಠ ಪುಟ:ನಳ ಚರಿತೆ.djvu/೭ ಪರಿಶೀಲಿಸಿಲ್ಲ)

 1. ನಳಚರಿತ್ರೆ;ಒಂದನೆಯ ಸಂಧಿ
 2. ನಳಚರಿತ್ರೆ:ಎರಡನೆಯ ಸಂಧಿ
 3. ನಳಚರಿತ್ರೆ:ಮೂರನೆಯ ಸಂಧಿ
 4. ನಳಚರಿತ್ರೆ:ನಾಲ್ಕನೆಯ ಸಂಧಿ
 5. ನಳಚರಿತ್ರೆ:ಐದನೆಯ ಸಂಧಿ
 6. ನಳಚರಿತ್ರೆ:ಆರನೆಯ ಸಂಧಿ
 7. ನಳಚರಿತ್ರೆ:ಏಳನೆಯ ಸಂಧಿ
 8. ನಳಚರಿತ್ರೆ:ಎಂಟನೆಯ ಸಂಧಿ
 9. ನಳಚರಿತ್ರೆ:ಒಂಭತ್ತನೆಯ ಸಂಧಿ
 1. ರಾಮಧಾನ್ಯಚರಿತೆ ಕಥಾಸಾರ.
 1. ಹರಿಭಕ್ತಿಸಾರ ---ಕನಕದಾಸರ ಕೃತಿ
 2. ಸೋಮೇಶ್ವರ ಶತಕ

ಭಾವಾರ್ಥದೊಂದಿಗೆ ಸೋಮೇಶ್ವರ ಶತಕ

ಶಿಶು ಸಾಹಿತ್ಯ[ಸಂಪಾದಿಸಿ]

ಭಾವಗೀತೆಗಳು[ಸಂಪಾದಿಸಿ]

ಒಟ್ಟು[ಸಂಪಾದಿಸಿ]

 • ೧೩೦ ‍ಫೈಲು - ಪುಟ. ೧೫-೬-೨೦೧೮.

ಎರಡನೆಯ ಸಂಧಿ; ಪದ್ಯ : ಸೂಚನೆ[ಸಂಪಾದಿಸಿ]

ರಾಜೇಂಧ್ರ ಧರ್ಮತನಯಂ ಬಾದರಾಯಣನ |
ವಾಜಿಮೇಧಾಧ್ವರ ವಿಧಾನಮಂ ಕೇಳ್ದು ಪಂ |
ಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು ||

ಪದವಿಭಾಗ-ಅರ್ಥ:
ರಾಜೇಂದ್ರ ಧರ್ಮತನಯಂ =ರಾಜೇಂದ್ರನಾದ ಧರ್ಮರಾಯನು, ಬಾದರಾಯಣನ ವಾಜಿಮೇಧಾಧ್ವರ ವಿಧಾನಮಂ ಕೇಳ್ದು = ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಪಂಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು. ಪಂಕಜ ಪತ್ರೇಕ್ಷಣ =ಕಮಲದ ಎಸಳಿನಂತೆ ವಿಶಾಲ ಕಣ್ಣುಳ್ಳ ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
 • ತಾತ್ಪರ್ಯ: ಧರ್ಮರಾಯನು ವ್ಯಾಸರಿಂದ ಅಶ್ವಮೇದ ಯಾಗದ ವಿವರ ತಿಳಿದುಕೊಂಡು, ಕೃಷ್ನನ ಒಪ್ಪಿಗೆ ಪಡೆದು ವಿಶಿಷ್ಠ ಲಕ್ಷಣದ ಯಜ್ದದ ಕುದುರೆಯನ್ನು ತರಲು ಭೀಮನನ್ನು ಕಳುಹಿಸಿದನು
(ಪದ್ಯ - ಸೂಚನಾ ಪದ್ಯ)
(ಪದ್ಯ - ಸೂಚನಾ ಪದ್ಯ)

ಪದ್ಯ:-:ಕುಮಾರವ್ಯಾಸ[ಸಂಪಾದಿಸಿ]

ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ |

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=

ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮುಸುಕಿತು ||1||

 • ತಾತ್ಪರ್ಯ:
 • (ಪದ್ಯ-೬೭.)

ಪದ್ಯ ೨[ಸಂಪಾದಿಸಿ]

ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ ||
ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು ||2||

ಪದವಿಭಾಗ-ಅರ್ಥ:
ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ

ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು

 • ತಾತ್ಪರ್ಯ:ಆ ಕನಕ ಗಿರಿಯ ತೆಂಕಣ ದೆಸೆಯೊಳಿರ್ಪುದು ಸು | ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ |ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸುವ

ಭೂಕಾಂತ ಜನಮೇಜಯಂ ಮಹಾಭಾರತ ಕ |ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ |ದೇಕಮಾನಸನಾಗಿ ಜೈಮಿನಿ ಮುನೀಂಧ್ರನಂ ಬೆಸಗೊಡನೀ ತೆರದೊಳು

(ಪದ್ಯ -೨)

ಕುಮಾರವ್ಯಾಸ ಭಾರತ/ಸಟೀಕಾ -ವಿರಾಟಪರ್ವ ಸಂಧಿ - ೯[ಸಂಪಾದಿಸಿ]

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ಸೂ.ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿಜಪರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ ||ಸೂಚನೆ||
ಪದವಿಭಾಗ-ಅರ್ಥ:ರಾಯ ಕೌರವ ಸೈನ್ಯ ಕದಳೀ ವಾಯುವು+ ಉತ್ತರ ಸಹಿತ ನಿಜಪರ ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ.
ಅರ್ಥ:ರಾಜಕೌರವನ ಸೈನ್ಯಕ್ಕೆ ಬಾಳೆಯತೋಟಕ್ಕೆ ಬಿರುಗಾಳಿಯಂತಿರುವ ಅರ್ಜುನನು ಮತ್ಸ್ಯ ಪುರ ರಾಜನಾದ ವಿರಾಟ ರಾಜನ ಮಗ ಉತ್ತರನ ಸಹಿತ ಬಂದು ಶ್ರೇಷ್ಠವಾದ ಮತ್ಸ್ಯಪುರವನ್ನು ಹೊಕ್ಕನು.
~~ಓಂ~~

ಉತ್ತರನ ಗೆಲುವಿನ ಸುದ್ದಿಗೆ ವಿರಾಟನ ಪ್ರತಿಕ್ರಿಯೆ[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು |
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ || ೦೧||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಭಂಗದಲಿ+ ಅಖಿಳ ಕೌರವಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು ಮೇಲು ಮುಸುಕಿನ ಮೊಗದ ವಾದ್ಯದಮೇಳ ಮೋನದಲಿ+ ಅಖಿಳ ನೃಪರು ನಿಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ.
ಅರ್ಥ: ವೈಶಂಪಾಯನ ಮುನಿ ಹೇಳಿದ, ಕೇಳು ಜನಮೇಜಯ ರಾಜನೇ, ಸೋಲಿನ ಅವಮಾನದಲ್ಲಿ ಎಲ್ಲಾ ಕೌರವ ಸಮೂಹ ವ್ಯಥೆಯಿಂದ ಹಸ್ತಿನಾವತಿಗೆ ಹಿಂತಿರುಗಿತು. ಹಾಗೆ ಬಂದ ನಂತರ ಮುಖಕ್ಕೆ ಮೇಲು ಮುಸುಕು ಹಾಕಿದ ಸಪ್ಪೆ ಮುಖದಲ್ಲಿ ಮೇಳಗಾರರ ಮೌನ ವಾದ್ಯದ ವಾದನದಲ್ಲಿ ಬಂದು, ಎಲ್ಲಾ ರಾಜರು ತಮ್ಮ ಅರಮನೆಗೆ ಮನೋವೇದನೆಯನ್ನು ಹೊತ್ತು ಒಳಹೊಕ್ಕರು.(ಮೋನ ಪಟ್ಟಿಗೆಯಾಕಾರದ ಬಡಿತದ ವಾದ್ಯ - ಡೋಲು?; ಮೋನ= ಮೌನ; ಮೋನ- ಮೌನವೆಂಬ ವಾದ್ಯ; ಇಲ್ಲಿ ಮೌನ ವಾದ್ಯ ಸೂಕ್ತ. ಸೋತು ಬಂದ ಅವರು ಯಾವ ವಾದ್ಯವೂ ಇಲ್ಲದೆ ಪುರ- ಅರಮನೆ ಪ್ರವೇಶ ಮಾಡಿದರು ಎಂಬುದೇ ಸರಿ. ಇಲ್ಲಿ ದ್ವಂದಾರ್ಥವನ್ನು ಕಾಣಬಹುದು.)
ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨
ಪದವಿಭಾಗ-ಅರ್ಥ: ಬಳಿಕ ಫಲುಗುಣನು+ ಅತ್ತಲು+ ಆ ಮರದೊಳಗೆ ಕೈದುವನು+ ಇರಿಸಿ ಮುನ್ನಿನ ಹುಲು ರಥವ ಮೇಳೈಸಿ ಸಾರಥಿತನವನು+ ಅಳವಡಿಸೆ ಇಳಿದು ಪಾರ್ಥನ ಮೈದಡವಿ ಕಪಿ ಕುಲ ಲಲಾಮನು ವನಕೆ ಹಾಯ್ದನು ಹೊಳಲ ಹೊರೆಯಲಿ ನಿಂದು ನಗುತು+ ಉತ್ತರನೊಳು+ ಇಂತೆಂದ.
ಅರ್ಥ: ಬಳಿಕ ಫಲ್ಗುಣನು ಅತ್ತ ವಿರಾಟ ನಗರದ ಹೊರವಲಯದಲ್ಲಿ, ಆ ಶಮ್ಮೀ ಮರದೊಳಗೆ ಆಯುಧಗಳನ್ನು ಇರಿಸಿ, ಮೊದಲು ಬಂದ ಸಾಮಾನ್ಯ ಹುಲು ರಥವ ಸಿದ್ಧಪಡಿಸಿಕೊಂಡು ಸಾರಥಿತನವನು ಅವನೇ ಅಳವಡಿಸಿಕೊಂಡಾಗ, ಧ್ವಜದಲ್ಲಿದ್ದ ಹನುಮನು ರಥದಿಂದ ಇಳಿದು ಪಾರ್ಥನ ಮೈದಡವಿ ಅವನ ನೋವು ನಿವಾರಿಸಿ, ಕಪಿ ಕುಲ ಲಲಾಮನಾದ ಅವನು ವನಕ್ಕೆ ಹಾರಿಹೋದನು. ಅರ್ಜುನನು ಶಮೀ ಮರದ (ಬನ್ನಿಮರ) ಬಳಿಯಲ್ಲಿ ನಿಂತು ನಗುತ್ತಾ ಉತ್ತರನೊಡನೆ ಹೀಗೆ ಹೇಳಿದ.
ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ |
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ || ೦೩ ||
ಪದವಿಭಾಗ-ಅರ್ಥ: ಕರೆದು ದೂತರಿಗೆ+ ಅರುಹು ನೀನೇ ಧುರವ ಜಯಿಸಿದೆನು+ ಎನ್ನು ನಾವು+ ಇದ್ದ+ ಇರವನು+ ಅರುಹದಿರು (ಅರುಹು - ಹೇಳು. ಅರುಹದಿರು- ಹೇಳಬೇಡ)+ ಇಂದು ಪಸರಿಸು (ಹರಡು) ನಿನ್ನ ವಿಕ್ರಮವ ಅರಸ ನಿನ್ನನೆ ಮನ್ನಿಸಲಿ ಪುರ ಪರಿಜನಂಗಳು ನಿನ್ನ ವಿಜಯದ ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ.
ಅರ್ಥ: ಅರ್ಜುನನು ಉತ್ತರನಿಗೆ, 'ದೂತರನ್ನು ಕರೆದು ಹೇಳು; ನೀನೇ ಯುಧ್ಧವನ್ನು ಜಯಿಸಿದುದಾಗಿ ಹೇಳು. ನಾವು ಪಾಂಡವರು ಇದ್ದ ವಿಷಯ, ಇರುವುದನ್ನು ಯಾರಗೂ ಹೇಳಬೇಡ. ಇಂದು ನಿನ್ನ ಸಾಹಸವನ್ನು ಹರಡು; ಅರಸ ವಿರಾಟನು ನಿನ್ನನ್ನೆ ಮನ್ನಿಸಿ ಗೌರವಿಸಲಿ. ಪುರ ಪರಿಜನರೂ ನಿನ್ನ ವಿಜಯದ ಹರ್ಷದಲ್ಲಿ ಉಬ್ಬಿರಲಿ. ನೀನು ನಾನು ಅಜ್ಞಾಪಿಸಿದಂತೆ ಮಾಡು,' ಎಂದ.
ಎನಲು ನೀನೇ ಬಲ್ಲೆ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು |
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ || ೦೪ ||
ಪದವಿಭಾಗ-ಅರ್ಥ: ಎನಲು ನೀನೇ ಬಲ್ಲೆ ಕರ ಲೇಸು (ಒಳಿತನ್ನು)+ ಎನುತ ದೂತರ ಕರೆದು ಮತ್ಸ್ಯನತನಯ ಕೌರವ ಬಲವ ಜಯಿಸಿದನೆಂದು ಪೇಳುವುದು ಜನಕನಲ್ಲಿಗೆ ಪೋಗಿಯೆಂದು+ ಆತನು ನಿಯಾಮಿಸುತಿರ್ದನು+ ಅತ್ತಲು ಜನಪ ಕುಂತೀಸುತನು ಸಹಿತೈತಂದನು+ ಅರಮನೆಗೆ
ಅರ್ಥ: ಅರ್ಜುನನು ಹೀಗೆ ಹೇಳಲು, ಮತ್ಸ್ಯನ ಮಗ ಉತ್ತರನು,'ನೀನೇ ಬಲ್ಲೆ ಯಾವುದು ಯೋಗ್ಯವು ಎಂದು,' ಎನ್ನುತ್ತಾ ದೂತರನ್ನು ಕರೆದು ಉತ್ತರನು ತನ್ನ ತಂದೆಯಬಳಿಗೆ ಹೋಗಿ, 'ಕೌರವ ಸೇನಾಬಲವನ್ನು ಉತ್ತರನು ಜಯಿಸಿದನೆಂದು ಹೇಳುವುದು' ಎಂದು ಆತನು ಆಜ್ಞೆ ಮಾಡುತ್ತಿದ್ದನು; ಅಗ ಅತ್ತ ರಾಜ ವಿರಾಟನು ಧರ್ಮಜನ ಜೊತೆಗೆ ಅರಮನೆಗೆ ಬಂದನು.
ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫
ಪದವಿಭಾಗ-ಅರ್ಥ: ಅರಮನೆಯ ಹೊಕ್ಕ+ ಅವನಿಪತಿಯು+ ಉತ್ತರನ ಕಾಣದೆ ಕಂದನು+ ಎತ್ತಲು ಸರಿದನು+ ಎನೆ, ರಾಣಿಯರು ಬಿನ್ನವಿಸಿದರು ಭೂಪತಿಗೆ ಕುರು ಬಲವನು+ ಅಂಗೈಸೆ ಮಿಗೆ+ ಯು+ ಉತ್ತರೆಯ ಗುರು ಸಾರಥಿತನವನು+ ಅನುಕರಿಸಿದನು, ಕೆಲಬಲನ ಹಾರದೆ (ಹಾರೈಸದೆ- ಅಪೇಕ್ಷಿಸದೆ) ಕದನಕೆ+ ಐದಿದನು/
ಅರ್ಥ: ಅರಮನೆಯನ್ನು ಹೊಕ್ಕ ವಿರಾಟರಾಜನು, ಉತ್ತರನನ್ನು ಕಾಣದೆ ಮಗನು, ಎತ್ತ ಹೋದನು? ಎನ್ನಲು, ರಾಣಿಯರು ರಾಜನಿಗೆ ಅರಿಕೆಮಾಡಿದರು. ಉತ್ತರನು ಕುರುರಾಜ ಕೌರವನ ಸೈನ್ಯವನ್ನ್ನು ಎದುರಿಸಲು ಹೋದನು ಎಂದರು; ಮತ್ತೆ ಉತ್ತರೆಯ ಗುರು ಸಾರಥಿತನವನನ್ನು ವಹಿಸಿದನು, ಅವನು ಜೊತೆಗಿದ್ದ ರಕ್ಷಕ ಸೈನ್ಯವನ್ನು ಅಪೇಕ್ಷಿಸದೆ ಯುದ್ಧಕ್ಕೆ ಹೋದನು ಎಂದರು.
ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ |
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ || ೦೬ ||
ಪದವಿಭಾಗ-ಅರ್ಥ: ಎಂದರೆ+ ಒಡಲೊಳು ಕೂರಲಗು ಮುರಿದ+ ಅಂದದಲಿ ಕಳವಳಿಸಿದನು ಮನನೊಂದನು+ ಅಕಟ ಕುಮಾರನೆತ್ತಲು ರಾಯ ದಳವೆತ್ತ ಬಂದವರು ಭೀಷ್ಮಾದಿಗಳು ತಾನಿಂದು ತರಹರಿಸುವೊಡೆ ತಾನೇನು+ ಇಂದುಧರನೇ ಮರುಳಲಾ ಮಗನು+ ಎನುತ ಚಿಂತಿಸಿದ
ಅರ್ಥ:ಉತ್ತರನು ಕುರು ಸೇನೆಯೊಡನೆ ಯುದ್ಧಕ್ಕೆ ಹೋದನು ಎಂದರೆ, ವಿರಾಟ ರಾಜನ ಹೊಟ್ಟೆಯಲ್ಲಿ ಕೂರಲಗು ಮುರಿದ ಹಾಗೆ ಸಂಕದಿಂದ ಕಳವಳಪಟ್ಟನು. ಅವನು ಮನಸ್ಸಿನಲ್ಲಿ ನೊಂದು ಹೇಳಿದನು,'ಅಕಟ ನನ್ನ ಕುಮಾರ ಎತ್ತ, ಕೌರವರಾಯನ ಸೇನೆ ಎತ್ತ! ಬಂದವರು ಭೀಷ್ಮಾದಿಗಳು ಕುಮಾರನು ತಾನು ಇಂದು ಎದುರಿಸಿ ತಡೆಯಲು ತಾನೇನು ಇಂದುಧರ ಶಿವನೇ? ಮರುಳಲ್ಲವೇ ಮಗನು! ಎನ್ನುತ್ತಾ ಚಿಂತೆಗೊಳಗಾದ.
ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭
ಪದವಿಭಾಗ-ಅರ್ಥ: ಮಗಗೆ ಪಡಿಬಲವಾಗಿ ಬಲು ಮಂತ್ರಿಗಳನು+ ಅವನಿಪ ಬೀಳುಗೊಟ್ಟನು, ದುಗುಡದಿಂದ+ ಇರೆ, ಹೊಳಲು (ಪಟ್ಟಣ) ಕೈಸೂರುಗಳ ಕಳಕಳದ ಮೊಗದ ಹರುಷದಲಿ+ ಅಖಿಳ ದೂತಾಳಿಗಳು (ದೂತರ ಆಳಿ- ಗುಂಪು) ಬಂದುದು, ಗುಡಿಯ (ಬಾವುಟ) ಕಟ್ಟಿಸು ನಗರಿಯಲಿ ಕಳುಹಿ+ ಇದಿರುಗೊಳಿಸು (ಆದರದ ಸ್ವಾಗತ)ಕುಮಾರಕನನು+ ಎನುತ.
ಅರ್ಥ:ವಿರಾಟನು ಚಿಂತೆಯಿಂದ ಮಗನಿಗೆ ಬೆಂಬಲವಾಗಿ ಕೆಲವು ಮಂತ್ರಿಗಳನ್ನು ಕಳಿಸಿದನು. ಅದರೂ ಅವನು ಬಹಳ ಚಿಂತೆಯಲ್ಲಿ ಇರಲು, ನಗರದ ಹತ್ತಿರದಲ್ಲಿ ಕಳಕಳ ಸಂತೋಷದ ಮುಖದ, ಹರ್ಷದಿಂದ ಕೂಡಿದ ಎಲ್ಲಾ ದೂತರ ಸಮೂಹವೂ ಅರಸನ ಬಳಿಗೆ ಬಂದಿತು. ಅವರು ಅವನಿಗೆ, 'ನಗರದಲ್ಲಿ ವಿಜಯದ ಬಾವುಟಗಳನ್ನು ಕಟ್ಟಿಸು. ಮಂತ್ರಿಗಳನ್ನೂ ಸುವಾಸಿನಿಯರನ್ನೂ ಕಳಿಸು, ಮಗನನ್ನು ಎದುರುಗೊಳ್ಳು!' ಎನ್ನುತ್ತಾ ಬಂದರು.
ರಾಯ ಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ |
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ || ೦೮ ||
ಪದವಿಭಾಗ-ಅರ್ಥ: ರಾಯ ಕುವರ ಪಿತಾಮಹನು ರಿಪುರಾಯ ಕುವರ ಕುಠಾರ ಕೌರವರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ ಜೀಯ ಬಿನ್ನಹ ಕರ್ಣ ಗುರು ಗಾಂಗೇಯ ಮೊದಲಾದಖಿಳ ಕೌರವರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ
ಅರ್ಥ: ಅವರು ವಿರಾಟನಿಗೆ, 'ರಾಜನೇ ನಿಮ್ಮ ಕುಮಾರನು ಕುಲದ ಪಿತಾಮಹನು, ಶತ್ರುರಾಜರ ಕುಮಾರರ ಕುಠಾರ- ಕತ್ತರಿಸುವವನ, ಕೌರವರಾಯನ ಸೇನೆಯ ಧ್ವಂಸಕನು! ಕುರುಕುಲವೆಂಬ ಆನೆಗೆ ಐದು ಮುಖದ ರುದ್ರನು, ಜೀಯ ತಮ್ಮಲ್ಲಿ ಅರಿಕೆ ಮಾಡುವೆವು, ನಿಮ್ಮ ಮಗನು ಕರ್ಣ, ಗುರು ದ್ರೋಣ, ಗಾಂಗೇಯ- ಭೀಷ್ಮ, ಮೊದಲಾದ ಅಖಿಲ ಕೌರವರಾಯನ ಸೇನೆಯನ್ನು ಗೆದ್ದು, ಉತ್ತರ ರಾಜಕುಮಾರನು ಗೋವುಗಳನ್ನು ಮರಳಿ ತಂದನು,ಎಂದರು.
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು |
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ || ೦೯ ||
ಪದವಿಭಾಗ-ಅರ್ಥ: ಕೇಳಿ ಮಿಗೆ(ಬಹಳ) ಹಿಗ್ಗಿದನು ತನು ಪುಳಕಾಳಿ ತಳಿತುದು, ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು, ಕಂಗಳು+ ಅರಳಿದವು ಲಾಲಿಸುತ ಸರ್ವಾಂಗ ಹರುಷದೊಳು+ ಆಳೆ ಜನಪ ಪಸಾಯಿತವ (ಪಸಾಯಿತ= ಪ್ರೀತಿಪಾತ್ರ) ದೂತಾಳಿಗೆ+ ಇತ್ತನು ಸುಲಿದರು ಅವದಿರು ರಾಯನ+ ಓಲಗವ
ಅರ್ಥ:ಮಗ ಉತ್ತರನು ಯುದ್ಧದಲ್ಲಿ ಕುರು ಸೇನೆಯನ್ನು ಜಯಿಸಿದನು ಎಂಬುದನ್ನು ಕೇಳಿ ವಿರಾಟನು ಬಹಳ ಹಿಗ್ಗಿದನು. ಅವನ ದೇಹದಲ್ಲಿ ರೋಮಾಂನ ಮೂಡಿತು. ಬಹಳ ಹರುಷದ ಆವೇಶದಲ್ಲಿ ಮನಸ್ಸು ಮುಂದಾಲೋಚನೆಯೂ ವಿಚಾರ ಶಕ್ತಿಯೂ ಕೆಟ್ಟಿತು. ಅವನ ಕಣ್ಣುಗಳು ಆನಂದದಿಂದ ಅರಳಿದವು. ಅದನ್ನೇ ಲಾಲಿಸುತ್ತಾ - ಪುನಃಪುನಃ ಭಾವಿಸುತ್ತಾ, ಅವನ ಸರ್ವಾಂಗವೂ ಹರ್ಷದಿಂದ ಆವರಿಸಲು, ರಾಜನು ಪ್ರೀತಿಪಾತ್ರರಾದ ಆ ದೂತರ ಗುಂಪಿಗೆ ಉದಾರವಾಗಿ ಬಹುಮಾನವನ್ನು ಕೊಟ್ಟನು; ಅವರೂ ರಾಜನ ಈ ಸಭಾಭೇಟಿಯನ್ನು ಕೇಳಿ ಪಡದು ಅವನನ್ನು ಸುಲಿದರು.
ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦
ಪದವಿಭಾಗ-ಅರ್ಥ: ಇದಿರುಗೊಳ ಹೇಳು+ ಎನಲು ಸರ್ವಾಂಗದಲಿ ಮಣಿ ಮೌಕ್ತಿಕದ ಸಿಂಗಾರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ ಸುದತಿಯರು ಹೊರವಂಟರು ಒಗ್ಗಿನ ಮೃದು ಮೃದಂಗದ ಕಹಳೆಗಳು ಸಂಪದದ ಸೊಂಪಿನ+ ಅಲೆ+ ಎಸೆಯೆ ರಾಜಾಂಗನೆಯರು+ ಅನುವಾಯ್ತು
ಅರ್ಥ:ಜಯಶಾಲಿ ಉತ್ತರನನ್ನು ಇದಿರುಗೊಳ್ಳಲು ಹೇಳಿ ಎಂದು ದೂತರು ಹೇಳಿದ ತಕ್ಷಣ ಅರಮನೆಯ ಸುದತಿಯರು- ಮುತ್ತೈದೆಯರು ಅವರ ಸರ್ವಾಂಗದಲ್ಲಿಯೂ ಮಣಿ ಮುತ್ತುಗಳ ಸಿಂಗಾರಮಾಡಿಕೊಂಡು, ಸುಂದರ ಕಸೂತಿ ರೇಖೆಯ ಲಲಿತ- ನೋಡಲು ಮನೋಹರವಾದ ಚಿತ್ರಾವಳಿಯ ಮುಸುಕುಗಳನ್ನು ಧರಿಸಿ ಹೊರಹೊರಟರು; ಅದರ ಜೊತೆಗೆ ಒಟ್ಟಾಗಿ ಮೃದು ಮೃದಂಗದ ಕಹಳೆಗಳು ಸಂಪದದ ಸೊಂಪಿನ ನಾದದ ಅಲೆಗಳು ಹೊಮ್ಮಿ ಶೋಭಿಸಲು ಎದುರುಗೊಳ್ಳಲು ಅನುವಾಧರು.
ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧
ಪದವಿಭಾಗ-ಅರ್ಥ: ಕವಿದು ನೂಕುವ (ಆವರಿಸಿ-ಒತ್ತರಿಸಿ ಬರುವ- ಒಳಗಿಂದ ಹೊರಕ್ಕೆ ಹೊಮ್ಮುವ) ಹರುಷವನು ಸಂತವಿಸಲು+ ಅರಿಯೆನು ಕಂಕ ನಿನ್ನೊಡನೆ+ ಎವಗೆ ವಿಮಳ ದ್ಯೂತಕೇಳಿಗೆ (ಪಗಡೆಯಾಟಕ್ಕೆ) ಚಿತ್ತವಾಯ್ತ+ ಎನಲು ಅವನಿಪತಿ ಕೇಳ್ ಜೂಜಿನಲಿ ಪಾಂಡವರು ಸಿಲುಕಿದರು+ ಅವರ ವಿಧಿಯನು ಭುವನದಲಿ ಬಲ್ಲವರು+ ಅದಾರು+ ಎಂದನು ವಿರಾಟಂಗೆ.
ಅರ್ಥ: ವಿರಾಟನು ಕಂಕನ ವೇಷದಲ್ಲಿದ್ದ ಧರ್ಮಜನನ್ನು ಕುರಿತು, 'ನನ್ನನ್ನು ಆವರಿಸಿ ಉಕ್ಕುತ್ತಿರುವ ಹರ್ಷವನ್ನು ಸಂತೈಸಿ ಸಮಾಧಾನ ಪಡಿಸಲು ಆಗುತ್ತಿಲ್ಲ. ಅದನ್ನು ಮರೆಯಲು ಕಂಕನೇ ನಿನ್ನೊಡನೆ ನಮಗೆ ವಿಮಲ- ದೋಷವಿಲ್ಲದ, ಫಣವಿಡದೆ ಪಗಡೆಯಾಟಕ್ಕೆ ಮನಸ್ಸಾಗಿದೆ, ಎನ್ನಲು, ಅವನು ರಾಜನೇ ಕೇಳು ಜೂಜಿನಲ್ಲಿ ಪಾಂಡವರು ಸಿಕ್ಕಿಕೊಂಡು, ಅವರಿಗಾದ ವಿಧಿಯನ್ನು- ಕಷ್ಟವನ್ನು ಬಲ್ಲವರು ಈ ಭೂಮಿಯಲ್ಲಿ ಯಾರಿದ್ದಾರೆ! ಎಂದನು ವಿರಾಟನಿಗೆ ಧರ್ಮಜ.
ದಾಳಗಳುಳ್ಳ ಪಗಡೆ ಆಟ- ನೆಲಕ್ಕೆ ಹಾಕಿರುವುದು ಮನೆಗಳುಳ್ಳ ಹಾಸು- ಹಾಸಂಗಿ
ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨
ಪದವಿಭಾಗ-ಅರ್ಥ: ಅವರು ರಾಜ್ಯವನು+ ಒಡ್ಡಿ ಸೋತವೊಲ್+ ಎವಗೆ ಪಣ ಬೇರಿಲ್ಲ, ಹರ್ಷೋತ್ಸವ ಕುಮಾರ+ ಅಭ್ಯುದಯ ವಿಜಯಶ್ರವಣ ಸುಖ ಮಿಗಲು ಎವಗೆ ಮನವಾಯ್ತು+ ಒಡ್ಡು ಸಾರಿಯ ನಿವಹವನು ಹೂಡೆನಲು ಹೂಡಿದನು+ ಅವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು.
 • ಹಾಸಂಗಿ= ಆಟಕ್ಕೆ ಚಿಕ್ಕ ಕಾಯಿಗಳನ್ನು ನೆಡೆಸುವ ಮನೆಗಳನ್ನು ಬಣ್ಣದಲ್ಲಿ ಗುರುತಿಸಿ ಹೊಲಿದಿರುವ ಬಟ್ಟೆಯ ಹಾಸು (ನೆಲದಮೆಲೆ ಹಾಸಿರುವ ಮನೆಗಳಿರುವ 'ಹಾಸನ್ನು' ನೋಡಿ).
ಅರ್ಥ: ಅದಕ್ಕೆ ವಿರಾಟನು, ಅವರು ರಾಜ್ಯವನು ಒಡ್ಡಿ ಸೋತಂತೆ ನಮಗೆ ಪಣ ಬೇರೆ ಬೇಡ, ಕೇವಲ ಹರ್ಷದ ಹಬ್ಬದಲ್ಲಿ ಕುಮಾರ ಉತ್ತರನ ಅಭ್ಯುದಯದ ವಿಜಯವಾರ್ತೆಯ ಸುಖ ಹೆಚ್ಚಲು ಅದನ್ನು ತಣಿಸಲು ನಮಗೆ ಆಟ ಆಡಲು ಮನಸ್ಸಾಯಿತು. ಎಲ್ಲಾ ಕಾಯಿಗಳ ರಾಶಿಯನ್ನು ಒಡ್ಡಿ ಹೂಡು, ಎಂದು, ರಾಜನು ನಸುನಗುತ್ತಾ ಹಾಸಂಗಿಯನು ಹಾಕಿದನು, ಧರ್ಮಜನು ಕಾಯಿಗಳನ್ನು ಹೂಡಿದನು.

೧೩ - ೧೪[ಸಂಪಾದಿಸಿ]

ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ೧೩
ಪದವಿಭಾಗ-ಅರ್ಥ:
ಅರ್ಥ:
ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ೧೪
ಪದವಿಭಾಗ-ಅರ್ಥ:
ಅರ್ಥ:
ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ ೧೫
ಪದವಿಭಾಗ-ಅರ್ಥ:
ಅರ್ಥ:
ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನವರೆ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬
ಪದವಿಭಾಗ-ಅರ್ಥ:
ಅರ್ಥ:
ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ೧೭
ಪದವಿಭಾಗ-ಅರ್ಥ:
ಅರ್ಥ:
ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ೧೮
ಪದವಿಭಾಗ-ಅರ್ಥ:
ಅರ್ಥ:
ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯
ಪದವಿಭಾಗ-ಅರ್ಥ:
ಅರ್ಥ:
ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ೨೦
ಪದವಿಭಾಗ-ಅರ್ಥ:
ಅರ್ಥ:
ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ೨೧
ಪದವಿಭಾಗ-ಅರ್ಥ:
ಅರ್ಥ:
ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨
ಪದವಿಭಾಗ-ಅರ್ಥ:
ಅರ್ಥ:
ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩
ಪದವಿಭಾಗ-ಅರ್ಥ:
ಅರ್ಥ:
ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ೨೪
ಪದವಿಭಾಗ-ಅರ್ಥ:
ಅರ್ಥ:
ಎಂದಿನವನುತ್ತರನು ಗಂಗಾ
ನಂದನನನೀ (ಪಾ: ನಂದನನೀ) ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ೨೫
ಪದವಿಭಾಗ-ಅರ್ಥ:
ಅರ್ಥ:
ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ೨೬
ಪದವಿಭಾಗ-ಅರ್ಥ:
ಅರ್ಥ:
ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ೨೭
ಪದವಿಭಾಗ-ಅರ್ಥ:
ಅರ್ಥ:
ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ೨೮
ಪದವಿಭಾಗ-ಅರ್ಥ:
ಅರ್ಥ:
ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ ೨೯
ಪದವಿಭಾಗ-ಅರ್ಥ:
ಅರ್ಥ:
ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ೩೦
ಪದವಿಭಾಗ-ಅರ್ಥ:
ಅರ್ಥ:
ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ೩೧
ಪದವಿಭಾಗ-ಅರ್ಥ:
ಅರ್ಥ:
ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ೩೨
ಪದವಿಭಾಗ-ಅರ್ಥ:
ಅರ್ಥ:
ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ೩೩
ಪದವಿಭಾಗ-ಅರ್ಥ:
ಅರ್ಥ:
ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ೩೪
ಪದವಿಭಾಗ-ಅರ್ಥ:
ಅರ್ಥ:
ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ೩೫
ಪದವಿಭಾಗ-ಅರ್ಥ:
ಅರ್ಥ:
ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ೩೬
ಪದವಿಭಾಗ-ಅರ್ಥ:
ಅರ್ಥ:
ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ೩೭
ಪದವಿಭಾಗ-ಅರ್ಥ:
ಅರ್ಥ:
ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ೩೮
ಪದವಿಭಾಗ-ಅರ್ಥ:
ಅರ್ಥ:
ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ೩೯
ಪದವಿಭಾಗ-ಅರ್ಥ:
ಅರ್ಥ:
ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ೪೦
ಪದವಿಭಾಗ-ಅರ್ಥ:
ಅರ್ಥ:
ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ || ೪೧ ||[೧][೨]
ಪದವಿಭಾಗ-ಅರ್ಥ:
ಅರ್ಥ:
@@@@@@@**@@@@@@@

♠♠♠
♦♣♣♣♣♣♣♣♣♣♣♣♣♣♣♣♣♣♣♣♦

<poem><poem><poem>

(ಮುಂದುವರೆಯುವುದು)

[ಸಂಪಾದಿಸಿ]

೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

<poem>
<poem>
<bold>
ಪದ್ಯ-೧:ಪದವಿಭಾಗ-ಅರ್ಥ: -
ಪದ್ಯ-೧:ಅರ್ಥ:
ಪದವಿಭಾಗ-ಅರ್ಥ:
ಅರ್ಥ:
1
2
3
4
5
6
7
8
9
0

೦೦[ಸಂಪಾದಿಸಿ]

ಭೌತಶಾಸ್ತ್ರ

[ಸಂಪಾದಿಸಿ]

ಕ.ನಿಘಂಟು[ಸಂಪಾದಿಸಿ]

ಪದ್ಯ[ಸಂಪಾದಿಸಿ]

೦೦೦[ಸಂಪಾದಿಸಿ]

[mw.loader.load('//meta.wikimedia.org/w/index.php?title=User:Indic-TechCom/Script/IndicOCR.js&action=raw&ctype=text/javascript]

ಪದ್ಯ[ಸಂಪಾದಿಸಿ]

 • ಬಿ.ಎಸ್. ಚಂದ್ರಶೇಖರ ಸಾಗರ

ರೆ-[ಸಂಪಾದಿಸಿ]

 • ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
 • ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.