ಚರ್ಚೆಪುಟ:ಮಂಕುತಿಮ್ಮನ ಕಗ್ಗ

ವಿಕಿಸೋರ್ಸ್ ಇಂದ
Jump to navigation Jump to search

ಇದು ಮಂಕುತಿಮ್ಮನ ಕಗ್ಗ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಮಂಕುತಿಮ್ಮನ ಕಗ್ಗದ ಭಾಗಗಳು ಚೆನ್ನಾಗಿ ಮೂಡಿಬರುತ್ತಿವೆ. ರಮೇಶ ಮತ್ತು ನವೀನ್ ಅವರಿಗೆ ಧನ್ಯವಾದಗಳು.
ಒಂದೇ ಭಾಗವನ್ನು ಇಬ್ಬರು ಟೈಪ್ ಮಾಡಿದ್ದು ಇದೀಗ ತಿಳಿಯಿತು. ಸಮಯ, ಶ್ರಮಗಳನ್ನು ಸಾರ್ಥಕವಾಗಿ ಉಪಯೋಗಿಸಲು ಲೇಖನಗಳ ಜವಾಬ್ದಾರಿ ಮುಂಚಿತವಾಗಿಯೇ ತೆಗೆದುಕೊಂಡರೆ ಉಪಯೋಗವಾಗಬಹುದು ಎಂದೆನಿಸುತ್ತಿದೆ.
ನೀವಿಬ್ಬರೂ ಏನಂತೀರ? ಸಧ್ಯಕ್ಕೆ, ಮಂಕುತಿಮ್ಮನ ಕಗ್ಗ ಭಾಗಗಳಿಗೆ contribute ಮಾಡುತ್ತಿರುವವರು ನೀವಿಬ್ಬರೆ. ಟೈಪ್ ಮಾಡುವ ಮುನ್ನ ಇಲ್ಲಿ ಒಂದು ಸಂದೇಶ ಹಾಕಿರಿ " ನಾನು <ಭಾಗದ ಹೆಸರು> ಭಾಗವನ್ನು ಟೈಪ್ ಮಾಡಲು ಪ್ರಾರಂಭಿಸುತ್ತಿದ್ದೇನೆ" ಎಂದು. ಆಗ, ಆ ಭಾಗವನ್ನು ಬೇರಾರೂ ಟೈಪ್ ಮಾಡದೇ, ಮುಂದಿನ ಭಾಗಗಳ ಕಡೆ ಗಮನ ಹರಿಸಬಹುದು.
ಇನ್ನೊಂದು ವಿಧಾನವೆಂದರೆ, ನೀವಿಬ್ಬರೂ offline ಸಂಭಾಷಣೆ ನಡೆಸಿ, ಯಾರು ಯಾವ ಭಾಗಗಳನ್ನು ಹಾಕುವುದು ಎಂಬ ಒಡಂಬನೆಗೆ ಬಂದರೂ ಸರಿಯೇ.
ಒಳ್ಳೆಯ ಕೆಲಸ, ಮುಂದುವರೆಯಲಿ. - ಮನ|Mana Talk - Contribs ೦೮:೨೩, ೨೩ July ೨೦೦೬ (UTC)

ಇದಕ್ಕೆ ನನ್ನ ಒಪ್ಪಿಗೆ ಇದೆ. ಮಂಕುತಿಮ್ಮನ ಕಗ್ಗವನ್ನು ೫೦-೫೦ ಕಗ್ಗಗಳನ್ನು ಇಬ್ಬರು ಹಂಚಿಕೊಳ್ಳ ಬಹುದೆನಿಸುತ್ತದೆ. ಈವರೆಗೆ,೧೮ ಕಗ್ಗಗಳು ಪೂರ್ತಿಯಾಗಿವೆ. ಮುಂದಿನ ೫೦ ಕಗ್ಗಗಳು, ಅಂದರೆ , ಅಂತರ್ವೀಕ್ಷೆ ವರಿಗು ಒಬ್ಬರು ಮಾಡೊಣ. ಇದರ ಮುಂದಿನ ೫೦ ಕಗ್ಗಗಳು, ಅಂದರೆ, ಭೌತ ವಿಜ್ಞಾನಿ ವರೆಗು ಇನ್ನೊಬರು ಮಾಡೊಣ. ಇದು ಸರಿಯೆನಿಸಿದರೆ, ಮುಂದಿನ ಕಗ್ಗಗಳನ್ನು ಹೀಗೆ ವಿಭಜಿಸಿ ಮುಂದುವರೆಸೋಣ, ಏನಂತೀರ ರಮೇಶ್ ?
--Naveenbm ೧೫:೧೨, ೨೩ July ೨೦೦೬ (UTC)ನವೀನ್
ನನ್ನ ಸಂಪೂರ್ಣ ಒಪ್ಪಿಗೆ ಇದೆ ನವೀನ್. ನನ್ನ ವಿ-ಅಂಚೆ rameshbnrao ಅಟ್ gmail ಡಾಟ್ com. ದಯವಿಟ್ಟು ಇಲ್ಲೆಗೆ ಅಂಚೆ ಕಳಿಸಿ. ನಾವುಗಳು, ಮಾತನಾಡಿ(ಚ್ಯಾಟಿಸಿ) ಒಂದು ನಿರ್ಧಾರಕ್ಕೆ ಬರುವ.
ಇಂತಿ
--ರಮೇಶ

ಕಗ್ಗ ರಸಧಾರೆ[ಸಂಪಾದಿಸಿ]

  • ಮಂಕುತಿಮ್ಮನ ಕಗ್ಗ ರಸಧಾರೆ-[೧] ಈ ಜಾಲತಾಣದಲ್ಲಿ ಎಲ್ಲಿಯೂ ಕಾಪಿರೈಟ್ ಕಾದಿರಿಸಿರುವುದಾಗಿ ಹಾಕಿಲ್ಲ. ಡಿವಿಜಿಯವರು ತಮ್ಮ ಕೃತಿಯನ್ನು ಸಾರ್ವಜನಿಕರಿಗೆ ಕೊಟ್ಟಿರುವುದಾಗಿ ಹಾಕಿದ್ದಾರೆ. ಈ ವ್ಯಾಖ್ಯಾನಸಹಿತ ಕಗ್ಗ ಪದ್ಯಗಳೂ ಸಾರ್ಜನಿಕರಿಗೆ ಮುಕ್ತವಾಗಿ ಅಂತರ್ ಜಾಲ ತಾಣದಲ್ಲಿ ಹಾಕಿದೆ. ವ್ಯಾಖ್ಯಾನ : ರವಿತಿರುಮಲೈ ಅವರದು:Bschandrasgr (ಚರ್ಚೆ) ೦೮:೧೭, ೨೬ ಜನವರಿ ೨೦೧೮ (UTC)

&&[ಸಂಪಾದಿಸಿ]

  • ಮೇಲೆ ತಿಳಿಸಿದಂತೆ ಕಗ್ಗರಸದಾರೆಯಲ್ಲಿರುವ ವ್ಯಾಖ್ಯಾನ ಶ್ರಿ ರವಿತಿರುಮಲೈ ಅವರದು. ವ್ಯಾಖ್ಯಾನಗಳು ಮಾಡುವವರ ದೃಷ್ಠಿಕೋನವನ್ನು ಅನುಸರಿಸಿ ಇರುವುದು ಸಾಮಾನ್ಯ. ಅದರಲ್ಲಿ ಅವರ ಸ್ವಂತ ಅಭಿಪ್ರಾಯಗಳೂ ಸೇರಿರುತ್ತವೆ. ಕೆಲವೊಮ್ಮೆ ಕಗ್ಗದ ಕರ್ತೃ ಡಿವಿಜಿಯವರ ಅಭಿಪ್ರಾಯಕ್ಕೆ ಅನುಸಾರ ಇರದೆ ಇರುವ ಸಾಧ್ಯತೆ ಇದೆ. ಕವಿಯ ಸಾಮಾನ್ಯ ಸಾಲುಗಳಿಗೆ ಅಥವಾ ಪದ ವಾಕ್ಯಗಳಿಗೆ ವಿಶೇಷ ಕವಿ ಊಹಿಸದ ಆರ್ಥವನ್ನು ಕಲ್ಪನೆ ಮಾಡಿ ವ್ಯಾಖ್ಯಾನ ಬರೆದಿರುವ ಸಂದರ್ಭ ಇರಬಹುದು. ಇದು ಯಾವುದೇ ಉತ್ತಮ ಕೃತಿಯ ವ್ಯಾಖ್ಯಾನದಲ್ಲಿ ಆಗುವಂತದ್ದು. ಆದ್ದರಿಂದ ಓದುಗರು ಕಗ್ಗದ ಪದ್ಯಗಳನ್ನು ಓದುವಾಗ ಸ್ವಂತ ವಿವೇಚನೆಯನ್ನು ಉಪಯೋಗಿಸಬೇಕೆಂದು ನನ್ನ ವಿನಮ್ರ ಸಲಹೆ. ಓದುಗರಿಗೆ ಕಗ್ಗದ ಅರ್ಥ, ವ್ಯಾಖ್ಯಾನಕ್ಕೆ ವಿರೋಧ ಅಥವಾ ಅಭಿಪ್ರಾಯ ಬೇಧ ಕಂಡಲ್ಲಿ ದಯಮಾಡಿ ಚರ್ಚೆ ಪುಟದಲ್ಲಿ ತಿಳಿಸಿ ಚರ್ಚಿಸಬಹುದು. ತಮ್ಮವ-Bschandrasgr (ಚರ್ಚೆ) ೧೬:೨೮, ೨೪ ಫೆಬ್ರುವರಿ ೨೦೧೮ (UTC)

ಕಗ್ಗರಸಧಾರೆ ತೆಗೆದಿದ್ದೇನೆ[ಸಂಪಾದಿಸಿ]

  • ಮಂಕುತಿಮ್ಮನ ಕಗ್ಗ ಪದ್ಯ ವ್ಯಾಖ್ಯಾನಕ್ಕೆ ಕಾಪಿರೈಟ್ ಬಗೆಗೆ ಅನುಮಾನದ ತಕರಾರು ಹಾಕಿರುವುದರಿಂದ ತೆಗೆಯುತ್ತಿದ್ದೇನೆ.Bschandrasgr (ಚರ್ಚೆ) ೦೯:೦೭, ೨೨ ಜುಲೈ ೨೦೧೯ (UTC)