ಮಹಾತ್ಮ ಗಾಂಧಿ: ಬದುಕಿನ ಹಾದಿ
ಮಹಾತ್ಮ ಗಾಂಧಿ: ಬದುಕಿನ ಹಾದಿ: ಘಟನಾವಳಿ ಪಟ್ಟಿ
[ಸಂಪಾದಿಸಿ]1869 ಅ.2: ಗುಜರಾತಿನ ಪೋರ್‌ಬಂದರ್‌ನ ಕಾತಿಯಾವಾಡ್‌ನಲ್ಲಿ ಜನನ. ತಂದೆ ತಂದೆ ಕರಮಚಂದ ಗಾಂಧಿ ಮತ್ತು ತಾಯಿ ಪುತಲೀಬಾಯಿ
1876: ರಾಜಕೋಟ್‌ನಲ್ಲಿ ಪ್ರಾಥಮಿಕ ಶಿಕ್ಷಣ
1883: ಪೋರ್‌ಬಂದರ್‌ನಲ್ಲಿ ಕಸ್ತೂರ್‌ಬಾ ಜೊತೆ ವಿವಾಹ
1888 ಸೆ.4: ಕಾನೂನು ಅಧ್ಯಯನಕ್ಕಾಗಿ ಲಂಡನ್‌ಗೆ
1891 ಜ.12: ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣ
1891 ಜೂ: ಬ್ಯಾರಿಸ್ಟರ್ ಪದವಿ ಪಡೆದು ಹೈಕೋರ್ಟ್‌ನಲ್ಲಿ ತರಬೇತಿ ಮುಗಿಸಿ ಭಾರತಕ್ಕೆ ವಾಪಸ್
1892 ಮೇ 24: ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭ
1893: ಪೋರ್‌ಬಂದರ್ ಕಂಪನಿಯೊಂದರ ಪರ ವಾದಿಸಲು ದಕ್ಷಿಣ ಆಫ್ರಿಕಾಕ್ಕೆ
1893 ಜೂನ್: ಪೀಟರ್‌ರ್ಮಾರಿಟ್‌್ಜಬರ್ಗ್ ರೈಲ್ವೆ ನಿಲ್ದಾಣದಲ್ಲಿ ವರ್ಣ ತಾರತಮ್ಯ. ಮೊದಲ ದರ್ಜೆಯ ಟಿಕೆಟ್ ಇದ್ದರೂ ಸಾಮಾನ್ಯ ದರ್ಜೆಯಲ್ಲಿ ಹೋಗುವಂತೆ ಗಾಂಧೀಜಿಯನ್ನು ರೈಲಿನಿಂದ ಇಳಿಸಿದ ರೈಲ್ವೆ ಸಿಬ್ಬಂದಿ
1894: ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ಮತ್ತು ಕರಿಯ ವರ್ಣದವರ ಮೇಲೆ ನಡೆಯುತ್ತಿರುವ ವರ್ಣ ತಾರತಮ್ಯದ ವಿರುದ್ಧ ಹೋರಾಡಲು ಸಂಘಟನೆಯೊಂದರ ಸ್ಥಾಪನೆ ಪ್ರಸ್ತಾಪ
1894 ಆ.22: ವರ್ಣ ತಾರತಮ್ಯದ ವಿರುದ್ಧ ಹೋರಾಡಲು ನತಾಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪನೆ
1894: ಕೋರ್ಟ್ ಕೇಸ್ ಮುಗಿದ ಬಳಿಕ ಭಾರತಕ್ಕೆ ಮರಳಲು ಸಿದ್ಧತೆ. ಆದರೆ, ಭಾರತೀಯ ಸಮುದಾಯದ ಒತ್ತಡದಿಂದ ಕೆಲ ಕಾಲ ದಕ್ಷಿಣ ಆಫ್ರಿಕಾದಲ್ಲೇ ಇದ್ದು, ಹೋರಾಟ ನಡೆಸಲು ನಿರ್ಧಾರ
1896: ಆರು ತಿಂಗಳ ಮಟ್ಟಿಗೆ ಭಾರತಕ್ಕೆ ಮರಳಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ದ ಗಾಂಧೀಜಿ
1899: ಬೋಯರ್ ಯದ್ಧದಲ್ಲಿ ಬ್ರಿಟೀಷರ ಪರ ಇಂಡಿಯನ್ ಆಂಬುಲೆನ್ಸ್ ಕಾಫ್ಸ್‌ರ್ ಸ್ಥಾಪನೆ
1901: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಮರಳಿದ ಗಾಂಧೀಜಿ, ಭಾರತದಲ್ಲೇ ವಕೀಲ ವೃತ್ತಿ
1902: ಭಾರತೀಯ ಸಮುದಾಯದ ಒತ್ತಾಯದ ಮೇರೆಗೆ ಮತ್ತೊಮ್ಮೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಗಾಂಧೀಜಿ
1903: ಜೋಹಾನ್ಸ್‌ಬರ್ಗ್‌ನಲ್ಲಿ ಕಾನೂನು ಕಚೇರಿ ಆರಂಭ
1904: ಇಂಡಿಯನ್ ಒಪಿನಿಯನ್ ಸಾಪ್ತಾಹಿಕ ಪತ್ರಿಕೆ ಆರಂಭ
1906: ದಕ್ಷಿಣ ಆಫ್ರಿಕಾದಲ್ಲಿ ಭಾರತ ವಿರೋಧಿ ಕಾನೂನಿನ ವಿರುದ್ಧ ಮೊದಲ ಬಾರಿಗೆ ಪ್ರತಿಭಟನೆ ಆಯೋಜಿಸಿದ ಗಾಂಧೀಜಿ
1906: ದಕ್ಷಿಣ ಆಫ್ರಿಕಾದಲ್ಲಿ ಸೆರೆವಾಸ
1915 ಜ.9: ಭಾರತಕ್ಕೆ ಮರಳಿದ ಗಾಂಧೀಜಿ
1915 ಮೇ 25: ಗಾಂಧೀಜಿ ಮತ್ತು ಅವರ ಅನುಯಾಯಿಗಳಿಂದ ಅಹಮದಾಬಾದ್‌ನಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪನೆ
1917 ಏಪ್ರಿಲ್: ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಚಳವಳಿ ಅರಂಭ
1919 ಏ.6: ರೌಲತ್ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಹರತಾಳ, ಒಂದು ದಿನದ ಉಪವಾಸಕ್ಕೆ ಯಂಗ್ ಇಂಡಿಯಾ ಪತ್ರಿಕೆಯ ಮೂಲಕ ಕರೆ
1919 ಆ.1: ದೇಶದೆಲ್ಲೆಡೆ ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿಗೆ ಗಾಂಧೀಜಿ ಕರೆ
1922 ಮಾ.10: ದೇಶದ್ರೋಹ ಆರೋಪದ ಮೇಲೆ ಗಾಂಧೀಜಿ ಬಂಧನ, 6 ವರ್ಷ ಜೈಲು
1924 ಮಾಚ್‌ರ್: ಅವಧಿಗೆ ಮುನ್ನವೇ ಜೈಲುವಾಸದಿಂದ ಬಿಡುಗಡೆ
1924: ಡಿಸೆಂಬರ್ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ
1930 ಜ. 26: ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದ ಪ್ರತಿಜ್ಞೆ
1930 ಮಾ.12: ಉಪ್ಪಿನ ಮೇಲೆ ತೆರಿಗೆ ಹೇರಿದ್ದದನ್ನು ವಿರೋಧಿಸಿ ಗಾಂಧೀಜಿ ನೇತೃತ್ವದಲ್ಲಿ ದಂಡಿ ಯಾತ್ರೆ ಆರಂಭ
1930: ಉಪ್ಪಿನ ಸತ್ಯಾಗ್ರಹ ಕೈಗೊಂಡಿದ್ದಕ್ಕೆ ಬ್ರಿಟಿಷ್ ಆಡಳಿತದಿಂದ ಗಾಂಧೀಜಿ ಬಂಧನ
1932 ಜ.1: ಬ್ರಿಟಿಷ್ ಸರ್ಕಾರಕ್ಕೆ ನಾಗರಿಕ ಅಸಹಕಾರದ ಕುರಿತು ಕಾಂಗ್ರೆಸ್‌ನಿಂದ ಗೊತ್ತುವಳಿ ಅಂಗೀಕಾರ
1932: ಅಸ್ಪೃಶ್ಯತೆಯ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಗಾಂಧೀಜಿ
1932: ದೇಶದಲ್ಲಿ ಗ್ರಾಮೀಣ ಕೈಗಾರಿಕೆಗಳ ಒಕ್ಕೂಟ ಸ್ಥಾಪನೆ
1942 ಆ.8: ದೇಶವ್ಯಾಪಿ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭ. ಕಾಂಗ್ರೆಸ್ ಮುಖಂಡರ ಸೆರೆ. ಆಗಾ ಖಾನ್ ಅರಮನೆಯಲ್ಲಿ ಗಾಂಧೀಜಿಗೆ ಸೆರೆವಾಸ
1943: ಜೈಲಿನಲ್ಲಿ ಇದ್ದುಕೊಂಡೇ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಗಾಂಧೀಜಿ ಉಪವಾಸ ಸತ್ಯಾಗ್ರಹ
1944: ಫೆ.22: ಪತ್ನಿ ಕಸ್ತೂರ್‌ಬಾ ನಿಧನ
1944 ಮೇ 6: ಆಗಾ ಖಾನ್ ಪ್ಯಾಲೇಸ್‌ನಿಂದ ಗಾಂಧೀಜಿ ಬಿಡುಗಡೆ
1947 ಮಾಚ್: ಭಾರತ ಪಾಕಿಸ್ತಾನ ವಿಭಜನೆಗೊಳಿಸಿ ಸ್ವಾತಂತ್ರ್ಯ ಘೋಷಣೆಗೆ ಒಪ್ಪಿದ ಬ್ರಿಟಿಷ್ ಸರ್ಕಾರ
1947: ಅಧಿಕೃತವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ
1948 ಜ.13; ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಉಂಟಾದ ಹಿಂದು- ಮುಸ್ಲಿಂ ಕೋಮು ಗಲಭೆ ನಿಲ್ಲಿಸುವಂತೆ ಆಮರಣ ಉಪವಾಸ ಸತ್ಯಾಗ್ರಹ
1948 ಜ.18: ಆಮರಣ ಉಪವಾಸ ಅಂತ್ಯ
1948 ಜ.30: ನಾಥೂರಾಮ್ ಗೋಡ್ಸೆಯಿಂದ ಗಾಂಧೀಜಿ ಗುಂಡಿಕ್ಕಿ ಹತ್ಯೆ
ಮಹಾತ್ಮ ಗಾಂಧಿ 150: ಬಾಪೂ ಬದುಕಿನ ಹಾದಿ.
ನೋಡಿ
[ಸಂಪಾದಿಸಿ]ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ