ಜೈಮಿನಿ ಭಾರತ ಹನ್ನೆರಡನೆಯ ಸಂಧಿ
ಜೈಮಿನಿ ಭಾರತ - ಹನ್ನೆರಡನೆಯ ಸಂಧಿ
[ಸಂಪಾದಿಸಿ]ಪದ್ಯ :-:ಸೂಚನೆ:
[ಸಂಪಾದಿಸಿ]ಅಪರಮಿತಸೈನ್ಯ ಸನ್ನಾಹದಿಂದರ್ಜುನನ | ಚಪಲಹಯಮಂ ಮರಾಳಧ್ವಜಂ ಪಿಡಿಯಲ್ಕೆ | ತಪನಸುತನಂದನ ಸುದನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೧:
[ಸಂಪಾದಿಸಿ]ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ | ರನ್ನ ಜನಮೇಜಯ ಸುಧ್ವನ್ವಂ ಕಟಾಹದುರಿ | ಯಂ ನಾರಸಿಂಹ ಜಪದಿಂ ಜಯಿಸೆ ಲಿಖತನೆಸಗಿದ ವೈಷ್ಣವದ್ರೊಹಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨:
[ಸಂಪಾದಿಸಿ]ಭೂನಾಥ ಕೇಳ್ನಿನ್ನಸುತನ ದೆಸೆಯಿಂದೆ ನ | ಮ್ಮೀನೆಲಂ ಪ್ರಜೆ ನಾಡು ಬೀಡೂರು ಪರಿವಾರ | ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮಲತೆಗಳೆಲ್ಲ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩:
[ಸಂಪಾದಿಸಿ]ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ | ನೆಲೆ ಮಹೀಪಾಲ ಹರಿಶರಣರ್ಗೆಡರ್ಗಳೆ | ತ್ತೊಳವು(ಎತ್ತಣದು?) ಬೆಳಂದಿಂಗಳ್ಗೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪:
[ಸಂಪಾದಿಸಿ]ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ | ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ | ಪೊಂದೇರನಳವಡಿಸಿ ತುರಂಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫:
[ಸಂಪಾದಿಸಿ]ಕೇಳ್ಗುಣಮಣಿಯೆ ಧರೆಣಿಪಾಗ್ರಣಿಯೆ ತನ್ನ ಮಗ | ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ |ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು | |
[ಆವರಣದಲ್ಲಿ ಅರ್ಥ];=
|
ಪದ್ಯ :-:೬:
[ಸಂಪಾದಿಸಿ]ಬೆರಬೆರಸುತೊತ್ತಿಡಿದು ಮುಂದೆ ಭರದಿಂದೆ ನಡೆ | ವರಸರಸುಗಳ ಕಂಠಮಾಲೆಗಳ ತೋರಮು | ತ್ತೊರಸೊರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೭:
[ಸಂಪಾದಿಸಿ]ಪಡೆಯೊಳನ್ನೋನ್ಯ ಸಂಘರ್ಷಣದೊಳೊಗುವ ಪೊಂ |ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ |ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೮:
[ಸಂಪಾದಿಸಿ]ಮೊಗಗೈಗಳಿಂ ತಮ್ಮೊಡಲ ನೀರನಾನೆಗಳ್ | ತೆಗೆದು ಚೆಲ್ಲಲ್ ಪೊನಲ್ವರಿದ ಮಡುಗಳ ಕೆಸರೊ | ಳೊಗೆದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೯:
[ಸಂಪಾದಿಸಿ]ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ | ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ | ಸುಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋ ಮಂಡಲಂ ಮೀರಿದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೦:
[ಸಂಪಾದಿಸಿ]ಸುತ್ತ ಪದ್ಮವ್ಯೂಹಮಂ ರಚಿಸಿನಡುವೆ ನರ | ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ | ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತ ರಸನಾಜ್ಞೆಯಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೧:
[ಸಂಪಾದಿಸಿ]ನಿನ್ನಂ ಕಳುಹುವಂದು ಹಯದ ಮೇಲಾರೈಕೆ | ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ | ಮನ್ನಿಸುವ ಕಾಲಮಲ್ಲವೆ ತನಗೆ ನೀನಿದಕ್ಕೆಣಿಕೆಗೊಳಬಹುದೆ ಬರಿದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೨:
[ಸಂಪಾದಿಸಿ]ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ | ಶಠ ನಿಶಠರನಿರುದ್ಧ ಗದ ಮುಖ್ಯರಾದ ಪಟು | ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೩:
[ಸಂಪಾದಿಸಿ]ಮೊಗಸಿತರಿಬಲವನನುಸಾಲ್ವಕನ ಸೇನೆಯೂ | ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ | ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೪:
[ಸಂಪಾದಿಸಿ]ತಾತ ಚಿತ್ತೈಸು ಗೋಷ್ಪದಜಲಕೆ ಹರಿಗೋಲ | ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ | ರೀತಗಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೫:
[ಸಂಪಾದಿಸಿ]ತಾರಕಾಸುರನ ಪೆರ್ಬಡೆಗೆ ಮೈದೋರುವ ಕು | ಮಾರನಂ ತಾನಭ್ರ ಮಾರ್ಗದೋಳ್ ಸುಳಿವ ಮುಂ | ಗಾರಮಿಂಚಂ ತನ್ನ ಹೊಂದೇರುಗಿರಿಗೆಂಗುವಶನಿಯಂ ತನ್ನ ಘಾತಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೬:
[ಸಂಪಾದಿಸಿ]ದೂರದೊಳ್ಕಂಡಂ ಸುಧನ್ವನಾತನ ಬರವ | ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು | ದಾರವೃಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೭:
[ಸಂಪಾದಿಸಿ]ಎಲವೊ ನೀನಾರ್ ನಿನ್ನ ಪೆಸರದೇನಾವರ್ಷಿ | ಕುಲದವಂ ನಿನ್ನ ಪಿತನಾವಾತನೆಂಬುದಂ | ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೮:
[ಸಂಪಾದಿಸಿ]ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ | ರೂಢಿಸಿದ ವಂಶವಿಸ್ತಾರಮಂ ಪೌರುಷದ | ಮೋಡಿಯಿಂದರಿಯಬಾರದೆ ಸಮರಸಾಧನವಿದರೊಳಹುದೆ ನಿನಗಾದೊಡೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೯:
[ಸಂಪಾದಿಸಿ]ಕರ್ಣಸುತನಾದೊಡೊಳ್ಳಿತು ವೀರನಹುದು ನೀಂ | ನಿರ್ಣಯಿಸಬಲ್ಲೆ ರಣರಂಗವಂ ಮೂಢರಾವ್ | ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೦:
[ಸಂಪಾದಿಸಿ]ಬರಸಿಡಿಲ ಭರದಿಂದೆ ಮಿಂಚಿನ ಹೊಳಹಿನಿಂದೆ | ಬಿರುವೆಳೆಗಳೊತ್ತಿಂದೆ ಕರ್ಣಜಂ ಕಣೆಗಳಂ | ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ವನಾತನ ಸರಳ್ಗಳನೆಡೆಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೧:
[ಸಂಪಾದಿಸಿ]ಕ್ಷೋಣಿಗೆ ಸುಧನ್ವ ನಾನಿರೆ ನೀಂ ಸುಧನ್ವನೇ | ಮಾಣಿಸುವೆನೀ ಪೆಸರನೀಕ್ಷಣದೊಳೆಂದು ಪೆÇಸ | ಸಾಣಿಯಲಗಿನ ಸರಳ್ಗಳನೆಚ್ಚು ಕರ್ಣಜಂ ಪೋರ್ಗಳನವನ ಮೈಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೨:
[ಸಂಪಾದಿಸಿ]ಭುಗಿಭೂಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಗಳಂ | ತೆಗೆತೆಗೆದು ಕರ್ಣತನಯಂ ಸುಧನ್ವನ ರಥವ | ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೩:
[ಸಂಪಾದಿಸಿ]ತಂದರಾಗಲೆ ಸುಧನ್ವಂಗೆ ಮಣಿಮಯದ ಮ | ತ್ತೊಂದು ರಥಮಂ ಬಳಿಕ ಬಿಲ್ವಿಡಿದು ಜೇಗೈದು | ನಿಂದು ನಿಡಗಣೆಗಳಂ ತಗೆದೆಚ್ಚು ಕರ್ಣಜನ ಕೈಮೆಗಿಂಮಿಗಿಲಾಗಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೪:
[ಸಂಪಾದಿಸಿ]ವಿರಥನಾದೊಡೆ ಕರ್ಣಸೂನು ಕೈಗೆಡದೆ ಸಂ | ಗರದೊಳಸಿ ಮುದ್ಗರ ಮುಸುಂಡಿ ತೋಮರ ಖಡ | ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೫:
[ಸಂಪಾದಿಸಿ]ಇತ್ತಲಿಂತಿರಲತ್ತವನ ಸಾರಥಿ ಬೇಗ| ಮತ್ತೊಂದು ರಥಮಂತರಲ್ಕದನಡರ್ದು ಮಸೆ| ವೆತ್ತಕೂರ್ಗಣೆಗಳಂ ಕರ್ಣಜಂ ತೆಗೆದೆಚ್ಚೊಡಾ ಸುಧನ್ವನ ಮೈಯೊಳು|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೬:
[ಸಂಪಾದಿಸಿ]ನಭಕುಪ್ಪರಿಸಿ ನೆಲಕೆ ಪಾಯ್ದೆಡಬಲಕೆ ಮುರಿದು| ರಭಸದಿಂದಾರ್ದೊರ್ವರೊರ್ವರಂ ಮೀರ್ದೊದಗಿ| ವಿಭವದಿಂದಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ ಸೋಲುಗೆಲವುಗಳಿಲ್ಲದೆ|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೭:
[ಸಂಪಾದಿಸಿ]ಒತ್ತುವರಿಸುವರೆಚ್ಚ ಕಣೆಗಳಂ ಕಣೆಗಳಿಂ | ಕತ್ತರಿಸಿ ಮೆತ್ತುವರೊಡಲೊಳಂಬನಂಬನುರೆ | ಕಿತ್ತು ಬಿಸುಡುವರಸೃಗ್ವಾರಿಯಂ ವಾರಿಯಿಂ ತೊಳೆದೊಡನೆ ಕವಳಗೊಂಡು|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೮:
[ಸಂಪಾದಿಸಿ]ರಾಯ ಕೇಳಾಗ ಪೂರಾಯ ಗಾಯದೊಳಸ್ರ | ತೋಯದಿಂದವಯವಂ ತೋಯಲಳವಳಿದು ರಾ | ಧೇಯಜಂ ಬಹಳಬಾಧೇಯನಾಗಲ್ಕವನ ಸಾರಥಿ ರಥವ ತಿರುಗಿಸೆ | |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೯:
[ಸಂಪಾದಿಸಿ]ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ | ಕುರುಪಿಂದೆ ನುಡಿದನವನಿಲ್ಲಿ ನಿನಗಬಲೆಯರ | ಮರೆಯಿಲ್ಲ ನಿನ್ನಿಸುಗೆಗಳುಕು ವರದಾರೆನುತ ಕಲಿಸುಧನ್ವಂ ಕಣೆಗಳ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೦:
[ಸಂಪಾದಿಸಿ]ಅಸಮಸಾಯಕನೆಂದು ಬಣ್ಣಿಪರ್ ನಿನ್ನನಿಂ | ದಸಮಸಾಯಕ ನಾನೊ ನೀನೋ ನೋಡೆನುತ ಪೊಸ | ಮಸೆಯ ವಿಶಿಖಂಗಳಿಂ ಸುರಿದಂ ಸುಧನ್ವನಾತನ ಕಣೆಗಳಂ ಖಂಡಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೧:
[ಸಂಪಾದಿಸಿ]ಬರಿಯ ಪೂಗೋಲಿಸುಗೆಯಲ್ಲದಾಹವದೊಳಂ | ಕಿರಿದು ಶರಸಂಧಾನಮುಂಟಲಾ ನಿನಗೆಂದು | ಜರೆದೆಂಟು ಬಾಣದಿಂದೆಚ್ಚಂ ಸುಧನ್ವನಾತನ ಕೋಲ್ಗಳಂ ಸೈರಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೨:
[ಸಂಪಾದಿಸಿ]ಕೃಷ್ಣಸುತನೆಂದಿನ್ನೆಗಂ ಸೈರಿಸಿದೊಡೆ ನೀ | ನುಷ್ಣ ಮುಳ್ಳವನಾದೆ ತನ್ನ ಬಾಣಾವಳಿಯ | ತೃಷ್ಣೆಗರುಣಾಂಬುವಂ ನಿನ್ನೊಡರೊಳೂಡಿಸದೆ ಬಿಡುವೆನೇ ಮೇಣಸುವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೩:
[ಸಂಪಾದಿಸಿ]ಬಿಲ್ಮುರಿಯೆ ಕಾರ್ಷ್ಣಿ ಕಡುಗೋಪದಿಂದಾಕ್ಷಣಂ | ಪಲ್ಮೊರೆಯುತಸಿಪಲಗೆವಿಡಿದವನ ಮೇಲೆ ನಡೆ | ಯಲ್ಮುಂದಕಡಹಾಯ್ದನರಿಯಲಾ ರಿಪುರೌದ್ರಕರ್ಮ ಕೈತವರ್ಮಕನನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೪:
[ಸಂಪಾದಿಸಿ]ಲೇಸಾದುದಖಿಳ ಯಾದವರೊಳಗೆ ಕೃತವರ್ಮ | ನೇ ಸಮರ್ಥಂ ಕಾಣಬಹುದು ಕಾಳಗದೊಳೆನು | ತಾ ಸುಧನ್ವಂ ತೆಗೆದಿ(ದೆ)ಸಲ್ಕವನ ಕಣೆಗಳಂ ಕಡಿದಿವಂ ಮಗುಳೆಚ್ಚೊಡೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೫:
[ಸಂಪಾದಿಸಿ]ಹಾರ್ದಿಕ್ಯನಿಸುಗೆಯಿಂದುರೆ ನೊಂದು ಕೋಪದಿಂ | ದಾರ್ದಾ ಸುಧನ್ವನಿಪ್ಪತ್ತುನಾಲ್ಕಂಬಿನಿಂ | ತೇರ್ದೆಗೆವ ಕುದುರೆಗಳ ಕಾಲ್ಗಳಂ ಗಾಳಿಗಳ ಕೀಲ್ಗಳಂ ಮೂಡಿಗೆಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೬:
[ಸಂಪಾದಿಸಿ]ಸಾಲ್ವಾನುಜಂ ಕಣೌ ತಾನೆನ್ನೊಳಾಹವಕೆ | ಮೇಲ್ವಾಯ್ದೊಡನುಪಮ ಸುರೇಂದ್ರನ ಪರಾಕ್ರಮಕೆ | ಸೋಲ್ವೆನೇ ತನ್ನೊಳ್ ಪೆÇಣರ್ದು ಸಾಯದೆ ಧರ್ಮರಾಜನವರಂ ಕಾಣ್ಬುದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೮:
[ಸಂಪಾದಿಸಿ]ಬಲ್ಲೆನನುಸಾಲ್ವನೆಂದಳವಿಯಂ ಬಿಟ್ಟೊಡಾಂ | ಬಿಲ್ಲಾಳೇ ವೇಳ್ ಧರ್ಮರಾಜನವರಂ ಕಾಣ್ಬ | ನಲ್ಲ ಕಾಣಿಸುವೆನೀಗಳೆ ಧರ್ಮರಾಜನವರಂ ತರಹರಿಸು ನಿನ್ನನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೮:
[ಸಂಪಾದಿಸಿ]ಫಡಫಡೆಲವೆಲವೊ ತೊಲತೊಲಗೆನುತೆರೋಷದಿಂ | ಘುಡಿಘುಡಿಸಿ ಕೌಂಡುವ ಕಾಯದಿಂದನುಸಾಲ್ವ | ನೊಡನೊಡನೆ ಪೊಳೆಪೊಳೆವ ಪೂಸಮಸೆಯ ನಿಡುನಿಡು ಸರಳ್ಗಳಂತೆಗೆದಿಸುತಿರೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೯:
[ಸಂಪಾದಿಸಿ]ಮತ್ತೆ ಕಿಡಿಯಿಡೆಕೋಪಮನುಸಾಲ್ವನಬ್ಧಿಯಂ | ತುತ್ತುಗೊಳ್ವುರಿಗೆ ಸರಿಯಾದೊಂದು ಬಾಣಮಂ | ಕಿತ್ತು ಹೂಡಿದನಿದಂ ತರಹರಿಸಿಕೊಳ್ಳೆನುತ ತೆಗೆದೆಚ್ಚು ಬೊಬ್ಬಿರೆಯಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೦:
[ಸಂಪಾದಿಸಿ]ಲೆಲೆ ಕವಿಕವಿಯೆನುತವನ ಬಲಂ ಕಂಡು ಸಂ | ಕಲೆಗಡಿದ ಮುಗಿಲಂತಿವನ ಮೇಲೆ ಕೈದುಗಳ | ಮಳೆಗೆರಯುತಿಟ್ಟಣಿಸಿ ನೂಕಲನುಸಾಲ್ವಂ ಕನಲ್ದು ಜಗದಳಿವಿನಂದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೧:
[ಸಂಪಾದಿಸಿ]ಕಂದೆರದು ಕಂಡಂ ಸುಧನ್ವಂ ಬಳಿಕ ಖಾತಿ | ಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ | ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವು ಹೋಗೆನುತ ಹೆದೆಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೨:
[ಸಂಪಾದಿಸಿ]ಪೂಣೆಹೊಕ್ಕವನಿಸುವ ಬಾಣಂಗಳರಿಭಟರ | ಗೋಣನರಿದುಚ್ಚಳಿಸೆ ಮಾಣದೆ ಗಗನಕೇಳ್ವ | ಸೋಣೀತದ ಧಾರೆಗಳ್ ಶೋಣಾಭ್ರದಂತಿರಲ್ ಪ್ರಾಣಿಗಳ ದೃಷ್ಟಿಗಳ್ಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೩:
[ಸಂಪಾದಿಸಿ]ಸಂದಣಿಸಿ ದಂತಿಗಳಘಟೆಗಳೊತ್ತರಿಸಲ್ಕೆ | ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ | ಕೊಂದನುರವಣಿಸಿ ಕಾಲಾಳ್ಗಳಂ ಮುಳಿದುಬಳಿಕೊಂದನುಳಿಯದೆ ರಣದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೪:
[ಸಂಪಾದಿಸಿ]ಕೆಡೆದೊಡಲ ಸೀಳಿಂದೆ ಕಡಿವಡೆದ ತೋಳಿಂದೆ | ತೊಡೆಮಡದ ತುಂಡಿಂದೆ ನೆಣವಸೆಯ ಜೊಂಡಿಂದೆ | ಬಿಡುಮಿದುಳ ತುಂಡದಿಂ ರುಂಡದಿಂ ಮುಂಡದಿಂ ಖಂಡದಿಂದೆ |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೪:
[ಸಂಪಾದಿಸಿ]ಕಾಕ ಬಕ ಗೃಧ್ರ ಗೋಮಾಯ ಸಂತತಿಗಳಿಂ | ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ | ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೬:
[ಸಂಪಾದಿಸಿ]ನೋಡಿದಂ ಸಾತ್ಯಕಿ ಸುಧನ್ವನಾಟೋಪಮಂ | ಮಾಡಿದಂ ಬದ್ದಭ್ರುಕುಟಿಯಿಂದೆ ಕೋಪಮಂ | ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೭:
[ಸಂಪಾದಿಸಿ]ಗಾಯವಡೆದೆಕ್ಕಲನ ತೆರದಿಂ ಕೆರಳ್ದು ಶೈ | ನೇಯನಂ ಮಗುಳೆ ಮೂವತ್ತೈದು ಕೋಲ್ಗಳಿಂ | ನೋಯಿಸಿದನಾ ಸುಧನ್ವಂ ಬಳಿಕ ಸಾತ್ಯಕಿ ಸಹಸ್ರ ಸಂಖ್ಯಾಕಮಾದ | |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೮:
[ಸಂಪಾದಿಸಿ]ನಿಂದು ಕಾದಿದರೊಮ್ಮೆ ಕೈದುಕೈದುಗಳೊಳೈ | ತಂದುಕಾದಿದರೊಮ್ಮೆ ಮತ್ತೆ ಪೆÇಸತೇರ್ಗಳಿಂ | ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೯:
[ಸಂಪಾದಿಸಿ]ಬವರಮಿರ್ವರ್ಗೆ ಸರಿಯಾಗೆ ಕಡುಗೋಪದಿಂ | ದವಗಡಿಸಿದಂ ಸುಧನ್ವಂ ಬಳಿಕ ಸಾತ್ಯಕಿಯ | ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೦:
[ಸಂಪಾದಿಸಿ]ಸತ್ಯಕಸುತಂಗೆ ಪರಿಭವಮಾಗೆ ಭುಜಬಲದೊ | ಳತ್ಯಧಿಕಯೌವನಾಶ್ವಾಸಿತಧ್ವಜಗದಾ | ದಿತ್ಯಭವಸೂನು ಶಠ ನಿಶಠ ಕೃತವರ್ಮ ಸಾಂಬಾನುಸಾಲ್ವಪ್ರಮುಖರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೧:
[ಸಂಪಾದಿಸಿ]ಮುಂಜೆರಗನಳವಡಿಸಿ ವೀರಪಳಿಯಂ ಬಿಗಿದು | ರಂಜಿಪ ತನುತ್ರ ಸೀಸಕವನಾಂತಮರಗಣ | ಕಂಜಳಿಯನೆತ್ತಿ ಪಳವಿಗೆಯ ಹನುಮಂಗೆರಗಿ ಬಲವಂದು ಮಣಿರಥವನು || |
[ಆವರಣದಲ್ಲಿ ಅರ್ಥ];=
|
ಹೋಗಿ
[ಸಂಪಾದಿಸಿ]ನೋಡಿ
[ಸಂಪಾದಿಸಿ]ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.