ಜೈಮಿನಿ ಭಾರತ/ಐದನೆಯ ಸಂಧಿ
ಐದನೆಯ ಸಂಧಿ
[ಸಂಪಾದಿಸಿ]ಪದ್ಯ - ಸೂಚನೆ
[ಸಂಪಾದಿಸಿ]ಧರ್ಮಜಂ ಯೌವನಾಶ್ವನಿದಿರ್ಗೊಂಡು ನೃಪ | |
ಧರ್ಮಜಂ= ಧರ್ಮಜನು, ಯೌವನಾಶ್ವನ ಇದಿರ್ಗೊಂಡು= ಬಂದ ಯೌವನಾಶ್ವನನ್ನು ಗೌರವದಿಂದ ಬರಮಾಡಿಕೊಂಡು, ನೃಪ ಧರ್ಮದಿಂ= ರಾಜ ಧರ್ಮದಂತೆ; ಕೃಷ್ಣನಂ ದ್ವಾರಕೆಗೆ ಕಳುಹಿ= ಕೃಷ್ಣನನ್ನು ದ್ವಾರಕೆಗೆ ಕಳುಹಿಸಿ, ಸಲೆ ಬಾದರಾಯಣ ಮುನೀಶ್ವರನೊಳು= ಬಾದರಾಯಣ ಮುನೀಶ್ವರನಿಂದ, ಒಲವಿಂದೆ= ಪ್ರೀತಿಯಿಂದ, ವರ ಧರ್ಮಂಗಳಂ ಕೇಳ್ದನು= ಉತ್ತಮ ಧರ್ಮನೀತಿಗಳನ್ನು ಕೇಳಿದನು.,
|
ಪದ್ಯ - ೧
[ಸಂಪಾದಿಸಿ]
|
ಸತ್ಸಂಗತಿಯನು ಆಲಿಸು ಇನ್ನು ಎಲೆ ಮಹೀಶ್ವರ= ಎಲೆ ರಾಜ ಜನಮೇಜಯನೇ, ಇನ್ನು ಒಳ್ಳೆಯ ಸಂಗತಿಗಳನ್ನು ಆಲಿಸು; ಮರುತ್ಸುತನ ಮನೆಗೆ ಬೀಳ್ಕೊಟ್ಟನು ಒಲವಿಂ= ಭೀಮನನ್ನು ಅವನ ಮನೆಗೆ ಬೀಳ್ಕೊಟ್ಟನು ಭಕ್ತವತ್ಸಲಂ=ಕೃಷ್ಣನು. ಬಳಿಕ ಇತ್ತಲು ಅರಸಾಳ್ಗಳು= ರಾಜಭಟರು ಆ ಯುಧಿಷ್ಠಿರಭೂಮಿಪತಿಗೆ= ಧರ್ಮರಾಯನ ಮನೆಗೆ ಬಂದು, ತ್ವತ್= ನಿನ್ನ ಸಮೀಪದ= ಹತ್ತಿರ ಸೇವೆಗೋಸುಗಂ= ಸೇವಮಾಡಲು, ತನ್ನ ಸಂಪತ್ಸಹಿತಂ= ಸಂಪತ್ತಿನ ಸಹಿತ ಆ ಯೌವನಾಶ್ವ ಧರಣೀಂದ್ರನ=ರಾಜನು, ಅತ್ಯುತ್ಸವದೊಳ್ ಐತಂದನು= ಸಂತೋಷದಿಂದ ಬಂದಿದ್ದಾನೆ, ಇದೆ = ಈಗ ನಿನ್ನ ಪಟ್ಟಣದ ಬಾಹ್ಯದೇಶದೊಳು= ನಗರದ ಹೊರವಲಯದಲ್ಲಿ ಎಂದರು
|
ಪದ್ಯ - ೨
[ಸಂಪಾದಿಸಿ]ಪದ್ಯ - ೨[ಸಂಪಾದಿಸಿ] |
ಉಚಿತಮಂ= ಉಚಿತ ಕಾಣಿಕೆಯನ್ನು ದೂತರಿಗೆ, ತೆಗೆದವರ್ಗಿತ್ತು= ಕೊಟ್ಟು, ಬಳಿಕ ಅನುಜ=ತಮ್ಮಂದಿರು, ಮಂತ್ರಿ= ಮೋತ್ರಿಗಳು, ಚಮೂಪ= ಸೇನಾಧಿಪತಿಗಳು, ಸಾಮಂತ= ಸಾಮಂತರಾಜರು, ಗುರು ಪುರೋಹಿತ ಸುಭಟರ ನಿಚಯಮಂ= ಸಮೂಹವನ್ನು ಕರೆಸಿಕೊಂಡು ಅಸುರಾರಿ=ಕೃಷ್ಣನ ಸಹಿತ ಅಖಿಳ ಚತುರಂಗಸೈನ್ಯದೊಡನೆ ಅಚಲನಿಭದಿಭದ-:ಅಚಲ=ಬೆಟ್ಟದ ನಿಭದ=ಸಮದ ಇಭದ=ಆನೆಯ ಮೇಲೆ ಅಡರಿ= ಹತ್ತಿ ಸಿಂಗರದ=ಸಿಂಗರಿಸಿಕೊಂಡ, ಗುರುಕುಚೆಯ= ದೊಡ್ಡ ಸ್ತನವುಳ್ಳ ಅರರಸಿಯ= ಪತ್ನಿ ದ್ರೌಪದಿಯ ಕೂಡೆ ಬರಲಿ ಗುಡಿತೋರಣದ ರಚನೆ ಮೆರೆಯಲಿ=ಚಂದವಾಗಿ ಮಾಡಿರಿ ಪುರದೊಳು ಎನುತೆ= ಎಂದು ಹೇಳುತ್ತಾ, ಪೊರೆಮಟ್ಟನು=ಹೊರ ಹೊರಟನು ಅವನಿಪನು=ರಾಜನು ಒಸಗೆ= ಸುದ್ದಿಯು- ವರೆಮಸಗಲು=ಬಹಳ ವಿಜ್ರಂಭಿಸಲು.
|
ಪದ್ಯ - ೩
[ಸಂಪಾದಿಸಿ]ಸಿಂಗರಮೊಳಾ ಹಸ್ತಿನಾವತಿಯೊಳಿರ್ದ ಜನ | |
ಸಿಂಗರಮೊಳು= ಅಲಂಕಾರಗೊಂಡ ಆ ಹಸ್ತಿನಾವತಿಯೊಳಿರ್ದ= ಹಸ್ತಿನಾವತಿಯಲ್ಲಿದ್ದ ಜನಜಂಗುಳಿ=ಜನಸಮೂಹ ಮಹೀಪಾಲನೊಡನೆ= ಧರ್ಮರಾಯನೊಡನೆ ಪೊರಮಟ್ಟ ಬಳಿಕ ಅಂಗನೆಯರು = ಹೆಂಗಸರು ದ್ರುಪದಸುತೆಯ= ದ್ರೌಪದಿಯ ಪೊನ್ನಂದಳದ= ಹೊನ್ನಿನಪಲ್ಲಕಿಯ ಕೂಡೆ ಸಂದಣಿಸಿ= ಗುಂಪಾಗಿ ಬರಲು
ಮಂಗಳಧ್ವಾನದಿಂದ=ಮಂಗಳವಾದ್ಯದ ಉಲಿವ= ನಡಿಸುವ, ಭೇರಿಗಳ ನಾದಂಗಳು, ಅಷ್ಟದಿಕ್ಪಾಲಕರ ಪಟ್ಟಣಂಗಳಿಗೆ ಪಾಂಡವರ ಪುರದ ಸಂಭ್ರಮವನು ಎಚ್ಚರಿಸಿ= ತೋರಿಸಿ, ನಾಚಿಸುವಂತಿರೆ ಐದಿದುವ= ಇದಿರುಗೊಳ್ಳಲು ಬಂದವು
|
ಪದ್ಯ - ೪
[ಸಂಪಾದಿಸಿ]ಭದ್ರಗಜಕಂಧರಧೊಳರಸನೆಸೆದಿರ್ದಂ | |
ಭದ್ರಗಜಕಂಧರಧೊಳ್(ಕಂಧರ= ಕುತ್ತಿಗೆ) ಅರಸನೆ ಎಸೆದಿರ್ದಂ ಸದ್ರತ್ನಭೂಷಣಂಗಳ ಕಾಂತಿಯಂ ಮೂಡಣ (ಪೂರ್ವ) ಅದ್ರಿಯೊಳ್ ತೊಳಗುವ ಎಳನೇಸರು ಎನೆ= ದೊಡ್ಡ ಆನೆಯ ಮೇಲೆ ಅರಸ ಧರ್ಮಜನು ಒಳ್ಳೆಯ ರತ್ನಭೂಷಣಗಳನ್ನುಧರಿಸಿ ಎಸೆದಿರ್ದನು/ ಪ್ರಕಾಶಿಸುತ್ತಿದ್ದನು; ಹೇಗೆಂದರೆ, ಪೂರ್ವಬೆಟ್ಟದ ಮೇಲೆ ಹುಟ್ಟಿ ಪ್ರಕಾಶಿಸುವ ಎಳೆನೇಸರ ಸೂರ್ಯನೋ ಎನ್ನುವಂತೆ. ಬಳಿಕ ಇದಿರ್ಗೊಂಬ ಹರ್ಷವನೆ ಕಂಡು= ನಂತರ ತನ್ನನ್ನು ಎದಿರುಗಳ್ಳವ ಸಂಭ್ರಮದ ಹರ್ಷವನ್ನು ನೋಡಿ, ಭದ್ರಾವತೀಶ್ವರನು ಎನಿಪ ಯೌವನಾಶ್ವಂ= ಭದ್ರಾವತೀಶ್ವರನಾದ ಯೌವನಾಶ್ವನು, ಜಗದ್ರಾಜನಾದ= ಚಕ್ರವರ್ತಿಯಾದ ಪಾಂಡವನ ಎಡೆಗೆ= ಧರ್ಮರಾಯನ ಬಳಿಗೆ, ಬಂದಂ= ಬಂದನು; ಹೇಗೆಂದರೆ ಸುಹೃದ್ರಾಗದಿಂ= ಸಂತೋಷದಿಂದ ತನಗೆ ಭೀಮನು ಅಭಿಮುಖನಾಗಿ ಬರಲು ಆತನೊಡನೆ ನಗುತೆ =ನಗುತ್ತಾ ಧರ್ಮರಾಯನ ಬಳಿಗೆ ಬಂದನು.
|
ಪದ್ಯ - ೪
[ಸಂಪಾದಿಸಿ]ವಾಯುಸುತನೊಡನೆ ತಾನಿರ್ದ ಪೊರೆಗಾಗಿ ಬ | |
ವಾಯುಸುತನೊಡನೆ= ಭೀಮನೊಡನೆ, ತಾನಿರ್ದ ಪೊರೆಗಾಗಿ= ತಾನು ಇದ್ದ ಸಮೀಪ, ಬರ್ಪ ಆ ಯೌವನಾಶ್ವನಂ ಕಂಡು= ಬರುತ್ತಿರುವ ಆ ಯೌವನಾಶ್ವನನ್ನು ಕಂಡು, ಇಭವನು= ಆನೆಯನ್ನು ಇಳಿದು ನಿಂದ= ನಿಂತುಕೊಂಡ ಆ ಯುಧಿಷ್ಠಿರನರೇಶ್ವರನ ಅಡಿಗೆ ಕಾಣಿಕೆಯನು ಇತ್ತು ಎರಗಿ ಕೈಮುಗಿಯಲು= ಯುಧಿಷ್ಠಿರರಾಜನಿಗೆ ಕಾಣಿಕೆಯನ್ನು ಕೊಟ್ಟು ಪಾದಕ್ಕೆ ನಮಿಸಿ,ಕೈಮುಗಿಯಲು, ಪ್ರೀಯದಿಂದ ಆತನಂ ತೆಗೆದು ತಕ್ಕೈಸಿ= ಪ್ರೀತಿಯಿಂದ ಆದರಿಸಿ ಅಪ್ಪಿಕೊಂಡು, ಮಾದ್ರೇಯ ಭೀಮಾರ್ಜುನರ ಸಮವು ಎನಗೆ ನೀನು= ನೀನು ಎನಗೆ ಮಾದ್ರೇಯರಾದ ನಕುಲಸಹದೇವ ಭೀಮಾರ್ಜುನರ ಸಮಾನವು ನೀ, ಅದರಿಂ ನೀ ಈ ಯಾದವೇಂದ್ರನಂ ಭಾವಿಸೆಂದು ಅರಸಂ ಮುಕುಂದನಂ ತೋರಿಸಿದನು= ಅದರಿಂದ ನೀನು ಈ ಯಾದವೇಂದ್ರನನ್ನು ಧ್ಯಾನಿಸು/ಗೌರವಿಸೆಂದು ಅರಸನು ಕೃಷ್ಣನನ್ನು ತೋರಿಸಿದನು.
|
ಪದ್ಯ - 6
[ಸಂಪಾದಿಸಿ]ಬಳಿಕವಂ ಕಂಡನುತ್ಪಲದಳಶ್ಯಾಮ ಕೋ | |
ಬಳಿಕವಂ ಕಂಡನು ಉತ್ಪಲದಳಶ್ಯಾಮ ಕೋಮಲತರಶರೀರನಂ ನವರತ್ನ ಮಕುಟ ಕುಂಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ ವಿಲಸಿತ ಶ್ರೀವತ್ಸ ಕೌಸ್ತುಭ ಶಭೋದರನಂ ಲಲಿತ ಪೀತಾಂಬರೋಜ್‍ಜ್ವಲದಲಂಕಾರನಂ ಜಲಜಸಮ ಚರಣಯುಗ ಮೋಹನಾಕಾರನಂ ಲಕ್ಷ್ಮೀಮನೋಹಾರನಂ = ಉತ್ಪಲದಳಶ್ಯಾಮ- ಕನ್ನಯದಿಲೆ ಯಂತೆನೀಲಿಬಣ್ಣದ, ಕೋಮಲತರಶರೀರವುಳ್ಳ, ನವರತ್ನ ಮಕುಟ ಕುಂಡಲ ಕನಕ ಕೇಯೂರಹಾರ ಹಾಕಿಕೊಂಡ, ಎದ್ದು ಕಾಣುವ ಮಣಿಮಂಜೀರ ಕಟಿಸೂತ್ರ (ಸೊಂಟಪಟ್ಟಿ) ಧರಿಸಿದವನನ್ನು, ಹೊಳೆಯುವ ಶ್ರೀವತ್ಸ ಕೌಸ್ತುಭವನ್ನು ಧರಿದವನನ್ನು, ಚೆಂದದ ಉಜ್ವಲವಾದ ಪೀತಾಂಬರ ಧರಿಸಿ ಅಲಂಕಾರ ಮಾಡಿಕೊಂಡವನನ್ನು, ಪದ್ಮದಂತ ಪಾದಗಳುಳ್ಳವನನ್ನು, ಮೋಹನಾಕಾರನಾಗಿರುವವನನ್ನು, ಲಕ್ಷ್ಮೀಯ ಮನಸ್ಸಿನ ಪ್ರೀತಿ ಗಳಿಸಿದವನನ್ನು ಯೌವನಾಶ್ವನು ಕಂಡನು.
|
ಪದ್ಯ - ೭
[ಸಂಪಾದಿಸಿ]ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವ | |
ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವನು=ಕಣ್ಣು ಮತ್ತುಮನಸ್ಸನ್ನು ಒಚ್ಚತಂಗೊಳಲು=ಹಿತಗೊಳಿಸಲು ಏಳ್ವ=ಎದ್ದುನಿಂತ ರೋಮ ಪುಳಕದೊಳೆ= ರೋಮಾಂಚನದಲ್ಲಿ, ಮೈವೆಚ್ಚಿದ= ಮೈಮರೆತ, ಅತಿಹರ್ಷದಿಂದ ಅಜಭವ=ಬ್ರಹ್ಮನನ್ನು ಹೊಕ್ಕಳಲ್ಲಿ ಹಡೆದ, ಸುರೇಂದ್ರ ಮುನಿಮುಖ್ಯರ್ಗೆ= ಮುನಿಮುಖ್ಯರಿಗೆ ಗೋಚರಿಸದ, ಸಚ್ಚಿದಾನಂದಮಯನಂ= ಸಚ್ಚಿದಾನಂದಮಯನನ್ನು ಕಂಡುದು=ನೋಡಿದ್ದು ಇದು=ಇದೊಂದು, ಜಗದೊಳಚ್ಚರಿಯಲಾ=ಜಗದಲ್ಲಿ ಅಚ್ಚರಿಯೇ ಸೈ ನರರ್ಗೆ ಎನುತ= ಮನುಷ್ಯರಿಗ ಎನ್ನುತ್ತಾ, ಆನೃಪಾಲಕಂ= ಆ ರಾಜನು, ಬೆಚ್ಚಂ=ಇಟ್ಟನು ಅಸುರಾಂತಕನ ಪದಕೆ=ಕೃಷ್ಣನ ಪಾದಕ್ಕೆ, ತನ್ನ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು =ಮಿಂಚಿನಂತೆ ಹೊಳೆಯುತ್ತರುವ ಕಿರೀಟವಿದ್ದ ಹಣೆಯನ್ನು.
|
ಪದ್ಯ - ೮
[ಸಂಪಾದಿಸಿ]ಕಮಲದಳಯನ ಕಾಳಿಯಮಥನ ಕಿಸಲಯೋ | |
ಯೌವನಾಶ್ವನು ಕೃಷ್ಣನನ್ನು ಕುರಿತು, "ಕಮಲದಳಯನ ಕಾಳಿಯಮಥನ ಕಿಸಲ(ಕೋಮಲ)ಯೋಪಮಚರಣ ಕೀಶ(ಕಪಿ)ಪತಿಸೇವ್ಯ ಕುಜ(ಗೋವರ್ಧನಪರ್ವತ) ಹರಕೂರ್ಮ ಸಮಸತ್ಕಪೋಲ(ಚಂದವಾ ಕೆನ್ನೆಗಳು) ಕೇಯೂರಧರ ಕೈರವ(ನೈದಿಲೆ)ಶ್ಯಾಮ ಕೋಕನ(ಕಮಲ)ದಗೃಹೆಯ(ಲಕ್ಷ್ಮಿ) ರಮಣ ಕೌಸ್ತುಭಶೋಭ ಕಂಬು(ಶಂಕ)ಚಕ್ರಗದಾಬ್ಜ ವಿಮಲಕರ ಕಸ್ತೂರಿಕಾತಿಲಕ ಕಾವುದು ಎಂದು ಅಮಿತಪ್ರಭಾಮೂರ್ತಿಯಂ ನುತಿಸಲು=ಸ್ತೋತ್ರಮಾಡಲು ಆತನಂ= ಆತನನ್ನು ಹರಿ=ಕೃಷ್ಣನು, ನೆಗಪಿದಂ ಕೃಪೆಯೊಳು=ಕೃಪೆಯಿಂದ ಎತ್ತಿದನು.
|
ಪದ್ಯ - ೯
[ಸಂಪಾದಿಸಿ]ಎದ್ದಾ ನೃಪಂ ಕೃತಾಂಜಲಿಪುಟಾವನತನಾ | |
ಎದ್ದು ಆ ನೃಪಂ =ಎದ್ದು ಆ ರಾಜನು, ಕೃತ ಅಂಜಲಿಪುಟ ಅವನತನು ಆಗಿದ್ದಾಗ= ಕೈಯನ್ನು ಅಂಜಲೀಬದ್ಧನಾಗಿ ಮಾಡಿಕೊಂಡು ವಿಧೇಯನಾಗಿ ನಿಂತಾಗ, ಭೀಮನ= ಭೀಮನನ್ನು ನೋಡಿ, ವಿಷಯಂಗಳಂ= ಪ್ರಾಪಂಚಿಕ ಆಸೆಗಳನ್ನು ಗೆದ್ದ ನಿರ್ಮಲ ತಪಸ್ವಿಗಳ ನಿಶ್ಚಲ ಹೃದಯ ಮಧ್ಯ ಪಂಕೇಜಾತದ=ಕಮಲದ ಆ ಗದ್ದುಗೆಯೊಳು=ಪೀಠದಲ್ಲಿ ಎಸೆವ= ಕಾಣುವ ಚಿದ್ತೂಪನಂ= ಜ್ಞಾನಸರೂಪನನ್ನು ಜಗವರಿಯೆ=ಎಲ್ಲರಿಗೂ ತಿಳಿಯುವಂತೆ
ದೊದ್ದೆಯೊಳ್= (ದೊಡ್ಡಿ)ಕೊಟ್ಟಿಗೆಯಲ್ಲಿ ಕೂಡಿ ಕುದುರೆ ಕಟ್ಟುವ ಕೆಲಸ ತೇರ್ ಕುದುರೆಯಂ ಪೊಡೆವುದಂ= ರಥದ ಕುದುರೆಯನ್ನು ಓಡಿಸುವ ಪೊದ್ದಿಸಿದ= ಹೊಂದಿಸಿದ,ಕೆಲಸ ಮಾಡಿಸಿದ, ಪಾರ್ಥನು ಆರು ಇದರೊಳು ಎನಲು ಅರ್ಜುನಂ ಬಂದು ಆತನಂ ಕಂಡನು= ಪಾರ್ಥನು ಯಾರು ಇಲ್ಲಿರುವವರಲ್ಲಿ ಎನ್ನಲು, ಅರ್ಜುನನು ಬೋದು ಅವನನ್ನು ಕಂಡನು.
|
ಪದ್ಯ - ೧೦
[ಸಂಪಾದಿಸಿ]ಗುಣದೊಳಾ ಯೌವನಾಶ್ವಕ್ಷಿತಿಪನೆರಗಿ ಫಲು | |
ಗುಣದೊಳ ಆ ಯೌವನಾಶ್ವಕ್ಷಿತಿಪನು ಎರಗಿ ಫಲುಗುಣನ ಮೊಗಮಂ ನೋಡಿ= ವಿನಯದಿಂದ ಆ ಯೌವನಾಶ್ವ ರಾಜನು ನಮಸ್ಕರಿಸಿ ಫಲ್ಗುಣನ ಮುಖವನ್ನು ನೋಡಿ, ನೀನಲಾ ತಿಳಿಯಲ್ ತ್ರಿಗುಣದೊಳು ಒಂದದ(ಸೇರದ) ಘನಶ್ರುತಿ ಶಿರೋಮಣಿಯನು ಇಳೆಯರಿಯೆ ನಿಜಭಕ್ತಿಯೆಂಬ ಗುಣದಿಂದೆ ಬಂದಿಸಿದ ಕೋವಿದನು= ನೀನೇನಯ್ಯಾ ಸ್ವತ್ವ ರಜ ತಮ ಗುಣಗಳಲ್ಲಿ ಸೇರದ ವೇದವೇದ್ಯನಾದ ಶ್ರೇಷ್ಠನನ್ನು ಜಗತ್ತೇ ಅರಿಯುವಂತೆ ಭಕ್ತಿಯಿಯಿಂದ ಸದ್ಗಣದಿಂದ ಕಟ್ಟಿ ಹಾಕಿದ ಜಾಣನು? ಅದು ಏಂ ಬಯಲ ಗುಣವಿರ್ದರು= ಅದು ಎಷ್ಟು ಶಮಾದಿಗುಣಗಳಿದ್ದವರು, ಅಕಟ ಯೋಗಿಗಳು ಎಂದು ಎಂದು ನರನ ಸದ್ಗುಣವನು ಉರೆ ಕೊಂಡಾಡಿ= ಯೋಗಿಗಳು ಅಕಟ ಎಂದು ಅರ್ಜುನನ ಸದ್ಗುಣವನ್ನು ಬಹಳ ಕೊಂಡಾಡಿ, ಬಳಿಕ ಸಹದೇವ ನಕುಲ ಆದ್ಯರಂ ಮನ್ವಿಸಿದನು= ಮೊದಲಾದವರನ್ನು ಗೌರವಿಸಿದನು.
|
ಪದ್ಯ - ೧೧
[ಸಂಪಾದಿಸಿ]ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ | |
ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ ಬಳಸಿ ಕಂಗೊಳಿಸುತಿರಲು= ನಂತರ ಹೊಳೆವ ಮಿಂಚಿನ ಗೊಂಚಲಿನಂತೆ, ಅಡಿಗಡಿಗೆ ಘುಡುಘುಡಿಸಿ ಮೊಳಗುವ ಸಿತಾಭ್ರಮಂ= ಪದೇಪದೇ ಶಬ್ದಮಾಡುವ ಬಿಳಿಮೋಡವನ್ನು, ಕುಲಗಿರಿತಟಪ್ರದೇಶಕೆ= ಬೆಟ್ಟದ ಬುಡಕ್ಕೆ ಸಾರ್ಚುವ ಅನಿಲನಂತೆ= ತಳ್ಳುವ ಗಾಳಿಯಂತೆ, ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿಗೆ ಉಲಿವ ಹೊಂಗೆಜ್ಜೆಗಳ ರಭಸದಿಂದೆ ಎಸೆವ= ಚಂದದ ಆಭರಣಗಳ ಪ್ರಕಾಶವನ್ನು ಬೀರುತ್ತಾ, ಹೊನ್ನಿನ ಗೆಜ್ಜೆಗಳನಡಿಗೆಯಿಂದ ಶೋಭಿಸುವ, ನಿರ್ಮಲ ವಾಜಿಯಂ= ಬಿಳಿಯ ಕುದುರೆಯನ್ನು, ಸುವೇಗಂ ತಂದು ನಿಲಿಸಿದಂ=ಸುವೇಗನು ತಂದು ನಿಲ್ಲಿದನು, ಧರ್ಮಜನ ಸಮ್ಮುಖದೊಳು= ಧರ್ಮಜನ ಎದುರಿನಲ್ಲಿ.
|
ಪದ್ಯ - ೧೨
[ಸಂಪಾದಿಸಿ]ತುರಗಮೇಧಂಗೆಯ್ಯದೊಂದಿನಿಸು ಕುಂದೆನ್ನ | |
ತುರಗಮೇಧಂ=ಆಶ್ವಮೇಧ ಯಾಗವನ್ನು, ಗೆಯ್ಯದ= ಮಾಡದ, ಒಂದಿನಿಸು= ಒಂದುಸ್ವಲ್ಪ, ಕುಂದು ಎನ್ನಸಿರದ ಮೇಲಿದೆ= ನನ್ನ ಶಿರದಮೇಲೆ ಇದೆ. ತಾನಿದಂ ತಾಳಲಾರೆ= ತಾನು/ನಾನು ಇದನ್ನು ಸಹಿಸಲಾರೆನು. ನೀಂ ಪರಿಹರಿಪುದು= ನೀನು ಪರಿಹರಿಸಬೇಕು ಎಂದು ನಿಜಕೀರ್ತಿ ಹಯರೂಪದಿಂ= ತನ್ನ ಕೀರ್ತಿಯು ಅಶ್ವರೂಪದಲ್ಲಿ ಇದೆ, ಎಂದು ಯವೌನಾಶ್ವನನ್ನು ಭೂಪನಂ=ರಾಜನನ್ನು ಬೇಡಿಕೊಳಲು= ಕೇಳಿಕೊಳ್ಳಲು-ಅವನು ತಂದ ಕುದುರೆಯು ಪೊರೆಗೆ= ಅವನ ಬೇಡಿಕೆಯನ್ನು ಪೂರೈಸಿ ಧರ್ಮಜನನ್ನು ಕಾಪಾಡಲು ಬಂದವೊಲ್= ಬಂದಿತೋ ಎನ್ನುವಂತೆ ಏಕಕರ್ಣದ= ಒಂದೇ ಕಿವಿಯ, ಅಸಿತತ್ವದಿಂ= ಖಡ್ಗದತತ್ವದ/ ಶೌರ್ಯದ ತತ್ವದ ಪರಿಶೋಭಿಸುವ= ಶೋಭಾಯಮಾನವಾದ, ಶುಭ್ರವಾಜಿಯಂ= ಪರಿಶುದ್ಧ ಬಿಳಿಯ ಅಶ್ವವನ್ನು, ಕಾಣುತ ಅಚ್ಚರಿವಟ್ಟು= ಕಂಡು ಆಸ್ಚರ್ಯಚಕಿತನಾದನು, ಸಕಲಜನಂ ಐಮೈತಂದು= ಎಲ್ಲಾ ಜನರೂ ಬಂದು ನೋಡುತಿರ್ದುದು= ನೋಡಿತ್ತಿದ್ದರು, ಬಳಸಿ ದೆಸೆದೆಸೆಯೊಳು= ಎಲ್ಲಾದಿಕ್ಕಿನಿಂದಲೂ ಸುತ್ತವರಿದುನಿಂತು.
|
ಪದ್ಯ - ೧೩
[ಸಂಪಾದಿಸಿ]ಕೊಂಡುಬಂದಾ ಹಯವನೊಪ್ಪಿಸಿ ಯುಧಿಷ್ಠಿರನ | |
ಕೊಂಡುಬಂದಾ ಹಯವನು ಒಪ್ಪಿಸಿ ಯುಧಿಷ್ಠಿರನ ಕಂಡಂ ಸುವೇಗನತಿಭಕ್ತಿಯಿಂದ ಎರಗಿದಂ ಪುಂಡರೀಕಾಕ್ಷಂಗೆ= ಸುವೇಗನು, ಭದ್ರಾವತಿಯಿಂದ ತಂದ ಯಜ್ಞದ ಕುದುರೆಯನ್ನು ಯಧಿಷ್ಠಿರನ ಕಡೆಯವರಿಗೆ ಕೊಟ್ಟು, ಯುಧಿಷ್ಠಿರನನ್ನು ಕಂಡು, ಕೃಷ್ಣನಿಗೆ ಬಹಳ ಭಕ್ತಿಯಿಂದ ನಮಸ್ಕರಿಸಿದನು. ಬಳಿಕ ಅರ್ಜುನಾದಿಗಳಿಗೆ ಉಚಿತದಿಂ ವಂದಿಸಿದನು= ನಂತರ ಅರ್ಜುನಾದಿಗಳಿಘೂ ನಮಸ್ಕರಿಸಿದನು.ನಂತರ ಬಂಡಿ ಪೇರೆತ್ತು ಒಂಟೆಗಳ ಮೇಲೆ ತಂದ ಅಖಿಳ ಭಂಡಾರಮಂ ಕರಿರಥಾಶ್ವಮಂ ನಾರಿಯರ ತಂಡಮಂ ಗೋಮಹಿಷ ಮೊದಲಾದ ವಸ್ತುಗಳನ ಆ ಕ್ಷಣದೊಳ ಒಪ್ಪಿಸಿದನು= ಗಾಡಿ, ಹೊರುವಎತ್ತುಗಳು, ಒಂಟೆಗಳ ಮೇಲೆ ತಂದಿದ್ದು ಎಲ್ಲಾ ಭಡಾರವನ್ನೂ, ಆನೆ ರಥ ಕುದುರೆಗಳನ್ನೂ,ನಾರಿಯರ ತಂಡವನ್ನೂ,ದನ ಎಮ್ಮೆಗಳನ್ನೂ,ಮತ್ತು ಇತರೆ ತಂದ ಎಲ್ಲಾ ವಸ್ತುಗಳನ್ನು ಕೂಡಲೆ ಒಪ್ಪಸಿಕೊಟ್ಟನು.
|
ಪದ್ಯ - ೧೪
[ಸಂಪಾದಿಸಿ]ಮೇಲೆ ಪರಿತೋಷದಿಂದಾ ಯೌವನಾಶ್ವಭೂ | |
ಮೇಲೆ ಪರಿತೋಷದಿಂದಾ= ನಂತರ, ಯೌವನಾಶ್ವಭೂಪಾಲಕಂ ತನ್ನ ಸರ್ವಸ್ವಮಂ= ಯೌವನಾಶ್ವ ಭೂಪಾಲನು ತನ್ನ ಸರ್ವಸ್ವವನ್ನೂ ತಂದು, ಲಕ್ಷ್ಮೀಲೋಲನಂಘ್ರಿಗೆ= ಕೃಷ್ಣನಿಗೆ ಒಪ್ಪಿಸಿದ ಬಳಿಕ ಅವನೊಡನೆ ಬಂದಿಹ= ಬಂದಿರುವ ಸಮಸ್ತಜನರು ನೀಲಮೇಘಶ್ಯಾಮಲನ= ಮೇಘದ ಕಪ್ಪುಮೈಬಣ್ಣದ ಕೃಷ್ಣನ, ಕೋಮಲಾಂಗದ= ಕೋಮಲ ದೇಹದ, ವಿಶಾಲತರ ಲಾವಣ್ಯಲಹರಿಯ= ಬಹಳ ಲಾವಣ್ಯ ಲಕ್ಷಣದ, ಸುಧಾಂಬುದಿಯೊಳು= ಕ್ಷೀರಸಮುದ್ರದಲ್ಲಿ ಓಲಾಡುತಿರ್ದರುಸಮತೋಷದಲ್ಲಿ ಮುಳುಗಿದ್ದರು. ಅಡಿಗಡಿಗೆ ವಂದಿಸಿ ನುತಿಸಿ= ಅವನಿಗೆ ಪದೇಪದೇ ನಮಸ್ಕರಿಸುತ್ತಾ , ಜಯಜಯನಿನಾದದಿಂದೆ = ಜಯಜಯ ಕೃಷ್ಣ ಎನ್ನುತ್ತಿದ್ದರು.
|
ಪದ್ಯ - ೧೫
[ಸಂಪಾದಿಸಿ]ಇತ್ತಲಾ ಯೌವನಾಶ್ವವ ರಾಣಿ ಕಾಣಿಕೆಯ | |
ಇತ್ತಲಾ= ಇತ್ತಲಾಗಿ ರಾಣೀವಾಸದಲ್ಲಿ, ಯೌವನಾಶ್ವವ ರಾಣಿ ಕಾಣಿಕೆಯನಿತ್ತು= ಕಾಣಿಕೆಯನ್ನು ಕೊಟ್ಟು ಕುಂತಿಗೆ ನಮಿಸಿ=ನಮಸ್ಕರಿಸಿದಳು, ಬಳಿಕ ಪಾಂಚಾಲಭೂಭೃತ್ತನೂಜೆಯ= ಪಾಂಚಾಲ ರಾಜನ ಮಗಳು ದ್ರೌಪದಿಯ, ಚರಣ ಸೀಮೆಗೆ ನತೆಯಾಗಲು ಅವಳ ಕಚಭರಂ ಎಸೆದುದು= (ಕಚ= ತಲೆಕೂದಲು) ಪಾದಗಳಿಗೆ ಬಗ್ಗಿ ನಮಸ್ಕರಿಸಲು ಅವಳ ದಟ್ಟ ಕಪ್ಪಕೂದಲು ಅದ್ಭುತವಾಗಿ ತೋರಿತು; ಅದು - ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬಲ್ಗತ್ತಲೆಯೊ= ಒಟ್ಟಿಗೆ ಒತ್ತಿಟ್ಟಿಇರುವ ಕೆಂಪುಬಣ್ಣದ ಸಂಜೆಯ ಮೇಲೆ ಕವಿದ ಕತ್ತಲೆಯೋ ಎಂಬಂತೆ ಅವಳ ತಲೆಯ ಉದ್ದ ಕಪ್ಪು ಕೂದಲರಾಶಿ ದ್ರೌಪದಿಯ ಕಾಲುಗಳನ್ನು ಮುಚ್ಚಿತು; ಶೋಣಗಿರಿತಟಕಿಳಿವ= ಕೆಂಪು ಬೆಟ್ಟದ ತಲಕ್ಕೆ ಇಳಿದು ಬಂದ, ಕಾರ್ಮುಗಿಲ ಮೊತ್ತಮೊ= ಕಪ್ಪಮುಗಿಲ ರಾಶಿಯೋ ಎಂಬಂತಿತ್ತು, ಕಮಲಕೆ ಎರಗುವ ಅಳಿಕುಲಮೊ= ಕಮಲದ ಹೂವಿಗೆ ಬಂದು ಮತ್ತಿದ ಜೇನುಹುಳುಗಳೋ ಎಂಬತೆ ಕಾಣುತ್ತಿತ್ತು. ತಳಿರ್ಗೊಂಬಡರ್ದ-:ತಳಿರ್ ಕೊಂಬ ಅಡರ್ದ ಬರ್ಹಿಯೊ= ಕೆಂಪುಎಲೆಯ ಚಿಗುರಿನ ರೆಂಬೆಯನ್ನು ಹತ್ತಿದ ಸೋಗೆಬಾಲದ ನವಿಲೋ ಪೇಳೆನೆ- ಪೇಳು ಎನೆ= ಹೇಳು ಎನ್ನುವಂತಿತ್ತು,
|
ಪದ್ಯ - ೧೬
[ಸಂಪಾದಿಸಿ]ದ್ವೇಷಮಂ ಬಿಟ್ಟು ಕೆಂದಾವರೆಯ ಚೆಲ್ವಿನ ವಿ | |
ದ್ವೇಷಮಂ ಬಿಟ್ಟು= ದ್ವೇಷವನ್ನು ಬಿಟ್ಟು, ಕೆಂದಾವರೆಯ ಚೆಲ್ವಿನ ವಿಶೇಷಮಂ ನೋಡಲ್ ಸಮೀಪಮಂ ಸಾರ್ದ= ಕೆಂಪು ತಾವರೆಯ ವಿಶೇಷ ಸೊಬಗನ್ನು ನೋಡಲು ಸಮೀಪಕ್ಕೆ ಹೋದ, ಪೀಯೂಷಕರಬಿಂಬಂ(ಚಂದ್ರನ ಅಮೃತಕಿರಣ) ಎನಲು ಆ ಪ್ರಭಾವತಿಯ ಮೊಗಂ ಅಂಘ್ರಿದೇಶದೊಳ್ ಒಪ್ಪಿರೆ= ನಮಸ್ಕರಿಸಿದ ಆ ಪ್ರಭಾವತಿಯ ಚಂದ್ರನ ಅಮೃತಕಿರಣದಂತಿರುವ ಮಖವು ದ್ರೌಪದಿಯ ಪಾದಗಳಲ್ಲಿ ಇರಲು, ಭೂಷಣಂ ಚಲಿಸೆ ಮಣಿದು ಎತ್ತಿ ಬಿಗಿಯಪ್ಪಿ= ದ್ರೌಪದಿಯ ಆಭರಣಗಳು ಅಲುಗುತ್ತಿರಲು ಪ್ರಭಾವತಿಯನ್ನು ಬಗ್ಗಿ ಎತ್ತಿ ಬಿಗಿಯಾಗಿ ಪ್ರೀತಿಯಿಂದ ಅಪ್ಪಿಕೊಂಡು, ಸಂತೋಷದಿಂದ ಅವಳನು=ಅವಳನ್ನು ಉಪಚರಿಸಿ, ತಿರುಗಿದಳು ಅಖಿಳ ಯೋಷಿಜ್ಜನದೊಳು(ಹೆಂಗಸರ ಸಮೂಹದಲ್ಲಿ) ಅತಿವಿಲಾಸದಿಂ ದ್ರೌಪದಿ ಸುಭದ್ರೆ ಆದಿ ಸತಿಯರೊಡನೆ= ದ್ರೌಪದಿ ಸುಭದ್ರೆ ಮೊದಲಾದ ಸತಿಯರ ಜೊತೆಗೂಡಿಕೊಂಡು ಸೊಬಗಿನಿಂದ ಹೆಂಗಸರ ಸಭೆಯಲ್ಲಿ/ಸಭೆಯಕಡೆ ಹೋದಳು.
|
ಪದ್ಯ - ೧೭
[ಸಂಪಾದಿಸಿ]ಶೌರಿಸಹಿತರಸಂ ಬಳಿಕ ರಜತಗಿರಿಯಂತೆ | |
ಶೌರಿಸಹಿತ ಅರಸಂ ಬಳಿಕ ರಜತಗಿರಿಯಂತೆ ಗೌರಾಂಗದಿಂದೆ ಕಣ್ಗೊಳಿಸುವ ತುರಂಗಮದ ಸೌರಂಭಮಂ ನೋಡಿ= ಬಳಿಕ ಕೃಷ್ಣನಸಹಿತ ಅರಸನು ರಜತಗಿರಿಯಂತೆ ಬಿಳಿಯಬಣ್ನದಿಂದ ಕಂಗೊಳಿಸುವ ಕುದುರೆಯ ಅಧ್ಭುತ ಸೌಂದರ್ಯವನ್ನು ನೋಡಿ,
ಬಿಗಿಯಪ್ಪಿ ಮುಂಡಾಡಿ ಹೈಡಿಂಬಿ ಕರ್ಣಜರನು ಗೌರವಂ ಮಿಗೆ ಯೌವನಾಶ್ವಭೂಪಾಲನಂ ಪೌರುಷದೊಳು ಉಪಚರಿಸಿ ತಂದನು ಇಭಪುರಿಗೆ ಅಖಿಳ ಪೌರಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು= ಧರ್ಮಜನು ಸಂತೋಷಾತಿರೇಕದಿಂದ ಅಶ್ವವನ್ನು ಗೆದ್ದು ತಂದ ಮೇಘನಾದ ವೃಷಕೇತು ಇಬ್ಬರನ್ನೂ ಅಪ್ಪಿಕೊಂಡು, ಮುಂಡಾಡಿ, ಆಮೇಲೆ ಯೌವನಾಶ್ವನನ್ನು ವೀರೋಚಿತವಾಗಿ ಗೌರವಿಸಿ, ಯಜ್ಞಾಶ್ವವನ್ನು ಎಲ್ಲಾ ಪೌರಜನ ಪರಿಜನರು ರಥ ಆನೆ ಕುದುರೆಗಳ ಸಂಭ್ರಮದ ಮೆರವಣಿಗೆಯ ಮೂಲಕ ನಗರದ ಹೊರವಲಯದಿಂದ ಹಸ್ತಿನಾವಿ ನಗರದದೊಳಗೆ ತಂದನು.
|
ಪದ್ಯ - ೧೮
[ಸಂಪಾದಿಸಿ]ಭೂವಲ್ಲಭಂ ಮುದದೊಳಾ ಯೌವನಾಶ್ವನಂ | |
ಭೂವಲ್ಲಭಂ= ಧರ್ಮರಾಜನು ಮುದದೊಳು ಆ ಯೌವನಾಶ್ವನಂ ಭಾವಿಸಿದ ಬಳಿಕ= ಸಂತೋಷದಿಂದ ಆ ಯೌವನಾಶ್ವನನ್ನು ಉಪಚರಿಸಿದ ಬಳಿಕ, ಪಕ್ಷದ್ವಯಂ ಹರಿ ಹಸ್ತಿನಾವತಿಯೊಳ್ ಇರ್ದು= ಕೃಷ್ಣನು ಒಂದು ತಿಂಗಳು ಹಸ್ತಿನಾವತಿಯಲ್ಲಿ ಇದ್ದು, ನೃಪವರನೊಳು ಇಂತೆಂದನು= ಆರಾಜನನ್ನು ಕುರಿತು ಹೀಗೆ ಹೇಳಿದನು, 'ಈ ಚೈತ್ರಮಾಸಂ ಪೋದುದು ಈ ವೇಳೆಗೆ ಅಧ್ವರದ ಸಮಯವನು ಉಪಕ್ರಮಿಸಲು ಆವು ಇರಲ್ ಪನ್ನೊಂದು ತಿಂಗಳಿರ್ಪುದು= ಈ ಸಮಯಕ್ಕೆ ಯಜ್ಞದ ಕೆಲಸ ಆರಂಭಿಸಲು ಚೈತ್ರಮಾಸವು ಕಳೆಯಿತು, ನಾವು ಇರೋಣವೆಂದರೆ ಇನ್ನೂ ಹನ್ನೊಂದು ತಿಂಗಳು ಇರುವುದು, ಮುಂದೆ ನೀವು ಕರೆಸಿದೊಡೆ ಬಂದಪೆವು ಅಂದಿಗೆ ಒದವಿದ ಸಮಸ್ತ ವಸ್ತುಗಳ ಕೊಂಡು= ಯಜ್ಞ ಆರಂಬವಾಗುವಾಗ ನೀವು ನಮ್ಮನ್ನು ಕರೆಸಿದರೆ ಆ ಕಾರ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ತೆಗೆದುಕೊಂಡು ಬರುತ್ತೇವೆ.'
|
ಪದ್ಯ - ೧೯
[ಸಂಪಾದಿಸಿ]ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸ | |
ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸಹಾಯಕೆ= ರಾಜನೇ ನೀನು ಕರೆಸಿದರೆ ನಿನ್ನ ಮಹಾಯಜ್ಞದ ಸಹಾಯಕ್ಕೆ,
ಸಮಸ್ತವಸ್ತುವನು ಅಖಿಳ ಯಾದವ ನಿಕಾಯಮಂ ಕೂಡಿಕೊಂಡು ಐತಪ್ಪೆವು= ಸಮಸ್ತವಸ್ತುಗಳನ್ನೂ ಎಲ್ಲಾ ಯಾದವ ಸಮೂಹವನ್ನೂ ಕೂಡಿಕೊಂಡು ಬರುವೆವು, ಅನ್ನೆಗಂ ಸುಯ್ದಾನದಿಂ= ಅಲ್ಲಿಯವರೆಗೆ ಎಚ್ಚಿಕೆಯಿಂದ, ಹಯವನು ಈ ಯೌವನಾಶ್ವಭೂಪತಿ ಸಹಿತ ಕಾವುದು ಎಂದು ಆ ಯಮಸುತ ಆದಿಗಳನು ಅಂದು ಬೀಳ್ಕೊಂಡು= ಅಶ್ವವನ್ನೂ ಈ ಯೌವನಾಶ್ವಭೂಪತಿಯ ಸಹಿತ ರಕ್ಷಿಸಬೇಕು, ಎಂದು ಆ ಯಮಸುತ ಆದಿಗಳನು ಅಂದು ಬೀಳ್ಕೊಂಡು ಕಮಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು= ಎಂದು ಆ ಧರ್ಮಜ ಮೊದಲಾದವರನ್ನು ಅಂದು ಬೀಳ್ಕೊಂಡು ಕೃಷ್ಣನು ಬಂಧುವಾಗಿ ತನ್ನ ಕರ್ತವ್ಯ ಮಾಡಿ ದ್ವಾರಕಾಪುರಕ್ಕೆ ಹೋದನು.
|
ಪದ್ಯ - ೨೦
[ಸಂಪಾದಿಸಿ]ಇತ್ತಲವನಿಪನಸುರಹರನ ಕಳುಹಿದ ಚಿಂತೆ | |
ಇತ್ತಲು ಅವನಿಪನು ಅಸುರಹರನ ಕಳುಹಿದ ಚಿಂತೆಗೆ ಇತ್ತು ನಿಜಬುದ್ದಿಯೆಂ= [ಈ ಕಡೆ ರಾಜನು ಕೃಷ್ಣನನ್ನು ಕಳುಹಿಸಿದ ಚಿಂತೆಗೆ ತನ್ನ ಬುದ್ಧಿಯನ್ನು ಚಿಂತೆಗೆ ಈಡುಮಾಡಿ,] ಮುಂದೆ ಅರಿಯದಿರೆ= [ಮುಂದೆ ಎನು ಮಾಡಬೇಕೆಂದು ತೋಚದಿರಲು,] ಬಂದು ಮತ್ತೆ ವೇದವ್ಯಾಸಮುನಿ ತಿಳುಹಲು= [ಮತ್ತೆ ವೇದವ್ಯಾಸಮುನಿಯು ಬಂದು ಮುಂದಿನ ಕಾರ್ಯವನ್ನು ತಿಳಿಸಲು,] ಅಮಲಮಂಟಪವನು ಓಜೆಯೊಳು(ಶಾಸ್ತ್ರದಂತೆ) ರಚಿಸಿ ತತ್ ತುರಗಮಂ ನಿಲಿಸಿ=[ಶಾಸ್ತ್ರದಂತೆ ಯಾಗಶಾಲೆಯನ್ನು ರಚಿಸಿ,ಆ ಕುದುರೆಯನ್ನು ಅಲ್ಲಿ ನಿಲ್ಲಿಸಿ], ಬಳಿಕ ಕಾವಲ್ಗೆ ರಥ ಮತ್ತಗಜ ಹಯ ಪದಾತಿಗಳ ಸಂದೋಹಮಂ ಸುತ್ತಲುಂ ಪರುಠವಿಸಿ= [ಬಳಿಕ ಕಾವಲಿಗೆ ರಥ ಮತ್ತಗಜ ಕುದುರೆ ಪದಾತಿಗಳ ಸೈನ್ಯವನ್ನು ಸುತ್ತಲೂ ಕಾವಲಿಟ್ಟು], ಕೇಳ್ದನು ಆ ಋಷಿಯೊಳ್ ಮರುತ್ತನೃಪತಿಯ ಕಥೆಯನು= ಆ ಋಷಿಯಿಂದ ಮರುತ್ತರಾಜನ ಕಥೆಯನ್ನು ಕೇಳಿದನು.
|
ಪದ್ಯ - ೨೧
[ಸಂಪಾದಿಸಿ]ವಿಧುಕುಲಲಲಾಮ ಕೇಳ್ ಧರ್ಮಸುತನಾ ತಪೋ | |
ವಿಧುಕುಲಲಲಾಮ ಕೇಳ್= ಚಂದ್ರಕುಲ ಶ್ರೇಷ್ಠನಾದ ಜನಮೇಜಯನೇ ಕೇಳು, ಧರ್ಮಸುತನು ಆ ತಪೋನಿಧಿಗೆ ಕೈಮುಗಿದು ಬೇಸಗೊಂಡಂ= [ಧರ್ಮಜನು ಆ ತಪೋನಿಧಿಗೆ ಕೈಮುಗಿದು ಕೇಳಿಕೊಂಡನು], ಮರುತ್ತನೃಪನು ಅಧಿಕತರ ಯಾಗಮನು ಅದಾವ ಋಷಿಮುಖದಿಂದಂ ಅಂದು ವಿರಚಿಸಿದನು ಅದರ ವಿಧಿಯಂ ತನಗೆ ಪೇಳ್ವುದು ಎನೆ= [ಮರುತ್ತರಾಜನು ಅಧಿಕತರ ಯಾಗವನ್ನು ಯಾವ ಋಷಿಮುಖದಿಂದ ಅಂದು ಮಾಡಿದನು ಅದರ ಕ್ರಮವನ್ನು ತನಗೆ ಹೇಳಬೇಕು ಎನ್ನಲು], ಬಾದರಾಯಣಂ ಮಧುರೋಕ್ತಿಯಿಂದ ಅವನಿಪತಿಗೆ ವಿಸ್ತರಿಸಿದಂ ಬುಧಜನ(ಪಂಡಿತರು) ಪ್ರೀತಿಕರಂ ಆಗಲು ಆ ರಾಯನ ಮಹಾಕ್ರತುವನು ಈ ಕ್ರಮದೊಳು= [ಪಂಡಿತರಿಗೆ ಇಷ್ಟವಾಗುವಂತೆ ಆ ರಾಜನ ಮಹಾಯಜ್ಞವನ್ನು ಈ ಕ್ರಮದಲ್ಲಿ ಬಾದರಾಯಣನು ಮಧುರವಾದ ಮಾತುಗಳಿಂದ ಧರ್ಮಜನಿಗೆ ವಿವರಿಸಿದನು].
|
ಪದ್ಯ - ೨೨
[ಸಂಪಾದಿಸಿ]ಆದೊಡೆ ನರೇಂದ್ರ ಕೇಳಾದಿಯುಗದಲ್ಲಿ ವಿಮ | |
ಆದೊಡೆ ನರೇಂದ್ರ ಕೇಳು ಆದಿಯುಗದಲ್ಲಿ= [ಹಾಗಿದ್ದರೆ ಕೇಳು ಕೃತಯುಗದಲ್ಲಿ], ವಿಮಲಾದಿತ್ಯವಂಶದೊಳ್ ಮೆರೆದರು ಇಕ್ಷ್ವಾಕು ಮೊದಲಾದವರ್ ಧರ್ಮ ಕೀರ್ತಿ ಪ್ರತಾಪಂಗಳಿಂದ= [ಸೂರ್ಯ ವಂಶದಲ್ಲಿ ಇಕ್ಷ್ವಾಕು ಮೊದಲಾದವರು ಧರ್ಮ ಕೀರ್ತಿ ಪ್ರತಾಪಂಗಳಿಂದ ಪ್ರಸಿದ್ಧರಾದರು], ಅವರ ಪಾರಂಪರೆಯೊಳು ಮೇದಿನೀಪತಿ ಕರಂಧಮನೆಂಬವಂ= [ಅವರ ಪರಂಪರೆಯಲ್ಲಿ ಚಕ್ರವರ್ತಿ ಕರಂಧಮನೆಂಬವನು], ಸಕಲ ಭೂದೇವಕುಲದೊಳು ಉದ್ದಾಮನು ಎನಿಪ ಅಂಗಿರನನು ಆದರಿಸಿ ವರಿಸಿ= [ಸಕಲ ಭೂಮಿ ದೇವತೆಗಳ ಕುಲದಲ್ಲಿ ಶ್ರೇಷ್ಠನು ಎಂಬ ಹೆಸರುಳ್ಳ ಅಂಗಿರನನು/ ಆಂಗೀರಸನು ಆದರದಿಂದ ಬಯಸಿ/ ಇಷ್ಟಪಟ್ಟು], ಹಯಮೇಧಶತಮಂ ಮಾಡಿ ಸುರಪದವಿಯಂ ಪಡೆದನು= ನೂರು ಅಶ್ವಮೇಧ ಯಾಗ ಮಾಡಿ ಇಂದ್ರತ್ವವನ್ನು ಪಡೆದನು.
|
ಪದ್ಯ - ೨೩
[ಸಂಪಾದಿಸಿ]ಆ ಕರಂಧಮನ ಸುತನಾವಿಕ್ಷಿಯೆಂಬ ವಸು | |
ಆ ಕರಂಧಮನ ಸುತನು ಅವಿಕ್ಷಿಯೆಂಬ ವಸುಧಾಕಾಂತನು= [ಆ ಕರಂಧಮನ ಮಗನು ಅವಿಕ್ಷಿಯೆಂಬ ರಾಜನು], ಆತನಿಂದುದಯಿಸಿ ಮರುತ್ತಂ ತ್ರಿಲೋಕವಿಖ್ಯಾತನಾದಂ= [ಆತನಿಂದ ಹುಟ್ಟಿದ ಮರುತ್ತನು ತ್ರಿಲೋಕವಿಖ್ಯಾತನಾದನು].ಪಗೆಗಳಂ ಗೆಲ್ವೆಡೆಯೊಳು ಅಸುರ್ವಿಡುತಿರಲ್ಕೆ(ಉಸಿರುಬಿಡುವಾಗ) ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದು ಅವಂ ಬೇಕೆಂದಕಡೆ ಸಾಧ್ಯಮಾಗಿ ಬಹುದು= [ಅವನು ಶತ್ರುಗಳನ್ನು ಗೆಲ್ಲುವಾಗ ಬಯಸಿದ ಸ್ಥಳದಲ್ಲಿ (ಕ್ಷಣಮಾತ್ರದಲ್ಲಿ ಎಂದು ಭಾವ)ವಿಶಾಲ ಚತುರಂಗ ಸೈನ್ಯವೇ ಉಸಿರುಬಿಡುವಷ್ಟರಲ್ಲಿ ಹುಟ್ಟಿ ಬರುತ್ತಿತ್ತು], ಈ ಧರೆಯನು ಏಕಾಧೀಪತ್ಯದಿಂದ ಆಳ್ದನು ಅಂದು ಅಮಲಧರ್ಮದ ಮೇರೆ ತಪ್ಪದಂತೆ= [ಈ ಭೂಮಿಯನ್ನು ಏಕಾಧೀಪತ್ಯದಿಂದ ಅವನು ಆಕಾಲದಲ್ಲಿ ಪರಿಶುದ್ಧ ಧರ್ಮದಲ್ಲಿ ಮಿತಿ ತಪ್ಪದಂತೆ ಆಳಿದನು.]
|
ಪದ್ಯ - ೨೪
[ಸಂಪಾದಿಸಿ]ಪ್ರಾಜ್ಯವೈಭವದಿಂದೆ ರಂಜಿಸುವ ಧರೆಯ ಸಾ | |
ಪ್ರಾಜ್ಯ(ಶ್ರೇಷ್ಠ)ವೈಭವದಿಂದೆ ರಂಜಿಸುವ ಧರೆಯ ಸಾಮ್ರಾಜ್ಯಧಿಪತ್ಯದ ಮಹಾಧನಂ= [ಅತ್ಯುತ್ತಮ ವೈಭವದಿಂದ ಶೋಭಿಸುವ ಭೂಮಿಯ ಸಾಮ್ರಾಜ್ಯ ಆಧಿಪತ್ಯದಲ್ಲಿರುವ ದೊಡ್ಡ ಸಂಪತ್ತು], ಸುರವಿಪ್ರ ಭೋಜ್ಯಮ್ ಅಪ್ಪವೊಲು= [ಸುರರಿಗೂ ವಿಪ್ರರಿಗೂ ಸ್ವೀಕರಿಸಲು ಆಗುವಂತೆ], ಆ ನೃಪಾಲಕಂ ತುರುಗಮೇಧ ಆಧ್ವರದ ಮಾಳ್ಕೆಗೆ ಎಳಸಿ=[ಆ ರಾಜನು ಅಶ್ವಮೇಧ ಆಧ್ವರವನ್ನು ಮಾಡಲು ಉದ್ದೇಶಪಟ್ಟು ] ಯಾಜ್ಯಯಾಜನಕೆ ವರಿಸುಪೊಡೆ ಅಂಗಿರನ ಸುತಂ ಪೂಜ್ಯನು ಎಮ್ಮ ಈ ಕುಲದವರ್ಗೆ ಎಂಬ ನಿಶ್ಚಯದೊಳು=[ಯಜ್ಞಯಾಜನ ಮಾಡಿಸಲು ಒಪ್ಪಿದರೆ ಅಂಗಿರನ ಮಗ ಬ್ರಹಸ್ಪತಿಯು ಪೂಜ್ಯನು ತಮ್ಮ ಸೂರ್ಯವಂಶದವರಿಗೆ ಎಂದು ನಿಶ್ಚಯಿಸಿ], ಆಜ್ಯಪರ್ಗೆ(ದೇವತೆಗಳಿಗೆ) ಆಚಾರ್ಯನಾಗಿ ಇಹ ಬೃಹಸ್ಪತಿಯ ಪೊರೆಗೆ ಬಂದು ಇಂತೆಂದನು= [ದೇವತೆಗಳಿಗೆ ಆಚಾರ್ಯನಾಗಿ ಇರುವ ಬೃಹಸ್ಪತಿಯ ಬಳಿಗೆ ಬಂದು ಹೀಗೆ ಹೇಳಿದನು].
|
ಪದ್ಯ - ೨೫
[ಸಂಪಾದಿಸಿ]ಎಲೆ ಬೃಹಸ್ಪತಿ ಮತ್ಪಿತಾಮಹಂ ಕ್ರತುಗಳ್ಗೆ | |
ಎಲೆ ಬೃಹಸ್ಪತಿ ಮತ್ ಪಿತಾಮಹಂ ಕ್ರತುಗಳ್ಗೆ ಸಲೆ ನಿನ್ನ ತಾತನಂ ವರಿಸಿರ್ವನು ಅದರಿಂದೆ ಕುಲಧರ್ಮಮಂ ಬಿಡದೆ ನೀನೆನಗೆ ಯಜ್ಞಮಂ ಮಾಡಿಸು ಎನಲು= [ಮಾನ್ಯ ಬೃಹಸ್ಪತಿ ನನ್ನ ಪಿತಾಮಹ/ ಅಜ್ಜನು ಯಜ್ಞಗಳಿಗೆ ಹೆಚ್ಚಾಗಿ ನಿನ್ನ ತಾತನಾದ ಆಂಗೀರಸನನ್ನು ಅವಲಂಬಿಸಿದ್ದನು. ಆದ್ದರಿಂದ ಕುಲಧರ್ಮವನ್ನು ಬಿಡದೆ ನೀನು ನನಗೆ ಯಜ್ಞವನ್ನು ಮಾಡಿಸು ಎನ್ನಲು] ಅವಂವನೊಪ್ಪಲು ಬಲರಿಪು ಕನಲ್ದು ಮಾನವರ ಮಖಯಾಜನಂ=[ಅವನು ಒಪ್ಪಲು, ಬಲರಿಪು (ಬಲಿಯ ಶತ್ರು?)= [ಇಂದ್ರನು ಸಿಟ್ಟುಗೊಡು ಮಾನವರ ಯಜ್ಞ ಯಾಜನವು], ಪೊಲೆ ಸುರರ್ಗುಚಿತಮಲ್ಲೆಂದು ಗುರುವಂ ತಡೆದು ನಿಲಿಸಲು ಆ ನೃಪತಿ ಭಂಗಿತನಾಗಿ ಬರುತೆ ನಾರದಮುನಿಪನಂ ಕಂಡನು= [ ಸುರರಿಗೆ ಉಚಿತವಲ್ಲ, ತ್ಯಾಜ್ಯವು, ಎಂದು ಗುರುವನ್ನು ತಡೆದು ನಿಲ್ಲಸಲು ಆ ರಾಜನು ಅವಮಾನಿತನಾಗಿ ಬರುತ್ತಿರಲು ನಾರದಮುನಿಯನ್ನು ದಾರಿಯಲ್ಲಿ ಕಂಡನು].
|
ಪದ್ಯ - ೨೬
[ಸಂಪಾದಿಸಿ]ದುಗುಡದಿಂದಾನೃಪಂ ನಾರದಂಗೆರಗೆ ನಸು | |
ದುಗುಡದಿಂದ ಆ ನೃಪಂ ನಾರದಂಗೆ ಎರಗೆ= [ದುಃಖದಿಂದ ಆ ರಾಜನು ನಾರದನಿಗೆ ನಮಿಸಲು], (ಅವನು) ನಸುನುಗುತ ಇದೇನು ಎಲೆ ರಾಯ ನಿನಗೆ ದುಮ್ಮಾನಂ ಎನೆ=[ಅವನು ನಸುನುಗುತ ಇದೇನು ಎಲೆ ರಾಯ ನಿನಗೆ ಏನಾಗಿದೆ, ದುಃಖಿತನಾಗಿರುವೆ ಎನಲು], ಮಿಗೆ ಬೃಹಸ್ಪತಿ ತನಗೆ ಮಾಡಿದವಮಾನಮಂ ಪೇಳ್ದು ಅತಿವಿರಕ್ತಿಯಿಂದೆ= [ಬೃಹಸ್ಪತಿ ತನಗೆ ಬಹಳ ಮಾಡಿದವಮಾನವನ್ನು ಹೇಳಿ, ಅತಿಯಾದ ನಿರಾಸೆ- ವಿರಕ್ತಿಯಿಂದ]. ನಗರಮಂ ಪುಗದೆ ಅರಣ್ಯದೊಳು ಉಗ್ರತಪದಿಂದೆ ಜಗದೊಳು ಉತ್ಕೃಷ್ಟ ಪದಮಂ ಪಡೆವೆನೆನೆ=[ತನ್ನ ನಗರಕ್ಕೆ ಹೋಗದೆ ಅರಣ್ಯದಲ್ಲಿ ಉಗ್ರತಪದಿಂದ ಜಗದಲ್ಲಿ ಉತ್ಕೃಷ್ಟ ಪದವನ್ನು ಪಡೆವೆನು ಎನ್ನಲು], ಕೇಳ್ದು ವಿಗಡಮುನಿವರನು ಆಗಳಾ ಮಹೀಪಾಲನಂ ಸಂತೈಸುತ ಇಂತೆಂದನು= [ಆಗ ಆ ಪ್ರಚಂಡ ಮುನಿಸ್ರೇಷ್ಠನು ಕೇಳಿ ಮಹೀಪಾಲನಿಗೆ ಸಂತೈಸುತ್ತಾ ಹೀಗೆ ಹೇಳಿದನು ].
|
ಪದ್ಯ - ೨೭
[ಸಂಪಾದಿಸಿ]ಜನಪ ನಿನಗೆಚ್ಚರಿಪೆನಾದಿಯೊಳ್ ಪಂಕಜಾ | |
ಜನಪ ನಿನಗೆ ಎಚ್ಚರಿಪೆನು= [ರಾಜನೇ ನಿನಗೆ ಎಚ್ಚರಿಕೆಯಿಂದ ಗಮನಿಸಬೇಕಾದ ಹೊಸ ವಿಷಯವನದ್ನು ಹೇಳುವೆನು], ಆದಿಯೊಳ್ ಪಂಕಜಾಸನನ ಮಾನಸಪುತ್ರನಾದ ಅನಂಗಿರನು ಅವನ ತನುಜರ್ ಬೃಹಸ್ಪತಿಯುಂ ಇನ್ನೊರ್ವ ಸಂವರ್ತನೆಂಬವಂ= [ಹಿಂದೆ ಕೃತಯುಗದಲ್ಲಿ ಬ್ರಹ್ಮನ ಮಾನಸಪುತ್ರನಾದ ಅನಂಗಿರನು ಜನಿಸಿದನು., ಅವನ ಮಕ್ಕಳು ಬೃಹಸ್ಪತಿಯು ಮತ್ತೊಬ್ಬ ಸಂವರ್ತನೆಂಬುವವನು] ಬಳಿಕವರ್ಗೆ ದಿನದಿನಕೆ ದಾಯಾದಮತ್ಸರಂ ಪೆರ್ಚುತಿರೆ= [ಬಳಿಕ ದಿನಗಳದಂತೆ ಅವರಲ್ಲಿ ದಿನದಿನಕ್ಕೂ ದಾಯಾದಮತ್ಸರವು ಹೆಚ್ಚಾಗಲು] ಮನೆವಾಳ್ತೆಯೊಳ್ ಪಸುಗೆಯಂ ಕುಡದೆ ಗುರು ತಗುಳ್ದು(ಜಗಳವಾಗಿ-ಹೊರತಳ್ಳಿ) ಅನುಜನಂ ಪೊರಮಡಿಸೆ= [ಮನೆಯ ಆಸ್ತಿಯಲ್ಲಿ ಹಿಸೆಯನ್ನು ಕೊಡದೆ ಗುರು ಬೃಹಸ್ಪತಿಯು ಮನೆಯಿಂದ ತಮ್ಮನನ್ನು ಹೊರತಳ್ಳಲು], ಕಾಶೀಯೊಳ್ ಪೋಗಿ ಇರ್ಪನು ಅತನು ಅವಧೂತನಾಗಿ= ಅವನು ಹೋಗಿ ಕಾಶೀಯಲ್ಲಿ ಅವಧೂತನಾಗಿದ್ದಾನೆ.
|
ಪದ್ಯ - ೨೮
[ಸಂಪಾದಿಸಿ]ಆತನಂ ವರಿಸಿದೊಡೆ ಯಜ್ಞ ಮಾದಪುದು ನಿನ | |
ಆತನಂ ವರಿಸಿದೊಡೆ ಯಜ್ಞ ಮಾದಪುದು ನಿನಗೇತಕೆ ಇನ್ನು ಎಣಿಕೆ=[ಆತನನ್ನು (ಸಂವರ್ತನನ್ನು) ನೀನು ಒಪ್ಪಿಸಿ ನಿನ್ನ ಯಾಜಕನನ್ನಾಗಿ ಮಾಡಿಕೊಂಡರೆ ಯಜ್ಞವು ಆಗುವುದು; ನಿನಗೆ ಇನ್ನು ಯೋಚನೆ ಏತಕ್ಕೆ?] ನಡೆ ಕಾಶಿಕೆ(ಗೆ) ಆ ಪಟ್ಟಣದೊಳು ಆ ತಪೋನಿಧಿ ನಿನ್ನ ಕಣ್ಗೆ ಗೋಚರಿಸದಿರೆ=[ನಡೆ ಕಾಶಿಗೆ, ಆ ಪಟ್ಟಣದೊಳು ಆ ತಪೋನಿಧಿ ನಿನ್ನ ಕಣ್ಣಿಗೆ ಕಾಣದಿದ್ದರೆ] ಪೊಳಲ ಪೆರ್ಬಾಗಿಲೊಳಗೆ= [ಪಟ್ಟಣದ ದೊಡ್ಡ ಬಾಗಿಲಲ್ಲಿ], ಘಾತಿಯಾಗಿರ್ದ ಪೆಣನಂ ಬಿಸುಡಿಸಿ ಅದನು ಅಖಿಳ ಜಾತಿಗಳ್ ತುಳಿದು ಕೊಂಡು ಎಡೆಯಾಡುತಿರ್ಪುವು=(ಪೆಟ್ಟಾಗಿ ಬಿದ್ದ ಹೆಣ್ಣವನ್ನು ಹಾಕಿದ್ದರೆ ಅದನ್ನು ಎಲ್ಲಾ ಜಾತಿಜನರೂ, ದಾಟಿಕೊಂಡು ಓಡಾಡುವರು,] ಅವಧೂತನು ಆಗಿರ್ದವಂ ಕಂಡು ತೊಲಗಿದೊಡೆ=[ಅವಧೂತನು ಆಗಿದ್ದವನು ಅದನ್ನು ಕಂಡು ಹಿಂತಿರುಗಿ ಹೋದರೆ] ಅರಿದು ಬೆಂಬಿಡದೆ ಪೋಗೆಂದನು= ಅದರಿಂದ ಇವನು ಸಂವರ್ತ ಅವಧೂತನೆಂದು ಅರಿತುಕೊಂಡು ನೀನಿ ಬೆನ್ನುಹತ್ತಿ ಹೋಗಹೋಗಬೇಕು.
|
ಪದ್ಯ - ೨೯
[ಸಂಪಾದಿಸಿ]ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀಂ ಬರೆ ಕಂಡು | |
ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀಂ ಬರೆ ಕಂಡು=[ಹೊಕ್ಕಲ್ಲಿ ಹೊಕ್ಕು, ಹೋದಲ್ಲಿ ಹೋಗಿ, ಬೆನ್ನುಬಿಡದೆ ನೀನು ಬರಲು ಕಂಡು,] ಸಿಕ್ಕು (ತೊಂದರೆ) ಇದು ಎತ್ತಣದೆಂದು ಬಯ್ದಪಂ ಪೊಯ್ದಪಂ ಮುಕ್ಕಳಿಸಿ ಮೇಲೆ ಉಗುಳ್ದಪಂ=[ಈ ಕಾಟ-ತೊಂದರೆ ಇದೆಲ್ಲಿಂದ ಬಂದಿತು ಎಂದು ಬಯ್ಯುವನು, ಹೊಡೆಯುವನು, ಮುಕ್ಕಳಿಸಿ ನಿನ್ನಮೇಲೆ ಉಗುಳುವನು,] ಏನೇನು ಆದೊಡಂ ಮಾಡುವಂ ನೀನದಕ್ಕೆ ಹೆಕ್ಕಳಿಸಿ ಹಿಮ್ಮೆಟ್ಟದೆ ಇರ್ದೊಡೆ=[ಏನೇನಾದರೂ, ಏನುಮಾಡಿದರೂ, ನೀನು ಅದಕ್ಕೆ ಬೇಸರಪಟ್ಟು ಹಿಮ್ಮೆಟ್ಟದೆ ಇದ್ದರೆ,] ಆರು ಒರೆದರು ಎನ್ನ ಇಕ್ಕೆಯಂ(ಇರ್ಕೆಯಂ) ಪೇಳೆಂದು ಅವಂ ಕೇಳ್ದೊಡೆ ಎನ್ನನು ಇದಿರಿಕ್ಕಿ ನಾರದನು ಉರುಪಿ ತಾಂ ಕಿಚ್ಚಿನೊಳ್ ಬಿದ್ದನೆಂದುಸಿರ್ ಪೋಗೆಂದನು= ನನ್ನ ಇರುವಿಕಯನ್ನು ಯಾರು ಹೇಳಿದರು, ಹೇಳೆಂದು ಅವನು ಕೇಳಿದರೆ, ನನ್ನನು ಎದುರುಮಾಡಿ, ನಾರದನು ಹೇಳಿ ತಾನು ಬೆಂಕಿಯಲ್ಲಿ ಬಿದ್ದನೆಂದು ಹೇಳಿಬಿಡು, ನೀನು ಕಾಶಿಗೆ ಹೋಗು ಎಂದನು.
|
ಪದ್ಯ - ೩೦
[ಸಂಪಾದಿಸಿ]ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ | |
ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ ಭೂರಮಣನಲ್ಲಿಂದೆ ಬೀಳ್ಕೊಂಡು= [ನಾರದನ ಹಿತಚನವನ್ನು ಕೇಳಿ ಸಂತೋಷದಿಂದ ರಾಜನು ಅಲ್ಲಿಂದ ನಾರದನನ್ನು ಬೀಳ್ಕೊಂಡು,] ಶಶೀಮೌಳಿ= [ಶಿವನು ಇರುವ,] ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳ್ಗಾತ್ಮಸಾಯುಜ್ಯಮೀವ
ಭೂರಿದುರಿತಂಗಳಂ ಕಂಸಮಾತ್ರದೊಳೆ ಸಂಹಾರಮಂ ಮಾಳ್ಪ=[ ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳಿಗೆ ಆತ್ಮಸಾಯುಜ್ಯಕೊಡುವ ದೊಡ್ಡ ಪಾಪಗಳನ್ನು ಅವನನ್ನು ಕಂಡಮಾತ್ರದಲ್ಲಿ ಪರಿಹಾರ ಮಾಡುವ], ನಿಖಿಳಪ್ರಳಯಬಾಧೆಗಳ್ ದೂರಮೆನಿಪ ವಿಮುಕ್ತ ಕಾಶಿಗೈತಂದು= [ಎಲ್ಲಾ ದೊಡ್ಡ ಬಾಧೆಗಳನ್ನು ದೂರಸರಿಸುವ, ಪಾಪವಿಮುಕ್ತಿ ಮಾಡುವ,] [ಶಿವನು ಇರುವ,] ಕಾಶಿಗೈತಂದು ವಿಶ್ವೇಶಂಗೆ ಪೊಡಮಟ್ಟನು= [ಶಿವನು ಇರುವ,ಕಾಶಿಗೆ ಬಂದು ವಿಶ್ವೇಶ್ವರ ದೇವನಿಗೆ ನಮಸ್ಕರಿಸಿದನು].
|
ಪದ್ಯ - ೩೧
[ಸಂಪಾದಿಸಿ]ಬಳಿಕಲ್ಲಿ ನಾರದಂ ಪೇಳ್ದಂತೆ ಭೂವರಂ | |
ಬಳಿಕಲ್ಲಿ ನಾರದಂ ಪೇಳ್ದಂತೆ ಭೂವರಂ ಪೊಳಲ ಪೆರ್ಬಾಗಿಲ್ಗೆ ಕುಣಪಮಂ ತಂದಿರಿಸಲು ಉಳಿಯದೆ ಎಡೆಯಾಡುತಿರ್ದುದು ಜನಂ= [ಬಳಿಕ ನಾರದನು ಹೇಳಿದಂತೆ ರಾಜನು ಕಾಶಿನಗರದ ಬಾಗಿಲಲ್ಲಿ ಹೆಣವನ್ನು ತಂದು ಇಟ್ಟಿರಲು, ಜನರು ಅಲ್ಲಿ ನಿಲ್ಲದೆ ನಡೆದಾಡುತ್ತಿದ್ದರು,] ಕಂಡು ಸಂವರ್ತನು ಅತ್ತಲೆ ತೊಲಗಲು
ಬಳಿವಿಡಿದು ಪೋದೊಡೆ ಅವನೀಶನಂ= ಆದರೆ ಶವವನ್ನು ಕಂಡು ಸಂವರ್ತನು ಹಿಂತಿರುಗಿ ಹೋಗಲು,ರಾಜನು ಹಿಂಬಾಲಿಸಿ ಹೋಗಲು,] ಬೈದು ಪೊಯ್ದು ಅಳಲಿಸಿ ಕನಲ್ದು ಉಗುಳ್ದು ಓಕರಿಸಿ ನೂಕಲು ಅದಕೆ ಅಳುಕದೆ ಇರ್ದೊಡೆ= ಅವನನ್ನು ಬೈದು, ಹೊಡೆದು,ನೋಯಿಸಿ, ಸಿಟ್ಟುಮಾಡಿ,ಕೇಕರಿಸಿ ಉಗುಳಿ,ನೂಕಲು, ಅದಕ್ಕೆ ಭಯಪಡದಿರಲು], ತಾನು ಅದು ಆರೆಂದು ಬಂದೆ ನೀನು ಎಂದು ನೃಪನಂ ಕೇಳ್ದನು= ನೀನು ತನ್ನನ್ನು ಯಾರು ಎಂದು ತಿಳಿದು ಬಂದೆ ಎಂದು ಮರುತ್ತ ರಾಜನನ್ನು ಮುನಿ ಕೇಳಿದನು.
|
ಪದ್ಯ - ೩೨
[ಸಂಪಾದಿಸಿ]ಸುರಪುರೋಹಿತನನುಜನಂಗಿರನ ಸೂನು ಮುನಿ | |
ಸುರಪುರೋಹಿತನ ಅನುಜನು ಅಂಗಿರನ ಸೂನು ಮುನಿ ವರಮೌಳಿ ಸಂವರ್ತನೆಂದು ಅರಿದು ಬಂದು ನಿನ್ನ ಇರವಂ ಪರೀಕ್ಷಿಸಿದೆನು ಎಂದು ನೃಪನು ಉಸಿರಲ್=[ದೇವತೆಗಳ ಪುರೋಹಿತನ ಸೋದರ ಅಂಗಿರನ ಮಗ ಮುನಿ ಶ್ರೇಷ್ಠನು ಸಂವರ್ತನೆಉ ಎಂದು ಭಾವಿಸಿ ಬಂದು ನಿನ್ನ ಇರುವಿಕೆಯನ್ನು ಪರೀಕ್ಷಿಸಿದೆನು ಎಂದು ರಾಜನು ಹೇಳಲು], ಅವರಾರ್ ನಿನಗೆ ಪೇಳ್ದರು ಎನಲು ಪರಮರ್ಷಿನಾರದಂ ತನಗೆ ಒರೆದು ಕೂಡೆ ತಾನು ಉರೀಯೊಳ್ ಪ್ರವೇಶಿಸಿದನು ಎನೆ= [ಯಾರವರು ನಿನಗೆ ಹೇಳಿದರು ಎನಲು, ಪರಮರ್ಷಿ ನಾರದನು ತನಗೆ ಹೇಳಿ ಕೂಡಲೆ ತಾನು ಬೆಂಕಿಯಲ್ಲಿ ಪ್ರವೇಶಿಸಿದನು ಎನ್ನಲು,] ತಾಪಸಂ ತಿಳಿದು ಕರುಣದಿಂದೇತಕ್ಕೆತಂದೆ ನೀನಾರೆನ್ನೊಳಹ ಕಜ್ಜಮೇನೆಂದನು= ತಪಸ್ವಿಯು ವಿಷಯ ತಿಳಿದು ಕರುಣದಿಂದ ಏತಕ್ಕೆ ನನ್ನ ಬಳಿ ಬಂದೆ ನೀನಾರು ನನ್ನಲ್ಲಿ ಆಗಬೇಕಾದ ಕಾರ್ಯವೇನು ಎಂದನು.
|
ಪದ್ಯ - ೩೩
[ಸಂಪಾದಿಸಿ]
|
ಆದೊಡೆ ಮರುತನು ನಾನು ಆ ಅವಿಕ್ಷಿನೃಪಸುತಂ=[ಹಾಗಿದ್ದರೆ ಹೇಳುವೆನು, ನಾನು ಮರುತನು ಆ ಆವಿಕ್ಷಿನೃಪನ ಮಗನು,] ಮೇದಿನಿಯೊಳ್ ಎನಗೆ ಹಯಮೇಧಮಂ ಮಾಡಿಸೆಂದು ಆದರಿಸಿ ನಿಮ್ಮಣ್ಣನಂ ಕೇಳ್ದೊಡೆ ಆತಂ ತಿರಸ್ಕರಿಸಿದೊಡೆ=[ಭೂಮಂಡಲದಲ್ಲಿ ನನಗೆ ಅಶ್ವಮೇಧ ಯಾಗವನ್ನು ಮಾಡಿಸೆಂದು ಆದರದಿಂ ನಿಮ್ಮಣ್ಣನಾದ ಬೃಹಸ್ಪತಿಯನ್ನು ಕೇಳಿದಾಗ ಆತನು ತಿರಸ್ಕರಿಸಿದನು, ಅದರಿಂದ,] ನಿನ್ನನು ಆ ದೇವಮುನಿ ಪೇಳ್ದೊಡೆ ಐತಂದೆನು=[ನೀನು ನನಗೆ ಅಶ್ವಮೇಧ ಯಾಗವನ್ನು ಮಾಡಿಸುವನೆಂದು ಆ ದೇವಮುನಿ ಹೇಳಿದ್ದರಿಂದ ಇಲ್ಲಿಗೆ ಬಂದೆನು;] ಎನ್ನಧ್ವರೋದಯಕೆ ನೀನಲ್ಲದನ್ಯರಂ ಕಾಣೆನೆಂದಾ ದಿನಪಕುಲದರಸನಂದು ಸಂವರ್ತನಂ ಬೇಡಿಕೊಳಲಿಂತೆಂದನು= ನನ್ನು ಯಾಗಮಾಡಿಸುವುದಕ್ಕೆ ನೀನಲ್ಲದೆ ಬೇರೆಯವರನ್ನು ಕಾಣೆನು, ಎಂದು ದಿನಪಕುಲದರಸನಾದ ಮರುತ್ತನು ಸಂವರ್ತನನ್ನು ಬೇಡಿಕೊಳ್ಳಲು ಅವನು ಹೀಗೆ ಹೇಳಿದನು.
|
ಪದ್ಯ - ೩೩
[ಸಂಪಾದಿಸಿ]ಲೇಸಾದುದೆಲೆ ರಾಯ ನಿನ್ನ ಯಜ್ಞಕ್ಕೆ ತಾ | |
ಲೇಸಾದುದು ಎಲೆ ರಾಯ ನಿನ್ನ ಯಜ್ಞಕ್ಕೆ ತಾನು ಓಸರಿಸುವವನಲ್ಲ= [ರಾಜನೇ ಒಳ್ಳಯದು ನಿನ್ನ ಯಜ್ಞಕ್ಕೆ ತಾನು ನಿರಾಕರಿಸುವವನಲ್ಲ,] ಪುರುಡಿಂ(ಪೈಪೋಟಿ, ಹೊಟ್ಟೆಕಿಚ್ಚು) ಮಮಾಗ್ರಜಂ ವಾಸವನ(ಇಂದ್ರ) ಮುಖದಿಂದೊಡಂಬಡಿಸಿ ಮಖಕೆ ತಾನಧ್ಯಕ್ಷನಪ್ಪೆನೆಂದು ಆಶೆಯಿಂ ಕೇಳ್ದೊಡೆ ಏಗೈವೆ ನೀಂ ಪೇಳೆನಲ್ = [ಪೈಪೋಟಿ ಮತ್ತು ಹೊಟ್ಟೆಕಿಚ್ಚಿನಿಂದ ನನ್ನ ಅಣ್ಣನು ಇಂದ್ರನ ಮೂಲಕ ಒಪ್ಪಿಗೆಪಡೆದು ಯಜ್ಞಕ್ಕೆ ತಾನು ಅಧ್ಯಕ್ಷನು ಆಗುವೆನೆಂದು ಆಸೆಪಟ್ಟು ಕೇಳಿದರೆ ಏನು ಮಾಡಡುವೆ? ನೀನು ಹೇಳು ಎನಲು,] ಭೂಸುರನ ಕೊಂದಗತಿ ತನಗಹುದು ನಿಮ್ಮಂ ಪ್ರ ಯಾಸದಿಂ ಬಿಟ್ಟೊಡೆಂದರಸಂ ಪ್ರತಿಜ್ಞೆಯಂ ಮಾಡಲವನಿಂತೆಂದನು= ತಾನು ಅದಕ್ಕೆ ಒಪ್ಪಿ ನಿಮ್ಮನ್ನು ಒತ್ತಾಯಕ್ಕೆ ಮಣಿದು ಆ ಕಷ್ಟದಿಂದ ಬಿಟ್ಟರೆ, ಬ್ರಾಹ್ಮಣನನ್ನು ಕೊಂದಗತಿ ತನಗೆ ಬರಲಿ, ಎಂದು ಪ್ರತಿಜ್ಞೆಯನ್ನು ಮಾಡಲು ಅವನು ಹೀಗೆ ಹೇಳಿದನು.
|
ಪದ್ಯ - ೩೫
[ಸಂಪಾದಿಸಿ]ಯಾಜಕಂ ತಾನಪ್ಪೆನಧ್ವರಕೆ ನೀನಿನ್ನು | |
ಯಾಜಕಂ ತಾನಪ್ಪೆನು ಅಧ್ವರಕೆ=[ಯಜ್ಞಕ್ಕೆ ತಾನು ಯಾಜಕನಾಗುವೆನು,] ನೀನಿನ್ನು ರಾಜಿಪ ಹಿಮಾಲಯದೊಳ್ ಎಸೆವ ರಜಾತಾದ್ರಿಯೊಳ್ ತೇಜೋಮಯಂ ಸದಾಶಿವನಿರ್ಪನು= [ನೀನು ಇನ್ನು ಹಿಮಾಲಯದಲ್ಲಿ ಪ್ರಕಾಶಮಾನವಾಗಿ ತೋರುವ ರಜಾತಾದ್ರಿಯಲ್ಲಿ ತೇಜೋಮಯನಾದ ಸದಾಶಿವನು ಇರುವನು,] ಆತನ ಪದಾಬ್ಜಮಂ ಪೋಗಿ ಕಂಡು ಪೂಜೆಗೈದೊಡೆ ಕನಕರಾಶಿಗಳನು ಇತ್ತಪಂ= [ಹೋಗಿ ಆ ಶಿವನ ಪಾದಕಮಲವನ್ನು ಕಂಡು ಪೂಜೆಮಾಡಿದರೆ, ಕನಕರಾಶಿಗಳನ್ನು ಕೊಡುವನು,] ಮೂಜಗಂ ತಣಿವಂತೆ ವರಮಖಂ ನಡೆವುದೆನಲು=[ಮೂರು ಲೋಕಗಳೂ ತೃಪ್ತಿ ಪಡುವಂತೆ ಶ್ರೇಷ್ಠಯಜ್ಞವು ನೆಡೆಯುವುದು ಎನ್ನಲು,] ಆ ಜನಪನಲ್ಲಿಗೆ ಐತಂದು ಗಿರಿಜೇಶನಂ ಪ್ರಾರ್ಥಿಸಿದನು ಅರ್ತಿಯಿಂದೆ= ಆರಾಜನು ಅಲ್ಲಿಗೆ ಬಂದು ಶಿವನನ್ನು ಪ್ರಾರ್ಥಿಸಿದನು.
|
ಪದ್ಯ - ೩೬
[ಸಂಪಾದಿಸಿ]ತರುಣೇಂದುಮೌಳಿಯಂ ಪ್ರಾರ್ಥಿಸಿದೊಡಿತ್ತನತಿ | |
ತರುಣೇಂದುಮೌಳಿಯಂ(ಬಾಲಚಂದ್ರನನ್ನು ಶಿರದಲ್ಲಿಧರಿಸಿದವ- ಶಿವ) ಪ್ರಾರ್ಥಿಸಿದೊಡೆ ಇತ್ತನು ಅತಿ ಕರುಣದಿಂದ ಅಪರಿಮಿತ ವಸ್ತುವಂ ಬಳಿಕ ಹಿಮಗಿರಿತಟದೊಳ ಆ ನೃಪಂ ಕಟ್ಟಿಸಿದನು ಅಧ್ವರದ ಶಾಲೆಯಂ ಕನಕದಿಂದೆ ವರವೈದಿಕ ಪ್ರಮಾಣದೊಳಂದು= [ರಾಜನು ಶಿವನನ್ನು ಪ್ರಾರ್ಥಿಸಿದಾಗ ಅವನು ಅತಿ ಕರುಣದಿಂದ ಅಪರಿಮಿತ ವಸ್ತುಗಳನ್ನು ಕೊಟ್ಟನು. ಬಳಿಕ ಹಿಮಗಿರಿಯ ತಟದಲ್ಲಿ ಆ ರಾಜನು ವೈದಿಕ ಪ್ರಮಾಣದಲ್ಲಿ ಕನಕದಿಂದ ಯಜ್ಞಶಾಲೆಯನ್ನು ಕಟ್ಟಿಸಿದನು,] ವಿಪ್ರರಂ ಕರೆಸಿ ಸಂವರ್ತನಂ ಕೂಡಿಕೊಂಡು ತ್ಸವದೊಳರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ವರ್ಯವಿಭವದಿಂದೆ= [ಬ್ರಾಹ್ಮಣರನ್ನು ಕರೆಸಿ ಸಂವರ್ತನನ್ನು ಕೂಡಿಕೊಂಡು ವಿಜ್ರಂಭಣೆಯಿಂದ ಅರಸನು ಮಹಾಯಜ್ಞ ಪ್ರಾರಂಭೋತ್ಸವದಲ್ಲಿ ಐಶ್ವರ್ಯರಾಶಿಯನ್ನು ಹೊಂದಿ ಮೆರೆದನು.]
|
ಪದ್ಯ - ೩೭
[ಸಂಪಾದಿಸಿ]ಕೇಳ್ದಂ ಬೃಹಸ್ಪತಿ ಮರುತ್ತನ ಮಖೋದಯವ | |
ಕೇಳ್ದಂ ಬೃಹಸ್ಪತಿ ಮರುತ್ತನ ಮಖೋದಯವ ನಾಳ್ದನತಿಚಿಂತೆಯೊಳ್=[ ಬೃಹಸ್ಪತಿಯು ಮರತ್ತನಿಗೆ ಸಂವರ್ತ ಯಾಜಕನಾಗಿ ಯಜ್ಞ ಆರಂಬವಾಗುವುದನ್ನು ಕೇಳಿದನು; ಅದರಿಂದ ಅತಿಯಾದ ಚಿಂತೆಯನ್ನು ಹೊಂದಿದನು, ಏಕೆಂದರೆ], ಮುಂದೆ ಧನಯುತನಾಗಿ ಬಾಳ್ದಪಂ ಸಂವರ್ತನೆಂಬ ಪುರುಡಿಂದ (ಹೊಟ್ಟೆಕಿಚ್ಚಿನಿಂದ) ಉಬ್ಬೆಗಂಬಟ್ಟು(ಉದ್ವೇಗಹೊಂದಿ) =[ಮುಂದೆ ಸಂವರ್ತನು ಧನಯುತನಾಗಿ ಬಾಳುವನೆಂಬ ಹೊಟ್ಟೆಕಿಚ್ಚಿನಿಂದ ಉದ್ವೇಗಹೊಂದಿ,] ದಿವಿಜಪತಿಗೆ ಪೇಳ್ದೊಡೆ ಅವನು ಅಗ್ನಿಯಂ ಕಳಿಪಿದೊಡೆ=[ಇಂದ್ರನಿಗೆ ಹೇಳಿದಾಗ ಅವನು ಅಗ್ನಿಯನ್ನು ಮರುತ್ತನ ಬಳಿಗೆ ಕಳಿಸಿದನು; ಆಗ,] ದೀಕ್ಷೆಯಂ ತಾಳ್ದು ಎಸೆವ ಭೂಪನೆಡೆಗೆ ಐತಂದು ವೃತ್ರನಂ ಸೀಳ್ದವಂ ತನ್ನೊಳು ಆಡಿದ ಮಾತನು ಇಂತೆಂದು ವಿವರಿಸಿದನು ಆ ಕೃಶಾನು (ಅಗ್ನಿ)= [ದೀಕ್ಷೆಯನ್ನು ಹೊಂದಿ ಶೋಭಿಸುತ್ತರುವ ರಾಜನ ಹತ್ತಿರ ಬಂದು ವೃತ್ರನನ್ನು ವಜ್ರಾಯುಧದಿಂದ ಸೀಳಿದ ಇಂದ್ರನು ತನ್ನೊಡನೆ ಹೇಳಿದ ಮಾತನ್ನು ಅಗ್ನಿಯು ಈ ರೀತಿಯಲ್ಲಿ ವಿವರಿಸಿದನು]
|
ಪದ್ಯ - ೩೮
[ಸಂಪಾದಿಸಿ]ರಾಯ ಕೇಳಿಂದ್ರನಾಡಿದಮಾತನೊರೆವೆನಾ | |
ರಾಯ ಕೇಳು ಇಂದ್ರನಾಡಿದ ಮಾತನು ಒರೆವೆ ನಾ, ನೀ ಯಜ್ಞಮಂ ಬೃಹಸ್ಪತಿಯ ಕೈಯಿಂ ತೊಡಗಿಸು= [ರಾಜನೇ ಕೇಳು ನಾನು ಇಂದ್ರನು ಆಡಿದ ಮಾತನ್ನು ಹೇಳುತ್ತೇನೆ. ನೀನು ಯಜ್ಞವನ್ನು ಬೃಹಸ್ಪತಿಯ ಕೈಯಿಂದ ಮಾಡಿಸು] ಆಯಸಂಬಟ್ಟು ಸಂವರ್ತನಂ ವರಿಸಬೇಡ ಎನ್ನ ಆಜ್ಞೆಯಂ ಮೀರ್ದೊಡೆ ವಾಯದಿಂದ ಅಧ್ವರಂ ಕೆಡುವಂತೆ ಮಾಡುವೆನು ಅಪಾಯಮಂ ನಿನಗೆ ಎಂದು ಪೇಳ್ದಂ ಸುರಪನು=[ಪ್ರಯಾಸಪಟ್ಟು ಸಂವರ್ತನನ್ನು ಸೇರಿಸಿಕೊಳ್ಳಬೇಡ ನನ್ನ ಆಜ್ಞೆಯನ್ನು ಮೀರಿದರೆ ವಿರೋಧದಿಂದ ಯಜ್ಞವು ಕೆಡುವಂತೆ ಮಾಡುವೆನು. ನಿನಗೆ ಅಪಾಯವನ್ನು ಎಂದು ಇಂದ್ರನು ಹೇಳಿದ್ದಾನೆ], ಎಂಬ ವಾಯುಸಖನಂ ನೋಡಿ ನಸುನಗುತೆ ವಿನಯದಿಂ ಭೂಪಾಲನು ಇಂತೆಂದನು= [ಎಂಬ ಅಗ್ನಿಯನ್ನು ನೋಡಿ ನಸುನಗುತ್ತಾ ವಿನಯದಿಂದ ರಾಜನು ಹೀಗೆ ಹೇಳಿದನು].
|
ಪದ್ಯ - ೩೯
[ಸಂಪಾದಿಸಿ]ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿ | |
ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿಸ್ತರದಿಂದೆ ಮಾಡಿಸು ಅಧ್ವರವನೆಂದಾಡಿದೊಡೆ= [ಬೃಹಸ್ಪತಿಯೆ ಕುಲಗುರುವೆಂದು ಮೊದಲೇ ನಾನು ಹೋಗಿ ಯಜ್ಞವನ್ನು ಶಾಸ್ತ್ರೀಯವಾಗಿ ಮಾಡಿಸು ಕೇಳಿದಾಗ,] ನರಯಾಜನಕ್ಕೆ ಒಲ್ಲೆನೆಂದ ಬಳಿಕೈಸಲೇ ಸಂವರ್ತನಂ ಮಖಕ್ಕೆ ವರಿಸಿದೆನಸತ್ಯಮಂ ನುಡಿಯಲಂಜುವೆನಿನ್ನು= ಅವನು ಮಾನವರು ಮಾಡುವ ಯಜ್ಞಕ್ಕೆ ಬರಲಾರೆನೆಂದ ನಂತರವೇ ಸಂವರ್ತನನ್ನು ಯಜ್ಞಕ್ಕೆ ಆರಿಸಿಕೊಂಡೆನು; ಅಸತ್ಯನ್ನು ನುಡಿಯಲಾರೆ ಅಸತ್ಯ ಹೇಳಲು ಅಂಜುವೆನು;] ತುರಗಮೇಧಂ ನಡೆಯದೊಡೆ ಮಾಣಲೆಂದು ಭೂವರನು ಅಗ್ನಿಯಂ ಬೇಡಿಕೊಳುತಿರಲ್= [ಇನ್ನು ಅಶ್ವಮೇಧವು ನಡೆಯದಿದ್ದರೆ ಹೋಗಲಿ, ಎಂದು ರಾಜನು ಅಗ್ನಿಯನ್ನು ಬೇಡಿಕೊಳುತ್ತಿರಲು], ಕಂಡು ಮುಳಿದಾ ಮುನಿಪನಿಂತೆಂದನು= ಅದನ್ನು ಕಂಡು ಸಂವರ್ತ ಮುನಿಯು ಹೀಗೆ ಹೇಳಿದನು.
|
ಪದ್ಯ ೪೦
[ಸಂಪಾದಿಸಿ]ಭೂಕಾಂತ ನಿನಗಿವನೊಳುಪಚಾರಮೇಕಿನ್ನು | |
ಭೂಕಾಂತ ನಿನಗೆ ಇವನೊಳು ಉಪಚಾರಂ ಏಕೆ ಇನ್ನು ಸಾಕು ಈತನಂ ಕಳುಹು =[ರಾಜನೇ ನಿನಗೆ ಇವನ ಹತ್ತಿರ ಉಪಚಾರದ ಮಾತು ಏಕೆ? ಇನ್ನು,] ಯಜ್ಞಮಂ ಕಿಡಿಸಿದೊಡೆ ನಾಕಮಂ ಕೆಡಿಸುವೆಂ ಸಕಲಮಂ ಸುಡುವ ಅನಿಲನಂ ಸುಡುವೆನು ಈಕ್ಷಣದೊಳು=[ಯಜ್ಞವನ್ನು ಕೆಡಿಸಿದರೆ ಸ್ವರ್ಗಲೋಕವನ್ನೇ ಕೆಡಿಸುವೆನು; ಸಕಲವನ್ನೂ ಸುಡುವ ಈ ಅಗ್ನಿಯನ್ನೇ ಈಕ್ಷಣದಲ್ಲಿ ಸುಡುವೆನು.] ಪಾಕಶಾಸನು ಅವನ(ಇಂದ್ರನ) ಒಡಗೊಂಡು ಬರಲು ಅಗ್ನಿಯಂ ನೂಕೆಂದು ಸಂವರ್ತನಾಡಲ್= [ಅಗ್ನಿಯು ಇಂದ್ರನ ಜೊತೆಸೇರಿಕೊಂಡು ಬರುವುದಕ್ಕಾಗಿ ಅಗ್ನಿಯನ್ನು ಕಳಿಸೆಂದು ಸಂವರ್ತನು ಹೇಳಲು], ಬೆದರ್ದು ಸುರ ಲೋಕಕ್ಕೆ ಪೋಗಿ ವೈಶ್ವಾನರಂ ವಜ್ರಿಗರುಹಿದೊಡಾತನಿಂತೆಂದನು= [ಹೆದರಿ ಸುರಲೋಕಕ್ಕೆ ಹೋಗಿ ಅಗ್ನಿಯು ಇಂದ್ರನಿಗೆ ಹೇಳಿದಾಗ ಆತನು ಹೀಗೆ ಹೇಳೀದನು.]
(ಪದ್ಯ -೪೦) |
ಪದ್ಯ ೪೧
[ಸಂಪಾದಿಸಿ]ಇನ್ನೊಂದುಬಾರಿ ನೀಂ ಪೋಗಿ ವೇಳಾ ನೃಪತಿ | |
ಇನ್ನೊಂದುಬಾರಿ ನೀಂ ಪೋಗಿ ವೇಳಾ ನೃಪತಿಗೆನ್ನ ವಜ್ರಕ್ಕೆ ಗುರಿಯಾಗಬೇಡೆಂದೆನಲ್=[ಇನ್ನೊಂದುಬಾರಿ ನೀನು ಹೋಗಿಹೇಳು ಆ ನೃಪತಿಗೆ ನನ್ನ ವಜ್ರಾಯುಧಕ್ಕೆ ಗುರಿಯಾಗಬಾರದು ಎಂದು ಹೇಳಿದಾಗ,] ತನ್ನ ಕಯ್ಯೊಳ್ ಸಾಗದಂಜುವೆಂ ಸಂವರ್ತನತಿತಪೋಬಲನಿಳೆಯೊಳು= [ಅಗ್ನಿಯು ತನ್ನ ಕಯ್ಯಲ್ಲಿ ಆಗದು, ನಾನು ಅಂಜುವೆನು; ಭೂಮಿಯಲ್ಲಿ ಸಂವರ್ತನು ಅತಿ ತಪೋಬಲನು;] ಮುನ್ನ ಭೂಸುರಶಾಪದಿಂದೆ ಪಲರಳಿದುಳಿದು ಬನ್ನ ಬಟ್ಟವರುಂಟು ಸಾಕೆಂದು ಶಿಖಿ ತೊಲಗೆ=[ಹಿಂದೆ ಬ್ರಾಹ್ಮಣರ ಶಾಪದಿಂದ ಹಲವರು ಸತ್ತುಳಿದು ಕಷ್ಟಪಟ್ಟವರುಂಟು, ಸಾಕೆಂದು ಅಗ್ನಿಯು ಹೊಗಲು], ಅವನನ್ನು ಕ್ಷಮಿಸಿ, ಇಂದ್ರನು ಧೃತರಾಷ್ಟ್ರನೆಂಬ ಗಂಧರ್ವನಗೆ ನೇಮಿಸಿದನು.
(ಪದ್ಯ -೪೧) |
ಪದ್ಯ ೪೨
[ಸಂಪಾದಿಸಿ]ಧೃತರಾಷ್ಟನೆಂಬ ಗಂಧರ್ವರಾಜಂ ಬಂದು | |
*ಧೃತರಾಷ್ಟನೆಂಬ ಗಂಧರ್ವರಾಜಂ ಬಂದು ಶತಮಖಂ ಸಂವರ್ತನಂ ಬಿಟ್ಟು ವರಬೃಹಸ್ಪತಿಯನಧ್ವರಕೆ ವರಿಸದೊಡೀಗ ವಜ್ರದಿಂದರಿದಪಂ ನಿನ್ನನೆಂದು= [ಧೃತರಾಷ್ಟನೆಂಬ ಗಂಧರ್ವರಾಜನು ಬಂದು ಇಂದ್ರನು ಹೇಳಿದಂತೆ ಸಂವರ್ತನನ್ನು ಬಿಟ್ಟು ಶ್ರೇಷ್ಠ ಬೃಹಸ್ಪತಿಯನ್ನು ಯಜ್ಞಕ್ಕೆ ನೆಮಿಸಿಕೊಳ್ಳದಿದ್ದರೆ ಈಗ ಅವನು ವಜ್ರಾಯುಧದಿಂದ ನಿನ್ನನ್ನು ಕತ್ತರಿಸುವನು ಎಂದು,] ಕ್ಷಿತಿಪಂಗೆ ಪೇಳ್ದೊಡದ ಕೇಳ್ದಾ ಮುನೀಶ್ವರಂ ಖತಿಗೊಂಡೊಡಾತಂ=[ಮರುತ್ತರಾಜನಿಗೆ ಹೇಲಿದಾಗ ಅದನ್ನು ಕೇಳಿದ ಆ ಮುನೀಶ್ವರನು ಸಿಟ್ಟಾದಾಗ, ಆತನು ] ಮರಳ್ದು ಶಕ್ರಂಗೆ ಅರುಹಲು ಅತುಳಸನ್ನಾಹದಿಂ ಪೊರಮಟ್ಟನು ಅಮರೇಂದ್ರನು ಅನಿಮಿಷರ ಗಡಣದಿಂದೆ= [ಹಿಂತಿರುಗಿಹೋಗಿ ಇಂದ್ರನಿಗೆ ಹೇಳಲು, ಬಹಳ ಸನ್ನಾಹ ಮಾಡಿಕೊಂಡು ಇಂದ್ರನು ದೇವತೆಗಳ ಸಮೂಹದೊನೆ ಹೊರಟನು.
(ಪದ್ಯ -೪೨)IXX |
ಪದ್ಯ ೪೩
[ಸಂಪಾದಿಸಿ]ಕೋಪದಿಂದಾಗಳೆತ್ತಿದ ವಜ್ರಹಸ್ತದಿಂ | |
*ಕೋಪದಿಂದ ಆಗಳ್ ಎತ್ತಿದ ವಜ್ರಹಸ್ತದಿಂದ ಆಪುರಂದರನು ಐದೆ ಕಂಡು ನಡುನಡುಗುತಿಹ ಭೂಪನಂ ಸಂತೈಸಿ=[ಆ ಪುರಂದರನೆಂಬ ಇಂದ್ರನು ಆಗ ಕೋಪದಿಂದ ಎತ್ತಿದ ವಜ್ರಹಸ್ತದಿಂದ ಬರಲು ಅದನ್ನು ಕಂಡು ನಡುನಡುಗುತ್ತಿರುವ ರಾಜನನ್ನು ಸಮಾಧಾನಪಡಿಸಿ,] ಸಂವರ್ತನು ಇಂದ್ರ ಅಗ್ನಿ ಮೊದಲಾದ ಅಮರಗಣವನು ರೂಪಿಸಿದ ಚಿತ್ರಪಟದಂತಾಗ ನಿಲಿಸಲ್=[ಆಗ ಸಂವರ್ತನು ಇಂದ್ರ ಅಗ್ನಿ ಮೊದಲಾದ ಅಮರಗಣವನ್ನು ಚಿತ್ರಪಟದಂತೆ ರೂಪಿಸಿ ಸ್ತಬ್ಧಗೋಲಿಸಿ ನಿಲ್ಲಿಸಲು,] ಪ್ರತಾಪಂಗಳುಡುಗಿ ನಿರ್ಜರ ನಿಕರಂ ಅಳವಳಿಯಲು ಆ ಪರಮಧಾರ್ಮಿಕ ಮರುತ್ತಂ ತಪಸ್ವಿಯಂ ಬೇಡಿಕೊಂಡಂ ನಯದೊಳು= [ಅನರ ಶೌರ್ಯ ಪ್ರತಾಪಗಳು ಉಡುಗಿ ದೇವತೆಗಳ ಸಮೂಹವು ಭಯಪಟ್ಟಿರಲು, ಆ ಪರಮಧಾರ್ಮಿಕನಾದ ಮರುತ್ತನು ಸಂವರ್ತ ತಪಸ್ವಿಯನ್ನು ವಿನಯದಿಂದ ಈ ರೀತಿ ಬೇಡಿಕೊಂಡನು ]
(ಪದ್ಯ -೪೩) |
ಪದ್ಯ ೪೪
[ಸಂಪಾದಿಸಿ]ಎಲೆ ಮುನ್ವೀಶರ ಹವಿರ್ಭಾಗಮಂ ಕೊಂಬಮರ | |
ಎಲೆ ಮುನ್ವೀಶರ ಹವಿರ್ಭಾಗಮಂ ಕೊಂಬ ಅಮರಕುಲ(ದೇವಗಣ) ಮಿಂತಿರಲ್ ಬಹುದೆ=[ಎಲೆ ಮುನ್ವೀಶರನೇ ನಾನು ಯಜ್ಞದಲ್ಲಿ ಕೊಡು ಹವಿರ್ಭಾಗವನ್ನು ತೆಗೆದುಕೊಳ್ಳುವ ದೇವತೆಗಳ ಸಮೂಹವು ಹೀಗೆಚಲನೆ ಇಲ್ಲದೆ ಇರಬಹುದೆ?], ಪ್ರತ್ಯಕ್ಷಮಾಗಿ ಬಂದು ಒಲಿದು ಎನ್ನ ಯಾಗದೊಳ್ ವಿನಯದಿಂದ ಈಸಿಕೊಳಲಿ ಆಹುತಿಯ ಪಸುಗೆಗಳನು=[ಪ್ರತ್ಯಕ್ಷಮಾಗಿ ಬಂದು ಪ್ರೀತಿಯಿಂದ ನನ್ನ ಯಾಗದಲ್ಲಿ ಆಹುತಿಯಾಗಿ ಹಾಕಿದ ಭಾಗಗಳನ್ನು ವಿನಯದಿಂದ ತೆಗೆದುಕೊಳ್ಳಲ,] ಸಲಿಸಬೇಕು ಎನ್ನ ಭಿನ್ನಪವನು= [ನನ್ನ ಬೇಡಿಕೆಯನ್ನು ನೀವು ನೆರವೇರಿಸಿಕೊಡಬೇಕು,] ಈ ಇಂದ್ರನೊಂದಿಗೆ ಜಗಳವನ್ನು ಬಿಡಿಸು ಎಂದು ಮರುತ್ತರಾಜನು ಅಂಜಲೀಬದ್ಧನಾಗಿ ಸಂವರ್ತನನ್ನು ಪ್ರಾರ್ಥಿಸಿದಾಗ ಆ ರಾಜನ ಕೋರಿಕೆಯನ್ನು ಕೊಟ್ಟನು.
(ಪದ್ಯ -೪೪) |
ಪದ್ಯ ೪೫
[ಸಂಪಾದಿಸಿ]ಭೂಮೀಶ ಕೇಳ್ ಬಳಿಕ ಸಂವರ್ತಮುನಿವರನ | |
ಜನಮೇಜಯನೇ ಕೇಳ್ ಬಳಿಕ ಸಂವರ್ತ ಮುನಿವರನ ಸಾಮರ್ಥ್ಯಮಂ ನೋಡಿ ವೈರಮಂ ಬಿಟ್ಟು ಸುತ್ರಾಮಂ(ಇಂದ್ರ) ಸಕಲದಿವಿಜರೊಡಗೂಡಿ= [ಜನಮೇಜಯನೇ ಕೇಳು ಬಳಿಕ ಸಂವರ್ತ ಮುನಿವರನ ಸಾಮರ್ಥ್ಯವನ್ಉ ನೋಡಿ ವೈರವನ್ನು ಬಿಟ್ಟು ಇಂದ್ರನು ಎಲ್ಲಾ ದೇವತೆಗಳ ಒಡಗೂಡಿಕೊಂಡು,] ಯಜ್ಞದ ಹವಿರ್ಬಾಗಮಂ ಕೊಳಲ್ಕೆ
ಪ್ರೇಮದಿಂ ಪ್ರತ್ಯಕ್ಷಮಾಗಿ ಬಂದಿರುತಿರ್ದನಾ= [ದೇವತೆಗಳ ಯಜ್ಞದ ಹವಿರ್ಬಾಗವನ್ನು ತೆಗೆದುಕೊಳ್ಳಲು ಪ್ರೇತಿಯಿಂದ ಪ್ರತ್ಯಕ್ಷವಾಗಿ ಬಂದಿರುತ್ತಿದ್ದರು.]ಮರುತ್ತಂಗೆ ಸಂತೋಷಂನೆಗಳ್ದುದು ಮಹಾಮಖಂ ನೆರೆದುದು ಸಮಸ್ತ ವೈಭವದ ವಿಸ್ತಾರದಿಂ ಖ್ಯಾತಮಾಗಿ= [ಮರುತ್ತರಾಜನಿಗೆ ಸಂತೋಷವನ್ನು ಕೊಡುವಂತೆ, ಸಮಸ್ತ ವಿಸ್ತಾರದ ವೈಭವದಲ್ಲಿ ಮಹಾಯಜ್ಞವು ನಡೆದು ಪ್ರಸಿದ್ಧವಾಯಿತು.
(ಪದ್ಯ -೪೫) |
ಪದ್ಯ ೪೬
[ಸಂಪಾದಿಸಿ]ವರ್ತಿಸಿತು ವೈದಿಕವಿಥಾನದಿಂದೆಸೆವ ಸಂ | |
ವರ್ತಿಸಿತು(ನಡೆಯುತ್ತಿತ್ತು) ವೈದಿಕವಿಥಾನದಿಂದೆಸೆವ ಸಂವರ್ತಮುನಿ ಮಾಡಿಸೆ ಮಹಾಧ್ವರಂ=[ ಸಂವರ್ತಮುನಿ ಮಹಾಯಜ್ಞವನ್ನು ವೈದಿಕವಿಥಾನದಿಂದ ಮಾಡಿಸಲು ವೈಭವದಿಂದ ತೋರುವ ಚನ್ನಾಗಿ ನಡೆಯಿತು.] ಸಕಲದಿವಿಜರ್ ತಮ್ಮ ತಮ್ಮ ಭಾಗಂಗಳಂ ಪ್ರತ್ಯಕ್ಷಮಾಗಿ ಕೈಕೊಂಡರು ಇರ್ದು(ಇದ್ದು)= [ಸಕಲ ದೇವತೆಗಳೂ ಇದ್ದು ತಮ್ಮ ತಮ್ಮ ಭಾಗಂಗಳನ್ನು ಪ್ರತ್ಯಕ್ಷವಾಗಿ ಬಂದು ತೆಗೆದುಕೊಂಡರು.] ಮತ್ರ್ಯಲೋಕಂ ಕನಕಮಯಮಾಗೆ ಭೂಮಿಯಅಮರರ್( ಬ್ರಾಹ್ಮಣರು) ತೆಗೆದು ಹೊತ್ತ ದಕ್ಷಿಣೆಗಳಿಂ ದಣಿದು ಬಿಸುಟರ್ ತುಹಿನಗಿರಿಯೊಳ್ ಅಗಣಿತ ಹೇಮರಾಶಿಗಳನು ಏನೆಂಬೆನು ಅಚ್ಚರಿಯನು= ಭೂಲೋಕವು ಚಿನ್ನದ ಮಯವಾಗಲು ಬ್ರಾಹ್ಮಣರು ಹೊತ್ತ ದಕ್ಷಿಣೆಗಳಿಂದ ಬಳಲಿ ಹೊರಲಾರದೆ ಲೆಕ್ಕವಿಲ್ಲದಷ್ಟು ಚಿನ್ನದ ರಾಶಿಗಳನ್ನು ಹಿಮಾಲಯದಲ್ಲಿ ಎಸೆದು ಬಿಟ್ಟುಹೊದರು, ಈ ಅಶ್ಚರ್ಯವನ್ನು ಕುರಿತು ಏನ ಹೇಳಲಿ.
(ಪದ್ಯ -೪೬) |
ಪದ್ಯ ೪೭
[ಸಂಪಾದಿಸಿ]ಪಾರ್ಥಿವಾಗ್ರಣಿ ಮರುತ್ತಂ ಬಳಿಕ ವಿನಯದಿಂ | |
ಪಾರ್ಥಿವ ಅಗ್ರಣಿ(ದೊರೆಗಳಲ್ಲಿ ಉತ್ತಮನು)ಜನಮೇಜಯನೇ ಮರುತ್ತಂ ಬಳಿಕ ವಿನಯದಿಂ ಪ್ರಾರ್ಥಿಸಿದನಿಂದ್ರಾದಿಗಳನವರ್ ಮುದದೊಳಿ ಷ್ವಾರ್ಥಮಂ ಸಲಿಸಿದರ್=[ದೊರೆಗಳಲ್ಲಿ ಉತ್ತಮನಾದ ಜನಮೇಜಯನೇ ಮರುತ್ತನು ಬಳಿಕ ವಿನಯದಿಂದ ಪ್ರಾರ್ಥಿಸಿದನು ಇಂದ್ರಾದಿಗಳನು, ಅವರು ಸಂತಸದಿಂದ (ಮರುತ್ತ ರಾಜನ) ಇಷ್ವಾರ್ಥವನ್ನು ಸಲ್ಲಿಸಿದರು.] ತಣಿದು=ತೃಪ್ತರಾಗಿ, ಅಲಸಿದರ್=ಹೊರಲಾರದೆ ಆಯಾಸಪಟ್ಟರು; ದ್ವಿಜರ್ (ಬ್ರಾಹ್ಮಣರು) ಭೂರಿದಕ್ಷಿಣೆಗಳಿಂದೆ ಸ್ವಾರ್ಥಮೆಲ್ಲಮನು=ತನ್ನದ್ರವ್ಯವನ್ನು ಇತ್ತು ಸಂವರ್ತಮುನಿಗೆ=[ಬ್ರಾಹ್ಮಣರು ಭಾರಿ ದಕ್ಷಿಣೆಗಳನ್ನು ಪಡೆದು ತಣಿದು /ತೃಪ್ತರಾಗಿ ಅಲಸಿದರ್/ಆಯಾಸಸಪಟ್ಟರು, ಮರುತ್ತರಾಜನು ಸಂವರ್ತಮುನಿಗೆ ತನ್ನದೆಲ್ಲವನ್ನೂ ಕೊಟ್ಟು], ಮಖ ತೀರ್ಥದೊಳ್ ಮಿಂದು ಶುಚಿಯಾಗಿ ದೇವರ್ಕಳು ಇದು ಸಾರ್ಥಂ ಎನೆ ಚಿರಕಾಲಂ ಅವನಿಯೊಳ್ ಅವಂ ಬಾಳ್ದು ಪಡೆದನು ಉತ್ತಮ ಗತಿಯನು= [ಯಜ್ಞತೀರ್ಥದಲ್ಲಿ ಸ್ನಾನಮಾಡಿ ಶುಚಿಯಾಗಿ ದೇವತೆಗಳು ಇದು ಸಾರ್ಥಕ/ಸಫಲವಾಯಿತು ಎನ್ನಲು ಬಹಳಕಾಲ ಭೂಮಿಯಮೇಲೆ ಬಾಳಿ ಉತ್ತಮಗತಿಯನ್ನು ಪಡೆದನು.]
(ಪದ್ಯ -೪೭) |
ಪದ್ಯ ೪೮
[ಸಂಪಾದಿಸಿ]ರಾಯ ಕೇಳಾ ಯಜ್ಞ ಸಂಗತಿಯನಾ ಬಾದ | |
ರಾಯ ಕೇಳು ಆ ಯಜ್ಞ ಸಂಗತಿಯನು ಆ ಬಾದರಾಯಣಂ ಪೇಳೆ=[ಜನಮೇಜಯರಾಯನೇ ಕೇಳು ಆ ಯಜ್ಞ ಸಂಗತಿಯನ್ನು ಆ ಬಾದರಾಯಣಮುನಿಯು ಹೇಳಲು], ಬಳಿಕ ಅವನಿಪಂ ಧರ್ಮಸಾರಾಯಮಂ ಕೇಳ್ದನು ಆ ಮುನಿವರನೊಳು=[ನಂತರ ಧರ್ಮರಾಯನು ಆ ಮುನಿಯಿಂದ ಧರ್ಮಸಾರವನ್ನು ಕೇಳಿದನು,] ಆವ ನರನು ಆವ ಕೃತ್ಯಂಗೆಯ್ಯಲು ಬೀಯದ ಜಸಂ ಬಳೆವುದು ಇಲ್ಲಿ=[ಯಾವ ಮನುಷ್ಯನು ಯಾವ ಕೃತ್ಯವನ್ನು ಮಾಡಲು ಅಳಿಯದ ಯಶಸ್ಸು ಇಲ್ಲಿ /ಈ ಲೋಕದಲ್ಲಿ ಉಂಟಾಗುವುದು,] ನಾರಕದ ಬಿರುಬು ಈಯದ ಸುಖಂ ಪರದೊಳು ಎಂತು ದೊರಕೊಂಬುದು=[ಪರಲೋಕದಲ್ಲಿ ನರಕಸಂಬಂಧವಾದ ದುಃಖವನ್ನು ಕೊಡದ ಸುಖವು ಹೇಗೆ ದೊರಕುವುದು ]ಎಂಬ ಈ ಯವಸ್ಥೆಯನು(ವ್ವಸ್ಥೆಯನ್ನು) ಎನಗೆ ವಿಸ್ತರಿಸಿ ಪೇಳ್ಪುದೆನೆ ಶುಕತಾತನಿಂತೆಂದನು= ಎಂಬ ಈ ವ್ಯವಸ್ಥೆಯನ್ನು ಎಂದರೆ ರಹಸ್ಯವನ್ನು ನನಗೆ ವಿಸ್ತರಿಸಿ ಹೇಳಬೇಕು, ಎನ್ನಲು ಶುಕತಾತನಾದ ವ್ಯಾಸಮುನಿಯು ಹೀಗೆ ಹೇಳಿದನು.
(ಪದ್ಯ -೪೮) |
ಪದ್ಯ ೪೯
[ಸಂಪಾದಿಸಿ]ಪದ್ಯ ೪೯
[ಸಂಪಾದಿಸಿ]ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ | |
ಸಾರ್ವ= ಸರ್ವ, ನಿಗಮದ ಅರ್ಥಮಂ= ವೇದಗಳ ಅರ್ಥತಿಳಿದು ಸತ್ಕರ್ಮಮಂ= ಒಳ್ಳೆಯಕಾರ್ಯವನ್ನು, ಸಾರ್ವಕಾಲಂಗೆಯ್ದು= ಸರ್ವಕಾಲದಲ್ಲಿಯೂ ಮಾಡಿ, ಪರವಧೂವಿಷಯಮಂ ಸಾರ್ವ= ಪರವಧೂಗಳ ವಿಷಯವನ್ನು ಪ್ರಚುರಪಡಿಸುವ, ಚಿಂತೆಯನುಳಿದು= ಯೋಚನೆ ಮಾಡದೆ, ಲೋಕಾಪವಾದಮಂ= ಜನರರಿಂದ ಬರುವ ಅಪವಾದವನ್ನು ಪರಿಹರಿಸಿ, ಪರರ ಒಡವೆಗೆ= ಬೇರೆಯವರ ವಸ್ತುಗಳಿಗೆ, ಪಾರ್ವನಲ್ಲದೆ= ಆಸೆಪಡದೆ, ಸದಾಚಾರದಿಂ= ಉತ್ತಮ ಆಚಾರದಿಂದ, ನಡೆದೊಡೆ= ನಡೆದುಕೊಮಡರೆ, ಆಪಾರ್ವನು= ಬ್ರಾಹ್ಮಣನು, ಅವನು ಇಹದೊಳ್=ಈ ಲೋಕದಲ್ಲಿ, ಕೀರ್ತಿಪರನಾಗಿ= ಕೀರ್ತಿವಂತನಾಗಿ, ಬಳಿಕ ಅವಂ= ಸತ್ತನಂತರ ಅವನು, ದೇಹಾವಸಾನದೊಳ್ ಉತ್ತಮ ಗತಿಗೆ ಪಾರ್ವನು= ದೇಹಬಿಟ್ಟನಂತರ ಉತ್ತಮ ಗತಿಗೆ ಹೋಗುವನು, ಭೂಪಾಲನೇ ಕೇಳು, ಎಂದು ಎಂದನು.
(ಪದ್ಯ -೪೯) |
ಪದ್ಯ ೫೦
[ಸಂಪಾದಿಸಿ]ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ | |
ಸರ್ವಧರ್ಮಗಳನ್ನು ಅರಿದು= ಅರತು, ಓವಿದೊಡೆ= ಅದರಂತೆ ನಡೆದು ರಕ್ಷಿಸಿದರೆ, ರಣಕೆ ಬೇಸರ್ವನಲ್ಲದೊಡೆ ಯುದ್ಧಕ್ಕೆ ಬೇಸರಿಸದಿದ್ದರೆ, ಆತ್ಮವಿದನಾದೊದೆ= ಆತ್ಜ್ಞಾನವುಳ್ಳವನಾದರೆ ಇಳೆಯೊಳ್ ಪೆಸರ್ವಡೆದು= ಭಮಿಯಲ್ಲ ಹೆಸರು ಪಡೆದು, ಕ್ಷತ್ರಿಯಂ ಕಾದಿ ಮಡಿದೊಡೆ=ಕ್ಷತ್ರಿಯನು ಯುದ್ಧಮಾಡಿ ಸತ್ತರೆ, ಸೂರೆಗೊಂಬನು ಅಮರಾವತಿಯನು= ಸ್ವರ್ಗದ ಅಮರಾವತಿಯ ಸುಖವನ್ನು ಯಥೇಶ್ಚವಾಗಿ ಪಡೆಯುವನು. ದುರ್ವಚನಮಂ ನುಡಿಯದೆ= ಕೆಟ್ಟ ಮಾತಾಡದೆ, ಅತಿಥಿಗಳ ಕೆಡೆನುಡಿಯದೆ= ಮನೆಗೆಬಂದವರಿಗೆ ಕೆಟ್ಟಮಾತಾಡದೆ, ಉರ್ವಧನಮಂಹೆಚ್ಚು ಹಣವನ್ನು ಕೂಡಿಟ್ಟುಕೊಂಡು, ಗೋರಕ್ಷಣಂಮಾಳ್ಪುದು= ಗೋವನ್ನು ಪಾಲಿಸಿದರೆ, ಉರ್ವರೆಯೊಳು ಇದು ಕೀರ್ತಿ ವೈಶ್ಯಂಗೆ ಪರಗತಿ=ಭೂಮಿಯಲ್ಲಿ ವೈಶ್ಯನಿಗೆ ಪರಲೋಕದಲ್ಲಿ ಉತ್ತಮ ಗತಿಬರುವುದು, ಮುಕುಂದನ ಸೇವೆಯೊಳ್ ಅಪ್ಪುದು ಸೇವೆಯಲ್ಲಿ= ಅಲ್ಲದೆ ವಷ್ಣುವಿನ ಸೇವೆಯಲ್ಲಿ ಉತ್ತಮ ಗತಿಬರುವುದು.
(ಪದ್ಯ -೫೦)XX |
ಪದ್ಯ ೫೧
[ಸಂಪಾದಿಸಿ]ದ್ವಿಜರಾಸರಂದಳೆದು ಬೆಸಗೈವ ಶೂದ್ರನುಂ | |
ದ್ವಿಜರ ಆಸರಂ ತಳೆದು = ಬ್ರಾಹ್ಮಣರ ಆಶ್ರಯ ಪಡೆದು, ಬೆಸಗೈವ= ಅವರ ಉಪದೇಶದಂತೆ ನೆಡೆವ, ಶೂದ್ರನುಂ=ಶೂದ್ರನೂ ದ್ವಿಜರಾಜವಾಹನ =ವಿಷ್ಣುವಿನ ಸ್ಮರಣೆಯಿಂದ ಐದುವಂ= ಹೋಗುವನು, ದ್ವಿಜರಾಜ=ವಿಷ್ಣುವಾಹನ ಗರುಡಪಕ್ಷಿಯ(ಚಂದ್ರಪ್ರಕಾಶ) ಸನ್ನಿಭದ= ಸಮಾನವಾದ ಸುಗತಿಯಂ= ಸದ್ಗತಿಯನ್ನು; ಐದುವಂ= ಹೊಂದುವನು. ಜಗದೊಳು= ಜಗತ್ತಿನಲ್ಲಿ, ಅಂತದು ಕುಲಸ್ತ್ರೀಯರೊಳಗೆ= ಉತ್ತಮ ಸ್ತ್ರೀಯರಲ್ಲಿ ನಿಜನಾಥಭೀತೆ= ತನ್ನ ಪತಿತೆಭಯಪಡುವವಳು, ಸುಚರಿತ್ರೆ= ಉತ್ತಮ ನಡತೆಯುಳ್ಳವಳು, ಗುಣವತಿ, ಮಾನಿನಿ= ಮಾನವುಳ್ಳವಲು, ಜನಾಪವಾದವಿರಹಿತೆ ಎನಿಪ= ಜನಾಪವಾದವಿಲ್ಲದವಳು ಎನ್ನಿಸುವ, ನಾರಿ=ಹೆಂಗಸು, ನನ್ನಿಜನಾರ್ದನಾದಿ=ಸುಜನರರೇಮೊದಲಾದ ನಿರ್ಜರವರ್ಯ= ದೇವತಾ ವಿನುತೆಯು= ಸ್ತ್ರೀ ಅಹಳು=ಆಗಿರುವಳು ಎನಲು=ಎನ್ನಲು, ಅವಳ ಸುಕೃತಮೆಂತೋ= ಅವಳ ಪುಣ್ಯವು ಎಂತೋ ಹಳಲಾಗದಷ್ಟು ಹೆಚ್ಚಿನದು.
(ಪದ್ಯ -೫೧) |
ಪದ್ಯ ೫೨
[ಸಂಪಾದಿಸಿ]ಪತಿ ದೈವಮೆಂದರಿದು ನಡೆವ ಸತಿಗಹುದು ಪರ | |
[ಆವರಣದಲ್ಲಿ ಅರ್ಥ];
(ಪದ್ಯ -೫೨) |
ಪದ್ಯ ೫೩
[ಸಂಪಾದಿಸಿ]ವರಯಜ್ಞಶಾಲೆಯುಂ ಬಾಲೆಯುಂ ದ್ವಿಜಪಙ್ತ | |
[ಆವರಣದಲ್ಲಿ ಅರ್ಥ];
(ಪದ್ಯ -೫೩) |
ಪದ್ಯ ೫೪
[ಸಂಪಾದಿಸಿ]ಮಾವಂಗೆ ಭಾವಂಗೆ ಮೇಣತ್ತೆಗೈದೆ ಸಂ | |
[ಆವರಣದಲ್ಲಿ ಅರ್ಥ];
(ಪದ್ಯ -೫೪) |
ಪದ್ಯ ೫೫
[ಸಂಪಾದಿಸಿ]ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ | |
[ಆವರಣದಲ್ಲಿ ಅರ್ಥ];
(ಪದ್ಯ -೫೫) |
ಪದ್ಯ ೫೬
[ಸಂಪಾದಿಸಿ]ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂ | |
[ಆವರಣದಲ್ಲಿ ಅರ್ಥ];
(ಪದ್ಯ -೫೬) |
ಪದ್ಯ ೫೭
[ಸಂಪಾದಿಸಿ]ಗೃಹಕೃತ್ಯಮಂ ಬಿಟ್ಟು ನೆರೆಮನೆ ತವರ್ಮನೆಯೊ | |
[ಆವರಣದಲ್ಲಿ ಅರ್ಥ];
(ಪದ್ಯ -೫೭) |
ಪದ್ಯ ೫೮
[ಸಂಪಾದಿಸಿ]ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ | |
[ಆವರಣದಲ್ಲಿ ಅರ್ಥ];
(ಪದ್ಯ -೫೮)XXI |
ಪದ್ಯ ೫೯
[ಸಂಪಾದಿಸಿ]ಪುರುಷಾಂತರಕ್ಕೆಳಸಿ ಪುಷ್ಟಶರತಾಪದಿಂ | |
[ಆವರಣದಲ್ಲಿ ಅರ್ಥ];
(ಪದ್ಯ -೫೯) |
ಪದ್ಯ ೬೦
[ಸಂಪಾದಿಸಿ]ಸೋಲ್ದನಂ ಕಂಡು ಕಣ್ಗೊನೆಗೊಲೆದು ನೋಟಮಂ | |
[ಆವರಣದಲ್ಲಿ ಅರ್ಥ];
(ಪದ್ಯ -೬೦) |
ಪದ್ಯ ೬೧
[ಸಂಪಾದಿಸಿ]ಚಪಲೆ ಚಂಚಲೆ ಚಾಟುವತಿ ಚಂಡಿ ಛಲವಾದಿ | |
[ಆವರಣದಲ್ಲಿ ಅರ್ಥ];
(ಪದ್ಯ -೬೧) |
ಪದ್ಯ ೬೨
[ಸಂಪಾದಿಸಿ]ಹಲವು ಮಾತೇನರಸ ಚಿತ್ರದೊಳ್ ಬರೆದ ಕೋ | |
[ಆವರಣದಲ್ಲಿ ಅರ್ಥ];
(ಪದ್ಯ -೬೨) |
ಪದ್ಯ ೬೩
[ಸಂಪಾದಿಸಿ]ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ | |
[ಆವರಣದಲ್ಲಿ ಅರ್ಥ];
(ಪದ್ಯ -೬೩) |
ಪದ್ಯ ೬೪
[ಸಂಪಾದಿಸಿ]ಆಚಾರಧರ್ಮದಿಂ ನಡೆಯಲರಿಯದ ವಿಪ್ರ | |
[ಆವರಣದಲ್ಲಿ ಅರ್ಥ];
(ಪದ್ಯ -೬೪) |
ಪದ್ಯ ೬೫
[ಸಂಪಾದಿಸಿ]ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ | |
[ಆವರಣದಲ್ಲಿ ಅರ್ಥ];
(ಪದ್ಯ -೬೫) |
ಪದ್ಯ ೬೬
[ಸಂಪಾದಿಸಿ]ರನ್ನದಿಂ ಧಾನ್ಯಮೆ ವಿಶೇಷಮೆಂದೊದವಿಸುವ | |
[ಆವರಣದಲ್ಲಿ ಅರ್ಥ];
(ಪದ್ಯ -೬೬) |
ಪದ್ಯ ೬೭
[ಸಂಪಾದಿಸಿ]ಮಧುರವಾಣಿಯ ಕೃತಜ್ಞನ ದಾನಪರನ ಪರ | |
[ಆವರಣದಲ್ಲಿ ಅರ್ಥ];
(ಪದ್ಯ -೬೭) |
ಪದ್ಯ ೬೮
[ಸಂಪಾದಿಸಿ]ಹೊಸ್ತಿಲೊರಳೊನಕೆಗೆಳ ಮೇಲೆ ಕುಳ್ಳಿರ್ಪವನ | |
[ಆವರಣದಲ್ಲಿ ಅರ್ಥ];
(ಪದ್ಯ -೬೮) |
ಪದ್ಯ ೬೯
[ಸಂಪಾದಿಸಿ]ಜಡನ ಮೂರ್ಖನ ಶಠನ ತಾಮಸನ ನಿಷ್ಠುರದ | |
[ಆವರಣದಲ್ಲಿ ಅರ್ಥ];
(ಪದ್ಯ -೬೯) |
ಪದ್ಯ ೭೦
[ಸಂಪಾದಿಸಿ]ಈ ಪರಿಯೊಳಾ ಮುನಿ ಸಮಸ್ತಧರ್ಮಂಗಳಂ | |
[ಆವರಣದಲ್ಲಿ ಅರ್ಥ];
(ಪದ್ಯ -೭೦) |
ಪದ್ಯ ೭೧
[ಸಂಪಾದಿಸಿ]ಸವ್ಯಸಾಚಿಪ್ರಮುಖರೊಡಗೂಡಿ ಹಿಮಗಿರಿಯ | |
[ಆವರಣದಲ್ಲಿ ಅರ್ಥ];
(ಪದ್ಯ -೭೧) |
ಪದ್ಯ ೭೨
[ಸಂಪಾದಿಸಿ]ಅಷ್ಟದಿಕ್ಪಾಲರ್ಗೆ ಪೂಜೆಯಂ ಮಾಡಿ ಚೌ | |
[ಆವರಣದಲ್ಲಿ ಅರ್ಥ];
(ಪದ್ಯ -೭೨) |
ಪದ್ಯ ೭೩
[ಸಂಪಾದಿಸಿ]ಪೊರೆಯಾಳ್ಗಳೊಟ್ಟೆಪೇಸರಮೆತ್ತು ಬಂಡಿಗಳ್ | |
[ಆವರಣದಲ್ಲಿ ಅರ್ಥ];
(ಪದ್ಯ -೭೩)XXII |
- ♥♥♥ ॐ ♥♥♥
- ಸಂಧಿ ೫ಕ್ಕೆ ಒಟ್ಟು ಪದ್ಯ-೨೨೬.
ಹೋಗಿ
[ಸಂಪಾದಿಸಿ]ನೋಡಿ
[ಸಂಪಾದಿಸಿ]ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.