ಜೈಮಿನಿ ಭಾರತ/ಏಳನೆಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಏಳನೆಯ ಸಂಧಿ[ಸಂಪಾದಿಸಿ]

ಪದ್ಯ :-:ಸೂಚನೆ:[ಸಂಪಾದಿಸಿ]

ಸೂಚನೆ:
ಅಧ್ವರಕೆ ಯಾದವರ ಗಡಣದಿಂ ದಾನವ ಕು | ಲಧ್ವಂಸಿ ಹಸ್ತಿನಾವತಿಗೆ ಬಿಜಯಂಗೆಯ್ಯು | ತಧ್ವದೊಳ್ ತಾಗಿದನುಸಾಲ್ವನಂ ಗೆಲ್ದು ಫಾಂಡವರನುರೆ ಪಾಲಿಸಿದನು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೂಚನೆ:
  • ಅಧ್ವರಕೆ ಯಾದವರ ಗಡಣದಿಂ ದಾನವ ಕುಲಧ್ವಂಸಿ=[ದಾನವರ ಕುಲವನ್ನು ನಾಶಮಾಡಿದ ಶ್ರೀ ಕೃಷ್ಣನು, ಯಾದವರ ಸಮೂಹ ಮತ್ತು ಸೈನ್ಯದಿಂದ ಕೂಡಿದವನಾಗಿ ]; ಹಸ್ತಿನಾವತಿಗೆ ಬಿಜಯಂಗೆಯ್ಯುತ ಅಧ್ವದೊಳ್ ತಾಗಿದ ಅನುಸಾಲ್ವನಂ ಗೆಲ್ದು ಫಾಂಡವರನು ಉರೆ ಪಾಲಿಸಿದನು=[ಹಸ್ತಿನಾವತಿಗೆ ಧರ್ಮಜನ ಅಶ್ವಮೇದ ಯಜ್ಞಕ್ಕೆ ಹೋಗುತ್ತಿರುವಾಗ ಮಧ್ಯದಾರಿಯಲ್ಲಿ ಯುದ್ಧಕ್ಕೆ ಬಂದ ಸಾಲ್ವನನ್ನು ಗೆದ್ದು ಫಾಂಡವರನು ಚೆನ್ನಾಗಿ ಪಾಲಿಸಿದನು ].
  • ತಾತ್ಪರ್ಯ:*ದಾನವರ ಕುಲವನ್ನು ನಾಶಮಾಡಿದ ಶ್ರೀ ಕೃಷ್ಣನು, ಯಾದವರ ಸಮೂಹ ಮತ್ತು ಸೈನ್ಯದಿಂದ ಕೂಡಿದವನಾಗಿ, ಹಸ್ತಿನಾವತಿಗೆ ಧರ್ಮಜನ ಅಶ್ವಮೇದ ಯಜ್ಞಕ್ಕೆ ಹೋಗುತ್ತಿರುವಾಗ ಮಧ್ಯದಾರಿಯಲ್ಲಿ ಯುದ್ಧಕ್ಕೆ ಬಂದ ಸಾಲ್ವನನ್ನು ಗೆದ್ದು ಫಾಂಡವರನು ಚೆನ್ನಾಗಿ ಪಾಲಿಸಿದನು.

(ಪದ್ಯ - ಸೂಚನೆ)

ಪದ್ಯ :-:೧:[ಸಂಪಾದಿಸಿ]

ಭೂರಮಣಕೇಳನಿಲತನಯನಂ ಕೂಡಿಕೊಂ | ಡಾರೋಗಿಸಿದಬಳಿಕ ನವಕುಸುಮಗಂಧ ಕ | ರ್ಪೂರ ತಾಂಬೂಲಮಂ ಕೊಟ್ಟು ಕೃತವರ್ಮನಂ ಕರೆಸಿ ಧರ್ಮಜನ ಮುಖಕೆ ||
ವಾರಣನಗರಿಗೀಗ ನಮ್ಮೊಡನೆ ನಡೆತರಲಿ | ದ್ವಾರಕೆಯೊಳಿರ್ದ ಜನರೆಲ್ಲರುಂ ಪೊಯ್ಸು ಗೂ | ಡಾರಮಂ ಪೊರಗೆ ಸಾರಿಸು ಪುರದೊಳೆಂದು ಮಧುಸೂದನಂ ನೇಮಿಸಿದನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂರಮಣ ಕೇಳ್ ಅನಿಲತನಯನಂ ಕೂಡಿಕೊಂಡು ಆರೋಗಿಸಿದ ಬಳಿಕ ನವಕುಸುಮಗಂಧ ಕರ್ಪೂರ ತಾಂಬೂಲಮಂ ಕೊಟ್ಟು=[ಜನಮೇಜಯನೇ ಕೇಳು, ಭೀಮನನ್ನು ಜೊತೆಯಲ್ಲಿ ಕೂರಿಸಿಕೊಂಡು, (ಭೀಮನು)ಊಟಮಾಡಿ ಮುಗಿಸಿದ ಬಳಿಕ ಹೊಸ ಹೂ ಗಂಧ ಕರ್ಪೂರ ತಾಂಬೂಲಘಳನ್ನು ಕೊಟ್ಟು]; ಕೃತವರ್ಮನಂ ಕರೆಸಿ ಧರ್ಮಜನ ಮುಖಕೆ ವಾರಣನಗರಿಗೆ ಈಗ ನಮ್ಮೊಡನೆ ನಡೆತರಲಿ ದ್ವಾರಕೆಯೊಳು ಇರ್ದ ಜನರು ಎಲ್ಲರುಂ=[ಯಾದವರ ಸೇನಾಧಿಪತಿ ಕೃತವರ್ಮನನ್ನು ಕರೆಸಿ, 'ಧರ್ಮಜನ ಯಜ್ಞಕ್ಕೆ ಹಸ್ತಿನಾವತಿಗೆ, ಈಗ ನಮ್ಮೊಡನೆ ದ್ವಾರಕೆಯಲ್ಲಿ ಇದ್ದ ಜನರು ಎಲ್ಲರೂ ಬರಲಿ ], ಪೊಯ್ಸು ಗೂಡಾರಮಂ ಪೊರಗೆ ಸಾರಿಸು ಪುರದೊಳು ಎಂದು ಮಧುಸೂದನಂ ನೇಮಿಸಿದನು =[ಹಾಕಿಸು ಗೂಡಾರವನ್ನು , ಡಂಗುರ ಸಾರಿಸು ನಗರದಲ್ಲಿ', ಎಂದು ಮಧುಸೂದನನು ಆಜ್ಞಾಪಿಸಿದನು.
  • ತಾತ್ಪರ್ಯ:* ಜನಮೇಜಯನೇ ಕೇಳು, ಭೀಮನನ್ನು ಜೊತೆಯಲ್ಲಿ ಕೂರಿಸಿಕೊಂಡು, (ಭೀಮನು)ಊಟಮಾಡಿ ಮುಗಿಸಿದ ಬಳಿಕ, ಅವನಿಗೆ ಹೊಸ ಹೂ ಗಂಧ ಕರ್ಪೂರ ತಾಂಬೂಲಘಳನ್ನು ಕೊಟ್ಟು, ಯಾದವರ ಸೇನಾಧಿಪತಿ ಕೃತವರ್ಮನನ್ನು ಕರೆಸಿ, 'ಧರ್ಮಜನ ಯಜ್ಞಕ್ಕೆ ಹಸ್ತಿನಾವತಿಗೆ, ಈಗ ನಮ್ಮೊಡನೆ ದ್ವಾರಕೆಯಲ್ಲಿ ಇದ್ದ ಜನರು ಎಲ್ಲರೂ ಬರಲಿ; ಗೂಡಾರವನ್ನು ಹಾಕಿಸು, ನಗರದಲ್ಲಿ ಡಂಗುರ ಸಾರಿಸು', ಎಂದು ಮಧುಸೂದನನು ಆಜ್ಞಾಪಿಸಿದನು.

(ಪದ್ಯ -೧)

ಪದ್ಯ :-:೨:[ಸಂಪಾದಿಸಿ]

ವಸುದೇವ ಹಲಧರರ್ ಪೊಳಲಿನಲ್ಲಿರ್ದು ಪಾ | ಲಿಸಲುಳಿದ ಪ್ರದ್ಯುಮ್ಯ ಗದ ಸಾಂಬನನಿರುದ್ಧ | ನಿಶಠ ಶಠನಕ್ರೂರ ಸಾತ್ಯಕಿ ಪ್ರಮುಖ ಯಾದವರೆಮ್ಮ ಕೂಡೆ ಬರಲಿ ||
ಒಸಗೆ ಮಿಗೆ ದೇವಕಿಯೊಡನೆ ತೆರಳಲರಸಿಯರ್ | ಪೊಸತೆನಿಪ ವಸ್ತುವಂ ತೆಗೆಸು ಭಂಡಾರದಿಂ | ದೆಸೆವ ಪುರಜನ ಪರಿಜನ ಸ್ತ್ರೀಯರೈದಲೆಂದಸುರಾರಿ ನೇಮಿಸಿದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಸುದೇವ ಹಲಧರರ್(ಬಲರಾಮ) ಪೊಳಲಿನಲ್ಲಿರ್ದು ಪಾಲಿಸಲಿ ಉಳಿದ ಪ್ರದ್ಯುಮ್ಯ ಗದ ಸಾಂಬನು ಅನಿರುದ್ಧ ನಿಶಠ ಶಠನು ಅಕ್ರೂರ ಸಾತ್ಯಕಿ ಪ್ರಮುಖ ಯಾದವರು ಎಮ್ಮ ಕೂಡೆ ಬರಲಿ=[ವಸುದೇವ ಹಲಧರರು(ಬಲರಾಮ) ನಗರದಲ್ಲಿದ್ದು ನಗರವನ್ನು ಪಾಲಿಸಲಿ, ಉಳಿದ ಪ್ರದ್ಯುಮ್ಯ ಗದ ಸಾಂಬನು ಅನಿರುದ್ಧ ನಿಶಠ ಶಠನು ಅಕ್ರೂರ ಸಾತ್ಯಕಿ ಪ್ರಮುಖ ಯಾದವರು ನಮ್ಮ ಕೂಡೆ ಬರಲಿ ]; ಒಸಗೆ ಮಿಗೆ ದೇವಕಿಯೊಡನೆ ತೆರಳಲರಸಿಯರ್ ಪೊಸತೆನಿಪ ವಸ್ತುವಂ ತೆಗೆಸು ಭಂಡಾರದಿಂದೆಸೆವ ಪುರಜನ ಪರಿಜನ ಸ್ತ್ರೀಯರು ಐದಲೆಂದು ಅಸುರಾರಿ ನೇಮಿಸಿದನು=[ಹೆಚ್ಚು ಕಾಣಿಕೆ, ಉಡುಗೊರೆಗಳನ್ನೂ, ದೇವಕಿಯೊಡನೆ ತೆರಳಲು ರಾಣಿಯರಿಗೆ ಹೊಸ ಒಳ್ಳೆಯ ವಸ್ರಾಭರಣಗಳನ್ನು ಭಂಡಾರದಿಂದ ತೆಗೆಸಿಕೊಡು, ಪುರಜನ ಪರಿಜನ ಸ್ತ್ರೀಯರು ಬರಲಿ ಎಂದು ಅಸುರಾರಿ ಕೄಷ್ಣನು ಆಜ್ಞಾಪಿಸಿದನು.]
  • ತಾತ್ಪರ್ಯ:*ವಸುದೇವ ಹಲಧರರು(ಬಲರಾಮ) ನಗರದಲ್ಲಿದ್ದು ನಗರವನ್ನು ಪಾಲಿಸಲಿ, ಉಳಿದ ಪ್ರದ್ಯುಮ್ಯ ಗದ ಸಾಂಬನು ಅನಿರುದ್ಧ ನಿಶಠ ಶಠನು ಅಕ್ರೂರ ಸಾತ್ಯಕಿ ಪ್ರಮುಖ ಯಾದವರು ನಮ್ಮ ಕೂಡೆ ಬರಲಿ; ಹೆಚ್ಚು ಕಾಣಿಕೆ, ಉಡುಗೊರೆಗಳನ್ನೂ, ದೇವಕಿಯೊಡನೆ ತೆರಳಲು ರಾಣಿಯರಿಗೆ ಹೊಸ ಒಳ್ಳೆಯ ವಸ್ರಾಭರಣಗಳನ್ನು ಭಂಡಾರದಿಂದ ತೆಗೆಸಿಕೊಡು, ಪುರಜನ ಪರಿಜನ ಸ್ತ್ರೀಯರೂ ಬರಲಿ, ಎಂದು ಅಸುರಾರಿ ಕೄಷ್ಣನು ಆಜ್ಞಾಪಿಸಿದನು.

(ಪದ್ಯ -೨)

ಪದ್ಯ :-:೩:[ಸಂಪಾದಿಸಿ]

ಬಳಿಕ ಕೃತಮರ್ಮಕನ ನೇಮದಿಂ ನಗರದೊಳ್ | ಮೊಳಗಿದುವು ನಿಸ್ಸಾಳಕೋಟಿಗಳ್ ಪೊರಮಟ್ಟು | ದುಳಿಯದೆ ಸಮಸ್ತ ಜನಮೈದಿದುವು ದೇವಕಿ ಯಶೋದೆಯರ ದಂಡಿಗೆಗಳು ||
ಕೆಳದಿಯರ್ವೆರಸಿ ರುಕ್ಮಿಣಿ ಸತ್ಯಭಾಮಾದಿ | ಲಲನೆಯರ ಪಲ್ಲಕ್ಕಿಗಳ ಸಾಲ್ಗಳಂದು ಕೆಲ | ಬಲದ ಸುಯ್ದಾನದಿಂ ತೆರಳಿದುವು ಕೋಶದ ಸುವಸ್ತುಗಳನೆತ್ತಿಸಿದರು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಕೃತಮರ್ಮಕನ ನೇಮದಿಂ ನಗರದೊಳ್ ಮೊಳಗಿದುವು ನಿಸ್ಸಾಳಕೋಟಿಗಳ್ =[ಬಳಿಕ ಕೃತಮರ್ಮಕನ ನೇಮದಿಂದ/ ಆಜ್ಞೆಯಿಂದ ನಗರದಲ್ಲಿ ಸಾವಿರಾರು ಕಹಳೆ ಓಲಗಗಳು ಮೊಳಗಿದುವು] ಪೊರಮಟ್ಟುದು ಉಳಿಯದೆ ಸಮಸ್ತ ಜನಂ ಐದಿದುವು ದೇವಕಿ ಯಶೋದೆಯರ ದಂಡಿಗೆಗಳು=[ಯಾರೂ ಉಳಿಯದೆ ಸಮಸ್ತ ಜನರೂ ಹೊರಟರು, ದೇವಕಿ ಮತ್ತು ಯಶೋದೆಯರ ದಂಡಿಗೆಗಳೂ ಹೊರಟವು]; ಕೆಳದಿಯರ್ವೆರಸಿ ರುಕ್ಮಿಣಿ ಸತ್ಯಭಾಮಾದಿ ಲಲನೆಯರ ಪಲ್ಲಕ್ಕಿಗಳ ಸಾಲ್ಗಳಂದು ಕೆಲ ಬಲದ ಸುಯ್ದಾನದಿಂ ತೆರಳಿದುವು ಕೋಶದ ಸುವಸ್ತುಗಳನು ಎತ್ತಿಸಿದರು= [ರುಕ್ಮಿಣಿ ಸತ್ಯಭಾಮಾದಿ ಸ್ತ್ರೀಯರ ಅವರ ಕೆಳದಿಯರೊಡನೆ ಪಲ್ಲಕ್ಕಿಗಳ ಸಾಲುಗಳು ಅಕ್ಕಪಕ್ಕದ ಕಾವಲಿನೊಡನೆ /ಸುಯ್ದಾನದಿಂ ತೆರಳಿದುವು. ಭಂಡಾರ ಕೋಶದ ಉತ್ತಮ ವಸ್ತುಗಳನ್ನು ತೆಗೆಸಿಕೊಂಡು ಹೊರಟರು].
  • ತಾತ್ಪರ್ಯ:*ಬಳಿಕ ಕೃತಮರ್ಮಕನ ನೇಮದಿಂದ/ ಆಜ್ಞೆಯಿಂದ ನಗರದಲ್ಲಿ ಸಾವಿರಾರು ಕಹಳೆ ಓಲಗಗಳು ಮೊಳಗಿದುವು; ಯಾರೂ ಉಳಿಯದೆ ಸಮಸ್ತ ಜನರೂ ಹೊರಟರು, ದೇವಕಿ ಮತ್ತು ಯಶೋದೆಯರ ದಂಡಿಗೆಗಳೂ ಹೊರಟವು; ರುಕ್ಮಿಣಿ ಸತ್ಯಭಾಮಾದಿ ಸ್ತ್ರೀಯರ ಅವರ ಕೆಳದಿಯರೊಡನೆ ಪಲ್ಲಕ್ಕಿಗಳ ಸಾಲುಗಳು ಅಕ್ಕಪಕ್ಕದ ಕಾವಲಿನೊಡನೆ /ಸುಯ್ದಾನದಿಂ ತೆರಳಿದುವು. ಭಂಡಾರ ಕೋಶದ ಉತ್ತಮ ವಸ್ತುಗಳನ್ನು ತೆಗೆಸಿಕೊಂಡು ಹೊರಟರು.

(ಪದ್ಯ -೩) XXIX

ಪದ್ಯ :-:೪:[ಸಂಪಾದಿಸಿ]

ಸುತಸೋದರ ಜ್ಞಾತಿ ಮಿತ್ರ ಬಾಂಧವ ಪುರೋ | ಹಿತರೊಡನೆ ಪೊರಮಟ್ಟನಸುರಾಂತಕಂ ಸಮಾ | ವೃತವಟುಗಳಿಂದೆ ಸನ್ನಿಹಿತಶಾಸ್ತ್ರಂಗಳಿಂದ ದ್ವಿಜರಾಯುಧಂಗಳಿಂದೆ ||
ಚತುರಂಗ ಬಲದಿಂದೆ ಭೂಭುಜರ್ ದ್ರವ್ಯದಿಂ | ದತುಳ ಸಂಭಾರದಿಂ ವೈಶ್ಯರೈದಿತು ಶೂದ್ರ | ವಿತತಿ ನಾನಾಜಾತಿಗಳ ನೆರವಿಯಿಂ ತಮ್ಮ ತಮ್ಮ ವಿನಿಯೋಗದಿಂದೆ ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸುತಸೋದರ ಜ್ಞಾತಿ ಮಿತ್ರ ಬಾಂಧವ ಪುರೋಹಿತರೊಡನೆ ಪೊರಮಟ್ಟನು ಅಸುರಾಂತಕಂ=[ಮಕ್ಕಳು, ಸೋದರರು, ಮನೆತನದ ಜ್ಞಾತಿಗಳು, ಮಿತ್ರರು, ಬಾಂಧವರು, ಪುರೋಹಿತರೊಡನೆ ಅಸುರಾಂತಕನಾದ ಕೃಷ್ಣನು, ಹೊರಟನು] ಸಮಾವೃತ ವಟುಗಳಿಂದೆ ಸನ್ನಿಹಿತ ಶಾಸ್ತ್ರಂಗಳಿಂದ ದ್ವಿಜರಾಯುಧಂಗಳಿಂದೆ ಚತುರಂಗ ಬಲದಿಂದೆ ಭೂಭುಜರ್ ದ್ರವ್ಯದಿಂದತುಳ ಸಂಭಾರದಿಂ ವೈಶ್ಯರೈದಿತು ಶೂದ್ರವಿತತಿ ನಾನಾಜಾತಿಗಳ ನೆರವಿಯಿಂ ತಮ್ಮ ತಮ್ಮ ವಿನಿಯೋಗದಿಂದೆ=[ ಅವನ ಜೊತೆ, ವೇದ ಮಂತ್ರಗಳ ಉಪದೇಶ ಪಡೆದ ಸಮಾವೃತರಾದ ವಟುಗಳೂ, ಸನ್ನಿಹಿತವಾದ-ಆಕಾಲಕ್ಕೆ ಬೇಕಾದ ಶಾಸ್ತ್ರಂಗಳನ್ನುಅರಿತ ದ್ವಿಜರ/ ಬ್ರಾಹ್ಮಣರು, ಅಗತ್ಯ ಆಯುಧಂಗಳುಳ್ಳ ಚತುರಂಗ ಸೈನ್ಯ, ಭೂಭುಜರಾದ ಕಾಲಾಳುಗಳು, ಅಗತ್ಯ ದ್ರವ್ಯ, ಸಾಕಷ್ಟು ಸಂಭಾರ ಪದಾರ್ಥಗಳು, ವೈಶ್ಯರು, ಶೂದ್ರಸಮೂಹ, ನಾನಾಜಾತಿಗಳವರನ್ನು ಸೇರಿಸಿಕೊಂಡು ತಮ್ಮ ತಮ್ಮ ಧಾರ್ಮಿಕ ಪದ್ಧತಿಯನ್ನು ಅನುಸರಿಸಿ ಹಸ್ತಿನಾವತಿಗ ಹೊರಟಿತು.].
  • ತಾತ್ಪರ್ಯ:*ಮಕ್ಕಳು, ಸೋದರರು, ಮನೆತನದ ಜ್ಞಾತಿಗಳು, ಮಿತ್ರರು, ಬಾಂಧವರು, ಪುರೋಹಿತರೊಡನೆ ಅಸುರಾಂತಕನಾದ ಕೃಷ್ಣನು, ಹೊರಟನು; ಅವನ ಜೊತೆ, ವೇದ ಮಂತ್ರಗಳ ಉಪದೇಶ ಪಡೆದ ಸಮಾವೃತರಾದ ವಟುಗಳೂ, ಸನ್ನಿಹಿತವಾದ-ಆಕಾಲಕ್ಕೆ ಬೇಕಾದ ಶಾಸ್ತ್ರಂಗಳನ್ನುಅರಿತ ದ್ವಿಜರು/ ಬ್ರಾಹ್ಮಣರು, ಅಗತ್ಯ ಆಯುಧಂಗಳುಳ್ಳ ಚತುರಂಗ ಸೈನ್ಯ, ಭೂಭುಜರಾದ ಕಾಲಾಳುಗಳು, ಅಗತ್ಯ ದ್ರವ್ಯ, ಸಾಕಷ್ಟು ಸಂಭಾರ ಪದಾರ್ಥಗಳು, ವೈಶ್ಯರು, ಶೂದ್ರಸಮೂಹ, ನಾನಾಜಾತಿಗಳವರನ್ನು ಸೇರಿಸಿಕೊಂಡು ತಮ್ಮ ತಮ್ಮ ಧಾರ್ಮಿಕ ಪದ್ಧತಿಯನ್ನು ಅನುಸರಿಸಿ ಹಸ್ತಿನಾವತಿಗ ಹೊರಟಿತು.

(ಪದ್ಯ -೪)

ಪದ್ಯ :-:೫:[ಸಂಪಾದಿಸಿ]

ಒಟ್ಟೆಗಳ ವೇಸರದ ಪೊರೆಯಾಳ ಕಂಬಿಗಳ | ಕೊಟ್ಟಿಗೆಯ ಕೊಲ್ಲಾರಬಂಡಿಗಳ ಮೇಲೆ ಸರ | ಕಿಟ್ಟಣಿಸಿ ನೂಕಿದುದು ಗೋಮಹಿಷಿಕುಲದ ಕೀಲಾರ ಬಿಡದೆಯ್ದಿತೊಡನೆ ||
ದಟ್ಟಿಸಿದುವಾನೆ ಕುದುರೆಯ ರಥದ ಸೇನೆ ಪೊರ | ಮಟ್ಟುದಂದಣದ ಪಲ್ಲಕ್ಕಿಗಳ ರಾಜಿ ಸಾ | ಲಿಟ್ಟು ನಡೆದುವು ಛತ್ರಚಾಮರ ಪತಾಕೆಗಳ್ ತೆರಳಿತು ಜನಂ ಮುದದೊಳು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಒಟ್ಟೆಗಳ(ಒಂಟೆ) ವೇಸರದ(ಹೇಸರಗತ್ತೆ) ಪೊರೆಯಾಳ ಕಂಬಿಗಳ ಕೊಟ್ಟಿಗೆಯ ಕೊಲ್ಲಾರಬಂಡಿಗಳ ಮೇಲೆ ಸರಕಿಟ್ಟಣಿಸಿ ನೂಕಿದುದು ಗೋಮಹಿಷಿಕುಲದ ಕೀಲಾರ ಬಿಡದೆ ಐಯ್ದಿತು ಒಡನೆ=[ಒಂಟೆಗಳು, ಹೇಸರಗತ್ತೆಗಳು, ಹೊರೆ ಹೊರುವ ಆಳಗಳು, ಕಂಬಿಗಳೆಂಬ ಕೋಲುಗಳಲ್ಲಿ ಸಾಮಾನು ಸಾಗಿಸುವವರು, ಕೊಟ್ಟಿಗೆಯೆಂಬ ದೊಣ್ಣಗೆ ಎರಡೂಕೆಡೆ ವಸ್ತುಗಳನ್ನು ತೂಗುಹಾಕಿ ಸಾಗಿಸುವವರು, ಕೊಲ್ಲಾರಬಂಡಿಗಳ ಮೇಲೆ ಸರಕುಗಳನ್ನು ಇಟ್ಟಣಿಸಿ /ಒತ್ತಾಗಿ ಹೇರಿ, (ಮುಂದುವರಿಯಿತು/ನೆಡೆದವು->), ಗೋವು ಎಮ್ಮೆಕುಲದವು ಸ್ವಲ್ಪವೂ ರಸ್ತೆಯಲ್ಲಿ ಸಂದುಬಿಡದೆ ನೆಡದವು;] ದಟ್ಟಿಸಿದುವಾನೆ ಕುದುರೆಯ ರಥದ ಸೇನೆ ಪೊರಮಟ್ಟುದಂದಣದ ಪಲ್ಲಕ್ಕಿಗಳ ರಾಜಿ ಸಾಲಿಟ್ಟು ನಡೆದುವು ಛತ್ರಚಾಮರ ಪತಾಕೆಗಳ್ ತೆರಳಿತು ಜನಂ ಮುದದೊಳು=[ಒತ್ತೊತ್ತಾಗಿ ಆನೆ ಕುದುರೆಯ ರಥಗಳಿಂದ ಕೂಡಿದ ಸೇನೆ, ಅಂದಣ/ದಿಂಬುಹಾಕಿಅಲಂಕರಿಸಿದ ಪಲ್ಲಕ್ಕಿಗಳ ಗುಂಪು ಸಾಲು ಸಾಲಾಗಿ ನಡೆದುವು; ಅವುಗಳ ಜೊತೆ ಛತ್ರಚಾಮರ ಪತಾಕೆಗಳು ಹಿಡಿದು ಜನರು ಆನಂದಿಂದ ಹೊರಟರು.]
  • ತಾತ್ಪರ್ಯ:*ಒಂಟೆಗಳು, ಹೇಸರಗತ್ತೆಗಳು, ಹೊರೆ ಹೊರುವ ಆಳಗಳು, ಕಂಬಿಗಳೆಂಬ ಕೋಲುಗಳಲ್ಲಿ ಸಾಮಾನು ಸಾಗಿಸುವವರು, ಕೊಟ್ಟಿಗೆಯೆಂಬ ದೊಣ್ಣಗೆ ಎರಡೂಕೆಡೆ ವಸ್ತುಗಳನ್ನು ತೂಗುಹಾಕಿ ಸಾಗಿಸುವವರು, ಕೊಲ್ಲಾರಬಂಡಿಗಳ ಮೇಲೆ ಸರಕುಗಳನ್ನು ಇಟ್ಟಣಿಸಿ /ಒತ್ತಾಗಿ ಹೇರಿ, (ಮುಂದುವರಿಯಿತು/ನೆಡೆದವು->), ಗೋವು ಎಮ್ಮೆಕುಲದವು ಸ್ವಲ್ಪವೂ ರಸ್ತೆಯಲ್ಲಿ ಸಂದುಬಿಡದೆ ನೆಡದವು; ಒತ್ತೊತ್ತಾಗಿ ಆನೆ ಕುದುರೆಯ ರಥಗಳಿಂದ ಕೂಡಿದ ಸೇನೆ, ಅಂದಣ/ದಿಂಬುಹಾಕಿಅಲಂಕರಿಸಿದ ಪಲ್ಲಕ್ಕಿಗಳ ಗುಂಪು ಸಾಲು ಸಾಲಾಗಿ ನಡೆದುವು; ಅವುಗಳ ಜೊತೆ ಛತ್ರಚಾಮರ ಪತಾಕೆಗಳು ಹಿಡಿದು ಜನರು ಆನಂದಿಂದ ಹೊರಟರು.

(ಪದ್ಯ -೫)

ಪದ್ಯ :-:೬:[ಸಂಪಾದಿಸಿ]

ವಿಟರ ಮೇಳಂಗಳಿಂ ಚೇಟಿಯರ ಗಡಣದಿಂ | ನಟ ವಿದೂಷಕ ವಂದಿ ಗಾಯಕರ ತಂಡದಿಂ | ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ ||
ನಟನೆಗಳ ನಡೆಯ ಭಂಗಿಯ ಬರಿಯ ಬೇಟದತಿ | ಕುಟಿಳಾಂಗದೊಲವುಗಳ ವಾರನಾರೀಜನಂ | ಕಟಕದೊಳ್ ಕಾಮುಕರ ನಡೆಗೆಡಿಸುತೊಗ್ಗಿನಿಂ ಪೊರಮಟ್ಟು ಬರುತಿರ್ದುದು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಟರ(ಕಾಮುಕರ) ಮೇಳಂಗಳಿಂ ಚೇಟಿಯರ ಗಡಣದಿಂ ನಟ ವಿದೂಷಕ ವಂದಿ ಗಾಯಕರ ತಂಡದಿಂ=[ಕಾಮುಕರ ಮೇಳಗಳು ಸೇವಕಿಯರ ಗುಂಪು, ನಟರು, ವಿದೂಷಕರು, ವಂದಿಗಳು/ಹೊಗಳುವವರು, ಗಾಯಕರು, ಇವರೆಲ್ಲರ ತಂಡದೊಂದಿಗೆ]; ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ ನಟನೆಗಳ ನಡೆಯ ಭಂಗಿಯ ಬರಿಯ ಬೇಟದ ಅತಿ ಕುಟಿಳಾಂಗದ ಒಲವುಗಳ ವಾರನಾರೀಜನಂ(ವೇಶ್ಯೆಯರು) =[ಚುಚ್ಚಿ ಮಾತಾಡವಕಟಕಿಗಳು, ವ್ಯಂಗ್ಯ ಸರಸೋಕ್ತಿಗಳನ್ನು ಆಡುವವರು, ಬೆಡಗು ಬಿನ್ನಾಣದವರು, ಹುಸಿನಗೆಯ ನೋಟಬೀರುವವರು, ನಾನಾಬಗೆಯ ನಟನೆಗಳ ನಡೆಯ ಭಂಗಿಯನ್ನು ತೋರುವವರು, ಬರಿಯಪುರುಷಾಕರ್ಷಣೆಯ ಕುಟಿಲ ಅಂಗವಿನ್ಯಾಸ ತೋರುವವರು, ಪ್ರಿತಿತೋರಿಸುವ ವೇಶ್ಯೆಯರು ಮೊದಲಾದ ಎಲ್ಲಾಬಗೆಯ ಜನರೂ ]; ಕಟಕದೊಳ್ ಕಾಮುಕರ ನಡೆಗೆಡಿಸುತ (ನಡಿಗೆಯಲ್ಲಿ ತಡೆತಡೆದು) ಒಗ್ಗಿನಿಂ ಪೊರಮಟ್ಟು ಬರುತಿರ್ದುದು=[ಈ ಪ್ರಯಾಣಿಕರ ಗುಂಪಿನಲ್ಲಿದ್ದರು, ಈ ಕಾಮುಕರ ನಡಿಗೆಯಲ್ಲಿ ತಡೆತಡೆದು ಒಟ್ಟೊಟ್ಟಿಗೆ ಗುಂಪಾಗಿ ನಗರದಿಂದ ಹೊರಟು ಬರುತ್ತಿದ್ದರು.]
  • ತಾತ್ಪರ್ಯ:ಕಾಮುಕರ ಮೇಳಗಳು ಸೇವಕಿಯರ ಗುಂಪು, ನಟರು, ವಿದೂಷಕರು, ವಂದಿಗಳು/ಹೊಗಳುವವರು, ಗಾಯಕರು, ಇವರೆಲ್ಲರ ತಂಡದೊಂದಿಗೆ ಚುಚ್ಚಿ ಮಾತಾಡವ ಕಟಕಿಗಳು, ವ್ಯಂಗ್ಯ ಸರಸೋಕ್ತಿಗಳನ್ನು ಆಡುವವರು, ಬೆಡಗು ಬಿನ್ನಾಣದವರು, ಹುಸಿನಗೆಯ ನೋಟಬೀರುವವರು, ನಾನಾಬಗೆಯ ನಟನೆಗಳ ನಡೆಯ ಭಂಗಿಯನ್ನು ತೋರುವವರು, ಬರಿಯಪುರುಷಾಕರ್ಷಣೆಯ ಕುಟಿಲ ಅಂಗವಿನ್ಯಾಸ ತೋರುವವರು, ಪ್ರಿತಿತೋರಿಸುವ ವೇಶ್ಯೆಯರು ಮೊದಲಾದ ಎಲ್ಲಾಬಗೆಯ ಜನರೂಈ ಪ್ರಯಾಣಿಕರ ಗುಂಪಿನಲ್ಲಿದ್ದರು, ಈ ಕಾಮುಕರ ನಡಿಗೆಯಲ್ಲಿ ತಡೆತಡೆದು ಒಟ್ಟೊಟ್ಟಿಗೆ ಗುಂಪಾಗಿ ನಗರದಿಂದ ಹೊರಟು ಬರುತ್ತಿದ್ದರು.]

(ಪದ್ಯ -೬)

ಪದ್ಯ :-:೭:[ಸಂಪಾದಿಸಿ]

ನಾಗಪತಿಗಸದಳಂ ಕಮಠಂಗರಿದು ದಿಶಾ | ನಾಗತತಿಗಳವಲ್ಲ ಧರಿಸಲರಿದೆಂಬಂತೆ | ನಾ ಗಣಿಸಲರಿಯೆನಿದು ಪೊಸತೆನಲ್ ಪಟಹ ನಿಸಾಳ ಕಹಳಾರವದೊಳು ||
ಸಾಗರದ ಮರ್ಧಯದಿಂದೆದ್ದುದೋ ಮತ್ತೊಂದು | ಸಾಗರಂ ಪೇಳೆನಲ್ಕಖಿಳ ಯಾದವಕಟಕ | ಸಾಗರಂ ದ್ವಾರಕಾನಗರಮಂ ಪೊರಮಟ್ಟು ನಡೆಗೊಂಡುದೇವೇಳ್ವೆನು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾಗಪತಿಗೆ ಅಸದಳಂ ಕಮಠಂಗೆ(ಕೂರ್ಮ) ಅರಿದು ದಿಶಾನಾಗತತಿಗೆ ಅಳವಲ್ಲ ಧರಿಸಲು ಅರಿದು ಎಂಬಂತೆ=[ಈ ಯಾದವಸೇನೆಯನ್ನು ಎಣಿಸಲು, ಸಾವಿರ ತಲೆಯ ಆದಿಶೇಷನಿಗೆ ಆಗದು, ಕೂರ್ಮನಿಗೆ ಆಗದು, ದಿಕ್ಕುಗಳನ್ನುಕಾಯುವ ಭೂಮಿಯನ್ನು ಹೊತ್ತ ಆನೆಗಳಿಗೆ ಈ ಸೈನ್ಯವನ್ನು ಧರಿಸಲು ಅಸಾಧ್ಯ ಎಂಬಂತೆ ಮತ್ತು]; ನಾ ಗಣಿಸಲು ಅರಿಯೆನು ಇದು ಪೊಸತೆನಲ್ ಪಟಹ ನಿಸಾಳ ಕಹಳಾ ರವದೊಳು ಸಾಗರದ ಮಧ್ಯದಿಂದ ಎದ್ದುದೋ ಮತ್ತೊಂದು ಸಾಗರಂ ಪೇಳೆನಲ್ಕೆ=[ ನಾನು ಎಣಿಸಲು ಅರಿಯೆನು ಇದು ಹಸತು ಎಂಬಂತೆ, ಪಟಹ ವೆಂಬ ದೊಡ್ಡ ತಮ್ಮಟೆ, ನಿಸಾಳ ಕಹಳೆಗಳ ಸದ್ದಿನೊಂದಿಗೆ ಸಮುದ್ರ ಮಧ್ಯದಿಂದ ಎದ್ದುಬಂತೋ ಮತ್ತೊಂದು ಸಾಗರವು ಹೇಳು ಎನೆವಂತೆ]; ಅಖಿಳ ಯಾದವಕಟಕ ಸಾಗರಂ ದ್ವಾರಕಾನಗರಮಂ ಪೊರಮಟ್ಟು ನಡೆಗೊಂಡುದೇವೇಳ್ವೆನು=[ಅಖಿಳ ಯಾದವ ಸೈನ್ಯ ಸಾಗರವು, ದ್ವಾರಕಾನಗರದಿಂದ ಹೊರಟು ನಡೆಯಿತು, ಅದು ಏನೆಂದು ಹೇಳಲಿ!].
  • ತಾತ್ಪರ್ಯ:ಈ ಯಾದವಸೇನೆಯನ್ನು ಎಣಿಸಲು, ಸಾವಿರ ತಲೆಯ ಆದಿಶೇಷನಿಗೆ ಆಗದು, ಕೂರ್ಮನಿಗೆ ಆಗದು, ದಿಕ್ಕುಗಳನ್ನುಕಾಯುವ ಭೂಮಿಯನ್ನು ಹೊತ್ತ ಆನೆಗಳಿಗೆ ಈ ಸೈನ್ಯವನ್ನು ಧರಿಸಲು ಅಸಾಧ್ಯ ಎಂಬಂತೆ ಇತ್ತು ಮತ್ತು ನಾನು ಎಣಿಸಲು ಅರಿಯೆನು ಇದು ಹೊಸತು ಎಂಬಂತೆ, ಪಟಹ ವೆಂಬ ದೊಡ್ಡ ತಮ್ಮಟೆ, ನಿಸಾಳ ಕಹಳೆಗಳ ಸದ್ದಿನೊಂದಿಗೆ ಸಮುದ್ರ ಮಧ್ಯದಿಂದ ಎದ್ದುಬಂತೋ ಮತ್ತೊಂದು ಸಾಗರವು ಹೇಳು ಎನ್ನುವಂತೆ, ಅಖಿಳ ಯಾದವ ಸೈನ್ಯ ಸಾಗರವು, ದ್ವಾರಕಾ ನಗರದಿಂದ ಹೊರಟು ನಡೆಯಿತು, ಅದು ಏನೆಂದು ಹೇಳಲಿ!

(ಪದ್ಯ -೭)

ಪದ್ಯ :-:೮:[ಸಂಪಾದಿಸಿ]

ಕಳಿಪುತೈತಂದ ವಸುದೇವ ಬಲಭದ್ರರಂ | ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ ನಿಜ | ನಿಳಯರಕ್ಷಗೆ ನಿಲಿಸಿ ಭೀಮನಂ ಬೀಳ್ಕೊಳಿಸಿ ಸಿತ ಹಯಾರೂಢನಾಗಿ ||
ಉಳಿದ ಯಾದವರೆಲ್ಲರಂ ಕೂಡಿಕೊಂಡು ಮುಂ | ದಳೆದು ಮಧುಸೂದನಂ ಮಧ್ಯ ಮಾರ್ಗದೊಳೊಂದು | ಕೊಳನಿರಲ್ಕಲ್ಲಿ ಬೀಡಂಬಿಡಿಸಿ ನಸುನಗುತೆ ರುಕ್ಮಿಣಿಯೊಳಿಂತೆಂದನು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಳಿಪುತ ಐತಂದ ವಸುದೇವ ಬಲಭದ್ರರಂ ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ=[ಕಳಿಸಲು ಬಂದ ವಸುದೇವ ಬಲಭದ್ರರಿಗೆ ನಮಸ್ಕರಿಸಿ ಬಳಿಕ ಹರಕೆಪಡೆದು,ಸಮಾಧಾನ ಪಡಿಸಿ,]; ನಿಜ ನಿಳಯರಕ್ಷಗೆ ನಿಲಿಸಿ ಭೀಮನಂ ಬೀಳ್ಕೊಳಿಸಿ ಸಿತ(ಬಿಳಿಯ) ಹಯಾರೂಢನಾಗಿ ಉಳಿದ ಯಾದವರೆಲ್ಲರಂ ಕೂಡಿಕೊಂಡು =[ತನ್ನ ದ್ವಾರಕೆಯ ರಕ್ಷಗೆ ಇಟ್ಟು, ಭೀಮನನ್ನು ಹಸ್ತನಾಪುರಕ್ಕೆ ಬೀಳ್ಕೊಟ್ಟು,ತಾನು ಬಿಳಿಯ ಕುದುರಯನ್ನು ಹತ್ತಿ ಉಳಿದ ಯಾದವರೆಲ್ಲರನ್ನೂ ಕೂಡಿಕೊಂಡು ]; ಮುಂದಳೆದು ಮಧುಸೂದನಂ ಮಣ್ಯಮಾರ್ಗದೊಳೊಂದು ಕೊಳನಿರಲ್ಕಲ್ಲಿ ಬೀಡಂಬಿಡಿಸಿ ನಸುನಗುತೆ ರುಕ್ಮಿಣಿಯೊಳಿಂತೆಂದನು=[ ಮುಂದೆಹೋಗಿ ಮಧುಸೂದನು ಮಧ್ಯ ಮಾರ್ಗದಲ್ಲಿ ಒಂದು ಕೊಳ ಸಿಗಲು ಅಲ್ಲಿ ಬೀಡನ್ನುಬಿಡಿಸಿ ನಸುನಗುತೆ ರುಕ್ಮಿಣಿಯ ಬಳಿ ಬಂದು ಃಈಗೆ ಹೇಳಿದನು.]
  • ತಾತ್ಪರ್ಯ: ಕಳಿಸಲು ಬಂದ ವಸುದೇವ ಬಲಭದ್ರರಿಗೆ ನಮಸ್ಕರಿಸಿ ಬಳಿಕ ಹರಕೆಪಡೆದು,ಸಮಾಧಾನ ಪಡಿಸಿ,ತನ್ನ ದ್ವಾರಕೆಯ ರಕ್ಷಗೆ ಇಟ್ಟು, ಭೀಮನನ್ನು ಹಸ್ತನಾಪುರಕ್ಕೆ ಬೀಳ್ಕೊಟ್ಟು,ತಾನು ಬಿಳಿಯ ಕುದುರಯನ್ನು ಹತ್ತಿ ಉಳಿದ ಯಾದವರೆಲ್ಲರನ್ನೂ ಕೂಡಿಕೊಂಡು ಮುಂದೆಹೋಗಿ ಮಧುಸೂದನು ಮಧ್ಯ ಮಾರ್ಗದಲ್ಲಿ ಒಂದು ಕೊಳ ಸಿಗಲು ಅಲ್ಲಿ ಬೀಡನ್ನುಬಿಡಿಸಿ ನಸುನಗುತೆ ರುಕ್ಮಿಣಿಯ ಬಳಿ ಬಂದು ಹೀಗೆ ಹೇಳಿದನು.

(ಪದ್ಯ -೮)

ಪದ್ಯ :-:೯:[ಸಂಪಾದಿಸಿ]

ರಾಜಮುಖಿ ನೋಡೀ ಸರೋವರದ ಪದ್ಮಿನಿಗೆ | ರಾಜಹಂಸಕ್ರೀಡೆ ಪುನ್ನಾಗಕೇಳಿ ವಿ | ಭ್ರಾಜಿತಮಧುಪಗೋಷ್ಠಿ ಸಂದಪುದು ರವಿಗೆ ತಾನರಸಿಯಾದಪಳದೆಂತೋ ||
ಸ್ತ್ರೀಜನಕೆ ಸಹಜಮಿದು ಮೇಲೆ ಕರ್ದಮಜಾತೆ | ಮಾಜುವಳೆದೆಯೊಳಿರ್ದ ಕೃಷ್ಣತೆಯನಿದು ಜಗಕೆ | ಸೋಜಿಗವೆ ಚಂಚಲೆಯಲಾ ಪತಿಯನೆಣೀಸುವಳೆ ಪೇಳೆಂದೊಡಿಂತೆಂದಳು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಜಮುಖಿ ನೋಡೀ ಸರೋವರದ ಪದ್ಮಿನಿಗೆ ರಾಜಹಂಸಕ್ರೀಡೆ ಪುನ್ನಾಗ(ಹೂವು,ಒಳ್ಳೆ ಪುರಷ)ಕೇಳಿ ವಿಭ್ರಾಜಿತಮಧುಪಗೋಷ್ಠಿ ಸಂದಪುದು=[ಚಂದ್ರವದನೆ ರುಕ್ಮಿಣಿಯೇ, ನೋಡು ಸರೋವರದ ಪದ್ಮಿನಿಗೆ/ ಕಮಲಕ್ಕೆ(ಪದ್ಮಿನಿ ಹೆಣ್ಣಿಗೆ) ರಾಜಹಂಸದ ಜೊತೆ ಕ್ರೀಡೆಯು(ರಾಜನಜೊತೆ ಕ್ರೀಡೆಯು) ಪುನ್ನಾಗಕೇಳಿ/ಆನೆಯಜೊತೆ ಆಟವು (ಪರ-ಪುರಷನ ಜೊತೆ ಕೇಳಿಯು ಸಹಜ) ವಿಭ್ರಾಜಿತ ಮಧುಪಗೋಷ್ಠಿ(ಜೇನು ಹುಳುಗಳ ಸಹವಾಸ/ ಮದ್ಯಪಾನವೂ ಆಗುವುದು) ಸಂದಪುದು]; ರವಿಗೆ ತಾನರಸಿಯಾದಪಳದೆಂತೋ ಸ್ತ್ರೀಜನಕೆ ಸಹಜಮಿದು=[ಸೂರ್ಯನಿಗೆ ತಾನು ಪದ್ಮವು ರಾಣಿಯಾದರೂ, ಜೇನು ಹುಳುಗಳ ಸಹವಾಸಮಾಡುವಂತೆ, ಪರಪುರುಷನಸಂಗ ಸ್ತ್ರೀಯರಿಗೆ ಸಹಜವಾದುದು, ]; ಮೇಲೆ ಕರ್ದಮ(ಕೆಸರು)ಜಾತೆ(ಕಮಲ)/ (ಋಷಿಯ ಮಗಳು) ಮಾಜುವಳು(ಮುಚ್ಚುವಳು) ಎದೆಯೊಳ್ ಇರ್ದ ಕೃಷ್ಣತೆಯನು ಇದು ಜಗಕೆ ಸೋಜಿಗವೆ ಚಂಚಲೆಯಲಾ ಪತಿಯನು ಎಣೀಸುವಳೆ ಪೇಳೆಂದೊಡೆ ಇಂತೆಂದಳು=[ಅಂದಮೇಲೆ ಕರ್ದಮಜಾತೆಯಾದ ಕಮಲವು ತನ್ನ ಎದೆಯಲ್ಲದ್ದ ಕಪ್ಪನ್ನು ಮುಚ್ಚಿಕೊಳ್ಳವುದಯ ಸಹಜ, (ಕರ್ದಮಮುನಿ ಮಗಳು ಪರನನ್ನು ಪ್ರೀತಿಸಿ, ತನ್ನ ಎದೆಯಲ್ಲಿದ್ದ ಕಪ್ಪನ್ನು/ತಪ್ಪನ್ನು ಮುಚ್ಚಿಕೊಳ್ಳುವದು ಜಗತ್ತಿಗೆ ಸೋಜಿಗವಲ್ಲ ಆಲ್ಲವೇ/ ಏಕೆಂದರೆ ಹೆಣ್ಣು ಚಂಚಲೆಯು ಪತಿಯನ್ನು ಎಣಿಸುವವಳಲ್ಲ/ಕಂಡು ಭಯಪಡುವವಳಲ್ಲ. ಏನು ಹೇಳುವೆ ಎಂದಾಗ ಅವಳು ಹೇಳಿದಳು. ಪೇಳೆಂದೊಡಿಂತೆಂದಳು].
  • ತಾತ್ಪರ್ಯ:ಕೃಷ್ಣನು ದ್ವಂದ್ವಾರ್ಥದಲ್ಲಿ ಸರೋವರದಲ್ಲಿದ್ದ ಕಮಲದ ಉದಾಹರಣೆ ಕೊಟ್ಟು, ಹೆಣ್ಣು ಚಂಚಲೆ, ಎಂದು ಛೇಡಿಸುವನು: ಚಂದ್ರವದನೆ ರುಕ್ಮಿಣಿಯೇ, ನೋಡು ಈ ಸರೋವರದ ಪದ್ಮಿನಿಗೆ/ ಕಮಲಕ್ಕೆ(ಪದ್ಮಿನಿ ಹೆಣ್ಣಿಗೆ) ರಾಜಹಂಸದ ಜೊತೆ ಕ್ರೀಡೆಯು(ಪದ್ಮಿನಿ ಹೆಣ್ಣಿಗೆ ರಾಜನ ಜೊತೆ ಕ್ರೀಡೆಯು), ಪುನ್ನಾಗಕೇಳಿ/ಆನೆಯ ಜೊತೆ ಆಟವು (ಪರ-ಪುರಷನ ಜೊತೆ ಕೇಳಿಯು ಸಹಜ) ವಿಭ್ರಾಜಿತ ಮಧುಪಗೋಷ್ಠಿ(ಜೇನು ಹುಳುಗಳ ಸಹವಾಸ/ ಮದ್ಯಪಾನವೂ ಆಗುವುದು) ಸಂದಪುದು]; ಸೂರ್ಯನಿಗೆ ತಾನು ಪದ್ಮವು ರಾಣಿಯಾದರೂ, ಜೇನು ಹುಳುಗಳ ಸಹವಾಸ ಮಾಡುವಂತೆ, ಪರಪುರುಷನ ಸಂಗ ಸ್ತ್ರೀಯರಿಗೆ ಸಹಜವಾದುದು; ಅಂದಮೇಲೆ ಕರ್ದಮಜಾತೆಯಾದ ಕಮಲವು ತನ್ನ ಎದೆಯಲ್ಲಿದ್ದ ಕಪ್ಪನ್ನು ಮುಚ್ಚಿಕೊಳ್ಳವುದು ಸಹಜ, (ಕರ್ದಮಮುನಿ ಮಗಳು ಪರನನ್ನು ಪ್ರೀತಿಸಿ, ತನ್ನ ಎದೆಯಲ್ಲಿದ್ದ ಕಪ್ಪನ್ನು/ತಪ್ಪನ್ನು ಮುಚ್ಚಿಕೊಳ್ಳುವಂತೆ, ಜಗತ್ತಿಗೆ ಸೋಜಿಗವಲ್ಲ ಆಲ್ಲವೇ/ ಏಕೆಂದರೆ ಹೆಣ್ಣು ಚಂಚಲೆಯು ಪತಿಯನ್ನು ಎಣಿಸುವವಳಲ್ಲ/ಕಂಡು ಭಯಪಡುವವಳಲ್ಲ. ಏನು ಹೇಳುವೆ ಎಂದಾಗ ಅವಳು ಹೇಳಿದಳು.

(ಪದ್ಯ -೯)

ಪದ್ಯ :-:೧೦:[ಸಂಪಾದಿಸಿ]

ದೇವ ನೀ ಪದ್ಮಿನಿಗೆ ಪಳಿವನಾರೋಪಿಸುವು | ದಾವ ಸಮ್ಮತಿ ರಾಜಹಂಸ ಪುನ್ನಾಗ ಮಧು | ಪಾವಳಿಯನೋವಲಾಗದೆ ಮಾತೆ ಮಕ್ಕಳೊಡಗೂಡಿರ್ದೊಡೇಂ ಧರೆಯೊಳು ||
ಜೀವನಂ ನಿಂದೊಡಾದುದದು ಪಂಕಮಿಲ್ಲಿ ತಾ | ನಾವಿರ್ಭವಿಸಿದೊಡೇಂ ಕೃಷ್ಣಹೃದಯಕೆ ದೋಷ | ಮಾವುದಾಣ್ಮಗೆ ನಡುನಡುಗಿದೊಡೆ ಚಂಚಲೆಯೆ ನಾವರಿಯೆವಿದನೆಂದಳು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವ ನೀ ಪದ್ಮಿನಿಗೆ ಪಳಿವನು ಆರೋಪಿಸುವುದು ಆವ ಸಮ್ಮತಿ=[ಪತಿದೇವ ನೀವು ಪದ್ಮಿನಿಗೆ/ಕಮಲಕ್ಕೆ ಅಥವಾ ನನಗೆ ದೋಷವನ್ನು ಆರೋಪಿಸುವುದು ಯಾವ ರೀತಿ ಸರಿ-ಸರಿಯಲ್ಲ]; ರಾಜಹಂಸ ಪುನ್ನಾಗ ಮಧುಪಾವಳಿಯನು ಓವಲಾಗದೆ ಮಾತೆ ಮಕ್ಕಳೊಡಗೂಡಿ ಇರ್ದೊಡೇಂ ಧರೆಯೊಳು=[ರಾಜಹಂಸ, ಆನೆಗಳು, ಜೇನುಹುಳುಗಳು ಆಹಾರಕ್ಕಾಗಿ ಬಂದಾಗ ಕಮಲವು ತಾಯಿಯಂತೆ ಅದನ್ನು ಕಾಪಾಡಬಾರದೇ? ಅದರಲ್ಲೇನು ತಪ್ಪು? ಈ ಭೂಮಿಯಲ್ಲಿ ಮಾತೆ ಮಕ್ಕಳೊಡಗೂಡಿ ಇದ್ದರೆ ಏನು ತಪ್ಪು?]; ಜೀವನಂ(ನೀರು) ನಿಂದೊಡೆ ಆದುದು ಅದು ಪಂಕಮಿಲ್ಲಿ(ಕೆಸರು) ತಾನು ಆವಿರ್ಭವಿಸಿದೊಡೆ ಏಂ ಕೃಷ್ಣಹೃದಯಕೆ ದೋಷ ಮಾವುದು ಆಣ್ಮಗೆ(ಗಂಡನಿಗೆ) ನಡುನಡುಗಿದೊಡೆ ಚಂಚಲೆಯೆ ನಾವು ಅರಿಯೆವು ಇದನು ಎಂದಳು=ನೀರು ನಿಂತು ಇಲ್ಲಿ ಬುಡದಲ್ಲಿ ಕೆಸರು ಆಗಿದೆ ಆದರಿಂದ ಕಮಲ ಹುಟ್ಟಿದರೆ, ಅದರ ಮಧ್ಯದಲ್ಲಿ/ಹೃದಯದಲ್ಲಿ ಕೃಷ್ಣ/ಕಪ್ಪು ದೋಷ ಯಾವುದು,ಕೃಷ್ಣನನ್ನು ಹೃದಯದಲ್ಲಿ ಇಟ್ಟುಕೊಂಡಿರುವ ನನಗೆ ದೋಷ ಯಾವುದು? ಗಂಡನಿಗೆ ಹೆದರಿ ನಡುನಡುಗಿದರೆ ಚಂಚಲೆಯೆ? ನಾವು ಅರಿಯೆವು ಇದನ್ನು ಎಂದಳು ಎಂದಳು ].
  • ತಾತ್ಪರ್ಯ:ಪತಿದೇವ ನೀವು ಪದ್ಮಿನಿಗೆ/ಕಮಲಕ್ಕೆ ಅಥವಾ ನನಗೆ ದೋಷವನ್ನು ಆರೋಪಿಸುವುದು ಯಾವ ರೀತಿ ಸರಿ-ಸರಿಯಲ್ಲ; ರಾಜಹಂಸ, ಆನೆಗಳು, ಜೇನುಹುಳುಗಳು ಆಹಾರಕ್ಕಾಗಿ ಬಂದಾಗ ಕಮಲವು ತಾಯಿಯಂತೆ ಅದನ್ನು ಕಾಪಾಡಬಾರದೇ? ಅದರಲ್ಲೇನು ತಪ್ಪು? ಈ ಭೂಮಿಯಲ್ಲಿ ಮಾತೆ ಮಕ್ಕಳೊಡಗೂಡಿ ಇದ್ದರೆ ಏನು ತಪ್ಪು? ನೀರು ನಿಂತು ಇಲ್ಲಿ ಬುಡದಲ್ಲಿ ಕೆಸರು ಆಗಿದೆ ಆದರಿಂದ ಕಮಲ ಹುಟ್ಟಿದರೆ, ಅದರ ಮಧ್ಯದಲ್ಲಿ/ಹೃದಯದಲ್ಲಿ ಕೃಷ್ಣ/ಕಪ್ಪು ದೋಷ ಯಾವುದು,ಕೃಷ್ಣನನ್ನು ಹೃದಯದಲ್ಲಿ ಇಟ್ಟುಕೊಂಡಿರುವ ನನಗೆ ದೋಷ ಯಾವುದು? ಗಂಡನಿಗೆ ಹೆದರಿ ನಡುನಡುಗಿದರೆ ಚಂಚಲೆಯೆ? ನಾವು ಅರಿಯೆವು ಇದನ್ನು ಎಂದಳು ಎಂದಳು.

(ಪದ್ಯ -೧೦)

ಪದ್ಯ :-:೧೧:[ಸಂಪಾದಿಸಿ]

ಪುರಷನೊರ್ವಂಗೆ ನಾರಿಯರುಂಟು ಪಲಬರೀ | ಧರೆಯೊಳಂಗನೆಗೆ ಪತಿಯೊರ್ವನೇ ಗತಿಯೆಂಬ | ಪರಿವಿಡಿಯ ನರುಹಿಸುವೊಡಾವಿರ್ವರಲ್ಲದೊರ್ವರುಮಿಲ್ಲಮಿನ್ನು ಬರಿದೆ ||
ಸರಸಿಯೊಳಗಣ ಪದ್ಮಿನಿಯನೆ ದೂಷಿಸಬೇಡ | ಪರಮಪಾವನೆಯೆಂದು ಶಿವನುತ್ತಮಾಂಗದೊಳ್ | ದುಸಿದನೆನಲ್ ಪತಿವ್ರತೆಯಲ್ಲದಿಹಳೆ ಪೇಳೆಂದು ರುಕ್ಮಿಣಿ ನುಡಿದಳು ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪುರಷನು ಓರ್ವಂಗೆ ನಾರಿಯರುಂಟು ಪಲಬರು ಈ ಧರೆಯೊಳು=[ಈ ಭೂಮಿಯ ನಿಯಮದಲ್ಲಿ ಒಬ್ಬ ಪುರಷನಿಗೆ ಹಲವರು ಪತ್ನಿಯರು ಇರುವರು.]; ಅಂಗೆನೆಗೆ ಪತಿಯೊರ್ವನೇ ಗತಿಯೆಂಬ ಪರಿವಿಡಿಯನು ಅರುಹಿಸುವೊಡೆ ಆವಿರ್ವರ್ ಅಲ್ಲದ ಒರ್ವರುಮಿಲ್ಲಮ್=[ಆದರೆ ಹೆಣ್ಣಿಗೆ ಪತಿಯು ಒಬ್ಬನೇ ಗತಿಯೆಂಬ ಶಾಸ್ತ್ರವನ್ನು ನನಗೆ ತಿಳಿಸಿ ಹೇಳಿದರೆ, ನಾವು ಇಬ್ಬರೇ ಅಲ್ಲದೆ ಮತ್ತೊಬ್ಬರು ಇಲ್ಲವು]; ಇನ್ನು ಬರಿದೆ ಸರಸಿಯೊಳಗಣ ಪದ್ಮಿನಿಯನೆ ದೂಷಿಸಬೇಡ=[ಇನ್ನು ಸುಮ್ಮಸುಮ್ಮನೆ ಕೆರೆಯಲ್ಲರುವ ಕಮಲದೊಡನೆ/ಪದ್ಮಿನಿಯನೆ ಹೋಲಿಸಿ ದೂಷಿಸಬೇಡ]; ಪರಮಪಾವನೆಯೆಂದು ಶಿವನು ಉತ್ತಮಾಂಗದೊಳ್ ಧರಿಸಿದನೆನಲ್ ಪತಿವ್ರತೆಯಲ್ಲದಿಹಳೆ ಪೇಳೆಂದು ರುಕ್ಮಿಣಿ ನುಡಿದಳು=[ಎಲ್ಲಾ ಸ್ತ್ರೀಯರನ್ನೂ ಚಂಚಲೆಯೆಂದು ಒಂದೇ ನಿಯಮದಲ್ಲಿ ದೂಷಿಸಬೇಡ, ಸ್ತ್ರೀಯಾದ ಗಂಗೆಯನ್ನು ಪರಮಪಾವನೆಯೆಂದು ಶಿವನು ತಲೆಯಮೇಲೆ ಧರಿಸಿದ್ದಾನೆ ಎಂದಮೇಲೆ, ಅವಳು ಪತಿವ್ರತೆಯಲ್ಲದೆ ಇರುವಳೇ? ಹೇಳೆಂದು ರುಕ್ಮಿಣಿ ನುಡಿದಳು ].
  • ತಾತ್ಪರ್ಯ:ಈ ಭೂಮಿಯ ನಿಯಮದಲ್ಲಿ ಒಬ್ಬ ಪುರಷನಿಗೆ ಹಲವರು ಪತ್ನಿಯರು ಇರುವರು.ಆದರೆ ಹೆಣ್ಣಿಗೆ ಪತಿಯು ಒಬ್ಬನೇ ಗತಿಯೆಂಬ ಶಾಸ್ತ್ರವನ್ನು ನನಗೆ ತಿಳಿಸಿ ಹೇಳಿದರೆ, ನಾವು ಇಬ್ಬರೇ ಅಲ್ಲದೆ ಮತ್ತೊಬ್ಬರು ಇಲ್ಲವು; ಇನ್ನು ಸುಮ್ಮಸುಮ್ಮನೆ ಕೆರೆಯಲ್ಲರುವ ಕಮಲದೊಡನೆ/ಪದ್ಮಿನಿಯನೆ ಹೋಲಿಸಿ ದೂಷಿಸಬೇಡ; ಎಲ್ಲಾ ಸ್ತ್ರೀಯರನ್ನೂ ಚಂಚಲೆಯೆಂದು ಒಂದೇ ನಿಯಮದಲ್ಲಿ ದೂಷಿಸಬೇಡ, ಸ್ತ್ರೀಯಾದ ಗಂಗೆಯನ್ನು ಪರಮಪಾವನೆಯೆಂದು ಶಿವನು ತಲೆಯಮೇಲೆ ಧರಿಸಿದ್ದಾನೆ ಎಂದಮೇಲೆ, ಅವಳು ಪತಿವ್ರತೆಯಲ್ಲದೆ ಇರುವಳೇ? ಹೇಳೆಂದು ರುಕ್ಮಿಣಿ ನುಡಿದಳು.

(ಪದ್ಯ -೧೧)

ಪದ್ಯ :-:೧೨:[ಸಂಪಾದಿಸಿ]

ನರಕಾಂತ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ | ನರಕಾಂತಕಂ ಮೆಚ್ಚಿ ನಸುನಗುತೆ ನಿಂದು ವಾ | ನರಕಾಂತಕೇತನಾಗ್ರಜನೊಳ್ ಸರಸವಾಡುತೊಲವಿಂದೆ ಪಾಳೆಯವನು ||
ಸರದ ಸುತ್ತಣ ತೀರದೊಳ್ ಬಿಡಿಸಿ ಸುಭಟಪ್ರ | ಸರದ ಸುಯ್ದಾನದಿಂದಿರ್ದನಂದು ಪರಿವಾ | ಸರದ ಸೂರ್ಯೋದಯದೊಳಲ್ಲಿಂದೆ ಯಾದವರ ದಂಡು ನಡೆದುದು ಪಥದೊಳು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನರಕಾಂತ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ ನರಕಾಂತಕಂ(ನರಕನನ್ನು ಕೊಂದವ) ಮೆಚ್ಚಿ ನಸುನಗುತೆ ನಿಂದು=[ರಾಜನೇ ಕೇಳು, ಬಳಿಕ ರುಕ್ಮಿಣಿಯ ಮಾತಿಗೆ ಕೃಷ್ಣನು ಮೆಚ್ಚಿ ನಸುನಗುತ್ತಾ ನಿಂತು,]; ವಾನರಕಾಂತಕೇತನಾಗ್ರಜನೊಳ್(ವಾನರಕಾತ-ಕಪಿಗಳೊಡೆಯ ಹನುಮಂತನ ಧ್ವಜದದವ ಅರ್ಜುನನ ಅಣ್ಣ) ಸರಸವಾಡುತ ಒಲವಿಂದೆ ಪಾಳೆಯವನು ಸರದ ಸುತ್ತಣ ತೀರದೊಳ್ ಬಿಡಿಸಿ ಸುಭಟಪ್ರಸರದ(ಸೈನ್ಗದ) ಸುಯ್ದಾನ (ಪಹರೆ)ದಿಂದ ಇರ್ದನು ಅಂದು=[ಭೀಮನ ಸಂಗಡ ಸರಸವಾಡುತ್ತಾ ಪ್ರೀತಿಯಿಂದ ಪಾಳೆಯವನ್ನು ಸರೋವರದ ಸುತ್ತ ತೀರದಲ್ಲಿ ಬಿಡಿಸಿ, ಸೈನ್ಯದ ಪಹರೆಯನ್ನು ಏರ್ಪಡಿಸಿ ಅಂದು ಅಲ್ಲಿದ್ದು]; ಪರಿವಾಸರದ(ಮಾರನೇದಿನ) ಸೂರ್ಯೋದಯದೊಳ್ ಅಲ್ಲಿಂದೆ ಯಾದವರ ದಂಡು ನಡೆದುದು ಪಥದೊಳು=[ಮಾರನೇದಿನ ಸೂರ್ಯೋದಯದೊಲ್ಲಿ ಅಲ್ಲಿಂದ ಯಾದವರ ದಂಡು ದಾರಿಹಿಡಿದು ನಡೆಯಿತು].
  • ತಾತ್ಪರ್ಯ:ರಾಜನೇ ಕೇಳು, ಬಳಿಕ ರುಕ್ಮಿಣಿಯ ಮಾತಿಗೆ ಕೃಷ್ಣನು ಮೆಚ್ಚಿ ನಸುನಗುತ್ತಾ ನಿಂತು,ಭೀಮನ ಸಂಗಡ ಸರಸವಾಡುತ್ತಾ ಪ್ರೀತಿಯಿಂದ ಪಾಳೆಯವನ್ನು ಸರೋವರದ ಸುತ್ತ ತೀರದಲ್ಲಿ ಬಿಡಿಸಿ, ಸೈನ್ಯದ ಪಹರೆಯನ್ನು ಏರ್ಪಡಿಸಿ ಅಂದು ಅಲ್ಲಿದ್ದು; ಮಾರನೇದಿನ ಸೂರ್ಯೋದಯದೊಲ್ಲಿ ಅಲ್ಲಿಂದ ಯಾದವರ ದಂಡು ದಾರಿಹಿಡಿದು ನಡೆಯಿತು.

(ಪದ್ಯ -೧೨)

ಪದ್ಯ :-:೧೩:[ಸಂಪಾದಿಸಿ]

ಆ ಮಾಧವಂ ಪಯಣಗತಿಯಿಂದೆ ಗಜಪುರದ | ಸೀಮೆಗೈತಂದು ಗಂಗಾನದಿಯ ತೀರದೊಳ್ | ಭೀಮನಂ ಸುಯ್ದಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ ||
ಭೂಮೀಶ ದರ್ಶನೋತ್ಸವಕೆ ಬಿಜಯಂಗೈದ | ನಾ ಮಧ್ಯಮಾರ್ಗದೊಳ್ ಕಂಡುದು ಮಹಾಜನಂ | ತಾಮರಸನೇತ್ರನಂ ತಮತಮಗೆ ನುತಿಸಿದರ್ ನಿಗಮಾಗಮೋಕ್ತಿಯಿಂದೆ ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಮಾಧವಂ(ಮಾ:ಲಕ್ಷ್ಮಿ,ಧವ:ಪತಿ) ಪಯಣಗತಿಯಿಂದೆ ಗಜಪುರದ ಸೀಮೆಗೈತಂದು ಗಂಗಾನದಿಯ ತೀರದೊಳ್ ಭೀಮನಂ ಸುಯ್ದಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ=[ಆ ಮಾಧವನು ಪಯಣಮಾಡಿ ಹಸ್ತಿನಾಪುರದ ರಾಜ್ಯಕ್ಕೆ ಬಂದು ಗಂಗಾನದಿಯ ತೀರದಲ್ಲಿ ಯಾದವರ ಸೈನ್ಯ ಸಾಗರವನಲ್ಲಿ ಬಿಡಿಸಿ ಬೀಡು ಬಿಟ್ಟು ಭೀಮನನ್ನು ಕಾವಲಿಗಿರಿಸಿ ]; ಭೂಮೀಶ ದರ್ಶನೋತ್ಸವಕೆ ಬಿಜಯಂಗೈದನಾ ಮಧ್ಯಮಾರ್ಗದೊಳ್ ಕಂಡುದು=[ ರಾಜ ಧರ್ಮಜನ ದರ್ಶನದ ಉತ್ಸವಕ್ಕೆ(ಆನಂದಕ್ಕೆ) ಪ್ರಯಾಣಮಾಡಿದನು ಮಧ್ಯಮಾರ್ಗದಲ್ಲಿ ಕಂಡುದು]; ಮಹಾಜನಂ ತಾಮರಸನೇತ್ರನಂ (ಕಮಲನೇತ್ರ) ತಮತಮಗೆ ನುತಿಸಿದರ್ ನಿಗಮಾಗಮೋಕ್ತಿಯಿಂದೆ=[ರಾಜ್ಯದ ಮಹಾಜನರ ಸಮೂಹ, ಕೃಷ್ಣನನ್ನು ಕಂಡು ತಮತಮಗೆ ತಿಳಿದಂತೆ ನಾನಾಬಗೆಯಲ್ಲಿ ಮತ್ತು ನಿಗಮ ಆಗಮಗಳ ಉಕ್ತಿಗಳಿಂದ ಸ್ತೋತ್ರಮಾಡಿದರು.]
  • ತಾತ್ಪರ್ಯ:ಆ ಮಾಧವನು ಪಯಣಮಾಡಿ ಹಸ್ತಿನಾಪುರದ ರಾಜ್ಯಕ್ಕೆ ಬಂದು ಗಂಗಾನದಿಯ ತೀರದಲ್ಲಿ ಯಾದವರ ಸೈನ್ಯ ಸಾಗರವನಲ್ಲಿ ಬಿಡಿಸಿ ಬೀಡು ಬಿಟ್ಟು ಭೀಮನನ್ನು ಕಾವಲಿಗಿರಿಸಿ, ರಾಜ ಧರ್ಮಜನ ದರ್ಶನದ ಉತ್ಸವಕ್ಕೆ(ಆನಂದಕ್ಕೆ) ಪ್ರಯಾಣಮಾಡಿದನು ಮಧ್ಯಮಾರ್ಗದಲ್ಲಿ ರಾಜ್ಯದ ಮಹಾಜನರ ಸಮೂಹ, ಕೃಷ್ಣನನ್ನು ಕಂಡು ತಮತಮಗೆ ತಿಳಿದಂತೆ ನಾನಾಬಗೆಯಲ್ಲಿ ಮತ್ತು ನಿಗಮ ಆಗಮಗಳ ಉಕ್ತಿಗಳಿಂದ ಸ್ತೋತ್ರಮಾಡಿದರು.

(ಪದ್ಯ -೧೩)

ಪದ್ಯ :-:೧೪:[ಸಂಪಾದಿಸಿ]

ಶ್ರುತಿ ಧರ್ಮಶಾಸ್ತ್ರಾಗಮ ಸ್ಮೃತಿ ವಿಚಾರದಿಂ | ಗತಿಗೆಟ್ಟ ಬ್ರಹ್ಮಹತ್ಯಾದಿಪಾತಕಕೆ ನಿ | ಷ್ಕೃತಿ ತವಸ್ಮರಣಮಾತ್ರದೊಳಪ್ಪುದೆಂದೊಡಾಶ್ರಮನಾಲ್ಕರೊಳ್ ಮಾಡಿದ ||
ವ್ರತ ದಾನ ಜಪ ತಪಸ್ಸ್ಯಾಧ್ಯಾಯ ಪೂಜೆ ಸ | ತ್ಕ್ರತು ಸಮಾಧಿಗಳೆಮಗೆ ನಿನ್ನ ನೀಕ್ಷಿಸಲನು | ಷ್ಠಿತಮಾದುವೆಂಬುದೇಂ ನುತಿಯೆ ನಿನಗೆಂದು ಹರಿಯಂ ಪೊಗಳ್ದರಾ ಪಾರ್ವರು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶ್ರುತಿ ಧರ್ಮಶಾಸ್ತ್ರಾಗಮ ಸ್ಮೃತಿ ವಿಚಾರದಿಂ ಗತಿಗೆಟ್ಟ= [ಶ್ರುತಿ (ವೇದಗಳು) ಧರ್ಮಶಾಸ್ತ್ರ ಆಗಮ ಸ್ಮೃತಿ(ಮನು ಇತ್ಯಾದಿ ರಚಿತ) ವಿಚಾರದಿಂ=ವಿಚಾರದಿಂದ ನಿಷೇಧವಾದದ್ದನ್ನು ಮಾಡಿ (ಗತಿಗೆಟ್ಟ)ಪರಗತಿ ಇಲ್ಲದಂತೆ ಆದ], ಬ್ರಹ್ಮಹತ್ಯಾದಿ ಪಾತಕಕೆ ನಿಷ್ಕೃತಿ(ಪರಿಹಾರ) ತವಸ್ಮರಣ ಮಾತ್ರದೊಳ್ ಅಪ್ಪುದೆಂದೊಡೆ=[ಬ್ರಹ್ಮಹತ್ಯ ಮೊದಲಾದ ಪಂಚಮಹಾಪಾತಕಗಳಿಗೆ ಪರಿಹಾರ ನಿನ್ನ ಸ್ಮರಣೆಮಾಡಿದ ಮಾತ್ರದಲ್ಲಿ ಆಗುವುದೆಂದರೆ]; ಆಶ್ರಮ ನಾಲ್ಕರೊಳ್ ಮಾಡಿದ ವ್ರತ ದಾನ ಜಪ ತಪಸ್ಸ್ಯಾಧ್ಯಾಯ ಪೂಜೆ ಸತ್ಕ್ರತು ಸಮಾಧಿಗಳು ಎಮಗೆ ನಿನ್ನನು ಈಕ್ಷಿಸಲು ಅನುಷ್ಠಿತಮಾದುವು ಎಂಬುದೇಂ ನುತಿಯೆ ನಿನಗೆಂದು ಹರಿಯಂ ಪೊಗಳ್ದರಾ ಪಾರ್ವರು=[ಬ್ರಹ್ಮಚರ್ಯ,ಗೃಹಸ್ಥಾಶ್ರಮ,ವಾನಪ್ರಸ್ಥ,ಸಂನ್ಯಾಸ ಈ ನಾಲ್ಕರಲ್ಲಿ ಮಾಡಿದ ವ್ರತ ದಾನ ಜಪ ತಪಸ್ಸ್ಯಾಧ್ಯಾಯ ಪೂಜೆ ಸತ್ಕ್ರತು ಸಮಾಧಿಗಳು, ನಮಗೆ ನಿನ್ನ ದರ್ಶನ ಮಾಡಲು,ಸಿಗುವುದೆಂದು,ಅದೇ ನಿನಗೆ ಸ್ತುತಿ ನಿನಗೆಂದು ಆ ಪುರಜನರು ಹರಿಯನ್ನು ಹೊಗಳಿದರು.]
  • ತಾತ್ಪರ್ಯ:ವಿಚಾರದಿಂದ ನಿಷೇಧವಾದದ್ದನ್ನು ಮಾಡಿ (ಗತಿಗೆಟ್ಟ)ಪರಗತಿ ಇಲ್ಲದಂತೆ ಆದ, ಬ್ರಹ್ಮಹತ್ಯ ಮೊದಲಾದ ಪಂಚಮಹಾಪಾತಕಗಳಿಗೆ ಪರಿಹಾರ ನಿನ್ನ ಸ್ಮರಣೆಮಾಡಿದ ಮಾತ್ರದಲ್ಲಿ ಆಗುವುದೆಂದರೆ; ಬ್ರಹ್ಮಚರ್ಯ,ಗೃಹಸ್ಥಾಶ್ರಮ,ವಾನಪ್ರಸ್ಥ,ಸಂನ್ಯಾಸ ಈ ನಾಲ್ಕರಲ್ಲಿ ಮಾಡಿದ ವ್ರತ ದಾನ ಜಪ ತಪಸ್ಸ್ಯಾಧ್ಯಾಯ ಪೂಜೆ ಸತ್ಕ್ರತು ಸಮಾಧಿಗಳು, ನಮಗೆ ನಿನ್ನ ದರ್ಶನ ಮಾಡಲು,ಸಿಗುವುದೆಂದು,ಅದೇ ನಿನಗೆ ಸ್ತುತಿ ಎಂದು ಆ ಪುರಜನರು ಹರಿಯನ್ನು ಹೊಗಳಿದರು.

(ಪದ್ಯ -೧೪)

ಪದ್ಯ :-:೧೫:[ಸಂಪಾದಿಸಿ]

ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ | ಶ್ರೇಣಿ ತಮತಮಗೆ ಮುಗಿದೆತ್ತಿದರ್ ನೊಸಲೆಡೆಗೆ | ಪಾಣಿಗಳನಾ ಪಥದೊಳೊರ್ವ ನರ್ತಕಿ ಬಂದು ನಾನಾಪ್ರಕಾರದಿಂದೆ ||
ವೇಣು ವೀಣಾದಿ ಸಂಗೀತ ವಾದ್ಯಶ್ರುತಿಯ | ಕೇಣಿಗೊಂಡುರುಪು ತಿರುಸಭಿನವಕಳಾ ಸಪ್ರ ಮಾಣದ ಸುವೃತ್ತದಿಂ ಮೆಚ್ಚಿಸಿದಳಚ್ಯುತನಚ್ಚರಿಯರಚ್ಚರಿಯೆನೆ ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ ಶ್ರೇಣಿ=[ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ,ಕೃಷ್ಣನನ್ನು ಸಕಲಜನ ಸಮೂಹವೂ ಕಂಡರು]; ತಮತಮಗೆ ಮುಗಿದೆತ್ತಿದರ್ ನೊಸಲೆಡೆಗೆ ಪಾಣಿಗಳನಾ=[ತಮತಮಗೆ ತೋರಿದಂತೆ ಕೈಮುಗಿದರು, ಕೈಗಳನ್ನು ಹಣೆವರೆಗೆ ಎತ್ತಿದರು]; ಪಥದೊಳೊರ್ವ ನರ್ತಕಿ ಬಂದು ನಾನಾಪ್ರಕಾರದಿಂದೆ ವೇಣು ವಿಣಾದಿ ಸಂಗೀತ ವಾದ್ಯಶ್ರುತಿಯ ಕೇಣಿಗೊಂಡುರುಪು ತಿರುಸಭಿನವಕಳಾ ಸಪ್ರಮಾಣದ ಸುವೃತ್ತದಿಂ ಮೆಚ್ಚಿಸಿದಳಚ್ಯುತನ ಅಚ್ಚರಿಯರು(ಅಪ್ರೆಯರು) ಅಚ್ಚರಿಯೆನೆ =[ದಾರಿಯಲ್ಲಿ ಒಬ್ಬ ನರ್ತಕಿ ಬಂದು ನಾನಾಪ್ರಕಾರದಿಂದ ವೇಣು/ಕೊಳಲು, ವೀಣಾದಿ ಸಂಗೀತ ವಾದ್ಯಶ್ರುತಿಯ ಕೇಣಿಗೊಂಡು(ಹೊಂದಿಸಿಕೊಂಡು) ಉರುಪು ತಿರುಸು (ಹಾಗೊಮ್ಮೆ ಹೀಗೊಮ್ಮೆ ತಿರುಗಿ, ಹಿಂದಕ್ಕೆ ಮುಂದಕ್ಕೆ ಸಂಚರಿಸಿ ತಿರುಗಿ) ಅಭಿನವಕಲೆಯ ಸಪ್ರಮಾಣದ ಸುವೃತ್ತದಿಂದ ನರ್ತಿಸಿ ಅಚ್ಯುತನನ್ನು ಮೆಚ್ಚಿಸಿದಳು; ಅವಳ ನರ್ನಕ್ಕೆ ಅಪ್ಸರೆಯರೂ ಅಚ್ಚರಿಪಡುವಂತಿತ್ತು.]
  • ತಾತ್ಪರ್ಯ:ನಗರದೊಳಗೆ ಬರುತ್ತಿರುವಾಗ,ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ,ಕೃಷ್ಣನನ್ನು ಸಕಲಜನ ಸಮೂಹವೂ ಕಂಡರು; ತಮತಮಗೆ ತೋರಿದಂತೆ ಕೈಮುಗಿದರು, ಕೈಗಳನ್ನು ಹಣೆವರೆಗೆ ಎತ್ತಿನಮಸ್ಕರಿಸಿದರು; ದಾರಿಯಲ್ಲಿ ಒಬ್ಬ ನರ್ತಕಿ ಬಂದು ನಾನಾಪ್ರಕಾರದಿಂದ ವೇಣು/ಕೊಳಲು, ವೀಣಾದಿ ಸಂಗೀತ ವಾದ್ಯಶ್ರುತಿಯ ಕೇಣಿಗೊಂಡು(ಹೊಂದಿಸಿಕೊಂಡು) ಉರುಪು ತಿರುಸು (ಹಾಗೊಮ್ಮೆ ಹೀಗೊಮ್ಮೆ ತಿರುಗಿ, ಹಿಂದಕ್ಕೆ ಮುಂದಕ್ಕೆ ಸಂಚರಿಸಿ ತಿರುಗಿ) ಅಭಿನವಕಲೆಯ ಸಪ್ರಮಾಣದ ಸುವೃತ್ತದಿಂದ ನರ್ತಿಸಿ ಅಚ್ಯುತನನ್ನು ಮೆಚ್ಚಿಸಿದಳು; ಅವಳ ನರ್ನಕ್ಕೆ ಅಪ್ಸರೆಯರೂ ಅಚ್ಚರಿಪಡುವಂತಿತ್ತು.]

(ಪದ್ಯ -೧೫) XXX

ಪದ್ಯ :-:೧೬:[ಸಂಪಾದಿಸಿ]

ನಾಗನಗರಿಯನಗಧರಂ ಪೊಕ್ಕು ಬರುತಿರ್ದ | ನಾಗ ನಗರಿಪು ಮುಖ್ಯರೈದೆ ಸಾಸಿರಪಡೆಯ | ನಾಗನ ಗರೀಯಾಂಗತಲ್ಪದವನಿವನೆಂದು ಗಗನದೊಳ್ ಕೈವಾರಿಸೆ ||
ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರಿಂ | ಬಾಗಿ ಲಂಬಿಸುವಲರ್ಮುಡಿಗಳ ಶಿರಂಗಳಿಂ | ಬಾಗಿ ಲಕ್ಷ್ಮೀಪತಿಗೆ ವಂದಿಸಿದರೊಲವಿಂದೆ ರಾಜಮಾರ್ಗಾಂತರದೊಳು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾಗನಗರಿಯನು ಅಗಧರಂ(ಬೆಟ್ಟ ಎತ್ತಿದವ) ಪೊಕ್ಕು ಬರುತಿರ್ದನು ಅಗ ನಗರಿಪು ಮುಖ್ಯರೈದೆ=[ಹಸ್ತಿನಾಪುರವನ್ನು ಕೃಷ್ಣನು ಹೊಕ್ಕು ಬರುತ್ತಿದ್ದನು ಆಗ ಇಂದ್ರಾದಿ ಮುಖ್ಯರೂ ಬರಲು ]; ಸಾಸಿರಪಡೆಯ ನಾಗನ ಗರೀಯಾಂಗತಲ್ಪದವನಿವನೆಂದು(ಗರೀಯಾಂಗತಲ್ಪ:ದೊಡ್ಡದೇಹದ ಹಾಸಿಗೆ) ಗಗನದೊಳ್ ಕೈವಾರಿಸೆ=[ಸಾವಿರಹೆಡೆಯ ನಾಗನನ್ನು ಹಾಸಿಗೆಯಾಗಿ ಪಡದವನು ಇವನೆಂದು ಗಗನದಲ್ಲಿ ಸ್ತೋತ್ರ ಮಾಡುತ್ತಿರಲು ]; ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರು ಇಂಬಾಗಿ(ಕುಳ್ಳರಾದ್ದರಿಂದ ಹಿಮ್ಮಡಿಯನ್ನೆತ್ತಿ ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ) ಲಂಬಿಸುವ ಅಲರ್ಮುಡಿಗಳ ಶಿರಂಗಳಿಂ ಬಾಗಿ ಲಕ್ಷ್ಮೀಪತಿಗೆ ವಂದಿಸಿದರು ಒಲವಿಂದೆ ರಾಜಮಾರ್ಗಾಂತರದೊಳು=[ಬಾಗಿಲಹತ್ತಿರ ಹೋಗಿ, ತಮತಮಗೆ ಹೆಂಗಸರು ನೋಡಲು ಹಿಮ್ಮಡಿ ಎತ್ತಿ ಸ್ವಲ್ಪ ಹಿಂದಕ್ಕೆ ಬಾಗಿ ಕೃಷ್ಣನ್ನು ನೋಡಿ ಉದ್ದವಾದ ಹೂವಿನ ಜಡೆಗಳುಳ್ಳ ಶಿರಗಳಿನ್ನು ಬಾಗಿಸಿ ಲಕ್ಷ್ಮೀಪತಿಗೆ ವಂದಿಸಿದರು ಪ್ರೀತಿಯಿಂದ ರಾಜಮಾರ್ಗದ ನಡುವೆ]
  • ತಾತ್ಪರ್ಯ: ಕೃಷ್ಣನು ಹಸ್ತಿನಾಪುರವನ್ನು ಹೊಕ್ಕು ಬರುತ್ತಿದ್ದನು. ಆಗ ಇಂದ್ರಾದಿ ಮುಖ್ಯರೂ ಬರಲು ಸಾವಿರಹೆಡೆಯ ನಾಗನನ್ನು ಹಾಸಿಗೆಯಾಗಿ ಪಡದವನು ಇವನೆಂದು ಗಗನದಲ್ಲಿ ಸ್ತೋತ್ರ ಮಾಡುತ್ತಿರಲು; ಹೆಂಗಸರು ಬಾಗಿಲ ಹತ್ತಿರ ಹೋಗಿ, ತಮತಮಗೆ ನೋಡಲು ಹಿಮ್ಮಡಿ ಎತ್ತಿ ಸ್ವಲ್ಪ ಕುತ್ತಿಗೆಯನ್ನು ಲಂಬಿಸಿ ಹಿಂದಕ್ಕೆ ಬಾಗಿಸಿ ಕೃಷ್ಣನ್ನು ನೋಡಿ ಉದ್ದವಾದ ಹೂವಿನ ಜಡೆಗಳುಳ್ಳ ಶಿರಗಳಿನ್ನು ಬಾಗಿಸಿ ಲಕ್ಷ್ಮೀಪತಿಗೆ ರಾಜಮಾರ್ಗದ ನಡುವೆ ಪ್ರೀತಿಯಿಂದ ವಂದಿಸಿದರು.

(ಪದ್ಯ -೧೬)

ಪದ್ಯ :-:೧೭:[ಸಂಪಾದಿಸಿ]

ರಾಜಮಾರ್ಗದ ಕೆಲಬಲದ ಗೋಪುರದೊಳಿರ್ದ | ರಾಜವದನೆಯರಗರು ಚಂದನ ಸುಧೂಪ ನೀ | ರಾಜನ ಫಲಾಳಿ ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ ||
ರಾಜಿಗಳನಳವಡಿಸೆ ಮಣಿತೋರಣ ಪ್ರಭೆ ವಿ | ರಾಜಿಸುವ ಧರ್ಮಸುತನರಮನೆಯ ಬಾಗಿಲ್ಗೆ | ರಾಜೀವಲೋಚನಂ ಬರೆ ಕೇಳ್ದು ಭೂವರನಿದಿರ್ಗೊಂಡನುತ್ಸವದೊಳು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಜಮಾರ್ಗದ ಕೆಲಬಲದ ಗೋಪುರದೊಳು ಇರ್ದ ರಾಜ(ಚಂದ್ರ)ವದನೆಯರು ಅಗರು ಚಂದನ ಸುಧೂಪ ನೀರಾಜನ ಫಲಾಳಿ ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ

ರಾಜಿಗಳನು ಅಳವಡಿಸೆ=[ರಾಜಮಾರ್ಗದ ಎಡಬಲದ ಗೋಪುರದೊಳು ಇದ್ದ ಮಹಿಳೆಯರು ಅಗರು ಚಂದನ ಸುವಾಸನೆಯ ಧೂಪ ನೀರಾಜನ ಫಲಗಳು ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳನ್ನು ಸಾಲು ಸಾಲಾಗಿ ಬಂದು ಅರ್ಪಿಸಿದರು]; ಮಣಿತೋರಣ ಪ್ರಭೆ ವಿರಾಜಿಸುವ ಧರ್ಮಸುತನ ಅರಮನೆಯ ಬಾಗಿಲ್ಗೆ ರಾಜೀವಲೋಚನಂ ಬರೆ ಕೇಳ್ದು ಭೂವರನು ಇದಿರ್ಗೊಂಡನು ಉತ್ಸವದೊಳು=[ಮಣಿತೋರಣಗಳ ಪ್ರಭೆಯಿಂದ ಶೋಭಿಸುವ ಧರ್ಮರಾಯನ ಅರಮನೆಯ ಬಾಗಿಲಿಗೆ ಕೃಷ್ಣನು ಬರಲು, ಆ ವಿಷಯ ಕೇಳಿ ರಾಜನು ಕೃಷ್ಣನ್ನು ಸೊತೋಷದಿಂದ ಇದಿರುಗೊಂಡನು. ಉತ್ಸವದೊಳು ];

  • ತಾತ್ಪರ್ಯ:ರಾಜಮಾರ್ಗದ ಎಡಬಲದ ಗೋಪುರದೊಳು ಇದ್ದ ಮಹಿಳೆಯರು ಅಗರು ಚಂದನ ಸುವಾಸನೆಯ ಧೂಪ ನೀರಾಜನ ಫಲಗಳು ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳನ್ನು ಸಾಲು ಸಾಲಾಗಿ ಬಂದು ಅರ್ಪಿಸಿದರು; ಮಣಿತೋರಣಗಳ ಪ್ರಭೆಯಿಂದ ಶೋಭಿಸುವ ಧರ್ಮರಾಯನ ಅರಮನೆಯ ಬಾಗಿಲಿಗೆ ಕೃಷ್ಣನು ಬರಲು, ಆ ವಿಷಯ ಕೇಳಿ ರಾಜನು ಕೃಷ್ಣನ್ನು ಸೊತೋಷದಿಂದ ಇದಿರುಗೊಂಡನು. ಉತ್ಸವದೊಳು ];

(ಪದ್ಯ -೧೭)

ಪದ್ಯ :-:೧೮:[ಸಂಪಾದಿಸಿ]

ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮ | ನಿರ್ಮಿತವರೂಥದಿಂದಿಳಿದು ನೃಪವರನಡಿಗೆ | ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಘ್ರಿಗರಸಂ ನಮಿಸಲು ||
ಪೆರ್ಮೆಯಿಂ ತೆಗೆದು ಬಿಗಿಯಪ್ಪಲವನೀಶ್ವರಂ | ನಿರ್ಮಾಯನಂ ಮಗುಳೆ ತಕ್ಕೈಸಲಾಗಳಮ | ರರ್ಮಹೀಪಾಲಕನ ಪೂರ್ವಕೃತ ಪುಣ್ಯಮಂ ಬಣ್ಣಿಸಿದರಂಬರದೊಳು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮ ನಿರ್ಮಿತ ವರೂಥದಿಂದ ಇಳಿದು ನೃಪವರನ ಅಡಿಗೆ ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಘ್ರಿಗೆ ಅರಸಂ ನಮಿಸಲು=[ಧರ್ಮಜನನ್ನು ಕಂಡು ನಗುತ್ತಾ ಕೃಷ್ಣನು ಚಿನ್ನದ ರಥದಿಂದ ಇಳಿದು ರಾಜನ ಪಾದಗಳಿಗೆ ತನ್ನ ನಿರ್ಮಲಕಿರೀಟವನ್ನು ಚಾಚಿನಮಸ್ಕರಿಸಲು (ಧರ್ಮಜ ಹಿರಿಯವನು), ಧರ್ಮರಾಯನು ಸಂಕೋಚ ಮತ್ತು ಗೌರವದಿಂದ ಸರಿದು,ಕೃಷ್ಣನಿಗೆ ಅರಸನು (ಕಿರಿಯನಾದೂ ಪೂಜ್ಯನೆಂದು) ನಮಸ್ಕಾರ ಮಾಡಲು];ಪೆರ್ಮೆಯಿಂ ತೆಗೆದು ಬಿಗಿಯಪ್ಪಲು ಅವನೀಶ್ವರಂ ನಿರ್ಮಾಯನಂ ಮಗುಳೆ ತಕ್ಕೈಸಲು ಆಗಳು ಅಮರರ್ ಮಹೀಪಾಲಕನ ಪೂರ್ವಕೃತ ಪುಣ್ಯಮಂ ಬಣ್ಣಿಸಿದರು ಅಂಬರದೊಳು=[ಅಕ್ಕರೆಯಿಂದ ಅವನನ್ನು ಎಳೆದು ಬಿಗಿಯಾಗಿ ಅಪ್ಪಿಕೊಳ್ಳಲು ರಾಜನು, ಮಾಯಾತೀತನಾದ ಕೃಷ್ಣನನ್ನು ಎರುಗಿ ಅಪ್ಪಿ ಆದರಿಸಲು, ಆಕಾಶದಲ್ಲಿ ಅಮರರು ರಾಜನ ಪೂರ್ವಕೃತ ಪುಣ್ಯಮವನ್ನು ಹೊಗಳಿದರು.
  • ತಾತ್ಪರ್ಯ:ಧರ್ಮಜನನ್ನು ಕಂಡು ನಗುತ್ತಾ ಕೃಷ್ಣನು ಚಿನ್ನದ ರಥದಿಂದ ಇಳಿದು ರಾಜನ ಪಾದಗಳಿಗೆ ತನ್ನ ನಿರ್ಮಲಕಿರೀಟವನ್ನು ಚಾಚಿನಮಸ್ಕರಿಸಲು (ಧರ್ಮಜ ಹಿರಿಯವನು), ಧರ್ಮರಾಯನು ಸಂಕೋಚ ಮತ್ತು ಗೌರವದಿಂದ ಸರಿದು,ಕೃಷ್ಣನಿಗೆ ಅರಸನು (ಕಿರಿಯನಾದೂ ಪೂಜ್ಯನೆಂದು) ನಮಸ್ಕಾರ ಮಾಡಲು; ಅಕ್ಕರೆಯಿಂದ ಅವನನ್ನು ಎಳೆದು ಬಿಗಿಯಾಗಿ ಅಪ್ಪಿಕೊಳ್ಳಲು ರಾಜನು, ಮಾಯಾತೀತನಾದ ಕೃಷ್ಣನನ್ನು ತಿರುಗಿ ಅಪ್ಪಿ ಆದರಿಸಲು, ಆಕಾಶದಲ್ಲಿ ಅಮರರು ರಾಜನ ಪೂರ್ವಕೃತ ಪುಣ್ಯಮವನ್ನು ಹೊಗಳಿದರು.

(ಪದ್ಯ -೧೮)

ಪದ್ಯ :-:೧೯:[ಸಂಪಾದಿಸಿ]

ತದನಂತರದೊಳಾ ಮುರಾಂತಕಂ ಧೃತರಾಷ್ಟ್ರ | ವಿದುರ ಕೃಪ ಗಾಂಧಾರಿ ಕುಂತಿಯರ್ಗಭಿನಮಿಸಿ | ಮುದದಿಂದೆ ನರ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳನು ||
ಪದಕಮಲಕೆರಗಿದೊಡೆ ತೆಗೆದು ತಕ್ಕೈಸಿ ದ್ರೌ | ಪದಿ ಸುಭದ್ರೆಯರನೊಲವಿಂದೆ ಕಾಣಿಸಿಕೊಂಡು | ಪದುಳಮಂ ಕೇಳ್ದು ಸುಖಗೋಷ್ಠಿಯಿಂ ಕುಳ್ಳಿರ್ದ ಬಳಿಕ ನೃಪನಿಂತೆಂದನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತದನಂತರದೊಳು ಆ ಮುರಾಂತಕಂ ಧೃತರಾಷ್ಟ್ರ ವಿದುರ ಕೃಪ ಗಾಂಧಾರಿ ಕುಂತಿಯರ್ಗೆ ಅಭಿನಮಿಸಿ=[ಆ ನಂತರದಲ್ಲಿ ಕೃಷ್ಣನು ಧೃತರಾಷ್ಟ್ರ ವಿದುರ ಕೃಪ ಗಾಂಧಾರಿ ಕುಂತಿಯರಿಗೆ ನಮಸ್ಕರಿಸಿ]; ಮುದದಿಂದೆ ನರ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳನು ಪದಕಮಲಕೆ ಎರಗಿದೊಡೆ ತೆಗೆದು ತಕ್ಕೈಸಿ=[ಸಂತಸದಿಂದ ಅರ್ಜುನ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳು ಅವನಿಗೆ ನಮಸ್ಕರಿಸಿದಾಗ ಎತ್ತಿ ಪ್ರೀತಿ ತೋರಿಸಿ,]; ದ್ರೌಪದಿ ಸುಭದ್ರೆಯರನು ಒಲವಿಂದೆ ಕಾಣಿಸಿಕೊಂಡು ಪದುಳಮಂ ಕೇಳ್ದು ಸುಖಗೋಷ್ಠಿಯಿಂ ಕುಳ್ಳಿರ್ದ ಬಳಿಕ ನೃಪನು ಇಂತೆಂದನು=[ದ್ರೌಪದಿ ಸುಭದ್ರೆಯರನ್ನು ಪ್ರೀತಿಯಿಂದ ಅವರಕಂಡು ಆರೋಗ್ಯ ವಿಚಾರಿಸಿ, ಸುಖಗೋಷ್ಠಿಯಲ್ಲಿ ಕುಳಿತ ಬಳಿಕ ಧರ್ಮಜನು ಈ ಹೀಗೆ ಹೇಳಿದನು.]
  • ತಾತ್ಪರ್ಯ: ಆ ನಂತರದಲ್ಲಿ ಕೃಷ್ಣನು ಧೃತರಾಷ್ಟ್ರ ವಿದುರ ಕೃಪ ಗಾಂಧಾರಿ ಕುಂತಿಯರಿಗೆ ನಮಸ್ಕರಿಸಿ, ಸಂತಸದಿಂದ ಅರ್ಜುನ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳು ಅವನಿಗೆ ನಮಸ್ಕರಿಸಿದಾಗ ಎತ್ತಿ ಪ್ರೀತಿ ತೋರಿಸಿ, ದ್ರೌಪದಿ ಸುಭದ್ರೆಯರನ್ನು ಪ್ರೀತಿಯಿಂದ ಕಂಡು ಆರೋಗ್ಯ ವಿಚಾರಿಸಿ, ಸುಖಗೋಷ್ಠಿಯಲ್ಲಿ ಕುಳಿತ ಬಳಿಕ ಧರ್ಮಜನು ಹೀಗೆ ಹೇಳಿದನು.

(ಪದ್ಯ -೧೯)

ಪದ್ಯ :-:೨೦:[ಸಂಪಾದಿಸಿ]

ದೇವ ದೇವಕಿದೇವಿ ಮೊದಲಾದವರ್ಗೆ ವಸು | ದೇವ ಹಲಧರ ಮನ್ಮತಾದಿಗಳ್ಗಖಿಳರಾ | ಣೀವಾಸಕೈದೆ ಪದುಳಮೆ ಭೀಮಸೇನನೇಗೈದನಾರುಂ ಬಾರದೆ ||
ನೀವೆ ಚಿತ್ತೈಸಿದಿರಿದೇನೆನೆ ಸಮಸ್ತ ಪ್ರ | ಜಾವಿಭವದಿಂದೆ ಮಾರುತಿ ಸಹಿತ ಬಂದು ಗಂ | ಗಾವರನದೀತೀರದೊಳ್ ಬಿಟ್ಟುದೆಮ್ಮಕಟಕಂ ನೋಳ್ಪೊಡೇಳೆಂದನು ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವ ದೇವಕಿದೇವಿ ಮೊದಲಾದವರ್ಗೆ ವಸುದೇವ ಹಲಧರ ಮನ್ಮಥ ಆದಿಗಳು ಆಖಿಳ ರಾಣೀವಾಸಕೆ ಐದೆ(ಚೆನ್ನಾಗಿ) ಪದುಳಮೆ=[ದೇವ ಕೃಷ್ಣನೇ, ದೇವಕಿದೇವಿ ಮೊದಲಾದವರು, ವಸುದೇವ ಬಲರಾಮ ಮನ್ಮಥ ಮೊದಲಾದ ಎಲ್ಲರೂ, ಎಲ್ಲಾ ರಾಣೀವಾಸದವರೂ ಉತ್ತಮ ಅರೋಗ್ಯದಲ್ಲಿ ಇದ್ದಾರೆಯೇ?]; ಭೀಮಸೇನನು ಏಗೈದನು ಆರುಂ ಬಾರದೆ ನೀವೆ ಚಿತ್ತೈಸಿದಿರಿ(ಬಂದಿರಿ) ಇದೇನು ಎನೆ=[ಭೀಮಸೇನನು ಏನು ಮಾಡಿದನು, ಯಾರೂ ಬರದೆ ನೀವೊಬ್ಬರೇ ಬಂದಿದ್ದೀರಿ ಇದೇನು ಕಾರಣ? ಎನ್ನಲು ];ಸಮಸ್ತ ಪ್ರಜಾವಿಭವದಿಂದೆ ಮಾರುತಿ ಸಹಿತ ಬಂದು ಗಂಗಾವರನದೀತೀರದೊಳ್ ಬಿಟ್ಟುದೆಮ್ಮಕಟಕಂ ನೋಳ್ಪೊಡೇಳೆಂದನು=[ಸಮಸ್ತ ಪ್ರಜೆಗಳೂ ವೈಭವದಿಂದ ಭೀಮನ ಸಹಿತ ಬಂದು ನಮ್ಮ ಸೈನ್ಯಸಮೇತ ಗಂಗಾನದೀ ತೀರದಲ್ಲಿ ಬೀಡುಬಿಟ್ಟಿದ್ದಾರೆ. ನೋಡುವುದಾದರೆ ಏಳು ಹೋಗೋಣ ಎಂದನು].
  • ತಾತ್ಪರ್ಯ: ದೇವ ಕೃಷ್ಣನೇ, ದೇವಕಿದೇವಿ ಮೊದಲಾದವರು, ವಸುದೇವ ಬಲರಾಮ ಮನ್ಮಥ ಮೊದಲಾದ ಎಲ್ಲರೂ, ಎಲ್ಲಾ ರಾಣೀವಾಸದವರೂ ಉತ್ತಮ ಅರೋಗ್ಯದಲ್ಲಿ ಇದ್ದಾರೆಯೇ? ಭೀಮಸೇನನು ಏನು ಮಾಡಿದನು, ಯಾರೂ ಬರದೆ ನೀವೊಬ್ಬರೇ ಬಂದಿದ್ದೀರಿ ಇದೇನು ಕಾರಣ? ಎನ್ನಲು ಕೃಷ್ಣನು, ಸಮಸ್ತ ಪ್ರಜೆಗಳೂ ವೈಭವದಿಂದ ಭೀಮನ ಸಹಿತ ಬಂದು ನಮ್ಮ ಸೈನ್ಯಸಮೇತ ಗಂಗಾನದೀ ತೀರದಲ್ಲಿ ಬೀಡುಬಿಟ್ಟಿದ್ದಾರೆ. ನೋಡುವುದಾದರೆ ಏಳು ಹೋಗೋಣ ಎಂದನು].

(ಪದ್ಯ -೨೦)

ಪದ್ಯ :-:೨೧:[ಸಂಪಾದಿಸಿ]

ಎಂದು ಹರಿ ನುಡಿಯಲರ್ಜುನನ ಮೊಗನೋಡಿ ನಾ | ವಿಂದು ಧನ್ಯರ್ ಭಕ್ತರೆಡೆಗೀ ದಯಾರ್ಣವಂ | ಬಂದುದಚ್ಚರಿಯಲಾ ಬಾಂಧವರ ದರ್ಶನಂ ನಮಗೆ ಕೌತುಕಮಪ್ಪÅದು ||
ಮಂದಿಯಂ ಕರೆಸು ನಡೆ ನಗರಿ ಗುಡಿತೋರಣಗ | ಳಿಂದೆ ಮೆರೆಯಲಿ ಬರಲಿ ಸಿಂಗರದ ಬಾಳಕಿಯ | ರಂದಣಗಳಂ ಪಿಡಿಯಲರಸಿಯರ್ ಪೊರಮಡಲಿಜನಮೆಂದುನೃಪನೆದ್ದನು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದು ಹರಿ ನುಡಿಯಲು ಅರ್ಜುನನ ಮೊಗನೋಡಿ ನಾವಿಂದು ಧನ್ಯರ್ ಭಕ್ತರೆಡೆಗೀ ದಯಾರ್ಣವಂ(ದಯೆಯ ಸಮುದ್ರ) ಬಂದುದಚ್ಚರಿಯಲಾ=[ ಎಲ್ಲರೂ ಗಂಗಾತೀರದಲ್ಲಿದ್ದಾರೆ ಎಂದು ಕೃಷ್ಣ ಹೇಳಲು, ಧರ್ಮಜನು, ಅರ್ಜುನನ ಮುಖವನ್ನು ನೋಡಿ ನಾವು ಈದಿನ ಧನ್ಯರು! ಭಕ್ತರ ಬಳಿಗೇ ದಯಾನಿಧಿ ಬಂದುದು ಆಶ್ಚರ್ಯವು ಎಂದನು]; ಬಾಂಧವರ ದರ್ಶನಂ ನಮಗೆ ಕೌತುಕಂ ಅಪ್ಪುದು=[ಬಾಂಧವರ ದರ್ಶನವು ನಮಗೆ ಬಹಳ ಆನಂದವನ್ನು ಕೊಡುವುದು.]; [ಮಂದಿಯಂ ಕರೆಸು ನಡೆ ನಗರಿ ಗುಡಿತೋರಣಗಳಿಂದೆ ಮೆರೆಯಲಿ ಬರಲಿ ಸಿಂಗರದ ಬಾಳಕಿಯರಂದಣಗಳಂ ಪಿಡಿಯಲರಸಿಯರ್ ಪೊರಮಡಲಿ ಜನಮೆಂದು ನೃಪನೆದ್ದನು= [ಜನರನ್ನು ಕರೆಸು ನಡೆ ನಗರಿ ಗುಡಿತೋರಣಗಳಿಂದ ನಗರ ಮೆರೆಯಲಿ, ಬರಲಿ ಸಿಂಗರಿಸಿಕೊಂಡ ಬಾಲಕಿಯರು, ಅರಸಿಯರು ಅಂದಣ/ಪಲ್ಲಕ್ಕಿಗಳನ್ನು ಹೊರುವ ಜನಬಂದ ಕೂಡಲೆ ರಾಣಿವಾಸದವರು ಹೊರಡಲಿ, ಎಂದು ಹೇಳಿ ರಾಜನು ಎದ್ದನು]
  • ತಾತ್ಪರ್ಯ:ಎಲ್ಲರೂ ಗಂಗಾತೀರದಲ್ಲಿದ್ದಾರೆ ಎಂದು ಕೃಷ್ಣ ಹೇಳಲು, ಧರ್ಮಜನು, ಅರ್ಜುನನ ಮುಖವನ್ನು ನೋಡಿ ನಾವು ಈದಿನ ಧನ್ಯರು! ಭಕ್ತರ ಬಳಿಗೇ ದಯಾನಿಧಿ ಬಂದುದು ಆಶ್ಚರ್ಯವು ಎಂದನು; ಬಾಂಧವರ ದರ್ಶನವು ನಮಗೆ ಬಹಳ ಆನಂದವನ್ನು ಕೊಡುವುದು. ಜನರನ್ನು ಕರೆಸು ನಡೆ ನಗರಿ ಗುಡಿತೋರಣಗಳಿಂದ ನಗರ ಮೆರೆಯಲಿ, ಬರಲಿ ಸಿಂಗರಿಸಿಕೊಂಡ ಬಾಲಕಿಯರು, ಅರಸಿಯರು ಅಂದಣ/ಪಲ್ಲಕ್ಕಿಗಳನ್ನು ಹೊರುವ ಜನಬಂದ ಕೂಡಲೆ ರಾಣಿವಾಸದವರು ಹೊರಡಲಿ, ಎಂದು ಹೇಳಿರಾಜನು ಎದ್ದನು.

(ಪದ್ಯ -೨೧)

ಪದ್ಯ :-:೨೨:[ಸಂಪಾದಿಸಿ]

ಬಳಿಕ ನೃಪನಾಜ್ಞೆಯಿಂದಾ ಹಸ್ತಿನಾವತಿಯ | ಪೊಳಲನುರೆ ಸಿಂಗರಿಸೆ ಮೊಳಗಿದುದು ಕೂಡೆ ಮಂ | ಗಳವಾದ್ಯಸಂಕುಲಂ ನೆರೆದುದು ಸಕಲಪೌರಜನಮಲಂಕಾರದಿಂದೆ ||
ಪೊಳೆವ ಮಣಿಭೂಷಣದ ಪೆಣ್ಗಳಿಟ್ಟಣಿಸಿದರ್ | ತಳತಂತ್ರಮೈದೆ ಸಂದಣಿಸಿದುದು ಪಾಠಕರ | ಕಳಕಳದ ನೃತ್ತಗೀತಂಗಳ ವಿಲಾಸದಿಂದಿದಿರ್ಗೊಳಲ್ ಪೊರಮಟ್ಟರು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ನೃಪನ ಆಜ್ಞೆಯಿಂದ ಆ ಹಸ್ತಿನಾವತಿಯ ಪೊಳಲನು ಉರೆ ಸಿಂಗರಿಸೆ=[ಬಳಿಕ ರಾಜನ ಆಜ್ಞೆಯಿಂದ ಆ ಹಸ್ತಿನಾವತಿಯನಗರವನ್ನು ಚೆನ್ನಾಗಿ ಸಿಂಗರಿಸಲು]; ಮೊಳಗಿದುದು ಕೂಡೆ ಮಂಗಳವಾದ್ಯ ಸಂಕುಲಂ ನೆರೆದುದು ಸಕಲಪೌರಜನಂ ಅಲಂಕಾರದಿಂದೆ=[ಅದರಜೊತೆ ಮಂಗಳವಾದ್ಯಗಳುಮೊಳಗಿದವು ಮತ್ತು ಸಕಲ ಪೌರಜನರ ಸಮೂಹ ಅಲಂಕಾರಮಾಡಿಕೊಂಡು ಸೇರಿದರು. ] ಪೊಳೆವ ಮಣಿಭೂಷಣದ ಪೆಣ್ಗಳಿಟ್ಟಣಿಸಿದರ್ ತಳತಂತ್ರಮೈದೆ(ನೆಲದ ತಳಪಾಯ) ಸಂದಣಿಸಿದುದು ಪಾಠಕರ ಕಳಕಳದ ನೃತ್ತಗೀತಂಗಳ ವಿಲಾಸದಿಂದಿದಿರ್ಗೊಳಲ್ ಪೊರಮಟ್ಟರು=[ ಹೊಳೆಯುತ್ತರುವ ಮಣಿಭೂಷಣಗಳನ್ನು ಧರಿಸಿದ ಹೆಂಗಸರು ನೆಲದ ತಳಪಾಯ (ನಡುಗುವಂತೆ) ಬಹಳಜನ ಸೇರಿದರು. ಸ್ತುತಿ ಪಾಠಕರು, ಕಳಕಳ ಇಂಪಾಗಿ ಸದ್ದುಮಾಡುವ ನೃತ್ತಗೀತಂಗಳನ್ನು ಹಾಡುವವರು, ವೇದ ಪಾಠಕರು ಅನೇಕರು ಬಂದು ಸೇರಿದರು; ಅವರೆಲ್ಲರೂ ಸಂಭ್ರಮದಿಂದ ದ್ವಾರಕೆಯಿಂದ ಬಂದವರನ್ನು ಇದಿರುಗೋಳ್ಳಲು ಹೊರಟರು].
  • ತಾತ್ಪರ್ಯ: ಬಳಿಕ ರಾಜನ ಆಜ್ಞೆಯಿಂದ ಆ ಹಸ್ತಿನಾವತಿಯನಗರವನ್ನು ಚೆನ್ನಾಗಿ ಸಿಂಗರಿಸಲು, ಅದರ ಜೊತೆ ಮಂಗಳವಾದ್ಯಗಳು ಮೊಳಗಿದವು ಮತ್ತು ಸಕಲ ಪೌರಜನರ ಸಮೂಹ ಅಲಂಕಾರಮಾಡಿಕೊಂಡು ಸೇರಿದರು. ಹೊಳೆಯುತ್ತಿರುವ ಮಣಿಭೂಷಣಗಳನ್ನು ಧರಿಸಿದ ಹೆಂಗಸರು ನೆಲದ ತಳಪಾಯ (ನಡುಗುವಂತೆ) ಬಹಳಜನ ಸೇರಿದರು. ಸ್ತುತಿ ಪಾಠಕರು, ಇಂಪಾಗಿ ಸದ್ದುಮಾಡುವ ನೃತ್ತಗೀತಂಗಳನ್ನು ಹಾಡುವವರು, ವೇದ ಪಾಠಕರು ಅನೇಕರು ಬಂದು ಸೇರಿದರು; ಅವರೆಲ್ಲರೂ ಸಂಭ್ರಮದಿಂದ ದ್ವಾರಕೆಯಿಂದ ಬಂದವರನ್ನು ಇದಿರುಗೋಳ್ಳಲು ಹೊರಟರು.

(ಪದ್ಯ -೨೨)

ಪದ್ಯ :-:೨೩:[ಸಂಪಾದಿಸಿ]

ಉತ್ಸವದೊಳಧ್ವರಹಯಂ ಮುಂದೆ ನಡೆಯೆ ಭೀ | ಭತ್ಸು ಮೊದಲಾದನುಜರೆಡದೊಳಡಿಯಿಡೆ ಭಕ್ತ | ವತ್ಸಲಂ ಬಲದ ಬಾಗದಿ ಬರಲ್ ಪಿಂತೆ ಮುನಿನಿಕರಮೈತರೆ ಮುದದೊಳು ||
ಸತ್ಸಿಕತಮಯ ವಿರಾಜಿತ ವಿಮಲ ನಿರ್ಜರ ಸ | ರಿತ್ಸಮೀಪದೊಳೆಸವ ಯಾದವರ ಪಾಳೆಯವ | ನುತ್ಸುಕದೊಳವನೀಶ್ವರಂ ಸಾರ್ದನಂಬುಧಿಯನಂಭೋಧಿ ಬೆರಸಿದಂತೆ ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉತ್ಸವದೊಳು ಅಧ್ವರಹಯಂ ಮುಂದೆ ನಡೆಯೆ ಭೀಭತ್ಸು(ಅರ್ಜುನ) ಮೊದಲಾದ ಅನುಜರು ಎಡದೊಳು ಅಡಿಯಿಡೆ=[ಉತ್ಸವದಲ್ಲಿ ಅಧ್ವರದ ಕುದುರೆಯು ಮುಂದೆ ನಡೆಯಲು, ಅರ್ಜುನ) ಮೊದಲಾದ ಸಹೋದರರು ಎಡದಲ್ಲಿ ಬರುತ್ತಿರಲು]; ಭಕ್ತವತ್ಸಲಂ ಬಲದ ಬಾಗದಿ ಬರಲ್ ಪಿಂತೆ ಮುನಿನಿಕರಮೈತರೆ ಮುದದೊಳು=[ಭಕ್ತವತ್ಸಲನಾದ ಕೃಷ್ಣನು ಬಲದ ಬಾಗದಲ್ಲಿ ಬರಲು,ಹಿಂದೆ, ಮುನಿಗಳ ಸಮೂಹ ಆನಂದದಿಂದ ಬರುತ್ತಿದ್ದರು]; ಸತ್ಸಿಕತಮಯ(ಸತ್ ಸಿಕತ=ಮರಳುಮಯ) ವಿರಾಜಿತ ವಿಮಲ ನಿರ್ಜರ ಸರಿತ್(ದೇವ ಗಂಗೆ) ಮೀಪದೊಳ್ ಎಸವ ಯಾದವರ ಪಾಳೆಯವ ನುತ್ಸುಕದೊಳು ಅವನೀಶ್ವರಂ ಸಾರ್ದನು ಅಂಬುಧಿಯನು ಅಂಭೋಧಿ ಬೆರಸಿದಂತೆ=[ಶುದ್ಧವಾದ ಮರಳಿನ ದಡದಿಂದ ವಿರಾಜಿತವಾದ ಶುದ್ಧ ದೇವ ಗಂಗೆಯ ಮೀಪದಲ್ಲಿ ಶೋಭೆಯಿಂದ ಕಾಣುತ್ತಿರುವ ಯಾದವರ ಪಾಳೆಯವನ್ನು ಉತ್ಸಾಹದಿಂದ ಧರ್ಮರಾಯನು ಸಮೀಪಿಸಿದನು, ಹೇಗೆಂದರೆ ಸಮುದ್ರಕ್ಕೆ ಮತ್ತೊಂದು ಸಮುದ್ರವನ್ನು ಬೆರೆಸಿದಂತೆ.]
  • ತಾತ್ಪರ್ಯ:ಉತ್ಸವದಲ್ಲಿ ಅಧ್ವರದ ಕುದುರೆಯು ಮುಂದೆ ನಡೆಯಲು, ಅರ್ಜುನ) ಮೊದಲಾದ ಸಹೋದರರು ಎಡದಲ್ಲಿ ಬರುತ್ತಿರಲು, ಭಕ್ತವತ್ಸಲನಾದ ಕೃಷ್ಣನು ಬಲದ ಬಾಗದಲ್ಲಿ ಬರಲು,ಹಿಂದೆ, ಮುನಿಗಳ ಸಮೂಹ ಆನಂದದಿಂದ ಬರುತ್ತಿದ್ದರು. ಶುದ್ಧವಾದ ಮರಳಿನ ದಡದಿಂದ ವಿರಾಜಿತವಾದ ಶುದ್ಧ ದೇವಗಂಗೆಯ ಮೀಪದಲ್ಲಿ ಶೋಭೆಯಿಂದ ಕಾಣುತ್ತಿರುವ ಯಾದವರ ಪಾಳೆಯವನ್ನು ಉತ್ಸಾಹದಿಂದ ಧರ್ಮರಾಯನು ಒಂದು ಸಮುದ್ರಕ್ಕೆ ಮತ್ತೊಂದು ಸಮುದ್ರವನ್ನು ಬೆರೆಸಿದಂತೆ ಸಮೀಪಿಸಿದನು,]

(ಪದ್ಯ -೨೩)XXXΙ

ಪದ್ಯ :-:೨೪:[ಸಂಪಾದಿಸಿ]

ದೇವಕಿ ಯಶೋದೆ ರೋಹಿಣಿಯರ್ಗೆ ಪಾಂಡವರ್ | ಭೂವರಾರ್ಜುನ ಕುಂತಿಯರ್ಗಖಿಳಯಾದವರ್ | ಭಾವಿಸಿದರುಳಿದವರ್ಗಾಲಿಂಗನೆಗಳಾದವನ್ಯೋನ್ಯಮವರವರ್ಗೆ ||
ಆ ವಾಯುಜಂ ಕಂಡನರಸನಂ ರುಕ್ಮಿಣೀ | ದೇವಿ ಮೊದಲಾದರಂ ದ್ರೌಪದಿಸುಭದ್ರೆಯರ್ | ತಾವಪ್ಪದರ್ ಪ್ರಭಾವತಿ ಹರಿಯ ರಾಣಿಯರ್ಗೆರಗಿ ಕಾಣಿಕೆಗೊಟ್ಟಳು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೇವಕಿ ಯಶೋದೆ ರೋಹಿಣಿಯರ್ಗೆ ಪಾಂಡವರ್ ಭೂವರ ಅರ್ಜುನ ಕುಂತಿಯರ್ಗೆ ಅಖಿಳ ಯಾದವರ್ ಭಾವಿಸಿದರು=[ದೇವಕಿ ಯಶೋದೆ ರೋಹಿಣಿಯರಿಗೆ ಪಾಂಡವರು ರಾಜ, ಅರ್ಜುನ, ಕುಂತಿಯರಿಗೆ ಅಖಿಳ ಯಾದವರು ವಂದಿಸಿ ಗೌರವಿಸಿದರು]; ಉಳಿದವರ್ಗಾ ಆಲಿಂಗನೆಗಳಾದವ ಉನ್ಯೋನ್ಯಮವರವರ್ಗೆ ಆ ವಾಯುಜಂ ಕಂಡನರಸನಂ=[ಉಳಿದವರು ಅನ್ಯೋನ್ಯ ಅವರವರು ಪರಸ್ಪರ ಆಲಿಂಗನೆಗಳನ್ನು ಮಾಡಿಕೊಂಡರು, ಆ ಭೀಮನು ಅರಸನನ್ನು ಕಂಡನು]; ರುಕ್ಮಿಣೀ ದೇವಿ ಮೊದಲಾದರಂ ದ್ರೌಪದಿಸುಭದ್ರೆಯರ್ ತಾವಪ್ಪದರ್ ಪ್ರಭಾವತಿ ಹರಿಯ ರಾಣಿಯರ್ಗೆ ಎರಗಿ ಕಾಣಿಕೆಗೊಟ್ಟಳು=[ರುಕ್ಮಿಣೀ ದೇವಿ ಮೊದಲಾದವರನ್ನು ದ್ರೌಪದಿ ಸುಭದ್ರೆಯರು ತಾವು ಅಪ್ಪಿಕೊಂಡು ಸತ್ಕರಿಸಿದರು; ಯೌವನಾಶ್ವನ ಪತ್ನಿ ಪ್ರಭಾವತಿ ಕೃಷ್ಣನ ರಾಣಿಯರಿಗೆ ನಮಸ್ಕರಿಸಿ ಕಾಣಿಕೆ ಕೊಟ್ಟಳು.]
  • ತಾತ್ಪರ್ಯ:ದೇವಕಿ ಯಶೋದೆ ರೋಹಿಣಿಯರಿಗೆ ಪಾಂಡವರು ರಾಜ, ಅರ್ಜುನ, ಕುಂತಿಯರಿಗೆ ಅಖಿಳ ಯಾದವರು ವಂದಿಸಿ ಗೌರವಿಸಿದರು; ಉಳಿದವರು ಅನ್ಯೋನ್ಯ ಅವರವರು ಪರಸ್ಪರ ಆಲಿಂಗನೆಗಳನ್ನು ಮಾಡಿಕೊಂಡರು, ಆ ಭೀಮನು ಅರಸನನ್ನು ಕಂಡನು; ರುಕ್ಮಿಣೀ ದೇವಿ ಮೊದಲಾದವರನ್ನು ದ್ರೌಪದಿ ಸುಭದ್ರೆಯರು ತಾವು ಅಪ್ಪಿಕೊಂಡು ಸತ್ಕರಿಸಿದರು; ಯೌವನಾಶ್ವನ ಪತ್ನಿ ಪ್ರಭಾವತಿ ಕೃಷ್ಣನ ರಾಣಿಯರಿಗೆ ನಮಸ್ಕರಿಸಿ ಕಾಣಿಕೆ ಕೊಟ್ಟಳು.]

(ಪದ್ಯ -೨೪)

ಪದ್ಯ :-:೨೫:[ಸಂಪಾದಿಸಿ]

ಮೂಡುವೆಳನಗೆಗೂಡಿ ದ್ರುಪದನಂದನೆಯ ಮೊಗ | ನೋಡಿ ನೀನೆ ಚದುರೆ ಲೋಕದೊಳ್ ಕೃಷ್ಣ ನಂ | ಷೋಡಶ ಸಹಸ್ರ ನಾರಿಯರೈದಲರಿಯರಾತನನೊಲಿಸಿಕೊಂಡೆ ನಿನ್ನ ||
ಗಾಡಿಗಿದು ಪೊಸತೆ ಗಂಡರನೈವರಂ ಮರುಳು | ಮಾಡುವ ಮಹಾಪತಿವ್ರತೆ ನಿನ್ನೊಳಾವು ಮಾ | ತಾಡಲಂಜುವೆವೆಂದು ಸತ್ಯಭಾಮಾದೇವಿ ನುಡಿಯಲವಳಿಂತೆಂದಳು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೂಡುವ ಎಳನಗೆಗೂಡಿ ದ್ರುಪದನಂದನೆಯ ಮೊಗ ನೋಡಿ ನೀನೆ ಚದುರೆ ಲೋಕದೊಳ್ ಕೃಷ್ಣನಂ ಷೋಡಶ ಸಹಸ್ರ ನಾರಿಯರ್ ಐದಲು ಅರಿಯರು=[ಸತ್ಯಭಾಮೆಯು ಮೂಡಿದ ಮುಗುಳುನಗೆಯೊಂದಿಗೆ ದ್ರೌಪದಿಯ ಮುಖವನ್ನು ನೋಡುತ್ತಾ ನೀನು ನಿಜವಾದ ಜಾಣೆ, ಈ ಭೂಮಿಯಲ್ಲಿ ಕೃಷ್ಣನನ್ನು ಹದಿನಾರು ಸಹಸ್ರ ನಾರಿಯರು ಹೊಂದಲು/ಅವನ ಪ್ರೀತಿಗಳಿಸಲು ಅರಿಯರು]; ಆತನನು ಒಲಿಸಿಕೊಂಡೆ ನಿನ್ನ ಗಾಡಿಗಿದು ಪೊಸತೆ ಗಂಡರನು ಐವರಂ ಮರುಳು ಮಾಡುವ ಮಹಾಪತಿವ್ರತೆ=[ಆತನನ್ನು ನೀನು ಒಲಿಸಿಕೊಂಡೆ, ನಿನ್ನ ಗಾರುಡಿ ವಿದ್ಯಕ್ಕೆ ಅದೇನು ಹೊಸದಲ್ಲ ಏಕೆಂದರೆ ನೀನು ಐದು ಜನ ಗಂಡರನ್ನು ಮರುಳು ಮಾಡುವ ಮಹಾಪತಿವ್ರತೆ]; ನಿನ್ನೊಳು ಆವು ಮಾತಾಡಲು ಅಂಜುವೆವೆಂದು ಸತ್ಯಭಾಮಾದೇವಿ ನುಡಿಯಲು ಅವಳು ಇಂತೆಂದಳು=[ನಿನ್ನ ಹತ್ತಿರ ನಾವು ಮಾತನಾಡಲು ಅಂಜುವೆವು ಎಂದು ಸತ್ಯಭಾಮಾದೇವಿ ಹೇಳಲು,ಅದಕ್ಕೆ ದ್ರೌಪದಿ ಹೀಗೆ ಹೇಳಿದಳು].
  • ತಾತ್ಪರ್ಯ:ಸತ್ಯಭಾಮೆಯು ಮೂಡಿದ ಮುಗುಳುನಗೆಯೊಂದಿಗೆ ದ್ರೌಪದಿಯ ಮುಖವನ್ನು ನೋಡುತ್ತಾ ನೀನು ನಿಜವಾದ ಜಾಣೆ, ಈ ಭೂಮಿಯಲ್ಲಿ ಕೃಷ್ಣನನ್ನು ಹದಿನಾರು ಸಹಸ್ರ ನಾರಿಯರು ಹೊಂದಲು/ಅವನ ಪ್ರೀತಿಗಳಿಸಲು ಅರಿಯರು; ಆತನನ್ನು ನೀನು ಒಲಿಸಿಕೊಂಡೆ, ನಿನ್ನ ಗಾರುಡಿ ವಿದ್ಯಕ್ಕೆ ಅದೇನು ಹೊಸದಲ್ಲ ಏಕೆಂದರೆ ನೀನು ಐದು ಜನ ಗಂಡರನ್ನು ಮರುಳು ಮಾಡುವ ಮಹಾಪತಿವ್ರತೆ; ನಿನ್ನ ಹತ್ತಿರ ನಾವು ಮಾತನಾಡಲು ಅಂಜುವೆವು ಎಂದು ಸತ್ಯಭಾಮಾದೇವಿ ಹೇಳಲು,ಅದಕ್ಕೆ ದ್ರೌಪದಿ ಹೀಗೆ ಹೇಳಿದಳು.

(ಪದ್ಯ -೨೫)

ಪದ್ಯ :-:೨೬:[ಸಂಪಾದಿಸಿ]

ಕಾರುಣ್ಯನಿಧಿಯನಾನೊಲಿಸಿಕೊಳದಿರ್ದೊಡೆ ವಿ | ಚಾರಿಸುವರುಂಟೆ ಎನ್ನಭಿಮಾನಹಾನಿಯಂ | ಕೌರವನ ಸಭೆಯೊಳುಳಿದವರಿರ್ದೊಡೇನಾಯ್ತು ಕೃಷ್ಣನೇ ಪಾಲಿಸಿದನು ||
ಪಾರಿಜಾತದ ನೋಂಪಿಗೆಂದು ನಿಜರಮಣನಂ | ನಾರದಮುನಿಗೆ ಕೊಟ್ಟ ಬಳಿಕೊಡೆಯರುಂಟೆ ನಿನ | ಗೀರುಕ್ಮಿಣೀಧವನನಾಥರ್ಗೆ ನಾಥನೆಂಬುದು ಪುಸಿಯೆ ಪೇಳೆಂದಳು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾರುಣ್ಯನಿಧಿಯನು ನಾನು ಒಲಿಸಿಕೊಳದಿರ್ದೊಡೆ ವಿಚಾರಿಸು ವರುಂಟೆ ವರುಂಟೆ ಎನ್ನ ಅಭಿಮಾನಹಾನಿಯಂ ಕೌರವನ ಸಭೆಯೊಳು=[ಕಾರುಣ್ಯನಿಧಿಯಾದ ಕೃಷ್ಣನನ್ನು ನಾನು ಒಲಿಸಿಕೊಳ್ಳದಿದ್ದರೆ ನನ್ನ ಕ್ಷೇಮವನ್ನು ವಿಚಾರಿಸಿಕೊಳ್ಳುವವರು ಇದ್ದಾರೆಯೇ? ನನ್ನ ಮಾನಹಾನಿಯಾಗುವಾಗ ಕೌರವನ ಸಭೆಯಲ್ಲಿ], ಉಳಿದವರಿರ್ದೊಡೆ ಏನಾಯ್ತು ಕೃಷ್ಣನೇ ಪಾಲಿಸಿದನು=[ಉಳಿದವರು ಇದ್ದರೂ ಏನಾಯಿತು, ಪ್ರಯೋಜನವಾಗಲಿಲ್ಲ, ಕೃಷ್ಣನೇ ಮಾನಕಾಪಾಡಿದನು ]; ಪಾರಿಜಾತದ ನೋಂಪಿಗೆಂದು ನಿಜರಮಣನಂ ನಾರದಮುನಿಗೆ ಕೊಟ್ಟ ಬಳಿಕ ಒಡೆಯರುಂಟೆ ನಿನಗೆ ಈ ರುಕ್ಮಿಣೀ ಧವನು ಅನಾಥರ್ಗೆ ನಾಥನೆಂಬುದು ಪುಸಿಯೆ ಪೇಳೆಂದಳು=[ಪಾರಿಜಾತದ ವೃತಕ್ಕೆಂದು ನಿನ್ನ ಗಂಡ ಕೃಷ್ನನನ್ನೇ ನಾರದಮುನಿಗೆ ದಾನಕೊಟ್ಟಮೇಲೆ ನಿನಗೆ ಗಂಡನಿರುವನೇ? ನಿನಗೆ ಮತ್ತು ಈ ಅನಾಥರಿಗೆ ರುಕ್ಮಿಣೀಪತಿ ಕೃಷ್ನನು ಒಡೆಯನು ಎಂಬುದು ಹುಸಿಯೆ? ಹೇಳು ಎಂದಳು]
  • ತಾತ್ಪರ್ಯ:ಕಾರುಣ್ಯನಿಧಿಯಾದ ಕೃಷ್ಣನನ್ನು ನಾನು ಒಲಿಸಿಕೊಳ್ಳದಿದ್ದರೆ ನನ್ನ ಕ್ಷೇಮವನ್ನು ವಿಚಾರಿಸಿಕೊಳ್ಳುವವರು ಇದ್ದಾರೆಯೇ? ನನ್ನ ಮಾನಹಾನಿಯಾಗುವಾಗ ಕೌರವನ ಸಭೆಯಲ್ಲಿ, ಉಳಿದವರು ಇದ್ದರೂ ಏನಾಯಿತು, ಪ್ರಯೋಜನವಾಗಲಿಲ್ಲ, ಕೃಷ್ಣನೇ ಮಾನಕಾಪಾಡಿದನು; ಪಾರಿಜಾತದ ವೃತಕ್ಕೆಂದು ನೀನು ನಿನ್ನಗಂಡ ಕೃಷ್ನನನ್ನೇ ನಾರದಮುನಿಗೆ ದಾನಕೊಟ್ಟಮೇಲೆ ನಿನಗೆ ಗಂಡನಿರುವನೇ? ನಿನಗೆ ಮತ್ತು ಅನಾಥರಿಗೆ ಈ ರುಕ್ಮಿಣೀಪತಿ ಕೃಷ್ನನು ಒಡೆಯನು ಎಂಬುದು ಹುಸಿಯೆ? ಹೇಳು ಎಂದಳು]

(ಪದ್ಯ -೨೬)

ಪದ್ಯ :-:೨೭:[ಸಂಪಾದಿಸಿ]

ಎಂದು ದ್ರೌಪದಿ ನುಡಿದ ಮಾತು ಮುಗಿವನಿತರೊಳ್ | ಮಂದಿಯಂ ಕಡೆಗೆ ತೊಲಗಿಸಿ ಯಜ್ಞತುರುಗಮಂ | ತಂದು ನಿಲ್ಲಿಸಿದರಲ್ಲಿ ಹರಿ ನಿರೂಪಿಸಲರಸನಾಜ್ಞೆಯಿಂದಾ ಕ್ಷಣದೊಳು ||
ಇಂದೀವರಾಕ್ಷಿಯರ್ ನೋಡಿದರ್ ಕೌತುಕಮಿ | ದೆಂದು ವಸ್ತ್ರಾಭರಣ ಪುಷ್ಪ ಗಂಧಾಕ್ಷತೆಗ | ಳಿಂದ ಪೂಜಿಸುತಿರ್ದರಶ್ವಮಂ ಭೂಪ ಕೇಳ್ ಮೇಲಾದ ಸಂಗತಿಯನು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದು ದ್ರೌಪದಿ ನುಡಿದ ಮಾತು ಮುಗಿವ ಅನಿತರೊಳ್=[ಸತ್ಯಭಾಮೆಗೆ ಈ ರೀತಿ ದ್ರೌಪದಿ ಹೇಳಿ ಮಾತು ಮುಗಿವಷ್ಟರಲ್ಲಿ,]; ಮಂದಿಯಂ ಕಡೆಗೆ ತೊಲಗಿಸಿ ಯಜ್ಞತುರುಗಮಂ ತಂದು ನಿಲ್ಲಿಸಿದರಲ್ಲಿ ಹರಿ ನಿರೂಪಿಸಲು ಅರಸನಾಜ್ಞೆಯಿಂದ=[ಕೃಷ್ಣ ಹೇಳಿದಾಗ ರಾಜನ ಆಜ್ಞೆಯಂತೆ ಜನರನ್ನ ಪಕ್ಕಕ್ಕೆ ಕಳಿಸಿ ಯಜ್ಞತುರುಗವನ್ನು ತಂದು ಅಲ್ಲಿ ನಿಲ್ಲಿಸಿದರು,]; ಆ ಕ್ಷಣದೊಳು ಇಂದೀವರಾಕ್ಷಿಯರ್ ನೋಡಿದರ್ ಕೌತುಕಮಿದೆಂದು=[ಆ ಸಮಯದಲ್ಲಿ ಪಮಲನೇತ್ರೆಯರಾದ ಹೆಂಗಸರು ಈಕುದುರೆ ಆಶ್ಚರ್ಯವನ್ನುಂಟುಮಾಡುವಂತಿದೆ ಎಂದು ನೋಡಿದರು]; ವಸ್ತ್ರಾಭರಣ ಪುಷ್ಪ ಗಂಧಾಕ್ಷತೆಗಳಿಂದ ಪೂಜಿಸುತಿರ್ದರ್ ಅಶ್ವಮಂ ಭೂಪ ಕೇಳ್ ಮೇಲಾದ ಸಂಗತಿಯನು=[ಆ ನಂತರ ವಸ್ತ್ರಾಭರಣ ಪುಷ್ಪ ಗಂಧಾಕ್ಷತೆಗಳಿಂದ ಅಶ್ವವನ್ನು ಪೂಜಿಸುತ್ತಿದ್ದರು. ರಾಜ ಜನಮೇಜಯನೇ ಮುಂದಿನ ಸಂಗತಿಗಳನ್ನು ಕೇಳು ಎಂದರು ಜೈಮಿನಿಮುನಿಗಳು.].
  • ತಾತ್ಪರ್ಯ:ಸತ್ಯಭಾಮೆಗೆ ಈ ರೀತಿ ದ್ರೌಪದಿ ಹೇಳಿ ಮಾತು ಮುಗಿವಷ್ಟರಲ್ಲಿ, ಕೃಷ್ಣ ಹೇಳಿದಾಗ ರಾಜನ ಆಜ್ಞೆಯಂತೆ ಜನರನ್ನ ಪಕ್ಕಕ್ಕೆ ಕಳಿಸಿ ಯಜ್ಞತುರುಗವನ್ನು ತಂದು ಅಲ್ಲಿ ನಿಲ್ಲಿಸಿದರು; ಆ ಸಮಯದಲ್ಲಿ ಪಮಲನೇತ್ರೆಯರಾದ ಹೆಂಗಸರು ಈ ಕುದುರೆ ಆಶ್ಚರ್ಯವನ್ನುಂಟುಮಾಡುವಂತಿದೆ ಎಂದು ನೋಡಿದರು; ಆ ನಂತರ ವಸ್ತ್ರಾಭರಣ ಪುಷ್ಪ ಗಂಧಾಕ್ಷತೆಗಳಿಂದ ಅಶ್ವವನ್ನು ಪೂಜಿಸುತ್ತಿದ್ದರು. ರಾಜ ಜನಮೇಜಯನೇ ಮುಂದಿನ ಸಂಗತಿಗಳನ್ನು ಕೇಳು ಎಂದರು ಜೈಮಿನಿಮುನಿಗಳು.

(ಪದ್ಯ -೨೭)

ಪದ್ಯ :-:೨೮:[ಸಂಪಾದಿಸಿ]

ಆ ಸಮಯದೊಳ್ ಸಾಲ್ವನನುಜನನುಸಾಲ್ವನೀ || ವಾಸುದೇವನ ಪೂರ್ವವೈರಕಲ್ಲಿಗೆ ಬಂದು | ಮೋಸದೊಳ್ ತಾಗಿ ತತ್ತುರಗಂ ಪಿಡಿದೆತ್ತಿಕೊಂಡೊಯ್ದು ಕಟ್ಟಿ ಬಳಿಕ ||
ಆ ಸುತ್ತು ವಳಯದೊಳ್ ಪದ್ರ್ದಿನಾಕಾರಕೆ ಮ | ಹಾಸೇನೆಯಂ ನಿಲಿಸಿ ತಾನದರ ಮುಖದೊಳ್ ಶ| ರಾಸನದೊಳಂಬನೇರಿಸಿ ನಿಂದು ನುಡಿದಂ ಸುಧಾರನೆಂಬಾಪ್ತದೊಡನೆ ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಸಮಯದೊಳ್ ಸಾಲ್ವನ ಅನುಜನು ಅನುಸಾಲ್ವನು ಈ ವಾಸುದೇವನ ಪೂರ್ವವೈರಕೆ ಅಲ್ಲಿಗೆ ಬಂದು=[(ಎಲ್ಲರೂ ಭೋಜನಕ್ಕೆ ಹೋಗಿಮೈಮರೆತ) ಆ ಸಮಯದಲ್ಲಿ ಸಾಲ್ವನ ತಮ್ಮ ಅನುಸಾಲ್ವನು ಈ ವಾಸುದೇವನ ಪೂರ್ವ ವೈರತ್ವವನ್ನು ನೆನೆದು, ಅಲ್ಲಿಗೆ ಬಂದು]; ಮೋಸದೊಳ್ ತಾಗಿ ತತ್ ತುರಗಂ ಪಿಡಿದೆತ್ತಿಕೊಂಡು ಒಯ್ದು ಕಟ್ಟಿ ಬಳಿಕ ಆ ಸುತ್ತು ವಳಯದೊಳ್ ಪರ್ದಿನ ಆಕಾರಕೆ ಮಹಾಸೇನೆಯಂ ನಿಲಿಸಿ=[ಮೋಸದಿಂದ ಎದುರುಬಿದ್ದು ಆಕುದುರೆಯನ್ನು, ಪಿಡಿದು ತೆಗೆದುಕೊಂಡು ಹೋಗಿ ಕಟ್ಟಿ, ಬಳಿಕ ಆ ಸುತ್ತುಮುತ್ತನ ಪ್ರದೇಶದಲ್ಲಿ ಹದ್ದಿನ ಆಕಾರದಲ್ಲಿ ತನ್ನ ಮಹಾಸೇನೆಯನ್ನು ನಿಲ್ಲಿಸಿ], ತಾನದರ ಮುಖದೊಳ್ ಶರಾಸನದೊಳ್ ಅಂಬನೇರಿಸಿ ನಿಂದು ನುಡಿದಂ ಸುಧಾರನೆಂಬ ಆಪ್ತದೊಡನೆ=[ ತಾನು ಅದರ ಮುಂದೆ ಬಿಲ್ಲಿಗೆ ಬಾಣ ಹೂಡಿ, ನಿಂತು ಸುಧಾರನೆಂಬ ಆಪ್ತದೊಡನೆ ಹೇಳಿದನು].
  • ತಾತ್ಪರ್ಯ: (ಎಲ್ಲರೂ ಭೋಜನಕ್ಕೆ ಹೋಗಿಮೈಮರೆತ) ಆ ಸಮಯದಲ್ಲಿ ಸಾಲ್ವನ ತಮ್ಮ ಅನುಸಾಲ್ವನು ಈ ವಾಸುದೇವನ ಪೂರ್ವ ವೈರತ್ವವನ್ನು ನೆನೆದು, ಅಲ್ಲಿಗೆ ಬಂದು, ಮೋಸದಿಂದ ಎದುರುಬಿದ್ದು ಆ ಕುದುರೆಯನ್ನು, ಹಿಡಿದು ತೆಗೆದುಕೊಂಡು ಹೋಗಿ ಕಟ್ಟಿ, ಬಳಿಕ ಆ ಸುತ್ತುಮುತ್ತನ ಪ್ರದೇಶದಲ್ಲಿ ಹದ್ದಿನ ಆಕಾರದಲ್ಲಿ ತನ್ನ ಮಹಾಸೇನೆಯನ್ನು ನಿಲ್ಲಿಸಿ, ತಾನು ಅದರ ಮುಂದೆ ಬಿಲ್ಲಿಗೆ ಬಾಣ ಹೂಡಿ, ನಿಂತು ಸುಧಾರನೆಂಬ ಆಪ್ತದೊಡನೆ ಹೀಗೆ ಹೇಳಿದನು].

(ಪದ್ಯ -೨೮)

ಪದ್ಯ :-:೨೯:[ಸಂಪಾದಿಸಿ]

ಅಣ್ಣನಂ ಕೊಂದೆಮ್ಮ ಸೌಭನಗರವನಿರಿದ | ಬೆಣ್ಣೆಗಳ್ಳನ ಕೊಬ್ಬಿದುದರದೊಳ್ ಪೊಚ್ಚ ಪೊಸ | ಸುಣ್ಣಮಂ ಪೊಯ್ದು ನೀರೆರೆದಂತೆ ಮಾಡಿ ಯಾದವಪಾಂಡವರ ಬಿಂಕದ ||
ಬಣ್ಣಮಂ ಕೆಡಿಸಿ ಕಾಳಗದೊಳುಬ್ಬಸಮನುರೆ | ಹಣ್ಣಿದಲ್ಲದೆ ಮಾಣಿನಹಿತರ್ಗೆ ಪಗೆಯೆನ್ನ | ಕಣ್ಣಮುಂದೇಂ ಸುಳಿದು ಜೀವಿಪನೆ ಸೇನೆ ಸನ್ನದ್ಧಮಾಗಿರಲೆಂದನು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಣ್ಣನಂ ಕೊಂದು ಮ್ಮ ಸೌಭನಗರವನು ಇರಿದ ಬೆಣ್ಣೆಗಳ್ಳನ=[ಅಣ್ಣನನ್ನು ಕೊಂದು ನಮ್ಮ ಸೌಭನಗರವನ್ನು ಯುದ್ಧದಲ್ಲಿ ಹಿಂಸಿಸಿದ ಬೆಣ್ಣೆಗಳ್ಳನ]; ಕೊಬ್ಬಿದ ಉದರದೊಳ್ ಪೊಚ್ಚ ಪೊಸ ಸುಣ್ಣಮಂ ಪೊಯ್ದು ನೀರೆರೆದಂತೆ ಮಾಡಿ=[ಉಬ್ಬಿದ ಹೊಟ್ಟೆಯಲ್ಲಿ ಹೊಚ್ಚ ಹೊಸ ಸುಣ್ಣವನ್ನು ಹಾಕಿ ನೀರು ಹಾಕಿಸುಟ್ಟರೆ ಹೇಗೋ ಹಾಗೆ ಉರಿಯುವಂತೆ ಮಾಡಿ]; ಯಾದವ ಪಾಂಡವರ ಬಿಂಕದ ಬಣ್ಣಮಂ ಕೆಡಿಸಿ ಕಾಳಗದೊಳು ಉಬ್ಬಸಮನು ಉರೆ ಹಣ್ಣಿದಲ್ಲದೆ ಮಾಣಿನು ಅಹಿತರ್ಗೆ=[ಯಾದವರು ಮತ್ತು ಪಾಂಡವರ ಅಹಂಕಾರದ ಬಣ್ಣವನ್ನು ಕೆಡಿಸಿ ಕಾಳಗದಲ್ಲಿ ಬಹಳ ನೋವನ್ನು ಅಹಿತರಾದ ಯಾದರಿಗೆ ಮಾಡಿದಲ್ಲದೆ ಬಿಡುವುದಿಲ್ಲ]; ಅಹಿತರ್ಗೆ ಪಗೆಯೆನ್ನ ಕಣ್ಣಮುಂದೆ ಏಂ ಸುಳಿದು ಜೀವಿಪನೆ ಸೇನೆ ಸನ್ನದ್ಧಮಾಗಿರಲಿ ಎಂದನು=[ಶತ್ರು ನನ್ನ ಕಣ್ಣಮುಂದೆ ಸುಳಿದು ಏನು ಜೀವಿಸಲು ಸಾಧ್ಯವೇ? ಸಾಧ್ಯವೇ ಇಲ್ಲ! ಸೇನೆಯು ಸನ್ನದ್ಧವಾಗಿರಲಿ ಎಂದನು.]
  • ತಾತ್ಪರ್ಯ: 'ನನ್ನ ಅಣ್ಣನನ್ನು ಕೊಂದು ನಮ್ಮ ಸೌಭನಗರವನ್ನು ಯುದ್ಧದಲ್ಲಿ ಹಿಂಸಿಸಿದ ಬೆಣ್ಣೆಗಳ್ಳನ ಉಬ್ಬಿದ ಹೊಟ್ಟೆಯಲ್ಲಿ ಹೊಚ್ಚ ಹೊಸ ಸುಣ್ಣವನ್ನು ಹಾಕಿ ನೀರು ಹಾಕಿಸುಟ್ಟರೆ ಹೇಗೋ ಹಾಗೆ ಉರಿಯುವಂತೆ ಮಾಡಿ, ಯಾದವರು ಮತ್ತು ಪಾಂಡವರ ಅಹಂಕಾರದ ಬಣ್ಣವನ್ನು ಕೆಡಿಸಿ, ಕಾಳಗದಲ್ಲಿ ಬಹಳ ನೋವನ್ನು ಅಹಿತರಾದ ಯಾದರಿಗೆ ಮಾಡಿದಲ್ಲದೆ ಬಿಡುವುದಿಲ್ಲ; ಶತ್ರು ನನ್ನ ಕಣ್ಣಮುಂದೆ ಸುಳಿದು ಏನು ಜೀವಿಸಲು ಸಾಧ್ಯವೇ? ಸಾಧ್ಯವೇ ಇಲ್ಲ! ಸೇನೆಯು ಸನ್ನದ್ಧವಾಗಿರಲಿ ಎಂದನು.]

(ಪದ್ಯ -೨೯)

ಪದ್ಯ :-:೩೦:[ಸಂಪಾದಿಸಿ]

ಇಂದು ತುರಗಾಹಿಯಂ ಬಂದಿರಿಯದವನೆನಗೆ | ಸಂದಪಗನೆ ಗೋವಳೆಯರುಪನಾಯಕನ ರಣಕೆ | ನಿಂದು ಕಾದುವನಾಪ್ತನನಿತರೊಳ್ ಸಂದೇಹಮಿಲ್ಲ ಪರಿವಾರದೊಳಗೆ ||
ಹಿಂದಣಪರಾಧಮಂ ಮುಂದಣ ದ್ರೋಹಂಗ | ಳೊಂದುಮಂ ನೋಡೆ ನೂರುಂಬಳಿ ಗಜ್ಜಾಶ್ವ ಗೋ | ವೃಂದ ಧನ ಯುವತಿಯರ್ ಮೊದಲಾದ ಸಕಲವಸ್ತುಗಳನಿತ್ತಪೆನೆಂದನು ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇಂದು ತುರಗಾಹಿಯಂ ಬಂದು ಇರಿಯದವನು ಎನಗೆ ಸಂದಪಗನೆ=[ಇಂದು ದನಕಾಯುವ ಈ ಕೃಷ್ಣನ್ನು ಬಂದು ಇರಿದು ಕೊಲ್ಲದವನು ನನಗೆ ಹಿತಸ್ನೇಹಿತನೆ? ಅಲ್ಲ.]; ಗೋವಳೆಯರ ಉಪನಾಯಕನ ರಣಕೆನಿಂದು ಕಾದುವನು ಆಪ್ತನು ಆನಿತರೊಳ್ ಸಂದೇಹಮಿಲ್ಲ ಪರಿವಾರದೊಳಗೆ=[ಗೋಪಾಲಕರ ಉಪನಾಯಕನಾದ ಕೃಷ್ಣನೊಡನೆ ಯುದ್ಧಕ್ಕೆ ನಿಂತು ಕಾದುವವನು ಇಲ್ಲಿರುವ ಅಷ್ಟೂ ಜನರ ಪರಿವಾರದಲ್ಲಿ ನನಗೆ ಆಪ್ತನಾದವನು, ಇದರಲ್ಲಿ ಸಂದೇಹವಿಲ್ಲ.]; ಹಿಂದಣ ಅಪರಾಧಮಂ ಮುಂದಣ ದ್ರೋಹಂಗಳ ಒಂದುಮಂ ನೋಡೆ, ನೂರುಂಬಳಿ ಗಜ್ಜಾಶ್ವ ಗೋವೃಂದ ಧನ ಯುವತಿಯರ್ ಮೊದಲಾದ ಸಕಲವಸ್ತುಗಳನು ಇತ್ತಪೆನು ಎಂದನು=[ಅಂಥವನ ಹಿಂದಿನ ಅಪರಾಧವನ್ನೂ, ಮುಂದಿನ ದ್ರೋಹಗಳೊಂದನ್ನೂ ನೋಡುವುದಿಲ್ಲ, ಅವನಿಗೆ ನೂರುಂಬಳಿ, ಗಜ್ಜಾಶ್ವ, ಗೋವೃಂದ, ಧನ, ಯುವತಿಯರು ಈ ಮೊದಲಾದ ಸಕಲವಸ್ತುಗಳನೂ ಕೊಡುವೆನು ಎಂದನು ]
  • ತಾತ್ಪರ್ಯ: ಇಂದು ದನಕಾಯುವ ಈ ಕೃಷ್ಣನ್ನು ಬಂದು ಇರಿದು ಕೊಲ್ಲದವನು ನನಗೆ ಹಿತಸ್ನೇಹಿತನೆ? ಅಲ್ಲ; ಗೋಪಾಲಕರ ಉಪನಾಯಕನಾದ ಕೃಷ್ಣನೊಡನೆ ಯುದ್ಧಕ್ಕೆ ನಿಂತು ಕಾದುವವನು ಇಲ್ಲಿರುವ ಅಷ್ಟೂ ಜನರ ಪರಿವಾರದಲ್ಲಿ ನನಗೆ ಆಪ್ತನಾದವನು, ಇದರಲ್ಲಿ ಸಂದೇಹವಿಲ್ಲ. ಅಂಥವನ ಹಿಂದಿನ ಅಪರಾಧವನ್ನೂ, ಮುಂದಿನ ದ್ರೋಹಗಳೊಂದನ್ನೂ ನೋಡುವುದಿಲ್ಲ, ಅವನಿಗೆ ನೂರುಂಬಳಿ, ಗಜ್ಜಾಶ್ವ, ಗೋವೃಂದ, ಧನ, ಯುವತಿಯರು ಈ ಮೊದಲಾದ ಸಕಲವಸ್ತುಗಳನೂ ಕೊಡುವೆನು ಎಂದನು.

(ಪದ್ಯ -೩೦)

ಪದ್ಯ :-:೩೧:[ಸಂಪಾದಿಸಿ]

ಸೊಕ್ಕಿದನುಸಾಲ್ವನೀತೆರದಿಂದೆ ತನ್ನ ಪಡೆ | ಗಿಕ್ಕಿದೀ ಸೆಲವಂ ಸುಧಾರನೆಂಬಾ ಸಚಿವ | ನಕ್ಕರಿಂದಖಿಳ ಸೇನಾವಳಯದೊಳ್ ಸಾರಿಸಲ್ ಪ್ರಳಯ ಮೇಘಂಗಳ ||
ಕಕ್ಕಸದ ಸಡಿಲ ಗರ್ಜನೆಗಳಂ ಕಲ್ಪಾಂತ | ಕುಕ್ಕುವಬ್ಧಿಗಳ ಪೆರ್ದೆರೆಗಳ ಸುಘೋಷಮಂ | ಮಿಕ್ಕುವು ಸಮಸ್ತ ವಾದ್ಯ ಧ್ವನಿಗಳತಿಬಲರ ಬೊಬ್ಬೆಯಬ್ಬರದ ಕೂಡೆ ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೊಕ್ಕಿದ ಅನುಸಾಲ್ವನು ಈ ತೆರದಿಂದೆ ತನ್ನ ಪಡೆಗಿಕ್ಕಿದೀ ಸೆಲವಂ=[ಸೊಕ್ಕಿನಿಂದ ಕೂಡಿದ ಅನುಸಾಲ್ವನು ಈ ರೀತಿಯಲ್ಲಿ ತನ್ನ ಸೈನ್ಯಕ್ಕೆ ಕೊಟ್ಟ ಈ ಸವಾಲನ್ನು]; ಸುಧಾರನೆಂಬಾ ಸಚಿವನಕ್ಕರಿಂದ ಅಖಿಳ ಸೇನಾವಳಯದೊಳ್ ಸಾರಿಸಲ್=[ಸುಧಾರನೆಂಬ ಸಚಿವನು ಸಂಪ್ರೀತಿಯಿಂದ ಎಲ್ಲಾ ತನ್ನ ಸೇನಾವಲಯದಲ್ಲಿಳ್ ಡಂಗುರ ಸಾರಿಸಲು]; ಪ್ರಳಯ ಮೇಘಂಗಳ ಕಕ್ಕಸದ ಸಡಿಲ ಗರ್ಜನೆಗಳಂ ಕಲ್ಪಾಂತಕೆ ಉಕ್ಕುವ ಅಬ್ಧಿಗಳ ಪೆರ್ದೆರೆಗಳ ಸುಘೋಷಮಂ ಮಿಕ್ಕುವು ಸಮಸ್ತ ವಾದ್ಯ ಧ್ವನಿಗಳತಿಬಲರ ಬೊಬ್ಬೆಯಬ್ಬರದ ಕೂಡೆ=[ಸಮಸ್ತ ವಾದ್ಯ ಧ್ವನಿಗು ಅತಿಬಲರ ಬೊಬ್ಬೆಯ ಅಬ್ಬರಗಳು ಒಟ್ಟಗೂಡಲು, ಅವು ಪ್ರಳಯ ಮೇಘಗಳ ಆರ್ಭಟದ ಸಡಿಲ ಗರ್ಜನೆಗಳನ್ನೂ, ಕಲ್ಪಾಂತದ ಪ್ರಳಯದಲ್ಲಿ ಉಕ್ಕುವ ಸಮುದ್ರದ ದೊಡ್ಡ ತೆರೆಗಳ ಸುಘೋಷ/ ಶಬ್ದವನ್ನೂ ಮೀರಿದವು].
  • ತಾತ್ಪರ್ಯ:ಸೊಕ್ಕಿನಿಂದ ಕೂಡಿದ ಅನುಸಾಲ್ವನು ಈ ರೀತಿಯಲ್ಲಿ ತನ್ನ ಸೈನ್ಯಕ್ಕೆ ಕೊಟ್ಟ ಈ ಸವಾಲನ್ನು ಸುಧಾರನೆಂಬ ಸಚಿವನು ಸಂಪ್ರೀತಿಯಿಂದ ಎಲ್ಲಾ ತನ್ನ ಸೇನಾವಲಯದಲ್ಲಿ ಡಂಗುರ ಸಾರಿಸಲು, ಸಮಸ್ತ ವಾದ್ಯ ಧ್ವನಿಗಳು ಅತಿಬಲರ ಬೊಬ್ಬೆಯ ಅಬ್ಬರಗಳು ಒಟ್ಟಗೂಡಲು, ಅವು ಪ್ರಳಯ ಮೇಘಗಳ ಆರ್ಭಟದ ಸಡಿಲ ಗರ್ಜನೆಗಳನ್ನೂ, ಕಲ್ಪಾಂತದ ಪ್ರಳಯದಲ್ಲಿ ಉಕ್ಕುವ ಸಮುದ್ರದ ದೊಡ್ಡ ತೆರೆಗಳ ಸುಘೋಷ/ ಶಬ್ದವನ್ನೂ ಮೀರಿದವು .

(ಪದ್ಯ -೩೧)I-VIII;

ಪದ್ಯ :-:೩೨:[ಸಂಪಾದಿಸಿ]

ಇತ್ತಲಡಹಾಯ್ದು ಮೋಸದೊಳಾ ತುರಂಗಮವ | ನತ್ತಲನುಸಾಲ್ವನೆಳೆದುಯ್ದ ರಭರಕಬಲೆಯರ | ಮೊತ್ತಮಗಲಕೆ ಚೆಲ್ಲಿತಂಜಿದರ್ ಮುನಿಗಳೆಲ್ಲಾ ಜನಂ ತಲ್ಲಣಿಸಿತು ||
ಮನಸ್ಸಿನಲ್ಲಿ ಚಿತ್ತದೊಳ್ ನೃಪನು ಎಣಿಕೆಗೊಳುತಿರ್ದನುಳಿದವರಿ | ದೆತ್ತಣದ್ಭುತವೆಂದು ಬೆರಗಾದರಸುರಹರ | ನುತ್ತಮಾಂಗವನೊಲೆಯುತಂದು ಸುಮ್ಮಾನದಿಂ ಪಟುಭಟರ್ಗಿಂತೆಂದನು ||32|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇತ್ತಲು ಅಡಹಾಯ್ದು(ನುಗ್ಗಿ) ಮೋಸದೊಳು ಆ ತುರಂಗಮವನು ಅತ್ತಲು ಅನುಸಾಲ್ವನು ಎಳೆದುಯ್ದ ರಭರಕೆ ಅಬಲೆಯರ ಮೊತ್ತಂ ಅಗಲಕೆ ಚೆಲ್ಲಿತು ಅಂಜಿದರ್ ಮುನಿಗಳು ಎಲ್ಲಾ ಜನಂ ತಲ್ಲಣಿಸಿತು=[ಈಕಡೆ ಧರ್ಮಜನ ಪ್ರದೇಶದೊಳಕ್ಕೆ ನುಗ್ಗಿ ಮೋಸದಿಂದ ಆ ಕುದುರೆಯನ್ನು, ಅನುಸಾಲ್ವನೆಂಬುವನು ಎಳೆದು ಕೊಂಡು ಹೋದ ರಭಸಕ್ಕೆ ಹೆಣ್ಣುಮಕ್ಕಳ ಸಮೂಹವು ಹೆದರಿ ಚದುರಿ ಹೋಯಿತು ಮುನಿಗಳು ಹೆದರಿದರು.] ಚಿತ್ತದೊಳ್ ನೃಪನು ಎಣಿಕೆಗೊಳುತಿರ್ದನು ಉಳಿದವರು ಇದೆತ್ತಣ ಅದ್ಭುತವೆಂದು ಬೆರಗಾದರು=[ಮನಸ್ಸಿನಲ್ಲಿ ಧರ್ಮಜನು ಇದೇನೆಂದು ಯೋಚಿಸುತ್ತಿದ್ದನು; ಉಳಿದವರು ಇದು ಯಾವ ಬಗೆಯ ಅದ್ಭುತವೆಂದು ಬೆರಗಾದರು]; ಅಸುರಹರನು ಉತ್ತಮಾಂಗವನು(ತಲೆಯನ್ನು) ಒಲೆಯುತ ಅಂದು ಸುಮ್ಮಾನದಿಂ ಪಟುಭಟರ್ಗೆ ಇಂತೆಂದನು ಅತ್ತಲು=[ಅತ್ತಕಡೆ,ಕೃಷ್ನನು ತಲೆಯನ್ನು ತೂಗುತ್ತಾ ಗಂಭೀರವಾಗಿ ಸೇನೆಯ ಭಟರಿಗೆ ಹೀಗೆ ಹೇಳಿದನು,].
  • ತಾತ್ಪರ್ಯ: ಈಕಡೆ ಧರ್ಮಜನ ಪ್ರದೇಶದೊಳಕ್ಕೆ ನುಗ್ಗಿ ಮೋಸದಿಂದ ಆ ಯಜ್ಞ ಕುದುರೆಯನ್ನು, ಅನುಸಾಲ್ವನೆಂಬುವನು ಎಳೆದು ಕೊಂಡು ಹೋದ ರಭಸಕ್ಕೆ ಹೆಣ್ಣುಮಕ್ಕಳ ಸಮೂಹವು ಹೆದರಿ ಚದುರಿ ಹೋಯಿತು, ಮುನಿಗಳು ಹೆದರಿದರು. ಮನಸ್ಸಿನಲ್ಲಿ ಧರ್ಮಜನು ಇದೇನೆಂದು ಯೋಚಿಸುತ್ತಿದ್ದನು; ಉಳಿದವರು ಇದು ಯಾವ ಬಗೆಯ ಅದ್ಭುತವೆಂದು ಬೆರಗಾದರು; ಅತ್ತಕಡೆ,ಕೃಷ್ನನು ತಲೆಯನ್ನು ತೂಗುತ್ತಾ ಗಂಭೀರವಾಗಿ ಸೇನೆಯ ಭಟರಿಗೆ ಹೀಗೆ ಹೇಳಿದನು.

(ಪದ್ಯ -೩೨)

ಪದ್ಯ :-:೩೩:[ಸಂಪಾದಿಸಿ]

ಈತನನುಸಾಲ್ವನೆಂಬಾತನಿವನಣ್ಣ ನಂ | ಘಾತಿಸಿದೆವಂದದರ ಖಾತಿಗೆಮ್ಮೊಡನೆ ಸ | ತ್ವಾತೀಶಯಮಂ ತೋರುವಾತುರದೊಳತಿಬಲವ್ರಾತಮಂ ಕೂಡಿಕೊಂಡು ||
ಭೀತಿಯಿಲ್ಲದೆ ಪರಮಹೀತಳಕೆ ಬಂದು ನ | ಮ್ಮೀತುರಗಮಂ ಪಿಡಿದನೇತರಪರಾಕ್ರಮದ | ಮಾತು ನಮಗಿನ್ನು ಮಝಪೂತು ದಾನವಯೆನುತ ಪೀತಾಂಬರಂ ಪೊಗಳ್ದನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಈತನು ಅನುಸಾಲ್ವನೆಂಬಾತನು ಇವನಣ್ಣನಂ ಘಾತಿಸಿದೆವಂದು ಅದರ ಖಾತಿಗೆ=[ಕೃಷ್ಣನು ಹೇಳಿದನು,ಈತನು ಅನುಸಾಲ್ವನೆಂಬುವವನು ಇವನ ಅಣ್ಣನನ್ನು ತಾನು ಘಾತಿಸಿದೆವಂದು ಅದರ ಸಿಟ್ಟಿಗೆ]; ಎಮ್ಮೊಡನೆ ಸತ್ವಾತೀಶಯಮಂ ತೋರುವ ಆತುರದೊಳು ಅತಿಬಲವ್ರಾತಮಂ ಕೂಡಿಕೊಂಡು=[ನಮ್ಮೊಡನೆ ತನ್ನ ಶಕ್ತಿಯನ್ನು ತೋರಿಸುವ ಆತುರದಲ್ಲಿ ಅತಿದೊಡ್ಡ ಸೈನ್ಯವನ್ನು ಕೂಡಿಕೊಂಡು ]; ಭೀತಿಯಿಲ್ಲದೆ ಪರಮಹೀತಳಕೆ ಬಂದು ನಮ್ಮ ಈ ತುರಗಮಂ ಪಿಡಿದನು=[ಹೆದರಿಕೆಯಿಲ್ಲದೆ ಮತ್ತೊಬ್ಬರ ರಾಜ್ಯಕ್ಕೆ ಬಂದು ನಮ್ಮ ಈ ತುರಗವನ್ನು ಪಹಿಡಿದಿದ್ದಾನೆ]; ಏತರ ಪರಾಕ್ರಮದ ಮಾತು ನಮಗಿನ್ನು, ಮಝಪೂತು ದಾನವಯೆನುತ ಪೀತಾಂಬರಂ ಪೊಗಳ್ದನು=[ಇನ್ನು, ನಮ್ಮದು ಯಾವಬಗೆಯ ಪರಾಕ್ರಮವೆಂದು ಹೇಳಬಹುದು? ಭಲರೇ! ದಾನವ ಎನ್ನುತ್ತಾ ಕೃಷ್ಣನು, ಯಾದವರನ್ನೂ ಪಾಂಡವರನ್ನೂ ಒಟ್ಟಿಗೆ ಎದುರಿಸುವ ಅವನ ದೈರ್ಯವನ್ನು ಹೊಗಳಿದನು.]
  • ತಾತ್ಪರ್ಯ: ಕೃಷ್ಣನು ಹೇಳಿದನು,ಈತನು ಅನುಸಾಲ್ವನೆಂಬುವವನು ಇವನ ಅಣ್ಣನನ್ನು ತಾನು ಘಾತಿಸಿದೆವಂದು ಅದರ ಸಿಟ್ಟಿಗೆ, ನಮ್ಮೊಡನೆ ತನ್ನ ಶಕ್ತಿಯನ್ನು ತೋರಿಸುವ ಆತುರದಲ್ಲಿ ಅತಿದೊಡ್ಡ ಸೈನ್ಯವನ್ನು ಕೂಡಿಕೊಂಡು, ಹೆದರಿಕೆಯಿಲ್ಲದೆ ಮತ್ತೊಬ್ಬರ ರಾಜ್ಯಕ್ಕೆ ಬಂದು ನಮ್ಮ ಈ ತುರಗವನ್ನು ಪಹಿಡಿದಿದ್ದಾನೆ; ಇನ್ನು, ನಮ್ಮದು ಯಾವ ಬಗೆಯ ಪರಾಕ್ರಮವೆಂದು ಹೇಳಬಹುದು? ಭಲರೇ! ದಾನವ ಎನ್ನುತ್ತಾ ಕೃಷ್ಣನು, ಯಾದವರನ್ನೂ ಪಾಂಡವರನ್ನೂ ಒಟ್ಟಿಗೆ ಎದುರಿಸುವ ಅವನ ದೈರ್ಯವನ್ನು ಹೊಗಳಿದನು.

(ಪದ್ಯ -೩೩)

ಪದ್ಯ :-:೩೪:[ಸಂಪಾದಿಸಿ]

ಅರೀತನಂ ಗೆಲ್ಬು ಕುದುರೆಯಂ ಬಿಡಿಸಿ ತಹ | ವೀರರೀ ಪಟುಭಟರೊಳವರ್ಗಿದೆಕೊ ವೀಳೆಯಂ | ಪೂರೈಸುವೊಡೆ ಪಿಡಿಯಲೆಂದು ಹರಿ ನುಡಿಯಲತಿಬಲರಂಜಿ ಸುಮ್ಮನಿರಲು ||
ಚಾರುಹಯಮಂ ತಂದು ಕಡುವೆನಲ್ಲದೊಡೆ ವೃಷ | ಳೀರಮಣನುಗ್ರಗತಿಗಿಳಿವೆನೆಂದಸುರಸಂ | ಹಾರನಡಿಗೆರಗಿ ತಾಂಬೂಲಮಂ ಪ್ರದ್ಯುಮ್ನನಾಂತು ಕಳುಹಿಸಿಕೊಂಡನು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅರು ಈತನಂ ಗೆಲ್ಬು ಕುದುರೆಯಂ ಬಿಡಿಸಿ ತಹ ವೀರರು ಈ ಪಟುಭಟರೊಳು=[ಯಾರು ಇವನನ್ನು ಗೆದ್ದ ಕುದುರೆಯನ್ನು ಬಿಡಿಸಿ ತರುವ ವೀರರು ಈ ಯಾದವ ಸೈನ್ಯದಲ್ಲಿ ಇದ್ದಾರೆ?]; ಅವರ್ಗಿದೆ ಕೊ ವೀಳೆಯಂ ಪೂರೈಸುವೊಡೆ ಪಿಡಿಯಲಿ ಎಂದು ಹರಿ ನುಡಿಯಲು ಅತಿಬಲರಂಜಿ ಸುಮ್ಮನಿರಲು=[ಅವರಿಗೆ ಇದೆ ಅನುಮತಿ; ತೆಗೆದುಕೊಳ್ಳಲಿ ವೀಳೆಯವನ್ನು, ಕಾರ್ಯವನ್ನು ಸಾಧಿಸುವುದಾದಲ್ಲಿ ಪಹಿಡಿಯಲಿ ವೀಳ್ಯವನ್ನು, ಎಂದು ಕೃಷ್ಣನು ಹೇಳಲು ಸೇನೆಯ ಬಲಿಷ್ಠರೂ ಹೆದರಿ ಸುಮ್ಮನಿದ್ದರು.] ಚಾರುಹಯಮಂ ತಂದು ಕಡುವೆನು ಅಲ್ಲದೊಡೆ ವೃಷಳೀರಮಣನ(ಬಹಿಷ್ಟೆಯ ಸಂಯೋಗದವನಿಗೆ) ಉಗ್ರಗತಿಗೆ ಇಳಿವೆನೆಂದು=[ಆಗ ಪ್ರದ್ಯುಮ್ನನು, 'ಆ ಸುಂದರ ಅಶ್ವವನ್ನು ತಂದು ಕೊಡುವೆನು, ಇಲ್ಲದಿದ್ದರೆ ಬಹಿಷ್ಟೆಯ ಸಂಯೋಗದವನಿಗೆ ಆದ ಉಗ್ರ/ಕೆಟ್ಟಗತಿಗೆ ಇಳಿಯುವನು ಎಂದು]; ಅಸುರಸಂಹಾರನ ಅಡಿಗೆ ಎರಗಿ ತಾಂಬೂಲಮಂ ಪ್ರದ್ಯುಮ್ನನು ಆಂತು(ಪಡೆದು) ಕಳುಹಿಸಿಕೊಂಡನು=[ಕೃಷ್ಣನ ಪಾದಕ್ಕೆ ನಮಿಸಿ, ತಾಂಬೂಲವನ್ನು /ಆಜ್ಞೆಯನ್ನು ಪಡೆದು ಹೊಡಲು ಅನುವಾದನು].
  • ತಾತ್ಪರ್ಯ:(ಕೃಷ್ಣನು), 'ಯಾರು ಇವನನ್ನು ಗೆದ್ದ ಕುದುರೆಯನ್ನು ಬಿಡಿಸಿ ತರುವ ವೀರರು ಈ ಯಾದವ ಸೈನ್ಯದಲ್ಲಿ ಇದ್ದಾರೆ?ಅವರಿಗೆ ಇದೆ ಅನುಮತಿ; ತೆಗೆದುಕೊಳ್ಳಲಿ ವೀಳೆಯವನ್ನು, ಕಾರ್ಯವನ್ನು ಸಾಧಿಸುವುದಾದಲ್ಲಿ ಪಹಿಡಿಯಲಿ ವೀಳ್ಯವನ್ನು, ಎಂದು ಕೃಷ್ಣನು ಹೇಳಲು ಸೇನೆಯ ಬಲಿಷ್ಠರೂ ಹೆದರಿ ಸುಮ್ಮನಿದ್ದರು. ಆಗ ಕೃಷ್ಣನ ಮಗ ಪ್ರದ್ಯುಮ್ನನು, 'ಆ ಸುಂದರ ಅಶ್ವವನ್ನು ತಂದು ಕೊಡುವೆನು, ಇಲ್ಲದಿದ್ದರೆ ಬಹಿಷ್ಟೆಯ ಸಂಯೋಗದವನಿಗೆ ಆದ ಉಗ್ರ/ಕೆಟ್ಟಗತಿಗೆ ಇಳಿಯುವನು ಎಂದು; ಕೃಷ್ಣನ ಪಾದಕ್ಕೆ ನಮಿಸಿ, ತಾಂಬೂಲವನ್ನು /ಆಜ್ಞೆಯನ್ನು ಪಡೆದು ಹೊಡಲು ಅನುವಾದನು. (ಟಿ:ಪ್ರದ್ಯುಮ್ನನು 'ಪ್ರೇಮ'ದೇವತೆಯಾದ ಮನ್ಮಥನ ಅಂಶದವನು, ಹಾಗಾಗಿ ಅವನ ಪ್ರತಿಜ್ಞೆಯಲ್ಲಿ ಪ್ರೇಮವಿಚಾರದ ದೋಷ ಹೇಳಿದೆ; ಅದರಲ್ಲಿ ಲಘುಹಾಸ್ಯವಿದೆ)

(ಪದ್ಯ -೩೪)

ಪದ್ಯ :-:೩೫:[ಸಂಪಾದಿಸಿ]

ಬಳಿಕ ವೃಷಕೇತು ಗರುಡಧ್ವಜನ ಮೃದುಪದಯು | ಗಳಕೆರಗಿ ದೇವ ಚಿತ್ತೈಸಾದೊಡಿನ್ನು ಕೊಳು | ಗುಳದೊಳನುಸಾಲ್ವನೆಂದೆಂಬ ಖಳನಂ ಪಿಡಿದು ನಿಮ್ಮಂಘ್ರಿಗೊಪ್ಪಿಸದೊಡೆ ||
ಮುಳಿದು ವಿಪ್ರನ ವಧೆಗೆಳಸಿದವನ ಗತಿಗೆ ತಾ | ನಿಳಿವೆನೆನ್ನಂ ಕಳುಹಬೇಕೆಂದು ಕೈಮುಗಿಯೆ | ನಳಿನಾಕ್ಷನಾತನಂ ತೆಗೆದು ತಕ್ಕೈಸಿ ವೀಳೆಯವಿತ್ತು ಬೀಳ್ಕೊಟ್ಟನು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ವೃಷಕೇತು ಗರುಡಧ್ವಜನ ಮೃದುಪದಯುಗಳಕೆ ಎರಗಿ=[ಆ ನಂತರ ವೃಷಕೇತು ಕೃಷ್ನನ ಮೃದು ಪಾದಗಳಿಗೆ ನಮಿಸಿ,], ದೇವ ಚಿತ್ತೈಸಾದೊಡೆ ಇನ್ನು ಕೊಳುಗುಳದೊಳು ಅನುಸಾಲ್ವನೆಂದೆಂಬ ಖಳನಂ ಪಿಡಿದು ನಿಮ್ಮಂಘ್ರಿಗೆ ಒಪ್ಪಿಸದೊಡೆ=[ದೇವನೇ ಕೇಳು, ಆದೊಡೆ ಇನ್ನು ಯುದ್ಧದಲ್ಲಿ ಅನುಸಾಲ್ವನು ಎಂಬ ದುಷ್ಟನನ್ನು ಪಹಿಡಿದು ನಿಮ್ಮ ಪಾದಕ್ಕೆ ಒಪ್ಪಿಸದ ಹೋದರೆ,], ಮುಳಿದು ವಿಪ್ರನ ವಧೆಗೆ ಎಳಸಿದವನ ಗತಿಗೆ ತಾನಿಳಿವೆನೆ ಎನ್ನಂ ಕಳುಹಬೇಕೆಂದು ಕೈಮುಗಿಯೆ=[ಸಿಟ್ಟಿನಲ್ಲಿ ಬ್ರಾಹ್ಮಣನ ಕೊಲೆಗೆಯತ್ನಿಸಿದವನ ಗತಿಗೆ ತಾನುಹೋಗುವೆನು, ನನ್ನನ್ನೂ ಯುದ್ಧಕ್ಕೆ ಕಳುಹಿಸಬೇಕು ಎಂದು ಕೈಮುಗಿಯಲು], ನಳಿನಾಕ್ಷನ ಆತನಂ ತೆಗೆದು ತಕ್ಕೈಸಿ ವೀಳೆಯವಿತ್ತು ಬೀಳ್ಕೊಟ್ಟನು=[ನಳಿನಾಕ್ಷನು ಆತನನ್ನು ಹತ್ತಿರ ಕರೆದು, ಅಪ್ಪಿಕೊಂಡು, ವೀಳೆಯ ಕೊಡುವ ಮೂಲಕ ಅನುಮತಿ ನೀಡಿ ಯುದ್ಧಕ್ಕೆ ಕಳುಹಿಸಿದನು.]
  • ತಾತ್ಪರ್ಯ: ಆ ನಂತರ ವೃಷಕೇತು ಕೃಷ್ಣನ ಮೃದು ಪಾದಗಳಿಗೆ ನಮಿಸಿ, ದೇವನೇ ಕೇಳು, ಆದೊಡೆ ಇನ್ನು ಯುದ್ಧದಲ್ಲಿ ಅನುಸಾಲ್ವನು ಎಂಬ ದುಷ್ಟನನ್ನು ಪಹಿಡಿದು ನಿಮ್ಮ ಪಾದಕ್ಕೆ ಒಪ್ಪಿಸದೆ ಹೋದರೆ ಸಿಟ್ಟಿನಲ್ಲಿ ಬ್ರಾಹ್ಮಣನ ಕೊಲೆಗೆ ಯತ್ನಿಸಿದವನ ಗತಿಗೆ ತಾನುಹೋಗುವೆನು, ನನ್ನನ್ನೂ ಯುದ್ಧಕ್ಕೆ ಕಳುಹಿಸಬೇಕು ಎಂದು ಕೈಮುಗಿಯಲು, ಕೃಷ್ಣನು ಆತನನ್ನು ಹತ್ತಿರ ಕರೆದು, ಅಪ್ಪಿಕೊಂಡು, ವೀಳೆಯ ಕೊಡುವ ಮೂಲಕ ಅನುಮತಿ ನೀಡಿ ಯುದ್ಧಕ್ಕೆ ಕಳುಹಿಸಿದನು.

(ಪದ್ಯ -೩೫)

ಪದ್ಯ :-:೩೬:[ಸಂಪಾದಿಸಿ]

ಸದ್ಯೋಗಿಜಯದ ಮೀನಧ್ವಜವನಳವಡಿಸಿ | ವಿದ್ಯುತ್ಪ್ರಚಾರಮಂ ಗೆಲ್ವ ಹಯಮಂ ಪೂಡಿ | ಖದ್ಯೋತನಿಂಬಮಂ ಮಣಿಖಚಿತ ಕಾಂಚನಮಯ ಪ್ರಭೆಗಳಿಂದೆ ನಗುವ |
ಉದ್ಯದ್ವರೂಥಮಂ ಜೋಡಿಸಿ ಮಹಾಸಮರ | ಕುದ್ಯುಕ್ತನಾಗಿ ಸಾರಥಿ ತಂದು ನಿಲಿಸಲಾ | ಪ್ರದ್ಯುಮ್ನನಡರ್ದು ನಿಜಚಾಪಮಂ ಜೇಗೈದು ಬಂದನಾಹವಕೆ ನಲಿದು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸದ್ಯೋಗಿ (ಉತ್ತಮ ಯೋಗಿ) ಜಯದ ಮೀನಧ್ವಜವನು ಅಳವಡಿಸಿ=[ಉತ್ತಮ ಯೋಗಿಗಳನ್ನು ಜಯಿಸಬಹುದಾದ ಮೀನಧ್ವಜವನ್ನು ರಥಕ್ಕೆ ಜೋಡಿಸಿ,]; ವಿದ್ಯುತ್ ಪ್ರಚಾರಮಂ ಗೆಲ್ವ ಹಯಮಂ ಪೂಡಿ=[ವಿದ್ಯುತ್ ನ ವೇಗವನ್ನು ಗೆಲ್ಲುವ ಕುದುರೆಯನ್ನು ಹೂಡಿ]; ಖದ್ಯೋತನಿಂಬಮಂ ಮಣಿಖಚಿತ ಕಾಂಚನಮಯ ಪ್ರಭೆಗಳಿಂದೆ ನಗುವ (ಪ್ರಕಾಸಿಸುವ) ಉದ್ಯದ್ವ್ (ಎತ್ತರದ) ವರೂಥಮಂ ಜೋಡಿಸಿ=[ಸೂರ್ಯಬಿಂಬವನ್ನು ಮೀರಿದ ಮಣಿಖಚಿತ ಚಿನ್ನದ ಪ್ರಭೆಗಳಿಂದ ಪ್ರಕಾಸಿಸುವ ಎತ್ತರದ ರಥವನ್ನು ಸಿದ್ಧಪಡಿಸಿ,] ಮಹಾಸಮರಕೆ ಉದ್ಯುಕ್ತನಾಗಿ ಸಾರಥಿ ತಂದು ನಿಲಿಸಲಾ ಪ್ರದ್ಯುಮ್ನನು ಅಡರ್ದು ನಿಜಚಾಪಮಂ ಜೇಗೈದು ಬಂದನಾಹವಕೆ ನಲಿದು=[ಮಹಾಸಮರಕ್ಕೆ ಉದ್ಯುಕ್ತನಾಗಿ ಸಾರಥಿ ತಂದು ನಿಲ್ಲಿಸಲು ಪ್ರದ್ಯುಮ್ನನು ಅದನ್ನು ಹತ್ತಿ ತನ್ನ ಬಿಲ್ಲನ್ನು ಜೇಂಕಾರ ಮಾಡಿ ಯುದ್ಧಕ್ಕೆ ಸಂತಸದಿಂದ ಬಂದನು.]
  • ತಾತ್ಪರ್ಯ:ಉತ್ತಮ ಯೋಗಿಗಳನ್ನು ಜಯಿಸಬಹುದಾದ ಮೀನಧ್ವಜವನ್ನು ರಥಕ್ಕೆ ಜೋಡಿಸಿ, ವಿದ್ಯುತ್ ನ ವೇಗವನ್ನು ಗೆಲ್ಲುವ ಕುದುರೆಯನ್ನು ಹೂಡಿ, ಸೂರ್ಯಬಿಂಬವನ್ನು ಮೀರಿದ ಮಣಿಖಚಿತ ಚಿನ್ನದ ಪ್ರಭೆಗಳಿಂದ ಪ್ರಕಾಸಿಸುವ ಎತ್ತರದ ರಥವನ್ನು ಸಿದ್ಧಪಡಿಸಿ, ಮಹಾಸಮರಕ್ಕೆ ಉದ್ಯುಕ್ತನಾಗಿ ಸಾರಥಿ ತಂದು ರಥವನ್ನು ನಿಲ್ಲಿಸಲು ಪ್ರದ್ಯುಮ್ನನು ಅದನ್ನು ಹತ್ತಿ ತನ್ನ ಬಿಲ್ಲನ್ನು ಜೇಂಕಾರ ಮಾಡಿ ಯುದ್ಧಕ್ಕೆ ಸಂತಸದಿಂದ ಬಂದನು.

(ಪದ್ಯ -೩೬)

ಪದ್ಯ :-:೩೭:[ಸಂಪಾದಿಸಿ]

ಕಂಡನನುಸಾಲ್ವನಿವನಾರೀಗ ರಣಕೆ ಮುಂಕೊಂಡು ಬಹ ವೀರನಸುರಾರಿಯಾದೊಡೆ ಕೇತು | ದಂಡದಗ್ರದೊಳಿರದು ಮತ್ಸ್ಯವಿವನವನ ಸುತನಾಗಬೇಕಿಲ್ಲಿ ಬರಲಿ ||
ದಿಂಡುಗೆಡಪುವೆನೆನುತೆ ಸೇನೆಯಂ ಪಿಂದಿಕ್ಕಿ | ಪುಂಡರೀಕಾಕ್ಷನ ಕುಮಾರನಂ ತಡೆಯೆ ಕೋ | ದಂಡದೊಳ್ ಪ್ರದ್ಯುಮ್ನನೈದುಕಣೆಯಂ ಪೂಡಿ ದೈತ್ಯನಂ ತೆಗೆದೆಚ್ಚನು ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಂಡನು ಅನುಸಾಲ್ವನು ಇವನು ಅರು ಈಗ ರಣಕೆ ಮುಂಕೊಂಡು ಬಹ ವೀರನು=[ ಅನುಸಾಲ್ವನು ಪ್ರದ್ಯುಮ್ನನ್ನು ನೋಡಿದನು; ಇವನು ಯಾರು? ಈಗ ಯುದ್ಧಕ್ಕೆ ಮುಂದುವರಿದು ಬರತ್ತಿರುವ ವೀರನು,]; ಅಸುರಾರಿಯಾದೊಡೆ ಕೇತುದಂಡದ ಅಗ್ರದೊಳ್ ಇರದು ಮತ್ಸ್ಯವು ಇವನು ಅವನ ಸುತನಾಗಬೇಕು=[ಕೃಷ್ಣನಾಗಿದ್ದರೆ, ರಥದ ದಂಡದಮೇಲೆ ಮೀನಿನ ದ್ವಜ ಇರುವುದಿಲ್ಲ, ಇವನು ಅವನ ಮಗನಾಗಿರಬೇಕು]; ಇಲ್ಲಿ ಬರಲಿ ದಿಂಡುಗೆಡಪುವೆನು ಎನುತೆ ಸೇನೆಯಂ ಪಿಂದಿಕ್ಕಿ ಪುಂಡರೀಕಾಕ್ಷನ ಕುಮಾರನಂ ತಡೆಯೆ=[ಮುಂದೆ ಬರಲಿ ಸೊಕ್ಕುಮರಿಯುವೆನು, ಎನ್ನುತ್ತಾ ಸೇನೆಯನ್ನು ಹಿಂದಿಕ್ಕಿ ಕೃಷ್ನನ ಕುಮಾರನನ್ನು ತಡೆಯೆಲು]; ಕೋದಂಡದೊಳ್ ಪ್ರದ್ಯುಮ್ನನು ಐದುಕಣೆಯಂ ಪೂಡಿ ದೈತ್ಯನಂ ತೆಗೆದು ಎಚ್ಚನು=[ಬಿಲ್ಲಿನಲ್ಲಿ ಐದು ಬಾಣವನ್ನು ಪ್ರದ್ಯುಮ್ನನು ಹೂಡಿ ದೈತ್ಯನನ್ನು ಅದರಿಂದ ಹೊಡೆದನು]
  • ತಾತ್ಪರ್ಯ: ಅನುಸಾಲ್ವನು ಪ್ರದ್ಯುಮ್ನನ್ನು ನೋಡಿದನು; ಇವನು ಯಾರು? ಈಗ ಯುದ್ಧಕ್ಕೆ ಮುಂದುವರಿದು ಬರತ್ತಿರುವ ವೀರನು,ಕೃಷ್ಣನಾಗಿದ್ದರೆ, ರಥದ ದಂಡದಮೇಲೆ ಮೀನಿನ ದ್ವಜ ಇರುವುದಿಲ್ಲ, ಇವನು ಅವನ ಮಗನಾಗಿರಬೇಕು; ಮುಂದೆ ಬರಲಿ ಸೊಕ್ಕುಮರಿಯುವೆನು, ಎನ್ನುತ್ತಾ ಸೇನೆಯನ್ನು ಹಿಂದಿಕ್ಕಿ ಕೃಷ್ನನ ಕುಮಾರನನ್ನು ತಡೆಯೆಲು, ಪ್ರದ್ಯುಮ್ನನು ಬಿಲ್ಲಿನಲ್ಲಿ ಐದು ಬಾಣವನ್ನು ಹೂಡಿ ದೈತ್ಯನನ್ನು ಅದರಿಂದ ಹೊಡೆದನು.

(ಪದ್ಯ -೩೭)

ಪದ್ಯ :-:೩೮:[ಸಂಪಾದಿಸಿ]

ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ | ನಿಗ್ರಹಿಸಿದವರಲ್ಲ ವಿರಹವೆಮಗಿಲ್ಲ ಸುರ | ತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಳೇಕೀಗ ನಿನ್ನ ||
ವಿಗ್ರಹಕೆ ನಮಗಿಕ್ಷುಚಾಪವಾರಡಿವೆದೆ ಸ | ಮಗ್ರಕುಸುಮಾಸ್ತ್ರಂಗಳಿಲ್ಲ ನೋಡೆಮ್ಮದೊಂ || ದುಗ್ರಸಾಯಕವನೆಂದಾರ್ದು ತೆಗೆದೆಚ್ಚನನುಸಾಲ್ವನಚ್ಯುತನ ಸುತನ ||38|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ ಗ್ರಹಿಸಿದವರಲ್ಲ ವಿರಹವೆಮಗಿಲ್ಲ=[ಸಿಟ್ಟು ಏಕೆ ನಿನಗೆ? ನೀನು ಐದುಬಾಣಗಳನ್ನು ಬಿಡಲು ನಾವು ಇಂದ್ರಿಯ ನಿಗ್ರಹಿಗಳಾದ ವಿರಾಗಿ ಮನಿಗಳು ಅಲ್ಲ; ]; ಸುರತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಳೇಕೀಗ=[ಸ್ತ್ರೀಸಂಗಕ್ಕೆಉತ್ತೇಜಿಸು ಮೋಹನದ ಪಂಚಬಾಣಗಳು ನಿನ್ನ ಬಾಣಗಳು ಈಗ ಏಕೆ? ಎಂದು ವ್ಯಂಗವಾಗಿ ಹೇಳಿ]; ನಿನ್ನ ವಿಗ್ರಹಕೆ ನಮಗೆ ಇಕ್ಷುಚಾಪವು ಆರಡಿವೆದೆ(ಜೇನುಹುಳುಗಳ ಸಾಲು) ಸಮಗ್ರಕುಸುಮಾಸ್ತ್ರಂಗಳಿಲ್ಲ=[ನಿನ್ನೊಡನೆ ಯುದ್ಧಕ್ಕೆ ನನ್ನಲ್ಲಿ ಕಬ್ಬಿನ ಬಿಲ್ಲೂ ಇಲ್ಲ ಕುಸುಮಾಸ್ತ್ರಗಳೂ ಇಲ್ಲ;]; ನೋಡು ಎಮ್ಮದೊಂದು ಉಗ್ರಸಾಯಕವನೆಉ ಎಂದು ಆರ್ದು ತೆಗೆದೆಚ್ಚನ ಅನುಸಾಲ್ವನು ಅಚ್ಯುತನ ಸುತನ=[ಆದರೆ ನೋಡು ನನ್ನು ಒಂದು ಉಗ್ರವಾದ ಬಾಣವನ್ನು ಎಂದು ಹೇಳಿ ಆರ್ಬಟಿಸಿ, ತೆಗೆದೆಚ್ಚನ ಅನುಸಾಲ್ವನು ಅಚ್ಯತನ ಮಗನನ್ನು ಬಾಣ ಪ್ರಯೋಗ ಮಾಡಿದನು.].
  • ತಾತ್ಪರ್ಯ:*ಸಿಟ್ಟು ಏಕೆ ನಿನಗೆ? ನೀನು ಐದುಬಾಣಗಳನ್ನು ನನ್ನಮೇಲೆ ಬಿಡಲು ನಾವು ಇಂದ್ರಿಯ ನಿಗ್ರಹಿಗಳಾದ ವಿರಾಗಿ ಮನಿಗಳಲ್ಲ; ಸ್ತ್ರೀಸಂಗಕ್ಕೆಉತ್ತೇಜಿಸುವ ಮೋಹನದ ನಿನ್ನ ಪಂಚಬಾಣಗಳು ಈಗ ಏಕೆ? ಎಂದು ವ್ಯಂಗವಾಗಿ ಹೇಳಿ; ನಿನ್ನೊಡನೆ ಯುದ್ಧಕ್ಕೆ ನನ್ನಲ್ಲಿ ಕಬ್ಬಿನ ಬಿಲ್ಲೂ ಇಲ್ಲ ಕುಸುಮಾಸ್ತ್ರಗಳೂ ಇಲ್ಲ; ಆದರೆ ನೋಡು ನನ್ನ ಒಂದು ಉಗ್ರವಾದ ಬಾಣವನ್ನು', ಎಂದು ಹೇಳಿ ಆರ್ಬಟಿಸಿ, ಅನುಸಾಲ್ವನು ಅಚ್ಯತನ ಮಗನಮೇಲೆ ಬಾಣ ಪ್ರಯೋಗ ಮಾಡಿದನು.].

(ಪದ್ಯ -೩೮)II-VIII

ಪದ್ಯ :-:೩೯:[ಸಂಪಾದಿಸಿ]

ಪೃಥಿವಿಪತಿ ಕೇಳೆದೆಯಮೇಲೆ ಕೋಲ್ ಕೀಲಿಸಲ್ | ವ್ಯಥಿಸಿ ಮೈಮರೆದನಾ ಪ್ರದ್ಯುಮ್ನನೊಡನೆ ಸಾ | ರಥಿ ಕೃಷ್ಣನಿದ್ದೆಡೆಗೆ ತೇರನಾಗಳೆ ಕೊಂಡು ಬರೆ ಶೌರಿ ಕಂಡು ಬಳಿಕ ||
ಪೃಥುಲಪೌರುಷದಿಂದೆ ನಮ್ಮ ಸುತನಿಂದು ರಿಪು | ಮಥನಮಂ ಮಾಡಿ ಬಳಲಿದನೆನುತೆ ಬಂದೆಲವೊ | ಶಿಥಿಲಪೌರುಷ ನಿನ್ನನೇಗೆಯ್ಯಲೆಂದು ಹರಿಯೊದೆದನೆಡಗಾಲ್ದುದಿಯೊಳು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೃಥಿವಿಪತಿ ಕೇಳು ಎದೆಯಮೇಲೆ ಕೋಲ್ ಕೀಲಿಸಲ್ ವ್ಯಥಿಸಿ ಮೈಮರೆದನು=[ಜನಮೇಜಯನೇ ಕೇಳು, ಪ್ರದ್ಯುಮ್ನನು ಎದೆಯಮೇಲೆ ಬಾಣವು ಚುಚ್ಚಿದ್ದು ನೋವಿನಿಂದ ಎಚ್ಚರ ತಪ್ಪಿದನು]; ಆ ಪ್ರದ್ಯುಮ್ನನೊಡನೆ ಸಾರಥಿ ಕೃಷ್ಣನಿದ್ದೆಡೆಗೆ ತೇರನಾಗಳೆ ಕೊಂಡು ಬರೆ ಶೌರಿ ಕಂಡು ಬಳಿಕ ಪೃಥುಲ ಪೌರುಷದಿಂದೆ ನಮ್ಮ ಸುತನಿಂದು ರಿಪುಮಥನಮಂ ಮಾಡಿ ಬಳಲಿದನೆನುತೆ=[ಆಗ ಪ್ರದ್ಯುಮ್ನನೊಡನೆ ಸಾರಥಿಯು ಕೃಷ್ಣನಿದ್ದ ಕಡೆ ಬಂದನು; ಅವನು ರಥವನ್ನು ಹೊಡೆದುಕೊಂಡು ಬರಲು ಶೌರಿ ಮಗನನ್ನು ಕಂಡು ಬಳಿಕ ದೊಡ್ಡ ಪೌರುಷದಿಂದ ನಮ್ಮ ಮಗನು ಇಂದು ಶತ್ರುವನ್ನು ಸೋಲಿಸಿ ಆಯಾಸಗೊಂಡನು, ಎನ್ನುತ್ತಾ,]; ಬಂದೆಲವೊ ಶಿಥಿಲಪೌರುಷ ನಿನ್ನನೇಗೆಯ್ಯಲೆಂದು ಹರಿಯೊದೆದನು ಎಡಗಾಲ್ ತುದಿಯೊಳು=['ಯುದ್ಧದಿಂದ ಹಿಂದಕ್ಕೆ ಬಂದೆ, ಎಲವೊ ಪೌರುಷಹೀನನೇ ನಿನ್ನನು ಏನು ಮಾಡಲಿ' ಎಂದು ಕೃಷ್ಣನು ತನ್ನ ಎಡಗಾಲ ತುದಿಯಲ್ಲಿ ಅವನನ್ನು ಒದ್ದನು.]
  • ತಾತ್ಪರ್ಯ:*ಜನಮೇಜಯನೇ ಕೇಳು, ಪ್ರದ್ಯುಮ್ನನು ಎದೆಯಮೇಲೆ ಬಾಣವು ಚುಚ್ಚಿದ್ದು ನೋವಿನಿಂದ ಎಚ್ಚರ ತಪ್ಪಿದನು; ಆಗ ಪ್ರದ್ಯುಮ್ನನೊಡನೆ ಸಾರಥಿಯು ಕೃಷ್ಣನಿದ್ದ ಕಡೆ ಬಂದನು; ಅವನು ರಥವನ್ನು ಹೊಡೆದುಕೊಂಡು ಬರಲು ಶೌರಿ ಮಗನನ್ನು ಕಂಡು ಬಳಿಕ ದೊಡ್ಡ ಪೌರುಷದಿಂದ ನಮ್ಮ ಮಗನು ಇಂದು ಶತ್ರುವನ್ನು ಸೋಲಿಸಿ ಆಯಾಸಗೊಂಡನು, ಎನ್ನುತ್ತಾ, 'ಯುದ್ಧದಿಂದ ಹಿಂದಕ್ಕೆ ಬಂದೆ, ಎಲವೊ ಪೌರುಷಹೀನನೇ ನಿನ್ನನು ಏನು ಮಾಡಲಿ' ಎಂದು ಕೃಷ್ಣನು ತನ್ನ ಎಡಗಾಲ ತುದಿಯಲ್ಲಿ ಅವನನ್ನು ಒದ್ದನು.

(ಪದ್ಯ -೩೯)

ಪದ್ಯ :-:೪೦:[ಸಂಪಾದಿಸಿ]

ದ್ವಾರಕೆಯನೆಂತಬಲೆಯರ ಮುಂದೆ ಪುಗುವೆ ಪೋ | ಗಾರಣ್ಯಕೆನಲಲ್ಲಿ ಮುನಿಗಳ್ಗೆ ಸೇರೆ ಕೆ | ಟ್ಟಾರೂರ ಸಾರ್ದೊಡಂ ನೀಂ ವಿರಹಿತನು ವಿಷಮನೆಂದೊರ್ವರಂ ಕೂಡರು ||
ಆರಿನ್ನು ಗತಿ ನಿನಗೆ ಸಂಬಂಧಿ ಬಾಣನಂ | ಹಾರೈಸುಪÉÇಡೆ ನಿನ್ನ ಬೇರ್ಗೊಲೆಗೆ ಶಿವನಿಪ್ಪ | ಕಾರಣವನಂಗತ್ವಮೇ ಪ್ರಾಪ್ತಮೆಂದು ಹರಿ ತನ್ನ ಸುತನಂ ಜರೆದನು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದ್ವಾರಕೆಯನು ಎಂತು ಅಬಲೆಯರ ಮುಂದೆ ಪುಗುವೆ=[ಸೋತು ಬಂದ ನೀನು ದ್ವಾರಕೆಯನ್ನು ಹೇಗೆ ಹೆಂಗಸರ ಮುಂದೆ ಹೇಡಿಯಾಗಿ ಹೋಗುವೆ?] ಪೋಗು ಆರಣ್ಯಕೆ ಎನಲು ಅಲ್ಲಿ ಮುನಿಗಳ್ಗೆ ಸೇರೆ(ಸೇರುವುದಿಲ್ಲ) ಕೆಟ್ಟು ಆರೂರ ಸಾರ್ದೊಡಂ ನೀಂ ವಿರಹಿತನು ವಿಷಮನೆಂದು ಓರ್ವರಂ ಕೂಡರು=[ಹೋಗು ಆರಣ್ಯಕ್ಕೆ ಎನ್ನಲು, ಅಲ್ಲಿ ಮುನಿಗಳಿಗೆ ವಿರೋಧಿ; ಕೆಟ್ಟು ಯಾರ ಊರನ್ನು ಸೇರಿದರೂ ನೀನು ಪತ್ನಿಯಿಂದ ದೂರಾದವನು ಎಂದು, ವಿರೋಧಿಯೆಂದು ಯಾರೂ ಸೇರಿಸುವುದಿಲ್ಲ.];ಆರಿನ್ನು ಗತಿ ನಿನಗೆ ಸಂಬಂಧಿ ಬಾಣನಂ ಹಾರೈಸುವೊಡೆ ನಿನ್ನ ಬೇರ್ಗೊಲೆಗೆ(ಬೇರು+ಕೊಲೆ:ಪೂರ್ಣ ನಾಶಮಾಡು) ಶಿವನಿಪ್ಪ=[ ಇನ್ನು ಯಾರು ಗತಿ ನಿನಗೆ, ಸಂಬಂಧಿಯಾದ ಬಾಣನಾಶ್ರಯ ಬಯಸುವುದಾದರೆ,ನಿನ್ನನ್ನು ಪೂರ್ಣ ನಾಶಮಾಡಲು ಶಿವನಿರುವನು]; ಕಾರಣವು ಅನಂಗತ್ವಮೇ ಪ್ರಾಪ್ತಮೆಂದು ಹರಿ ತನ್ನ ಸುತನಂ ಜರೆದನು=[ಆದರಿಂದ ನಿನಗೆ ಅನಂಗತ್ವವೇ(ದೇಹವಿಲ್ಲದ ರೂಪ) ಪ್ರಾಪ್ತಿಯೇ ಸರಿ, ಎಂದು ಹರಿ ತನ್ನ ಮಗನನ್ನು ತೆಗಳಿದನು].
  • ತಾತ್ಪರ್ಯ:*ಸೋತು ಬಂದ ನೀನು ದ್ವಾರಕೆಯನ್ನು ಹೇಗೆ ಹೆಂಗಸರ ಮುಂದೆ ಹೇಡಿಯಾಗಿ ಹೋಗುವೆ? ಹೋಗು ಆರಣ್ಯಕ್ಕೆ ಎನ್ನಲು, ಅಲ್ಲಿ ಮುನಿಗಳಿಗೆ ವಿರೋಧಿ; ಕೆಟ್ಟು ಯಾರ ಊರನ್ನು ಸೇರಿದರೂ ನೀನು ಪತ್ನಿಯಿಂದ ದೂರಾದವನು ಎಂದು, ವಿರೋಧಿಯೆಂದು ಯಾರೂ ಸೇರಿಸುವುದಿಲ್ಲ. ಇನ್ನು ಯಾರು ಗತಿ ನಿನಗೆ, ಸಂಬಂಧಿಯಾದ ಬಾಣನಾಶ್ರಯ ಬಯಸುವುದಾದರೆ,ನಿನ್ನನ್ನು ಪೂರ್ಣ ನಾಶಮಾಡಲು, ಅಲ್ಲಿ ಬಾಣನ ಮನೆಯಲ್ಲಿ ಶಿವನಿರುವನು; ಆದರಿಂದ ನಿನಗೆ ಅನಂಗತ್ವವೇ(ದೇಹವಿಲ್ಲದ ರೂಪ) ಪ್ರಾಪ್ತಿಯೇ ಸರಿ, ಎಂದು ಹರಿ ತನ್ನ ಮಗನನ್ನು ತೆಗಳಿದನು.

(ಪದ್ಯ -೪೦)

ಪದ್ಯ :-:೪೦:[ಸಂಪಾದಿಸಿ]

ಕಾಲ್ದುದಿಯೊಳೊದೆಯಲ್ಕೆ ನಿನ್ನ ಮಗನೀತಂಗೆ | ಸೋಲ್ದಪನೆ ಸಾಕಿನ್ನು ಕರ್ಣನ ಕುಮಾರಂಗೆ | ಮೇಲ್ದಳವನಟ್ಟೆಂದು ಮಾರುತಿ ನುಡಿಯೆ ಶೌರಿ ಪೋಗು ನೀನಾದೊಡೆನಲು ||
ಸೋಲ್ದುದಿನ್ನಾಹವಂ ತನಗೆಂಬ ಹರ್ಷದಿಂ | ನಾಲ್ದೆಸೆಗಳದಿರೆ ಬೊಬ್ಬಿರಿದಾರ್ದು ಬಿಲ್ವೆದೆಗೆ | ಕೋಲ್ದುಡಿಸಿ ತೆಗೆದಿಸುತ ರಿಪುಚಾತುರಂಗಮಂ ತಾಗಿದಂ ಪವನಸೂನು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾಲ್ದುದಿಯೊಳು ಒದೆಯಲ್ಕೆ ನಿನ್ನ ಮಗನು ಈತಂಗೆ ಸೋಲ್ದಪನೆ ಸಾಕಿನ್ನು ಕರ್ಣನ ಕುಮಾರಂಗೆ ಮೇಲ್ದಳವನು ಅಟ್ಟೆಂದು ಮಾರುತಿ ನುಡಿಯೆ=[ಕಾಲ್ದುದಿಯಲ್ಲಿ ಒದೆಯಲು ನಿನ್ನ ಮಗನು ಈ ಅನುಸಾಲ್ವನಿಗೆ ಸೊತಿರುವನೆ ಸೋತು ಓಡಿಬಂದವನೆ? ಮೂರ್ಛಿತನನ್ನು ಸಾರಥಿ ತಂದಿದ್ದಾನೆ; ಸಾಕು ಇನ್ನು ಕರ್ಣನ ಮಗನಿಗೆ ಹೆಚ್ಚಿ ದಳವನ್ನು ಕಳಿಸು ಎಂದನು ಭೀಮ; ಹಾಗೆ ಹೇಳಲು]; ಶೌರಿ ಪೋಗು ನೀನಾದೊಡೆ ಎನಲು=[ಕೃಷ್ನನು ಹೋಗು ನೀನಾದರೂ ಎನ್ನಲು,]; ಸೋಲ್ದುದು ಇನ್ನಾಹವಂ ತನಗೆಂಬ ಹರ್ಷದಿಂ ನಾಲ್ದೆಸೆಗಳು ಅದಿರೆ ಬೊಬ್ಬಿರಿದ ಆರ್ದು ಬಿಲ್ಲ ಹೆದೆಗೆ ಕೋಲನ್ನು ತುಡಿಸಿ ತೆಗೆದು ಎಸುತ ರಿಪುಚಾತುರಂಗಮಂ ತಾಗಿದಂ ಪವನಸೂನು=[ಭೀಮನು, ಇನ್ನು ಆ ಸೇನೆ ಸೋತಿತು ತನಗೆ ಎನ್ನುವ ಹರ್ಷದಲ್ಲಿ, ನಾಲ್ಕು ದೊಕ್ಕುಗಳೂ ಅದುರುವಂತೆ ಬೊಬ್ಬಿರಿದು ಆರ್ಬಟಿಸಿದನು, ಬಿಲ್ಲಿನ ಹೆದೆಗೆ ಬಾಣವನ್ನು ಹೂಡಿ ತೆಗೆದುಬಿಡುತ್ತಾ ಶತ್ರು ಸೈನ್ಯವನ್ನು ಎದುರಿಸಿದನು.]
  • ತಾತ್ಪರ್ಯ:*ಕಾಲ್ದುದಿಯಲ್ಲಿ ಒದೆಯಲು ನಿನ್ನ ಮಗನು ಈ ಅನುಸಾಲ್ವನಿಗೆ ಸೊತಿರುವನೆ ಸೋತು ಓಡಿಬಂದವನೆ? ಮೂರ್ಛಿತನನ್ನು ಸಾರಥಿ ತಂದಿದ್ದಾನೆ; ಸಾಕು ಇನ್ನು ಕರ್ಣನ ಮಗನಿಗೆ ಹೆಚ್ಚಿನ ದಳವನ್ನು ಕಳಿಸು ಎಂದನು ಭೀಮ; ಹಾಗೆ ಹೇಳಲು ಕೃಷ್ನನು ನೀನಾದರೂ ಹೋಗು ಎನ್ನಲು, ಭೀಮನು, ಇನ್ನು ಆ ಸೇನೆ ಸೋತಿತು ತನಗೆ ಎನ್ನುವ ಹರ್ಷದಲ್ಲಿ, ನಾಲ್ಕು ದಿಕ್ಕುಗಳೂ ಅದುರುವಂತೆ ಬೊಬ್ಬಿರಿದು ಆರ್ಬಟಿಸಿದನು; ಬಿಲ್ಲಿನ ಹೆದೆಗೆ ಬಾಣವನ್ನು ಹೂಡಿ ತೆಗೆದುಬಿಡುತ್ತಾ ಶತ್ರು ಸೈನ್ಯವನ್ನು ಎದುರಿಸಿದನು.

(ಪದ್ಯ -೪೦)

ಪದ್ಯ :-:೪೨:[ಸಂಪಾದಿಸಿ]

ಆ ಭೀಮನುರುವಣಿಸೆ ಕಂಡು ವೃಷಕೇತು ನಗು | ತೀ ಭೂಮಿಗಿಂದು ಪÉÇಸತಾದುದೆಲೆ ತಾತಬಾ| ಲಾಭಿಲಾಷೆಯ ಫಲಕೆಳಸುವರೆ ಪಿತರ್ ತನಗೆ ಮೀಸಲೀ ಸಮರಮಿದಕೆ ||
ಲೋಭದಿಂ ನೀಂ ಬರ್ಪುದುಚಿತಮೇ ಪೇಳನಲ್ | ಶೋಭಿಸುವ ಪಣ್ವಿಡಿದು ತಂದೆ ಸವಿಸದೊಡೆ ತಾ | ನೇ ಭುಂಜಿಪನೆ ಪಸುಳೆ ನಿನಗೆ ರಣದನುದೋರಬಂದೆನೆಂದಂ ಮಾರುತಿ ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆ ಭೀಮನು ಉರುವಣಿಸೆ ಕಂಡು ವೃಷಕೇತು ನಗುತ ಈ ಭೂಮಿಗೆ ಇಂದು ಪೊಸತಾದುದು=[ಆ ಭೀಮನು ಕರಾಕ್ರಮದಿಂದ ಬರಲು, ಕಂಡು ವೃಷಕೇತು ನಗುತ್ತಾ ಈ ಭೂಮಿಯಲ್ಲಿ ಇದು ಹೊಸಬಗೆ,]; ಎಲೆ ತಾತ ಬಾಲ ಅಭಿಲಾಷೆಯ ಫಲಕೆ ಎಳಸುವರೆ ಪಿತರ್ ತನಗೆ ಮೀಸಲೀ ಸಮರಂ=[ವೃಷಕೇತುವು,ಎಲೆ ತಂದೆಯೇ (ಚಿಕ್ಕಪ್ಪ) ಬಾಲಕನು ಆಸೆಪಟ್ಟ ಹಣ್ಣಿಗೆ,ತಂದೆಯು ಆಸಿಪಡಬಹುದೇ? ಈ ಯುದ್ಧ ತನಗೆ ಮೀಸಲಿರಲಿ ಎಂದು,];ಇದಕೆ ಲೋಭದಿಂ ನೀಂ ಬರ್ಪುದು ಉಚಿತಮೇ ಪೇಳನಲ್=[ ಈ ಯುದ್ಧಕ್ಕೆ ನೀವು ಆಸೆಪಟ್ಟು ಬರಬಹುದೇ, ಅದು ಉಚಿತವೇ ಹೇಳು ಎನಲು, ]; ಶೋಭಿಸುವ ಪಣ್ವಿಡಿದು ತಂದೆ ಸವಿಸದೊಡೆ (ತಿನ್ನಿಸದೆ) ತಾನೇ ಭುಂಜಿಪನೆ ಪಸುಳೆ ನಿನಗೆ ರಣದ ಅನುದೋರಬಂದೆನು ಎಂದಂ ಮಾರುತಿ=[ಶೋಭಿಸುತ್ತಿರುವ ಹಣ್ಣನ್ನು ಹಿಡಿದು ತಂದೆ ತಿನ್ನಿಸದೆ ತಾನೇ ತಿನ್ನುವನೆ ಮಗನೇ ನಿನಗೆ ಯುದ್ಧದಲ್ಲಿ ಕೇವಲ ಸಹಾಯಕ್ಕೆ ಬಂದೆನು ಎಂದನು ಭೀಮ.]
  • ತಾತ್ಪರ್ಯ:*ಆ ಭೀಮನು ಕರಾಕ್ರಮದಿಂದ ಬರಲು, ಕಂಡು ವೃಷಕೇತು ನಗುತ್ತಾ ಈ ಭೂಮಿಯಲ್ಲಿ ಇದು ಹೊಸಬಗೆ, ವೃಷಕೇತುವು,ಎಲೆ ತಂದೆಯೇ (ಚಿಕ್ಕಪ್ಪ) ಬಾಲಕನು ಆಸೆಪಟ್ಟ ಹಣ್ಣಿಗೆ,ತಂದೆಯು ಆಸಿಪಡಬಹುದೇ? ಈ ಯುದ್ಧ ತನಗೆ ಮೀಸಲಿರಲಿ ಎಂದು, ಈ ಯುದ್ಧಕ್ಕೆ ನೀವು ಆಸೆಪಟ್ಟು ಬರಬಹುದೇ, ಅದು ಉಚಿತವೇ ಹೇಳು ಎನಲು,ಶೋಭಿಸುತ್ತಿರುವ ಹಣ್ಣನ್ನು ಹಿಡಿದು ತಂದೆ ತಿನ್ನಿಸದೆ ತಾನೇ ತಿನ್ನುವನೆ ಮಗನೇ ನಿನಗೆ ಯುದ್ಧದಲ್ಲಿ ಕೇವಲ ಸಹಾಯಕ್ಕೆ ಬಂದೆನು ಎಂದನು ಭೀಮ.

(ಪದ್ಯ -೪೨)

ಪದ್ಯ :-:೪೩:[ಸಂಪಾದಿಸಿ]

ನಸುನಗುತೆ ವೃಷಕೇತು ಬಳಿಕ ಕಾರ್ಮುಕವನೊದ | ರಿಸುತೆ ರಿಪುಸೈನ್ಯಮಂ ತಾಗಿದಂ ಮೀರ್ದು ಗ | ರ್ಜಿಸಿ ವನಾಂತರಕೆ ಸಿಡಿಲೆರಗಿದಂತಿದಿರಾಂತ ಭಟರ ಗೋಣ್ಗಳನರಿಯಲು |
ಮಸಗಿ ಚಿಮ್ಮುವ ರಕ್ತಧಾರೆಗಳ್ ಕೂಡೆ ಕ | ಣ್ಗೆಸೆದುವಲ್ಲಿಯ ಕಿಚ್ಚಿನಂತೊಡನೆ ಮುಸುಕಿತೆ | ಣ್ದೆಸೆಯನಿಸುವಂಬು ಬಿರುವಳೆಯಂತೆ ಹೊನಲಾಯ್ತು ರುಧಿರಂ ಪ್ರವಾಹದಂತೆ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಸುನಗುತೆ ವೃಷಕೇತು ಬಳಿಕ ಕಾರ್ಮುಕವನು ಒದರಿಸುತೆ ರಿಪುಸೈನ್ಯಮಂ ತಾಗಿದಂ=[ನಸುನಗುತ್ತಾ ವೃಷಕೇತು ಬಳಿಕ ಬಿಲ್ಲನ್ನು ಝೇಂಕಾರ ಮಾಡುತ್ತಾ ಶತ್ರು ಸೈನ್ಯವನ್ನು ಎದುರಿಸಿದನು.]; ಮೀರ್ದು ಗರ್ಜಿಸಿ ವನಾಂತರಕೆ ಸಿಡಿಲೆರಗಿದಂತೆ ಇದಿರಾಂತ ಭಟರ ಗೋಣ್ಗಳನು ಅರಿಯಲು=[ಅತಿಯಾಗಿ ಗರ್ಜಿಸಿ ಕಾಡಿಗೆ ಸಿಡಿಲು ಬಡಿದಂತೆ ಎದುರಿಗೆ ಬಂದ ಭಟರ ಕುತ್ತಿಗೆಯನ್ನು ಕತ್ತರಿಸಿದನು.]; ಮಸಗಿ ಚಿಮ್ಮುವ ರಕ್ತಧಾರೆಗಳ್ ಕೂಡೆ ಕಣ್ಗೆ ಎಸೆದುವು ಅಲ್ಲಿಯ ಕಿಚ್ಚಿನಂತೆ ಒಡನೆ ಮುಸುಕಿತು ಎಣ್ದೆಸೆಯನು ಇಸುವ ಅಂಬು ಬಿರುವಳೆಯಂತೆ ಹೊನಲಾಯ್ತು ರುಧಿರಂ ಪ್ರವಾಹದಂತೆ]=[ಬಹಳವಾಗಿ ಚಿಮ್ಮುವ ರಕ್ತಧಾರೆಗಳು ಕೂಡಲೆ ಎಲ್ಲೆಲ್ಲಿಯೂ ಕಂಡವು,ಬೆಂಕಿಯಂತೆ ಬಾಣಗಳು ಎಂಟೂ ದಿಕ್ಕುಗಳಲ್ಲಿ ಬಿರುಮಳೆಯಹಾಗೆ ತುಂಬಿತು, ಹೊನಲಾಯ್ತು ರುಧಿರಂ ಪ್ರವಾಹದಂತೆ ರಕ್ತದ ಹೊಳೆ ಹರಿಯಿತು].
  • ತಾತ್ಪರ್ಯ:*ನಸುನಗುತ್ತಾ ವೃಷಕೇತು ಬಳಿಕ ಬಿಲ್ಲನ್ನು ಝೇಂಕಾರ ಮಾಡುತ್ತಾ ಶತ್ರು ಸೈನ್ಯವನ್ನು ಎದುರಿಸಿದನು. ಅತಿಯಾಗಿ ಗರ್ಜಿಸಿ ಕಾಡಿಗೆ ಸಿಡಿಲು ಬಡಿದಂತೆ ಎದುರಿಗೆ ಬಂದ ಭಟರ ಕುತ್ತಿಗೆಯನ್ನು ಕತ್ತರಿಸಿದನು. ಬಹಳವಾಗಿ ಚಿಮ್ಮುವ ರಕ್ತಧಾರೆಗಳು ಕೂಡಲೆ ಎಲ್ಲೆಲ್ಲಿಯೂ ಕಂಡವು,ಬೆಂಕಿಯಂತೆ ಬಾಣಗಳು ಎಂಟೂ ದಿಕ್ಕುಗಳಲ್ಲಿ ಬಿರುಮಳೆಯಹಾಗೆ ತುಂಬಿತು, ಹೊನಲಾಯ್ತು ರುಧಿರಂ ಪ್ರವಾಹದಂತೆ ರಕ್ತದ ಹೊಳೆ ಹರಿಯಿತು.

(ಪದ್ಯ -೪೩)

ಪದ್ಯ :-:೪೪:[ಸಂಪಾದಿಸಿ]

ಝಷಕೇತನಂ ತನಗೆ ಸೋಲ್ದು ಹಿಮ್ಮೆಟ್ಟಿದಂ | ವೃಷಭಾಂಕಿತಧ್ವಜಸ್ತಂಭದವನಾರಿವಂ | ವಿಷಮಗೋಪಾಲನಲ್ಲೆನುತೆ ಕಡುಗೋಪದಿಂದನುಸಾಲ್ವನಿವನ ಮೇಲೆ ||
ಇಷುವೃಷ್ಟಿಯಂ ಕರೆಯಲಾ ಕರ್ಣಸಂಭವಂ | ಮೃಷೆಯಲ್ಲದೆನ್ನೊಡನೆ ತೋರಿಸಾ ನಿನ್ನ ಪೌ | ರುಷವನೆಂದೆನುತವಂಮುಸುಕಿದಂ ಪೊಸಮಸೆಯವಿಶಿಖದೊಳವನ ರಥವನು ||44||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಝಷಕೇತನಂ (ಮೀನು-ಧ್ವಜ)ತನಗೆ ಸೋಲ್ದು ಹಿಮ್ಮೆಟ್ಟಿದಂ ವೃಷಭಾಂಕಿತದ್ವಜಸ್ತಂಭದವನು ಆರಿವಂ=[ಮತ್ಸ್ಯಧ್ವಜ (ಮೀನು-ಧ್ವಜ)ಪ್ರದ್ಯುಮ್ನನು ತನಗೆ ಸೋತು ಹಿಮ್ಮೆಟ್ಟಿದನು, ವೃಷಭ (ಹೋರಿ)ಧ್ವಜದವನು ಯಾರು ಇವನು,]; ವಿಷಮಗೋಪಾಲನು ಅಲ್ಲೆನುತೆ ಕಡುಗೋಪದಿಂದ ಅನುಸಾಲ್ವನು ಇವನ ಮೇಲೆ ಇಷುವೃಷ್ಟಿಯಂ ಕರೆಯಲು=[ಆ ಕೆಟ್ಟವೈರಿ ಗೋಪಾಲನು ಅಲ್ಲ ಎನ್ನುತ್ತಾ ಕಡು ಕೋಪದಿಂದ ಅನುಸಾಲ್ವನು ಇವನ ಮೇಲೆ ಬಾಣದ ಮಳೆಯನ್ನು ಸುರಿಸಲು,] ಆ ಕರ್ಣಸಂಭವಂ ಮೃಷೆಯಲ್ಲದ ಎನ್ನೊಡನೆ ತೋರಿಸು ಆ ನಿನ್ನ ಪೌರುಷವನು ಎಂದೆನುತ ಅವಂ ಮುಸುಕಿದಂ ಪೊಸಮಸೆಯ ವಿಶಿಖದೊಳವನ ರಥವನು=[ಆ ಕರ್ಣನ ಮಗನು ಅಸತ್ಯನಲ್ಲದ ನನ್ನೊಡನೆ ತೋರಿಸು ಆ ನಿನ್ನ ಪೌರುಷವನು ಎಂದು ಹೇಳುತ್ತಾ ಅವನು ಹೊಸಮಸೆದಿರುವ ಚೂಪಾದ ಬಾಣಗಳಿಂದ ಅವನ ರಥವನ್ನು ಮುಚ್ಚಿದನು.]
  • ತಾತ್ಪರ್ಯ:*ಮತ್ಸ್ಯಧ್ವಜ (ಮೀನು-ಧ್ವಜ)ಪ್ರದ್ಯುಮ್ನನು ತನಗೆ ಸೋತು ಹಿಮ್ಮೆಟ್ಟಿದನು, ವೃಷಭ (ಹೋರಿ)ಧ್ವಜದವನು ಯಾರು ಇವನು; ಆ ಕೆಟ್ಟವೈರಿ ಗೋಪಾಲನು ಅಲ್ಲ ಎನ್ನುತ್ತಾ ಕಡು ಕೋಪದಿಂದ ಅನುಸಾಲ್ವನು ಇವನ ಮೇಲೆ ಬಾಣದ ಮಳೆಯನ್ನು ಸುರಿಸಲು, ಆ ಕರ್ಣನ ಮಗನು ಅಸತ್ಯನಲ್ಲದ ನನ್ನೊಡನೆ ತೋರಿಸು ಆ ನಿನ್ನ ಪೌರುಷವನು ಎಂದು ಹೇಳುತ್ತಾ ಅವನು ಹೊಸಮಸೆದಿರುವ ಚೂಪಾದ ಬಾಣಗಳಿಂದ ಅವನ ರಥವನ್ನು ಮುಚ್ಚಿದನು.

(ಪದ್ಯ -೪೪)

ಪದ್ಯ :-:೪೫:[ಸಂಪಾದಿಸಿ]

ಉಚ್ಚಳಿಸಿ ಹಾಯ್ದುವಂಬುಗಳವನ ಕಾಯದಿಂ | ದೆಚ್ಚರಿಲ್ಲದೆ ನಿಮಿಷಮಿರ್ದು ಚೇತರಿಸಿ ಕೊಂ | ಡೆಚ್ಚನನುಸಾಲ್ವನೀ ಕರ್ಣಜನ ವಕ್ಷಸ್ಸ್ಥಲಪನೊಂದು ಬಾಣದಿಂದೆ ||
ಅಚ್ಚಪೂರಾಯ ಗಾಯದೊಳೆ ಮೈಮರೆದು ಕ | ಣ್ಮುಚ್ಚುತೆ ವರೂಥದೊಳ್ ಮಲಗಲೈ ಕಂಡು ಖತಿ | ವೆಚ್ಚಿ ಪವಮಾನುಜಂ ಬಂದವನ ತೇರನಪ್ಪಳಿಸಿದಂ ಬಲ್ಗದೆಯೊಳು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉಚ್ಚಳಿಸಿ ಹಾಯ್ದುವು ಅಂಬುಗಳು ಅವನ ಕಾಯದಿಂದ ಎಚ್ಚರಿಲ್ಲದೆ ನಿಮಿಷಂ ಇರ್ದು=[ಥಳತಲಿಸಿ ವೃಕೇತುವುವಿನ ಬಾಣಗಳು ಅನುಸಾಲ್ವನ ದೇಹದಿಂದ ಹಾದುಹೋದವು, ಆಪಟ್ಟಿನಿಂದ ಎಚ್ಚರಿಲ್ಲದೆ ನಿಮಿಷಮಾತ್ರ ಇದ್ದು,]; ಚೇತರಿಸಿಕೊಂಡು ಎಚ್ಚನು ಅನುಸಾಲ್ವನು ಈ ಕರ್ಣಜನ ವಕ್ಷಸ್ಸ್ಥಲಪನು ಒಂದು ಬಾಣದಿಂದೆ=[ಚೇತರಿಸಿಕೊಂಡು ಅನುಸಾಲ್ವನು ಈ ಕರ್ಣನ ಮಗನ ಎದೆಯಮೇಲೆ ಒಂದು ಬಾಣದಿಂದ ಹೊಡೆದನು.]; ಅಚ್ಚಪೂರಾಯ(ಬಹಳನೇರವಾದ) ಗಾಯದೊಳ್ ಮೈಮರೆದು ಕಣ್ಮುಚ್ಚುತೆ ವರೂಥದೊಳ್ ಮಲಗಲೈ ಕಂಡು=[ಬಹಳನೇರವಾದ ಬಾಣದಿಂದ ಆದ ಗಾಯದಲ್ಲಿ ವೃಷಕೇತು ಮೈಮರೆತು ಕಣ್ಮುಚ್ಚಿ ರಥದಲ್ಲಿ ಮಲಗಲು ಅದನ್ನು ಕಂಡು]; ಖತಿವೆಚ್ಚಿ (ಸಿಟ್ಟು ಹೆಚ್ಚಿ) ಪವಮಾನುಜಂ ಬಂದವನ ತೇರನಪ್ಪಳಿಸಿದಂ ಬಲ್ಗದೆಯೊಳು=[ಅತಿಯಾದ ಸಿಟ್ಟಿನಿಂದ ಭೀಮನು ಬಂದು ಅರಥವನ್ನು ದೊಡ್ಡಗಧೆಯಿಂದ ಅಪ್ಪಳಿಸಿದನು.]
  • ತಾತ್ಪರ್ಯ:*ಥಳತಲಿಸುತ್ತಾ ವೃಕೇತುವುವಿನ ಬಾಣಗಳು ಅನುಸಾಲ್ವನ ದೇಹದಿಂದ ಹಾದುಹೋದವು, ಆ ಪೆಟ್ಟಿನಿಂದ ಅವನು ಎಚ್ಚರಿಲ್ಲದೆ ನಿಮಿಷಮಾತ್ರ ಇದ್ದು, ಚೇತರಿಸಿಕೊಂಡು ಅನುಸಾಲ್ವನು ಈ ಕರ್ಣನ ಮಗನ ಎದೆಗೆ ಒಂದು ಬಾಣದಿಂದ ಹೊಡೆದನು. ಬಹಳನೇರವಾದ ಬಾಣದಿಂದ ಆದ ಗಾಯದಲ್ಲಿ ವೃಷಕೇತು ಮೈಮರೆತು ಕಣ್ಮುಚ್ಚಿ ರಥದಲ್ಲಿ ಮಲಗಲು ಅದನ್ನು ಕಂಡು, ಅತಿಯಾದ ಸಿಟ್ಟಿನಿಂದ ಭೀಮನು ಬಂದು ಅವನ ರಥವನ್ನು ದೊಡ್ಡಗಧೆಯಿಂದ ಅಪ್ಪಳಿಸಿದನು.

(ಪದ್ಯ -೪೫)

ಪದ್ಯ :-:೪೬:[ಸಂಪಾದಿಸಿ]

ಮುಗ್ಗಿದುದು ಕುದುರೆ ಸಾರಥಿ ಮಡಿದನಾ ರಥಂ | ನೆಗ್ಗಿದುದು ಚಿಗಿದನನುಸಾಲ್ವನಾತನ ಬಲಂ | ಮುಗ್ಗಿದುದು ಸಂದಣಿಸಿ ಪವನಜನ ಮೇಲೆ ಶಸ್ತ್ರಾಸ್ತ್ರಪ್ರಯೋಗದಿಂದೆ ||
ತಗ್ಗಿದುದು ದಿಗ್ದಂತಿ ಭೋಗಿರಾಜನ ಕೊರಲ್ | ಕುಗ್ಗಿದುದು ಧರಣಿತಲಮಿಬ್ಬಾಗಮಾಗಿ ಸಲೆ | ಹಿಗ್ಗಿದುದು ಪೋಗೆನಲ್ ಪೊಯ್ದುನುರುಗದೆಯಿಂದೆ ಪರಸೈನ್ಯಮಂ ಭೀಮನು ||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮುಗ್ಗಿದುದು ಕುದುರೆ ಸಾರಥಿ ಮಡಿದನಾ ರಥಂ ನೆಗ್ಗಿದುದು ಚಿಗಿದನನುಸಾಲ್ವನು=[ಭಿಮನಗದೆಯ ಹೊಡೆತಕ್ಕೆ, ಕುದುರೆ ಮುಗ್ಗರಿಸತು, ಸಾರಥಿ ಮಡಿದನು ಆ ರಥವು ನೆಗ್ಗಿ ಒಡೆಯಿತು, ಆಗ ಅನುಸಾಲ್ವನು ರಥದಿಂದ ಜಿಗಿದನು.]; ಆತನ ಬಲಂ ಮುಗ್ಗಿದುದು ಸಂದಣಿಸಿ(ಒಟ್ಟು ಸೇರಿ) ಪವನಜನ ಮೇಲೆ ಶಸ್ತ್ರಾಸ್ತ್ರಪ್ರಯೋಗದಿಂದೆ=[ಆತನ ಸೈನ್ಯ ಒಟ್ಟು ಸೇರಿ ಭೀಮನ ಮೇಲೆ ಶಸ್ತ್ರಾಸ್ತ್ರಪ್ರಯೋಗ ಮಾಡುತ್ತಾ ಮೇಲೆಬಿತ್ತು]; ತಗ್ಗಿದುದು ದಿಗ್ದಂತಿ ಭೋಗಿರಾಜನ ಕೊರಲ್ ಕುಗ್ಗಿದುದು ಧರಣಿತಲಂ ಇಬ್ಬಾಗಮಾಗಿ ಸಲೆ ಹಿಗ್ಗಿದುದು=[ಈ ಹೋರಾಟದಲ್ಲಿ ಭೂಮಿಹೊತ್ತ ದಿಗ್ದಂತಿಗಳು ಕುಸಿದವು, ಆದಿಶೇಷನ ಕೊರಳು ಕುಗ್ಗಿತು, ಭೂಮಿಯ ಬುಡವೇ ಇಬ್ಬಾಗವಾಗಿ ಬಹಳ ಹಿಗ್ಗಿ.]; ಪೋಗೆನಲ್ ಪೊಯ್ದುನು ಉರುಗದೆಯಿಂದೆ ಪರಸೈನ್ಯಮಂ ಭೀಮನು=[ಹೋಯಿತು ಎನ್ನುವ ಹಾಗೆ ಭೀಮನು ಶತ್ರು ಸೈನ್ಯವನ್ನು ಬಡಿದನು.]
  • ತಾತ್ಪರ್ಯ:*ಭೀಮನ ಗದೆಯ ಹೊಡೆತಕ್ಕೆ, ಕುದುರೆ ಮುಗ್ಗರಿಸತು, ಸಾರಥಿ ಮಡಿದನು ಆ ರಥವು ನೆಗ್ಗಿ ಒಡೆಯಿತು, ಆಗ ಅನುಸಾಲ್ವನು ರಥದಿಂದ ಜಿಗಿದನು. ಆತನ ಸೈನ್ಯ ಒಟ್ಟು ಸೇರಿ ಭೀಮನ ಮೇಲೆ ಶಸ್ತ್ರಾಸ್ತ್ರಪ್ರಯೋಗ ಮಾಡುತ್ತಾ ಮೇಲೆಬಿತ್ತು. ಈ ಹೋರಾಟದಲ್ಲಿ ಭೂಮಿಹೊತ್ತ ದಿಗ್ದಂತಿಗಳು ಕುಸಿದವು, ಆದಿಶೇಷನ ಕೊರಳು ಕುಗ್ಗಿತು, ಭೂಮಿಯ ಬುಡವೇ ಇಬ್ಬಾಗವಾಗಿ ಬಹಳ ಹಿಗ್ಗಿಹೋಯಿತು ಎನ್ನುವ ಹಾಗೆ ಭೀಮನು ಶತ್ರು ಸೈನ್ಯವನ್ನು ಬಡಿದನು.

(ಪದ್ಯ -೪೬)

ಪದ್ಯ :-:೪೭:[ಸಂಪಾದಿಸಿ]

ಕಾದಿ ದುಂದುಗವಡದ ಮುನ್ನವೇ ತನ್ನಳವಿ | ಗೈದಿದಂಕದ ಭಟರ ತೇರ್ಗಳಂ ತೆಗೆದಿಳೆಗೆ | ಮೋದದಿಂ ಕೊಂದನಡಗೆಡಹಿದಂ ಸದೆದನೊದೆದಂ ಹಿಡಿದು ಸುಂಡಿಲ್ಗಳ ||
ಸೇದಿ ದಂತಿಗಳ ನೀಡಾಡಿದಂ ರುಧಿರದಿಂ | ನಾದಿದಂ ಧರೆಯನುಸಿರ್ಗಾಳಿಯಿಂದಂ ಪಾರ | ಲೂದಿದಂ ರಣದೊಳ್ ಪೆಣದ ರಾಶಿಮಾಡಿದಂ ಪರಬಲದೊಳಾ ಭೀಮನು ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕಾದಿ ದುಂದುಗವಡದ ಮುನ್ನವೇ ತನ್ನಳವಿಗೆ ಐದಿದ ಅಂಕದ ಭಟರ ತೇರ್ಗಳಂ ತೆಗೆದ ಇಳೆಗೆ ಮೋದದಿಂ=[ಯುದ್ಧಮಾಡಿ ಶಕ್ತಿಗುಂದುವ ಮೊದಲೇ, ತನ್ನ ಶಕ್ತಿಗೆ ಅನುಗುಣವಾಗಿ ಸೈನ್ಯದ ವೀರರ ರಥಗಳನ್ನು ತೆಗೆದೆತ್ತಿ ಬೂಮಿಗೆ ಬಡಿದನು]; ಕೊಂದನು ಅಡಗೆಡಹಿದಂ ಸದೆದನು ಒದೆದಂ ಹಿಡಿದು ಸುಂಡಿಲ್ಗಳ ಸೇದಿ ದಂತಿಗಳ ನೀಡಾಡಿದಂ=[ಅನೇಕರನ್ನು ಕೊಂದನು, ಅಡ್ಡಕೆಡಗಿ ಸದೆಬಡಿದನು, ಒದ್ದನು, ಆನೆಗಳ ಸೊಂಡಿಲುಗಳನ್ನು ಹಿಡಿದುಎಳೆದು ಏಳೆದಾಡಿದ,]; ರುಧಿರದಿಂ ನಾದಿದಂ ಧರೆಯನು ಉಸಿರ್ಗಾಳಿಯಿಂದಂ ಪಾರಲು ಊದಿದಂ ರಣದೊಳ್ ಪೆಣದ ರಾಶಿಮಾಡಿದಂ ಪರಬಲದೊಳು ಆ ಭೀಮನು=[ಆ ಭೀಮನು ಶತ್ರು ಸೈನ್ಯದಲ್ಲಿ ಶತ್ರುಗಳ ರಕ್ತದಿಂದ ಭೂಮಿಯನ್ನು ಮತ್ತಿದ, ತನ್ನ ಉಸಿರುಗಾಳಿಯಿಂದ ಹಾರಲಿ ಎಂದು ಜೋರಾಗಿ ಗಾಳಿ ಊದಿದ, ರಣರಂಗದಲ್ಲಿ ಹೆಣದ ರಾಶಿಮಾಡಿದ, ].
  • ತಾತ್ಪರ್ಯ:*ಯುದ್ಧಮಾಡಿ ಶಕ್ತಿಗುಂದುವ ಮೊದಲೇ, ತನ್ನ ಶಕ್ತಿಗೆ ಅನುಗುಣವಾಗಿ ಸೈನ್ಯದ ವೀರರ ರಥಗಳನ್ನು ತೆಗೆದೆತ್ತಿ ಬೂಮಿಗೆ ಬಡಿದನು; ಅನೇಕರನ್ನು ಕೊಂದನು, ಅಡ್ಡಕೆಡಗಿ ಸದೆಬಡಿದನು, ಒದ್ದನು, ಆನೆಗಳ ಸೊಂಡಿಲುಗಳನ್ನು ಹಿಡಿದು ಎಳೆದು ಏಳೆದಾಡಿದ, ಆ ಭೀಮನು ಶತ್ರು ಸೈನ್ಯದಲ್ಲಿ ಶತ್ರುಗಳ ರಕ್ತದಿಂದ ಭೂಮಿಯನ್ನು ಮತ್ತಿದ, ತನ್ನ ಉಸಿರುಗಾಳಿಯಿಂದ ಹಾರಲಿ ಎಂದು ಜೋರಾಗಿ ಗಾಳಿ ಊದಿದ, ರಣರಂಗದಲ್ಲಿ ಹೆಣದ ರಾಶಿಮಾಡಿದ.

(ಪದ್ಯ -೪೭)

ಪದ್ಯ :-:೪೮:[ಸಂಪಾದಿಸಿ]

ಮೆಟ್ಟಿದಂ ಮಡದೊಳಿಟ್ಟೊರಸಿ ಕಾಲಾರ್ಳಗಳಂ | ಘಟ್ಟಿಸಿದನುರುಬುವ ಹಯಂಗಳಂ ನಭಕೆ ತೆಗೆ | ದಿಟ್ಟನಾನೆಗಳನಪ್ಪಳಿಸಿದಂ ತೇರ್ಗಳಂ ಧುರದೊಳನಿಲಜನ ಕೂಡೆ ||
ಮುಟ್ಟಿ ಕಾದುವರುಂಟೆ ಸೇನೆ ನಿಮಿಷಾರ್ಧದೊಳ್ | ಬಟ್ಟಬಯಲಾಯ್ತು ಪೊಸರಥದೊಳೈತಂದಳವಿ | ಗೊಟ್ಟನನುಸಾಲ್ವನಂಬುಗಳ ಮಳೆಯಂ ಕರೆಯುತಾ ವೃಕೋದರನ ಮೇಲೆ ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮೆಟ್ಟಿದಂ ಮಡದೊಳು ಇಟ್ಟೊರಸಿ ಕಾಲಾರ್ಳಗಳಂ ಘಟ್ಟಿಸಿದನು ಉರುಬುವ ಹಯಂಗಳಂ ನಭಕೆ ತೆಗೆದಿಟ್ಟನು=[ಕಾಲಾಳುಗಳನ್ನು ನೆಲದಪಾತಿಯಲ್ಲಿ ಮೆಟ್ಟಿದನು, ಕುದುರೆಗಳನ್ನು, ಅವರನ್ನು ಕೆಳಕ್ಕೆ ಇಟ್ಟು ಒರಸಿದ ತಿಕ್ಕಿದ, ಒಬ್ಬರಿಗೊಬ್ಬರ ತಲೆಯನ್ನ ಘಟ್ಟಿಸಿದನು, ಮೇಲೆದ್ದುಬರುವ ಕುದುರೆಗಳನ್ನು ಆಕಾಶಕ್ಕೆ ತೆಗೆದು ಎಸೆದ,]; ಆನೆಗಳನು ಅಪ್ಪಳಿಸಿದಂ ತೇರ್ಗಳಂ ಧುರದೊಳು=[ಮೆಟ್ಟಿದಂ ಮಡದೊಳು ಇಟ್ಟೊರಸಿ ಕಾಲಾರ್ಳಗಳಂ ಘಟ್ಟಿಸಿದನು ಉರುಬುವ ಹಯಂಗಳಂ ನಭಕೆ ತೆಗೆದಿಟ್ಟನು=[ಕಾಲಾಳುಗಳನ್ನು ನೆಲದಪಾತಿಯಲ್ಲಿ ಮೆಟ್ಟಿದನು, ಕುದುರೆಗಳನ್ನು, ಅವರನ್ನು ಕೆಳಕ್ಕೆ ಇಟ್ಟು ಒರಸಿದ ತಿಕ್ಕಿದ, ಒಬ್ಬರಿಗೊಬ್ಬರ ತಲೆಯನ್ನ ಘಟ್ಟಿಸಿದನು, ಮೇಲೆದ್ದುಬರುವ ಕುದುರೆಗಳನ್ನು ಆಕಾಶಕ್ಕೆ ತೆಗೆದು ಎಸೆದ,]; ಆನೆಗಳನು ಅಪ್ಪಳಿಸಿದಂ ತೇರ್ಗಳಂ ಧುರದೊಳು=[ಆನೆಗಳನ್ನೂ ತೇರುಗಳನ್ನು ನೆಲಕ್ಕೆ ಅಪ್ಪಳಿಸಿದನು, ಧುರದೊಳು/ ಯುದ್ಧದಲ್ಲಿ]; ಅನಿಲಜನ ಕೂಡೆ ಮುಟ್ಟಿ ಕಾದುವರುಂಟೆ ಸೇನೆ ನಿಮಿಷಾರ್ಧದೊಳ್ ಬಟ್ಟಬಯಲಾಯ್ತು=[ಭೀಮನ ಜೊತೆ ಮಷ್ಟಿಯುದ್ಧಮಾಡುವವರುಇದ್ದಾರೆಯೇ? ಇಲ್ಲ. ಅನುಸಾಲ್ವನ ಸೇನೆ ನಿಮಿಷಾರ್ಧದಲ್ಲಿ ಬಟ್ಟಬಯಲಾಯ್ತು. ]; ಅಷ್ಟು ಹೊತ್ತಿಗೆ,ಹೊಸ ರಥದಲ್ಲಿ ಬಂದು, ಅನುಸಾಲ್ವನು ಭೀಮನ ಮೇಲೆ ಅಂಬುಗಳ ಮಳೆಯನ್ನು ಸುರಿಸುತ್ತಾ ತನ್ನ ಸಾಮರ್ಥ್ಯ ತೋರಿದನು.
  • ತಾತ್ಪರ್ಯ:*ಕಾಲಾಳುಗಳನ್ನು ನೆಲದಪಾತಿಯಲ್ಲಿ ಮೆಟ್ಟಿದನು, ಕುದುರೆಗಳನ್ನು, ಅವರನ್ನು ಕೆಳಕ್ಕೆ ಇಟ್ಟು ಒರಸಿದ ತಿಕ್ಕಿದ, ಒಬ್ಬರಿಗೊಬ್ಬರ ತಲೆಯನ್ನ ಘಟ್ಟಿಸಿದನು, ಮೇಲೆದ್ದುಬರುವ ಕುದುರೆಗಳನ್ನು ಆಕಾಶಕ್ಕೆ ತೆಗೆದು ಎಸೆದ; ಕಾಲಾಳುಗಳನ್ನು ನೆಲದಪಾತಿಯಲ್ಲಿ ಮೆಟ್ಟಿದನು, ಕುದುರೆಗಳನ್ನು, ಅವರನ್ನು ಕೆಳಕ್ಕೆ ಇಟ್ಟು ಒರಸಿದ ತಿಕ್ಕಿದ, ಒಬ್ಬರಿಗೊಬ್ಬರ ತಲೆಯನ್ನ ಘಟ್ಟಿಸಿದನು, ಮೇಲೆದ್ದುಬರುವ ಕುದುರೆಗಳನ್ನು ಆಕಾಶಕ್ಕೆ ತೆಗೆದು ಎಸೆದ; ಆನೆಗಳನ್ನೂ ತೇರುಗಳನ್ನು ನೆಲಕ್ಕೆ ಅಪ್ಪಳಿಸಿದನು, ಧುರದೊಳು/ ಯುದ್ಧದಲ್ಲಿ ಭೀಮನ ಜೊತೆ ಮಷ್ಟಿಯುದ್ಧಮಾಡುವವರುಇದ್ದಾರೆಯೇ? ಇಲ್ಲ. ಅನುಸಾಲ್ವನ ಸೇನೆ ನಿಮಿಷಾರ್ಧದಲ್ಲಿ ಬಟ್ಟಬಯಲಾಯ್ತು. ಅಷ್ಟು ಹೊತ್ತಿಗೆ,ಹೊಸ ರಥದಲ್ಲಿ ಬಂದು, ಅನುಸಾಲ್ವನು ಭೀಮನ ಮೇಲೆ ಅಂಬುಗಳ ಮಳೆಯನ್ನು ಸುರಿಸುತ್ತಾ ತನ್ನ ಸಾಮರ್ಥ್ಯ ತೋರಿದನು.]

(ಪದ್ಯ -೪೭)III-VIII

ಪದ್ಯ :-:೪೯:[ಸಂಪಾದಿಸಿ]

ಸಾಲ್ವಾನುಜಂ ಪೂಣ್ದಿಸಲ್ಕೆ ಯಮದಂಡಮಂ | ಪೋಲ್ವ ದೆಯಂ ಕೊಂಡು ಮತ್ತೆ ಮಾರುತಸುತಂ | ಮೇಲ್ವಾಯ್ದು ಬರಲೊಂದುಬಾಣಮಂ ಕಿವಿವರೆಗೆ ತೆಗೆದೆಚ್ಚು ಬೊಬ್ಬಿರಿಯಲು ||
ಕೋಲ್ವಕ್ಷದೊಳ್ ನಾಂಟಿತಳವಳಿದು ಪವನಜಂ | ತೇಲ್ವನಿತರೊಳ್ ಕಂಡು ದೈತ್ಯನುಳಿದದಟರ್ಗೆ | ಸೋಲ್ವನಲ್ಲೆಂದಚ್ಯತಂ ತಾನೆ ಕೋಪದಿಂದಾಹವಕೆ ನಡೆತಂದನು ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಾಲ್ವಾನುಜಂ ಪೂಣ್ದಿಸಲ್ಕೆ ಯಮದಂಡಮಂ ಪೋಲ್ವದೆಯಂ ಕೊಂಡು ಮತ್ತೆ ಮಾರುತಸುತಂ ಮೇಲ್ವಾಯ್ದು ಬರಲು=[ಸಾಲ್ವನ ತಮ್ಮನು ಬಿಲ್ಲಿಗೆ ಬಾಣವನ್ನು ಪೋಣಿಸಿ ಬಿಡಲು, ಮತ್ತೆ ಭಿಮನು ಯಮದಂಡವನ್ನು ಹೋಲುವ ಗದೆಯನ್ನು ಹಿಡಿದುಕೊಂಡು ಅಟ್ಟಿಸಿಕೊಂಡು ಬರಲು]; ಒಂದು ಬಾಣಮಂ ಕಿವಿವರೆಗೆ ತೆಗೆದೆಚ್ಚು ಬೊಬ್ಬಿರಿಯಲು ಕೋಲ್ ವಕ್ಷದೊಳ್ ನಾಂಟಿತು ಅಳವಳಿದು ಪವನಜಂ ತೇಲ್ವನಿತರೊಳ್=[ಅನುಸಾಲ್ವನು ಒಂದು ಬಾಣವನ್ನು ಕಿವಿವರೆಗೆ ಎಳದು ಬಿಟ್ಟು ಬೊಬ್ಬಿರಿಯಲು, ಆ ಬಾಣವು ಬೀಮನ ಎದೆಗೆ ನಾಟಿತು, ಆಗ ಅವನು ಎಚ್ಚರತಪ್ಪಿ ಮೈಮರೆತುದನ್ನು ]; ಕಂಡು ದೈತ್ಯನುಳಿದ ಅದಟರ್ಗೆ ಸೋಲ್ವನಲ್ಲೆಂದು ಅಚ್ಯತಂ ತಾನೆ ಕೋಪದಿಂದ ಆಹವಕೆ ನಡೆತಂದನು=[ಕಂಡು ದೈತ್ಯನು ಉಳಿದ ಸಾಮಾನ್ಯ ಶೂರರಿಗೆ ಸೋಲುವವನಲ್ಲವೆಂದು ಕೃಷ್ಣನು ತಾನೆ ಕೋಪದಿಂದ ಯುದ್ಧಕ್ಕೆ ಬಂದನು.]
  • ತಾತ್ಪರ್ಯ:*ಸಾಲ್ವನ ತಮ್ಮನು ಬಿಲ್ಲಿಗೆ ಬಾಣವನ್ನು ಪೋಣಿಸಿ ಬಿಡಲು, ಮತ್ತೆ ಭೀಮನು ಯಮದಂಡವನ್ನು ಹೋಲುವ ಗದೆಯನ್ನು ಹಿಡಿದುಕೊಂಡು ಅಟ್ಟಿಸಿಕೊಂಡು ಬರಲು, ಅನುಸಾಲ್ವನು ಒಂದು ಬಾಣವನ್ನು ಕಿವಿವರೆಗೆ ಎಳದು ಅವನ ಮೇಲೆ ಬಿಟ್ಟು ಬೊಬ್ಬಿರಿಯಲು, ಆ ಬಾಣವು ಬೀಮನ ಎದೆಗೆ ನಾಟಿತು, ಆಗ ಅವನು ಎಚ್ಚರತಪ್ಪಿ ಮೈಮರೆತುದನ್ನು ಕೃಷ್ಣನು ಕಂಡು, ದೈತ್ಯನು ಉಳಿದ ಸಾಮಾನ್ಯ ಶೂರರಿಗೆ ಸೋಲುವವನಲ್ಲವೆಂದು ತಾನೆ ಕೋಪದಿಂದ ಯುದ್ಧಕ್ಕೆ ಬಂದನು.]

(ಪದ್ಯ -೪೯)

ಪದ್ಯ :-:೫೦:[ಸಂಪಾದಿಸಿ]

ದರ್ಪದಿಂ ಕುದುರೆಯಂ ಕೊಂಡುಬಹೆನೆಂದು ಕಂ | ದರ್ಪನೊಂದೆಸೆಯೊಳುರವಣಿಸಿದಂ ಕೂಡೆ ನಡೆ | ದರ್ಪರಬಲಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು ||
ಸರ್ಪವೈರಿಧ್ವಜನ ರಥಮೈದೆ ಕಂಡು ನೇ | ಸರ್ಪಲವನಡಗಿಸುವ ಚಕ್ರದಿಂ ದೈತ್ಯರ ಪೆ | ಸರ್ಪರೆಯದಂತೆ ಮಾಡುವ ಕೃಷ್ಣನಿವನೆಂದರಿದು ಮೊರೆದನನುಸಾಲ್ವನು ||50|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದರ್ಪದಿಂ ಕುದುರೆಯಂ ಕೊಂಡುಬಹೆನೆಂದು ಕಂದರ್ಪನು ಒಂದೆಸೆಯೊಳು ಉರವಣಿಸಿದಂ=[ದರ್ಪದಿದ ಕುದುರೆಯನ್ನ ಕೊಂಡುಬರುವೆನೆಂದು ಪ್ರದ್ಯುಮ್ನನು ಒಂದುಕಡೆ ಯುದ್ಧಮಾಡಿದನು]; ಕೂಡೆ ನಡೆದರ್ ಪರಬಲಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು=[ಜೊತೆಯಲ್ಲಿ,ಶತ್ರುಸೇನೆಯೊಡನೆ ಯುದ್ಧಕ್ಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು ಹೊರಟರು. ]; ಸರ್ಪವೈರಿಧ್ವಜನ (ಗರುಡಧ್ವಜನ೦ ರಥಂ ಐದೆ ಕಂಡು ನೇಸರ್ ಪಲವನು ಅಡಗಿಸುವ ಚಕ್ರದಿಂ ದೈತ್ಯರ ಪೆಸರ್ ಪರೆಯದಂತೆ(ಸೋರ್ಯನಬೆಳಕನ್ನೇ ಅಡಗಿಸುವ ಚಕ್ರದಿಂದ ದೈತ್ಯರ ಹೆಸರಿಲ್ಲದಂತೆ) ಮಾಡುವ ಕೃಷ್ಣನಿವನೆಂದು ಅರಿದು ಮೊರೆದನು ಅನುಸಾಲ್ವನು=[ಗರುಡಧ್ವಜನ ರಥವು ಬರಲು, ಅದನ್ನು ಅನುಸಾಲ್ವನು ಕಂಡು ದೈತ್ಯರನ್ನು ನಾಶ ಮಾಡುವ ಕೃಷ್ಣನು ಇವನು ಎಂದು ಅರಿತು, ಆರ್ಭಟಿಸಿದನು.]
  • ತಾತ್ಪರ್ಯ: ದರ್ಪದಿದ ಕುದುರೆಯನ್ನ ಕೊಂಡುಬರುವೆನೆಂದು ಪ್ರದ್ಯುಮ್ನನು ಒಂದುಕಡೆ ಯುದ್ಧಮಾಡಿದನು; ಜೊತೆಯಲ್ಲಿ,ಶತ್ರುಸೇನೆಯೊಡನೆ ಯುದ್ಧಕ್ಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು ಯುದ್ಧಕ್ಕೆ ಹೊರಟರು. ಗರುಡಧ್ವಜ ಕೃಷ್ಣನ ರಥವು ಬರಲು, ಅದನ್ನು ಅನುಸಾಲ್ವನು ಕಂಡು ದೈತ್ಯರನ್ನು ನಾಶ ಮಾಡುವ ಕೃಷ್ಣನು ಇವನೇ ಎಂದು ಅರಿತು, ಆರ್ಭಟಿಸಿದನು.]

(ಪದ್ಯ -೫೦)

ಪದ್ಯ :-:೫೧:[ಸಂಪಾದಿಸಿ]

ಪೊಳೆವಮಿಂಚುಗಳೈಸೆ ತೇಜಿಗಳವಲ್ಲ ಬ | ಲ್ಮೊಳಗುಳಿವೈಸೆ ರಥಚಕ್ರ ಧ್ವನಿಗಳಲ್ಲ | ತೊಳಗುವಮರೇಂಧ್ರ ಕಾರ್ಮುಕಮೈಸೆ ಪಿಡಿದಿರ್ದ ಶಾಙ್ರ್ಗಧನುವಲ್ಲ ಬೀಳ್ವ ||
ಮಳೆವನಿಗಳೈಸೆ ಕೂರಂಬುಗಳಿವಲ್ಲ ಕ | ಣ್ಗೊಳಿಪ ಕಾರ್ಮುಗಿಲೈಸೆ ಕೃಷ್ಣನಲ್ಲೆಂಬವೋಲ್ | ಕೊಳುಗುಳಕೆ ಮೈದೋರೆ ಕಂಡು ಕಲಿಸಿಂಹದಂತೆದಿರಾದನನುಸಾಲ್ವನು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪೊಳೆವಮಿಂಚುಗಳ ಐಸೆ ತೇಜಿಗಳು ಇವು ಅಲ್ಲ=[ಹೊಳೆವ ಮಿಂಚುಗಳು ಇವು, ಕುದುರೆಗಳು ಅಲ್ಲ ಇವು ]; ಬಲ್ ಮೊಳಗುಳು ಇವು ಐಸೆ=[ದೊಡ್ಡ ಗುಡುಗುಗಳು ಇವು ರಥಚಕ್ರ ಧ್ವನಿಗಳಲ್ಲ]; ತಳಗುವ ಅಮರೇಂಧ್ರ ಕಾರ್ಮುಕಂ ಐಸೆ ಪಿಡಿದಿರ್ದ ಶಾಙ್ರ್ಗಧನುವಲ್ಲ=[ತೊಳಗುವ ಅಮರೇಂಧ್ರ ಕಾರ್ಮುಕಂ ಐಸೆ ಪಿಡಿದಿರ್ದ ಶಾಙ್ರ್ಗಧನುವಲ್ಲ]; ಬೀಳ್ವ ಮಳೆವನಿಗಳು ಐಸೆ ಕೂರಂಬುಗಳು ಇವಲ್ಲ=[ಬೀಳುತ್ತಿರುವ ಮಳೆಯ ಹನಿಗಳು ಇವು, ಬಾಣಗಳು ಇವಲ್ಲ ]; ಕಣ್ಗೊಳಿಪ(ಕಂಗೊಳಿಪ) ಕಾರ್ಮುಗಿಲು ಐಸೆ ಕೃಷ್ಣನಲ್ಲ ಎಂಬವೋಲ್=[ಕಣ್ಣಿಗೆ ಆಕರ್ಷಕವಾದ ಕಪ್ಪುಮಗಿಲು ಸೈ, ಕೃಷ್ಣನಲ್ಲ ಎನ್ನುವಂತೆ]; ಕೊಳುಗುಳಕೆ ಮೈದೋರೆ ಕಂಡು ಕಲಿಸಿಂಹದಂತೆ ಇದಿರಾದನು ಅನುಸಾಲ್ವನು=[ಯುದ್ಧಕ್ಕೆ ಬಂದು ನಿಂತಿರಲು, ಅನುಸಾಲ್ವನು ಕಂಡು ಕಲಿಸಿಂಹದಂತೆ ಇದಿರಾದನು.]
  • ತಾತ್ಪರ್ಯ: ಹೊಳೆವ ಮಿಂಚುಗಳು ಇವು, ಕುದುರೆಗಳಲ್ಲ ಇವು; ದೊಡ್ಡ ಗುಡುಗುಗಳು ಇವು ರಥಚಕ್ರ ಧ್ವನಿಗಳಲ್ಲ; ಹೊಳೆಯುವ ಇಂದ್ರ ಧನುಸ್ಸೇ ಸೈ (ಕೃಷ್ಣ) ಹಿಡಿದ ಶಾಙ್ರ್ಗಧನುವಲ್ಲ; ಬೀಳುತ್ತಿರುವ ಮಳೆಯ ಹನಿಗಳು ಇವು, ಬಾಣಗಳು ಇವಲ್ಲ ; ಕಣ್ಣಿಗೆ ಆಕರ್ಷಕವಾದ ಕಪ್ಪುಮಗಿಲೇ ಸೈ, ಕೃಷ್ಣನಲ್ಲ ಎನ್ನುವಂತೆ ಯುದ್ಧಕ್ಕೆ ಬಂದು ನಿಂತಿರಲು, ಅನುಸಾಲ್ವನು ಕಂಡು ಕಲಿಸಿಂಹದಂತೆ ಇದಿರಾದನು.]

(ಪದ್ಯ -೫೧)

ಪದ್ಯ :-:೫೨:[ಸಂಪಾದಿಸಿ]

ವ್ಯಗ್ರದಿಂದೈದುವ ಮುರಾರಿಯಂ ಕಂಡು ತ | ನ್ನಗ್ರಜನನಂದು ಕೊಂದಾ ಪಗೆವನೀತನಂ | ನಿಗ್ರಹಿಪೆನೆಂದು ಕಣೆನಾಲ್ಕರಿಂದಚ್ಯುತನ ಹಯಚತುಷ್ಟಯವನಿಸಲು ||
ಉಗ್ರಶರಘಾತಿಗವು ಸೂತನಂ ಕೈಕೊಳದೆ | ವಿಗ್ರಹವನುಳಿದೊಂದು ಕಡೆಗೆ ಹಾಯ್ದುವು ಯದುಕು | ಲಾಗ್ರಣಿಯನಿದಿರೆ ಕಾಣದೆ ನೊಂದು ತನ್ನವರ್ಗನುಸಾಲ್ವನಿಂತೆಂದನು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವ್ಯಗ್ರದಿಂದ(ಉದ್ವೇಗದಿಂದ) ಐದುವ ಮುರಾರಿಯಂ ಕಂಡು=[ಉದ್ವೇಗದಿಂದ ಬರುತ್ತರುವ ಮುರಾರಿಯನ್ನು ಕಂಡು]; ತನ್ನ ಅಗ್ರಜನನು ಅಂದು ಕೊಂದ ಆ ಪಗೆವನು ಈತನಂ ನಿಗ್ರಹಿಪೆನೆಂದು=[ತನ್ನ ಅಣ್ನನನ್ನು ಹಿಂದೆ ಕೊಂದಿರುವ ಆ ಶತ್ರು ಇವನು, ಈತನನ್ನು ಸಾಯಿಸುವೆನೆಂದು]; ಕಣೆನಾಲ್ಕರಿಂದ ಅಚ್ಯುತನ ಹಯಚತುಷ್ಟಯವನು ಇಸಲು(ಹೊಡೆಯಲು)=[ನಾಲ್ಕು ಬಾಣದಿಂದ ಕೃಷ್ಣನ ನಾಲ್ಕೂ ಕುದುರೆಗಳನ್ನು ಹೊಡೆಯಲು]; ಉಗ್ರಶರಘಾತಿಗೆ ಅವು ಸೂತನಂ ಕೈಕೊಳದೆ ವಿಗ್ರಹವನು ಉಳಿದೊಂದು ಕಡೆಗೆ ಹಾಯ್ದುವು=[ಬಲವಾದ ಬಾಣದ ಹೊಡೆತಕ್ಕೆ ಅವು ಸಾರಥಿಯ ಹತೋಟಿಗೆ ಸಿಗದೆ ಯುದ್ಧಭೂಮಿಯನ್ನು ಬಿಟ್ಟು ಬೇರೊಂದು ಕಡೆಗೆ ಓಡಿದವು]; ಯದುಕುಲಾಗ್ರಣಿಯನು ಇದಿರೆ ಕಾಣದೆ ನೊಂದು ತನ್ನವರ್ಗೆ ಅನುಸಾಲ್ವನಿಉ ಇಂತೆಂದನು=[ ಕೃಷ್ಣನ್ನು ಎದುರಿಗೆ ಕಾಣದೆ ಬೇಸರವಾಗಿ/ ಚಿತಿತನಾಗಿ ತನ್ನವರಿಗೆ ಅನುಸಾಲ್ವನು ಹೀಗೆ ಹೇಳಿದನು ].
  • ತಾತ್ಪರ್ಯ:ಉದ್ವೇಗದಿಂದ ಬರುತ್ತರುವ ಮುರಾರಿಯನ್ನು ಕಂಡು, ತನ್ನ ಅಣ್ನನನ್ನು ಹಿಂದೆ ಕೊಂದಿರುವ ಆ ಶತ್ರು ಇವನು, ಈತನನ್ನು ಸಾಯಿಸುವೆನೆಂದು, ನಾಲ್ಕು ಬಾಣದಿಂದ ಕೃಷ್ಣನ ನಾಲ್ಕೂ ಕುದುರೆಗಳನ್ನು ಹೊಡೆಯಲು, ಬಲವಾದ ಬಾಣದ ಹೊಡೆತಕ್ಕೆ ಅವು ಸಾರಥಿಯ ಹತೋಟಿಗೆ ಸಿಗದೆ ಯುದ್ಧಭೂಮಿಯನ್ನು ಬಿಟ್ಟು ಬೇರೊಂದು ಕಡೆಗೆ ಓಡಿದವು. ಕೃಷ್ಣನ್ನು ಎದುರಿಗೆ ಕಾಣದೆ ಬೇಸರವಾಗಿ/ ಚಿತಿತನಾಗಿ ತನ್ನವರಿಗೆ ಅನುಸಾಲ್ವನು ಹೀಗೆ ಹೇಳಿದನು.

(ಪದ್ಯ -೫೨)

ಪದ್ಯ :-:೫೩:[ಸಂಪಾದಿಸಿ]

ನವೆದಪುದೊ ಪರಿವಾರಮೀವ ಧನಮಂ ತರಿಸ | ಲವಿಚಾರದಿಂ ಪ್ರಜೆಗಳಲಸಿದರೊ ದೇಶದೊಳ್ | ತವಕ ಮಿಗೆ ನಾರಿಯರ್ ಪತಿಗಳಿರಲನ್ಯರೊಳ ಮೆರೆದಪರೊ ಮತ್ಕೋಶಕೆ ||
ತವೆ ಪುತ್ರರಿಲ್ಲದಳಿದವರೊಡವೆ ಸಾರ್ದಪುದೊ | ಬವರಕೈತಂದ ರಿಪು ಕೃಷ್ಣನಂ ಕಾಣದಿಹ | ಪವಣಾವುದಕಟ ಪೊಸತಿದು ತನ್ನ ಹಗೆ ಹರಿಯದೆಂದು ಚಿಂತಿಸುರ್ತಿದನು ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಇಸು
  • ನವೆದಪುದೊ ಪರಿವಾರಂ ಈವ ಧನಮಂ ಅಂತರಿಸಲು=[ ತನ್ನ ಪರಿವಾರಕ್ಕೆ ಕೊಡುವವ ಹಣವು ಕಡಿಮೆಯಾಗಿ ನವೆಯುತ್ತಿದ್ದಾರೋ (ಈ ಪಾಪವೋ)]; ಅವಿಚಾರದಿಂ ಪ್ರಜೆಗಳು ಅಲಸಿದರೊ ದೇಶದೊಳ್=[ದೇಶದಲ್ಲಿ ಕೆಟ್ಟ ವಿಚಾರದಿಂದ ಪ್ರಜೆಗಳು ದಾರಿತಪ್ಪಿದರೊ ]; ತವಕ ಮಿಗೆ ನಾರಿಯರ್ ಪತಿಗಳಿರಲು ಅನ್ಯರೊಳ್ ಮೆರೆದಪರೊ=[ಬಯಕ್ಕೆ ಹೆಚ್ಚಿ ನಾರಿಯರು ಪತಿಗಳಿದ್ದರೂ ಅನ್ಯಪುರುಷರಲ್ಲಿ ಸೇರಿ ಮೆರೆದರೊ ] ಮತ್ಕೋಶಕೆ(ನನ್ನ ಬೊಕ್ಕಸಕ್ಕೆ) ತವೆ ಪುತ್ರರಿಲ್ಲದೆ ಅಳಿದವರ ಒಡವೆ ಸಾರ್ದಪುದೊ=[ನನ್ನ ಬೊಕ್ಕಸಕ್ಕೆ ಮತ್ತೆ ಪುತ್ರರಿಲ್ಲದೆ ಸತ್ತವರ ಆಸ್ತಿ-ಒಡವೆ ಸೇರಿದೆಯೋ]; ಬವರಕೆ ಐತಂದ ರಿಪು ಕೃಷ್ಣನಂ ಕಾಣದಿಹ ಪವಣು ಆವುದು ಅಕಟ=[ಯುದ್ಧಕ್ಕೆ ಬಂದ ಶತ್ರು ಕೃಷ್ಣನನ್ನು ಕಾಣದಿರಲು ಕಾರಣ ಯಾವುದು ಅಕಟ], ಪೊಸತಿದು ತನ್ನ ಹಗೆ ಹರಿಯದೆಂದು ಚಿಂತಿಸುರ್ತಿದನು=[ಇದು ಹೊಸ ಬಗೆ, ಈಗ ಇಲ್ಲಿ ಇದ್ದವನು ಕಾಣುತ್ತಿಲ್ಲ!,ತನ್ನ ಹಗೆತನ ಸೇಡು ತೀರದು ಎಂದು ಚಿಂತಿಸುತ್ತಿದ್ದನು.]
  • ತಾತ್ಪರ್ಯ: (ಕೃಷ್ಣನು ತನಗೆ ಕಾಣದಿರಲು ಯಾವ ಪಾಪ ಇರಬಹುದು?);ತನ್ನ ರಾಜ್ಯದಲ್ಲಿ, ತನ್ನ ಪರಿವಾರಕ್ಕೆ ಕೊಡುವವ ಹಣವು ಕಡಿಮೆಯಾಗಿ ನವೆಯುತ್ತಿದ್ದಾರೋ /ಕಷ್ಟದಲ್ಲಿ ಸಂಕಟಪಡುತ್ತಿದ್ದಾರೋ, (ಈ ಪಾಪವೋ); ದೇಶದಲ್ಲಿ ಕೆಟ್ಟ ವಿಚಾರದಿಂದ ಪ್ರಜೆಗಳು ದಾರಿತಪ್ಪಿದರೊ; ಬಯಕ್ಕೆ ಹೆಚ್ಚಿ ನಾರಿಯರು ಪತಿಗಳಿದ್ದರೂ ಅನ್ಯಪುರುಷರಲ್ಲಿ ಸೇರಿ ಮೆರೆದರೊ; ನನ್ನ ಬೊಕ್ಕಸಕ್ಕೆ ಮತ್ತೆ ಪುತ್ರರಿಲ್ಲದೆ ಸತ್ತವರ ಆಸ್ತಿ-ಒಡವೆ ಸೇರಿದೆಯೋ; ಯುದ್ಧಕ್ಕೆ ಬಂದ ಶತ್ರು ಕೃಷ್ಣನನ್ನು ಕಾಣದಿರಲು ಕಾರಣ ಯಾವುದು ಅಕಟ, ಇದು ಹೊಸ ಬಗೆ, ಈಗ ಇಲ್ಲಿ ಇದ್ದವನು ಕಾಣುತ್ತಿಲ್ಲ!,ತನ್ನ ಹಗೆತನದ ಸೇಡು ತೀರದಲ್ಲಾ ಎಂದು ಚಿಂತಿಸುತ್ತಿದ್ದನು.

(ಪದ್ಯ -೫೩)

ಪದ್ಯ :-:೫೪:[ಸಂಪಾದಿಸಿ]

ಅನ್ನೆಗಂ ಕುದುರೆಗಳನುಪಚರಿಸಿ ಸಾರಥಿಗೆ | ಸನ್ನೆಗೈದನುಸಾಲ್ವನಭಿಮುಖಕೆ ಮುರಹಂ | ಕೆನ್ನೆಗೇರಿಸಿ ಚಾಪದೊಳ್ ಪೂಡಿದಂಬನಾರ್ದಿಸುತೆ ಬರಲವನತ್ತಲು ||
ಪನ್ನಗಾರಿಧ್ವಜಂ ಮಗುಳೈತರಲ್ ಕಂಡು | ತನ್ನೊಳ್ ಪೊಣರ್ವ ಭರದಿಂ ಬಂದು ಸಮರದೊಳ್ | ಗನ್ನಗತಕವನೆಸಗಲೇನಹುದು ಮಾರಾಂತು ನೋಡೆನುತೆ ತೆಗೆದೆಚ್ಚನು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಇಸು
  • ಅನ್ನೆಗಂ ಕುದುರೆಗಳನು ಉಪಚರಿಸಿ ಸಾರಥಿಗೆ ಸನ್ನೆಗೈದು=[ಸ್ವಲ್ಪ ಸಮಯದವರೆಗೆ ಕುದುರೆಗಳನ್ನು ಉಪಚರಿಸಿ ಸಾರಥಿಗೆ ಯುದ್ಧಕ್ಕೆ ಹಿಂತಿರುಗಲು ಸನ್ನೆಮಾಡಿ]; ಅನುಸಾಲ್ವನ ಅಭಿಮುಖಕೆ ಮುರಹರಂ ಕೆನ್ನೆಗೆ ಏರಿಸಿ ಚಾಪದೊಳ್ ಪೂಡಿದ ಅಂಬನು ಆರ್ದಿಸುತೆ ಬರಲು=[ಅನುಸಾಲ್ವನ ಎದುರಿಗೆ ಕೃಷ್ಣನು ಬಾಣವನ್ನು ಕೆನ್ನೆಗೆ ಏರಿಸಿ ಬಿಲ್ಲಿನಲ್ಲಿ ಹೂಡಿ ಆರ್ಭಟಿಸುತ್ತಾ ಬರಲು]; ಅವನತ್ತಲು ಪನ್ನಗಾರಿಧ್ವಜಂ ಮಗುಳಿ ಐತರಲ್ ಕಂಡು ತನ್ನೊಳ್ ಪೊಣರ್ವ ಭರದಿಂ ಬಂದು=[ಅನುಸಾಲ್ವನು ಅತ್ತಲ ಗರುಡಧ್ವಜನು ಮರಳಿಬರಲು ಕಂಡು ತನ್ನಲ್ಲಿ ಯುದ್ಧಮಾಡುವ ಭರದಲ್ಲಿ ಬಂದು]; ಸಮರದೊಳ್ ಗನ್ನಗತಕವನು ಎಸಗಲು ಏನಹುದು ಮಾರಾಂತು ನೋಡೆನುತೆ ತೆಗೆದೆಚ್ಚನು=[ಯುದ್ಧದಲ್ಲಿ ಮೋಸ ಮಾಡಿದರೆ ಏನುಲಾಭ/ ಯುದ್ಧಮಾಡಿ ನೋಡು ಎನ್ನುತ್ತಾ ಬಾಣತೆಗೆದು ಹೊಡೆದನು.].
  • ತಾತ್ಪರ್ಯ:ಕೃಷ್ಣನು ಸ್ವಲ್ಪ ಸಮಯದವರೆಗೆ ಕುದುರೆಗಳನ್ನು ಉಪಚರಿಸಿ ಸಾರಥಿಗೆ ಯುದ್ಧಕ್ಕೆ ಹಿಂತಿರುಗಲು ಸನ್ನೆಮಾಡಿ, ಅನುಸಾಲ್ವನ ಎದುರಿಗೆಬಂದು ಕೃಷ್ಣನು ಬಾಣವನ್ನು ಕೆನ್ನೆಗೆ ಏರಿಸಿ ಬಿಲ್ಲಿನಲ್ಲಿ ಹೂಡಿ ಆರ್ಭಟಿಸುತ್ತಾ ಬರಲು, ಅನುಸಾಲ್ವನು ಅತ್ತಲಾಗಿ ಗರುಡಧ್ವಜ ಕೃಷ್ಣನು ಮರಳಿಬರಲು, ಕಂಡು ತನ್ನಲ್ಲಿ ಉಂಟಾದ ಯುದ್ಧದ ಆವೇಶದಲ್ಲಿ ಬಂದು, ಯುದ್ಧದಲ್ಲಿ ಮೋಸ ಮಾಡಿದರೆ ಏನು ಲಾಭ/ ಯುದ್ಧಮಾಡಿ ನೋಡು ಎನ್ನುತ್ತಾ ಬಾಣತೆಗೆದು ಹೊಡೆದನು.

(ಪದ್ಯ -೫೪)

ಪದ್ಯ :-:೫೫:[ಸಂಪಾದಿಸಿ]

ಸಂಜನಿಸುವೆಳನಗೆಯೊಳಗಧರಂ ಮಾರಾಂಪೊ | ಡಂಜುವೆವು ನಿಮಗೆ ಸಂಗ್ರಾಮದೊಳ್ ದಾನವರ | ಭಂಜನೆಗಲಸಿದೊಡಂ ಬಿಡದಲಾ ನಮಗೆನುತೆ ತೆಗೆದಿಸಲದಂ ಸೈರಿಸಿ ||
ಶಿಂಜಿನಿಯೊಳೊಂದು ಸರಳಂ ಪೂಡಿ ಬರಸೆಳೆದು | ರಂಜಿಪ ವಿಶಾಲವಕ್ಷಸ್ಥಳವನೆಚ್ಚನಂ | ದಂಜನಾದ್ರಿಯಮೇಲೆ ಸಿಡಿಲೆರಗಿದಂತಾಗೆ ದನುಜಾರಿ ಮೈಮರೆದನು ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಇಸು
  • ಸಂಜನಿಸುವ ಎಳನಗೆಯೊಳ್ ಅಗಧರಂ ಮಾರಾಂಪೊಡೆ ಅಂಜುವೆವು ನಿಮಗೆ ಸಂಗ್ರಾಮದೊಳ್=[ಮೂಡುತ್ತಿರುವ ಎಳನಗೆಯಲ್ಲಿ ಕೃಷ್ಣನು ನಿಮ್ಮಡನೆ ಯುದ್ಧದಲ್ಲಿ ಹೋರಾಡಲು ಅಂಜುತ್ತೇವೆ,]; ದಾನವರ ಭಂಜನೆಗೆ ಅಲಸಿದೊಡಂ ಬಿಡದಲಾ ನಮಗೆ ಎನುತೆ ತೆಗೆದಿಸಲು(ಬಾಣಬಿಡಲು) ಅದಂ ಸೈರಿಸಿ=[ದೈತ್ಯರ ಸಂಹಾರಕ್ಕೆ ಆಲಸ್ಯಪಟ್ಟರೂ ಬಿಡದಲಾ ನಮಗೆ ಆ ಕಾರ್ಯ ಎನ್ನುತ್ತಾ ಬಾಣಬಿಡಲು ಅದನ್ನು ಅನುಸಾಲ್ವನು ಸಹಿಸಿಕೊಂಡು]; ಶಿಂಜಿನಿಯೊಳೂ ಒಂದು ಸರಳಂ ಪೂಡಿ ಬರಸೆಳೆದು ರಂಜಿಪ ವಿಶಾಲವಕ್ಷಸ್ಥಳವನು ಎಚ್ಚನಂದಂಜನಾದ್ರಿಯಮೇಲೆ ಸಿಡಿಲೆರಗಿದಂತಾಗೆ ದನುಜಾರಿ ಮೈಮರೆದನು=[ಬಿಲ್ಲಿನಹೆದೆಯಲ್ಲಿ (ನಾಣು- ದಾರ) ಒಂದು ಬಾಣವನ್ನು ಹೂಡಿ,ದೀರ್ಘವಾಗಿ ಸೆಳೆದು ಪ್ರಕಾಶಿಸುವ ವಿಶಾಲವಾದ ವಕ್ಷಸ್ಥಳವನ್ನು ಹೊಡೆದನು. ಆಗ ಅಂಜನಾದ್ರಿಯಮೇಲೆ ಸಿಡಿಲು ಎರಗಿದಂತೆ ಆಗಿ ಕೃಷ್ಣನು ಎಚ್ಚರತಪ್ಪಿದನು.]
  • ತಾತ್ಪರ್ಯ:ಮೂಡುತ್ತಿರುವ ಎಳನಗೆಯಲ್ಲಿ ಕೃಷ್ಣನು ನಿಮ್ಮಡನೆ ಯುದ್ಧದಲ್ಲಿ ಹೋರಾಡಲು ಅಂಜುತ್ತೇವೆ, ದೈತ್ಯರ ಸಂಹಾರಕ್ಕೆ ಆಲಸ್ಯಪಟ್ಟರೂ ನಮಗೆ ಆ ಕಾರ್ಯ ಬಿಡದಿರುವುದಲ್ಲಾ, ಎನ್ನುತ್ತಾ ಬಾಣಬಿಡಲು ಅದನ್ನು ಅನುಸಾಲ್ವನು ಸಹಿಸಿಕೊಂಡು, ಬಿಲ್ಲಿನಹೆದೆಯಲ್ಲಿ (ನಾಣು- ದಾರ) ಒಂದು ಬಾಣವನ್ನು ಹೂಡಿ,ದೀರ್ಘವಾಗಿ ಸೆಳೆದು ಕೃಷ್ಣನ ಪ್ರಕಾಶಿಸುವ ವಿಶಾಲವಾದ ವಕ್ಷಸ್ಥಳವನ್ನು ಹೊಡೆದನು. ಆಗ ಅಂಜನಾದ್ರಿಯಮೇಲೆ ಸಿಡಿಲು ಎರಗಿದಂತೆ ಆಗಿ, ಕೃಷ್ಣನು ಎಚ್ಚರತಪ್ಪಿದನು.

(ಪದ್ಯ -೫೫)IV-VIII

ಪದ್ಯ :-:೫೬:[ಸಂಪಾದಿಸಿ]

ಪಾಥೋರುಹಾಕ್ಷನಂ ದಾರುಕಂ ನಿಟ್ಟಿಸಿ ವ | ರೂಥಮಂ ತಿರುಗಿಸಿದನಖೀಳ ಯಾದವರ ವರ | ಯೂಥಮದು ಮಸಗಿತು ಭಯಂಗೊಂಡು ಪುರಜನದ ನೆರವಿ ಪೆರ್ಬಾಗಿಲ್ಗಳ ||
ವೀಥಿಗಳೊಳಿಟ್ಟಣಿಸಿ ಪಟ್ಟಣಕೆ ಸರಿಯೆ ನರ | ನಾಥನಿರ್ದಲ್ಲಿ ಬೆರಗಾಗೆ ನಿಂದಂ ವಧೂ | ಯೂಥಮಸುರಾರಿಯಂ ಬಳಸಿತದರೊಳ್ ಸತ್ಯಭಾಮೆ ಬಗುತಿಂತೆಂದಳು ||56||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಾಥೋರುಹಾಕ್ಷನಂ(ಕಮಲದಂತಹ ಅಕ್ಷಿ/ಕಣ್ನುಳ್ಳವನು) ದಾರುಕಂ ನಿಟ್ಟಿಸಿ ವರೂಥಮಂ ತಿರುಗಿಸಿದನು=ಕೃಷ್ಣನನ್ನು ದಾರುಕನು ನಿಟ್ಟಿಸಿನೋಡಿ ರಥವನ್ನು ಹಿಂತಿರುಗಿಸಿದನು]; ಅಖಿಳ ಯಾದವರ ವರಯೂಥಂ ಅದು ಮಸಗಿತು=[ಅಖಿಲ ಯಾದವರ ರಥಗಳೂ ಅವನನ್ನು ಮುತ್ತಿಕೊಂಡು ಹಿಂತಿರುಗಿದವು]; ಭಯಂಗೊಂಡು ಪುರಜನದ ನೆರವಿ ಪೆರ್ಬಾಗಿಲ್ಗಳ ವೀಥಿಗಳೊಳಿಟ್ಟಣಿಸಿ ಪಟ್ಟಣಕೆ ಸರಿಯೆ=[ಭಯಂಗೊಂಡು ಪುರಜನರ ಗುಂಪು ಹೆಬ್ಬಾಗಿಲಲ್ಲಿ ಬೀದಿಗಳಲ್ಲಿ ದಟ್ಟನಿಸಿ ಸೇರಿ ಪಟ್ಟಣಕಡೆ ಓಡಿದರು,]; ನರನಾಥನು ಇರ್ದಲ್ಲಿ ಬೆರಗಾಗೆ ನಿಂದಂ ವಧೂಯೂಥಂ ಅಸುರಾರಿಯಂ ಬಳಸಿತದರೊಳ್ ಸತ್ಯಭಾಮೆ ನಗುತಿಂತೆಂದಳು=[ಧರ್ಮರಾಜನು ಇದ್ದಲ್ಲಿ ಬಂದಾಗಅವನು ಬೆರಗಾಗಿ ನಿಂತನು. ಹೆಂಗಸರಗುಂಪು ಕೃಷ್ಣನ್ನು ಸತ್ತುವರಿದು ನಿಂತರು; ಅದರಲ್ಲಿ ಸತ್ಯಭಾಮೆ ನಗುತ್ತಾ ಹಿಗೆ ಹೇಳಿದಳು.]
  • ತಾತ್ಪರ್ಯ:ಎಚ್ಚರತಪ್ಪಿದ ಕೃಷ್ಣನನ್ನು ದಾರುಕನು ನಿಟ್ಟಿಸಿನೋಡಿ ರಥವನ್ನು ಹಿಂತಿರುಗಿಸಿದನು; ಅಖಿಲ ಯಾದವರ ರಥಗಳೂ ಅವನನ್ನು ಮುತ್ತಿಕೊಂಡು ಹಿಂತಿರುಗಿದವು; ಭಯಂಗೊಂಡು ಪುರಜನರ ಗುಂಪು ಹೆಬ್ಬಾಗಿಲಲ್ಲಿ ಬೀದಿಗಳಲ್ಲಿ ದಟ್ಟನಿಸಿ ಸೇರಿ ಪಟ್ಟಣಕಡೆ ಓಡಿದರು; ಧರ್ಮರಾಜನು ಇದ್ದಲ್ಲಿ ಬಂದಾಗ ಅವನು ಬೆರಗಾಗಿ ನಿಂತನು. ಹೆಂಗಸರ ಗುಂಪು ಕೃಷ್ಣನ್ನು ಸತ್ತುವರಿದು ನಿಂತರು; ಅದರಲ್ಲಿ ಸತ್ಯಭಾಮೆ ನಗುತ್ತಾ ಹಿಗೆ ಹೇಳಿದಳು.

(ಪದ್ಯ -೫೬)

ಪದ್ಯ :-:೫೭:[ಸಂಪಾದಿಸಿ]

ದಾನವಂಗಿದಿರಾಗಿ ಪೋಗಿ ರಣದೊಳ್ ಪ್ರಾಣ | ದಾನಂ ಪಡೆದು ಮರಳಿದ ನಿನ್ನ ಸತ್ವದ ನಿ | ದಾನವಂ ತಿಳಿದಹಿತರೇಗೆಯ್ಯ ರಕಟ ನಿಜಶೌರ್ಯದಿಂ ಪ್ರದ್ಯುನ್ಮನ ||
ಮಾನವಂ ಭಂಗಿಸಿದೆ ನಿನ್ನಂ ಜಗದೊಳಾವ | ಮಾನವಂ ಬಣ್ಣಿಸುವೆನಿನ್ನು ನಿನ್ನದಟಿಗೆ ಸ | ಮಾನಂ ಕಾಣೆನೆಂದಳ್ ಸತ್ಯಭಾಮೆ ನಗುತುರೆ ಜರೆದು ನಿಜಪತಿಯನು ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಇಸು
  • ದಾನವಂಗೆ ಇದಿರಾಗಿ ಪೋಗಿ ರಣದೊಳ್ ಪ್ರಾಣದಾನಂ ಪಡೆದು=[ದಾನವನಿಗೆ ಎದುರಾಗಿ ಯುದ್ಧಕ್ಕೆ ಹೋಗಿ ಯುದ್ಧದಲ್ಲಿ ಪ್ರಾಣದಾನವನ್ನು ಪಡೆದು]; ಮರಳಿದ ನಿನ್ನ ಸತ್ವದ ನಿದಾನವಂ ತಿಳಿದ ಅಹಿತರು ಏಗೆಯ್ಯರು ಅಕಟ=[ಹಿಂದಕ್ಕೆ ಬಂದ ನಿನ್ನ ಶೌರ್ಯದ ಲಕ್ಷಣವನ್ನು ತಿಳಿದ ಅಹಿತರು ಏನುಮಾಡದೆಇರುವರು? ಏನುಬೇಕಾದರೂ ಮಾಡಬಹುದು. ಅಕಟ!]; ನಿಜಶೌರ್ಯದಿಂ ಪ್ರದ್ಯುನ್ಮನ ಮಾನವಂ ಭಂಗಿಸಿದೆ ನಿನ್ನಂ ಜಗದೊಳು ಆವ ಮಾನವಂ ಬಣ್ಣಿಸುವೆನು=[ನಿನ್ನಶೌರ್ಯದ ಪ್ರತಾಪದಿಂದ ಪ್ರದ್ಯುನ್ಮನ ಮಾನವನ್ನು ಎಡಗಾಲಲ್ಲಿ ಒದ್ದು ಕಳೆದೆ. ನಿನ್ನನ್ನು ಈ ಜಗತ್ತಿನಲ್ಲಿ ಯಾವ ಮಾನವನು ಈಗ ಹೊಗಳುವನು?]; ಇನ್ನು ನಿನ್ನ ಅದಟಿಗೆ ಸಮಾನಂ ಕಾಣೆನು ಎಂದಳ್ ಸತ್ಯಭಾಮೆ ನಗುತು ಉರೆ ಜರೆದು ನಿಜಪತಿಯನು=[ಇನ್ನು ನಿನ್ನ ಶೌರ್ಯಕ್ಕೆ ಸಮಾನರನ್ನು ಕಾಣಲಾರೆನು! ಸತ್ಯಭಾಮೆ ನಗುತ್ತಾ, ತನ್ನ ಪತಿಯನ್ನು ಬಹಳವಾಗಿ ಜರೆದು ಹೇಳಿದಳು.]
  • ತಾತ್ಪರ್ಯ:ದಾನವನಿಗೆ ಎದುರಾಗಿ ಯುದ್ಧಕ್ಕೆ ಹೋಗಿ ಯುದ್ಧದಲ್ಲಿ ಪ್ರಾಣದಾನವನ್ನು ಪಡೆದು ಹಿಂದಕ್ಕೆ ಬಂದ ನಿನ್ನ ಶೌರ್ಯದ ಲಕ್ಷಣವನ್ನು ತಿಳಿದ ಅಹಿತರು ಏನುಮಾಡದೆ ಇರುವರು? ಏನುಬೇಕಾದರೂ ಮಾಡಬಹುದು. ಅಕಟ! ನಿನ್ನ ಶೌರ್ಯದ ಪ್ರತಾಪದಿಂದ ಪ್ರದ್ಯುನ್ಮನ ಮಾನವನ್ನು ಎಡಗಾಲಲ್ಲಿ ಒದ್ದು ಕಳೆದೆ. ನಿನ್ನನ್ನು ಈ ಜಗತ್ತಿನಲ್ಲಿ ಯಾವ ಮಾನವನು ಈಗ ಹೊಗಳುವನು? ಇನ್ನು ನಿನ್ನ ಶೌರ್ಯಕ್ಕೆ ಸಮಾನರನ್ನು ಕಾಣಲಾರೆನು! ಸತ್ಯಭಾಮೆ ನಗುತ್ತಾ, ತನ್ನ ಪತಿಯನ್ನು ಬಹಳವಾಗಿ ಜರೆದು ಹೇಳಿದಳು.]

(ಪದ್ಯ -೫೭)

ಪದ್ಯ :-:೫೮:[ಸಂಪಾದಿಸಿ]

ಕಂದೆರೆದು ವಲ್ಲಭೆಯ ನುಡಿಗೆ ಲಜ್ಜಿಸಿ ಮನಂ | ಕಂದೆ ಕಣ್ಣಾಲಿಗಳ್ ಕೆಂಪಡರೆ ಖತಿ ಮಿಗ | ಲ್ಕಂಡೆಬಲಂಗಳಂ ನೋಡಿ ಹರಿ ಮತ್ತೆ ರಣಕನುವಾಗುತಿರಲಿತ್ತಲು ||
ನಿಂದು ವೃಷಕೇತುವನುಸಾಲ್ವನಂ ತಡೆದು ನೀ || ನಿಂದು ಮುರವೈರಿಯಂ ತೆರಳಿಚಿದೆ ವೀರ ಎ | ನ್ನಿಂದುಳಿದೆಯಾದೊಡಾಂ ಕರ್ಣಜನೆ ನಿಲ್ಲೆನುತೆ ತೆಗೆದೆಚ್ಚು ಬೊಬ್ಬಿರಿದನು ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಇಸು
  • ಕಂದೆರೆದು ವಲ್ಲಭೆಯ ನುಡಿಗೆ ಲಜ್ಜಿಸಿ ಮನಂ ಕಂದೆ ಕಣ್ಣಾಲಿಗಳ್ ಕೆಂಪಡರೆ=[ಕಣ್ಣು ತೆರೆದು ಪತ್ನಿಯ ಮಾತಿಗೆ ಲಜ್ಜಿತನಾಗಿ ಮನಸ್ಸು ಕುಗ್ಗಿತು; ಆದರೆ ಸಾವರಿಸಿಕೊಂಡು, ಶತ್ರುವನ್ನು ನೆನೆದು ಕಣ್ಣಾಲಿಗಳು ಸಿಟ್ಟಿನಿಂದ ಕೆಂಪಡರಿತು ]; ಖತಿ ಮಿಗಲ್ ಕಂಡೆಬಲಂಗಳಂ ನೋಡಿ ಹರಿ ಮತ್ತೆ ರಣಕೆ ಅನುವಾಗುತಿರಲು ಇತ್ತಲು=[ಸಿಟ್ಟು ಏರಲು ಎಡೆಬಲಗಳನ್ನು ನೋಡಿ ಕೃಷ್ಣನು ಮತ್ತೆ ಯುದ್ಧಕ್ಕೆ ಅನುವಾಗುತಿರಲು, ಇತ್ತಲು ]; ನಿಂದು ವೃಷಕೇತು ಅವನುಸಾಲ್ವನಂ ತಡೆದು ನೀ ನಿಂದು ಮುರವೈರಿಯಂ ತೆರಳಿಚಿದೆ=[ಎಚ್ಚರಗೊಂಡ ವೃಷಕೇತು ಅನುಸಾಲ್ವನನ್ನು ತಡೆದು ನೀನು ಇಂದು ಕೃಷ್ಣನನ್ನು ಯುದ್ಧದಿಂದ ಹಿಂತಿರುಗುವಂತೆ ಮಾಡಿದೆ]; ವೀರ ಎನ್ನಿಂದ ಉಳಿದೆಯಾದೊಡ ಆಂ ಕರ್ಣಜನೆ ನಿಲ್ಲೆನುತೆ ತೆಗೆದೆಚ್ಚು ಬೊಬ್ಬಿರಿದನು=[ವೀರನೇ ನನ್ನಿಂದ ಜೀವಂತ ಉಳಿದೆಯಾದರೆ ನಾನು ಕರ್ಣಜನೆ ಅಲ್ಲ! ನಿಲ್ಲು ಎನ್ನುತ್ತಾ ಬಾಣದಿಂದ ಹೊಡೆದು ಆರ್ಭಟಿಸಿದನು ].
  • ತಾತ್ಪರ್ಯ:ಕಣ್ಣು ತೆರೆದು ಪತ್ನಿಯ ಮಾತಿಗೆ ಲಜ್ಜಿತನಾಗಿ ಮನಸ್ಸು ಕುಗ್ಗಿತು; ಆದರೆ ಸಾವರಿಸಿಕೊಂಡು, ಶತ್ರುವನ್ನು ನೆನೆದು ಕಣ್ಣಾಲಿಗಳು ಸಿಟ್ಟಿನಿಂದ ಕೆಂಪಡರಿತು, ಸಿಟ್ಟು ಏರಲು ಎಡೆಬಲಗಳನ್ನು ನೋಡಿ ಕೃಷ್ಣನು ಮತ್ತೆ ಯುದ್ಧಕ್ಕೆ ಅನುವಾಗುತಿರಲು, ಇತ್ತಲು ಎಚ್ಚರಗೊಂಡ ವೃಷಕೇತು ಅನುಸಾಲ್ವನನ್ನು ತಡೆದು, ನೀನು ಇಂದು ಕೃಷ್ಣನನ್ನು ಯುದ್ಧದಿಂದ ಹಿಂತಿರುಗುವಂತೆ ಮಾಡಿದೆ, ವೀರನೇ ನನ್ನಿಂದ ಜೀವಂತ ಉಳಿದೆಯಾದರೆ ನಾನು ಕರ್ಣಜನೆ ಅಲ್ಲ! ನಿಲ್ಲು ಎನ್ನುತ್ತಾ ಬಾಣದಿಂದ ಹೊಡೆದು ಆರ್ಭಟಿಸಿದನು.

(ಪದ್ಯ -:೫೮)

ಪದ್ಯ :-:೫೯:[ಸಂಪಾದಿಸಿ]

ಹೆಂಗುಸಂ ಕೊಂದದಟತನದಿಂದೆ ಬಂಡಿಯಂ | ಭಂಗಿಸಿದ ಬಲ್ಪಿಂದಲೆತ್ತು ಕತ್ತೆಯನಿರಿದ | ತುಂಗವಿಕ್ರಮದಿಂದೆ ಹಕ್ಕಿ ಹಾವಂ ಸದೆದ ಸಾಹಸದೆ ಬೆರೆತಿರ್ದೊಡೆ ||
ಸಂಗರದೊಳಾಳಹನೆ ಗೋಪನವನಂ ಯುದ್ಧ | ರಂಗದೊಳ್ ತೊಲಗಿಪುದೆನಗೆ ಪರಾಕ್ರಮವೆ ನಿ | ನ್ನಂಗವಣಿಯಾವುದೆಮ್ಮೊಡನೆ ಸೆಣಸಿದೆಯೆನಂತೆ ತೆಗೆದೆಚ್ಚನನುಸಾಲ್ವನು ||59||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಇಸು
  • ಹೆಂಗುಸಂ ಕೊಂದ ಅದಟತನದಿಂದೆ ಬಂಡಿಯಂ ಭಂಗಿಸಿದ ಬಲ್ಪಿಂದಲಿ=[ಹೆಂಗುಸಾದ ಪೂತನಿಯನ್ನು ಕೊಂದ ಪರಾಕ್ರಮದಿಂದ, ಬಂಡಿಯರೂಪದ ಶಕಟಾಸುರನನ್ನು ನಾಶಪಡಿಸಿದ ಬಲದಿಂದ, ]; ಎತ್ತು ಕತ್ತೆಯನು ಇರಿದ ತುಂಗವಿಕ್ರಮದಿಂದೆ ಹಕ್ಕಿ ಹಾವಂ ಸದೆದ ಸಾಹಸದೆ ಬೆರೆತಿರ್ದೊಡೆ=[ಧೇನುಕಾಸರನೆಂಬ ಎತ್ತನ್ನೂ, ಕತ್ತೆಯ ರೂಪದ ಪ್ರಲಂಬನ್ನೂ ಕೊಂದ ದೊಡ್ಡ ಜಯದಿಂದ, ಹಕ್ಕಿಯಾದ ಬಕನನ್ನೂ, ಹಾವಿನ ರೂಪದ ಕಾಳಿಂಗನನ್ನು ಸದೆಬಡಿದ ಸಾಹಸಗಳನ್ನು ಮಾಡಿದಮಾತ್ರಕ್ಕೆ]; ಸಂಗರದೊಳು ಆಳು ಅಹನೆ ಗೋಪನು ಅವನಂ ಯುದ್ಧ ರಂಗದೊಳ್ ತೊಲಗಿಪುದು ಎನಗೆ ಪರಾಕ್ರಮವೆ=[ಯುದ್ಧದಲ್ಲಿ ವೀರನಾಗುವನೇ? ಗೋಪಾಲಕನು ಅವನನ್ನು ಯುದ್ಧ ರಂಗದಲ್ಲಿ ಓಡಿಸುವುದು ನನಗೆ ಮಹಾ ದೊಡ್ಡ ಪರಾಕ್ರಮವೆ?]; ನಿನ್ನ ಅಂಗವಣಿಯು(ಸಾಮರ್ಥ್ಯ) ಯಾವುದು ಎಮ್ಮೊಡನೆ ಸೆಣಸಿದೆ ಎನುತೆ ತೆಗೆದೆಚ್ಚನು ಅನುಸಾಲ್ವನು=[ನಿನ್ನ ಸಾಮರ್ಥ್ಯ ಯಾವಲೆಕ್ಕ? ನಮ್ಮೊಡನೆ ಯುದ್ಧಕ್ಕೆ ಬಂದೆ? ಎನ್ನುತ್ತಾ ಅನುಸಾಲ್ವನು ಬಾಣ ತೆಗೆದು ಹೊಡೆದನು.].
  • ತಾತ್ಪರ್ಯ:ಹೆಂಗುಸಾದ ಪೂತನಿಯನ್ನು ಕೊಂದ ಪರಾಕ್ರಮದಿಂದ, ಬಂಡಿಯರೂಪದ ಶಕಟಾಸುರನನ್ನು ನಾಶಪಡಿಸಿದ ಬಲದಿಂದ,ಧೇನುಕಾಸರನೆಂಬ ಎತ್ತನ್ನೂ, ಕತ್ತೆಯ ರೂಪದ ಪ್ರಲಂಬನ್ನೂ ಕೊಂದ ದೊಡ್ಡ ಜಯದಿಂದ, ಹಕ್ಕಿಯಾದ ಬಕನನ್ನೂ, ಹಾವಿನ ರೂಪದ ಕಾಳಿಂಗನನ್ನು ಸದೆಬಡಿದ ಸಾಹಸಗಳನ್ನು ಮಾಡಿದಮಾತ್ರಕ್ಕೆ, ಯುದ್ಧದಲ್ಲಿ ವೀರನಾಗುವನೇ? ಗೋಪಾಲಕನು ಅವನನ್ನು ಯುದ್ಧ ರಂಗದಲ್ಲಿ ಓಡಿಸುವುದು ನನಗೆ ಮಹಾ ದೊಡ್ಡ ಪರಾಕ್ರಮವೆ? ನಿನ್ನ ಸಾಮರ್ಥ್ಯ ಯಾವ ಲೆಕ್ಕವೆಂದು ನಮ್ಮೊಡನೆ ಯುದ್ಧಕ್ಕೆ ಬಂದೆ? ಎನ್ನುತ್ತಾ ಅನುಸಾಲ್ವನು ಬಾಣ ತೆಗೆದು ಹೊಡೆದನು.].

(ಪದ್ಯ - ೫೯)

ಪದ್ಯ :-:೬೦:[ಸಂಪಾದಿಸಿ]

ಎಲೆವೊ ಖಳ ನೀನರಿಯದಿರ್ದೊಡೇನಚ್ಯುತಂ | ತಿಳಿಯೆ ಗೋಪಾಲನಲ್ಲವೆ ಕಪಟರೂಪದಿಂ | ಮುಳಿದು ದುಷ್ಟರನೈದೆ ಶಿಕ್ಷಿಸಿದೆ ಮಾಣ್ದಪನೆ ನೊಣನೂರಿ ಮದಗಜವನು ||
ಬಳಲಿಪುದು ಗಡ ದಿಟಂ ನಿನಗಸುರಕುಲಮಥನ | ನಳಕುವನೆ ಶೀವಾಶೀವಾ ನಿನ್ನೊಡನೆ ಸೆಣಸುವೊಡೆ | ಬಲವಂತರಾವಲ್ಲ ನೋಡು ಸಾಕಿನ್ನೆನುತೆ ತೆಗೆದೆಚ್ಚನಿನಜಸೂನು ||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಲೆವೊ ಖಳನೇ,(ಕೆಟ್ಟವನೇ) ನೀನು ಅರಿಯದೆ ಇರ್ದೊಡೆ ಏನು=[ಎಲೆವೊ ಖಳನೇ, ನೀನು ತಿಳಿಯದೆ ಇದ್ದರೆ ಏನಾಯಿತು];ಅಚ್ಯುತಂ ತಿಳಿಯೆ ಗೋಪಾಲನಲ್ಲವೆ (ಗೋ:ವೇದ) ಕಪಟರೂಪದಿಂ ಮುಳಿದು ದುಷ್ಟರನು ಐದೆ ಶಿಕ್ಷಿಸಿದೆ ಮಾಣ್ದಪನೆ =[ಅಚ್ಯುತನು ಅರಿತವರಿಗೆ ವೇದ ರಕ್ಷಕನು ಅಲ್ಲವೇ? ಮನುಷ್ಯರೂಪದಿಂದ ಬಂದು ಕೋಪದಿಂದ ದುಷ್ಟರನ್ನು ಅವರು ಬಂದಾಗ ಶಿಕ್ಷಿಸಿದೆ ಬಿಡುವನೆ!]; ನೊಣನೂರಿ ಮದಗಜವನು ಬಳಲಿಪುದು ಗಡ ದಿಟಂ ನಿನಗೆ ಅಸುರಕುಲಮಥನ ನಳಕುವನೆ ಶೀವಾಶೀವಾ=[ನೊಣವು ಕಚ್ಚಿ ಮದಗಜವನನ್ನು ಬಳಲುವಂತೆ ಮಾಡಬಲ್ಲದೇ? ಗಡ! ನಿಜವಾಗಿಯೂ ನಿನಗೆ ಅಸುರಕುಲಧ್ವಂಸ ಮಾಡುವವನು ಹೆದರುವನೆ ಶೀವ ಶೀವಾ!]; ನಿನ್ನೊಡನೆ ಸೆಣಸುವೊಡೆ ಬಲವಂತರು ಆವಲ್ಲ ನೋಡು ಸಾಕು ಇನ್ನೆನುತೆ ತೆಗೆದು ಎಚ್ಚನು ಇನಜಸೂನು=[ನಿನ್ನೊಡನೆ ಯುದ್ಧಮಾಡಲು ನಾವು ಅತಿ ಶೂರರಲ್ಲ; ಆದರೆ ನೋಡು ಇನ್ನು ಮಾತುಸಾಕು ಎನ್ನತ್ತಾ ಕರ್ನಜನು ಭಾಣವನ್ನು ತೆಗೆದು ಪ್ರಯೋಗಿಸಿದನು.]
  • ತಾತ್ಪರ್ಯ:ಎಲೆವೊ ಖಳನೇ, ನೀನು ತಿಳಿಯದೆ ಇದ್ದರೆ ಏನಾಯಿತು; ಅಚ್ಯುತನು ಅರಿತವರಿಗೆ ವೇದ ರಕ್ಷಕನು ಅಲ್ಲವೇ? ಮನುಷ್ಯರೂಪದಿಂದ ಬಂದು ಕೋಪದಿಂದ ದುಷ್ಟರನ್ನು ಅವರು ಬಂದಾಗ ಶಿಕ್ಷಿಸಿದೆ ಬಿಡುವನೆ! ನೊಣವು ಕಚ್ಚಿ ಮದಗಜವನನ್ನು ಬಳಲುವಂತೆ ಮಾಡಬಲ್ಲದೇ? ಗಡ! ನಿಜವಾಗಿಯೂ ನಿನಗೆ ಅಸುರಕುಲಧ್ವಂಸ ಮಾಡುವವನು ಹೆದರುವನೆ ಶೀವ ಶೀವಾ! ನಿನ್ನೊಡನೆ ಯುದ್ಧಮಾಡಲು ನಾವು ಅತಿ ಶೂರರಲ್ಲ; ಆದರೆ ನೋಡು ಇನ್ನು ಮಾತುಸಾಕು ಎನ್ನತ್ತಾ ಕರ್ಣಜನು ಭಾಣವನ್ನು ತೆಗೆದು ಪ್ರಯೋಗಿಸಿದನು.]

(ಪದ್ಯ - ೬೦)

ಪದ್ಯ :-:೬೧:[ಸಂಪಾದಿಸಿ]

ಕರ್ಣಜನ ಕಣೆಗಳಂ ಕತ್ತರಿಸಿ ಪೊಸಮಸೆವೊ | ಗರ್ನಭೋಮಂಡಲವನಂಡಲೆಯಲೊಪ್ಪುವ ಸು | ವರ್ಣಪುಂಖದ ಸರರ್ಳಗರೆದನನುಸಾಲ್ವನದನೆಲ್ಲಮಂ ತತ್‍ಕ್ಷಣದೊಳು ||
ನಿರ್ಣಯಿಸಿ ವೃಷಕೇತು ಕೈಕೊಂಡನಿಸುಗೆಯಂ | ದುರ್ನಿರೀಕ್ಷಣಮಾದುದರಸ ಕೇಳದನೆನಗೆ | ವರ್ಣೀಸುವೊಡರಿದು ಕೂರಂಬುಗಳ್ಗಂಬರದೊಳಿಂಬಿಲ್ಲಮೆಂಬೊಲಾಯ್ತು ||61||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕರ್ಣಜನ ಕಣೆಗಳಂ ಕತ್ತರಿಸಿ ಪೊಸಮಸೆ ವೊಗರ್(ಹೊಸ ಮಸೆದ ಹೊಳೆವ) ನಭೋಮಂಡಲವನು ಅಂಡಲೆಯಲು ಒಪ್ಪುವ ಸುವರ್ಣಪುಂಖದ ಸರಳ್ ಕರೆದನು ಅನುಸಾಲ್ವನು=[ಕರ್ಣಜನ ಬಾಣಗಳನ್ನು ಕತ್ತರಿಸಿ ಹೊಸ ಮಸೆದ ಹೊಳೆಯುವ ನಭೋಮಂಡಲವನ್ನು ಆವರಿಸುವ ಒಳ್ಳೆಯ ಸುವರ್ಣಪುಂಖದ ಬಾಣಗಳನ್ನು ಅನುಸಾಲ್ವನು ವೃಷಕೇತುವಿನ ಮೇಲೆ ಕರೆದನು]; ಅದನೆಲ್ಲಮಂ ತತ್‍ಕ್ಷಣದೊಳು ನಿರ್ಣಯಿಸಿ ವೃಷಕೇತು ಕೈಕೊಂಡನು ಇಸುಗೆಯಂ=[ಅದನೆಲ್ಲವನ್ನೂ ತತ್‍ಕ್ಷಣದಲ್ಲಿ ಪರಿಹರಿಸಿ ವೃಷಕೇತುವು, ಬಾಣಗಳನ್ನು ಪ್ರಯೋಗಿಸಿದನು]; ದುರ್ನಿರೀಕ್ಷಣಮ್ (ನೋಡಲು ಅಸಾಧ್ಯ) ಆದುದು ಅರಸ ಕೇಳದನು ಎನಗೆ ವರ್ಣೀಸುವೊಡೆ ಅರಿದು ಕೂರಂಬುಗಳ್ಗೆ ಅಂಬರದೊಳು ಇಂಬಿಲ್ಲಮೆಂಬೊಲಾಯ್ತು=[ಅದು ನೋಡಲು ಅಸಾಧ್ಯವಾಗಿತ್ತು, ಅರಸ ಕೇಳು ಅದನ್ನು ನನಗೆ ವರ್ಣೀಸಲು ಅಸಾದ್ಯ, ಮೊನೆಯಾದ ಬಾಣಗಳಿಗೆ ಆಕಾಶದಲ್ಲಿ ಸ್ಥಳವೇ ಇಲ್ಲವೆಂಬಂತಾಯಿತು.].
  • ತಾತ್ಪರ್ಯ:ಕರ್ಣಜನ ಬಾಣಗಳನ್ನು ಕತ್ತರಿಸಿ ಹೊಸ ಮಸೆದ ಹೊಳೆಯುವ ನಭೋಮಂಡಲವನ್ನು ಆವರಿಸುವ ಒಳ್ಳೆಯ ಸುವರ್ಣಪುಂಖದ ಬಾಣಗಳನ್ನು ಅನುಸಾಲ್ವನು ವೃಷಕೇತುವಿನ ಮೇಲೆ ಕರೆದನು; ಅದನೆಲ್ಲವನ್ನೂ ತತ್‍ಕ್ಷಣದಲ್ಲಿ ಪರಿಹರಿಸಿ ವೃಷಕೇತುವು, ಬಾಣಗಳನ್ನು ಪ್ರಯೋಗಿಸಿದನು; ಅದು ನೋಡಲು ಅಸಾಧ್ಯವಾಗಿತ್ತು, ಅರಸ ಕೇಳು ಅದನ್ನು ನನಗೆ ವರ್ಣೀಸಲು ಅಸಾದ್ಯ, ಮೊನೆಯಾದ ಬಾಣಗಳಿಗೆ ಆಕಾಶದಲ್ಲಿ ಸ್ಥಳವೇ ಇಲ್ಲವೆಂಬಂತಾಯಿತು.

(ಪದ್ಯ - ೬೧)

ಪದ್ಯ :-:೬೨:[ಸಂಪಾದಿಸಿ]

ಮಂಡಲಾಕೃತಿಯಲ್ಲದಿರದು ನೋಡಲ್ಕೆ ಕೋ | ದಂಡವಂಬುಗಿವ ಹೂಡುವ ಬಿಡುವ ಭೇದಮಂ | ಕಂಡವರದಾರಸ್ತಮಯಮಾದುದೆಣ್ಣೆಸೆಗಳನುಸಾಲ್ವನಳವಳಿದನು ||
ದಿಂಡುರುಳಿತಾತನ ಚತುರ್ಬಲಂ ಬಳಿಕ ಕೋ | ದಂಡಮಂ ಕೊಂಡವನ ರಥದೆಡೆಗೆ ಬಂದೆಳೆದು | ಕೊಂಡು ಕೃಷ್ಣನ ಪದಾಂಬುಜದ ಹೊರೆಗಾಗಿ ನಡೆತಂದಿಳುಹಿ ಕೈಮುಗಿದನು ||62||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಮಂಡಲಾಕೃತಿಯಲ್ಲದೆ ಇರದು ನೋಡಲ್ಕೆ ಕೋದಂಡವ ಅಂಬು ಉಗಿವ ಹೂಡುವ ಬಿಡುವ ಭೇದಮಂ ಕಂಡವರದಾರು=[ಬಿಲ್ಲು ಹೆದರೇರಿಸಿದಾಗ ಮಂಡಲಾಕೃತಿಯಲ್ಲಿ ಇದ್ದುದು, ನೇರವಾದದ್ದೇ ಕಾಣದಂತೆ, ಒಂದೇಸಮ ಬಾಣಗಳು ಹೋಗುತ್ತಿದ್ದವು; ನೋಡಲು ಬಿಲ್ಲಿನಿಂದ ಅಂಬು ಉಗಿವ ಹೂಡುವ ಬಿಡುವ ವ್ಯತ್ಯಾಸವೇ ಕಂಡವರದಾರು! ಕಾಣದಂತಾಯಿತು]; ಅಸ್ತಮಯಮಾದುದು ಎಣ್ಣೆಸೆಗಳ ಅನುಸಾಲ್ವನು ಅಳವಳಿದನು=[ಆಕಾಶದಲ್ಲಿ ಬಾಣ ಮುಚ್ಚಿ ಎಂಟು ದೆಸೆಗಳಲ್ಲೂ ಸೂರ್ಯಾಸ್ತವಾದಂತೆ,ಕತ್ತಲಾಯಿತು, ಅನುಸಾಲ್ವನು ಎಚ್ಚರತಪ್ಪಿದನು]; ದಿಂಡುರುಳಿತು ಆತನ ಚತುರ್ಬಲಂ ಬಳಿಕ ಕೋದಂಡಮಂ ಕೊಂಡವನ ರಥದೆಡೆಗೆ ಬಂದು=[ಆತನ ಚತುರಂಗ ಸೈನ್ಯವೂ ಶಕ್ತಿಗುಂದಿತು, ಬಳಿಕ ವೃಷಕೇತು ಬಿಲ್ಲನ್ನು ಕೈಯಲ್ಲಿ ಹಿಡುದುಕೊಂಡು ಅವನ ರಥದ ಬಳಿ ಬಂದು]; ಎಳೆದುಕೊಂಡು ಕೃಷ್ಣನ ಪದಾಂಬುಜದ ಹೊರೆಗಾಗಿ ನಡೆತಂದು ಇಳುಹಿ ಕೈಮುಗಿದನು=[ಅವನನ್ನು ಎಳೆದುಕೊಂಡು ಬಂದು ಕೃಷ್ಣನ ಪಾದಕ್ಕೆ ಬಳಿ ಅವನನ್ನು ಇಳಿಸಿ ಕೃಷ್ಣನಿಗೆ ಕೈಮುಗಿದನು].
  • ತಾತ್ಪರ್ಯ: ಬಿಲ್ಲು ಹೆದರೇರಿಸಿದಾಗ ಮಂಡಲಾಕೃತಿಯಲ್ಲಿ ಇದ್ದುದು, ನೇರವಾದದ್ದೇ ಕಾಣದಂತೆ, ಒಂದೇಸಮ ಬಾಣಗಳು ಹೋಗುತ್ತಿದ್ದವು; ನೋಡಲು ಬಿಲ್ಲಿನಿಂದ ಅಂಬು ಉಗಿವ ಹೂಡುವ ಬಿಡುವ ವ್ಯತ್ಯಾಸವೇ ಕಂಡವರದಾರು! ಕಾಣದಂತಾಯಿತು; ಆಕಾಶದಲ್ಲಿ ಬಾಣ ಮುಚ್ಚಿ ಎಂಟು ದೆಸೆಗಳಲ್ಲೂ ಸೂರ್ಯಾಸ್ತವಾದಂತೆ,ಕತ್ತಲಾಯಿತು, ಅನುಸಾಲ್ವನು ಎಚ್ಚರತಪ್ಪಿದನು; ಆತನ ಚತುರಂಗ ಸೈನ್ಯವೂ ಶಕ್ತಿಗುಂದಿತು, ಬಳಿಕ ವೃಷಕೇತು ಬಿಲ್ಲನ್ನು ಕೈಯಲ್ಲಿ ಹಿಡುದುಕೊಂಡು ಅವನ ರಥದ ಬಳಿ ಬಂದು, ಅವನನ್ನು ಎಳೆದುಕೊಂಡು ಬಂದು ಕೃಷ್ಣನ ಪಾದಕ್ಕೆ ಬಳಿ ಅವನನ್ನು ಇಳಿಸಿ ಕೃಷ್ಣನಿಗೆ ಕೈಮುಗಿದನು].

(ಪದ್ಯ - ೬೨)

ಪದ್ಯ :-:೬೩:[ಸಂಪಾದಿಸಿ]

ಕೊಂಡಾಡಿ ಶೌರಿ ತಕ್ಕೈಸಿದಂ ನೃಪನಪ್ಪಿ | ಮುಂಡಾಡಿ ಮನ್ನಿಸಿದನರ್ಜುನಾದಿಗಳಿಳಿಗೆ | ಗೊಂಡಾಡಿದರ್ ತಮ್ಮ ಸಾಸಮಂ ಸತಿಯರ್ ಪೊಗಳ್ದರೀ ಕ್ಷತ್ರಿಯರೊಳು ||
ಉಂಡಾಡಿಗಳ್ ಪಲಬರಿರ್ದೊಡೇನಹುದಿವಂ | ಗಂಡಾಡಿದುರಭಾಷೆಗರಿಗಳ ಶಿರಂಗಳಂ | ಚೆಂಡಾಡಿ ಪಗೆವನಂ ಪಿಡಿದೊಪ್ಪಿಸಿದನೆಂದರೆಲ್ಲರುಂ ಕರ್ಣಜನನು ||63||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೊಂಡಾಡಿ ಶೌರಿ ತಕ್ಕೈಸಿದಂ=[ ಶೌರಿಯು ವೃಷಕೇತುವನ್ನು ಕೊಂಡಾಡಿ ಉಪಚರಿಸಿದನು]; ನೃಪನು ಅಪ್ಪಿ ಮುಂಡಾಡಿ ಮನ್ನಿಸಿದನು=[ಧರ್ಮಜನು ಅವನನ್ನು ಅಪ್ಪಿ ಮುಂಡಾಡಿ -ತಲೆಯನ್ನು ಪ್ರೀತಿಯಿಂದ ಸವರಿ ಆದರಿಸಿದನು];ಅರ್ಜುನಾದಿಗಳು ಇಳಿಗೆಗೊಂಡು(ತಾವು ಅವನಿಗಿಂತ ಕಡಿಮೆ ಶೂರರು ಎಂದು) ಆಡಿದರ್ ತಮ್ಮ ಸಾಸಮಂ, ಸತಿಯರ್ ಪೊಗಳ್ದರು=[ಅರ್ಜುನಾದಿಗಳು ತಮ್ಮ ಸಾಹಸವನ್ನು ಕಡಿಮೆಮಾಡಿಕೊಂಡು ಹೊಗಳಿದರು; ಹೆಂಗಸರೂ ಹೊಗಳಿದರು]; ಈ ಕ್ಷತ್ರಿಯರೊಳು ಉಂಡಾಡಿಗಳ್ ಪಲಬರಿರ್ದೊಡೇನಹುದಿವಂ ಗಂಡಾಡಿದುರಭಾಷೆಗರಿಗಳ ಶಿರಂಗಳಂ ಚೆಂಡಾಡಿ ಪಗೆವನಂ ಪಿಡಿದೊಪ್ಪಿಸಿದನೆಮದರೆಲ್ಲರುಂ ಕರ್ಣಜನನು[ಈ ಕ್ಷತ್ರಿಯರಲ್ಲಿ ಉಂಡಾಡಿಗಳು /ಕೇವಲ ಊಟಮಾಡಿ ಮಾತನಾಡುವವರು ಹಲವರು ಇದ್ದರೆ ಏನು, ಎಲ್ಲರೂ ಕರ್ಣಜನನು - ಇವನು ಗಂಡು ಆಡಿದ ವಿಶೇಷ ಭಾಷೆಗೆ ತಕ್ಕ ಹಾಗೆ ಅರಿಗಳ ಶಿರಗಳನ್ನು ಚೆಂಡಾಡಿ ಶತ್ರುವನ್ನು ಹಿಡಿದು ಒಪ್ಪಿಸಿದನು ಎಂದರು].
  • ತಾತ್ಪರ್ಯ:ಶೌರಿಯು / ಕೃಷ್ಣನು ವೃಷಕೇತುವನ್ನು ಕೊಂಡಾಡಿ ಉಪಚರಿಸಿದನು; ಧರ್ಮಜನು ಅವನನ್ನು ಅಪ್ಪಿ ಮುಂಡಾಡಿ -ತಲೆಯನ್ನು ಪ್ರೀತಿಯಿಂದ ಸವರಿ ಆದರಿಸಿದನು; ಅರ್ಜುನಾದಿಗಳು ತಮ್ಮ ಸಾಹಸವನ್ನು ಕಡಿಮೆಮಾಡಿಕೊಂಡು ಹೊಗಳಿದರು; ಹೆಂಗಸರೂ ಹೊಗಳಿದರು; ಈ ಕ್ಷತ್ರಿಯರಲ್ಲಿ ಉಂಡಾಡಿಗಳು /ಕೇವಲ ಊಟಮಾಡಿ ಮಾತನಾಡುವವರು ಹಲವರು ಇದ್ದರೆ ಏನು, ಎಲ್ಲರೂ ಕರ್ಣಜನನ್ನು - ಇವನು ಗಂಡು ಆಡಿದ ವಿಶೇಷ ಭಾಷೆಗೆ ತಕ್ಕ ಹಾಗೆ ಅರಿಗಳ ಶಿರಗಳನ್ನು ಚೆಂಡಾಡಿ ಶತ್ರುವನ್ನು ಹಿಡಿದುತಂದು ಒಪ್ಪಿಸಿದನು ಎಂದರು.

(ಪದ್ಯ - ೬೩)V-VIII

ಪದ್ಯ :-:೬೪:[ಸಂಪಾದಿಸಿ]

ಯುದ್ಧಶ್ರಮಂ ಪೋಗೆ ಕಂದೆರೆದನನಿತರೊಳ್ | ಬುದ್ಧಿ ಪಲ್ಲಟಿಸಿತನುಸಾಲ್ವಂಗೆ ಕಂಡನನಿ | ರುದ್ಧನ ಪಿತಾಮಹನ ಮೂರ್ತಿಯಂ ದೇವ ನೀನಾವನೆಂದಾನರಿಯದೆ |
ಬದ್ಧಮಾಯಾಪಾಶನಾಗಿ ಬಿದ್ದಿ ಹೆನೆನ್ನ | ನುದ್ಧರಿಸು ಮರೆವೊಕ್ಕೆನೆನೆ ಕೇಳ್ದು ಕರ್ಣಜಂ | ಕ್ರುದ್ಧನಾದಂ ಜರೆದು ನುಡಿದ ಕಲಿತನಮೆಲ್ಲಿ ಸುಡು ನಿನ್ನೊಡಲನೆಂದನು||64||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಯುದ್ಧಶ್ರಮಂ ಪೋಗೆ ಕಂದೆರೆದನು ಅನಿತರೊಳ್ ಬುದ್ಧಿ ಪಲ್ಲಟಿಸಿತು ಅನುಸಾಲ್ವಂಗೆ=[ಯುದ್ಧದ ಆಯಾಸವು ಕಡಿಮೆಯಾಗಲು, ಅನುಸಾಲ್ವನು ಕಣ್ಣುತೆರೆದನು; ಅಷ್ಟರಲ್ಲಿ ಅವನಿಗೆ ಬುದ್ಧಿಯು ಬದಲಾಯಿಸಿಹೋಗಿತ್ತು]; ಕಂಡನು ಅನಿರುದ್ಧನ ಪಿತಾಮಹನ ಮೂರ್ತಿಯಂ=[ಅವನು ಅನಿರುದ್ಧನ ಪಿತಾಮಹನಾದ ಕೃಷ್ಣನನ್ನು ಎದುರಿಗೆ ಕಂಡನು]; ದೇವ ನೀನಾವನೆಂದು ಅನರಿಯದೆ ಬದ್ಧ(ಕಟ್ಟು)ಮಾಯಾಪಾಶನಾಗಿ ಬಿದ್ದಿಹೆನು ಎನ್ನನು ಉದ್ಧರಿಸು ಮರೆವೊಕ್ಕೆನು=[ದೇವನೇ ನೀನು ಯಾರೆಂದು ನಾನು ಅರಿಯದೆ ಮಾಯಾಪಾಶದಿಂದ ಕಟ್ಟಲ್ಪಟ್ಟವನಾಗಿ ಬಿದ್ದಿದ್ದೇನೆ, ಮರೆಹೊಕ್ಕಿದ್ದೇನೆ, ನನ್ನನ್ನು ಉದ್ಧರಿಸು ಎಂದು ಕೃಷ್ನನನ್ನು ಬೇಡಿದನು]; ಎನೆ ಕೇಳ್ದು ಕರ್ಣಜಂ ಕ್ರುದ್ಧನಾದಂ ಜರೆದು ನುಡಿದ ಕಲಿತನಮ್ ಎಲ್ಲಿ ಸುಡು ನಿನ್ನ ಒಡಲನು(ಒಡಲು:ದೇಹ) ಎಂದನು=[ಅವನು ಹೀಗೆನ್ನಲು ಅದನ್ನು ಕೇಳಿ ಕರ್ಣಜನು ಕೋಪಗೊಂಡನು; ಅವನನ್ನು ಹೀಯಾಳಿಸಿ ನುಡಿದನು, ನಿನ್ನಲ್ಲಿದ್ದ ಶೌರ್ಯವು ಎಲ್ಲಿಹೋಯಿತು? ಸುಡು ನಿನ್ನ ದೇಹವನ್ನು! ಎಂದನು].
  • ತಾತ್ಪರ್ಯ: ಯುದ್ಧದ ಆಯಾಸವು ಕಡಿಮೆಯಾಗಲು, ಅನುಸಾಲ್ವನು ಕಣ್ಣುತೆರೆದನು; ಅಷ್ಟರಲ್ಲಿ ಅವನಿಗೆ ಬುದ್ಧಿಯು ಬದಲಾಯಿಸಿಹೋಗಿತ್ತು; ಅವನು ಅನಿರುದ್ಧನ ಪಿತಾಮಹನಾದ ಕೃಷ್ಣನನ್ನು ಎದುರಿಗೆ ಕಂಡನು; ದೇವನೇ ನೀನು ಯಾರೆಂದು ನಾನು ಅರಿಯದೆ ಮಾಯಾಪಾಶದಿಂದ ಕಟ್ಟಲ್ಪಟ್ಟವನಾಗಿ ಬಿದ್ದಿದ್ದೇನೆ, ಮರೆಹೊಕ್ಕಿದ್ದೇನೆ, ನನ್ನನ್ನು ಉದ್ಧರಿಸು ಎಂದು ಕೃಷ್ನನನ್ನು ಬೇಡಿದನು; ಅವನು ಹೀಗೆನ್ನಲು ಅದನ್ನು ಕೇಳಿ ಕರ್ಣಜನು ಕೋಪಗೊಂಡನು; ಅವನನ್ನು ಹೀಯಾಳಿಸಿ ನುಡಿದನು, ನಿನ್ನಲ್ಲಿದ್ದ ಶೌರ್ಯವು ಎಲ್ಲಿಹೋಯಿತು? ಸುಡು ನಿನ್ನ ದೇಹವನ್ನು! ಎಂದನು.

(ಪದ್ಯ - ೬೪)

ಪದ್ಯ :-:೬೫:[ಸಂಪಾದಿಸಿ]

ರೋಷಮೇತಕೆ ಮರುಳೆ ವೃಷಕೇತು ಕೃಷ್ಣನಂ | ದ್ವೇಷದಿಂ ಬೈದೊಡಂ ತನ್ನ ಮನವಾರೆ ಸಂ | ತೋಷದಿಂ ನುತಿಗೈದೊಡಂ ಪೋಗದಿರ್ದಪುವೆ ಕೋಟಿಜನ್ಮದೊಳೊದವಿದ ||
ದೋಷಂಗಳಿಂದು ವೀರಾವೇಶದಿಂದೆ ನಾಂ| ದೂಷೆಸಿದೊಡೀ ದಯಾಂಬುಧಿ ಕಾಯದುಳಿವನೆ ವಿ | ಶೇಷಸುಕೃತದ ಫಲಂ ದೊರೆದುದೆನಗೆಂದವಂ ಬಿದ್ದ ನಚ್ಚ್ಯುತನಂಘ್ರಿಗೆ ||65||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರೋಷಮೇತಕೆ ಮರುಳೆ ವೃಷಕೇತು ಕೃಷ್ಣನಂ ದ್ವೇಷದಿಂ ಬೈದೊಡಂ ತನ್ನ ಮನವಾರೆ ಸಂ ತೋಷದಿಂ ನುತಿಗೈದೊಡಂ=[ರೋಷವೇತಕ್ಕೆ ಮಾಡವೆ ಮರುಳೆ ವೃಷಕೇತು! ಕೃಷ್ಣನನ್ನು ದ್ವೇಷದಿಂದ ಬೈದರೂ, ಅಥವಾ ತನ್ನ ಮನಸಾರೆ ಸಂತೋಷದಿಂದ ಹೊಗಳಿದರೂ, ]; ಪೋಗದೆ ಇರ್ದಪುವೆ ಕೋಟಿಜನ್ಮದೊಳು ಒದವಿದ ದೋಷಂಗಳು ಇಂದು ವೀರಾವೇಶದಿಂದೆ ನಾಂ ದೂಷಿಸಿದೊಡೆ=[ ವೀರಾವೇಶದಿಂದ ನಾನು ದೂಷಿಸಿದರೂ ಕೋಟಿಜನ್ಮಗಳಲ್ಲಿ ಬಂದ ದೋಷಗಳು ಹೋಗದೆ ಇರುವುದೇ? ]; ಈ ದಯಾಂಬುಧಿ ಕಾಯದೆ ಉಳಿವನೆ ವಿಶೇಷಸುಕೃತದ ಫಲಂ ದೊರೆದುದು ಎನಗೆಂದು ಅವಂ ಬಿದ್ದ ನಚ್ಚ್ಯುತನ ಅಂಘ್ರಿಗೆ=[ಈ ದಯಾಸಮುದ್ರನು ನನ್ನನ್ನು ಕಾಯದೆ ಬಿಡುವನೇ? ನನಗೆ ವಿಶೇಷವಾದ ಸುಕೃತದ ಫಲವು ದೊರೆಯಿತು ಎಂದು ಅವನು ಅಚ್ಚ್ಯುತನ ಪಾದಕ್ಕೆ ಬಿದ್ದನು.]
  • ತಾತ್ಪರ್ಯ:ರೋಷವೇತಕ್ಕೆ ಮಾಡವೆ ಮರುಳೆ ವೃಷಕೇತು! ಕೃಷ್ಣನನ್ನು ದ್ವೇಷದಿಂದ ಬೈದರೂ, ಅಥವಾ ತನ್ನ ಮನಸಾರೆ ಸಂತೋಷದಿಂದ ಹೊಗಳಿದರೂ, ವೀರಾವೇಶದಿಂದ ನಾನು ದೂಷಿಸಿದರೂ ಕೋಟಿಜನ್ಮಗಳಲ್ಲಿ ಬಂದ ದೋಷಗಳು ಹೋಗದೆ ಇರುವುದೇ? ಈ ದಯಾಸಮುದ್ರನು ನನ್ನನ್ನು ಕಾಯದೆ ಬಿಡುವನೇ? ನನಗೆ ವಿಶೇಷವಾದ ಸುಕೃತದ ಫಲವು ದೊರೆಯಿತು ಎಂದು ಅವನು ಅಚ್ಚ್ಯುತನ ಪಾದಕ್ಕೆ ಬಿದ್ದನು.

(ಪದ್ಯ - ೬೫)

ಪದ್ಯ :-:೬೬:[ಸಂಪಾದಿಸಿ]

ನಗುತೆ ಮಧುಸೂದನಂ ಪ್ರೀತಿಯಿಂದಾತನಂ | ತೆಗೆದಪ್ಪಿ ನೀನಿಂದು ಮೊದಲಾಗಿ ದಿವಿಜರ್ಗೆ | ಪಗೆಯೆನಿಸದೆಮ್ಮೊಡನೆ ಧರ್ಮಜನ ಯಜ್ಞದ ಸಹಾಯಕಿಲ್ಲಿಪ್ಪುದೆಂದು ||
ಮಿಗೆ ಮನ್ನಿಪನಿತರೊಳ್ ಪ್ರದ್ಯುಮ್ನನುಳಿದ ಸೇ | ನೆಗಳೆಲ್ಲಮಂ ಗೆಲ್ದು ತುರಗಮಂ ಬಿಡಿಸಿಕೊಂ | ಡಗಧರನ ಸಮ್ಮುಖಕೆ ತಂದು ನಿಲಿಸಿದನಿತ್ತಭಾಷೆಗುತ್ತಾರಮಾಗೆ ||66||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಗುತೆ ಮಧುಸೂದನಂ ಪ್ರೀತಿಯಿಂದ ಆತನಂ ತೆಗೆದಪ್ಪಿ=[ನಗುತ್ತಾ ಮಧುಸೂದನನು ಪ್ರೀತಿಯಿಂದ ಆತನನ್ನು ಕರೆದು ಅಪ್ಪಿಕೊಂಡು,]; ನೀನಿಂದು ಮೊದಲಾಗಿ ದಿವಿಜರ್ಗೆ ಪಗೆಯೆನಿಸದೆ ಎಮ್ಮೊಡನೆ ಧರ್ಮಜನ ಯಜ್ಞದ ಸಹಾಯಕಿಲ್ಲಿಪ್ಪುದೆಂದು ಮಿಗೆ ಮನ್ನಿಪ ಅನಿತರೊಳ್=[ನೀನು ಇಂದು ಮೊದಲಾಗಿ/ ಇನ್ನುಮೇಲೆ ದೇವತೆಗಳಿಗೆ ಶತ್ರುವಾಗಿರದೆ,ನಮ್ಮೊಡನೆ ಧರ್ಮಜನ ಯಜ್ಞದ ಸಹಾಯಕ್ಕೆ ಇಲ್ಲಿ ಇರಬೇಕು, ಈರೀತಿ ಮನ್ನಸಿದನು; ಅಷ್ಟರಲ್ಲಿ]; ಪ್ರದ್ಯುಮ್ನನು ಉಳಿದ ಸೇನೆಗಳ ಎಲ್ಲಮಂ ಗೆಲ್ದು=[ಪ್ರದ್ಯುಮ್ನನು ಉಳಿದ ಸೇನೆಗಳೆಲ್ಲವನ್ನೂ ಗೆದ್ದು ]; ತುರಗಮಂ ಬಿಡಿಸಿಕೊಂಡು ಅಗಧರನ ಸಮ್ಮುಖಕೆ ತಂದು ನಿಲಿಸಿದನು ಇತ್ತಭಾಷೆಗೆ ಉತ್ತಾರಮಾಗೆ=[ಯಜ್ಞದ ಕುದುರೆಯನ್ನು ಬಿಡಿಸಿಕೊಂಡು ಕೃಷ್ಣನ ಎದುರು ತಂದು ನಿಲ್ಲಿಸಿದನು; ಹೀಗೆ ಕೊಟ್ಟ ಭಾಷೆಯು ನೆರವೇರಿವಾದಂತಾಯಿತು.]
  • ತಾತ್ಪರ್ಯ:ನಗುತ್ತಾ ಮಧುಸೂದನನು ಪ್ರೀತಿಯಿಂದ ಆತನನ್ನು ಕರೆದು ಅಪ್ಪಿಕೊಂಡು,ನೀನು ಇಂದು ಮೊದಲಾಗಿ/ ಇನ್ನುಮೇಲೆ ದೇವತೆಗಳಿಗೆ ಶತ್ರುವಾಗಿರದೆ,ನಮ್ಮೊಡನೆ ಧರ್ಮಜನ ಯಜ್ಞದ ಸಹಾಯಕ್ಕೆ ಇಲ್ಲಿ ಇರಬೇಕು ಎಂದನು, ಈ ರೀತಿ ಅವನನ್ನು ಮನ್ನಸಿದನು; ಅಷ್ಟರಲ್ಲಿ]; ಪ್ರದ್ಯುಮ್ನನು ಉಳಿದ ಸೇನೆಗಳೆಲ್ಲವನ್ನೂ ಗೆದ್ದು, ಯಜ್ಞದ ಕುದುರೆಯನ್ನು ಬಿಡಿಸಿಕೊಂಡು ಕೃಷ್ಣನ ಎದುರು ತಂದು ನಿಲ್ಲಿಸಿದನು; ಹೀಗೆ ಅವನು ಕೊಟ್ಟ ಭಾಷೆಯು ನೆರವೇರಿವಾದಂತಾಯಿತು.]

(ಪದ್ಯ - ೬೬)

ಪದ್ಯ :-:೬೭:[ಸಂಪಾದಿಸಿ]

ಬಳಿಕ ಜಯಲಾಭದಿಂದಸುರಾರಿ ಪಾಂಡವರ್ | ಮೊಳಗುವ ನಿಖಿಳವಾದ್ಯಕುಲದಿಂದೆ ವಂದಿಗಳ | ಕಳಕಳದ ರಭಸದಿಂ ಬಳಸಿದ ಸಮಸ್ತ ಪುರುಷ ಸ್ತ್ರೀಕದಂಬದೊಡನೆ ||
ಪೊಳಲಂ ಪುಗಲ್ಕಾ ಯುಧಿಷ್ಠಿರ ನರೇಶ್ವರಂ | ನಿಳಯಂಗಳಿತ್ತನಿಬರೆಲ್ಲರಂ ಸತ್ಕರಿಸಿ | ಕಳುಹಿ ನಿಜಭವನದೊಳ್ ದೇವಪುರಲಕ್ಷ್ಮೀಪತಿಯನುಪಚರಿಸುತಿರ್ದನು ||67||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಜಯಲಾಭದಿಂದ ಅಸುರಾರಿ ಪಾಂಡವರ್ ಮೊಳಗುವ ನಿಖಿಳವಾದ್ಯಕುಲದಿಂದೆ=[ನಂತರ ವಿಜಯ ಪಡೆದುದರಿಂದ ಕೃಷ್ಣನೂ ಪಾಂಡವರೂ ಮೊಳಗುವ ಸಕಲ ವಾದ್ಯಸಮೂಹದ ಜೊತೆಗೂಡಿ]; ವಂದಿಗಳ ಕಳಕಳದ ರಭಸದಿಂ ಬಳಸಿದ ಸಮಸ್ತ ಪುರುಷ ಸ್ತ್ರೀಕದಂಬದೊಡನೆ=[ಹೊಗಳುಭಟ್ಟರ ರಭಸದ ಕಲರವದೊಡನೆ ಸುತ್ತಲೂ ಇದ್ದ ಸಮಸ್ತ ಪುರುಷ ಸ್ತ್ರೀ ಗಡಣದೊಡನೆ]; ಪೊಳಲಂ ಪುಗಲ್ಕಾ ಯುಧಿಷ್ಠಿರ ನರೇಶ್ವರಂ ನಿಳಯಂಗಳಿತ್ತನಿಬರೆಲ್ಲರಂ ಸತ್ಕರಿಸಿ ಕಳುಹಿ=[ನಗರವನ್ನು ಹೊಗಲು ಆ ಯುಧಿಷ್ಠಿರ ನರೇಶ್ವರನು ಬಂದ ಅತಿಥಿಗಳಿಗೆ ಉಳಿಯಲು ಬಿಡಾರಗಳನ್ನು ವ್ಯವಸ್ಥೆಮಾಡಿ, ಸತ್ಕರಿಸಿ ಕಳುಹಿಸಿದನು, ]; ನಿಜಭವನದೊಳ್ ದೇವಪುರಲಕ್ಷ್ಮೀಪತಿಯನುಪಚರಿಸುತಿರ್ದನು=[ನಂತರ ತನ್ನ ಭವನದಲ್ಲಿ ಕೃಷ್ಣನನ್ನು ಉಪಚರಿಸಿದನು].
  • ತಾತ್ಪರ್ಯ: ನಂತರ ವಿಜಯ ಪಡೆದುದರಿಂದ ಕೃಷ್ಣನೂ ಪಾಂಡವರೂ ಮೊಳಗುವ ಸಕಲ ವಾದ್ಯಸಮೂಹದ ಜೊತೆಗೂಡಿ, ಹೊಗಳುಭಟ್ಟರ ರಭಸದ ಕಲರವದೊಡನೆ ಸುತ್ತಲೂ ಇದ್ದ ಸಮಸ್ತ ಪುರುಷ ಸ್ತ್ರೀ ಗಡಣದೊಡನೆ, ನಗರವನ್ನು ಹೊಗಲು ಆ ಯುಧಿಷ್ಠಿರ ನರೇಶ್ವರನು ಬಂದ ಅತಿಥಿಗಳಿಗೆ ಉಳಿಯಲು ಬಿಡಾರಗಳನ್ನು ವ್ಯವಸ್ಥೆಮಾಡಿ, ಸತ್ಕರಿಸಿ ಕಳುಹಿಸಿದನು. ನಂತರ ತನ್ನ ಭವನದಲ್ಲಿ ಕೃಷ್ಣನನ್ನು ಉಪಚರಿಸಿದನು].

(ಪದ್ಯ - ೬೭)VI-VIII

ಸಂಧಿ ೭ ಕ್ಕೆ ಪದ್ಯಗಳು :೩೮೮;

ಹೋಗು[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.