ಜೈಮಿನಿ ಭಾರತ/ಆರನೆಯ ಸಂಧಿ

ವಿಕಿಸೋರ್ಸ್ ಇಂದ
Jump to navigation Jump to search

ಜೈಮಿನಿ ಭಾರತ ಆರನೆಯ ಸಂಧಿ[ಸಂಪಾದಿಸಿ]

ಪದ್ಯ:-: ಸೂಚನೆ[ಸಂಪಾದಿಸಿ]

ಸಿಂಧುರನಗರದಿಂದ ನಡೆತಂದು ಪವನಜಂ | ಸಿಂಧುರಂಗದೊಳೆಸೆವ ದ್ವಾರಕೆಯೊಳೈದೆ ಮುಳಿ | ಸಿಂ ಧುರದೊಳಸುರರಂ ಗೆಲ್ದವನನಾರೋಗಣೆಯ ಸಮಯದೊಳ್ ಕಂಡನು ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಸೂಚನೆ:-:ಸಿಂಧುರನಗರದಿಂದ= [ಹಸ್ತಿನಾಪುರದಿಂದ], ನಡೆತಂದು= ಹೊರಟು, ಪವನಜಂ= ಭೀಮನು, ಸಿಂಧುರಂಗದೊಳ್ ಎಸೆವ=ಮುದ್ರ ಮಧ್ಯದಲ್ಲಿರುವ, ದ್ವಾರಕೆಯೊಳ್ ಐದೆ= ದ್ವಾರಕೆಗೆ ಬರಲು, ಮುಳಿಸಿಂ= ಸಿಟ್ಟಿನಿಂದ, ಧುರದೊಳ್ ಅಸುರರಂ ಗೆಲ್ದವನ ಆನಾರೋಗಣೆಯ(ಊಟ) ಸಮಯದೊಳ್ ಕಂಡನು=[ಯುದ್ಧದಲ್ಲಿ ರಾಕ್ಷಸರನ್ನು ಗೆದ್ದವನನ್ನು ಊಟದ ಸಮಯದಲ್ಲಿ ಕಂಡನು.]
 • ತಾತ್ಪರ್ಯ:*ಹಸ್ತಿನಾಪುರದಿಂದ ಹೊರಟು ಭೀಮನುಮುದ್ರ ಮಧ್ಯದಲ್ಲಿ ಶೋಭಿಸುತ್ತರುವ ದ್ವಾರಕೆಗೆ ಬರಲು, (ಸಿಟ್ಟಿನಿಂದ) ಯುದ್ಧದಲ್ಲಿ ರಾಕ್ಷಸರನ್ನು ಗೆದ್ದ ಕೃಷ್ಣನನ್ನು ಅವನ ಊಟದ ಸಮಯದಲ್ಲಿ ಕಂಡನು.

(ಪದ್ಯ -ಸೂಚನೆ)

ಪದ್ಯ :-:೧[ಸಂಪಾದಿಸಿ]

ಎಲೆ ಮಹೀಶ್ವವರ ನಾಗನಗರಮಂ ಪೊರಮಟ್ಟ | ನಿಲಸುತಂ ಪಯಣಗತಿಯೊಳ್ ಬರುತೆ ಕಂಡನಘ | ಕುಲದ ಪವಿಘಾತ ಭಯ ಶಮನೌಷಧಿಯನತುಲಕಲ್ಲೋಲನಿರವಧಿಯನು ||
ಜಲಜಂತು ಚಾರಣವಿಧಿಯನಿಳಾಮಂಡಲದ | ಬಳಸಿನ ಪರಿಧಿಯ ನಪಹೃತಗಣಿತಸುಧೆಯ ನವಿ | ರಳಘೋಷದುದಧಿಯನನೇಕರತ್ನಪ್ರತತಿಗಳ ನಿಧಿಯನಂಬುಧಿಯನು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಎಲೆ ಮಹೀಶ್ವರ ನಾಗ(ಆನೆ,ಹಸ್ತಿ)ನಗರಮಂ ಪೊರಮಟ್ಟ ಅನಿಲಸುತಂ(ಭೀಮ) ಪಯಣಗತಿಯೊಳ್ ಬರುತೆ ಕಂಡನು-$>=[ಎಲೆ ಜನಮೇಜಯ ರಾಜನೇ, ಹಸ್ತನಾವತಿ ನಗರದಿಂದ ಹೊರಟು ಭೀಮನು ದಾರರಿಯಲ್ಲಿ ಬರುತ್ತಾ ಕಂಡನು,] ಅಘಕುಲದ ಪವಿಘಾತ ಭಯ ಶಮನ ಔಷಧಿಯನು ಅತುಲಕಲ್ಲೋಲ ನಿರವಧಿಯನು ಜಲಜಂತು ಚಾರಣವಿಧಿಯನು ಇಳಾಮಂಡಲದ(ಭೂಮಿ)ಬಳಸಿನ ಪರಿಧಿಯ=[ಬೆಟ್ಟಗಳ ಕುಲಕ್ಕಿರುವ ವಜ್ರಾಯಧದ ಭಯವನ್ನು ಹೊಗಲಾಡಿಸುವ ಔಷಧಿಯಂತಿರುವ ಸರಿಸಾಟಿಯಿಲ್ಲದ ಅಲೆಗಳಿಂದ ಕೂಡಿದ ಮಿತಿಯಿಲ್ಲದ ಜಲಚರ ಪ್ರಾಣಿಗಳಿಗೆ ಸಂಚಾರಕ್ಕೆ ಆದಾರವಾದ ಮತ್ತು ಭೂಮಂಡಲವನ್ನು ಸುತ್ತುವರಿದ ಗಡಿಯಂತಿರುವ(ಸಮುದ್ರವನ್ನು)], ಅಪಹೃತ(ತೆಗೆದ) ಅಗಣಿತ ಸುಧೆಯನು ಅವಿರಳಘೋಷದ ಉದಧಿಯನು ಅನೇಕರತ್ನಪ್ರತತಿಗಳ(ರತ್ನಗಳ ರಾಶಿ) ನಿಧಿಯನು ಅಂಬುಧಿಯನು=[ (ಅಪಹೃತ)ತೆಗೆದ ಮಿತಿಯಿಲ್ಲದ ಅಮೃತದಂತಿರುವ ನೀರಿನ ಒಗ್ಗೂಡಿದ ಶಬ್ದದ ಜಲರಾಶಿಯನ್ನೂ, ಅನೇಕರತ್ನಗಳರಾಶಿಉ ನಿಧಿಯನ್ನು ಉಳ್ಳಸಮುರ್ದವನ್ನು ನೋಡಿದನು<$-]
 • ತಾತ್ಪರ್ಯ:*ಎಲೆ ಜನಮೇಜಯ ರಾಜನೇ, ಹಸ್ತನಾವತಿ ನಗರದಿಂದ ಹೊರಟು ಭೀಮನು ದಾರಿಯಲ್ಲಿ ಬರುತ್ತಾ, ಅಮೃತದಂತಿರುವ ನೀರಿನ ಒಗ್ಗೂಡಿದ ಶಬ್ದದ ಜಲರಾಶಿಯನ್ನೂ, ಮಿತಿಯಿಲ್ಲದೆ ತೆಗೆದ ಅನೇಕ ರತ್ನಗಳರಾಶಿಗಳ ನಿಧಿಯನ್ನು ಉಳ್ಳ ಸಮುದ್ರವನ್ನು ನೋಡಿದನು; ಅದು ಹೇಗಿತ್ತೆಂದರೆ, ಬೆಟ್ಟಗಳಕುಲಕ್ಕಿರುವ ವಜ್ರಾಯಧದ ಭಯವನ್ನು ಹೊಗಲಾಡಿಸುವ ಔಷಧಿಯಂತಿತ್ತು; ಸರಿಸಾಟಿಯಿಲ್ಲದ ಅಲೆಗಳಿಂದ ಕೂಡಿದ ಮಿತಿಯಿಲ್ಲದ ಜಲಚರ ಪ್ರಾಣಿಗಳ ಸಂಚಾರಕ್ಕೆ ಆದಾರವಾಗಿತ್ತು; ಮತ್ತು ಭೂಮಂಡಲವನ್ನು ಸುತ್ತುವರಿದ ಗಡಿಯಂತಿತ್ತು.

(ಪದ್ಯ -೧)

ಪದ್ಯ :-:೨[ಸಂಪಾದಿಸಿ]

ಮುನಿ ಮುನಿದು ಪೀರ್ದುದಂ ರಾಜವಂಶಕುಠಾರ | ಕನ ಕನಲ್ಕೆಗೆ ನೆಲಂಬಿಟ್ಟುದಂ ರಘುಜರಾ | ಮನ ಮನದ ಕೋಪದುರುಬೆಗೆ ಬಟ್ಟೆಗೊಟ್ಟುದಂ ಬಡಬಾನಲಂ ತನ್ನೊಳು ||
ದಿನದಿನದೊಳವಗಡಿಸುತಿರ್ಪುದಂ ಬಹಳ ಜಡ | ತನ ತನಗೆ ಬಂದುದಂ ಭಂಗಮೆಡೆಗೊಂಡುದಂ | ನೆನೆನೆನೆದು ನಿಟ್ಟುಸಿರ್ವಿಟ್ಟು ಸುಯ್ವಂತುದಧಿ ತೆರೆವೆರ್ಚುಗೆಯೊಳಿರ್ದುದು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಸಮುದ್ರವು ತನ್ನಅಲೆಗಳ ಭೋರ್ಗರೆತವು ತನಗಾದ ಅವಮಾನ ಅಥವಾ ಭಂಗಗಳನ್ನು ನೆನೆನೆನೆದು ಉಬ್ಬಸಪಡುತ್ತಾ ನಿಟ್ಟುಸಿರು ಬಿಡುವಂತೆ ಇತ್ತು; ಅದು ಹೇಗೆಂದರೆ: ಮುನಿ ಮುನಿದು ಪೀರ್ದುದಂ=(ಅಗಸ್ತ್ಯಮುನಿಯು ಸಮುದ್ರವು ಗರ್ವಪಟ್ಟಾಗ ಸಿಟ್ಟಿನಿಂದ ಸಮುದ್ರವನ್ನೇ ಕುಡಿದುಬಿಟ್ಟನು]; ರಾಜವಂಶಕುಠಾರಕನ ಕನಲ್ಕೆಗೆ (ಸಿಟ್ಟಿಗೆ) ನೆಲಂಬಿಟ್ಟುದು=[ರಾಜವಂಶಕ್ಕೆ ಕೊಡಲಿಯಾದ ಪರಶುರಾಮನನಿಗೆ ಪರಷುರಾಮ ಕ್ಷೇತ್ರವೆಂಬಲ್ಲಿ ನೆಲ ಬಿಟ್ಟು ಹಿಂದೆ ಸರಿದದು, ಅವನು ಭೂಮಿನ್ನೆಲ್ಲಾ ಗೆದ್ದು ಬ್ರಾಹ್ಮಣರಿಗೆ ದಾನ ಕೊಟ್ಟಾಗ, ಅವನಿಗೆ ಭೂಮಿಯಲ್ಲಿ ಇರಲು ಜಾಗವಿಲ್ಲದೆ ಸಮುದ್ರಕ್ಕೆ ಹಿಂದೆ ಸರಿಯಲು ಹೇಳಿದನು ಹಾಗೆಸರಿದುದು ೨ನೇ ಭಂಗ]; ರಘುಜರಾಮನ ಮನದ ಕೋಪದ ಉರುಬೆಗೆ ಬಟ್ಟೆಗೊಟ್ಟುದಂ=[ರಘುಕುಲದ ರಾಮನ ಮನದ ಕೋಪದ ಆರ್ಭಟಕ್ಕೆ ಸಮುದ್ರದಲ್ಲಿ ದಾರಿ ಬಿಟ್ಟಿದ್ದು,(ಸೇತುವೆ ಕಟ್ಟಲು ಅವಕಾಶ ಬಿಟ್ಟದ್ದು; ರಾಮನು ಸೇತುವೆ ಕಟ್ಟುವಾಗ ಕಲ್ಲು ಮುಳುಗಿಹೋಗುತ್ತಿತ್ತು ರಾಮನು ಸಿಟ್ಟಿನಿಂದ ಮಹಾಸ್ತ್ರವನ್ನು ಹೂಡಲು ಸಮುದ್ರ ರಾಜನು ಶರಣಾಗಿ ಸೇತವೆಕಟ್ಟಲು ಅನುಕೂಲನಾದನು ೩ನೇ ಭಂಗ]; ಬಡಬಾನಲಂ ತನ್ನೊಳು ದಿನದಿನದೊಳು ಅವಗಡಿಸುತಿರ್ಪುದಂ ಬಹಳ ಜಡತನ ತನಗೆ ಬಂದುದಂ ಭಂಗಮೆಡೆಗೊಂಡುದಂ=[ಬಡಬಾನಲವೆಂಬ ಪ್ರಳಯಕಾದ ಬೆಂಕಿ ತನ್ನಲ್ಲಿ(ಸಮುದ್ರದಲ್ಲಿ ದಿನದಿನವೂ ಹೆಚ್ಚುತ್ತಿರುವುದನ್ನು (ಅಶ್ವಮುಖೋದ್ಗತ ಬೆಂಕಿಎನ್ನುವರು) ತಡೆದುತಡೆದು ಇದ್ದಲ್ಲಿಯೇ ಇರುವಹಾಗೆ ತನಗೆ ಬಹಳ ಜಡತನ ಬಂದುದು ಈ ಬಗೆಯ ಸೋಲು,ಅವಮಾನಗಳನ್ನು] ನೆನೆನೆನೆದು ನಿಟ್ಟುಸಿರ್ವಿಟ್ಟು= ನಿಟ್ಟುಸಿರುಬಿಟ್ಟು ಸುಯ್ವಂತೆ=ಉಬ್ಬಸ ಪಡುವಂತೆ, ಉದಧಿ=ಸಮುದ್ರವು, ತೆರೆ ವೆರ್ಚುಗೆಯೊಳ್ ಇರ್ದುದು= ತೆರೆಗಳ ಉಬ್ಬಿಉಬ್ಬಿಬರುವ ಅದರ ತೆರೆಯ ಭೊರ್ಗರೆತದಲ್ಲಿ ಇತ್ತು.
 • ತಾತ್ಪರ್ಯ:*ಸಮುದ್ರವು, ತನ್ನ ಅಲೆಗಳ ಭೋರ್ಗರೆತವು ತನಗಾದ ಅವಮಾನ ಅಥವಾ ಭಂಗಗಳನ್ನು ನೆನೆನೆನೆದು ಉಬ್ಬಸಪಡುತ್ತಾ ನಿಟ್ಟುಸಿರು ಬಿಡುವಂತೆ ಇತ್ತು; ಅದು ಹೇಗೆಂದರೆ: ಅಗಸ್ತ್ಯಮುನಿಯು ಸಮುದ್ರವು ಗರ್ವಪಟ್ಟಾಗ ಸಿಟ್ಟಿನಿಂದ ಸಮುದ್ರವನ್ನೇ ಕುಡಿದುಬಿಟ್ಟನು; ರಾಜವಂಶಕ್ಕೆ ಕೊಡಲಿಯಾದ ಪರಶುರಾಮನನಿಗೆ ಪರಷುರಾಮ ಕ್ಷೇತ್ರವೆಂಬಲ್ಲಿ ನೆಲ ಬಿಟ್ಟು ಹಿಂದೆ ಸರಿದದು, ಅವನು ಭೂಮಿನ್ನೆಲ್ಲಾ ಗೆದ್ದು ಬ್ರಾಹ್ಮಣರಿಗೆ ದಾನ ಕೊಟ್ಟಾಗ, ಅವನಿಗೆ ಭೂಮಿಯಲ್ಲಿ ಇರಲು ಜಾಗವಿಲ್ಲದೆ ಸಮುದ್ರಕ್ಕೆ ಹಿಂದೆ ಸರಿಯಲು ಹೇಳಿದನು ಹಾಗೆಸರಿದುದು ೨ನೇ ಭಂಗ]; ರಘುಕುಲದ ರಾಮನ ಮನದ ಕೋಪದ ಆರ್ಭಟಕ್ಕೆ ಸಮುದ್ರದಲ್ಲಿ ದಾರಿ ಬಿಟ್ಟಿದ್ದು,(ಸೇತುವೆ ಕಟ್ಟಲು ಅವಕಾಶ ಬಿಟ್ಟದ್ದು; ರಾಮನು ಸೇತುವೆ ಕಟ್ಟುವಾಗ ಕಲ್ಲು ಮುಳುಗಿ ಹೋಗುತ್ತಿತ್ತು ರಾಮನು ಸಿಟ್ಟಿನಿಂದ ಮಹಾಸ್ತ್ರವನ್ನು ಹೂಡಲು ಸಮುದ್ರ ರಾಜನು ಶರಣಾಗಿ ಸೇತವೆ ಕಟ್ಟಲು ಅನುಕೂಲನಾದನು. ಇದು ೩ನೇ ಭಂಗ]; ಬಡಬಾನಲವೆಂಬ ಪ್ರಳಯಕಾದ ಬೆಂಕಿ ತನ್ನಲ್ಲಿ(ಸಮುದ್ರದಲ್ಲಿ ದಿನದಿನವೂ ಹೆಚ್ಚುತ್ತಿರುವುದನ್ನು (ಅಶ್ವಮುಖೋದ್ಗತ ಬೆಂಕಿಎನ್ನುವರು) ತಡೆದುತಡೆದು ಆಯಾಸಹೊಂದಿ ಇದ್ದಲ್ಲಿಯೇ ಇರುವಹಾಗೆ ತನಗೆ ಬಹಳ ಜಡತನ ಬಂದುದು; ಈ ಬಗೆಯ ಸೋಲು,ಅವಮಾನಗಳನ್ನು ನೆನೆನೆನೆದು ಉಬ್ಬಸ ಪಡುವಂತೆ ,ಅದರ ತೆರೆಗಳ ಉಬ್ಬಿಉಬ್ಬಿಬರುವ ಸಮುದ್ರದ ತೆರೆಯ ಭೊರ್ಗರೆತದಲ್ಲಿ ಕಾಣುವಂತೆ ಇತ್ತು.

(ಪದ್ಯ -೨)

ಪದ್ಯ :-:೩[ಸಂಪಾದಿಸಿ]

ಘಳಿಘಳಿಸುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ | ಸೆಳೆ ಸೆಳೆದು ನಡೆವ ಪೆರ್ದೆರೆಗಳಿಂ ನೊರೆಗಳಿಂ | ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧರತ್ನಂಗಳಿಂದೆ ||
ಒಳಕೊಳ್ವ ನಾನಾಪ್ರವಾಹದಿಂ ಗ್ರಾಹದಿಂ | ದಳತೆಗಳವಡದೆಂಬ ಪೆಂಪಿನಿಂ ಗುಂಪಿನಿಂ | ದಳದ ಪವಳದ ನಿಮಿರ್ದ ಕುಡಿಗಳಿಂ ತಡಿಗಳಿಂದಾ ಕಡಲ್ ಕಣ್ಗೆಸೆದುದು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಘಳಿಘಳಿಸುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ=[ಘಳಿಘಳಿಸುತ ಏಳುತ್ತಿರವ ನೀರುಗುಳ್ಳರಗಳಿಂದ, ನೀರಿನ ಸುಳಿಗಳಿಂದ] ಸೆಳೆ ಸೆಳೆದು ನಡೆವ ಪೆರ್ದೆರೆಗಳಿಂ ನೊರೆಗಳಿಂ=[ಸೆಳೆ ಸೆಳೆದು ಹಿಂದೆ ಮುಂದೆ ಹೋಗುತ್ತಿರುವ ದೊಡ್ಡ ತೆರೆಗಳಿಂದ ಮತ್ತು ನೊರೆಗಳಿಂದ,] ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ=[ಹೊಳೆಯುವ ತುಂತುರಿನ ಸೀರುವ ಹನಿಗಳಿಂತೆರೆಯ ಆರ್ಭಟದಿಂದ,] ವಿವಿಧರತ್ನಂಗಳಿಂದೆ ಒಳಕೊಳ್ವ=[ವಿವಿಧ ರತ್ನಂಗಳನ್ನು ಒಳಗೊಂಡಿರುವ] ನಾನಾಪ್ರವಾಹದಿಂ ಗ್ರಾಹದಿಂದ ಅಳತೆಗೆ ಅಳವಡದು ಎಂಬ ಪೆಂಪಿನಿಂ ಗುಂಪಿನಿಂ=[ನಾನಾ ಬಗೆಯ ಪ್ರವಾಹದಿಂದ, ಗ್ರಹಿಸಲು ಅಳತೆಗೆ ಸಿಗದು ಎಂಬ ಕೀರ್ತಿಪಡೆದ] ಗುಂಪಿನಿಂದಳದ ಪವಳದ ನಿಮಿರ್ದ ಕುಡಿಗಳಿಂ=[ನೆಟ್ಟಗೆ ನಿಮಿರಿನಿಂತ ಹವಳದ ದಳದ ಕುಡಿಗಳಿಂದ ಅವುಗಳ ಗುಂಪಿನಿಂದ; ] ತಡಿಗಳಿಂದಾ ಕಡಲ್ ಕಣ್ಗೆಸೆದುದು=[ಸಮುದ್ರ ತೀರಗಳಿಂದ ಆ ಕಡಲು ಭೀಮನ ಕಣ್ಣಿಗೆ ಕಾಣಿಸಿತು.]
 • ತಾತ್ಪರ್ಯ:*ಘಳಿಘಳಿಸುತ ಏಳುತ್ತಿರವ ನೀರುಗುಳ್ಳರಗಳಿಂದ, ನೀರಿನ ಸುಳಿಗಳಿಂದ; ಸೆಳೆ ಸೆಳೆದು ಹಿಂದೆ ಮುಂದೆ ಹೋಗುತ್ತಿರುವ ದೊಡ್ಡ ತೆರೆಗಳಿಂದ ಮತ್ತು ನೊರೆಗಳಿಂದ; ಹೊಳೆಯುವ ತುಂತುರಿನ ಸೀರುವ ಹನಿಗಳಿಂದ ತೆರೆಯ ಆರ್ಭಟದಿಂದ; ನಾನಾವವಿಧದ ರತ್ನಂಗಳನ್ನು ಒಳಗೊಂಡಿರುವ; ನಾನಾ ಬಗೆಯ ಪ್ರವಾಹದಿಂದ, ಗ್ರಹಿಸಲು ಅಳತೆಗೆ ಸಿಗದು ಎಂಬ ಕೀರ್ತಿಪಡೆದ ನೆಟ್ಟಗೆ ನಿಮಿರಿನಿಂತ ಹವಳದ ದಳದ ಕುಡಿಗಳಿಂದ ಅವುಗಳ ಗುಂಪಿನಿಂದ; ಸಮುದ್ರ ತೀರಗಳಿಂದ ಆ ಕಡಲು ಭೀಮನ ಕಣ್ಣಿಗೆ ಕಾಣಿಸಿತು.

(ಪದ್ಯ -೩)

ಪದ್ಯ :-:೪[ಸಂಪಾದಿಸಿ]

ಪಾಕಶಾಸನನ ಸಕಲೈಶ್ವರ್ಯ ಸಂಪದಕೆ | ಬೇಕಾದ ವಸ್ತುವಂ ಪಡೆದಿತ್ತೆನೆನ್ನವ | ರ್ಗಾಕುಲಿಶಧರನುಪಹತಿಯನೆಸಗನದರಿಂದಮಿನ್ನಿಳೆಗೆ ಮುನ್ನಿನಂತೆ ||
ಜೋಕೆ ಮಿಗೆ ತೆರಳಿ ನೀವೆಂದು ಸಂತೈಸಿ ರ | ತ್ನಾಕರಂ ಕಳುಹಿದ ಕುಲಾದ್ರಿಗಳ ಪರ್ಬುಗೆಗ | ಳೇಕರಮಿವಹುವೆನಲ್ ಪೆರ್ದೆರೆಗಳೆದ್ದು ಬರುತಿರ್ದವು ಮಹಾರ್ಣವದೊಳು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಪಾಕಶಾಸನನ ಸಕಲೈಶ್ವರ್ಯ ಸಂಪದಕೆ ಬೇಕಾದ ವಸ್ತುವಂ ಪಡೆದು ಇತ್ತೆನು =[ಇಂದ್ರನ ಸಕಲೈಶ್ವರ್ಯದ ಸಂಪತ್ತಿಗೆ ಬೇಕಾದ ವಸ್ತುಗಳನ್ನು ಉಂಟುಮಾಡಿ ಕೊಟ್ಟಿದ್ಧೆನು.(ಅವು ಚಿಂತಾಮಣಿ,ಕಲ್ಪವೃಕ್ಷ,ಕಾಮಧೇನು,ಅಮೃತ)] ಎನ್ನವರ್ಗೆ ಆಕುಲಿಶಧರನು(ಇಂದ್ರನು) ಉಪಹತಿಯನು ಎಸಗನು= [ನನ್ನ ಕಡೆಯವರಿಗೆ ಇಂದ್ರನು ತೊಂದರೆಯನ್ನು ಕೊಡನು,] ಅದರಿಂದಂ ಇನ್ನಿಳೆಗೆ ಮುನ್ನಿನಂತೆ ಜೋಕೆಮಿಗೆ ತೆರಳಿ ನೀವೆಂದು ಸಂತೈಸಿ ರತ್ನಾಕರಂ ಕಳುಹಿದ ಕುಲಾದ್ರಿಗಳ ಪರ್ಬುಗೆಗಳ= [ಅದರಿಂದ ಇನ್ನು ಭೂಮಿಗೆ ಮೊದಲಿನಂತೆ ಜೋಪಾನವಾಗಿ ಹೋಗಿ ನೀವು ಎಂದು ಸಂತೈಸಿ ಸಮುದ್ರರಾಜನು ಕಳುಹಿಸಿದ ದೊಡ್ಡಬುಗ್ಗೆಯಂತಹ ಕುಲಾದ್ರಿಗಳ (ಏಕರಂ)ಸಮೂಹಗಳು,] ಏಕರಂ ಇವು ಅಹುವೆನಲ್ ಪೆರ್ದೆರೆಗಳೆದ್ದು ಬರುತಿರ್ದವು ಮಹಾರ್ಣವದೊಳು(ಸಮುದ್ರ)=[ಕುಲಾದ್ರಿಗಳ ಸಮೂಹಗಳು ಇವು ಆಗಿವೆ ಎನ್ನುವಂತೆ ಮಹಾಸಮುದ್ರದಲ್ಲಿ ದೊಡ್ಡ ತೆರೆಗಳು ಬರುತ್ತಿದ್ದವು.] (ಕುಲಾದ್ರಿಗಳು:ಹಿಮಾದ್ರಿ,ನಿಷಧಾದ್ರಿ,ವಿಂದ್ಯಾದ್ರಿ, ಮಾಲ್ಯವತ್ ಪರ್ವತ, ಪಾರಿಯಾತ್ರಕಗಿರಿ,ಗಂಧಮಾದನ ಪರ್ವತ,ಹೇಮಕೂಟಬೆಟ್ಟ.)
 • ತಾತ್ಪರ್ಯ:*ಇಂದ್ರನ ಸಕಲೈಶ್ವರ್ಯದ ಸಂಪತ್ತಿಗೆ ಬೇಕಾದ ವಸ್ತುಗಳನ್ನು ಉಂಟುಮಾಡಿ ಕೊಟ್ಟಿದ್ಧೆನು.ಅವು ಚಿಂತಾಮಣಿ,ಕಲ್ಪವೃಕ್ಷ,ಕಾಮಧೇನು,ಅಮೃತ, ಇನ್ನು ನನ್ನ ಕಡೆಯವರಿಗೆ ಇಂದ್ರನು ತೊಂದರೆಯನ್ನು ಕೊಡನು, ಅದರಿಂದ ಇನ್ನು ಭೂಮಿಗೆ ಮೊದಲಿನಂತೆ ಜೋಪಾನವಾಗಿ ಹೋಗಿ ನೀವು ಎಂದು ಸಂತೈಸಿ ಸಮುದ್ರರಾಜನು ಕಳುಹಿಸಿದ ದೊಡ್ಡಬುಗ್ಗೆಯಂತಹ ಕುಲಾದ್ರಿಗಳ ಸಮೂಹಗಳು ಇವು ಎನ್ನುವಂತೆ ಮಹಾಸಮುದ್ರದಲ್ಲಿ ದೊಡ್ಡ ತೆರೆಗಳು ಬರುತ್ತಿದ್ದವು. (ಇಂದ್ರನು ಬೆಟ್ಟಗಳ ರೆಕ್ಕೆಗಳನ್ನು ಕತ್ತರಿಸಿ ಸಮುದ್ರಕ್ಕೆ ಕೆಡಗಿದ್ದನು. ದೊಡ್ಡ ಅಲೆಗಳನ್ನು ನೋಡಿದರೆ ಅವು ಈಗ ಎದ್ದು ಬರುತ್ತಿರುವಂತೆ ತೋರುತ್ತಿದೆ.)

(ಪದ್ಯ -೪)

ಪದ್ಯ :-:೫[ಸಂಪಾದಿಸಿ]

ಶಿವನಂತೆ ಗಂಗಾಹಿಮಕರಾವಹಂ ರಮಾ | ಧವನಂತೆ ಗೋತ್ರೈಕಪಾಲಕಂ ಪಂಕರುಹ | ಭವನಂತೆ ಸಕಲಭುವನಾಶ್ರಯಂ ಶಕ್ರನಂತನಿಮಿಷನಿಕರಕಾಂತನು ||
ದಿವಸಾಧಿಪತಿಯಂತನಂತರತ್ನಂ ರಾಜ | ನಿವಹದಂತಪರಿಮಿತವಾಹಿನೀಸಂಗತನು | ಪವನಾಳಿಯಂತೆ ವಿದ್ರುಮಲತಾಶೋಭಿತಂ ತಾನೆಂದುದಧಿ ಮೆರೆದುದು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಶಿವನಂತೆ ಗಂಗಾಹಿಮಕರ ಆವಹಂ=[ಶಂಕರನಂತೆ ಗಂಗೆಯನ್ನೂ ಹಿಮಕರನಾದ ಚಂದ್ರನನ್ನೂ ಧರಿಸಿದವನು], ರಮಾಧವನಂತೆ ಗೋತ್ರೈಕಪಾಲಕಂ=[ರಮಾಧವನಾದ ವಿಷ್ಣುವಿನಂತೆ ಗೋತ್ರೈಕಪಾಲಕನು -ರಾಕಕ್ಷಸರನ್ನು ಕೊಂದು ಭೂಮಿಯನ್ನು ರಕ್ಷಿಸಿದವನು, ಅದೇ ರೀತಿ, ಸಮುದ್ರನು ಇಂದ್ರನಿಂದ ಹೊಡೆಯಲ್ಪಟ್ಟ ಪರ್ತಗಳನ್ನು ಮುದ್ರನುರಕ್ಷಿಸಿದನು.] ಪಂಕರುಹಭವನಂತೆ(ಕಮಲದಲ್ಲಿ ಹುಟ್ಟಿದ ಬ್ರಹ್ಮ) ಸಕಲಭುವನಾಶ್ರಯಂ=[ಬ್ರಹ್ಮನಂತೆ ಸಕಲ ಲೋಕಗಳಿಗೆ ಆಶ್ರಯನು; ಸಮುದ್ರದ ತಳದಲ್ಲೂ ಅತಲ ಮೊದಲಾದ ಅನೇಕ ಲೋಕಗಳಿವೆ,ಅವಕ್ಕೆ ಆಶ್ರಯನು.] ಶಕ್ರನಂತೆ ಅನಿಮಿಷ ನಿಕರ ಕಾಂತನು(ಅನಮಿಷರು ದೇವತೆಗಳು; ಮೀನು)=[ಇಂದ್ರನಂತೆ ಅನಿಮಿಷರಿಗೆ ಒಡೆಯನು,ಸಮುದ್ರನೂ ಅನಿಮಿಷ ನಿಕರವಾದ ಮೀನುಗಳ ಆಶ್ರಯದಾತನು.] ದಿವಸಾಧಿಪತಿಯಂತೆ(ಸೂರ್ಯ) ಅನಂತರತ್ನಂ=[ಸುರ್ಯನು ಆಕಾಶಕ್ಕೆ ಅನಂತರತ್ನದಂತಿರುವನು, ಸಮುದ್ರನೂ ಅನಂತರತ್ನನು, ಏಕೆಂದರೆ ಅವನಲ್ಲಿ ಅನೇಕ ರತ್ನಗಳು ಅಡಗಿವೆ.] ರಾಜನಿವಹದಂತೆ ಅಪರಿಮಿತ ವಾಹಿನೀ ಸಂಗತನು= [ರಾಜನಿವಹವು ಅಂದರೆ ರಾಜ ಸಮೂಹವು ಅನೇಕ ಸೈನ್ಯದ ವಾಹಿನಿಗಳನ್ನು ಹೋದಿರುವುದು, ಅದೇರೀತಿ ಸಮುದ್ರನೂ ತಪರಿಮಿತವಾದ ನದೀವಾಹಿನಿಗಳನ್ನು ಹೊಂದಿರುವನು.] ಉಪವನಾಳಿಯಂತೆ ವಿದ್ರುಮಲತಾಶೋಭಿತಂ= [ಉಪವನದ ಆವಳಿಯಂತೆ,ಉಪವನದ ಸಮೂಹದಂತೆ ಗಿಡ ಬಳ್ಳಿಗಳು ಉಳ್ಳವನು ವಿದ್ರುಮಲತಾಶೋಭಿತಂ, ಸಮುದ್ರನೂ ಹವಳದ ಗಿಡ ಬಳ್ಳಿಗಳಂದ ಕೂಡಿರುವನು.] ತಾನು ಎಂದು ಉದಧಿ ಮೆರೆದುದು=[ತಾನು ಈ ಎಲ್ಲಾ ಪ್ರಸಿದ್ಧರಂತೆ ಎಂದು ಸಮುದ್ರವು ಶೋಬಿಸಿತು]
 • ತಾತ್ಪರ್ಯ:* ಸಮುದ್ರನು:-> ಶಂಕರನಂತೆ ಗಂಗೆಯನ್ನೂ ಹಿಮಕರನಾದ ಚಂದ್ರನನ್ನೂ ಧರಿಸಿದವನು, ರಮಾಧವನಾದ ವಿಷ್ಣುವಿನಂತೆ ಗೋತ್ರೈಕಪಾಲಕನು -ರಾಕ್ಷಸರನ್ನು ಕೊಂದು ಭೂಮಿಯನ್ನು ರಕ್ಷಿಸಿದವನು, ಅದೇ ರೀತಿ, ಸಮುದ್ರನು ಇಂದ್ರನಿಂದ ಹೊಡೆಯಲ್ಪಟ್ಟ ಪರ್ವತಗಳನ್ನು ರಕ್ಷಿಸಿದನು. ಬ್ರಹ್ಮನಂತೆ ಸಕಲ ಲೋಕಗಳಿಗೆ ಆಶ್ರಯನು; ಸಮುದ್ರದ ತಳದಲ್ಲೂ ಅತಲ ಮೊದಲಾದ ಅನೇಕ ಲೋಕಗಳಿವೆ,ಅವಕ್ಕೆ ಆಶ್ರಯನು. ಇಂದ್ರನಂತೆ ಅನಿಮಿಷರಿಗೆ ಒಡೆಯನು,ಸಮುದ್ರನೂ ಅನಿಮಿಷ ನಿಕರವಾದ ಮೀನುಗಳ ಆಶ್ರಯದಾತನು. ಸೂರ್ಯನು ಆಕಾಶಕ್ಕೆ ಅನಂತರತ್ನದಂತಿರುವನು, ಸಮುದ್ರನೂ ಅನಂತರತ್ನನು, ಏಕೆಂದರೆ ಅವನಲ್ಲಿ ಅನೇಕ ರತ್ನಗಳು ಅಡಗಿವೆ. ರಾಜನಿವಹವು ಅಂದರೆ ರಾಜ ಸಮೂಹವು ಅನೇಕ ಸೈನ್ಯದ ವಾಹಿನಿಗಳನ್ನು ಹೋದಿರುವುದು, ಅದೇರೀತಿ ಸಮುದ್ರನೂ ತಪರಿಮಿತವಾದ ನದೀವಾಹಿನಿಗಳನ್ನು ಹೊಂದಿರುವನು. ಉಪವನದ ಆವಳಿಯಂತೆ,ಉಪವನದ ಸಮೂಹದಂತೆ ಗಿಡ ಬಳ್ಳಿಗಳು ಉಳ್ಳವನು, ಸಮುದ್ರನೂ ಹವಳದ ಗಿಡ ಬಳ್ಳಿಗಳಂದ ಕೂಡಿರುವನು. ಹೀಗೆ ತಾನೂ ಸಹ ಈ ಎಲ್ಲಾ ಪ್ರಸಿದ್ಧರಂತೆ ಎಂದು ಸಮುದ್ರವು ಶೋಬಿಸಿತು.

(ಪದ್ಯ -೫)

ಪದ್ಯ :-:೬[ಸಂಪಾದಿಸಿ]

ಚಿಪ್ಪೊಡೆದು ಸಿಡಿವ ಮುತ್ತುಗಳಲ್ಲದಿವು ಮಗು | ಳ್ದುಪ್ಪರಿಸುವೆಳಮೀನ್ ಬಿದಿರ್ವ ಶೀಖರಮಲ್ಲ | ಮೊಪ್ಪುವ ಸುಲಲಿತಶಂಖದ ಸರಿಗಳಲ್ಲದಿವು ಬೆಳ್ನೊರೆಗಳೋಟ್ಟಿಲಲ್ಲ ||
ತಪ್ಪದೊಳಗಣ ರನ್ನವೆಳಗಲ್ಲದಿವು ತೊಡ | ರ್ದಿಪ್ಪ ಕೆಂಬವಳಮಲ್ಲಿವು ಪಯೋನಿಧಿಯ ಕೆನೆ | ಯೊಪಪಮಲ್ಲದೆ ನೀರ್ ಮೊಗೆಯಲಿಳಿವ ಮೇಘಂಗಳಲ್ಲೆನಿಸಿದುವು ಕಡಲೊಳು ||6|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಚಿಪ್ಪು ಒಡೆದು ಸಿಡಿವ ಮುತ್ತುಗಳು ಅಲ್ಲದೆ ಇವು ಮಗುಳ್ದು ಉಪ್ಪರಿಸುವ ಎಳಮೀನ್=[ತೆರಯಲ್ಲಿ ಕಾಣುವ ಬಿಳಿಯ ಕಣಗಳು ಚಿಪ್ಪು ಒಡೆದು ಸಿಡಿವ ಮುತ್ತುಗಳು ಅಲ್ಲ; ಇವು ಮಗುಚಿದ ಕುಪ್ಪಳಿಸುವ ಎಳೆಮೀನುಗಳು; ] ಬಿದಿರ್ವ ಶೀಖರಮಲ್ಲಮೊಪ್ಪುವ ಸುಲಲಿತಶಂಖದ ಸರಿಗಳಲ್ಲದಿವು ಬೆಳ್ನೊರೆಗಳೋಟ್ಟಿಲಲ್ಲ=[ಮೈಕುಡುಗುವ ನೀರಹನಿಗಳಲ್ಲ ಅವು ಚಂದದ ಸುಲಲಿತ ಶಂಖದ ರಾಶಿ (ಒಟ್ಟಿಲು)ಗಳು,ಇವು ತೆರೆಗಳಿಂದಾದ ಬೆಳ್ನೊರೆಗಳಲ್ಲ] ತಪ್ಪದೆ ಒಳಗಣ ರನ್ನ ವೆಳಗಲ್ಲದೆ ಇವು ತೊಡರ್ದಿಪ್ಪ ಕೆಂಬವಳಂ ಅಲ್ಲಿವು ಪಯೋನಿಧಿಯ ಕೆನೆಯೊಪಪಮಲ್ಲದೆ=[ಸಮುದ್ರದ ಸದಾ ಇರುವ ಒಳಗಣ ರತ್ನದ ಬೆಳಕಲ್ಲ ಇವು ತುಂಬಿರುವ ಕೆಂಪು ಹವಳವು ಅಲ್ಲದೆ, ಇವು ಸಮುದ್ರದ ಅಲೆಯಿಂದಾದ ಕೆನೆಯ ರಾಶಿ] ನೀರ್ ಮೊಗೆಯಲಿಳಿವ ಮೇಘಂಗಳಲ್ಲ ಎನಿಸಿದ ಇವು ಕಡಲೊಳು=[ಸಮುದ್ರದಲ್ಲಿ ನೀರನ್ನು ಮೊಗೆಯಲು ಇಳಿಯುವ ಮೋಡಗಳಲ್ಲ ಇವು ಸಮುದ್ರದ ಹೆಪ್ಪು.]
 • ತಾತ್ಪರ್ಯ:* ತೆರಯಲ್ಲಿ ಕಾಣುವ ಬಿಳಿಯ ಕಣಗಳು ಚಿಪ್ಪು ಒಡೆದು ಸಿಡಿವ ಮುತ್ತುಗಳು ಅಲ್ಲ; ಇವು ಮಗುಚಿದ ಕುಪ್ಪಳಿಸುವ ಎಳೆಮೀನುಗಳು; ಮೈಕುಡುಗುವ ನೀರಹನಿಗಳಲ್ಲ ಅವು ಚಂದದ ಸುಲಲಿತ ಶಂಖದ ರಾಶಿ (ಒಟ್ಟಿಲು)ಗಳು,ಇವು ತೆರೆಗಳಿಂದಾದ ಬೆಳ್ನೊರೆಗಳಲ್ಲ; ಸಮುದ್ರದ ಸದಾ ಇರುವ ಒಳಗಣ ರತ್ನದ ಬೆಳಕಲ್ಲ ಇವು ತುಂಬಿರುವ ಕೆಂಪು ಹವಳವು ಅಲ್ಲ, ಇವು ಸಮುದ್ರದ ಅಲೆಯಿಂದಾದ ಕೆನೆಯ ರಾಶಿ;ಸಮುದ್ರದಲ್ಲಿ ನೀರನ್ನು ಮೊಗೆಯಲು ಇಳಿಯುವ ಮೋಡಗಳಲ್ಲ ಇವು ಸಮುದ್ರದ ಹೆಪ್ಪು.ಸಮುದ್ರವನ್ನು ನೋಡಿದಾಗ ಈ ಬಗೆಯ ಭ್ರಮೆಗಳಾಗುವವು.

(ಪದ್ಯ -೬)

ಪದ್ಯ :-:೭[ಸಂಪಾದಿಸಿ]

ಕ್ರೂರ ಕರ್ಕಟಕ-ಕಟಕಂ ಕಮಠಮಠಮಿಡಿದ | ನೀರಾನೆಗಳ್ ನೆಗಳ್ದೆಡೆ ಮುದಮುದಯಿಪ ಶಾ | ಲೂರಕುಲರಾಜಿ ರಾಜಿಪ ಗೃಹಂ ನಿಬಿಡ ಗಂಡೂಪದ ಪದಂ ಪೆರ್ಚಿದ ||
ಘೋರ ಸಮುದ್ರಗ್ರದ ಗ್ರಾಹಭವ ಭವನಮುಂ | ಭೂರಿಭೀಕರ ಮಕರಮಹಿ ತಿಮಿತಿಮಿಂಗಿಲ ಕ | ಠೋರತರ ರಾಜೀವ ಜೀವಪ್ರತತಿ ವಾಸವಾ ಸಮುದ್ರದೊಳೆಸೆದುದು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಕ್ರೂರ ಕರ್ಕಟಕ-ಕಟಕಂ ಕಮಠಮಠಮಿಡಿದ ನೀರಾನೆಗಳ್ ನೆಗಳ್ದೆಡೆ=[ಕ್ರೂರವಾದ ಭಯ ಹುಟ್ಟಿಸುವ ಏಡಿಗಳ ಗುಂಪು; ಆಮೆಗಳಿಗೆ (ಮಠ)ಮನೆ; ಗುಂಪಾಗಿರುವ ನೀರಾನೆಗಳಿಗೆ ಸೊಗಸಾದ ಸ್ಥಳ;] ಮುದಮುದಯಿಪ ಶಾಲೂರಕುಲರಾಜಿ ರಾಜಿಪ ಗೃಹಂ ನಿಬಿಡ ಗಂಡೂಪದ ಪದಂ ಪೆರ್ಚಿದ ಘೋರ ಸಮುದ್ರಗ್ರದ ಗ್ರಾಹಭವ ಭವನಮುಂ= [ಮುದದಿಂದ ಬರತ್ತಿರುವ ಶಾಲೂರ-ಬಾಲದಮೀನಿನ ಸಮೂಹ; ರಾಜಿಪ ಗೃಹಂ ನಿಬಿಡ ಗಂಡೂಪದ/ಕಪ್ಪೆಗಳ ವಟಶಬ್ದ,] ಪೆರ್ಚಿದ ಘೋರ ಸಮುದ್ರಗ್ರದ ಗ್ರಾಹಭವ ಭವನಮುಂ, ಭೂರಿಭೀಕರ ಮಕರಮಹಿ ತಿಮಿತಿಮಿಂಗಿಲ ಕಠೋರತರ ರಾಜೀವ ಜೀವಪ್ರತತಿ=[ಬೆಳೆದ ಘೋರ ಮೊಸಳಗಳಿಗೆ ಮನೆ ಭೀಕರ ಚಿಕ್ಕ ಮಕರಗಳಿಗೆ ವಾಸಭೂಮಿ, ದೊಡ್ಡ ತಿಮಿಂಗಿಲ, ಅಪಾಯಕರ ಹಿಂಡು ಮೀನುಗಳು],ಇವುಗಳ ವಾಸವು ಸಮುದ್ರದೊಳು ಎಸೆದುದು=ಕಾಣಿಸಿತು
 • ತಾತ್ಪರ್ಯ:*ಕ್ರೂರವಾದ ಭಯ ಹುಟ್ಟಿಸುವ ಏಡಿಗಳ ಗುಂಪು; ಆಮೆಗಳಿಗೆ ಮನೆ; ಗುಂಪಾಗಿರುವ ನೀರಾನೆಗಳಿಗೆ ಸೊಗಸಾದ ಸ್ಥಳ; ಮುದದಿಂದ ಬರತ್ತಿರುವ ಶಾಲೂರ-ಬಾಲದಮೀನಿನ ಸಮೂಹದ ವಾಸಸ್ಥಳ; ಎಲ್ಲಾಕಡೆ ತುಂಬಿರುವ ಗಂಡೂಪದ/ಮಂಡರ ಕಪ್ಪೆಗಳ ವಟಶಬ್ದ, ಬೆಳೆದ ಘೋರ ಮೊಸಳಗಳಿಗೆ ಮನೆ, ಭೀಕರ ಚಿಕ್ಕ ಮಕರಗಳಿಗೆ ವಾಸಭೂಮಿ, ದೊಡ್ಡ ತಿಮಿಂಗಿಲದ ವಾಸ, ಅಪಾಯಕರ ಹಿಂಡು ಮೀನುಗಳು,ಇವುಗಳ ವಾಸವು ಸಮುದ್ರದಲ್ಲಿ ಕಾಣಿಸಿತು

(ಪದ್ಯ -೭)

ಪದ್ಯ :-:೮[ಸಂಪಾದಿಸಿ]

ಸುಳಿದೊಂದು ಮೀನ್ನುಂಗಿತಾ ಮೀನನಾ | ಗಳೆ ನುಂಗಿತೊಂದು ಮೀನಾ ಮೀನ ನುಂಗಿದುದು | ಬಳಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನುಂಗಿತೊಂದು ||
ತೊಳಲುತೊಂದೊಂದನೊಂದಿಂತು ನುಂಗಲ್ ತಿಮಿಂ | ಗಿಳನೆಲ್ಲಮಂ ನುಂಗುತಿರ್ಪುದೆನೆ ಬೆದರಿ ಮೀ | ನ್ಗಳೆ ತಿರುಗುತಿರ್ದುವೆರಕೆಗಳೊಡನೆ ಮುಂಪೊಕ್ಕ ಗಿರಿಗಳೆಡೆಯಾಡುವಂತೆ ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಸುಳಿದೊಂದು ಮೀನ್ನುಂಗಿತಾ ಮೀನನಾಗಳೆ ನುಂಗಿತೊಂದು ಮೀನಾ ಮೀನ ನುಂಗಿದುದು=[ಸುಳಿದ ಒಂದು ಮೀನನ್ನು ನಂಗಿತು ಆ ಮೀನನ ಕೂಡಲೆ ನುಂಗಿತು ಒಂದು ಮೀನು, ಆ ಮೀನ ನುಂಗಿದುದು] ಬಳಿಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನುಂಗಿತೊಂದು=[ಬಳಿಕ ಒಂದು ಮೀನು ಅದನ್ನು ಮತ್ತೊಂದು ಮೀನು ನುಂಗಿತು ಮತ್ತೆ ಆ ಮೀನ ನುಂಗಿತು] ತೊಳಲುತ ಒಂದೊಂದನೊಂದು ಇಂತು ನುಂಗಲ್ ತಿಮಿಂಗಿಳನು ಎಲ್ಲಮಂ ನುಂಗುತಿರ್ಪುದು=[ನೀರಲ್ಲಿ ತಿರುಗುತ್ತಾ ಒಂದನು ಇನ್ನೊಂದು ಹೀಗೆ ನುಂಗಲು ತಿಮಿಂಗಿಲವು ಎಲ್ಲವನ್ನೂ ನುಂಗುತ್ತಿರುವುದು] ಎನೆ ಬೆದರಿ ಮೀನ್ಗಳೆ ತಿರುಗುತ ಇರ್ದುವು ಎರಕೆಗಳೊಡನೆ ಮುಂಪೊಕ್ಕ ಗಿರಿಗಳು ಎಡೆಯಾಡುವಂತೆ=ಹೀಗಿರಲು,ತಿಮಿಂಗಿಲಗಳು ಸಮುದ್ರದಲ್ಲಿ ಹೊಕ್ಕ ಗಿರಿಗಳಂತೆ ಎಡೆಯಾಡುತ್ತಿದ್ದವು, ಜಂಡು ಹುಲ್ಲಿನಲ್ಲಿ ಮೀನುಗಳು ಹೆದರಿ ತಿರುಗಾಡುತ್ತದ್ದವು.
 • ತಾತ್ಪರ್ಯ:*ಸುಳಿದ ಒಂದು ಮೀನನ್ನು ನಂಗಿತು ಒಂದು ಮೀನು, ಆ ಮೀನನ ಕೂಡಲೆ ನುಂಗಿತು ಮತ್ತೊಂದು ಮೀನು, ಆ ಮೀನ ನುಂಗಿದುದು ಬಳಿಕ ಒಂದು ಮೀನು ಅದನ್ನು ಮತ್ತೊಂದು ಮೀನು ನುಂಗಿತು ಮತ್ತೆ ಆ ಮೀನ ನುಂಗಿತು ಒಂದು, ನೀರಿನಲ್ಲಿ ತಿರುಗುತ್ತಾ ಒಂದನು ಇನ್ನೊಂದು ಹೀಗೆ ನುಂಗಲು ತಿಮಿಂಗಿಲವು ಎಲ್ಲವನ್ನೂ ನುಂಗುತ್ತಿರುವುದು; ಹೀಗಿರಲು, ತಿಮಿಂಗಿಲಗಳು ಸಮುದ್ರದಲ್ಲಿ ಹೊಕ್ಕ ಗಿರಿಗಳಂತೆ ಎಡೆಯಾಡುತ್ತಿದ್ದವು, ಜಂಡು ಹುಲ್ಲಿನಲ್ಲಿ ಮೀನುಗಳು ಹೆದರಿ ತಿರುಗಾಡುತ್ತದ್ದವು.

(ಪದ್ಯ -೮)

ಪದ್ಯ :-:೯[ಸಂಪಾದಿಸಿ]

ಆ ಮಹಾಂಭೋಧೀಯಂ ನೋಡಿ ಹರ್ಷಿತನಾಗಿ | ಭೀಮಸೇನಂ ಬಳಿಕ ನಲವಿನಿಂ ದ್ವಾರಕೆಯ | ಸೀಮೆಗೈತಂದು ನಗರದ್ವಾರಮಂ ಪೆÇಕ್ಕು ಬರೆ ರಾಜಮಾರ್ಗದೊಳಗೆ ||
ಸಾಮಜಗಿರಿಯ ಹಯತರಂಗದ ನೆರವಿದೊರೆಯ | ಚಾಮರ ಶಫರಿಯ ಬೆಳ್ಗೊಡೆನೊರೆಯ ಭೂಷಣ | ಸ್ತೋಮಮಣಿಗಣದ ಕಳಕಳರವದ ಜನದ ಸಂದಣಿಯ ಕಡಲಂ ಕಂಡನು ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಆ ಮಹಾಂಭುಧೀಯಂ ನೋಡಿ ಹರ್ಷಿತನಾಗಿ ಭೀಮಸೇನಂ ಬಳಿಕ ನಲವಿನಿಂ ದ್ವಾರಕೆಯ ಸೀಮೆಗೈತಂದು=ಭೀಮಸೇನನು ಆ ಮಹಾಸಮುದ್ರವನ್ನು ನೋಡಿ ಹರ್ಷಿತನಾಗಿ ಬಳಿಕ ಸಂತೋಷದಿಂದ ದ್ವಾರಕೆಯ ದೇಶಕ್ಕೆ ಬಂದು,] ನಗರದ್ವಾರಮಂ ಪೊಕ್ಕು ಬರೆ ರಾಜಮಾರ್ಗದೊಳಗೆ ಸಾಮಜಗಿರಿಯ(ಆನೆಯ) ಹಯ ತರಂಗದ ನೆರವಿದೊರೆಯ=[ನಗರದ್ವಾರವನ್ನು ಹೊಕ್ಕು ರಾಜಮಾರ್ಗದೊಳಗೆ ಬರಲು, ಆನೆ ಎಂಬ -ಬೆಟ್ಟಗಳುಳ್ಳ, (ಹಯ ತರಂಗದ) ಕುದುರೆಗಳ- ತರಂಗ, ನೆರವಿದ ತೊರೆಯ ಸೇರಿಸಿಟ್ಟ ವಸ್ತುಗಳ- ಆಲೆಯ]; ಚಾಮರ ಶಫರಿಯ ಬೆಳ್ಗೊಡೆನೊರೆಯ ಭೂಷಣ ಸ್ತೋಮಮಣಿಗಣದ ಕಳಕಳರವದ ಜನದ ಸಂದಣಿಯ ಕಡಲಂ ಕಂಡನು=[ಚಾಮರವೆಂಬ- ಮೀನುಗಳ, ಬೆಳ್ಗೊಡೆಯೆಂಬ- ನೊರೆಯ, ಭೂಷಣ ಸ್ತೋಮಮಣಿಗಣದ- ಸಮುದ್ರದ ರತ್ನಗಳಂತೆ ತೊರುವ, ಕಳಕಳರವದ ಜನದ ಸಂದಣಿಯ-ಜನಜುಂಗುಳಿಯ ಕಡಲಂತೆ ತೋರುವ ಸಮುದ್ರವನ್ನು ಭೀಮನು ಕಂಡನು ]
 • ತಾತ್ಪರ್ಯ:*ಭೀಮಸೇನನು ಆ ಮಹಾಸಮುದ್ರವನ್ನು ನೋಡಿ ಹರ್ಷಿತನಾಗಿ ಬಳಿಕ ಸಂತೋಷದಿಂದ ದ್ವಾರಕೆಯ ದೇಶಕ್ಕೆ ಬಂದು, ನಗರದ್ವಾರವನ್ನು ಹೊಕ್ಕು ರಾಜಮಾರ್ಗದೊಳಗೆ ಬರಲು, ನಗರದಲ್ಲಿ ತಾನು ಹಿಂದೆ ಕಂಡ ಸಮುದ್ರದ ಹೋಲಿಕೆಯನ್ನು ನಗರದಲ್ಲೂ ಕಂಡನು, ಹೇಗೆಎಂದರೆ: ಆನೆ ಎಂಬ -(ಸಮುದ್ರದಲ್ಲಿ ಬಿದ್ದ) ಬೆಟ್ಟಗಳುಳ್ಳನ್ನೂ, (ಹಯ ತರಂಗದ) ಕುದುರೆಗಳ- ತರಂಗವನ್ನೂ, ನೆರವಿದ ತೊರೆಯ ಸೇರಿಸಿಟ್ಟ ವಸ್ತುಗಳ- ಆಲೆಯನ್ನೂ]; ಬಾಲದಂತೆ ಬೀಸುವ ಚಾಮರವೆಂಬ- ಮೀನುಗಳನ್ನೂ, ಬೆಳ್ಗೊಡೆಯೆಂಬ- ನೊರೆಯನ್ನೂ, ಭೂಷಣ ಸ್ತೋಮಮಣಿಗಣದ- ಸಮುದ್ರದ ರತ್ನಗಳಂತೆ ತೊರುವುದನ್ನೂ, ಕಳಕಳರವದ ಜನದ ಸಂದಣಿಯ ಜನಜುಂಗುಳಿಯ ಕಡಲಂತೆ ತೋರುವುದನ್ನು ಭೀಮನು ಕಂಡನು

(ಪದ್ಯ -೯)

ಪದ್ಯ :-:೧೦[ಸಂಪಾದಿಸಿ]

ಪೆಚ್ಚಿದಿಂಗಡಲೂರ್ಮಿಮಾಲೆ ಮಾಲೆಗಳೆಡೆಯೊ | ಳುಚ್ಚಳಿಸಿ ಹೊಳೆಹೊಳೆವ ಮರಿಮೀನ್ಗಳೆನೆ ತೊಳಗು | ವಚ್ಚಬೆಳ್ಮುಗಿಲೊಡ್ಡುಗಳ ತರತರಂಗಳೊಳ್ ತಲೆದೋರ್ಪ ಮಿಂಚುಗಳೆನೆ ||
ಅಚ್ಚರಿಯೆನಿಪ ರಾಜಮಾರ್ಗದಿಕ್ಕೆಲದೊಳಿಹ | ನಿಚ್ಚಳದ ಕರುಮಾಡದೋರಣದ ನೆಲೆನೆಲೆಯೊ | ಳೊಚ್ಚೇರೆಗಂಗಳೆಳವೆಂಗಳ ಕಟಾಕ್ಷದ ಮರೀಚಿಗಳ್ ಸೊಗಯಿಸಿದುವು ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಪೆಚ್ಚಿದ ಇಂಗಡಲ ಊರ್ಮಿಮಾಲೆ ಮಾಲೆಗಳು ಎಡೆಯೊಳು ಉಚ್ಚಳಿಸಿ ಹೊಳೆಹೊಳೆವ ಮರಿಮೀನ್ಗಳೆನೆ=[ದೊಡ್ಡ/ ಉಬ್ಬಿದ ಕ್ಷೀರಸಮುದ್ರದ, ತೆರೆಯ ಮಾಲೆ ಮಾಲೆಗಳ ಬಳಿಯಲ್ಲಿ, ಮೇಲೆಬಂದು ಹೊಳೆಹೊಳೆವ ಮರಿಮೀನ್ಗಳೊ ನ್ನುವಂತೆ ] ತೊಳಗುವ ಅಚ್ಚ ಬೆಳ್ಮುಗಿಲ ಒಡ್ಡುಗಳ ತರತರಂಗಳೊಳ್ ತಲೆದೋರ್ಪ ಮಿಂಚುಗಳೆನೆ=[ತೊಳಗುವ ಸ್ವಚ್ಛವಾದ ಬೆಳಿಮುಗಿಲ ರಾಶಿಗಳ ನಾನಾವಿಧದಲ್ಲಿ ಕಾಣುವ ಮಿಂಚುಗಳೊ ಎನ್ನುವಂತೆ ] ಅಚ್ಚರಿಯೆನಿಪ ರಾಜಮಾರ್ಗದ ಇಕ್ಕೆಲದೊಳು ಇಹ ನಿಚ್ಚಳದ ಕರುಮಾಡದ ಓರಣದ ನೆಲೆನೆಲೆಯೊಳ ಒಚ್ಚೇರೆಗಂಗಳ ಎಳವೆಂಗಳ ಕಟಾಕ್ಷದ ಮರೀಚಿಗಳ್ ಸೊಗಯಿಸಿದುವು=[ಅಚ್ಚರಿಯಂತೆಕಾಣುವ ರಾಜಮಾರ್ಗದ ಎರಡುಬದಿಯಲ್ಲಿ ಇರುವ ಸ್ಥಿರವಾದ ಉಪ್ಪರಿಗೆಗಳ ಓರಣವಾಗಿರುವ ಪ್ರತಿಸ್ಥಳದಲ್ಲಿಯೂ, ಅಗಲವಾದ ಕಣ್ಣುಗಳ ಹುಡುಗಿಯರ ಕಣ್ಣೋಟದ ಕಿರಣಗಳು (ನಗರಕ್ಕೆ) ಸೌಂದರ್ಯವನ್ನು ನೀಡಿದವು.]
 • ತಾತ್ಪರ್ಯ:*ದೊಡ್ಡ/ ಉಬ್ಬಿದ ಕ್ಷೀರಸಮುದ್ರದ, ತೆರೆಯ ಮಾಲೆ ಮಾಲೆಗಳ ಬಳಿಯಲ್ಲಿ, ಮೇಲೆಬಂದು ಹೊಳೆಹೊಳೆವ ಮರಿಮೀನ್ಗಳೊ ನ್ನುವಂತೆ, ತೊಳಗುವ ಸ್ವಚ್ಛವಾದ ಬೆಳಿಮುಗಿಲ ರಾಶಿಗಳ ನಾನಾವಿಧದಲ್ಲಿ ಕಾಣುವ ಮಿಂಚುಗಳೊ ಎನ್ನುವಂತೆ ಅಚ್ಚರಿಯಂತೆ ಕಾಣುವ ರಾಜಮಾರ್ಗದ ಎರಡುಬದಿಯಲ್ಲಿ ಇರುವ ಸ್ಥಿರವಾದ ಉಪ್ಪರಿಗೆಗಳ ಓರಣವಾಗಿರುವ ಪ್ರತಿಸ್ಥಳದಲ್ಲಿಯೂ, ಅಗಲವಾದ ಕಣ್ಣುಗಳ ಹುಡುಗಿಯರ ಕಣ್ಣೋಟದ ಕಿರಣಗಳು (ದ್ವಾರಕಾನಗರಕ್ಕೆ) ಸೌಂದರ್ಯವನ್ನು ನೀಡಿದವು.

(ಪದ್ಯ -೧೦)XXIII

ಪದ್ಯ :-:೧೧[ಸಂಪಾದಿಸಿ]

ವಿರಚಿಸಿದ ಕರುವಾಡದಿಕ್ಕೆಲದ ನವರತ್ನ | ಪರಿಖಚಿತ ಕನಕತೋರಣಮೊಪ್ಪಿದುದು ರಜತ | ಗಿರಿಶೀಖರಮಂ ಸಾರ್ದ ಶೂಭ್ರಾಭ್ರದೊಳ್ ಮೂಡಿದಮರೇಂದ್ರಚಾಪದಂತೆ ||
ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ಸೀ | ಗುರಿಚವರಿಗಳ ಸಾಲ್ಗಳೆಸೆದುವು ಗಗನಮೆಂಬ | ಕರಿಯ ಸಿಂಗರಿಸಿದರೊ ಪರಿಮಳೋತ್ಸವಕೆ ಪೊರಮಡುವನಿಲರಾಜಂಗೆನೆ ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ವಿರಚಿಸಿದ(ಕಟ್ಟಿದ) ಕರುವಾಡದಿ(ಬಿಸಿಲು ಮಹಡಿ) ಇಕ್ಕೆಲದ ನವರತ್ನ ಪರಿಖಚಿತ ಕನಕತೋರಣಂ=[ಕಟ್ಟಿರುವ ಬಿಸಿಲುಮಹಡಿಯ ಎರಡೂ ಕಡೆ ನವರತ್ನ ಕೆತ್ತಿದ ಚಿನ್ನದ ತೋರಣವು ] ಒಪ್ಪಿದುದು ರಜತ ಗಿರಿಶೀಖರಮಂ ಸಾರ್ದ ಶುಭ್ರ ಅಭ್ರದೊಳ್(ಮೋಡ) ಮೂಡಿದ ಅಮರೇಂದ್ರಚಾಪದಂತೆ(ಕಾಮನಬಿಲ್ಲು)=[ಚಂದವಾಗಿ ಕಾಣುತ್ತಿತ್ತು, ಹೇಗೆಂದರೆ, ಹಿಮಾಲಯದ ಶೀಖರವನ್ನು ಸಮೀಪಿಸಿದ ಬಿಳಿಮೋಡದಲ್ಲಿ ಮೂಡಿದ ಕಾಮನಬಿಲ್ಲಿನಂತೆ ಇತ್ತು.,] ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ಸೀಗುರಿ ಚವರಿಗಳ ಸಾಲ್ಗಳು ಎಸೆದುವು=[ನಾನಾಬಗಯ ಗುಡಿ ಕಳಸ ಕನ್ನಡಿ ಪತಾಕೆ ಚಾಮರ ಚವರಿಗಳ ಸಾಲುಗಳು ಕಾಣುತ್ತದ್ದವು] ಗಗನಮೆಂಬ ಕರಿಯ ಸಿಂಗರಿಸಿದರೊ ಪರಿಮಳೋತ್ಸವಕೆ ಪೊರಮಡುವ ಅನಿಲರಾಜಂಗೆ ಎನೆ=[ಪರಿಮಳದ ಉತ್ಸವಕ್ಕೆ ಹೊರಡುತ್ತಿರುವ ವಾಯುರಾಜನಿಗೆ ಗಗನವೆನ್ನುವ ಆನೆಯನ್ನು ಸಿಂಗರಿಸಿದ್ದಾರೋ ಎನ್ನುವಂತೆ ಇತ್ತು.]
 • ತಾತ್ಪರ್ಯ:*ಕಟ್ಟಿರುವ ಬಿಸಿಲುಮಹಡಿಯ ಎರಡೂ ಕಡೆ ನವರತ್ನ ಕೆತ್ತಿದ ಚಿನ್ನದ ತೋರಣವು ಚಂದವಾಗಿ ಕಾಣುತ್ತಿತ್ತು, ಹೇಗೆಂದರೆ, ಹಿಮಾಲಯದ ಶೀಖರವನ್ನು ಸಮೀಪಿಸಿದ ಬಿಳಿಮೋಡದಲ್ಲಿ ಮೂಡಿದ ಕಾಮನಬಿಲ್ಲಿನಂತೆ ಇತ್ತು. ನಾನಾಬಗಯ ಗುಡಿ ಕಳಸ ಕನ್ನಡಿ ಪತಾಕೆ ಚಾಮರ ಚವರಿಗಳ ಸಾಲುಗಳು ಕಾಣುತ್ತಿದ್ದವು. ಅವು ಪರಿಮಳದ ಉತ್ಸವಕ್ಕೆ ಹೊರಡುತ್ತಿರುವ ವಾಯುರಾಜನಿಗೆ ಗಗನವೆನ್ನುವ ಆನೆಯನ್ನು ಸಿಂಗರಿಸಿದ್ದಾರೋ ಎನ್ನುವಂತೆ ಇತ್ತು.

(ಪದ್ಯ -೧೧)XXIII

ಪದ್ಯ :-:೧೨[ಸಂಪಾದಿಸಿ]

ಹಮ್ರ್ಯಾಗ್ರದೊಳ್ ವಿರಾಜಿಪ ಚಂದ್ರಶಾಲೆಗಳ | ನಿರ್ಮಲಸ್ಥಳದೊಳೇಕಾಂತದಿಂ ತನುಲತೆಯ | ಘರ್ಮಶ್ರಮಂಗಳೆವ ಸೊಕ್ಕು ಜೌವನದ ನೀರಜಗಂಧಿಯರ ಕೊಬ್ಬಿದ ||
ಪೆರ್ಮೊಲೆಗಳೆಡೆಯ ಚಂದನದಣ್ಪ ಮಲ್ಲಿಗೆಯ | ಲರ್ಮುಡಿಯ ತನಿಗಂಪ ನೆರವಿ ನೆರವಿಗೆ ತಂಬೆ | ಲರ್ಮೆಲ್ಲಮೆಲ್ಲನೆ ಪರಪುತಿರ್ದುದಾ ರಾಜಮಾರ್ಗದೊಳ್ ಪಿಸುಣರಂತೆ ||12|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಹಮ್ರ್ಯಾಗ್ರದೊಳ್(ಉಪ್ಪರಿಗೆಯಲ್ಲಿ) ವಿರಾಜಿಪ ಚಂದ್ರಶಾಲೆಗಳ ನಿರ್ಮಲಸ್ಥಳದೊಳ್=[ಉಪ್ಪರಿಗೆಯಲ್ಲಿ) ಶೋಭಿಸುವ ಚಂದ್ರಶಾಲೆಗಳ ಶುಚಿಯಾದ ತಾಣದಲ್ಲಿ ] ಏಕಾಂತದಿಂ ತನುಲತೆಯ ಘರ್ಮ(ಬಿಸಿ)ಶ್ರಮಂ ಕಳೆವ ಸೊಕ್ಕು ಜೌವನದ ನೀರಜಗಂಧಿಯರ=[ಏಕಾಂತದಲ್ಲಿ ಬಳುಕುವ ದೇಹದ ಸೆಖೆಯ ಆಯಾಸವನ್ನು ಕಳೆಯುತ್ತಿರುವ, ಏರು ಪ್ರಾಯದ ಹೆಂಗಸರ,] ಕೊಬ್ಬಿದ ಪೆರ್ಮೊಲೆಗಳ ಎಡೆಯ ಚಂದನ ದಣ್ಪ ಮಲ್ಲಿಗೆಯಲರ್ಮುಡಿಯ ತನಿಗಂಪ ನೆರವಿ ನೆರವಿಗೆ=[ಬಿರುಸಿನ ಸ್ಥನಗಳ ಬಳಿಯಲ್ಲಿ ಚಂದನ ತಂಂಪು ಗಂಧವನ್ನೂ ಮಲ್ಲಿಗೆಯಹೂವಿನಗುಚ್ಚದ ಸುವಾಸನೆಯನ್ನು ಬರುವ ಜನರಿಗೆ] ತಂಬೆಲರ್ ಮೆಲ್ಲಮೆಲ್ಲನೆ ಪರಪುತಿರ್ದುದಾ ರಾಜಮಾರ್ಗದೊಳ್ ಪಿಸುಣರಂತೆ=[ತಂಗಾಳಿಯು ರಾಜಮಾರ್ಗದಲ್ಲಿ ತುಂಟನಂತೆ ಮೆಲ್ಲಮೆಲ್ಲನೆ ಹರಡುತ್ತಿತ್ತು.]
 • ತಾತ್ಪರ್ಯ:*ಉಪ್ಪರಿಗೆಯಲ್ಲಿ ಶೋಭಿಸುವ ಚಂದ್ರಶಾಲೆಗಳ ಶುಚಿಯಾದ ತಾಣದಲ್ಲಿ ಏಕಾಂತದಲ್ಲಿ ಬಳುಕುವ ದೇಹದ ಸೆಖೆಯ ಆಯಾಸವನ್ನು ಕಳೆಯುತ್ತಿರುವ, ಏರು ಪ್ರಾಯದ ಹೆಂಗಸರ, ಬಿರುಸಿನ ಸ್ಥನಗಳ ಬಳಿಯಲ್ಲಿ ಪೂಸಿದ ಚಂದನ ತಂಪು ಗಂಧದ ಮತ್ತು ಅವರ ಮಲ್ಲಿಗೆಯಹೂವಿನಗುಚ್ಚದ ಸುವಾಸನೆಯನ್ನು ರಾಜಮಾರ್ಗದಲ್ಲಿ ಬರುವ ಜನರಿಗೆ ತಂಗಾಳಿಯು ತುಂಟನಂತೆ ಮೆಲ್ಲಮೆಲ್ಲನೆ ಹರಡುತ್ತಿತ್ತು.

(ಪದ್ಯ -೧೨)

ಪದ್ಯ :-:೧೩[ಸಂಪಾದಿಸಿ]

ದುರ್ಗಮ ಜಡಾಶ್ರಯಮನುಗ್ರಜಂತುಗಳ ಸಂ | ಸರ್ಗಮಂ ಬಿಟ್ಟು ಮುಕ್ತಾಳಿ ವಿದ್ರುಮ ರತ್ನ | ವರ್ಗಂಗಳಿಲ್ಲಿ ಸೇರಿದುವೆಂಬೊಲೊಪ್ಪಿದವನಘ್ರ್ಯಮಣಿವಸರಂಗಳು ||
ಭರ್ಗಸಖನೊಲಿದು ನವನಿಧಿಗಳಂ ಧಾತ್ರಿಯ ಜ | ನರ್ಗೆ ವಿಸ್ತರಿಸಿ ತೋರಿಸಿದನೆನೆ ಚಿನ್ನವರ | ದರ್ಗುಡಿಸಿಗೊಂಡಿರ್ಪ ರಾಸಿಪೊನ್ಗಳ್ ಪಿಂಗದಂಗಡಿಗಳೆಸೆದಿರ್ದುವು ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ದುರ್ಗಮ ಜಡಾ(ಮಂದಪ್ರಾಣಿಗಳುಶ್ರಯಮನು ಉಗ್ರಜಂತುಗಳ ಸಂಸರ್ಗಮಂ ಬಿಟ್ಟು=[ ಮೊಸಳೆ ಮೀನು ಉಗ್ರ ಜಂತುಗಳ ಸಂಸರ್ಗವನ್ನು ಮೊದಲಾದ ಮಂದಪ್ರಾಣಿಗಳ ಆಶ್ರಯವಾದ ದುರ್ಗಮವಾದ ಸಮುದ್ರವನ್ನು ಬಿಟ್ಟು,], ಮುಕ್ತಾಳಿ ವಿದ್ರುಮ(ಹವಳ) ರತ್ನ ವರ್ಗಂಗಳಿಲ್ಲಿ ಸೇರಿದುವೆಂಬೊಲ್ ಒಪ್ಪಿದವು ಅನಘ್ರ್ಯಮಣಿ ವಸರಂಗಳು(ಅಂಗಡಿ)=[ ಮುತ್ತುಗಳ ರಾಶಿ ಹವಳ ಬಗೆಬಗೆಯ ರತ್ನವರ್ಗಗಳು ದ್ವರಕಾಪುರಿಯ ರಾಜಬೀದಿಯಲ್ಲಿ ಸೇರಿದುವು ಎಂಬಂತೆ ಇದ್ದವು, ಅನರ್ಘ್ರ್ಯಮಣಿಗಳ ಅಂಗಡಿಗಳು], ಭರ್ಗಸಖನು(ಶಿವನ ಮಿತ್ರ ಕುಬೇರ) ಒಲಿದು ನವನಿಧಿಗಳಂ ಧಾತ್ರಿಯ ಜನರ್ಗೆ ವಿಸ್ತರಿಸಿ ತೋರಿಸಿದನು ಎನೆ ಚಿನ್ನವರದರ್ (ಚಿನ್ನವನ್ನು ವರೆಯಿಡುವವರು)ಗುಡಿಸಿಗೊಂಡಿರ್ಪ ರಾಸಿಪೊನ್ಗಳ್ ಪಿಂಗದ(ಹಿಂಗದ) ಅಂಗಡಿಗಳೆಸೆದಿರ್ದುವು=[ಶಿವನ ಮಿತ್ರ ಕುಬೇರನು ಒಲಿದು ಒಂಭತ್ತುಬಗೆಯ ನಿಧಿಗಳನ್ನು ಭೂಮಿಯ ಜನರಿಗೆ ವಿವರವಾಗಿ ತೋರಿಸಿದನೋ ಎನ್ನುವಂತೆ ಚಿನ್ನವನ್ನು ವರೆಯಿಡುವ ವೈಶ್ಯರು ಹರಡಿಕೊಂಡಿರುವ ರಾಸಿ ಹೊನ್ನುಗಳಿರುವ ಕೊರತೆ ಇಲ್ಲದ, ಅಂಗಡಿಗಳು ಶೋಭಿಸುತ್ತಿತ್ತು]
 • ತಾತ್ಪರ್ಯ:* ಮೊಸಳೆ ಮೀನು ಉಗ್ರ ಜಂತುಗಳ ಸಂಸರ್ಗವನ್ನು ಮೊದಲಾದ ಮಂದಪ್ರಾಣಿಗಳ ಆಶ್ರಯವಾದ ದುರ್ಗಮವಾದ ಸಮುದ್ರವನ್ನು ಬಿಟ್ಟು, ಮುತ್ತುಗಳ ರಾಶಿ ಹವಳ ಬಗೆಬಗೆಯ ರತ್ನವರ್ಗಗಳ ಅನರ್ಘ್ರ್ಯಮಣಿಗಳ ಅಂಗಡಿಗಳು ದ್ವರಕಾಪುರಿಯ ರಾಜಬೀದಿಯಲ್ಲಿ ಸೇರಿದುವು ಎಂಬಂತೆ ಇದ್ದವು, ಶಿವನ ಮಿತ್ರ ಕುಬೇರನು ಒಲಿದು ಒಂಭತ್ತು ಬಗೆಯ ನಿಧಿಗಳನ್ನು ಭೂಮಿಯ ಜನರಿಗೆ ವಿವರವಾಗಿ ತೋರಿಸಿದನೋ ಎನ್ನುವಂತೆ ಚಿನ್ನವನ್ನು ವರೆಯಿಡುವ ವೈಶ್ಯರು ಹರಡಿಕೊಂಡಿರುವ ರಾಸಿ ಹೊನ್ನುಗಳಿರುವ ಕೊರತೆ ಇಲ್ಲದ, ಅಂಗಡಿಗಳು ಶೋಭಿಸುತ್ತಿದ್ದವು.

(ಪದ್ಯ -೧೩)

ಪದ್ಯ :-:೧೪[ಸಂಪಾದಿಸಿ]

ದಾನವಧ್ವಂಸಿಗೀ ದ್ವಾರಕಾಪುರಿ ರಾಜ | ಧಾನಿ ಗಡ ಸಕಲವೈಭವದೊಳಾತನ ರಾಣಿ | ತಾನಿರದಿಹಳೆ ಲಕ್ಷ್ಮಿ ಮೇಣಿವಳುಮರಸಿಯಲ್ಲವೆ ಧರಣಿ ತನ್ನೊಳಿರ್ದ ||
ನಾನಾ ಸುವಸ್ತುಗಳನೊದವಿಸದಿಹಳೆ ಚೋದ್ಯ | ಮೇನೆನೆ ವಣಿಗ್ವಾಟಪಂಕ್ತಿಗಳ್ ಶೋಭಾಯ | ಮಾನವಾದುವು ರಾಜಮಾರ್ಗದೊಳ್ ಬಹಳ ಧಸಂಪತ್ಸಮಾಜದಿಂದೆ ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ದಾನವಧ್ವಂಸಿಗೆ(ಕೃಷ್ಣ) ಈ ದ್ವಾರಕಾಪುರಿ ರಾಜಧಾನಿ ಗಡ ಸಕಲವೈಭವದೊಳು ಆತನ ರಾಣಿ ತಾನು ಇರದೆ ಇಹಳೆ ಲಕ್ಷ್ಮಿ,=[ಕೃಷ್ಣನಿಗೆ ಈ ದ್ವಾರಕಾಪುರವು ರಾಜಧಾನಿ ಗಡ! ಸಕಲ ವೈಭವದಲ್ಲಿ ಆತನ ರಾಣಿಯಾದ ಲಕ್ಷ್ಮಿ ತಾನು ಇರದೇ ಇರುವಳೇ!,] ಮೇಣ್ ಇವಳುಂ ಅರಸಿಯಲ್ಲವೆ ಧರಣಿ ತನ್ನೊಳ್ ಇರ್ದ ನಾನಾ ಸುವಸ್ತುಗಳನು ಒದವಿಸದೆ ಇಹಳೆ ಚೋದ್ಯಂ ಏನೆನೆ=[ಮೇಲಾಗಿ ಇವಳು ರಾಣಿಯಲ್ಲದೆ ಮತ್ತೊಬ್ಬ ರಾಣಿ ಭೂಮಿ ತನ್ನಲ್ಲಿ ಇದ್ದ ನಾನಾ ಉತ್ತಮ ವಸ್ತುಗಳನ್ನು ಇಲ್ಲಗೆ ಒದಗಿಸದೆ ಇರುವಳೇ? ಇದರಲ್ಲಾ ಶ್ಚರ್ಯ ಏನಿದೆ, ಅಚ್ಚರಿ ಇಲ್ಲ. ] ವಣಿಗ್ವಾಟ (ವ್ಯಾಪಾರಿಗಳ ಅಂಗಡಿ ಸಾಲು)ಪಂಕ್ತಿಗಳ್ ಶೋಭಾಯಮಾನವಾದುವು ರಾಜಮಾರ್ಗದೊಳ್ ಬಹಳ ಧಸಂಪತ್ಸಮಾಜದಿಂದೆ=[ವ್ಯಾಪಾರಿಗಳ ಅಂಗಡಿ ಸಾಲುಗಳು ಶೋಭಾಯಮಾನವಾಗಿ ರಾಜಮಾರ್ಗದಲ್ಲಿ ಬಹಳ ಧಸಂಪತ್ತಿನಿಂದ ತುಂಬಿದ್ದವು]
 • ತಾತ್ಪರ್ಯ:*ಕೃಷ್ಣನಿಗೆ ಈ ದ್ವಾರಕಾಪುರವು ರಾಜಧಾನಿ ಗಡ! ಸಕಲ ವೈಭವದಲ್ಲಿ ಆತನ ರಾಣಿಯಾದ ಲಕ್ಷ್ಮಿ ತಾನು ಇರದೇ ಇರುವಳೇ!; ಮೇಲಾಗಿ ಇವಳು ರಾಣಿಯಲ್ಲದೆ ಮತ್ತೊಬ್ಬ ರಾಣಿ ಭೂದೇವಿ ತನ್ನಲ್ಲಿ ಇದ್ದ ನಾನಾ ಉತ್ತಮ ವಸ್ತುಗಳನ್ನು ಇಲ್ಲಿಗೆ ಒದಗಿಸದೆ ಇರುವಳೇ? ಇದರಲ್ಲಿ ಆಶ್ಚರ್ಯ ಏನಿದೆ, ಅಚ್ಚರಿ ಇಲ್ಲ. ವ್ಯಾಪಾರಿಗಳ ಅಂಗಡಿ ಸಾಲುಗಳು ಶೋಭಾಯಮಾನವಾಗಿ ರಾಜಮಾರ್ಗದಲ್ಲಿ ಬಹಳ ಧಸಂಪತ್ತಿನಿಂದ ತುಂಬಿದ್ದವು]

(ಪದ್ಯ -೧೪)

ಪದ್ಯ :-:೧೫[ಸಂಪಾದಿಸಿ]

ಸವಿಯೆ ಪ್ರಿಯರು ಆಗಮದ ರಾಗ ಮದರಾಗ ಮದ\ ನವಿಲಾಸವೆಂದು ತಾಂಬೂಲಮಂ ತೋರ್ಪರ್ ಮು | ಡಿವೊಡೆ ಬೇಕಾದಲರ್ಕಾದಲರ್ಕಾದಲಕ್ಕಂಗಜಾಹವದೊಳೆಂದು ||
ನವಸುಗಂಧಾಮೋದಕುಸುಮಂಗಳಂ ತೋರಿ | ಸುವರೊಂದುವೇಕಾಂತಕಾಂತಕಾಂತರನೊಲಿಸ | ಲಿವು ಬಲ್ಲುವೆಂದು ಪರಿಮಳದ ಕರಡಿಗೆಗಳಂ ತೋರ್ಪರ್ ಪಲರ್ ವಿಟರ್ಗೆ ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • (->$: ಪಲರ್ ವಿಟರ್ಗೆ =ಹಲವು/ ಕೆಲವು ವಿಟರಿಗೆ/ ಜಾರರಿಗೆ) (ತಾಂಬೂಲವನ್ನು) ಸವಿಯೆ ಪ್ರಿಯರು ಆಗಮದ ರಾಗ ಮದರಾಗಮದ ನವಿಲಾಸವೆಂದು ತಾಂಬೂಲಮಂ ತೋರ್ಪರ್=[ತಾಂಬೂಲವನ್ನು ಸವಿದರೆ, ಆಗಮಿಸಿದ ಪ್ರಿಯರ ರಾಗ=ಬರುವಿಕೆಯಿಂದಾದ ಪ್ರೀತಿಯು ಮದರಾಗ= ಮದವೇರಿದ ಪ್ರೀತಿಯಾಗಿ, ಮದನವಿಲಾಸವೆಂದು= ಕಾಮಕೂಟದ ವಿಲಾಸದ ಸುಖಕ್ಕೆ, ಸಂಕೇತವಾಗಿ ತಾಂಬೂಲವನ್ನು ತೋರಿಸುವರು], ಮುಡಿವೊಡೆ ಬೇಕಾದ ಅಲರ್ ಕಾದ ಅಲರ್ ಕಾದಲರ್ಕೆ ಆದ ಅಲರ್ ಕಾದಲಕ್ಕೆ ಅಂಗಜ ಆಹವದೊಳು ಎಂದು ನವಸುಗಂಧ ಆಮೋದ ಕುಸುಮಂಗಳಂ ತೋರಿ= [ಮುಡಿವೊಡೆ ಬೇಕಾದ ಹೂವು, ಬಿಸಿಯಾದ ಬಾಣದಂತೆ, ಹೂವಿನಿಂದ ಹೊಡೆದಾಡಲು, ಅಂಗಜ/ಕಾಮನ ಆಹವದೊಳು/ಯುದ್ಧದಲ್ಲಿ,/ ಕಾಮದಾಟದಲ್ಲಿ, ಎಂದು ಹೊಸಸುಗಂಧದ ಆಮೋದ ಕುಸುಮಂಗಳಂ ತೋರಿ=[ಮುಡಿಯಲು ಬೇಕಾದ ಹೂವು, ಬಿಸಿಯಾದ ಬಾಣದಂತೆ, ಹೂವಿನಿಂದ ಕಾಮದಾಟದಲ್ಲಿ ಹೊಡೆದಾಡಲು, ಎಂದು ಹೊಸುಗಂಧದ ಆಮೋದದ/ಸಂತೋಷವೆಂಬ ಹೂವುಗಳನ್ನು ತೋರಿಸವರು], ಒಂದುವ ಏಕಾಂತ ಕಾಂತ(ಆಕರ್ಷಣೆಯಿಂದ) ಕಾಂತರನ್ನು/ಬಂದ ಪ್ರೇಮಿಯನ್ನು ಒಲಿಸಲು ಇವು ಬಲ್ಲುವೆಂದು ಪರಿಮಳದ ಕರಡಿಗೆಗಳಂ ತೋರ್ಪರ್=[ಹೊಂದಿಕೊಳ್ಳುವ ಏಕಾಂತದಲ್ಲಿ ಕರೆಗೆ ಬಯಸಿಬಂದ ಪುರುಷರನ್ನು ಒಲಿಸಲು ಇವು ಬಲ್ಲುವೆಂದು ಪರಿಮಳದ ಕರಡಿಗೆಗಳನ್ನು ತೋರ್ಪರ್ ] ($<-:ಪಲರ್ ವಿಟರ್ಗೆ)
 • ತಾತ್ಪರ್ಯ:*ಹಲವು ವಿಟರಿಗೆ ಅಥವಾ ಜಾರರಿಗೆ ತಾಂಬೂಲವನ್ನು ಸವಿದರೆ, ಆಗಮಿಸಿದ ಪ್ರಿಯರ ಬರುವಿಕೆಯಿಂದಾದ ಪ್ರೀತಿಯು ಹೆಚ್ಚಿ ಮದವೇರಿದ ಪ್ರೀತಿಯಾಗಿ,ನಂತರ ಕಾಮಕೂಟದ ವಿಲಾಸದ ಸುಖಕ್ಕೆ ಸಂಕೇತವಾಗಿ ತಾಂಬೂಲವನ್ನು ತೋರಿಸುವರು, ಮುಡಿಯಲು ಬೇಕಾದ ಹೂವು, ಬಿಸಿಯಾದ ಬಾಣದಂತೆ, ಹೂವಿನಿಂದ ಕಾಮದಾಟದಲ್ಲಿ ಹೊಡೆದಾಡಲು, ಹೊಸಸುಗಂಧದ ಆಮೋದದ/ಸಂತೋಷವೆಂಬ ಹೂವುಗಳನ್ನು ತೋರಿಸವರು, ಇಬ್ಬರೂ ಸೇರಿ ಹೊಂದಿಕೊಳ್ಳುವ ಏಕಾಂತದಲ್ಲಿ ತಮ್ಮಕರೆಗೆ ಬಯಸಿ ಬಂದ ಪುರುಷರನ್ನು ಒಲಿಸಲು ಇವು ಬಲ್ಲುವೆಂದು ಪರಿಮಳದ ಕರಡಿಗೆಗಳನ್ನು ತೋರ್ಪರ್ ]

(ಪದ್ಯ -೧೫)XXIV

ಪದ್ಯ :-:೧೬[ಸಂಪಾದಿಸಿ]

ನಸುನಗೆಯೊಳರೆವಿರಿದ ಮಲ್ಲಿಗೆಯನುರೆಪೊಳೆವ | ದಶನದೊಳ್ ಕುಂದಮಂ ಮೊಗದೊಳರವಿಂದಮಂ | ಮಿಸುಪ ನಳಿತೋಳೊಳ್ ಶಿರೀಷಮಾಲೆಯನೆಸೆವನಾಸದೊಳ್ ಸಂಪಗೆಯನು ||
ಎಸಳ್ಗಣ್ಣೋತುತ್ಪಲನುರ್ಗುಳೊಳ್ ಕೇತಕಿಯ | ನೊಸೆದಿರಿಸಿ ಕೊಂಡುಳಿದಲರ್ಗಳಂ ಮಾರ್ವವೊಲ್ | ಕುಸುಮದ ಪಸರದೊಳೊಪ್ಪಿದರಲ್ಲಿ ಪೂವಡಿಗವೆಣ್ಗಳದನೇವೇಳ್ವೆನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ನಸುನಗೆಯೊಳ್ ಅರೆವಿರಿದ ಮಲ್ಲಿಗೆಯನು ಉರೆ ಪೊಳೆವ ದಶನದೊಳ್ ಕುಂದಮಂ=[ನಸುನಗೆಯಲ್ಲಿ ಅರೆಬಿರಿದ/ ಅರಳಿದ ಮಲ್ಲಿಗೆಯನ್ನೂ,ಮತ್ತೆ ಹೊಳೆವ ಹಲ್ಲುಗಳಲ್ಲಿ ಗಂಡುಮಲ್ಲಿಗೆಯನ್ನೂ,] ಮೊಗದೊಳ್ ಅರವಿಂದಮಂ ಮಿಸುಪ ನಳಿತೋಳೊಳ್ ಶಿರೀಷ(ಬೆಟ್ಟ ಮಲ್ಲಿಗೆ)ಮಾಲೆಯನು=[ಮುಖದಲ್ಲಿ ಕಮಲವನ್ನೂ, ನುಣ್ಣಗೆಮಿಂಚುವ ನಳಿತೋಳಲ್ಲಿ ಬೆಟ್ಟ ಮಲ್ಲಿಗೆ ಮಾಲೆಯನ್ನೂ], ಎಸೆವ ನಾಸದೊಳ್ ಸಂಪಗೆಯನು ಎಸಳ್ ಕಣ್ಣೋಳ್ ಉತ್ಪಲವನು ಉಗುರ್ಗಳೊಳ್ ಕೇತಕಿಯ ನು=[ಚಂದದ ಮೂಗಿನಲ್ಲಿ ಸಂಪಗೆಯನ್ನೂ, ವಿಶಾಲಕಣ್ಣಗಳಲ್ಲಿ ಕಮಲದ ಎಸಳನ್ನೂ, ಉಗುರುಗಳಲ್ಲಿ ಕೇದಿಗೆಯ ಹೂವನ್ನೂ,] ಕೇತಕಿಯನು ಒಸೆದಿರಿಸಿರಿಸಿಕೊಂಡು ಉಳಿದಲರ್ಗಳಂ ಮಾರ್ವವೊಲ್=[ಕೇದಿಗೆಯ ಹೂವನ್ನೂ ಕಾಣುವಂತೆ ತಾವೇ ಇಸಿರಿಸಿಕೊಂಡು ಉಳಿದ ಹೂವುಗಳನ್ನು ಮಾರುವವರಂತೆ ] ಕುಸುಮದ ಪಸರದೊಳ್ ಒಪ್ಪಿದರಲ್ಲಿ ಪೂವಡಿಗವೆಣ್ಗಳ್ ಅದನು ಏವೇಳ್ವೆನು=[ಹೂವಿನ ಅಂಗಡಿಯಲ್ಲಿ ಹೂವಾಡಿಗ ಹೆಣ್ಣುಗಳು ಆರೀತಿ ಇದ್ದರು ಅದನ್ನು ಏನೆಂದು ಹೇಳಲಿ]. ಸಾರಾಂಶ:ಆಲ್ಲಿ ಹೂವು ಮಾರುವ ಹೆಂಗಸರ ಅಂಗಾಂಗಗಳು ಬಗೆ ಬಗೆಯ ಹೂವುಗಳನ್ನು ಹೋಲುತ್ತಿದ್ದವು.
 • ತಾತ್ಪರ್ಯ:*ನಸುನಗೆಯಲ್ಲಿ ಅರೆಬಿರಿದ/ ಅರಳಿದ ಮಲ್ಲಿಗೆಯನ್ನೂ,ಮತ್ತೆ ಹೊಳೆವ ಹಲ್ಲುಗಳಲ್ಲಿ ಗಂಡುಮಲ್ಲಿಗೆಯನ್ನೂ, ಮುಖದಲ್ಲಿ ಕಮಲವನ್ನೂ, ನುಣ್ಣಗೆಮಿಂಚುವ ನಳಿತೋಳಲ್ಲಿ ಬೆಟ್ಟ ಮಲ್ಲಿಗೆ ಮಾಲೆಯನ್ನೂ ಚಂದದ ಮೂಗಿನಲ್ಲಿ ಸಂಪಗೆಯನ್ನೂ, ವಿಶಾಲಕಣ್ಣಗಳಲ್ಲಿ ಕಮಲದ ಎಸಳನ್ನೂ, ಉಗುರುಗಳಲ್ಲಿ ಕೇದಿಗೆಯ ಹೂವನ್ನೂ, ಕೇದಿಗೆಯ ಹೂವನ್ನೂ ಕಾಣುವಂತೆ ತಾವೇ ಇಸಿರಿಸಿಕೊಂಡು ಉಳಿದ ಹೂವುಗಳನ್ನು ಮಾರುವವರಂತೆ ಹೂವಿನ ಅಂಗಡಿಯಲ್ಲಿ ಹೂವಾಡಿಗ ಹೆಣ್ಣುಗಳು ಇದ್ದರು ಅದನ್ನು ಏನೆಂದು ಹೇಳಲಿ. ಸಾರಾಂಶ:ಆಲ್ಲಿ ಹೂವು ಮಾರುವ ಹೆಂಗಸರ ಅಂಗಾಂಗಗಳು ಬಗೆ ಬಗೆಯ ಹೂವುಗಳನ್ನು ಹೋಲುತ್ತಿದ್ದವು.

(ಪದ್ಯ -೧೬)

ಪದ್ಯ :-:೧೭[ಸಂಪಾದಿಸಿ]

ಕಬ್ಬವಿಲ್ ತುಂಬಿವೆದೆ ಪೂಸರಲ್ ಪೂಣ್ದಿಸಲ್ | ನಿಬ್ಬರಮಿದೆಂದು ಮದನಂ ಮಾಲೆಗಾರ್ತಿಯರ | ಹುಬ್ಬೆಂಬ ಚಾಪಮಂ ಕುರುಳೆಂಬ ನಾರಿಯಂ ಕಣ್ಣೆಂಬ ಕೂರ್ಗಣೆಯನು ||
ಉಬ್ಬರದ ಸಾಹಸದೊಳಳವಡಿಸಿಕೊಂಡು ಬಿಡ | ದಬ್ಬರಿಸಿ ಸೋವಿ ತಂದವರ ಬಲ್ಮೊಲೆಯೆಂಬ | ಹೆಬ್ಬೆಟ್ಟದೆಡೆಯಿರುಬಿನೊಳ್ ಕೆಡಪುತಿಹನಲ್ಲಿ ವಿಟ ಪಕ್ಷಿಮೃಗಕುಲವನು ||17||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಕಬ್ಬವಿಲ್ ತುಂಬಿವೆದೆ ಪೂಸರಲ್ ಪೂಣ್ದಿಸಲ್ ನಿಬ್ಬರಂ ಅದೆಂದು ಮದನಂ=[ಕಬ್ಬಿನ ಬಿಲ್ಲು, ತುಂಬಿಯ ಹಗ್ಗ, ಹೂವಿನ ಬಾಣ ಜೋಡಿಸಿ ಯುದ್ಧಮಾಡಿ ಗೆಲ್ಲುವುದು ಆಗದು ಎಂದು ಮನ್ಂಥನು, ] ಮಾಲೆಗಾರ್ತಿಯರ ಹುಬ್ಬೆಂಬ ಚಾಪಮಂ ಕುರುಳೆಂಬ ನಾರಿಯಂ ಕಣ್ಣೆಂಬ ಕೂರ್ ಗಣೆಯನು=[ಮಾಲೆಗಾರ್ತಿಯರ ಹುಬ್ಬು ಎಂಬ ಬಿಲ್ಲನ್ನು ತಲೆಯ ಮುಂಗುರುಳು ಎಂಬ ದಾರದ ನಾಣುಮಾಡಿಕೊಂಡು ಕಣ್ಣೆಂಬ ಚೂಪಾದ ಬಾಣವನ್ನು], ಉಬ್ಬರದ ಸಾಹಸದೊಳಳವಡಿಸಿಕೊಂಡು ಬಿಡ ದಬ್ಬರಿಸಿ ಸೋವಿ(ಬೇಟೆಯನ್ನು ಹುಡುಕು) ತಂದವರ ಬಲ್ಮೊಲೆಯೆಂಬ ಹೆಬ್ಬೆಟ್ಟದೆಡೆಯಿರುಬಿನೊಳ್= [ಉತ್ಸಾಹದಿಂದ ಸಾಹಸಪಟ್ಟು ಳವಡಿಸಿಕೊಂಡು ಆರ್ಭಟಮಾಡಿ, ಹುಡುಕಿತಂದುಮಾಲೆಗಾತಿಯರ ದೊಡ್ಡ ಸ್ಥನಗಳೆಂಬ ದೊಡ್ಡಬೆಟ್ಟಗಳ ನಡುವೆ ಇರುವ ಕಣಿವೆಯ ಸಂದಿಯಲ್ಲಿ] ಕೆಡಪುತಿಹನಲ್ಲಿ ವಿಟ ಪಕ್ಷಿಮೃಗಕುಲವನು[ವಿಟರರೆಂಬ ಪಕ್ಷಿಮೃಗಗಳ ಸಮೂಹವನ್ನು ಕೆಡವುತ್ತಿರುವನು ಎಂಬಂತಿದೆ.
 • ತಾತ್ಪರ್ಯ:*ಕಬ್ಬಿನ ಬಿಲ್ಲು, ತುಂಬಿಯ ಹಗ್ಗ, ಹೂವಿನ ಬಾಣ ಜೋಡಿಸಿ ಯುದ್ಧಮಾಡಿ ಗೆಲ್ಲುವುದು ಆಗದು ಎಂದು ಮನ್ಂಥನು, ಮಾಲೆಗಾರ್ತಿಯರ ಹುಬ್ಬು ಎಂಬ ಬಿಲ್ಲನ್ನು ತಲೆಯ ಮುಂಗುರುಳು ಎಂಬ ದಾರದ ನಾಣುಮಾಡಿಕೊಂಡು ಕಣ್ಣೆಂಬ ಚೂಪಾದ ಬಾಣವನ್ನು ಉತ್ಸಾಹದಿಂದ ಸಾಹಸಪಟ್ಟು ಅಳವಡಿಸಿಕೊಂಡು ಆರ್ಭಟಮಾಡಿ ಹುಡುಕಿತಂದು ಹೊಡೆದು,ಮಾಲೆಗಾತಿಯರ ದೊಡ್ಡ ಸ್ಥನಗಳೆಂಬ ದೊಡ್ಡಬೆಟ್ಟಗಳ ನಡುವೆ ಇರುವ ಕಣಿವೆಯ ಸಂದಿಯಲ್ಲಿ, ವಿಟರರೆಂಬ ಪಕ್ಷಿಮೃಗಗಳ ಸಮೂಹವನ್ನು ಕೆಡವುತ್ತಿರುವನು ಎಂಬಂತಿದೆ.

(ಪದ್ಯ -೧೭)

ಪದ್ಯ :-:೧೮[ಸಂಪಾದಿಸಿ]

ಮಲ್ಲಿಗೆಯಲರ್ವಿಡಿದು ಕೆಂಜಾಜಿಯೆಂದೀವ | ರುಲ್ಲಾಸದಿಂದೆ ನೀಲೋತ್ಪಲವನೆಳನಗೆಯ | ಸೊಲ್ಲಿಂದೆ ಕುಮುದಮೆಂದುಸಿರುವರ್ ಸುರಹೊನ್ನೆಯಲರ ಮಾಲೆಯ ನೊಪ್ಪುವ ||
ಸಲ್ಲಿಲಿತ ಕಾಯದ ಸರಿಸಕೆತ್ತಿ ಸರುಗಿಯೆಂ | ದೆಲ್ಲರ್ಗೆ ತೋರಿಸುವರರುಣ ತಾಮರಸಮಂ | ಚೆಲ್ಲಗಣ್ಗೊನೆಯೊಳೀಕ್ಷಿಸಿ ಪುಂಡರೀಕಮೆಂದೆಚ್ಚರಿಪರೆಳೆವೆಣ್ಗಳು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಮಲ್ಲಿಗೆಯ ಅಲರ್ ವಿಡಿದು ಕೆಂಜಾಜಿ ಎಂದೀವರು ಉಲ್ಲಾಸದಿಂದೆ=[ಮಲ್ಲಿಗೆಯ ಹೂವನ್ನು ಹಿಡಿದುಕೊಂಡು, ಕೆಂಜಾಜಿ ಎಂದು ಕೊಡುವರು ಸಂತೋಷದಿಂದ];ನೀಲೋತ್ಪಲವನು ಎಳನಗೆಯ ಸೊಲ್ಲಿಂದೆ ಕುಮುದಮೆಂದು ಉಸಿರುವರ್ =[ಕನ್ನೈದಿಲೆಯನ್ನು ಎಳನಗೆಯ ಮಾತಾಡುತ್ತಾ ಕಮಲದಹೂವು ಎಂದು ಹೇಳುವರು], ಸುರಹೊನ್ನೆಯಲರ ಮಾಲೆಯ ನೊಪ್ಪುವ ಸಲ್ಲಿಲಿತ ಕಾಯದ ಸರಿಸಕೆತ್ತಿ ಸರುಗಿಯೆಂದು ಎಲ್ಲರ್ಗೆ ತೋರಿಸುವರು=[ಸುರಹೊನ್ನೆಯ ಹೂವಿನ ಮಾಲೆಯನ್ನು ಒಪ್ಪುವ ಸುಂದರ ದೇಹದಸಮಕ್ಕೆ ಎತ್ತಿಹಿಡಿದು ಸರುಗಿಯ ಹೋಮಾಲೆ ಎಂದು ಎಲ್ಲರಿಗೆ ತೋರಿಸುವರು,] ತಾಮರಸಮಂ ಚೆಲ್ಲ ಕಣ್ಗ ಕೊನೆಯೊಳ್ ಈಕ್ಷಿಸಿ ಪುಂಡರೀಕಮೆಂದು ಅಚ್ಚರಿಪರು ಎಳೆವೆಣ್ಗಳು=[ಕೆಂಪು ತಾವರೆಯನ್ನು ಚೆಲುವಾದ ಕಣ್ಣಿ ಕೊನೆಯಲ್ಲಿ ನೋಡುತ್ತಾ ಬಿಳಿತಾವರೆ ಎಂದು ಅಲ್ಲಿಯ ಎಳೆಬಾಲೆಯರು ಅಶ್ಚರ್ಯ ಪಡಿಸುವರು. ಅವರು ಏನು ಹೇಳಿದರೂ ವಿಟರು ಬಾಲೆಯರ ಅದೇ ಬಗೆಯ ದೇಹ ಲಕ್ಷಣ ನೋಡಿ ಮರುಳಾಗಿ ಸಮ್ಮತಿಸುವರು.
 • ತಾತ್ಪರ್ಯ:*ಮಲ್ಲಿಗೆಯ ಹೂವನ್ನು ಹಿಡಿದುಕೊಂಡು, ಕೆಂಜಾಜಿ ಎಂದು ಕೊಡುವರು ಸಂತೋಷದಿಂದ; ಕನ್ನೈದಿಲೆಯನ್ನು ಎಳನಗೆಯ ಮಾತಾಡುತ್ತಾ ಕಮಲದಹೂವು ಎಂದು ಹೇಳುವರು, ಸುರಹೊನ್ನೆಯ ಹೂವಿನ ಮಾಲೆಯನ್ನು ಒಪ್ಪುವ ಸುಂದರ ದೇಹದಸಮಕ್ಕೆ ಎತ್ತಿಹಿಡಿದು ಸರುಗಿಯ ಹೋಮಾಲೆ ಎಂದು ಎಲ್ಲರಿಗೆ ತೋರಿಸುವರು, ಕೆಂಪು ತಾವರೆಯನ್ನು ಚೆಲುವಾದ ಕಣ್ಣಿ ಕೊನೆಯಲ್ಲಿ ನೋಡುತ್ತಾ ಬಿಳಿತಾವರೆ ಎಂದು ಅಲ್ಲಿಯ ಎಳೆ ಬಾಲೆಯರು ಅಶ್ಚರ್ಯ ಪಡಿಸುವರು. ಅವರು ಏನು ಹೇಳಿದರೂ ವಿಟರು ಬಾಲೆಯರ ಅದೇ ಬಗೆಯ ದೇಹ ಲಕ್ಷಣ ನೋಡಿ ಮರುಳಾಗಿ ಸಮ್ಮತಿಸುವರು.

(ಪದ್ಯ -೧೮)

ಪದ್ಯ :-:೧೯[ಸಂಪಾದಿಸಿ]

ಪಸರದೊಳ್ ಮಾರ್ವಲರ್ಗಳ ಸರಂಗಳ್ಗೆ ಸೊಗ | ಯಿಸುವ ಸುಯ್ಯೆಲರ ಕಂಪಿಂದೆ ಕಂಪೇರಿಸುವ | ರೊಸೆದು ಕೋಮಲದ ತನುವಲ್ಲರಿಯ ಸೊಂಪಿಂದೆ ಸೊಂಪುದೋರಿಸುತಿರ್ಪರು ||
ಲಸದವಯವಂಗಳಾಕೃತಿಯ ಚೆಲ್ವಿಕೆಯಿಂದೆ| ಪೊಸತೆನಿಪ ಚೆಲ್ವಿಕೆಯನೆಯ್ದೆ ನಲವಿಂದೆ ಕಾ | ಣಿಸುವರಲ್ಲಿ ಮಾಲೆಗಾರ್ತಿಯರ್ ಮದನಶರಮೂತಿಯರ್ ವಿರಹಿಗಳ್ಗೆ ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಪಸರದೊಳ್(ಅಂಗಡಿಗಳಸಾಲು ಜಾತ್ರೆ) ಮಾರ್ವ ಅಲರ್ಗಳ ಸರಂಗಳ್ಗೆ ಸೊಗಯಿಸುವ ಸುಯ್ಯೆಲರ ಕಂಪಿಂದೆ ಕಂಪೇರಿಸುವರು=[ಅಂಗಡಿಗಳಸಾಲು ಮತ್ತು ಜಾತ್ರೆಗಳಲ್ಲಿ ಮಾರುವ ಹೂವುಳ ಸರಗಳಿಗೆ ಮನಸೆಳೆಯುವ ತಮ್ಮ ಉಸುರಿನ ಪರಿಮಳದಿಂದ ಕಂಪನ್ನು ಕೊಡುವರು]; ಒಸೆದು ಕೋಮಲದ ತನುವಲ್ಲರಿಯ ಸೊಂಪಿಂದೆ ಸೊಂಪುದೋರಿಸುತ ಇರ್ಪರು=[(ಒಸೆದು->) ಕೋಮಲವಾದ ಬಳ್ಳಿಯಂತಿರುವ ದೇಹದ ಸೊಂಪಿನಿಂದ (ಸೊಂಪಾದ ತಮ್ಮದೇಹದಿಂದ) ಸೌಂದರ್ಯವನ್ನು ತೋರಿಸುತ್ತಾ ಇರುವರು.];ಲಸದ(ಶೋಭಿಸುವ) ತಮ್ಮದೇಹದ ಅವಯವಗಳ ಆಕೃತಿಯ ಚೆಲುವಿನಿಂದ ಹೊಸತೆನಿಸುವ ಸೌದರ್ಯವನ್ನುಹೊಂದಿ ಸಂತಸದಿಂದರವುದನ್ನು ಅಲ್ಲಿ ಮಾಲೆಗಾರ್ತಿಯರು ಮನ್ಮಥನ ಬಾಣಕ್ಕೆ ಒಳಗಾದ ವಿರಹಿಗಳಿಗೆ ತೋರಿಸುವರು;]ಹೆಣ್ಣಿನಸಂಗದ ಬಯಕೆಯಿಂದ ಬೆಂದು ಸಂಕಟಪಡುತ್ತಿರುವ ವಿರಹಿಗಳಿಗೆ ಈ ಹೂವು ಮಾರುವ ಎಳೆಬಾಲಕಿಯರು ತಮ್ಮ ಬಳುಕುವ ದೇಹಸೌದರ್ಯವನ್ನು ತೋರಿಸುವರು.
 • ತಾತ್ಪರ್ಯ:*ಮಾಲೆಗಾರ್ತಿಯರು ಅಂಗಡಿಗಳಸಾಲು ಮತ್ತು ಜಾತ್ರೆಗಳಲ್ಲಿ ಮಾರುವ ಹೂವುಳ ಸರಗಳಿಗೆ ಮನಸೆಳೆಯುವ ತಮ್ಮ ಉಸುರಿನ ಪರಿಮಳದಿಂದ ಕಂಪನ್ನು ಕೊಡುವರು; ಶೋಭಿಸುವ ತಮ್ಮದೇಹದ ಅವಯವಗಳ ಆಕೃತಿಯ ಚೆಲುವಿನಿಂದ ಹೊಸತೆನಿಸುವ ಸೌದರ್ಯವನ್ನುಹೊಂದಿ ಸಂತಸದಿಂದರವುದನ್ನು ಅಲ್ಲಿ ಮಾಲೆಗಾರ್ತಿಯರು ಮನ್ಮಥನ ಬಾಣಕ್ಕೆ ಒಳಗಾದ ವಿರಹಿಗಳಿಗೆ ತೋರಿಸುವರು; (ಹೆಣ್ಣಿನಸಂಗದ ಬಯಕೆಯಿಂದ ಬೆಂದು ಸಂಕಟಪಡುತ್ತಿರುವ ವಿರಹಿಗಳಿಗೆ ಈ ಹೂವು ಮಾರುವ ಎಳೆಬಾಲಕಿಯರು ತಮ್ಮ ಬಳುಕುವ ದೇಹಸೌದರ್ಯವನ್ನು ತೋರಿಸುವರು.)

(ಪದ್ಯ -೧೯) XXV

ಪದ್ಯ :-:೨೦[ಸಂಪಾದಿಸಿ]

ನಾನಾಸುವಸ್ತುಗಳ ವಿಸ್ತರವನೊಲಿದು ಪವ | ಮಾನಾತ್ಮಜಂ ನೋಡುತೈತರಲ್ ಮುಂದೆ ಗಣಿ | ಕಾ ನಾರಿಯರ ಸದನಪಙ್ತಗಳ ಲೋವೆಗಳ ಸಾಲ್ಮೆರೆದುವಿಕ್ಕೆಲದೊಳು ||
ಏನಾದೊಡಂ ಮುನಿಮೃಗಾವಳಿಯ ಬೇಂಟೆಯಂ | ತಾನಾಡಲೆಂದು ಸಿಂಗರದ ಪೆಣ್ಗಾಡಿನೊಳ್ | ಮೀನಾಂಕನೃಪತಿ ಕಟ್ಟಿಸಿದ ಬೆಳ್ಳಾರಂಗಳಾಗಬೇಕೆಂಬಂತಿರೆ ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ನಾನಾ ಸುವಸ್ತುಗಳ ವಿಸ್ತರವನೊಲಿದು ಪವಮಾನಾತ್ಮಜಂ(ಭೀಮ) ನೋಡುತೈತರಲ್=[ನಾನಾಬಗೆಯ ಉತ್ತಮ ವಸ್ತುಗಳ ವಿಸ್ತಾರರಾಶಿಯನ್ನು ಸಂತಸದಿಂ/ಪ್ರೀತಿಯಿಂದ, ಭೀಮನು ನೋಡುತ್ತಾ ಬರುತ್ತಿರಲು,;] ಮುಂದೆ ಗಣಿಕಾ ನಾರಿಯರ ಸದನಪಙ್ತಗಳ ಲೋವೆಗಳ ಸಾಲ್ಮೆರೆದುವಿಕ್ಕೆಲದೊಳು=[ಮುಂದೆ ಗಣಿಕೆಯರ/ ವೇಶ್ಯೆಯರ ಜಾರುಮಾಡಿನ ಮನೆಗಳ ಸಾಲುಗಳು ಕಂಡವು.];ಏನಾದೊಡಂ ಮುನಿಮೃಗ ಆವಳಿಯ ಬೇಂಟೆಯಂ ತಾನು ಆಡಲೆಂದು ಸಿಂಗರದ ಪೆಣ್ಗಾಡಿನೊಳ್ ಮೀನಾಂಕನೃಪತಿ(ಮನ್ಮಥ) ಕಟ್ಟಿಸಿದ ಬೆಳ್ಳಾರಂಗಳು(ಕೀಲುಗೊಂಬೆಗಳು) ಆಗಬೇಕು ಎಂಬಂತಿರೆ=[ಹೇಗಾದೂಮಾಡಿ ಮುನಿಗಳೆಂಬ ಮೃಗಗಳ ಹಿಂಡಿನ ಬೇಟೆಯನ್ನು ಮಾಡಬೇಕು ಎಂದು ಮನ್ಮಥನು, ತಾನು ರಚನೆ ಮಾಡಿದ ಶೃಂಗಾರದ ಹೆಣ್ಣಿನ ದೇಹದಗೂಡಿನಲ್ಲಿ ಕೀಲುಗೊಂಬೆಗಳು ಆಗಿರಬೇಕು ಎಂಬಂತಿದ್ದವು]
 • ತಾತ್ಪರ್ಯ:*ನಾನಾಬಗೆಯ ಉತ್ತಮ ವಸ್ತುಗಳ ವಿಸ್ತಾರರಾಶಿಯನ್ನು ಸಂತಸದಿಂ/ಪ್ರೀತಿಯಿಂದ, ಭೀಮನು ನೋಡುತ್ತಾ ಬರುತ್ತಿರಲು, ಮುಂದೆ ಗಣಿಕೆಯರ/ ವೇಶ್ಯೆಯರ ಜಾರುಮಾಡಿನ ಮನೆಗಳ ಸಾಲುಗಳು ಕಂಡವು. ಅವು, ಹೇಗಾದೂಮಾಡಿ ಮುನಿಗಳೆಂಬ ಮೃಗಗಳ ಹಿಂಡಿನ ಬೇಟೆಯನ್ನು ಮಾಡಬೇಕು ಎಂದು ಮನ್ಮಥನು, ತಾನು ರಚನೆ ಮಾಡಿದ ಶೃಂಗಾರದ ಹೆಣ್ಣಿನ ದೇಹದಗೂಡಿನಲ್ಲಿ ಇರಿಸಿದ ಚಂದದ ಕೀಲುಗೊಂಬೆಗಳು ಆಗಿರಬೇಕು ಎಂಬಂತೆ ಕಾಣುತ್ತಿದ್ದವು.

(ಪದ್ಯ -೨೦)

ಪದ್ಯ :-:೨೧[ಸಂಪಾದಿಸಿ]

ಘನಕುಚದ್ವಯಕೆ ಲೋಚನಯುಗಕೆ ಸೊಗಯಿಸುವ | ತನುಮಧ್ಯಕಿಂಪಾದನುಣ್ದೊಡೆಗೆ ಪಡಿಗಟ್ಟು | ವನಿತು ಸೊಬಗುಳ್ಳ ವಸ್ತುಗಳನಂಬುಜಭವಂ ಭುವನದೊಳ್ ಕಾಣೆನೆಂದು ||
ಜನಮರಿಯೆ ಪೆರ್ಗವತೆ ಸೇರೆ ಪಿಡಿ ಕರಭಂಗ | ಳೆನಿಪಿವರೊಳಭಿನಯಿಸಿ ತೋರಿಸಲ್ ಮೃದುಪಾಣಿ | ವನಜಮಂ ಸೃಷ್ಟಿಸಿದನೆಂಬ ಚೆಲ್ವಿನ ಕೋಮಲೆಯರಲ್ಲಿ ಕಣ್ಗೆಸೆದರು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಘನಕುಚದ್ವಯಕೆ ಲೋಚನಯುಗಕೆ ಸೊಗಯಿಸುವ ತನುಮಧ್ಯಕೆ ಇಂಪಾದ ನುಣ್ದೊಡೆಗೆ ಪಡಿಗಟ್ಟುವನಿತು ಸೊಬಗುಳ್ಳ ವಸ್ತುಗಳನು ಅಂಬುಜಭವಂ ಭುವನದೊಳ್ ಕಾಣೆನೆಂದು=[ದಪ್ಪದ ಎರಡುಮೊಲೆಗಳಿಗೆ ಎರಡು ಕಣ್ಣುಗಳಿಗೆ, ಸುಂದರ ಸೊಂಟಕ್ಕೆ, ಇಂಪಾದ ನುಣ್ಣನೆಯ ತೊಡೆಗಳಿಗೆ ಸರಿಗಟ್ಟವಷ್ಟು ಸೊಬಗುಳ್ಳ ವಸ್ತುಗಳನ್ನು ಬ್ರಹ್ಮನು ಈ ಭೂಮಿಯಲ್ಲಿ ಕಾಣೆನೆಂದು] ಜನಮರಿಯೆ ಪೆರ್ಗವತೆ(ಬಿಡಿಸಿದ ಬೆರಳು ಹಸ್ತ) ಸೇರೆ ಪಿಡಿ ಕರಭಂಗಳು ಎನಿಪಿವರೊಳು ಅಭಿನಯಿಸಿ ತೋರಿಸಲ್ ಮೃದುಪಾಣಿ ವನಜಮಂ ಸೃಷ್ಟಿಸಿದನು=[ಜನರು ಅರಿಯಲಿ ಎಂದು ಹಸ್ತ ಬೆರಳುಸೇರಿ ಕಮಲದಂತೆ ಮಾಡಲು(ಅಭಿನಯದಲ್ಲಿ) ಸೇರಿಸಿ ಮುಂಗೈಹಸ್ತಗಳನ್ನು ಹಿಡಿ ಎನ್ನುವವರಿಗೆ ಈ ಬಾಲೆಯರು/ಹೆಂಗಸರು ಅಭಿನಯಿಸಿ ತೋರಿಸುವುದಕ್ಕಾಗಿಯೇ, ಇವರ ಮೃದುವಾದ ಕೈಯಕಮಲವನ್ನು ಸೃಷ್ಟಿಸಿದನು] ಎಂಬ ಚೆಲ್ವಿನ ಕೋಮಲೆಯರಲ್ಲಿ ಕಣ್ಗೆಸೆದರು=[ಎಂಬಂತಿರುವ ಚೆಲ್ವಿನ ಕೋಮಲೆಯರು ಅಲ್ಲಿ ಕಂಡರು ]
 • ತಾತ್ಪರ್ಯ:*ದಪ್ಪದ ಎರಡುಮೊಲೆಗಳಿಗೆ ಎರಡು ಕಣ್ಣುಗಳಿಗೆ, ಸುಂದರ ಸೊಂಟಕ್ಕೆ, ಇಂಪಾದ ನುಣ್ಣನೆಯ ತೊಡೆಗಳಿಗೆ ಸರಿಗಟ್ಟವ ಸೊಬಗುಳ್ಳ ವಸ್ತುಗಳನ್ನು ಈ ಭೂಮಿಯಲ್ಲಿ ಕಾಣೆನೆಂದು ಜನರು ಅರಿಯಲಿ ಎಂದುಹಸ್ತಗಳ ಬೆರಳು ಸೇರಿ ಕಮಲದಂತೆ ಮಾಡಲು(ನೃತ್ಯ ಕಲಿಸುವಾಗ ಅಭಿನಯಿಸಲು) ಮುಂಗೈಹಸ್ತಗಳನ್ನು ಸೇರಿಸಿ ಹಿಡಿ ಎನ್ನುವವರಿಗೆ, ಈ ಬಾಲೆಯರು/ಹೆಂಗಸರು ಅಭಿನಯಿಸಿ ತೋರಿಸುವುದಕ್ಕಾಗಿಯೇ, ಇವರ ಮೃದುವಾದ ಕೈಯ ಕಮಲವನ್ನು ಬ್ರಹ್ಮನು ಸೃಷ್ಟಿಸಿದನು ಎಂಬಂತಿರುವ ಚೆಲ್ವಿನ ಕೋಮಲೆಯರು ಅಲ್ಲಿ ಕಂಡರು

(ಪದ್ಯ -೨೧)

ಪದ್ಯ :-:೨೨[ಸಂಪಾದಿಸಿ]

ಗುರುಕುಚದ ಭರಣಿ ಸುಂದರಗಜಾರೋಹಿಣಿ ಮ | ಧುರಕಾಮಕೇಳೀರಸಾದ್ರ್ರೆ ಸನ್ಮೋಹನೋ | ತ್ತರೆ ಸುರತ ತಂತ್ರವಿರಚಿತ ಹಸ್ತಚಿತ್ತೆ ಹ್ರಸ್ವಾತಿವರ್ತುಳಸುಕಂಠೆ ||
ವರಬಾಹುಮೂಲೆ ಮಣಿಭೂಷಣಶ್ರವಣೆ ವಿ | ಸ್ತರಗುಣಾಪೂರ್ವೆಯೆನಿಸುವ ಬಾಲಿಕೆಯಲ್ಲಿ | ಪರಿಶೋಭಿಸಿದರೆಸೆವ ನಕ್ಷತ್ರಗಣದಂತೆ ಮೊಗಸಸಿಯ ಸೇರುವೆಯೊಳು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಗುರುಕುಚದ ಭರಣಿ=[ಭರಣಿಯಂತೆ ಗುಂಡಾದ ಮೊಲೆಗಳನ್ನು ಹೊಂದಿದ್ದು, ಭರಣಿನಕ್ಷತ್ರ ವೆನ್ನಿಸಿದಳು;] ಸುಂದರಗಜಾರೋಹಿಣಿ=[ಸುಂದರವಾದ ಆನೆಯನ್ನು ಆರೋಹ-ಏರಿದ /ಆರೋಹಣ ಮಾಡಿದವಳು-ಆರೋಹಿಣಿಯಾಗಿ ರೋಹಿಣಿ ನಕ್ಷತ್ರಕ್ಕೆ ಸಮ;] ಮಧುರ ಕಾಮಕೇಳೀ ರಸಾದ್ರ್ರೆ/ ರಸ ದ್ರವಿಸಿದವಳು ಆರ್ದ್ರೆ ಸನ್ಮೋಹನೋತ್ತರೆ=[ಸವಿಯಾದ ಕಾಮಕೇಳಿಯ ನಂತರ ರಸಾರ್ದ್ರೆ-ರಸ ದ್ರವಿಸಿ ಸುಖಿಸಿದವಳು ಆರಿದ್ರಾ; ಕಾಮಕೇಳೀ ನಂತರ ಎಂದರೆ/ ಉತ್ತರದಲ್ಲಿ ಮೈಮರೆತವಳು, ಉತ್ತರಾ ನಕ್ಷತ್ರಕ್ಕೆಸಮ;] ಸುರತ ತಂತ್ರವಿರಚಿತ ಹಸ್ತ ಚಿತ್ತೆ=[ಸಂಭೋಗಲ್ಲಿ ಕೈಯ/ಹಸ್ತ ಚತರತೆಯನ್ನು ತೋರಿ ಅದರಲ್ಲಿ ಮನಸ್ಸುಕೊಟ್ಟವಳ್ಳುಚಿತ್ತವುಳ್ಳವಳು ಹಸತ ಚಿತ್ತಾ ನಕ್ಷತ್ರಗಳ ಸಮಳು;] ಹ್ರಸ್ವಾತಿವರ್ತುಳಸುಕಂಠೆವರಬಾಹುಮೂಲೆ=[ಹ್ರಸ್ವಾತಿ-ಗಿಡ್ಡ, ಅವರ್ತುಳ-ದುಂಡಾದ, ಸುಕಂಠೆ-ಚಂದಕುತ್ತಿಗೆಯವಳು ಸ್ವಾತಿನಕ್ಷತ್ರ, ವರ-ಸುಂದರವಾದ ಬಾಹುಮೂಲೆ-ತೋಳಿನಭುಜ (ಮೂಲೆ)ದವಳು ಮಾಲಾ ನಕ್ಷತ್ರಕ್ಕೆ ಹೋಲುವಳು;] ಮಣಿಭೂಷಣಶ್ರವಣೆ=[ಮಣಿ-ರತ್ನಗಳನ್ನುಕಿವಿ(ಶ್ರವಣದಲ್ಲಿ)ಯಲ್ಲಿ ಧರಿಸಿದವಳು ಶ್ರವಣನಕ್ಷತ್ರಕ್ಕೆ ಸಮ] ವಿಸ್ತರ ಗುಣ ಅಪೂರ್ವೆಯೆನಿಸುವ ಬಾಲಿಕೆಯಲ್ಲಿ ಪರಿಶೋಭಿಸಿದರೆಸೆವ ನಕ್ಷತ್ರಗಣದಂತೆ ಮೊಗ ಸಸಿಯ(ಶಶಿ-ಚಂದ್ರ) ಸೇರುವೆಯೊಳು=[ವಿಸ್ತಾರವಾದ ಗುಣಗಳಿಂದ ಅಪೂರ್ವೆಯೆನಿಸುವ/ಸಮಾನರಿಲ್ಲ ಎನಿಸುವ, ಹುಡುಗಿಯರು ಅಲ್ಲಿ ಬಹಳ ಶೋಭಿಸಿದರು, ಪ್ರಕಾಶಿಸುವ ನಕ್ಷತ್ರಗಣದಂತೆ ಮತ್ತೆ ಅದಕ್ಕೆ ಅವರ ಚಂದ್ರನನ್ನು ಹೋಲುವ ಮುಖವೂ ಸೇರಿ ನಕ್ಷತ್ರಗಳ ಜೊತೆ ಚಂದ್ರನೂ ಸೇರಿಕೊಂಡಂತೆ ಆಗಿದೆ]
 • ತಾತ್ಪರ್ಯ:*ಅಲ್ಲಿಯ ಬಾಲೆಯರು,ಭರಣಿಯಂತೆ ಗುಂಡಾದ ಮೊಲೆಗಳಿದ್ದು, ಭರಣಿನಕ್ಷತ್ರ ವೆನ್ನಿಸಿದಳು; ಸುಂದರವಾದ ಆನೆಯನ್ನು ಏರಿದ /ಆರೋಹಣ ಮಾಡಿದವಳು-ಆರೋಹಿಣಿಯಾಗಿ ರೋಹಿಣಿ ನಕ್ಷತ್ರಕ್ಕೆ ಸಮ; ಸವಿಯಾದ ಕಾಮಕೇಳಿಯ ನಂತರ ರಸಾರ್ದ್ರೆ-ರಸ ದ್ರವಿಸಿ ಸುಖಿಸಿದವಳು ಆರ್ದ್ರಾ-ಆರಿದ್ರಾ; ಕಾಮಕೇಳೀ ನಂತರ ಎಂದರೆ/ ನಂತರ/ಉತ್ತರದಲ್ಲಿ ಮೈಮರೆತವಳು, ಉತ್ತರಾ ನಕ್ಷತ್ರಕ್ಕೆ ಸಮ; [ಸಂಭೋಗಲ್ಲಿ ಕೈಯ/ಹಸ್ತ ಚತರತೆಯನ್ನು ತೋರಿ ಅದರಲ್ಲಿ ಮನಸ್ಸುಕೊಟ್ಟವಳ್ಳು ಚಿತ್ತವುಳ್ಳವಳು ಹಸ್ತ ಚಿತ್ತಾ ನಕ್ಷತ್ರಗಳ ಸಮಳು;ಗಿಡ್ಡ, ಅವರ್ತುಳ,ಚಂದ ಕುತ್ತಿಗೆಯವಳು ಸ್ವಾತಿನಕ್ಷತ್ರ, ಸುಂದರವಾದ ತೋಳು-ಭುಜ (ಮೂಲೆ)ದವಳು ಮಾಲಾ ನಕ್ಷತ್ರಕ್ಕೆ ಹೋಲುವಳು; ಮಣಿ-ರತ್ನಗಳನ್ನು ಕಿವಿ(ಶ್ರವಣದಲ್ಲಿ)ಯಲ್ಲಿ ಧರಿಸಿದವಳು ಶ್ರವಣನಕ್ಷತ್ರಕ್ಕೆ ಸಮ; ವಿಸ್ತಾರವಾದ ಗುಣಗಳಿಂದ ಸಮಾನರಿಲ್ಲ ಎನಿಸುವ, ಹುಡುಗಿಯರು ಅಲ್ಲಿ ಬಹಳ ಪ್ರಕಾಶಿಸುವ ನಕ್ಷತ್ರಗಣದಂತೆ ಶೋಭಿಸಿದರು ಮತ್ತೆ ಅದಕ್ಕೆ ಚಂದ್ರನನ್ನು ಹೋಲುವ ಅವರ ಮುಖವೂ ಸೇರಿ ನಕ್ಷತ್ರಗಳ ಜೊತೆ ಚಂದ್ರನೂ ಸೇರಿಕೊಂಡಂತೆ ಆಗಿದೆ.

(ಪದ್ಯ -೨೨)

ಪದ್ಯ :-:೨೩[ಸಂಪಾದಿಸಿ]

ಅಡಿಯುಮಮಲಾಸ್ಯಮಂ ಕಮಲಮಂ ಕಮಲಮಂ | ನಡೆಯುಮೆಳವಾಸೆಯುಂ ನಾಗಮಂ ನಾಗಮಂ | ಕಡುಚೆಲ್ವಪಾಣಿಯುಮಧರಮಂ ಪ್ರವಾಳಮುಂ ಲಲಿತಪ್ರವಾಳಮಣಿಯಂ ||
ತೊಡೆಯುಮೆಸೆವಕ್ಷಿಯುಂ ಬಾಳೆಯಂ ಬಾಳೆಯಂ | ನಡುವುಂ ಸುವಾಣಿಯುಂ ಹರಿಯುಮಂ ಹರಿಯುಮಂ | ಬಿಡದೆಪೋಲ್ತಿರೆ ಮೆರೆವ ಕಾಂತೆಯರ್ ನೀಲಾಳಕಾಂತೆಯರ್ ಸೊಗಯಿಸಿದರು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
 • ಹೆಣ್ಣಿನ ಅಂಗಾಗಳ ಹೋಲಿಕೆಗಳು ಆನುಪ್ರಾಸದ ಅಲಂಕಾರದಲ್ಲಿ:ಅಡಿಯುಂ ಅಮಲ ಆಸ್ಯಮಂ ಕಮಲಮಂ ಕಮಲಮಂ=[೧.ಪಾದವು-- ೨.ಚಂದದಮುಖವು:: ೧.ಕಮಲವನ್ನೂ, ೨.ಪದ್ಮವನ್ನೂ;]; ನಡೆಯುಂ ಎಳವಾಸೆಯುಂ ನಾಗಮಂ ನಾಗಮಂ= [೧.ನಡೆಯುವಿಕೆ ೨.ಎಳವಾಸೆಯು/ಜೋಲಾಡುವ ಜಡೆಯು:: ೧.ಆನೆಯನ್ನೂ ೨.ಹಾವನ್ನೂ]; ಕಡುಚೆಲ್ವಪಾಣಿಯುಂ ಅಧರಮಂ ಪ್ರವಾಳಮುಂ ಲಲಿತ ಪ್ರವಾಳಮಣಿಯಂ=[೧.ಬಹಳ ಚಂದದ ಕೈಹಸ್ತ(ಕೆಂಪು ಉಗುರು), ೨.ತುಟಿಯು --೧.ಚಿಗುರು, ೨.ಎಳೆಯ ಹವಳದ ಮಣಿಯನ್ನೂ,]; ತೊಡೆಯುಂ ಎಸೆವ ಅಕ್ಷಿಯುಂ ಬಾಳೆಯಂ ಬಾಳೆಯಂ=[೧.ತೊಡೆಯು, ೨.ಹೊಳೆಯುವ ಕಣ್ಣು,--೧.ಬಾಳೆಮರವನ್ನೂ,-- ೨.ಬಾಳೆಜಾತಿಯ ಮೀನನ್ನೂ]; ನಡುವುಂ ಸುವಾಣಿಯುಂ ಹರಿಯುಮಂ ಹರಿಯುಮಂ=[೧.ಸೊಂಟವು, ೨.ಇಂಪಾದ ಮಾತು-- ೧.ಸಿಂಹವನ್ನೂ, ಗಿಳಿಯನ್ನೂ]; ಬಿಡದೆ ಪೋಲ್ತಿರೆ ಮೆರೆವ ಕಾಂತೆಯರ್ ನೀಲಾಳ(ಕಪ್ಪು ಮುಂಗುರುಳು)ಕಾಂತೆಯರ್ ಸೊಗಯಿಸಿದರು=[ಸಮಸಮವಾಗಿ ಹೋಲುತ್ತಿರಲು,ಪ್ರಕಾಸಿಸುವ ಹೆಂಗಸರು, ಕಪ್ಪು ಮುಂಗುರುಳುಳ್ಳ ಹೆಂಗಸರು ಸೊಗಸಾಗಿ ಕಾಣುತ್ತಿದ್ದರು].
 • ತಾತ್ಪರ್ಯ:*ಹೆಣ್ಣಿನ ಅಂಗಾಗಳ ಹೋಲಿಕೆಗಳು ಆನುಪ್ರಾಸದ ಅಲಂಕಾರದಲ್ಲಿ ಹೀಗೆ ಹೋಲಿಕೆ ಹೇಳಿದೆ:೧.ಪಾದವು-- ೨.ಚಂದದಮುಖವು:: ೧.ಕಮಲವನ್ನೂ (ಪಾದವು ಕಮಲದಂತೆ ಇತ್ತು;ಹೀಗೆ ಎಲ್ಲದಕ್ಕೂ ಸೇರಿಸಿಕೊಳ್ಳಬೇಕು), ೨.ಪದ್ಮವನ್ನೂ;೧.ನಡೆಯುವಿಕೆ ೨.ಎಳವಾಸೆಯು/ಜೋಲಾಡುವ ಜಡೆಯು:: ೧.ಆನೆಯನ್ನೂ ೨.ಹಾವನ್ನೂ; ೧.ಬಹಳ ಚಂದದ ಕೈಹಸ್ತ(ಕೆಂಪು ಉಗುರು), ೨.ತುಟಿಯು --೧.ಚಿಗುರನ್ನೂ, ೨.ಎಳೆಯ ಹವಳದ ಮಣಿಯನ್ನೂ,; ೧.ತೊಡೆಯು, ೨.ಹೊಳೆಯುವ ಕಣ್ಣು,--೧.ಬಾಳೆಮರವನ್ನೂ,-- ೨.ಬಾಳೆಜಾತಿಯ ಮೀನನ್ನೂ; ೧.ಸೊಂಟವು, ೨.ಇಂಪಾದ ಮಾತು-- ೧.ಸಿಂಹವನ್ನೂ, ಗಿಳಿಯನ್ನೂ; ಸಮಸಮವಾಗಿ ಹೋಲುತ್ತಿರಲು, ಹೀಗೆ ಪ್ರಕಾಸಿಸುವ ಹೆಂಗಸರು, ಕಪ್ಪು ಮುಂಗುರುಳುಳ್ಳ ಹೆಂಗಸರು ಸೊಗಸಾಗಿ ಕಾಣುತ್ತಿದ್ದರು.

(ಪದ್ಯ -೨೩)

ಪದ್ಯ :-:೨೪[ಸಂಪಾದಿಸಿ]

ನಾಗರಿಪುಮಧ್ಯಮುರ್ವಸಿಯ ನಡುಮಿಗೆ ಸರಿ | ಯಾಗಬಲ್ಲುದೆ ಪೊಸವಸಂತೋತ್ಸವದೊಳುಲಿವ | ಕೋಗಿಲೆಯಸರ ಮೇನಕೀನಿತಂಬಿನಿಯ ನುಣ್ದನಿಗೆ ಪಾಸಟಿಯಪ್ಪುದೇ ||
ಪೂಗಣಿ ವಿಲಾಸದಾರಂಭೆಯ ವಿರಾಜಿಸುವ | ಸೋಗೆಗಣ್ಗೆಣೆಹುದೆ ನೋಡೆಂದು ಪೊಗಳ್ದನನು | ರಾಗದಿಂದೊರ್ವಳಂ ವಿಟನಪ್ಸರಸ್ತ್ರೀಯರಂ ಪೆಸರಿಸುವ ನೆವದೊಳು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನಾಗರಿಪುಮಧ್ಯಂ, ಊರ್ವಸಿಯ ನಡುಮಿಗೆ ಸರಿಯಾಗಬಲ್ಲುದೆ=[ಆನೆಯ ಅರಿ ಸಿಂಹದ ಸೊಂಟವು= ಊರ್ವಸಿಯ ನಡುವಿಗೆ ಸರಿ ಸಮವೇ?]; ಪೊಸ ವಸಂತೋತ್ಸವದೊಳು ಉಲಿವ ಕೋಗಿಲೆಯ ಸುರಮು, ಏನಕೆ (ಏತಕೆ) ಈನಿತಂಬಿನಿಯ ನುಣ್ದನಿಗೆ ಪಾಸಟಿಯು ಅಪ್ಪುದೇ=[ಹೊಸ ವಸಂತೋತ್ಸವದಲ್ಲಿ ಹಾಡುವ ಕೋಗಿಲೆಯ ಸ್ವರವು,(ಏನಕೆ) ಈ ನಿತಂಬಿನಿಯ ಇಂಪಾದ ದನಿಗೆ ಸರಿಸಾಟಿಯಾಗಯುವುದೇ? (ಇಲ್ಲ)];ಪೂಗಣಿ ವಿಲಾಸದ ಆರಂಭೆಯ ವಿರಾಜಿಸುವ ಸೋಗೆಗಣ್ಗೆ ಎಣೆಹುದೆ ನೋಡೆಂದು ಪೊಗಳ್ದನನು ರಾಗದಿಂದ ಓರ್ವಳಂ ವಿಟನು ಅಪ್ಸರಸ್ತ್ರೀಯರಂ ಪೆಸರಿಸುವ ನೆವದೊಳು=[, ವಿಟನು ಒಬ್ಬಳನ್ನು ಮೋಹದಿಂದ ಅಪ್ಸರಸ್ತ್ರೀಯರನ್ನು ಹೋಲಿಸುವ ನೆವದಲ್ಲಿ ಹೂವಿನಬಾಣ ವಿಲಾಸದ ಆ ರಂಭೆಯ ಹೊಳೆಯುವ ವಿಶಾಲ ಕಣ್ಣಿಗೆ ಈ ಹೆಣ್ಣಿನ ನೋಟ ಸರಿಸಾಟಿಯಾಗಿರುವುದೇ ನೋಡೆಂದು ಹೊಗಳುತ್ತಿದ್ದನು]
 • ತಾತ್ಪರ್ಯ:*ಆನೆಯ ಅರಿ ಸಿಂಹದ ಸೊಂಟವು ಊರ್ವಸಿಯ ನಡುವಿಗೆ ಸರಿ ಸಮವೇ?; ಹೊಸ ವಸಂತೋತ್ಸವದಲ್ಲಿ ಹಾಡುವ ಕೋಗಿಲೆಯ ಸ್ವರವು, ಈ ನಿತಂಬಿನಿಯ ಇಂಪಾದ ದನಿಗೆ ಸರಿಸಾಟಿಯಾಗಯುವುದೇ? (ಇಲ್ಲ)]; ವಿಟನೊಬ್ಬನು ಒಬ್ಬಳನ್ನು ಮೋಹದಿಂದ ಅಪ್ಸರಸ್ತ್ರೀಯರನ್ನು ಹೋಲಿಸುವ ನೆವದಲ್ಲಿ ಹೂವಿನಬಾಣ ವಿಲಾಸದ ಆ ರಂಭೆಯ ಹೊಳೆಯುವ ವಿಶಾಲ ಕಣ್ಣು ಈ ಹೆಣ್ಣಿನ ನೋಟಕ್ಕೆ ಸರಿಸಾಟಿಯಾಗಿರುವುದೇ ನೋಡೆಂದು ಹೊಗಳುತ್ತಿದ್ದನು.

(ಪದ್ಯ -೨೪)

ಪದ್ಯ :-:೨೫[ಸಂಪಾದಿಸಿ]

ಸುನಿಮೇಷ ಮೀನಚಾಪಲನೇತ್ರೆ ಚಕ್ರೋನ್ಮಿ | ಥುನಕುಂಭಕುಚೆ ಮಕರಕೇತು ವರಮಾತುಲಾ | ನನೆ ಸಿಂಹಮಧ್ಯೆ ವೃಷಭಾಂಕವೈರಿಯ ಪಟ್ಟದಾನೆ ಕನ್ಯಾಕುಲಮಣಿ ||
ಮನಸಿಜ ಶಶಾಂಕ ಕರ್ಕಟಕಚೇಳಂಗುಡುವ | ತನಿಸೊಬಗುವಡೆದ ಸನ್ಮೋಹನದ ಕಣಿಯೆ ಬಾ || ಯೆನುತೊರ್ವನೀರೆ ಸಖಿಯಂ ಕರೆದಳೀರಾರುರಾಶಿಯಂ ಪೆಸರಿಪವೊಲು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಈ ದ್ವಾರಕಾಪುರಿಯ ಹೆಣ್ಣು ಹೇಗಿದೆ ಎಂದರೆ ಹನ್ನೆರಡು ಜ್ಯೋತಿಷ ರಾಶಿಗಳಿಕೆ ಹೋಲಿಕೆ ಇದೆ ಎಂದು ಕವಿ ಹೇಳುತ್ತಿದ್ದಾನೆ;) ಸುನಿಮೇಷ=ಉತ್ತಮ (ನಿಮೇಷ)ರೆಪ್ಪೆಯುಳ್ಳವಳು; ಮೀನಚಾಪಲನೇತ್ರೆ=ಮೀನದಂತೆ ಚಪಲ-ಚಂಚಲ ಕಣ್ಣುಳ್ಳವಳು; ಚಕ್ರೋನ್ಮಿ ಥುನ= ಮಿಥುನದಂತೆ ಜೊತೆಯುಳ್ಳವಳು; ಕುಂಭಕುಚೆ=ಕುಂಭದಂತೆ /ದುಂಡಾದ ಮಡಕೆಯಂತೆ ಮೊಲೆಗಳು; ಮಕರಕೇತು=ಮಕರಧ್ವಜನು ಕಾಮ- ಅವನಿಗೆ-> ವರಮಾತುಲ=ಕಾಮನತಾಯಿ ಲಕ್ಷ್ಮಿಯಜೊತೆ ಹುಟ್ಟಿದವ ಮನ್ಮಥನಿಗೆ ಚಂದ್ರನು; ಅವನಂತೆ =ಅತುಲಾನನೆ /ಮುಖವುಳ್ಳವಳು; ಸಿಂಹಮಧ್ಯೆ= ಸಿಂಹದಂತೆ ಸೊಂಟ; ವೃಷಭಾಂಕವೈರಿಯ ಪಟ್ಟದಾನೆ=ವೃಷಭ ಧ್ವಜ ಶಿವನಿಗೆ ವೈರಿ ಮನ್ಮಥನ ಪಟ್ಟದ ಆನೆಯಂತೆ ಚಂದನೆಡಿಗೆಯವಳ; ಕನ್ಯಾಕುಲಮಣಿ= ಕನ್ಯಾ /ಕುಮಾರಿಯರಲ್ಲಿ ಉತ್ತಮಳು; ಮನಸಿಜಶಶಾಂಕ= ಮದನಚಂದ್ರವೆಂಬ ಮತ್ತು ಕರ್ಕಟಕಚೇಳಂಗಿಗಳೆಂಬ ಬಿಗಿ ಉಡುಪನ್ನು ಉಡುವ ತನಿಸೊಬಗುವಡೆದ= ಸೊಬಗಿನ ದೇಹದ ಸನ್ಮೋಹನದ ಕಣಿಯೆ=ಮನಸ್ಸನು ಸೆಳೆಯುವ ಕಣಿಯೇ ಬಾ ಯೆನುತ= ಎನ್ನುತ್ತಾ; ಓರ್ವ ನೀರೆ ಸಖಿಯಂ ಕರೆದಳು ಈರಾರು ರಾಶಿಯಂ(ಈರಾರು-ಎರಡು ಆರು ರಾಶಿ/೧೨ರಾಶಿ) ಪೆಸರಿಪವೊಲು=[ಹನ್ನರಡು ರಾಶಿಯ ಹೆಸರನ್ನೂ ಹೇಳುವಂತೆ (ಪೆಸರಿಪವೊಲು) ಒಬ್ಬಳು ಹೆಣ್ಣು ಸಖಿಯನ್ನು ಈ ಮೇಲಿನಂತೆ ಹೊಗಳಿ ಕರೆದಳು.]
 • ತಾತ್ಪರ್ಯ:*(ಈ ದ್ವಾರಕಾಪುರಿಯ ಹೆಣ್ಣು ಹೇಗಿದೆ ಎಂದರೆ ಹನ್ನೆರಡು ಜ್ಯೋತಿಷ ರಾಶಿಗಳಿಕೆ ಹೋಲಿಕೆ ಇದೆ ಎಂದು ಕವಿ ಹೇಳುತ್ತಿದ್ದಾನೆ;) ಉತ್ತಮ (ನಿಮೇಷ)ರೆಪ್ಪೆಯುಳ್ಳವಳೇ; ಮೀನದಂತೆ ಚಪಲ-ಚಂಚಲ ಕಣ್ಣುಳ್ಳವಳೇ; ಮಿಥುನದಂತೆ ಜೊತೆಯುಳ್ಳವಳು; ಕುಂಭದಂತೆ /ದುಂಡಾದ ಮಡಕೆಯಂತೆ ಮೊಲೆಗಳುಳ್ಳವಳೇ; ಮಕರಧ್ವಜನು ಕಾಮ- ಅವನಿಗೆ-> ತಾಯಿ ಲಕ್ಷ್ಮಿಯ ಜೊತೆ ಹುಟ್ಟಿದವ ಮನ್ಮಥನಿಗೆ ಚಂದ್ರನು; ಅವನಂತೆ ಆನನೆ=ಅತುಲಾನನೆ /ಮುಖವುಳ್ಳವಳೇ; ಸಿಂಹದಂತೆ ಸೊಂಟದವಳೇ; ವೃಷಭ ಧ್ವಜ ಶಿವನಿಗೆ ವೈರಿ ಮನ್ಮಥನ ಪಟ್ಟದ ಆನೆಯಂತೆ ಚಂದನೆಡಿಗೆಯವಳೇ; ಕನ್ಯಾ /ಕುಮಾರಿಯರಲ್ಲಿ ಉತ್ತಮಳು; ಮದನಚಂದ್ರವೆಂಬ ಮತ್ತು ಕರ್ಕಟಕಚೇಳಂ(ವೃಶ್ಚಿಕ)ಗಿಗಳೆಂಬ ಬಿಗಿ ಉಡುಪನ್ನು ಉಡುವ ಮನಸ್ಸನು ಸೆಳೆಯುವ ಕಣಿಯೇ ಬಾ ಎನ್ನುತ್ತಾ; ಹನ್ನರಡು ರಾಶಿಯ ಹೆಸರನ್ನೂ ಹೇಳುವಂತೆ (ಪೆಸರಿಪವೊಲು) ಒಬ್ಬಳು ಹೆಣ್ಣು ತನ್ನ ಸಖಿಯನ್ನು ಈ ಮೇಲಿನಂತೆ ಹೊಗಳಿ ಕರೆದಳು.(ಇದೊಂದು ಬಗೆಯ ಚಮತ್ಕಾರಿಕ ಶ್ಲೇಷಾಲಂಕಾರ)

(ಪದ್ಯ -೨೫)

ಪದ್ಯ :-:೨೬[ಸಂಪಾದಿಸಿ]

ಬೇಡ ಪೂರ್ವಸ್ನೇಹಮಿನ್ನು ದಾಕ್ಷಿಣ್ಯಮಂ | ಮಾಡದಿರ್ ನಿನಗಪರವಯಸಾದೊಡೊರ್ವರುಂ | ನೋಡರಿದಿರುತ್ತರಂಗುಡು ಬಿಡಿಸುವಾಸವಂ ನುಡಿದ ಕಾಲಂ ನಡೆದುದು ||
ಕೂಡಿರ್ದ ಪಾಶದನುಬಂಧಮಂ ಪರಿ ಧನದ | ಕೋಡರೆತನಂ ನೂಕು ಸಾಕೆಂದು ಬುದ್ಧಿಯಂ | ಜೋಡಿಸಿದಳೊರ್ವಳಣುಗಿಗೆ ನಾಲ್ಕು ದೆಸೆಯಾಣ್ಮರಂ ಪೆಸರಿಸುವ ನೆವದೊಳು ||26||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬೇಡ ಪೂರ್ವಸ್ನೇಹಮಂ ಇನ್ನು ದಾಕ್ಷಿಣ್ಯಮಂ ಮಾಡದಿರ್=[ಬೇಡ ಪೂರ್ವಸ್ನೇಹ, ಇನ್ನು ದಾಕ್ಷಿಣ್ಯವನ್ನು ಮಾಡದಿರು]; ನಿನಗೆ ಅಪರವಯಸಾದೊಡೆ ಓರ್ವರುಂ ನೋಡರು ಇದಿರುತ್ತರಂಗುಡು=[ನಿನಗೆ ಪ್ರಾಯ ಕಳೆದರೆ ಯಾರೂ ನಿನ್ನನ್ನು ನೋಡರುವುದಿಲ್ಲ. ವಿಟರಿಗೆ,ಹಣ ಕೊಡದಿದ್ದರೆ ಎದುರು ಉತ್ತರ ಹೇಳು] ಬಿಡಿಸು ವಾಸವಂ(ಸಹವಾಸವನ್ನು ಬಿಡಿಸು) ನುಡಿದ ಕಾಲಂ ನಡೆದುದು(ನುಡಿದನತೆ ನಡೆಯುವ ಕಾಲವು ಕಳೆದು ಹೋಯಿತು)=[(ಹಣ ಕೊಡದಿದ್ದರೆ ನಿನ್ನ ಸಹವಾಸವನ್ನು ಬಿಡಿಸು, ನುಡಿದಂತೆ ನೆಡೆಯುವ ಕಾಲವು, ಕಳೆದು ಹೋಯಿತು]; ಕೂಡಿರ್ದ ಪಾಶದ ಅನುಬಂಧಮಂ=[ಹಿಂದೆ ಅವನೊಡನೆ ಕೂಡಿದ ಸಂಬಂದವನ್ನು ] ಪರಿಧನದಕೋಡರೆತನಂ ನೂಕು ಸಾಕೆಂದು=[ ಇನ್ನು ಹಣವನ್ನು ಕೊಡರು, ಸಹವಾಸ ಸಾಕೆಂದು ನೂಕು/ ಬಿಡು] ಬುದ್ಧಿಯಂ ಜೋಡಿಸಿದಳು ಓರ್ವಳು ಅಣುಗಿಗೆ ನಾಲ್ಕು ದೆಸೆಯ ಆಣ್ಮರಂ ಪೆಸರಿಸುವ ನೆವದೊಳು=[ಬುದ್ಧಿಯನ್ನು ಹೇಳಿದಳು ಒಬ್ಬಳು ಹುಡುಗಿಗೆ, ನಾಲ್ಕು ದಿಕ್ಕಿನೊಡೆಯರನ್ನು ನೆನಸಿಕೊಂಳ್ಳುವ ನೆವದಿಂದ.] (ಅಪರ=ಪಶ್ಚಿಮ?)
 • ತಾತ್ಪರ್ಯ:*ಬೇಡ ಪೂರ್ವಸ್ನೇಹ, ಇನ್ನು ದಾಕ್ಷಿಣ್ಯವನ್ನು ಮಾಡದಿರು; ನಿನಗೆ ವಯಸಾದೊಡೆ ಓರ್ವರುಂ ನೋಡರು ಇದಿರುತ್ತರಂಗುಡು=[ನಿನಗೆ ಪ್ರಾಯ ಕಳೆದು ಅಪರ ವಯಸ್ಸಾದರೆ ಯಾರೂ ನಿನ್ನನ್ನು ನೋಡರುವುದಿಲ್ಲ. ವಿಟರಿಗೆ,ಹಣ ಕೊಡದಿದ್ದರೆ ಎದುರು ಉತ್ತರ ಕೊಡು. (ಹಣ ಕೊಡದಿದ್ದರೆ ನಿನ್ನ ಸಹವಾಸವನ್ನು ಬಿಡಿಸು, ನುಡಿದಂತೆ ನೆಡೆಯುವ ಕಾಲವು, ಕಳೆದು ಹೋಯಿತು; ಹಿಂದೆ ಅವನೊಡನೆ ಕೂಡಿದ ಸಂಬಂದವನ್ನು ಕಡಿ; ಇನ್ನು ಹಣವನ್ನು ಕೊಡರು, ಸಹವಾಸ ಸಾಕೆಂದು ನೂಕು/ ಬಿಡು. ನಾಲ್ಕು ದಿಕ್ಕಿನೊಡೆಯರನ್ನು ನೆನಸಿಕೊಂಳ್ಳುವ ನೆವದಿಂದ ಒಬ್ಬಳು ಹುಡುಗಿಗೆ, ಬುದ್ಧಿಯನ್ನು ಹೇಳಿದಳು.

(ಪದ್ಯ -೨೬)

ಪದ್ಯ :-:೨೭[ಸಂಪಾದಿಸಿ]

ಮೊಳೆ ಮೊಲೆಯೊಳೆಸೆವಸಸಿ ವದನದೊಳ್ ಕುಡಿ ನೋಟ| ದೊಳೆ ಸರ್ಬು ತೋಳ್ಗಳೊಳ್ ಬೆಳೆದುಬ್ಬು ಜಘನದೊಳ್ | ಸೆಳೆ ನಡುವಿನೊಳ್ ಸುಳಿ ಕುರುಳ್ಗಳೊಳ್ ಸೊಗಯಿಸುವ ಮಡಲಿಡಿದ ಸೌಂದರದೊಳು || ತಳಿರಡಿಗಳೊಳ್ ಮುಗುಳ್ ನಗೆಯೊಳಲರಕ್ಷಿಯೊಳ್ | ತಳೆದು ಸಲೆರಾಜಸುವ ತನುಲತೆಯೊಳೊಪ್ಪಿರ್ದ | ರೆಳವೆಣ್ಗಳಚ್ಚಪೊಸ ಜೌವನದೊಳಾವಗಂ ವಿಟಪೀವರಾಶ್ರಯದೊಳು ||27||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಹಣ್ಣಿಗೆ ಪ್ರಾಯ ಬರವ ಸಮಯದಲ್ಲಿ)ಮೊಳೆ ಮೊಲೆಯೊಳು ಎಸೆವ ಸಸಿ(ಶಶಿ=ಚಂದ್ರ) ವದನದೊಳ್=[ಮೊಲೆಯಲ್ಲಿ ಉಬ್ಬಿರುವಮೊನಚು, ಶೋಭಸುವ ಚಂದ್ರನ ಕಾತಿ ಮುಖದಲ್ಲಿ]; ಕುಡಿ ನೋಟದೊಳ್ ಎಸರ್ಬು(ಬಾಣ) ತೋಳ್ಗಳೊಳ್ ಬೆಳೆದುಬ್ಬು=[ಕುಡಿ ನೋಟದಲ್ಲಿ ಕಾಮನಬಾಣ- ಬಯಕೆಯ ಚಂಚಲ ನೋಟ, ತೋಳುಗಳಲ್ಲಿ ಬೆಳೆದ ಕೊಬ್ಬಿನ ನುಣುಪಾದ ಉಬ್ಬು]; ಜಘನದೊಳ್ ಸೆಳೆ(ಸೆಳೆತ=ಬಯಕೆ) ನಡುವಿನೊಳ್ ಸುಳಿ ಕುರುಳ್ಗಳೊಳ್ ಸೊಗಯಿಸುವ ಮಡಲಿಡಿದ ಸೌಂದರದೊಳು =[ಜಘನದಲ್ಲಿ ಹೊಕ್ಕಳ ಕೆಳಗೆ ಬಯಕೆಯ ಸೆಳೆತ, ಸೊಂಟದಲ್ಲಿ ಸುಂದರ ಕೂದಲಸುಳಿ, ತಲೆಯಕುರುಳುಗಳಲ್ಲಿ ಸುಂದರ ಕುಚ್ಚುಗುಂಗರು,] ತಳಿರು ಅಡಿಗಳೊಳ್, ಮುಗುಳ್ ನಗೆಯೊಳ್ ಅಲರ್, (ಅಲರ್) ಅಕ್ಷಿಯೊಳ್ ತಳೆದು ಸಲೆರಾಜಸುವ ತನುಲತೆಯೊಳ್ ಒಪ್ಪಿರ್ದರ್ ಎಳವೆಣ್ಗಳ್=[ಪಾದಗಳಲ್ಲಿ ಚಿಗುರುಎಲೆಗಳು; ಮುಗುಳುನಗೆಯಲ್ಲಿ ಮಲ್ಲಿಗೆ ಹೂವು; ಕಣ್ಣಿನಲ್ಲಿ ಕಮಲದ ಹೂವಿನ ಎಸಳು; ಇವೆಲ್ಲಾ ಹೊಂದಿ ಬಹಳಶೋಭಿಸುವ ಬಳ್ಳಿಯಂತಿರುವ ದೇಹವನ್ನು ಹೊಂದಿದ್ದ]; ಎಳವೆಣ್ಗಳ್, ಅಚ್ಚ ಪೊಸ ಜೌವನದೊಳ್ ಆವಗಂ ವಿಟಪೀವರ ಆಶ್ರಯದೊಳು=[ ಎಳೆಯಪ್ರಾಯದ ಹೆಂಗಸರು ಅಚ್ಚ ಹೊಸ ಯೌವನದಲ್ಲಿ ಯಾವಾಗಲೂ ಸೊಕ್ಕಿನವಿಟರ ಆಶ್ರಯದಲ್ಲಿ ಇರುತ್ತಿದ್ದರು ]
 • ತಾತ್ಪರ್ಯ:*(ಎಳೆಪ್ರಾಯದ ಹೆಣ್ಣುಗಳು ಯುವವಿಟರ ಆಶ್ರಯದಲ್ಲಿರುತ್ತಿದ್ದರು.):-:ಮೊಲೆಯಲ್ಲಿ ಉಬ್ಬಿರುವಮೊನಚು, ಶೋಭಸುವ ಚಂದ್ರನ ಕಾತಿ ಮುಖದಲ್ಲಿ; ಕುಡಿ ನೋಟದಲ್ಲಿ ಕಾಮನಬಾಣ- ಬಯಕೆಯ ಚಂಚಲ ನೋಟ, ತೋಳುಗಳಲ್ಲಿ ಬೆಳೆದ ಕೊಬ್ಬಿನ ನುಣುಪಾದ ಉಬ್ಬು; ಹೊಕ್ಕಳ ಕೆಳಗೆ ಜಘನದಲ್ಲಿ ಬಯಕೆಯ ಸೆಳೆತ, ಸೊಂಟದಲ್ಲಿ ಸುಂದರ ಕೂದಲಸುಳಿ, ತಲೆಯ ಕುರುಳುಗಳಲ್ಲಿ ಸುಂದರ ಕುಚ್ಚುಗುಂಗರು, ಚಿಗುರುಎಲೆಗಳಂತಿರುವ ಪಾದಗಳಲ್ಲಿ ; ಮಲ್ಲಿಗೆ ಹೂವಿನಂತಹ ಮುಗುಳುನಗೆಯಲ್ಲಿ ; ಕಮಲದ ಹೂವಿನ ಎಸಳಿನಂತಿರುವ ಕಣ್ಣು ; ಇವೆಲ್ಲಾ ಹೊಂದಿ ಬಹಳಶೋಭಿಸುವ ಬಳ್ಳಿಯಂತಿರುವ ದೇಹವನ್ನು ಹೊಂದಿದ್ದ; ಎಳೆಯಪ್ರಾಯದ ಹೆಂಗಸರು ಅಚ್ಚ ಹೊಸ ಯೌವನದಲ್ಲಿ ಯಾವಾಗಲೂ ಸೊಕ್ಕಿನವಿಟರ ಆಶ್ರಯದಲ್ಲಿ ಇರುತ್ತಿದ್ದರು.
 • ತಾತ್ಪರ್ಯ:*

(ಪದ್ಯ -೨೭)

ಪದ್ಯ :-:೨೮[ಸಂಪಾದಿಸಿ]

ದಾನಸಾಮಜ ಭೇದನೋದ್ದಂಡದುಗ್ರ ಪಂ | ಚಾನನಂ ಗೆಲ್ವ ಚತುರೋಪಾಯಮಂ ಬಿಟ್ಟು | ತಾನಳ್ಕಿ ಬಳ್ಕಿ ಕಡುವೈನ್ಯದಿಂದೀಗ ಮುಗ್ಧಾಂಗಮಂ ತಳೆದಿರ್ಪುದು ||
ಏನಿದಚ್ಚರಿಯೆಂದು ವಿಟನೊರ್ವಳಂ ಕೇಳ್ದೊ | ಡಾ ನೀರೆ ನಗುತುಮಬಲಾಶ್ರಯದೊಳಿರೆ ಮೇರು | ಮಾನವನ ಕೈವಿಡಿತೆಗೊಳಗಪ್ಪುದೆಲೆ ಮರುಳೆ ನೀನರಿದುದಿಲ್ಲೆಂದಳು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ದಾನಸಾಮಜ(ಮದಿಸಿದ ಆನೆ ಅಥವಾ ಸಾಮ ದಾನ ಉಪಾಯಗಳ ಫಲ) ಭೇದನ ಉದ್ದಂಡದ ಉಗ್ರ ಪಂಚಾನನಂ(ಭಯಂಕರಮುಖದ ಸಿಂಹ) ಗೆಲ್ವ ಚತುರೋಪಾಯಮಂ ಬಿಟ್ಟು=[ಮದಿಸಿದ ಆನೆ (ಸಾಮ ದಾನ ಉಪಾಯ -ದೈನ್ಯ) ಬಲಿಷ್ಟ ಉಗ್ರ ಭಯಂಕರಮುಖದ ಸಿಂಹವು ಗೆಲ್ಲುವ ಚತುರೋಪಾಯವನ್ನು ಬಿಟ್ಟು,] ತಾನಳ್ಕಿ ಬಳ್ಕಿ ಕಡುವೈನ್ಯದಿಂದ ಈಗ ಮುಗ್ಧಾಂಗಮಂ(ದೀನ ದೇಹವನ್ನು ಅಥವಾ ಚೆಲುವಾದ ಮೈಕಟ್ಟನ್ನು ಅಥವಾ ಮೋಹಕ್ಕೆ ಒಳಪಟ್ಟಿರುವುದು) ತಳೆದಿರ್ಪುದು ಏನಿದು ಅಚ್ಚರಿ=[ತಾನು ಅಳುಕಿ,ಬಳುಕಿ ಬಹಳವೈನ್ಯದಿಂದ ಈಗ ದುರ್ಬಲವಾಗಿದೆ ಅಥವಾ ಮೋಹದಿಂದ ದೀನವಾಗಿದೆ ಏಕೆ ಏನಿದು ಆಶ್ಚರ್ಯ?]; ಏನಿದು ಅಚ್ಚರಿಯೆಂದು ವಿಟನು ಓರ್ವಳಂ ಕೇಳ್ದೊಡೆ=[ಏನಿದು ಆಶ್ಚರ್ಯವೆಂದು ವಿಟನು ಒಬ್ಬಳನ್ನು ಕೇಳಿದಾಗ], ಆ ನೀರೆ ನಗುತುಂ ಅಬಲಾಶ್ರಯದೊಳ್ ಇರೆ ಮೇರು(ಪರ್ವತ ಅಥವಾ ಮಣಿ) ಮಾನವನ ಕೈವಿಡಿತೆಗೆ ಒಳಗಪ್ಪುದು ಎಲೆ ಮರುಳೆ ನೀನರಿದುದಿಲ್ಲ ಎಂದಳು=[ಆ ಹೆಂಗಸು ನಗುತ್ತಾ ಅಬಲೆಯ ಆಶ್ರಯದಲ್ಲಿ ಬಲಿಷ್ಟರಲ್ಲದ ಹೆಣ್ಣಿನ ಆಶ್ರಯದಲ್ಲಿ ಇದ್ದರೆ ಮೇರು(ಪರ್ವತ ಅಥವಾ ಜಪಸರದಲ್ಲಿ ದೊಡ್ಡಮಣಿ)ಮೇರು ಎಂಬ ಪರ್ವತವೂ ಜಪಮಣಿ ಎಂಬ ಅರ್ಥದಲ್ಲಿ ಮನುಷ್ಯನ ಕೈಯ ಹಿಡಿತದಲ್ಲಿ ಇರುವುದು,ಎಲೆ ಮರುಳೆ ನೀನು ಅದನ್ನು ಅರಿತುಕೊಳ್ಳಲಿಲ್ಲ ಎಂದಳು] (ವಿಟನು ತಾನು ಪರಾಕ್ರಮಿಯಾದರೂ ಇಲ್ಲಿ ದೀನನಾಗಿರುವೆನು ಏಕೆ? ಎಂದು ದ್ವಂದ್ವಾರ್ಥದಲ್ಲಿ ಕೇಳಿದಾಗ ಆ ಗಣಿಕಾ ನಾರಿ ಅದೇ ದ್ವಂದಾರ್ಥದಲ್ಲಿ ನೀನು ಮೋಹಪರವಶನಾಗಿ ಅಬಲೆಯ (ಸ್ತ್ರೀಯ-ಅಥವಾ ಶಕ್ತಿಇಲ್ಲದವಳ) ಆಶ್ರಯದಲ್ಲಿ ಇರುವುದರಿಂದ ಜಪಮಣಿ (ಮೇರುವಾದರೂ)ಯಂತೆ ನಮ್ಮ ಮುಷ್ಟಿಯಲ್ಲಿ ದೀನನಾಗಿರುವೆ, ಅದನ್ನು ನೀನು ಅರಿಯಲಿಲ್ಲ ಎಂದಳು.
 • ತಾತ್ಪರ್ಯ:*ಮದಿಸಿದ ಆನೆಯನ್ನು ಬಲಿಷ್ಟ ಉಗ್ರ ಭಯಂಕರಮುಖದ ಸಿಂಹವು ಗೆಲ್ಲುವ ಚತುರೋಪಾಯವನ್ನು ಬಿಟ್ಟು, ತಾನು ಅಳುಕಿ,ಬಳುಕಿ ಬಹಳವೈನ್ಯದಿಂದ ಈಗ ದುರ್ಬಲವಾಗಿದೆ ದೀನವಾಗಿದೆ ಏಕೆ ಏನಿದು ಆಶ್ಚರ್ಯ? ಏನಿದು ಆಶ್ಚರ್ಯವೆಂದು ವಿಟನು ಒಬ್ಬಳನ್ನು ಕೇಳಿದಾಗ, ಆ ಹೆಂಗಸು ನಗುತ್ತಾ, ಅವನು ಗಣಿಕೆಯ ಮನೆಗೆ ಬಂದುದನ್ನು ನೆನಪಿಸಿ, ಅಬಲೆಯ ಆಶ್ರಯದಲ್ಲಿ ಎಂದರೆ ಬಲಿಷ್ಟರಲ್ಲದ ಹೆಣ್ಣಿನ ಆಶ್ರಯದಲ್ಲಿ ಇದ್ದರೆ ಮೇರುವೂ ಮೇರು ಎಂಬ ಪರ್ವತವೂ, ಜಪಮಣಿ ಎಂಬ ಅರ್ಥದಲ್ಲಿ ಮನುಷ್ಯನ ಕೈಯ ಹಿಡಿತದಲ್ಲಿ ಇರುವುದು, ಎಲೆ ಮರುಳೆ ನೀನು ಅದನ್ನು ಅರಿತುಕೊಳ್ಳಲಿಲ್ಲ ಎಂದಳು. (ವಿಟನು ತಾನು ಪರಾಕ್ರಮಿಯಾದರೂ ಇಲ್ಲಿ ದೀನನಾಗಿರುವೆನು ಏಕೆ? ಎಂದು ದ್ವಂದ್ವಾರ್ಥದಲ್ಲಿ ಕೇಳಿದಾಗ ಆ ಗಣಿಕಾ ನಾರಿ ಅದೇ ದ್ವಂದಾರ್ಥದಲ್ಲಿ ನೀನು ಮೋಹಪರವಶನಾಗಿ ಅಬಲೆಯ (ಸ್ತ್ರೀಯ-ಅಥವಾ ಶಕ್ತಿಇಲ್ಲದವಳ) ಆಶ್ರಯದಲ್ಲಿ ಇರುವುದರಿಂದ ಜಪಮಣಿಯಂತೆ (ಮೇರುವಾದರೂ) ನಮ್ಮ ಮುಷ್ಟಿಯಲ್ಲಿ ದೀನನಾಗಿರುವೆ, ಅದನ್ನು ನೀನು ಅರಿಯಲಿಲ್ಲ ಎಂದಳು.

(ಪದ್ಯ -೨೮)

ಪದ್ಯ :-:೨೯[ಸಂಪಾದಿಸಿ]

ಕಲಹಂಸಗಮನೆ ಪೂರ್ಣೇಂದುಮುಖಿ ಚಾರುಮಂ | ಗಳಗಾತ್ರಿ ಘನಸೌಮ್ಯಸುಂದರವಿಲಾಸಿನಿ ವಿ | ಮಲಗುರುಪಯೋಧರೆ ಸರಸಕವಿನುತಪ್ರಮದೆ ಮಲ್ಲಿಕಾಮಂದಸ್ಮಿತೆ ||
ವಿಲಸದ್ಭುಜಂಗಸಂಗತೆ ಮದನಕೇತು ಚಂ | ಚಲನೇತ್ರೆ ಕೇಳ್ ನಿನ್ನ ದೆಸೆಗಿದೆ ನವಗ ಹಂ | ಗಳ ಪೆಸರ ಬಲಮಿನ್ನು ಸೋಲ್ದಪುದು ನಿನಗೆ ಜನಮೆಂದಳೊರ್ವಳ್ ಸಖಿಯೊಳು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕಲಹಂಸಗಮನೆ =ಕಲಹಂಸದಂತೆ ನೆಡಯುವವಳೇ; ಪೂರ್ಣೇಂದುಮುಖಿ= ಹುಣ್ಣಿಮೆಯ ಚಂದ್ರನಮತೆ ಮುಖದವಳೇ; ಚಾರುಮಂಗಳಗಾತ್ರಿ= ಸುಂದರ ಮಂಗಳದೇಸವುಳ್ಳವಳೇ; ಘನಸೌಮ್ಯಸುಂದರವಿಲಾಸಿನಿ= ಉತ್ತಮ ಶಾಂತ ಗುಣದ ಚಲುವಿನ ಹೆಣ್ಣೇ; ವಿಮಲಗುರುಪಯೋಧರೆ=ನಿರ್ಮಲವಾದ ಗರುತರ/ದೊಡ್ಡ ಸ್ಥನವುಳ್ಳವಳೇ; ಸರಸಕವಿನುತಪ್ರಮದೆ= ಸರಸಗುಣಹೊಂದಿ ಕವಿಯ ಹೊಗಳಿಕೆ ಪಡೆದವಳೇ; ಮಲ್ಲಿಕಾಮಂದಸ್ಮಿತೆ=ಮಲ್ಲಿಗೆಹೂವಿನಂತೆ ತಿಳಿನಗೆ ಮಂದಸ್ಮಿತೆ; ವಿಲಸದ್ ಭುಜಂಗ(ವಿಟ,ಸರ್ಪ,ರಾಹು) ಸಂಗತೆ=ಶೋಭಿಸುವ ವಿಟರ ಸಂಗಾತಿಯೇ; ಮದನಕೇತು ಚಂಚಲನೇತ್ರೆ=ಮನ್ಮಥನಿಗೆ ಕೇತು ಎಂದರೆ ಧ್ವಜವಾದವಾದ ಮೀನಿನಂತೆ ಚಂಚಲನೇತ್ರ ವುಳ್ಳವಳೇ; ಕೇಳ್ ನಿನ್ನ ದೆಸೆಗಿದೆ ನವಗ್ರಹಂಗಳ ಪೆಸರ ಬಲಂ ಇನ್ನು ಸೋಲ್ದಪುದು ನಿನಗೆ ಜನಮ್ ಎಂದಳ್ ಓರ್ವಳ್ ಸಖಿಯೊಳು=ಕೇಳು ನಿನ್ನ ದೆಸೆಗೆ ನವಗ್ರಹಗಳ ಹೆಸರ ಬಲವಿದೆ; ಒಬ್ಬ ಗಣಿಕೆ ತನ್ನ ಸಖಿಯೊಡನೆ, ನಿನಗೆ ಇನ್ನು ಜನರು ಸೋಲುವರು ಎಂದಳು.
 • ತಾತ್ಪರ್ಯ:*ಕಲಹಂಸದಂತೆ ನೆಡಯುವವಳೇ; ಹುಣ್ಣಿಮೆಯ ಚಂದ್ರನಮತೆ ಮುಖದವಳೇ; ಸುಂದರ ಮಂಗಳ ದೇಹವುಳ್ಳವಳೇ; ಉತ್ತಮ ಸೌಮ್ಯ ಗುಣದ ಚಲುವಿನ ಹೆಣ್ಣೇ; ನಿರ್ಮಲವಾದ ಗರುತರ/ದೊಡ್ಡ ಸ್ಥನವುಳ್ಳವಳೇ; ಸರಸಗುಣಹೊಂದಿ ಕವಿಯ ಹೊಗಳಿಕೆ ಪಡೆದವಳೇ; ಮಲ್ಲಿಗೆಹೂವಿನಂತೆ ತಿಳಿನಗೆ ಮಂದಸ್ಮಿತೆ; ಶೋಭಿಸುವ ವಿಟರ ಸಂಗಾತಿಯೇ; ಮನ್ಮಥನಿಗೆ ಕೇತು ಎಂದರೆ ಅವನಿಗೆ ಧ್ವಜವಾದವಾದ ಮೀನ ದಂತೆ ಚಂಚಲನೇತ್ರವುಳ್ಳವಳೇ; ಕೇಳು ನಿನ್ನದೆಸೆಗೆ ನವಗ್ರಹಗಳ ಹೆಸರ ಬಲವಿದೆ ಎಂದು ಒಬ್ಬ ಗಣಿಕೆ ತನ್ನ ಸಖಿಯೊಡನೆ, ನಿನಗೆ ಇನ್ನು ಜನರು ಸೋಲುವರು ಎಂದಳು.(ಹಂಸ=ಸೂರ್ಯ;ಇಂದು=ಚಂದ್ರ; ಮಂಗಳ= ಕುಜ; ಸೌಮ್ಯ= ಬುಧ; ಗುರು= ಬೃಹಸ್ಪತಿ; ಕವಿ= ಶುಕ್ರ;ಮಂದ= ಶನಿ; ಭಜಂಗ = ರಾಹು; ಮತ್ತು ಕೇತು)

(ಪದ್ಯ -೨೯) XXVI

ಪದ್ಯ :-:೩೦[ಸಂಪಾದಿಸಿ]

ಇನ್ನು ಹಿಡಿಯದಿರು ಸಾಕಾಳ ಪನ್ನಗವೇಣಿ | ಮುನ್ನಾನೆ ಸಿಕ್ಕಿದುದ ನೋಡಿದಾ ಶಶಿವದನೆ | ಯೆನ್ನಮನೆಯೊಳ್ ಪೋದುದಕಟಕಟ ನಿನ್ನ ಕೈಗುದುರೆ ಪೊಂಗೊಡಮೊಲೆಯಳೆ ||
ನಿನ್ನ ತೇರ್ಮಾರ್ಪಜ್ಜೆಗೆಟ್ಟುದು ಸರೋಜಾಕ್ಷಿ | ನಿನ್ನಾಟ ಕಟ್ಟಿತರಸಂಚೆನಡೆಯಳೆ ಪೋಗು | ನಿನ್ನ ಚದುರಂಗಮಂ ಗೆಲ್ದೆನೆಂದೊರ್ವನಾಡುತೆ ಮುನಿದನಿನಿಯಳೊಡನೆ ||30||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಚದುರಂಗದ ಆಟವನ್ನು ಪುರುಷ ಸ್ತ್ರೀಯರರು ಆಡುವಾಗ ನೆಡೆಯವ ಆಟದ ಗತಿಯನ್ನು ರತಿಕ್ರೀಡೆಯ ಅಂತರಾರ್ಥದಲ್ಲಿ ಹೇಳಿದೆ;ಚದುರಂಗದ ಆಟದಲ್ಲಿ ರಾಜ,ಮಂತ್ರಿ ಆನೆ,ಕುದುರೆ,ರಥ,ಪೇದೆ,ಇರುತ್ತವೆ); ಇನ್ನು ಹಿಡಿಯದಿರು ಸಾಕು ಆಳ(ಚದುರಂಗದ ಪೇದೆ) ಪನ್ನಗವೇಣಿ(ಸರ್ಪದ ಜಡೆಯವಳು) ಮುನ್ನ ಆನೆ ಸಿಕ್ಕಿದುದ ನೋಡಿದ- = [ಇನ್ನು ಆಳ-ಚದುರಂಗದ ಪೇದೆಯಿಂದ ರಾಜನನ್ನು ಹಿಡಿಯದಿರು ಸಾಕು, ಪನ್ನಗವೇಣಿ(ಸರ್ಪದ ಜಡೆಯವಳು)ಯೇ, ಮುನ್ನ ಆನೆ(ಆಟದ ಆನೆಕಾಯಿ- ನಾನೆ) ಸಿಕ್ಕಿದುದನ್ನು ನೋಡಿರುವೆ (ನಿನ್ನಲ್ಲಿ ನಾನೇ ವಶವಾದುದನುನ್ನು ನೋಡಿರುವೆ); ಆ ಶಶಿವದನೆ ಯೆನ್ನ(ನನ್ನ) ಮನೆಯೊಳ್ ಪೋದುದು ಅಕಟಕಟ ನಿನ್ನ ಕೈ ಕುದುರೆ=[ಆ ಚಂದ್ರನಂತಿರುವಮುಖದವಳೇ ಯೆನ್ನ(ನನ್ನ) ಮನೆಯಲ್ಲಿ ನಿನ್ನ ಕುದುರೆಕಾಯಿ ಹೋಯಿತು ಅಕಟಕಟ-ಅಯೋ!(ನಿನ್ನದೇಹದಲ್ಲಿ ನಿನ್ನ ಕೈ ಕುದುರೆ /ನಾನು ಸೇರಿದೆ)]; ಪೊಂಗೊಡ(ಪೂರ್ಣ ಕುಂಭ-ಮಡಿಕೆಯಂತೆ ಮೊಲೆಯುಳ್ಳವಳೇ) ಮೊಲೆಯಳೆ ನಿನ್ನ ತೇರ್(ಚದುರಂಗದ ರಥ) ಮಾರ್ಪಜ್ಜೆಗ ಕೆಟ್ಟುದು(ಮುಂದೆಹೆಜ್ಜೆಇಡಲು ದಾರಿಇಲ್ಲದೆ ನಿಂತಿತು)=[ಎಲೆ ಹೆಣ್ಣೇ ನಿನ್ನ ಚದುರಂಗದ ರಥದ ಕಾಯಿ ಮುಂದೆ ಹೆಜ್ಜೆಇಡಲು ದಾರಿಇಲ್ಲದೆ ನಿಂತಿತು (ನಿನ್ನ ದಪ್ಪದೇಹ ಪರುಷನ ವಶವಾಗಲಿಲ್ಲ)]; ಸರೋಜಾಕ್ಷಿ(ಕಮಲದ ಕಣ್ಣಿನವಳೇ) ನಿನ್ನ ಆಟ ಕಟ್ಟಿತು ಅರಸಂಚೆನಡೆಯಳೆ(ಹಂಸದ ನಡಿಗೆಯವಳೇ) ಪೋಗು ನಿನ್ನ ಚದುರಂಗಮಂ(ನಾಲ್ಕು ಅಂಗಗಳನ್ನು ಆಥವಾ ಆಟವನ್ನು) ಗೆಲ್ದೆನು=[ಸರೋಜಾಕ್ಷೀ ನಿನ್ನ ಆಟ ಕಟ್ಟಿಹೋಗಿ ಸೋತೆ, ಹೋಗು ನಿನ್ನ ಚದುರಂಗವನ್ನು ಗೆದ್ದಿದ್ದೇನೆ,(ನಾಲ್ಕು ದೇಹದ ಅಂಗಗಳನ್ನು ಗೆದ್ದಿದ್ಧೇನೆ) ] ಎಂದ ಓರ್ವನ ಆಡುತೆ ಮುನಿದನು ಇನಿಯಳೊಡನೆ=[ ಒಬ್ಬ ವಿಟನು ಆಡುತ್ತಾ ಹಸಿ ಸಿಟ್ಟಿನಿಂದ ಪ್ರಿಯಳೊಡನೆ ಹೇಳಿದನು ]
 • ತಾತ್ಪರ್ಯ:*ಪುರುಷನು ಹೆಣ್ಣಿಗೆ ಆಟದಲ್ಲಿ ಹೇಳಿದನು: ಇನ್ನು ಚದುರಂಗದ ಪೇದೆಯಿಂದ ರಾಜನನ್ನು ಹಿಡಿಯದಿರು ಸಾಕು, ಪನ್ನಗವೇಣಿಯೇ, ಮುನ್ನ ಆಟದ ಆನೆಕಾಯಿ ಸಿಕ್ಕಿದುದನ್ನು ನೋಡಿರುವೆ (ನಿನ್ನಲ್ಲಿ ನಾನೇ ವಶವಾದುದನುನ್ನು ನೋಡಿರುವೆ); ಚಂದದವಳೇ ನನ್ನ ಮನೆಯಲ್ಲಿ ನಿನ್ನ ಕುದುರೆಕಾಯಿ ಹೋಯಿತು ಅಕಟಕಟ-ಅಯೋ!( ನಿನ್ನ ಕೈ ಕುದುರೆಯಾದ ನಾನು ನಿನ್ನ ದೇಹದಲ್ಲಿ ಸೇರಿದೆ); ಎಲೆ ಹೆಣ್ಣೇ ನಿನ್ನ ಚದುರಂಗದ ರಥದ ಕಾಯಿ ಮುಂದೆ ಹೆಜ್ಜೆಇಡಲು ದಾರಿಇಲ್ಲದೆ ನಿಂತಿತು, (ನಿನ್ನ ರಥ-ದಪ್ಪದೇಹ ಪರುಷನೆಡನೆ ಸರಿಯಾಗಿ ಚಲಿಸಲಿಲ್ಲ); ಸರೋಜಾಕ್ಷೀ ನಿನ್ನ ಆಟ ಕಟ್ಟಿಹೋಗಿ ಸೋತೆ, ಹೋಗು ನಿನ್ನ ಚದುರಂಗವನ್ನು ಗೆದ್ದಿದ್ದೇನೆ,(ನಿನ್ನ ದೇಹದ ನಾಲ್ಕು ಅಂಗಗಳನ್ನು ಗೆದ್ದಿದ್ಧೇನೆ), ಎಂದು ಒಬ್ಬ ವಿಟನು ಆಡುತ್ತಾ ಹಸಿ ಸಿಟ್ಟಿನಿಂದ ಪ್ರಿಯಳೊಡನೆ ಹೇಳಿದನು ]

(ಪದ್ಯ -೩೦)

ಪದ್ಯ :-:೩೧[ಸಂಪಾದಿಸಿ]

ಅಚ್ಚಪಳದಿಯ ಕಾಯ ಜೋಡ ಮೇಲೊತ್ತದೊಡೆ | ನಚ್ಚಿರ್ದ ಕೈಯ್ಯ ಕರಿದಿನ ಹಿಂಡ ಹಿಡಿಯದೊಡೆ | ಮೆಚ್ಚಿನಾಟಕೆ ಮೀರಿ ಬಂದ ಕೆಂಪಿನ ಹಣ್ಣನಂಡಲೆದು ಬಿಡದಿರ್ದೊಡೆ ||
ಬಚ್ಚನಾಲಗೆಯೆ ಬೀಳೆಂದು ಹಾಸಂಗಿಯಂ | ಪಚ್ಚೆಯ ವಿದೂಷಕನುರುಳ್ಚಿದಂ ಬಾಲೆಯರ | ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು ||31||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • (ಪಗಡೆಯಾಟವನ್ನು ಮನೆಗಳಿರುವ ಬಟ್ಟೆ ಹಾಸಿನಮೇಲೆ ಪಗಡೆಕಾಯಿಗಳನ್ನು ನಡೆಸಿ ಆಡುವರು; ಹಾಸಿನ ಮಧ್ಯದಲ್ಲಿ ಗೆದ್ದ/ಹಣ್ಣಾದಕಾಯಿಗಳನ್ನು ಇಡುವರು;ಪಗಡೆಕಾಯಿಗಳು ಕೆಂಪು ಹಸಿರು,ಹಳದಿ, ಕಪ್ಪು ಬಣ್ನಗಲಲ್ಲಿರುವುದು, ಜೋಡಿಯಾಗಿ ನೆಡೆಸುವರು.)(ವಿದೂಷಕನುರುಳ್ಚಿದಂ ಬಾಲೆಯರ ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು) ವಿದೂಷಕನು ಅರ್ಥಾಂತರದಿಂದ ಯಾ ದ್ವಂದ್ವಾರ್ಥದಲ್ಲಿ ಕಟಕಿಯ ಮಾತಿನಿಂದ ಪಗಡೆಯಾಟದ ನೆವದಲ್ಲಿ.
 • ಅಚ್ಚಪಳದಿಯ ಕಾಯ= ಚಿನ್ನದಬಣ್ಣದ ಹಳದಿ ಕಾಯನ್ನು, ಜೋಡ ಮೇಲೆ ಒತ್ತದೊಡೆ=ಜೋಡಿಯಾಗಿ ಹಾಸಿನ ಮೇಲೆ ಒತ್ತಿ ನಡೆಸದಿದ್ದರೆ, ನಚ್ಚಿರ್ದ ಕೈಯ್ಯ=ಒಂದು ಕೈ ಆಟಕ್ಕೆ ಹಣ್ಣಾಗುವ, ಕರಿದಿನ ಹಿಂಡ ಹಿಡಿಯದೊಡೆ= ಕಪ್ಪು ಕಾಯಿಗಳಹಿಂಡನ್ನು ಹಿಡಿದು ಹೊಡೆಯದಿದ್ದರೆ, ಮೆಚ್ಚಿನಾಟಕೆ ಮೀರಿ ಬಂದ ಕೆಂಪಿನ ಹಣ್ಣನು ಅಂಡಲೆದು ಬಿಡದಿರ್ದೊಡೆ= ಒಳ್ಳೆಯ ಆಟದಲ್ಲಿ ಮುಂದೆ ಹಣ್ಣಿಗೆ ಬಂದ ಕೆಂಪುಕಾಯಿಗಳನ್ನು ಬೆನ್ನಟ್ಟಿ, ಬಚ್ಚನಾಲಗೆಯೆ ಬೀಳೆಂದು= ಕವಡೆಯಲ್ಲಿ/ ದಾಳದಲ್ಲಿ ನಾಲ್ಕೇ ಬೀಳು ಎಂದು; ಹಾಸಂಗಿಯಂ=ಹಾಸಿನ ಮೇಲೆ, ಪಚ್ಚೆಯ(ದಾಳ?) ವಿದೂಷಕನುರುಳ್ಚಿದಂ= ವಿದೂಷಕನು, ದಾಳಗಳನ್ನು ಉರುಳಿಸಿದನು. ಬಾಲೆಯರ ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು= ಹೀಗೆ ಪಗಡೆಯಾಟದ ನೆವದಲ್ಲಿ ಕಟಕಿಯ ಮಾತನಲ್ಲಿ ಬಾಲೆಯರನ್ನು ಮೆಚ್ಚಿಸಿದನು.
 • ತಾತ್ಪರ್ಯ:*ಚಿನ್ನದಬಣ್ಣದ ಹಳದಿ ಕಾಯನ್ನು, ಜೋಡಿಯಾಗಿ ಹಾಸಿನ ಮೇಲೆ ಒತ್ತಿ ನಡೆಸದಿದ್ದರೆ,ಒಂದು ಕೈ ಆಟಕ್ಕೆ ಹಣ್ಣಾಗುವ, ಕಪ್ಪು ಕಾಯಿಗಳಹಿಂಡನ್ನು ಹಿಡಿದು ಹೊಡೆಯದಿದ್ದರೆ, ಒಳ್ಳೆಯ ಆಟದಲ್ಲಿ ಮುಂದೆ ಹಣ್ಣಿಗೆ ಬಂದ ಕೆಂಪುಕಾಯಿಗಳನ್ನು ಬೆನ್ನಟ್ಟಿ, ಕವಡೆಯಲ್ಲಿ/ ದಾಳದಲ್ಲಿ ನಾಲ್ಕೇ ಬೀಳು ಎಂದು; ಹಾಸಿನ ಮೇಲೆ, ಪಚ್ಚೆಯ(ದಾಳ?)ಹಾಕು. ವಿದೂಷಕನು, ದಾಳಗಳನ್ನು ಉರುಳಿಸಿದನು. ಬಾಲೆಯರ ಮೆಚ್ಚಿಸುವ ಕಟಕಿವಾತುಗಳ ಜಾಣ್ಮೆಗಳಿಂದೆ ಪಗಡೆಯಾಡುವ ನೆವದೊಳು= ಹೀಗೆ ಪಗಡೆಯಾಟದ ನೆವದಲ್ಲಿ ಕಟಕಿಯ ಮಾತನಲ್ಲಿ ಬಾಲೆಯರನ್ನು ಮೆಚ್ಚಿಸಿದನು. (ದ್ವಂದ್ವಾರ್ಥ: ಹಾಸಿಗೆಯ ಮೇಲೆ ನಿನ್ನ ಎದೆಯ ಜೋಡಿಕಾಯಿಗಳನ್ನು ಪ್ರಿಯಕರನಿಗೆ ಒತ್ತು,ಹಣ್ಣಿನಂತಿರವ ಕೆಂಪು ತುಟಿ, ನಾಲಗೆಗಳನ್ನು, ಕಪ್ಪು ಕೋದಲನ್ನೂ ಮೆಚ್ಚಿನ ಆಟಕ್ಕೆ ಬಿಡು ಎಂದನು)

(ಪದ್ಯ -೩೧)

ಪದ್ಯ :-:೩೨[ಸಂಪಾದಿಸಿ]

ಕೈಗೆ ಮೊಲೆಗಳ ಬಿಣ್ಪು ಕಣ್ಗೆ ಚೆಲ್ವಿನ ಸೊಂಪು | ಬಾಯ್ಗೆ ಚೆಂದುಟಿಯಿಂಪು ಕಿವಿಗೆ ನುಡಿಗಳ ನುಣ್ಪು | ಸುಯ್ಗೆ ತನುವಿನ ಕಂಪು ಸೋಂಕಿಗಣ್ಪಿನ ತಂಪು ಚಿತ್ತಕೆ ಸೊಗಸಿನಲಂಪು ||
ಮೈಗೂಟದೊಳ್ ಸಮನಿಪೆಳವೆಣ್ಗಳೆಸೆದಿರ್ದ | ರೈಗಣಿಗಳಿಸುಗೆಗಳುಕದ ಯೋಗಿನಿಕರಮಂ | ಸೈಗೆಡಪಲೆಂದಂಗಜಂ ಪೂಜೆಗೈವ ಸಮ್ಮೋಹನಾಸ್ತ್ರಂಗಳೆನಲು ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿಟರ ಕೈಗೆ ಮೊಲೆಗಳ ಬಿಣ್ಪು ಕಣ್ಗೆ ಚೆಲ್ವಿನ ಸೊಂಪು ಬಾಯ್ಗೆ ಚೆಂದುಟಿಯಿಂಪು ಕಿವಿಗೆ ನುಡಿಗಳ ನುಣ್ಪು ಸುಯ್ಗೆ ತನುವಿನ ಕಂಪು ಸೋಂಕಿಗಣ್ಪಿನ ತಂಪು ಚಿತ್ತಕೆ ಸೊಗಸಿನಲಂಪು=[ವಿಟರ ಕೈಗೆ ಮೊಲೆಗಳ ಬಿರುಸು, ಕಣ್ಣಿಗೆ ಚೆಲುವಿನ ಸೊಂಪು, ಬಾಯಿಗೆ ಚೆಂದುಟಿಯ ರುಚಿ, ಕಿವಿಗೆ ಮಾತಗಳ ಹಿತ, ಉಸುರಾಡುವಾಗ ಪ್ರಿಯಳದೇಹದ ಕಂಪು, ಮಟ್ಟಿದಾಗ ಅನುಭವಕ್ಕೆ ತಂಪು, ಮನಸ್ಸಿಗೆ ಸೊಗಸಿನ ಸುಖ ಇವುಗಳನ್ನು] ಮೈ ಕೂಟದೊಳ್ ಸಮನಿಪ ಎಳವೆಣ್ಗಳು ಎಸೆದಿರ್ದರು ಐಗಣಿಗಳ(ಐದು ಮನ್ಮಥನ ಬಾಣಗಳಿಗೆ) ಎಸುಗೆ(ಏಟಿಗೆ) ಅಳುಕದ(ಹೆದರದ) ಯೋಗಿ ನಿಕರಮಂ ಸೈಗೆಡಪಲು ಎಂದು ಅಂಗಜಂ ಪೂಜೆಗೈವ ಸಮ್ಮೋಹನಾಸ್ತ್ರಂಗಳು ಎನಲು=[ದೇಹ ಸಂಬಂಧದಲ್ಲಿ ಸೇರುವ ಎಳೆಯ ಬಾಲೆಯರು ಪ್ರಕಾಶಿಸುತ್ತದ್ದರು. ಐಗಣಿಗಳ(ಐದು ಮನ್ಮಥನ ಬಾಣಗಳಿಗೆ) ಎಸುಗೆ(ಏಟಿಗೆ) ಅಳುಕದ(ಹೆದರದ) ಯೋಗಿ ನಿಕರಮಂ(ಸಮೂಹವನ್ನು) ಸೈಗೆಡಪಲು(ಸೋಲಿಸಿಕೆಡವಬೇಕು) ಎಂದು ಅಂಗಜಂ(ಮನ್ಮಥನು) ಪೂಜೆಗೈವ(ಪೂಜೆಮಾಡುತ್ತಿರುವ) ಸಮ್ಮೋಹನಾಸ್ತ್ರಂಗಳೋ ಎನಲು(ಎನ್ನುವಂತೆ)]
 • ತಾತ್ಪರ್ಯ:*ವಿಟರ ಕೈಗೆ ಮೊಲೆಗಳ ಬಿರುಸು, ಕಣ್ಣಿಗೆ ಚೆಲುವಿನ ಸೊಂಪು, ಬಾಯಿಗೆ ಚೆಂದುಟಿಯ ರುಚಿ, ಕಿವಿಗೆ ಮಾತಗಳ ಹಿತ, ಉಸುರಾಡುವಾಗ ಪ್ರಿಯಳದೇಹದ ಕಂಪು, ಮಟ್ಟಿದಾಗ ಅನುಭವಕ್ಕೆ ತಂಪು, ಮನಸ್ಸಿಗೆ ಸೊಗಸಿನ ಸುಖ ಇವುಗಳನ್ನು ದೇಹ ಸಂಬಂಧದಲ್ಲಿ ಸೇರುವಾಗ ಕೊಡುವ ಎಳೆಯ ಬಾಲೆಯರು ಐದು ಮನ್ಮಥನ ಬಾಣಗಳಿಗೆ ಏಟಿಗೆ ಹೆದರದ ಯೋಗಿ ಸಮೂಹವನ್ನು ಸೋಲಿಸಿ ಕೆಡವಬೇಕು ಎಂದು ಮನ್ಮಥನು ಪೂಜೆಮಾಡುತ್ತಿರುವ ಸಮ್ಮೋಹನಾಸ್ತ್ರಂಗಳೋ ಎನ್ನುವಂತೆ ಪ್ರಕಾಶಿಸುತ್ತದ್ದರು.

(ಪದ್ಯ -೨೬)

ಪದ್ಯ :-:೩೩[ಸಂಪಾದಿಸಿ]

ಇವಳ ಮನಮೇಕಿವಳ ತುಂಗಕುಚದಂತಾದು | ದಿವಳ ಸನ್ಮಾನಮೇಕಿವಳ ನಡೆಯಂತಾದು | ದಿವಳೊಲವಿದೇಕಿವಳ ಮಧ್ಯದಂತಾದುದಿರ್ದವೊಲೀಗಳೆನ್ನೆಡೆಯೊಳು ||
ಇವಳ ನುಡಿಯೇಕಿವಳ ಕುರುಳಂದಮಾದುದಿಂ | ದಿವಳರಿಯಳಿವಳ ತಾಯ್ಬೋಧಿಸಿದಳಾಗಬೇ | ಕಿವಳನೆಂದವಳ ಕಣ್ಣಂ ತಾಗಿ ನಿಜಸಖನೊಳೊರ್ವನಾಲೋಚಿಸಿದನು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ವಿಟನು ಗೆಳೆಯನೊಡನೆ ಹೇಳುವನು; ಇವಳ ಮನಂ ಏಕೆ ಇವಳ ತುಂಗಕುಚದಂತೆ ಆದುದು=[ಇವಳ ಮನಸ್ಸು ಏಕೆ ಇವಳ ಉನ್ನತಕುಚದಂತೆ ಆಯಿತು?ಕಠಿಣವಾಗಿದೆ / ಉದ್ವೇಗ ಹೊಂದಿದೆ]; ಇವಳ ಸನ್ಮಾನಂ ಏಕಿವಳನಡೆಯಂತಾದುದು=[ಇವಳ ಗಾಂಭೀರ್ಯವು ಏಕೆ ಇವಳ ನಡೆಗೆಯಂತೆ ಚಂಚಲವಾಗಿದೆ?] ಇವಳ ಒಲವಿದು ಏಕಿವಳ ಮಧ್ಯದಂತಾದುದು=[ಇವಳ ಪ್ರೀತಿ ಏಕೆ ಇವಳ ಮಧ್ಯದಂತೆ ಕೃಶವಾಯಿತು?(ಕಡಿಮೆ)]; ಇರ್ದವೊಲ್ ಈಗಳು ಎನ್ನೆಡೆಯೊಳು ಇವಳ ನುಡಿಯೇಕೆ ಇವಳ ಕುರುಳಂದಂ ಆದುದಿಂದು=[ಹಿಂದಿನಂತೆ ಈಗ ನನ್ನಲ್ಲಿ ಇವಳ ಮಾತು ಏಕೆ ಇವಳ ಕುರುಳಿನಂತೆ ಇಂದು ಕೊಂಕಿನಿಂದ ಕೂಡಿದೆ?]; ಇವಳು ಅರಿಯಳು ಇವಳ ತಾಯ್ ಬೋಧಿಸಿದಳು ಆಗಬೇಕಿವಳನೆಂದು ಅವಳ ಕಣ್ಣಂ ತಾಗಿ ನಿಜಸಖನೊಳು ಓರ್ವನಾಲೋಚಿಸಿದನು=[ಇವಳು ತನ್ನ ಪ್ರೀತಿಯನ್ನು ಅರಿಯಳು;ಇವಳನ್ನು ತಡೆಯಲು, ಇವಳ ತಾಯಿ ಅವಳ ಕಣ್ಣುತಾಗಿ ಹೊಟ್ಟೆಕಿಚ್ಚಿನಿಂದ ಬೋಧಿಸಿರಬೇಕು, ಎಂದು ತನ್ನ ಸಖನಹತ್ತಿರ ಒಬ್ಬನು ಆಲೋಚನೆಮಾಡಿದನು.]
 • ತಾತ್ಪರ್ಯ:*ವಿಟನು ಗೆಳೆಯನೊಡನೆ ಹೇಳುವನು; ಇವಳ ಮನಸ್ಸು ಏಕೆ ಇವಳ ಉನ್ನತಕುಚದಂತೆ ಆಯಿತು?ಕಠಿಣವಾಗಿದೆ / ಉದ್ವೇಗ ಹೊಂದಿದೆ; ಇವಳ ಗಾಂಭೀರ್ಯವು ಏಕೆ ಇವಳ ನಡೆಗೆಯಂತೆ ಚಂಚಲವಾಗಿದೆ? ಇವಳ ಪ್ರೀತಿ ಏಕೆ ಇವಳ ಮಧ್ಯದಂತೆ ಕೃಶವಾಯಿತು?(ಕಡಿಮೆ); ಹಿಂದಿನಂತೆ ಈಗ ನನ್ನಲ್ಲಿ ಇವಳ ಮಾತು ಏಕೆ ಇವಳ ಕುರುಳಿನಂತೆ ಇಂದು ಕೊಂಕಿನಿಂದ ಕೂಡಿದೆ?; ಇವಳು ತನ್ನ ಪ್ರೀತಿಯನ್ನು ಅರಿಯಳು; ಇವಳನ್ನು ತಡೆಯಲು, ಇವಳ ತಾಯಿ ಅವಳ ಕಣ್ಣುತಾಗಿ ಹೊಟ್ಟೆಕಿಚ್ಚಿನಿಂದ ಬೋಧಿಸಿರಬೇಕು,ಎಂದು ತನ್ನ ಸಖನಹತ್ತಿರ ಒಬ್ಬನು ಆಲೋಚನೆಮಾಡಿದನು.

(ಪದ್ಯ -೩೩)

ಪದ್ಯ :-:೩೪[ಸಂಪಾದಿಸಿ]

ಸವಿನೋಟದೊಳ್ ಸಂಚು ನಗೆಯೊಳ್ ಪ್ರಪಂಚು ಸೊಗ | ಸುವ ಬೇಟದೊಳ್ ಕೃತಕಮೊಲವಿನೊಳ್ ಗತಕಮುಸಿ | ರುವ ಲಲ್ಲೆಯೊಳ್ ಕೊಂಕು ಬಗೆಯೊಳ್ ಕಳಂಕು ಸವಿಗಲೆಗಳೊಳ್ ಸಲೆ ವಂಚನೆ||
ತವಕದೊಳ್ ಪುಸಿಯಳವು ತಕ್ಕೆಯೊಳ್ ಕಳವು ಮೀ | ರುವ ನೇಹದೊಳ್ ನುಸುಳು ಕೂಟದೊಳ್ ಮಸುಳು ಸೇ | ರುವೆಯಾಗಿ ನೆಲಗೊಂಡ ಗಣಿಕೆಯರ ತಂಡಮೀ ತೆರದ ಚೆಲ್ವಂ ಪಡೆದುದು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸವಿನೋಟದೊಳ್ ಸಂಚು ನಗೆಯೊಳ್ ಪ್ರಪಂಚು ಸೊಗಸುವ ಬೇಟದೊಳ್ ಕೃತಕಂ=[ಪ್ರೀತಿಯ ನೋಟದಲ್ಲಿ ವಂಚನೆ; ನಗೆಯಲ್ಲಿ ಮೋಸ ಸುಖದ ಕಾಮಚೇಷ್ಟೆಯಲ್ಲಿ ಕೃತಕ]; ಒಲವಿನೊಳ್ ಗತಕಂ (ಘಾತಕತನ) ಉಸಿರುವ ಲಲ್ಲೆಯೊಳ್ ಕೊಂಕು ಬಗೆಯೊಳ್ ಕಳಂಕು ಸವಿಗಲೆಗಳೊಳ್ ಸಲೆ ವಂಚನೆ=[ಪ್ರೀತಿಯಲ್ಲಿ ಮೋಸ; ಹೇಳುವ ಮತಿನಲ್ಲಿ ಕೊಂಕು; ಮನಸ್ಸಿನಲ್ಲಿ ಕಳಂಕ/ದುರಾಲೋಚನೆ; ಸವಿ/ಒಳ್ಳೆಯ ಕಲೆಗಳಲ್ಲಿ ಕೇವಲ ವಂಚನೆ];ತವಕದೊಳ್ ಪುಸಿಯಳವು ತಕ್ಕೆಯೊಳ್ ಕಳವು ಮೀರುವ ನೇಹದೊಳ್ ನುಸುಳು=[ದೇಹಸಂಬಂಧದ ತವಕದಲ್ಲಿ ಹುಸಿನಟನೆ, ಅಪ್ಪುಗೆಯಲ್ಲಿ ಕಳ್ಳಸ್ನೇಹ; ಅತಿಯಾದನೇಹದಲ್ಲಿ ಜಾರಿಕೊಳ್ಳವಿಕೆ]; ಕೂಟದೊಳ್ ಮಸುಳು ಸೇರುವೆಯಾಗಿ ನೆಲಗೊಂಡ ಗಣಿಕೆಯರ ತಂಡಮೀ ತೆರದ ಚೆಲ್ವಂ ಪಡೆದುದು=[ರತಿಸಮಯದಲ್ಲಿ ಸಿಟ್ಟು; ಇವೆಲ್ಲಾ ಸೇರಿಕೊಂಡು ಇರುವ ಗಣಿಕೆಯರ ತಂಡವು ಈ ಬಗೆಯ ಚಂದವನ್ನು ಪಡೆದಿತ್ತು].
 • ತಾತ್ಪರ್ಯ:*ಪ್ರೀತಿಯ ನೋಟದಲ್ಲಿ ವಂಚನೆ; ನಗೆಯಲ್ಲಿ ಮೋಸ ಸುಖದ ಕಾಮಚೇಷ್ಟೆಯಲ್ಲಿ ಕೃತಕ; ಪ್ರೀತಿಯಲ್ಲಿ ಮೋಸ; ಹೇಳುವ ಮತಿನಲ್ಲಿ ಕೊಂಕು; ಮನಸ್ಸಿನಲ್ಲಿ ಕಳಂಕ/ದುರಾಲೋಚನೆ; ಸವಿ/ಒಳ್ಳೆಯ ಕಲೆಗಳಲ್ಲಿ ಕೇವಲ ವಂಚನೆ; ದೇಹಸಂಬಂಧದ ತವಕದಲ್ಲಿ ಹುಸಿನಟನೆ, ಅಪ್ಪುಗೆಯಲ್ಲಿ ಕಳ್ಳಸ್ನೇಹ; ಅತಿಯಾದನೇಹದಲ್ಲಿ ಜಾರಿಕೊಳ್ಳವಿಕೆ; ರತಿಸಮಯದಲ್ಲಿ ಸಿಟ್ಟು; ಇವೆಲ್ಲಾ ಸೇರಿಕೊಂಡು ಇರುವ ಗಣಿಕೆಯರ ತಂಡವು ಈ ಬಗೆಯ ಚಂದವನ್ನು ಪಡೆದಿತ್ತು.

(ಪದ್ಯ -೩೪)

ಪದ್ಯ :-:೩೫[ಸಂಪಾದಿಸಿ]

ಅಕ್ಕಜವ ಮಾಡದಿರಿವಂ ನಿನ್ನಮೈವಳಿಗೆ | ತಕ್ಕನಲ್ಲಂ ನೀನೊಲಿವಗೊಡವೆಯೇಕಿನ್ನು | ಕಕ್ಕುಲಿತೆ ಬೇಡಿವನ ಕೂಟಮಂ ಪರಿದ ಬಳಿಕಿವನ ಲೇಸಾವುದುಂಟು ||
ಠಕ್ಕಿಪೊಡೆ ಪೊನ್ನಿಲ್ಲದಾತನಿವನಾಗನಿದಿ | ರಿಕ್ಕದಿರ್ ಸಾಕೆಂದು ಮುಳಿಸಿನೊಳ್ ವಿಟನ ಚಿ | ತ್ತಕ್ಕೆಸೊಗಸೆನೆ ಸೂಳೆಗವಳ ದೂತಿಕೆ ನುಡಿದಳವನ ಜರೆದಾ ಪೊಗಳ್ವೊಲು ||35||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ದಾದಿ ಹಿತವಚನ ಹೇಳುವಳು: ಅಕ್ಕಜವ( ಅಕ್ಕಜ:ಪ್ರೀತಿ-ಜವ:ಅವಸರ) ಮಾಡದಿರು ಇವಂ ನಿನ್ನ ಮೈವಳಿಗೆ ತಕ್ಕನಲ್ಲಂ=[ಅಕ್ಕ ಇವನ ಬಗೆಗೆ ಅಕ್ಕರೆ/ಪ್ರೀತಿ ಮಾಡಬೇಡ ಇವನು ನಿನ್ನ ಶರೀರ ಸುಖಕ್ಕೆ ತಕ್ಕವನು ಅಲ್ಲ]; ನೀನು ಅವನಿಗೆ ಒಲಿವ ಗೊಡವೆಯೇಕೆ ಇನ್ನು? ಕಕ್ಕುಲಿತೆ(ಕಕ್ಕುಲತೆ-ಕರುಣೆ ಪ್ರೀತಿ) ಬೇಡಿವನ ಕೂಟಮಂ ಪರಿದ ಬಳಿಕ ಇವನ ಲೇಸ ಆವುದುಂಟು=[ನೀನು ಇವನಿಗೆ ಒಲಿಯುವ ಗೊಡವೆಯೇಕೆ ಇನ್ನು? ಅನುಕಂಪ ಪ್ರಿತಿ ಬೇಡ ಇವನ ಜೊತೆ ಸೇರುವುದನ್ನು ಬಿಟ್ಟ ಬಳಿಕ ಇವನಿಂದ ಪ್ರಯೋಜನವೇನು? ದುಡ್ಡಿಲ್ಲದವನು ಇವನಲ್ಲ, ಮೋಸಮಾಡಲುಹಾಗೆ ಹೇಳವನು; ನಿನ್ನನು ನೀನು ಕೊಡಬೇಡ; ಸಿಟ್ಟಿನಲ್ಲಿ ಸಾಕು ಎಂದು ಇವನನ್ನು ಬಿಡು ಎಂದು ಅವನನ್ನು ಜೆರೆದು ಗಣಿಕೆಗೆ ಹೇಳಿದಳು. ಆದರೆ ಅದೇ ಮಾತುಗಳು ಬೇರೆ ಅರ್ಥದಲ್ಲಿ ವಿಟನ ಮನಸ್ಸಿಗೆ ಸೊಗಸೆನಿಸುವ ಅರ್ಥ ಬರುವಂತೆಯೂ ಇತ್ತು.
 • ಪುರುಷನ ಪರವಾಗಿ: ಅಕ್ಕ ಜವ ಮಾಡದಿರು= ಅಕ್ಕ ಅವಸರ ಮಾಡಬೇಡ, ದುಡಿಕಿ ಮಾತನಾಡಬೇಡ, ಇವಂ ನಿನ್ನಮೈವಳಿಗೆ ತಕ್ಕ ನಲ್ಲಂ= ನಿನ್ನು ದೇಹಕ್ಕೆ ತಕ್ಕ ನಲ್ಲನು, ನೀನೊಲಿ ಇವಗೆ ಒಡವೆಯೇಕಿನ್ನು=ನೀನು ನೀನು ಒಲಿದಗೆ, ಒಲಿದಮೇಲೆ ಇನ್ನು ಒಡವೆ ಕೇಳುವುದು ಏಕೆ?, ಒಡವೆ ದುಡ್ಡಿಗೆ ಕಾಟ ಕೊಡಬೇಡ. ಕಕ್ಕುಲಿತೆ ಬೇಡು ಇವನ ಕೂಟಮಂ ಪರಿದ ಬಳಿಕಿವನ ಲೇಸಾವುದುಂಟು=ಇವನ ಪ್ರೀತಿಯನ್ನು ಬೇಡು, ಪ್ರೀತಿ ಕೂಟ ಬಿಟ್ಟರೆ ಕಳೆದ ಬಳಿಕ ಲೇಸು ಏನಿದೆ? ಆದ್ದರಿಂದ ಬಿಡಬೇಡ; ಠಕ್ಕಿಪೊಡೆ= ಮೋಸ ಮಾಡುವನೆಂದರೆ, ಪೊನ್ನಿಲ್ಲದಾತನು ಇವನಾಗನು= ಹೊನ್ನು ಇಲ್ಲದವನು ಇವನು ಆಗಿರನು; ದಿರಿಕ್ಕದಿರ್ ಸಾಕೆಂದು ಮುಳಿಸಿನೊಳ್= ಮುಳಸಿನಲ್ಲಿ/ ಸಿಟ್ಟಿನಲ್ಲಿ, ಇದಿರು ಹೇಳಿ ಜಗಳಾಡಬೇಡ;ಹೀಗೆ ವಿಟನ ಚಿತ್ತಕ್ಕೆ ಸೊಗಸು ಎನಿಸುವಂತೆ ಅವಳ ದೂತಿಕೆ ಸೂಳೆಗೆ ಅವನನ್ನು ಬಿಡಲು ಹಿತವಚನ ನುಡಿದಳು.
 • ತಾತ್ಪರ್ಯ:*ದಾದಿ ಹಿತವಚನ ಹೇಳುವಳು: ಅಕ್ಕ ಇವನ ಬಗೆಗೆ ಅಕ್ಕರೆ/ಪ್ರೀತಿ ಮಾಡಬೇಡ ಇವನು ನಿನ್ನ ಶರೀರ ಸುಖಕ್ಕೆ ತಕ್ಕವನು ಅಲ್ಲ; ನೀನು ಇವನಿಗೆ ಒಲಿಯುವ ಗೊಡವೆಯೇಕೆ ಇನ್ನು? ಅನುಕಂಪ ಪ್ರಿತಿ ಬೇಡ ಇವನ ಜೊತೆ ಸೇರುವುದನ್ನು ಬಿಟ್ಟ ಬಳಿಕ ಇವನಿಂದ ಪ್ರಯೋಜನವೇನು? ದುಡ್ಡಿಲ್ಲದವನು ಇವನಲ್ಲ, ಮೋಸಮಾಡಲು ಹಾಗೆ ಹೇಳವನು; ನಿನ್ನನು ನೀನು ಕೊಡಬೇಡ; ಸಿಟ್ಟಿನಲ್ಲಿ ಸಾಕು ಎಂದುಇವನನ್ನು ಬಿಡು ಎಂದು ಅವನನ್ನು ಜೆರೆದು ಗಣಿಕೆಗೆ ಹೇಳಿದಳು. ಆದರೆ ಅದೇ ಮಾತುಗಳು ಬೇರೆ ಅರ್ಥದಲ್ಲಿ ವಿಟನ ಮನಸ್ಸಿಗೆ ಸೊಗಸೆನಿಸುವ ಅರ್ಥ ಬರುವಂತೆ ಸೂಳೆಗೆ ಅವಳ ಸೇವಕಿ ಅವನನ್ನು ಜರೆದು ಮತ್ತು ಹೊಗಳಿದಂತೆ ಹೇಳಿದಳು,]
 • ಪುರುಷನ ಪರವಾಗಿ: ಅಕ್ಕ ಅವಸರ ಮಾಡಬೇಡ, ದುಡಿಕಿ ಮಾತನಾಡಬೇಡ, ನಿನ್ನ ದೇಹಕ್ಕೆ ತಕ್ಕ ನಲ್ಲನು, ನೀನು ಒಲಿದಮೇಲೆ ಇನ್ನು ಒಡವೆ ಕೇಳುವುದು ಏಕೆ?, ಒಡವೆ ದುಡ್ಡಿಗೆ ಕಾಟ ಕೊಡಬೇಡ. ಇವನ ಪ್ರೀತಿಯನ್ನು ಬೇಡು, ಪ್ರೀತಿ ಕೂಟ ಬಿಟ್ಟು ಕಳೆದ ಬಳಿಕ ಲೇಸು ಏನಿದೆ? ಆದ್ದರಿಂದ ಬಿಡಬೇಡ; ಮೋಸ ಮಾಡುವನೆಂದರೆ, ಹೊನ್ನು ಇಲ್ಲದವನು ಇವನು ಆಗಿರನು; ಮುಳಸಿನಲ್ಲಿ/ ಸಿಟ್ಟಿನಲ್ಲಿ, ಇದಿರು ಹೇಳಿ ಜಗಳಾಡಬೇಡ;ಹೀಗೆ ವಿಟನ ಚಿತ್ತಕ್ಕೆ ಸೊಗಸು ಎನಿಸುವಂತೆ ಅವಳ ದೂತಿಕೆ ಸೂಳೆಗೆ ನುಡಿದಳು.

(ಪದ್ಯ -೩೫)

ಪದ್ಯ :-:೩೬[ಸಂಪಾದಿಸಿ]

ತಾಂ ತವೆ ಕೃತಾಂತರಿಪುನೇತ್ರದಿಂದುರಿದ ವೃ | ತ್ತಾಂತಮಂ ನೆನೆಯದೆ ಲತಾಂತಶರನಗಲ್ದ ವನಿ | ತಾಂತರ್ ನಿತಾಂತವನಮಂ ಸುಡುವೆನೆಂದು ಪೊರಮಟ್ಟು ನಡೆತಪ್ಪನಂತೆ ||
ಕಾಂತೆ ನೀನೇಕಾಂತದಿಂ ಪವಡಿಸುವ ಚಂದ್ರ | ಕಾಂತಭವನದೊಳತೇಕಾಂತದೊಳಿಹಂ ನಿನ್ನ | ಕಾಂತನೇಕಾಂತರಂಗದೊಳೆಣಿಕೆಯೆಂದೊರ್ವ ಚಪಳೆ ತರಳೆಗೆ ನುಡಿದಳು ||36||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತುಂಟ ಗೆಳತಿ ಯುವತಿಗೆ ಹೇಳಿದ್ದು: ತಾಂ=ಮನ್ಮಥನು ತಾನು, ತವೆ=ತಾನೇ ಕೃತಾಂತರಿಪುನೇತ್ರದಿಂದ=ಶಿನ ಹಣೆಗಣ್ಣಿಂದ, ಉರಿದ ವೃತ್ತಾಂತಮಂ ನೆನೆಯದೆ= ಸುಟ್ಟ ವಿಚಾರವನ್ನು ನೆನಪಿಸಿಕೊಳ್ಳದೆ, ಲತಾಂತಶರನು= ಮದನನು, ಅಗಲ್ದ=ಅಗಲಿದ ವನಿತಾಂತರ್=ಹಂಗಸರ ಹೃದಯವೆಂಬ, ನಿತಾಂತವನಮಂ= ದಟ್ಟ ವನವನ್ನು, ಸುಡುವೆನೆಂದು ಪೊರಮಟ್ಟು ನಡೆತಪ್ಪನಂತೆ={ಸುಡುವೆನೆಂದು ಹೊರಟು ಬಂದಂತೆ,] ಕಾಂತೆ ನೀನು ಏಕಾಂತದಿಂ ಪವಡಿಸುವ ಚಂದ್ರಕಾಂತಭವನದೊಳು=[ಗೆಳತಿ ನೀನು ಏಕಾಂತದಲ್ಲಿ ಮಲಗುವ ಚಂದ್ರಕಾಂತಭವನದಲ್ಲಿ,] ಅತಿ ಏಕಾಂತದೊಳು ಇಹಂ ನಿನ್ನ ಕಾಂತನು ಏಕೆ ಅಂತರಂಗದೊಳು ಎಣಿಕೆಯೆಂದು=[ರಹಸ್ಯವಾಗಿ ಏಕಾಂತದಲ್ಲಿ ನಿನ್ನ ಪ್ರಿಯಕರನು ಇರುವನು; ಏಕೆ ಮನಸ್ಸಿನಲ್ಲಿ ಚಿಂತೆಯೆಂದು] ಒಬ್ಬ ಚಪಲೆ ಯುವತಿಗೆ ನುಡಿದಳು.
 • ತಾತ್ಪರ್ಯ:*ತುಂಟ ಗೆಳತಿ ಯುವತಿಗೆ ಹೇಳಿದ್ದು: ಮನ್ಮಥನು ತಾನು,ತಾನೇ ಶಿನ ಹಣೆಗಣ್ಣಿಂದ, ಸುಟ್ಟ ವಿಚಾರವನ್ನು ನೆನಪಿಸಿಕೊಳ್ಳದೆ, ಮದನನು,ಅಗಲಿದ ಹಂಗಸರ ಹೃದಯವೆಂಬ, ದಟ್ಟ ವನವನ್ನು, ಸುಡುವೆನೆಂದು ಸುಡುವೆನೆಂದು ಹೊರಟು ಬಂದಂತೆ ಗೆಳತಿಯೇ (ನಿನ್ನ ಕಾಂತನು,) ನೀನು ಏಕಾಂತದಲ್ಲಿ ಮಲಗುವ ಚಂದ್ರಕಾಂತಭವನದಲ್ಲಿ, ರಹಸ್ಯವಾಗಿ ಏಕಾಂತದಲ್ಲಿ ನಿನ್ನ ಪ್ರಿಯಕರನು ಇರುವನು; ಮನಸ್ಸಿನಲ್ಲಿ ಚಿಂತೆ ಏಕೆ ಎಂದು. ಒಬ್ಬ ಚಪಲೆ ಯುವತಿಗೆ ನುಡಿದಳು.

(ಪದ್ಯ -೩೬)

ಪದ್ಯ :-:೩೭[ಸಂಪಾದಿಸಿ]

ತೋಟಿಗೆಳಸದರನೊಯ್ಯೊಯ್ಯನೆ ಮನೋಭವನ | ಧಾಟಿಗೊಳಗಾಗಿ ನಿಲಿಸುವ ಮದನಕಲೆಗಳಂ | ಪಾಟಿಸುವ ಬಗೆಯ ನೆಳೆಯರ್ಗೆ ಕಲಿಸುವ ನಾಯಕಿಗೆ ಧನಯುತರನೊಲಿಸುವ ||
ತಾಟಿ ಗಂಟಿಕ್ಕಿ ಸಂಧಿಗಳನೆಸಗುವ ಮುಳಿಯೆ | ಮೇಟಿಗೋರ್ವನನರಸಿ ಸೊಗಸು ಬಲಿಸುವ ಚಾರು | ಚೇಟಿಯರ್ ಚಲಿಸುವರನಂಗಶಬರನ ಬೇಂಟೆದೋಹಿನ ಮೃಗಂಗಳಂತೆ ||37||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ತೋಟಿಗೆ=ಮನ್ಮಥನ ಯುದ್ಧಕ್ಕೆ, ಎಳಸದರನು= ಒಪ್ಪದವರನ್ನು, ಒಯ್ಯೊಯ್ಯನೆ=ಮೆಲ್ಲಮೆನೆ ಮನೋಭವನ=ಮನ್ಮಥನ, ಧಾಟಿಗೊಳಗಾಗಿ ನಿಲಿಸುವ=ಪ್ರಬಾವಕ್ಕ ಸಿಕ್ಕು ಅದರಲ್ಲಿ ನಿಲ್ಲಿಸುವ, ಮದನಕಲೆಗಳಂ= ರತಿವಿದ್ಯೆನ್ನು, ಪಾಟಿಸುವ= ಕಲಿಸುವ, ಬಗೆಯನು=ರೀತಿಯನ್ನು, ಎಳೆಯರ್ಗೆ ಕಲಿಸುವ ನಾಯಕಿಗೆ= ಹೊಸಯುವತಿಯರಿಗೆ ಕಲಿಸುವ ನಾಯಕಿ ವೇಶ್ಯಗೆ, ಧನಯುತರನು ಒಲಿಸುವ= ಹಣವಂತರನ್ನು ಒಲಿಸುವ, ತಾಟಿಗಂ=ಸಂಧಿಕಾರ್ಯ, ಟಿಕ್ಕಿ=ಮೋಸ, ಸಂಧಿಗಳನು ಎಸಗುವ=ಕೂಡಿಸುವುದು- ಮುಳಿಯೆ=ಸಿಟ್ಟುಗೊಂಡಾಗ, ಮೇಟಿಗೆ ಓರ್ವನನು ಅರಸಿ=[ಹೆಚ್ಚಿನಸಾಮರ್ಥ್ಯ ವಿಟನನ್ನು ಹುಡುಕಿ,] ಸೊಗಸು ಬಲಿಸುವ ಚಾರು ಚೇಟಿಯರ್=[ಚಂದದ ಮನಸೆಳೆದು ಒಪ್ಪಿಸುವ], ಚಲಿಸುವರು ಅನಂಗಶಬರನ ಬೇಂಟೆದೋಹಿನ ಮೃಗಂಗಳಂತೆ= [ಬೇಟೆಗಾರಮನ್ಮಥನ ಸಹಾಯಕರಂತೆ ನಗರದಲ್ಲಿ ಚಲಿಸುತ್ತಿರುವರು.]
 • ತಾತ್ಪರ್ಯ:*ಮನ್ಮಥನ ಯುದ್ಧಕ್ಕೆ (ಯುವತಿಯರೊಡನೆ ಕೂಟಕ್ಕೆ), ಒಪ್ಪದವರನ್ನು,ಮೆಲ್ಲಮೆಲ್ಲನೆ ಮನ್ಮಥನ ಪ್ರಬಾವಕ್ಕ ಸಿಕ್ಕು ಅದರಲ್ಲಿ ನಿಲ್ಲಿಸುವ ರತಿವಿದ್ಯೆಯನ್ನು ಕಲಿಸುವ, ರೀತಿಯನ್ನು, ಹೊಸಯುವತಿಯರಿಗೆ ಕಲಿಸುವ ನಾಯಕಿ ವೇಶ್ಯಗೆ, ಹಣವಂತರನ್ನು ಒಲಿಸುವ, ಸಂಧಿಕಾರ್ಯಮಾಡವ, ಮೋಸ,ಸಿಟ್ಟುಗೊಂಡಾಗ-ಕೂಡಿಸುವುದು,ಹೆಚ್ಚಿನಸಾಮರ್ಥ್ಯ ವಿಟನನ್ನು ಹುಡುಕಿ,ಚಂದದಿಂದ ಮನಸೆಳೆದು ಒಪ್ಪಿಸುವ,ಚೇಟಿಗಳು ಬೇಟೆಗಾರಮನ್ಮಥನ ಸಹಾಯಕರಂತೆ ನಗರದಲ್ಲಿ ಚಲಿಸುತ್ತಿರುವರು.

(ಪದ್ಯ -೩೭)

ಪದ್ಯ :-:೩೮[ಸಂಪಾದಿಸಿ]

ಇಂತೆಸೆವ ಗಣಿಕಾ ಸಮೂಹಮಂ ನೋಡುತ | ಲ್ಲಿಂ ತಳರ್ದನಿಲಜಂ ಬರೆ ಮುಂದೆ ನಾನಾದಿ | ಗಂತದಿಂ ಮುರಹರನ ಕೀರ್ತಿಯಂ ಕೇಳ್ದೊದವಿದಿಷ್ಟಾರ್ಥಮಂ ಪಡೆಯಲು ||
ತಂತಮ್ಮ ವಿದ್ಯಾವಿನೋದಮಂ ತೋರಿಸುವ | ಸಂತಸದೊಳೈತಂದು ನೆರೆದಿರ್ದ ಕೋವಿದರ | ತಿಂತಿಣಿಯ ರಾಜಿ ರಾಜಿಪ ರಾಜಗೇಹದ ಸಮೀಪದೆಡೆಯಂ ಕಂಡನು ||38||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಇಂತು ಎಸೆವ ಗಣಿಕಾ ಸಮೂಹಮಂ ನೋಡುತ ಅಲ್ಲಿಂ ತಳರ್ದ ಅನಿಲಜಂ=[ಈ ರೀತಿ ಶೋಭಿಸುತ್ತಿರುವ ಗಣಿಕಾ ಸಮೂಹವನ್ನು ನೋಡುತ್ತಾ ಅಲ್ಲಿಂದ ಹೊರಟ ಭೀಮನು]; ಬರೆ ಮುಂದೆ ನಾನಾದಿಗಂತದಿಂ ಮುರಹನ ಕೀರ್ತಿಯಂ ಕೇಳಿ ಒದವಿದ ಇಷ್ಟಾರ್ಥಮಂ ಪಡೆಯಲು=[ಮುಂದೆ ಬರಲು, ನಾನಾದೇಶಗಳಿಂದ ಕೃಷ್ಣನ ಕೀರ್ತಿಯನ್ನು ಕೇಳಿ ಸಿಗುವ ಇಷ್ಟಾರ್ಥಮಂ ಪಡೆಯಲು]; ತಂತಮ್ಮ ವಿದ್ಯಾವಿನೋದಮಂ ತೋರಿಸುವ ಸಂತಸದೊಳು ಐತಂದು ನೆರೆದಿರ್ದ ಕೋವಿದರ ತಿಂತಿಣಿಯ=[ತಂತಮ್ಮ ಚಮತ್ಕಾರದ ವಿದ್ಯಾವಿನೋದವನ್ನು ತೋರಿಸುವ ಸಂಭ್ರಮದಲ್ಲಿ ಬಂದು ಸೇರಿರುವ ವಿದ್ವಾಂಸರ ಗುಂಪುಗಳನ್ನು ಭೀಮನು ಕಂಡನು]; ರಾಜಿ ರಾಜಿಪ ರಾಜಗೇಹದ ಸಮೀಪದೆಡೆಯಂ ಕಂಡನು=[ಬಹಳ ಶೋಭಾಯಮಾನವಾದ ಅರಮನೆಯ ಸಮೀಪದ ಸ್ಥಳವನ್ನು ಕಂಡನು].
 • ತಾತ್ಪರ್ಯ:*ಈ ರೀತಿ ಶೋಭಿಸುತ್ತಿರುವ ಗಣಿಕಾ ಸಮೂಹವನ್ನು ನೋಡುತ್ತಾ ಅಲ್ಲಿಂದ ಹೊರಟ ಭೀಮನು ಮುಂದೆ ಬರಲು, ನಾನಾದೇಶಗಳಿಂದ ಕೃಷ್ಣನ ಕೀರ್ತಿಯನ್ನು ಕೇಳಿ ಸಿಗುವ ಇಷ್ಟಾರ್ಥಮಂ ಪಡೆಯಲು ತಂತಮ್ಮ ಚಮತ್ಕಾರದ ವಿದ್ಯಾವಿನೋದವನ್ನು ತೋರಿಸುವ ಸಂಭ್ರಮದಲ್ಲಿ ಬಂದು ಸೇರಿರುವ ವಿದ್ವಾಂಸರ ಗುಂಪುಗಳನ್ನೂ ಬಹಳ ಶೋಭಾಯಮಾನವಾದ ಅರಮನೆಯ ಸಮೀಪದ ಸ್ಥಳವನ್ನು ಭೀಮನು ಕಂಡನು.

(ಪದ್ಯ -೩೮)XXVII

ಪದ್ಯ :-:೩೯[ಸಂಪಾದಿಸಿ]

ತಗರ್ವೆಣಗಿಸುವ ಸಿಪಿಲೆಗಚ್ಚಿಸುವ ಕೋಳಿಗಾ | ಳೆಗವ ಕಾದಿಸುವ ಕರಿತುರಗದೇರಾಟಮಂ | ಮಿಗೆ ತೋರಿಸುವ ನೆತ್ತಪಗಡೆಯೊಳ್ ಬಿನದಿಸುವ ಜೂಜುಗಳನೊಡ್ಡಿ ನಲಿವ ||
ಬಗೆಬಗೆಯ ರಾಜಪುತ್ರರ ತನುವಿಲೇಪನಾ | ದಿಗಳೋರಸೊರಸಿನಿಂದುರ್ದಿ ಪರಿಮಳದ ಧೂ | ಳಿಗಳನಲ್ಲಿರ್ದ ಸೊಕ್ಕಾನೆಗಳ್ ಮೊಗೆಮೊಗೆದು ಮಿಗೆ ಚೆಲ್ಲಿಕೊಳುತಿರ್ದುವು ||39||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಎಚ್ಚು
 • ಆ ಪ್ರದೇಶದಲ್ಲಿ, ತಗರ್ ವೆಣಗಿಸುವ=[ಟಗರ ಜಗಳ], ಸಿಪಿಲೆಗೆ ಎಚ್ಚಿಸುವ=[ಹಕ್ಕಿ ಹೊಡಯುವ ಆಟ), ಕೋಳಿಗಾಳೆಗವ ಕಾದಿಸುವ ಕರಿತುರಗದ ಏರಾಟಮಂ ಮಿಗೆ ತೋರಿಸುವ=[ಕೋಳಿ ಗಾಳೆಗ ಮಾಡಿಸುವುದು, ಆನೆ ಕುದುರೆಗಳ ಸವಾರಿಯ ಆಟವನ್ನೂ, ಚೆನ್ನಾಗಿ ತೋರಿಸುವುದು]; ನೆತ್ತಪಗಡೆಯೊಳ್ ಬಿನದಿಸುವ ಜೂಜುಗಳನೊಡ್ಡಿ ನಲಿವ=[ಲೆತ್ತ ಪಗಡೆಯಾಟದಲ್ಲಿ ಸಂತಸಪಡುವ, ಜೂಜುಗಳನ್ನು ಒಡ್ಡಿ ನಲಿಯುವುದು; ಬಗೆಬಗೆಯ ರಾಜಪುತ್ರರ ತನುವಿಲೇಪನಾದಿಗಳ ಓರಸೊರಸಿನಿಂದುರ್ದಿ ಪರಿಮಳದ ಧೂಳಿಗಳನು=[ ರಾಜಪುತ್ರರ ದೇಹಕ್ಕೆ ಸವರಿದಾಗ ಬಿದ್ದ ನಾನಾ ಬಗೆಯ ಸುಗಂಧದ ಪುಡಿಯ ಧೂಳನ್ನು] ಅಲ್ಲಿರ್ದ ಸೊಕ್ಕಾನೆಗಳ್ ಮೊಗೆಮೊಗೆದು ಮಿಗೆ ಚೆಲ್ಲಿಕೊಳುತಿರ್ದುವು= [ಅಲ್ಲಿದ್ದ ಸೊಕ್ಕಿದ ಆನೆಗಳು ಮೊಗೆದು ತಮ್ಮಮೇಲೆ ಹಾಕಿಕೊಳ್ಳುತ್ತಿದ್ದವು]
 • ತಾತ್ಪರ್ಯ:*ಅರಮನೆಯ ಬಳಿ, ಟಗರ ಜಗಳ, ಹಕ್ಕಿ ಹೊಡಯುವ ಆಟ, ಕೋಳಿ ಕಾಳೆಗಮಾಡಿಸುವುದು, ಆನೆ ಕುದುರೆಗಳ ಸವಾರಿಯ ಆಟವನ್ನೂ, ಚೆನ್ನಾಗಿ ತೋರಿಸುವ; ಲೆತ್ತ ಪಗಡೆಯಾಟದಲ್ಲಿ ಸಂತಸಪಡುವವರು, ಜೂಜುಗಳನ್ನು ಒಡ್ಡಿ ನಲಿವವರು; ರಾಜಪುತ್ರರ ದೇಹಕ್ಕೆ ಸವರಿದಾಗ ಬಿದ್ದ ನಾನಾ ಬಗೆಯ ಸುಗಂಧದ ಪುಡಿಯ ಧೂಳನ್ನು ಅಲ್ಲಿದ್ದ ಸೊಕ್ಕಿದ ಆನೆಗಳು ಮೊಗೆದು ತಮ್ಮಮೇಲೆ ಹಾಕಿಕೊಳ್ಳುತ್ತಿದ್ದವು.

(ಪದ್ಯ -೩೯)

ಪದ್ಯ :-:೪೦[ಸಂಪಾದಿಸಿ]

ತನ್ನೊಳಿರ್ದಚ್ಚ್ಯುತಂ ದ್ವಾರಕೆಗೆ ಬಂದಿರಲ್ | ಮುನ್ನ ತಾನೈತಂದು ನಿಂದುದೋ ರಾಜಿಸುವ | ರನ್ನಂಗಳೊಡನೆ ಪಾಲ್ಗಡಲೆನಲ್ ಮಣಿಸೌಧಕಾಂತಿಗಳ್ ಕಣ್ಗೊಳಿಸುವ ||
ಪನ್ನಗಾರಿಧ್ವಜನ ರಾಜಗೃಹಮಂ ಕಂಡು | ಸನ್ನುತವರೂಥದಿಂದಿಳಿದು ಮೆಯ್ಯಿಕ್ಕಿ ಸಂ | ಪನ್ನಮತಿ ಪವನಜಂ ತಳರ್ದನಲ್ಲಿಗೆ ವಿಪುಲಪುಲಕೋತ್ಸವಂ ಪೊಣ್ಮಲು ||40||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=ಎಚ್ಚು
 • ತನ್ನೊಳು ಇರ್ದ ಅಚ್ಚ್ಯುತಂ ದ್ವಾರಕೆಗೆ ಬಂದಿರಲ್=[ತನ್ನಲ್ಲಿದ್ದ ಅಚ್ಚ್ಯುತನು ದ್ವಾರಕೆಗೆ ಬಂದಿರುವಾಗ]; ಮುನ್ನ ತಾನೇ ಐತಂದು ನಿಂದುದೋ ರಾಜಿಸುವ ರನ್ನಂಗಳೊಡನೆ ಪಾಲ್ಗಡಲ್ ಎನಲ್=[ ಕ್ಷೀರಸಮುದ್ರವು ಅವನಿಗೆ ಮೊದಲೇ ತಾನೇ ಬಂದು ನಿಂತಿದೆಯೋ ಎನ್ನುವಂತೆ ಪ್ರಕಾಶಿಸುವ ರತ್ನಗಳೊಡನೆ ]; ಮಣಿಸೌಧಕಾಂತಿಗಳ್ ಕಣ್ಗೊಳಿಸುವ ಪನ್ನಗಾರಿಧ್ವಜನ ರಾಜಗೃಹಮಂ=[ರತ್ನ ಮಣಿಕಾಂತಿಗಳಿಂದ ಪ್ರಕಾಶಿಸುವ ಗರುಡಧ್ವಜ ಕೃಷ್ಣನ ಅರಮನೆಯನ್ನು]; ಕಂಡು ಸನ್ನುತ ವರೂಥದಿಂದ ಇಳಿದು ಮೆಯ್ಯಿಕ್ಕಿ ಸಂಪನ್ನಮತಿ ಪವನಜಂ ತಳರ್ದನು ಅಲ್ಲಿಗೆ ವಿಪುಲಪುಲಕೋತ್ಸವಂ ಪೊಣ್ಮಲು=[ಕಂಡು ತನ್ನ ಉತ್ತಮ ರಥದಿಂದ ಇಳಿದು ನಮಸ್ಕರಿಸಿ ವಿವೇಕವುಳ್ಳ ಭೀಮನು, ಕೃಷ್ಣನ್ನು ನೋಡುವೆನೆಂದು ಅವನಲ್ಲಿ ಆನಂದದಿಂದ ರೋಮಾಚನಗೊಂಡನು ಅಲ್ಲಿಗೆ ಹೋದನು ].
 • ತಾತ್ಪರ್ಯ:*ತನ್ನಲ್ಲಿದ್ದ ಅಚ್ಚ್ಯುತನು ದ್ವಾರಕೆಗೆ ಬಂದಿರುವಾಗ, ಕ್ಷೀರಸಮುದ್ರವು ರತ್ನಗಳೊಡನೆ, ಅವನಿಗೆ ಮೊದಲು ತಾನೇ ಬಂದು ನಿಂತಿದೆಯೋ ಎನ್ನುವಂತೆ, ಪ್ರಕಾಶಿಸುವ ರತ್ನಗಳೊಡನೆ ಮಣಿಕಾಂತಿಗಳಿಂದ ಪ್ರಕಾಶಿಸುವ ಗರುಡಧ್ವಜನಾದ ಕೃಷ್ಣನ ಅರಮನೆಯನ್ನು ಕಂಡು, ತನ್ನ ಉತ್ತಮ ರಥದಿಂದ ಇಳಿದು ನಮಸ್ಕರಿಸಿ ವಿವೇಕವುಳ್ಳ ಭೀಮನು, ಕೃಷ್ಣನ್ನು ನೋಡುವೆನೆಂದು ಮನದಲ್ಲಿ ಆನಂದದಿಂದ ರೋಮಾಚನಗೊಂಡು ಅಲ್ಲಿಗೆ ಹೋದನು .

(ಪದ್ಯ -೪೦)

ಪದ್ಯ :-:೪೧[ಸಂಪಾದಿಸಿ]

ಮಾರನಂ ಪಡೆದ ಚೆಲ್ವಿಂದಿರೆಯನಾಳ್ದ ಸಿರಿ | ವಾರಿಜಾಸನ ಮುಖ್ಯ ದೇವರ್ಕಳಂ ಪೊರೆವು | ದಾರಂ ತನಗೆ ಸಾಲದೆಂದು ಭೂಪಾಲಕರ ಭಾಗ್ಯಮಂತಳದನೆಂಬ ||
ನೀರದಶ್ಯಾಮನರಮನೆಯೆಂದೊಡದರವಿ | ಸ್ತಾರಮಂ ಬಣ್ಣಿಸುವೊಡೆನ್ನಳವೆ ಪೇಳೆನಲ್ | ಮಾರುತಿಯ ಕಣ್ಗೆ ರಮಣೀಯಮಾದುದು ಬಹುಳ ಮಣಿತೋರಣಪ್ರಭೆಗಳು ||41||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಮಾರನಂ ಪ್ರದ್ಯುಮ್ನನ್ನು ಪಡೆದ ಚೆಲ್ವಿಂದಿರೆಯನು ಆಳ್ದ ಸಿರಿ ವಾರಿಜಾಸನ(ಬ್ರಹ್ಮನ) ಮುಖ್ಯ ದೇವರ್ಕಳಂ ಪೊರೆವುದಾರಂ ತನಗೆ ಸಾಲದೆಂದು=[ಮನ್ಮಥನ ರೂಪವಾದ ಪ್ರದ್ಯುಮ್ನನ್ನು ಮಗನಾಗಿ ಪಡೆದ, ಚೆಲುವೆ ಇಂದಿರೆ/ ಲಕ್ಷ್ಮಿಯನ್ನು ಆಳಿದ ಸಂಪತ್ತು, ಬ್ರಹ್ಮನನ್ನೂ ಮತ್ತು ಮುಖ್ಯ ದೇವತೆಗಳನ್ನೂ ಕಾಪಾಡುವುದು ಉದಾರಿಯಾದ ತನಗೆ ಸಾಲದೆಂದು]; ಭೂಪಾಲಕರ ಭಾಗ್ಯಮಂ ತಳದನೆಂಬ ನೀರದಶ್ಯಾಮನ=[ಭೂಮಿಯ ರಾಜರ ಭಾಗ್ಯದ ಅವತಾರ ತಳದನೆಂಬಂತೆ, ಮೇಘವರ್ಣದ ಕೃಷ್ನನ]; ಅರಮನೆಯೆಂದೊಡೆ ಅದರ ವಿಸ್ತಾರಮಂ ಬಣ್ಣಿಸುವೊಡೆನ್ನಳವೆ ಪೇಳೆನಲ್=[ಅರಮನೆಯು ಎಂದಮೇಲೆ ಅದರ ವೈಭವವನ್ನು ಬಣ್ಣಿಸಲು ನಮಗೆ ಸಾಧ್ಯವೇ ಹೇಳು ಎನ್ನುವಂತೆ] ಮಾರುತಿಯ ಕಣ್ಗೆ ರಮಣೀಯಮಾದುದು ಬಹುಳ ಮಣಿತೋರಣಪ್ರಭೆಗಳು=[ಭೀಮನ ಕಣ್ಗಿಗೆ ಬಹಳವಾಗಿ ತುಂಬಿದ ಮಣಿತೋರಣದ ಪ್ರಕಾಶ ರಮಣೀಯವಾಗಿತ್ತು.
 • ತಾತ್ಪರ್ಯ:*ಮನ್ಮಥನ ರೂಪವಾದ ಪ್ರದ್ಯುಮ್ನನ್ನು ಮಗನಾಗಿ ಪಡೆದ, ಚೆಲುವೆ ಇಂದಿರೆ/ ಲಕ್ಷ್ಮಿಯನ್ನು ಆಳಿದ ಸಂಪತ್ತು, ಬ್ರಹ್ಮನನ್ನೂ ಮತ್ತು ಮುಖ್ಯ ದೇವತೆಗಳನ್ನೂ ಕಾಪಾಡುವುದು ಉದಾರಿಯಾದ ತನಗೆ ಸಾಲದೆಂದು, ಭೂಮಿಯ ರಾಜರ ಭಾಗ್ಯದ ಅವತಾರ ತಳದು ಇಲ್ಲಿರುವ ಕೃಷ್ಣನ ಅರಮನೆಯು ಎಂದ ಮೇಲೆ ಅದರ ವೈಭವವನ್ನು ಬಣ್ಣಿಸಲು ನಮಗೆ ಸಾಧ್ಯವೇ ಹೇಳು ಎನ್ನುವಂತೆ] ಮಾರುತಿಯ ಕಣ್ಗೆ ರಮಣೀಯಮಾದುದು ಬಹುಳ ಮಣಿತೋರಣಪ್ರಭೆಗಳು=[ಭೀಮನ ಕಣ್ಗಿಗೆ ಬಹಳವಾಗಿ ತುಂಬಿದ ಮಣಿತೋರಣದ ಪ್ರಕಾಶ ರಮಣೀಯವಾಗಿತ್ತು.

(ಪದ್ಯ -೪೧)

ಪದ್ಯ :-:೪೨[ಸಂಪಾದಿಸಿ]

ಪಾರಿಜಾತಪ್ರಸವ ಪರಿಮಳಕೆ ಗಗನದೊಳ್ | ಸೇರಿದಳಿಮಾಲೆಗಳನುಜ್ಜ್ವಲಿಪ ನೀಲಮಣಿ | ತೋರಣಪ್ರಭೆಗಳಂ ಬೇರ್ಪಡಿಸಲರಿದೆನಲ್ ಮೆರೆವ ಹರಿಯರಮನೆಯನು ||
ಸಾರಿದಂ ಪವನಜಂ ಬಾಗಿಲೊಳ್ ತನ್ನ ಪರಿ | ವಾರಮಂ ನಿಲಿಸುತೊಳವೊಕ್ಕನೇಂ ಸಲುಗೆಯೊ ಮು | ರಾರಿಯೆಡೆಯೊಳ್ ದ್ವಾರಪಾಲಕರ್ ತಡೆಯರೊರ್ವರುಮಂತರಾಂತರದೊಳು ||42||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಪಾರಿಜಾತಪ್ರಸವ ಪರಿಮಳಕೆ ಗಗನದೊಳ್ ಸೇರಿದಳಿಮಾಲೆಗಳನು ಉಜ್ಜ್ವಲಿಪ ನೀಲಮಣಿ ತೋರಣ ಪ್ರಭೆಗಳಂ ಬೇರ್ಪಡಿಸಲು ಅರಿದೆನಲ್=[ಪಾರಿಜಾತದಿಂದ ಹೊರಟ ಪರಿಮಳಕ್ಕೆ ಗಗನದಲ್ಲಿ ಸೇರಿದ ತುಂಬಿಗಳ ಮಾಲೆಗಳಂತಿರುವ ಸಾಲನ್ನು ಮತ್ತು ಪ್ರಕಾಶಿಸುವ ನೀಲಮಣಿಗಳ ತೋರಣದ ಪ್ರಭೆಗಳನ್ನು ಪ್ರತ್ಯೇಕಿಸಿ ನೋಡಲು ಆಗದು ಎನ್ನುವಂತೆ]; ಮೆರೆವ ಹರಿಯರಮನೆಯನು ಸಾರಿದಂ ಪವನಜಂ ಬಾಗಿಲೊಳ್ ತನ್ನ ಪರಿವಾರಮಂ ನಿಲಿಸುತೊಳವೊಕ್ಕನೇಂ ಸಲುಗೆಯೊ ಮುರಾರಿಯೆಡೆಯೊಳ್=[ಶೋಭಿಸುವ ಕೃಷ್ನನ ಅರಮನೆಯ ಬಳಿಸಾರಿದ ಭೀಮನು ಬಾಗಿಲಲ್ಲಿ ತನ್ನ ಪರಿವಾರವನ್ನು ನಿಲ್ಲಿಸಿ ಓಳಹೊಕ್ಕನು, ಅದೆಷ್ಟು ಸಲುಗೆ ಕೃಷ್ನನಲ್ಲಿ!] ದ್ವಾರಪಾಲಕರ್ ತಡೆಯರು ಓರ್ವರುಂ ಅಂತರಾಂತರದೊಳು=[ದ್ವಾರಪಾಲಕರು ಒಬ್ಬರೂ ಒಳಮನೆಯಲ್ಲಿ ಸಹ ತಡೆಯರು].
 • ತಾತ್ಪರ್ಯ:*ಪಾರಿಜಾತದಿಂದ ಹೊರಟ ಪರಿಮಳಕ್ಕೆ ಗಗನದಲ್ಲಿ ಸೇರಿದ ತುಂಬಿಗಳ ಮಾಲೆಗಳಂತಿರುವ ಸಾಲನ್ನು ಮತ್ತು ಪ್ರಕಾಶಿಸುವ ನೀಲಮಣಿಗಳ ತೋರಣದ ಪ್ರಭೆಗಳನ್ನು ಪ್ರತ್ಯೇಕಿಸಿ ನೋಡಲು ಆಗದು ಎನ್ನುವಂತೆ ಶೋಭಿಸುವ ಕೃಷ್ನನ ಅರಮನೆಯ ಬಳಿಸಾರಿದ ಭೀಮನು ಬಾಗಿಲಲ್ಲಿ ತನ್ನ ಪರಿವಾರವನ್ನು ನಿಲ್ಲಿಸಿ ಓಳಹೊಕ್ಕನು, ಅದೆಷ್ಟು ಸಲುಗೆ ಕೃಷ್ನನಲ್ಲಿ! ಅವನನ್ನು ದ್ವಾರಪಾಲಕರು ಒಬ್ಬರೂ ಒಳಮನೆಯಲ್ಲಿ ಸಹ ತಡೆಯರು.

(ಪದ್ಯ -೪೨)

ಪದ್ಯ :-:೪೩[ಸಂಪಾದಿಸಿ]

ಜನಪ ಕೇಳಾ ಸಮಯಕಸುರಾರಿ ಕನಕಭಾ | ಜನ ರತ್ನದೀಪ್ತಿಗಳ ಸಾಲ್ಗಳಿಂದೆಸೆವ ಭೋ | ಜನಶಾಲೆಗೈತಂದು ಬಾಂಧವರ್ವೆರಸಿ ಕುಳ್ಳೀರ್ದು ದಿವ್ಯಾಸನದೊಳು ||
ಜನನಿಯರುಣಿಸನಿಕ್ಕಿ ಸವಿಗೊಳಿಸೆ ಚಮರವ್ಯ | ಜನಮಂ ಪಿಡಿದು ರಾಣಿಯರ್ ಕೆಲದೊಳಿರೆ ಸುರಂ | ಜನ ಕಥಾಲಾಪ ರಸದಿಂ ಷಡ್ರಸಾನ್ನದಾರೋಗಣೆಯೊಳಿರುತಿರ್ದನು ||43||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಜನಪ ಕೇಳು ಆ ಸಮಯಕೆ ಅಸುರಾರಿ ಕನಕಭಾಜನ ರತ್ನದೀಪ್ತಿಗಳ ಸಾಲ್ಗಳಿಂದ ಎಸೆವ ಭೋಜನಶಾಲೆಗೆ ಐತಂದು=[ಜನಮೇಜಯ ರಾಜನೇ ಕೇಳು, ಆ ಸಮಯಕದಲ್ಲಿ ಕೃಷ್ಣನು ಚಿನ್ನ ರತ್ನಗಳ ಸಾಲುಗಳ ಕಾಂತಿಯಿಂದ ಪ್ರಕಾಶಿಸುವ ಭೋಜನಶಾಲೆಗೆ ಬಂದು]; ಬಾಂಧವರ್ವೆರಸಿ ಕುಳ್ಳಿರ್ದು ದಿವ್ಯಾಸನದೊಳು ಜನನಿಯರು ಉಣಿಸುನು ಇಕ್ಕಿ ಸವಿಗೊಳಿಸೆ=[ ದಿವ್ಯಾಸನದಲ್ಲಿ ಬಂಧುಗಳ ಜೊತೆ ಕುಳಿತು ತಾಯಿಯರು ಉಠವನ್ನು ಬಡಿಸಿ ಸವಿಯಾಗುವಂತೆ ಮಾಡಿದ್ದರು]; ಚಮರವ್ಯಜನಮಂ ಪಿಡಿದು ರಾಣಿಯರ್ ಕೆಲದೊಳಿರೆ ಸುರಂಜನ ಕಥಾಲಾಪ ರಸದಿಂ ಷಡ್ರಸಾನ್ನದ ಆರೋಗಣೆಯೊಳು ಇರುತಿರ್ದನು=[ಅವನ ರಾಣಿಯರು ಚಾಮರ ಬೀಸಣಿಕೆಯನ್ನು ಹಿಡಿದು ಗಾಳಿಬೀಸುತ್ತಾ ಪಕ್ಕದಲ್ಲಿರಲು, ರಂಜಿಸುವ ವಿಷಯ ಮಾತನಾಡತ್ತಾ ಷಡ್ರಸಾನ್ನದ ಊಟವನ್ನು ಮಾಡುತ್ತಿದ್ದನು].
 • ತಾತ್ಪರ್ಯ:*ಜನಮೇಜಯ ರಾಜನೇ ಕೇಳು, ಆ ಸಮಯಕದಲ್ಲಿ ಕೃಷ್ಣನು ಚಿನ್ನ ರತ್ನಗಳ ಸಾಲುಗಳ ಕಾಂತಿಯಿಂದ ಪ್ರಕಾಶಿಸುವ ಭೋಜನಶಾಲೆಗೆ ಬಂದು ದಿವ್ಯಾಸನದಲ್ಲಿ ಬಂಧುಗಳ ಜೊತೆ ಕುಳಿತು ತಾಯಿಯರು ಉಠವನ್ನು ಬಡಿಸಿ ಸವಿಯಾಗುವಂತೆ ಮಾಡಿದ್ದರು; ಅವನ ರಾಣಿಯರು ಚಾಮರ ಬೀಸಣಿಕೆಯನ್ನು ಹಿಡಿದು ಗಾಳಿಬೀಸುತ್ತಾ ಪಕ್ಕದಲ್ಲಿರಲು, ರಂಜಿಸುವ ವಿಷಯ ಮಾತನಾಡತ್ತಾ ಷಡ್ರಸಾನ್ನದ ಊಟವನ್ನು ಮಾಡುತ್ತಿದ್ದನು.

(ಪದ್ಯ -೪೩)

ಪದ್ಯ :-:೪೪[ಸಂಪಾದಿಸಿ]

ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್ | ಮಿಸುಪ ಶಾಲ್ಯೋದನಂ ಸೂಪ ಘೃತ ಭಕ್ಷ್ಯ ಪಾ | ಯಸ ಪರಡಿ ಮಧು ಶರ್ಕರಾಮಿಷ ಪಳಿದ್ಯ ಸೀಕರಣೆ ಶಾಕ ತನಿವಣ್ಗಳ ||
ರಸ ರಸಾಯನ ಸಾರ್ಗಳುಪ್ಪುಗಾಯ್ ಬಳುಕಂ | ಕೃಸರಿ ಕಚ್ಚಡಿ ಪಾಲ್ಮೊಸರ್ಗಳಿವು ಬಗೆಗೊಳಿಸಿ | ಪೊಸತೆನಿಸಿರಲ್ ಸವಿದನಚ್ಚ್ಯುತಂ ದೇವಕಿಯಶೋದೆಯರ್ ತಂದಿಕ್ಕಲು ||44|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್ ಮಿಸುಪ ಶಾಲ್ಯೋದನಂ=[ಹೊಳಿಯುವ ಚಿನ್ನದಹರಿವಾಣ, ಚಿನ್ನದ ಬಟ್ಟಲುಗಳು, ಶೋಭಿಸುವಸಣ್ಣಕ್ಕಿ ಅನ್ನ,]; ಸೂಪ ಘೃತ ಭಕ್ಷ್ಯ ಪಾಯಸ ಪರಡಿ ಮಧು ಶರ್ಕರಾಮಿಷ ಪಳಿದ್ಯ ಸೀಕರಣೆ ಶಾಕ ತನಿವಣ್ಗಳ=[ತೊವ್ವೆ, ತುಪ್ಪ, ಭಕ್ಷ್ಯ (ಲಾಡು ಇತ್ಯಾದಿತಿನ್ನುವುದು), ಪಾಯಸ ಶಾವಿಗೆ, ಮಧು/ ಜೇನು, ಶರ್ಕರಾಮಿಷ/ಸಕ್ಕರತಿಂಡಿ, ಪಳಿದ್ಯ, ಸೀಕರಣೆ/ಹಣ್ಣಿನಿಂದಮಾಡಿದ ಸಿಹಿತಿಂಡಿ, ಶಾಕ/ಬೇಯಿಸಿದ ತರಕಾತಿ ಕಳಿತ ಹಣ್ಣಗಳು]; ರಸ ರಸಾಯನ ಸಾರ್ಗಳುಪ್ಪುಗಾಯ್ ಬಳುಕಂ ಕೃಸರಿ ಕಚ್ಚಡಿ ಪಾಲ್ಮೊಸರ್ಗಳಿವು ಬಗೆಗೊಳಿಸಿ ಪೊಸತೆನಿಸಿರಲ್ ಸವಿದನಚ್ಚ್ಯುತಂ ದೇವಕಿಯಶೋದೆಯರ್ ತಂದಿಕ್ಕಲು=[ರಸ ರಸಾಯನ ಬಗೆಬಗೆಯ ಸಾರುಗಳು, ಉಪ್ಪಿನಗಾಯಿ, ಬಳುಕ, ಕೊಸಂಬರಿ, ಕಚ್ಚಡಿ, ಹಾಲು ಮೊಸರು ಇವುಗಳನ್ನು ಪ್ರತ್ಯೇಕವಾಗಿ ಒಪ್ಪವಾಗಿ ದೇವಕಿ ಮತ್ತು ಯಶೋದೆಯರು ತಂದು ಬಡಿಸಲು, ಬಡಿಸಿದ ಊಟವನ್ನು ಹೊಸದೆನ್ನುವಂತೆ ಕೃಷ್ಣನು ಸವಿದನು /ಸವಿಯುತ್ತಿದ್ದನು.
 • ತಾತ್ಪರ್ಯ:*ಹೊಳಿಯುವ ಚಿನ್ನದಹರಿವಾಣ, ಚಿನ್ನದ ಬಟ್ಟಲುಗಳು, ಶೋಭಿಸುವಸಣ್ಣಕ್ಕಿ ಅನ್ನ, ತೊವ್ವೆ, ತುಪ್ಪ, ಭಕ್ಷ್ಯ (ಲಾಡು ಇತ್ಯಾದಿತಿನ್ನುವುದು), ಪಾಯಸ ಶಾವಿಗೆ, ಮಧು/ ಜೇನು, ಶರ್ಕರಾಮಿಷ/ಸಕ್ಕರತಿಂಡಿ, ಪಳಿದ್ಯ, ಸೀಕರಣೆ/ಹಣ್ಣಿನಿಂದಮಾಡಿದ ಸಿಹಿತಿಂಡಿ, ಶಾಕ/ಬೇಯಿಸಿದ ತರಕಾತಿ ಕಳಿತ ಹಣ್ಣಗಳು; ಕಾರದ ಕಾಯಿರಸ, ಸಿಹಿ ರಸಾಯನ, ಬಗೆಬಗೆಯ ಸಾರುಗಳು, ಉಪ್ಪಿನಗಾಯಿ, ಬಳುಕ, ಕೊಸಂಬರಿ, ಕಚ್ಚಡಿ, ಹಾಲು ಮೊಸರು ಇವುಗಳನ್ನು ಪ್ರತ್ಯೇಕವಾಗಿ ಒಪ್ಪವಾಗಿ ದೇವಕಿ ಮತ್ತು ಯಶೋದೆಯರು ತಂದು ಬಡಿಸಲು, ಬಡಿಸಿದ ಊಟವನ್ನು ಹೊಸದೆನ್ನುವಂತೆ ಕೃಷ್ಣನು ಸವಿದನು /ಸವಿಯುತ್ತಿದ್ದನು.

(ಪದ್ಯ -೪೪)

ಪದ್ಯ :-:೪೫[ಸಂಪಾದಿಸಿ]

ಗುಪ್ತದಿಂದಮರರ್ಗಮೃತವನುಣಿಸಿದ ನಿತ್ಯ | ತೃಪ್ತಂ ಸಕಲಮಖಂಗಳ ಹವಿರ್ಭಾಗಮಂ | ಸಪ್ತಾರ್ಚಿಮುಖದಿಂದೆ ಕೈಕೊಂಡದರ ಫಲವನೂಡಿಸುವ ಪರಮಾತ್ಮನು ||
ಕ್ಲುಪ್ತಮೆನಿಸುವ ರಾಜಭೋಗ್ಯದೊಳಗಾವುದಂ | ಲುಪ್ತಮಾಗದವೊಲಾರೋಗಣಿಯನೈದೆ ಲೋ | ಲುಪ್ತಿಯಿಂ ಮಾಡುತಿರ್ದಂ ತನ್ನ ಮಾನುಷ್ಯಲೀಲೆಗಿದು ಸಾರ್ಥಮೆನಲು ||45||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಗುಪ್ತದಿಂದ ಅಮರರ್ಗೆ ಅಮೃತವನು ಉಣಿಸಿದ ನಿತ್ಯತೃಪ್ತಂ=[ರಹಸ್ಯವಾಗಿ ದೇವತೆಗಳಿಗೆ ಅಮೃತವನ್ನು ಕೊಟ್ಟ ನಿತ್ಯತೃಪ್ತನು]; ಸಕಲಮಖಂಗಳ ಹವಿರ್ಭಾಗಮಂ ಸಪ್ತಾರ್ಚಿಮುಖದಿಂದೆ ಕೈಕೊಂಡು ಅದರ ಫಲವನೂಡಿಸುವ ಪರಮಾತ್ಮನು=[ಸಕಲಯಜ್ಞಗಳ ಹವಿರ್ಭಾಗವನ್ನು ಅಗ್ನಿಮೂಲಕದ ಸ್ವೀಕರಿಸಿ,ಅದರ ಫಲವನ್ನು ಕೊಡುವ ಪರಮಾತ್ಮನು];

ಕ್ಲುಪ್ತಮೆನಿಸುವ ರಾಜಭೋಗ್ಯದೊಳಗೆ ಆವುದಂ ಲುಪ್ತಮಾಗದವೊಲು ಆರೋಗಣಿಯನು ಐದೆ=[ಇಲ್ಲಿ ಮಿತಿಯಾದ ರಾಜಭೋಗದಲ್ಲಿ ಯಾವದೂ ಕೊರತೆಯಾಗದಂತೆ ಊಟವನ್ನು ಮಾಡವಾಗ,]; ಲೋಲುಪ್ತಿಯಿಂ ಮಾಡುತಿರ್ದಂ ತನ್ನ ಮಾನುಷ್ಯಲೀಲೆಗೆ ಇದು ಸಾರ್ಥಂ ಎನಲು=[ತನ್ನ ಮಾನುಷ್ಯಲೀಲೆಗೆ ಇದು ಸಾರ್ಥಕ ಎನ್ನುವಂತೆ ಆಸಕ್ತಿಯಿಂದ ಮಾಡುತ್ತಿದ್ದನು, ].

 • ತಾತ್ಪರ್ಯ:* ಈ ಕೃಷ್ಣನು, ರಹಸ್ಯವಾಗಿ ದೇವತೆಗಳಿಗೆ ಅಮೃತವನ್ನು ಕೊಟ್ಟ ನಿತ್ಯತೃಪ್ತನು; ಸಕಲಯಜ್ಞಗಳ ಹವಿರ್ಭಾಗವನ್ನು ಅಗ್ನಿಮೂಲಕದ ಸ್ವೀಕರಿಸಿ,ಅದರ ಫಲವನ್ನು ಕೊಡುವ ಪರಮಾತ್ಮನು; ಇಲ್ಲಿ ಭೂಲೋಕದಲ್ಲಿ, ಮಿತಿಯಾದ ರಾಜಭೋಗದಲ್ಲಿ ಯಾವದೂ ಕೊರತೆಯಾಗದಂತೆ ಊಟವನ್ನು ಮಾಡವಾಗ, ತನ್ನ ಮಾನುಷ್ಯಲೀಲೆಗೆ ಇದು ಸಾರ್ಥಕ ಎನ್ನುವಂತೆ ಆಸಕ್ತಿಯಿಂದ ಮಾಡುತ್ತಿದ್ದನು,

(ಪದ್ಯ -೪೫)

ಪದ್ಯ :-:೪೬[ಸಂಪಾದಿಸಿ]

ಹಾರ ನೂಪುರ ಕಂಕಣಾದಿ ಭೂಷಣ ಝಣ | ತ್ಕಾರಧ್ವನಿಗಳ ಮೇಲುದಿನೊಳ್ ಪೊದಳ್ವ ಕುಚ | ಭಾರದಿಂ ನಸುವಾಗಿದಂಗಲತೆ ಲಹರಿಗಳ ಸಿರಿಮೊಗಕೊಲಿವ ಕಂಗಳ ||
ಸ್ಮೇರೋಲ್ಲಸದ್ರುಚಿರದಂತಪಙ್ತಗಳ ಶೃಂ | ಗಾರಸರಸೋಕ್ತಿಗಳ ವಿನುತಾಷ್ಟಮಹಿಷಿಯರ್ | ಚಾರು ಚಾಮರ ತಾಲವೃಂತಮಂ ಪಿಡಿದಿರ್ದರಚ್ಚ್ಯತನ ಕೆಲಬಲದೊಳು||46||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಹಾರ ನೂಪುರ ಕಂಕಣಾದಿ ಭೂಷಣ ಝಣತ್ಕಾರ ಧ್ವನಿಗಳ ಮೇಲುದಿನೊಳ್=[ಹಾರ, ನೂಪುರ, ಕಂಕಣ ಮೊದಲಾದ ಧರಿಸಿದ ಆಭರಣಗಳ ಝಣತ್ಕಾರ ಧ್ವನಿಗಳ, ಮತ್ತು ಮೇಲೆ ಹೊದೆದ ಸೆರಗಿನಲ್ಲಿ];ಮೇಲುದಿನೊಳ್ ಪೊದಳ್ವ ಕುಚಭಾರದಿಂ ನಸುವಾಗಿದಂಗಲತೆ ಲಹರಿಗಳ ಸಿರಿಮೊಗಕೊಲಿವ ಕಂಗಳ ಸ್ಮೇರ(ನಸುನಗೆಯ) ಉಲ್ಲಸತ್ ರುಚಿರ ದಂತಪಙ್ತಗಳ ಶೃಂಗಾರಸರಸೋಕ್ತಿಗಳ ವಿನುತಾಷ್ಟಮಹಿಷಿಯರ್=[ಮೇಲೆ ಹೊದೆದ ಸೆರಗಿನಲ್ಲಿ ಹೊರಸೂಸುವ ಕುಚಭಾರದ, ನಸುಬಾಗಿದ ಬಳುಕುವ ದೇಹ ಲಕ್ಷಣದ ಸುಂದರಮುಖಕ್ಕೆ ಒಪ್ಪುವ ಕಣ್ಣುಗಳ ಮುಗುಳುನಗೆಯ ಹೊಳೆಯುವ ಹಲ್ಲುಗಳ,ಶೃಂಗಾರ ಸರಸದ ಮಾತುಗಳ ಯೋಗ್ಯ ಅಷ್ಟಮಹಿಷಿಯರು]; ಚಾರು ಚಾಮರ ತಾಲವೃಂತಮಂ ಪಿಡಿದಿರ್ದರಚ್ಚ್ಯತನ ಕೆಲಬಲದೊಳು= ಚಂದದ ಚಾಮರ ಬೀಸಣಿಕೆಯನ್ನು ಹಿಡಿದಿದ್ದರು ಅಚ್ಯುತನ ಬದಿಯಲ್ಲಿ;
 • ತಾತ್ಪರ್ಯ:*ಹಾರ, ನೂಪುರ, ಕಂಕಣ ಮೊದಲಾದ ಧರಿಸಿದ ಆಭರಣಗಳ ಝಣತ್ಕಾರ ಧ್ವನಿಗಳ,ಮತ್ತು ಮೇಲೆ ಹೊದೆದ ಸೆರಗಿನಲ್ಲಿ ಹೊರಸೂಸುವ ಕುಚಭಾರದ, ನಸುಬಾಗಿದ ಬಳುಕುವ ದೇಹ ಲಕ್ಷಣದ ಸುಂದರಮುಖಕ್ಕೆ ಒಪ್ಪುವ ಕಣ್ಣುಗಳ ಮುಗುಳುನಗೆಯ ಹೊಳೆಯುವ ಹಲ್ಲುಗಳ,ಶೃಂಗಾರ ಸರಸದ ಮಾತುಗಳ ಯೋಗ್ಯ ಅಷ್ಟಮಹಿಷಿಯರು ಅಚ್ಯುತನ ಬದಿಯಲ್ಲಿ ಚಂದದ ಚಾಮರ ಬೀಸಣಿಕೆಯನ್ನು ಹಿಡಿದಿದ್ದರು.

(ಪದ್ಯ -೪೬)

ಪದ್ಯ :-:೪೭[ಸಂಪಾದಿಸಿ]

ಕದ್ದು ಮನೆಮನೆವೊಕ್ಕು ಬೆಣ್ಣೆಪಾಲ್ಗೆನೆಗಳಂ | ಮೆದ್ದು ಗೋವಳರ ಮೇಳದ ಕಲ್ಲಿಗೂಳ ಕೈ | ಮುದ್ದೆಯಂ ತೆಗೆದುಂಡು ತುರುಗಾವ ಪಳ್ಳಿಯಂ ಬಿಟ್ಟು ಬಳಿಕೆರವಿಲ್ಲದೆ ||
ಹೊದ್ದಿ ಪಾಂಡವರನೋಲೈಸಲಾದುದು ಭಾಗ್ಯ | ಮಿದ್ದಪುವು ರಾಜಭೋಜ್ಯಂಗಳಿವು ಪಡೆದವರ್ | ಮುದ್ದುಗೈದಪರೂಟದೆಡೆಗಳೊಳ್ ಚೋದ್ಯಮೆಂದಳ್ ಸತ್ಯಭಾಮೆ ನಗುತೆ ||47||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಕದ್ದು ಮನೆಮನೆವೊಕ್ಕು ಬೆಣ್ಣೆಪಾಲ್ಗೆನೆಗಳಂ ಮೆದ್ದು ಗೋವಳರ ಮೇಳದ ಕಲ್ಲಿಗೂಳ ಕೈ ಮುದ್ದೆಯಂ ತೆಗೆದುಂಡು=[ಕದ್ದುಮುಚ್ಚಿ ಮನೆಮನೆಹೊಕ್ಕು ಬೆಣ್ಣೆಹಾಲುಗಳನ್ನು ತಿಂದು ಕುಡಿದು, ಗೋಲ್ಲರ ಗುಂಪಿನಲ್ಲಿ ಕಲ್ಲಿ/ಬುಟ್ಟಿಯಲ್ಲಿ ಒಯ್ಯುವ ಬುತ್ತಿಅನ್ನ ಮತ್ತು ಕೈ ತುತ್ತು ಉಂಡು,]; ತುರುಗಾವ ಪಳ್ಳಿಯಂ ಬಿಟ್ಟು ಬಳಿಕೆರವಿಲ್ಲದೆ ಹೊದ್ದಿ ಪಾಂಡವರನೋಲೈಸಲಾದುದು ಭಾಗ್ಯಮಿದ್ದಪುವು ರಾಜಭೋಜ್ಯಂಗಳಿವು ಪಡೆದವರ್=[ದನಕಾಯುವ ಹಳ್ಳಿಯನ್ನು ಬಿಟ್ಟು, ಬಳಿಕ ಬೇಧಭಾವವಿಲ್ಲದೆ ಪಾಂಡವರನ್ನು ಸೇರಿ ಸೇವಿಸಿದ್ದರಿಂದ ರಾಜಭೋಜ್ಯಗಳನ್ನು ಪಡೆದ ಈ ಭಾಗ್ಯಂ ಬಂದಿದೆ ]; ಮುದ್ದುಗೈದಪರೂಟದೆಡೆಗಳೊಳ್ ಚೋದ್ಯಮೆಂದಳ್ ಸತ್ಯಭಾಮೆ ನಗುತೆ=[ಈಗ ಊಟದ ಎಡೆಗಳಲ್ಲಿ ಪ್ರೀತಿ ತೋರಿಸಿ ಬಡಿಸುವರು.(ಚಿಕ್ಕವರಿದ್ದಾಗ ತೋರಿಸಲಿಲ್ಲ) ಚೋದ್ಯವು / ಆಶ್ಚರ್ಯವು ಎಂದು ಸತ್ಯಭಾಮೆ ನಗುತ್ತಾ ಹೇಳಿದಳು.]
 • ತಾತ್ಪರ್ಯ:*ಕದ್ದುಮುಚ್ಚಿ ಮನೆಮನೆಹೊಕ್ಕು ಬೆಣ್ಣೆಹಾಲುಗಳನ್ನು ತಿಂದು ಕುಡಿದು, ಗೋಲ್ಲರ ಗುಂಪಿನಲ್ಲಿ ಕಲ್ಲಿ/ಬುಟ್ಟಿಯಲ್ಲಿ ಒಯ್ಯುವ ಬುತ್ತಿಅನ್ನ ಮತ್ತು ಕೈ ತುತ್ತು ಉಂಡು, ದನಕಾಯುವ ಹಳ್ಳಿಯನ್ನು ಬಿಟ್ಟು, ಬಳಿಕ ಬೇಧಭಾವವಿಲ್ಲದೆ ಪಾಂಡವರನ್ನು ಸೇರಿ ಅವರನ್ನು ಸೇವಿಸಿದ್ದರಿಂದ ರಾಜಭೋಜ್ಯಗಳನ್ನು ಪಡೆದ ಈ ಭಾಗ್ಯಂ ಬಂದಿದೆ ; ತಾಯಂದಿರು ಈಗ ಊಟದ ಎಡೆಗಳಲ್ಲಿ ಪ್ರೀತಿ ತೋರಿಸಿ ಬಡಿಸುವರು.(ಚಿಕ್ಕವರಿದ್ದಾಗ ತೋರಿಸಲಿಲ್ಲ) ಚೋದ್ಯವು / ಆಶ್ಚರ್ಯವು ಎಂದು ಸತ್ಯಭಾಮೆ ನಗುತ್ತಾ ಹೇಳಿದಳು.]

(ಪದ್ಯ -೪೭)

ಪದ್ಯ :-:೪೮[ಸಂಪಾದಿಸಿ]

ಬರಿದೆ ಗಳಹದಿರತ್ತೆಮಾವದಿರಿರಲ್ಕೆ ನೀ | ನರಿಯಲಾ ತನ್ನ ಬಂಧನಮೀತನುದಯಿಸಲ್ | ಪರಿದುದೀತನೆ ಜಗದ್ಗುರು ಕಣಾ ಪಾಲಿಸುವನಿಂದ್ರಾದಿ ನಿರ್ಜರರನು ||
ಕುರುಪಿಡಲ್ಬಹುದೆ ಮಾನವನೆಂದು ಕೃಷ್ಣನು | ಜರಿಯೆ ನೀನೇಸರವಳೊಡನಾಡಿತನದಿಂದೆ | ಬೆರೆಯಬೇಡತ್ತಹೋಗೆಂದು ದೇವಕಿ ಸತ್ಯಭಾಮೆಯಂ ಗರ್ಜಿಸಿದಳು ||48||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬರಿದೆ ಗಳಹದಿರು ಅತ್ತೆಮಾವದಿರು ಇರಲ್ಕೆ ನೀನು ಅರಿಯಲಾ ತನ್ನ ಬಂಧನಂ ಈತನುದಯಿಸಲ್ ಪರಿದುದು=[ಅತ್ತೆಮಾವಂದಿರು ಇರಲು ಅವರ ಎದುರು ಬರಿದೆ ಮಾತನಾಡಬೇಡ ನೀನರಿಯೆ ವಿನಯವನ್ನ, ತನ್ನ ಬಂಧನವು ಈತನು ಹಟ್ಟಿದ್ದರಿಂದ ಪರಿಹಾರವಾಯಿತು]; ಜಗದ್ಗುರು ಕಣಾ ಪಾಲಿಸುವನಿಂದ್ರಾದಿ ನಿರ್ಜರರನು =[ಈತನೆ ಜಗದ್ಗುರು ಕಣಾ! ಇವನು ಪಾಲಿಸುವನು ಇಂದ್ರಾದಿ ದೇವತೆಗಳನ್ನು]; ಕುರುಪಿಡಲ್ ಬಹುದೆ ಮಾನವನೆಂದು ಕೃಷ್ಣನು ಜರಿಯೆ ನೀನೇಸರವಳು ಒಡನಾಡಿತನದಿಂದೆ ಬೆರೆಯಬೇಡ ಅತ್ತ ಹೋಗೆಂದು ದೇವಕಿ ಸತ್ಯಭಾಮೆಯಂ ಗರ್ಜಿಸಿದಳು=[ಇವನ ಮೂಲ (ಗುರುತು)ರೂಪವನ್ನು ಅರಿಯಲು ಸಾಧ್ಯವೇ? ಮಾನವನೆಂದು ಕೃಷ್ಣನು ಜರಿಯಲು ನೀನೆಷ್ಟರವಳು, ಅವನ ಒಡನಾಡಿತನದಿಂದ ಸಲಿಗೆಯಮಾತನಾಡಬೇಡ ಅತ್ತ ಹೋಗು ಎಂದ ದೇವಕಿ ಸತ್ಯಭಾಮೆಯನ್ನು ಗದರಿದಳು].
 • ತಾತ್ಪರ್ಯ:*ಅತ್ತೆಮಾವಂದಿರು ಇರಲು ಅವರ ಎದುರು ಬರಿದೆ ಮಾತನಾಡಬೇಡ ನೀನರಿಯೆ ವಿನಯವನ್ನ, ತನ್ನ ಬಂಧನವು ಈತನು ಹಟ್ಟಿದ್ದರಿಂದ ಪರಿಹಾರವಾಯಿತು; ಈತನೆ ಜಗದ್ಗುರು ಕಣಾ! ಇವನು ಇಂದ್ರಾದಿ ದೇವತೆಗಳನ್ನು ಪಾಲಿಸುವನು; ಇವನ ಮೂಲ (ಗುರುತು)ರೂಪವನ್ನು ಅರಿಯಲು ಸಾಧ್ಯವೇ? ಮಾನವನೆಂದು ಕೃಷ್ಣನನ್ನು ಜರಿಯಲು ನೀನೆಷ್ಟರವಳು, ಅವನ ಒಡನಾಡಿತನದ ಸಲಿಗೆಯಿಂದ ಮಾತನಾಡಬೇಡ ಅತ್ತ ಹೋಗು ಎಂದ ದೇವಕಿ ಸತ್ಯಭಾಮೆಯನ್ನು ಗದರಿದಳು].

(ಪದ್ಯ -೪೮

ಪದ್ಯ :-:೪೯[ಸಂಪಾದಿಸಿ]

ನಿಮ್ಮ ಬಂಧನವ ಬಿಡಿಸಿದವರಿಗೆ ತವೆ ಬಂಧ | ನಮ್ಮಗುಳದೇಕಾಯ್ತು ದಿವಿಜರಂ ಪೊರೆವವಂ | ಚಮ್ಮಟಿಗೆವಿಡಿಯಲೇತಕೆ ನರನ ಕುರುಹುಗಾಣಿಸದವಂ ಪೆಳವಿಗೊಲ್ದು ||
ಸುಮ್ಮನೇತಕೆ ಸಿಕ್ಕಿದಂ ಜಗದ್ಗುರುವೆನಲ್ | ನಮ್ಮ ಜಗದೊಳಗಿಹಿರಿ ನೀವು ನಿಗೆಯು ಗುರುವೆ | ನಮ್ಮ ನಂಜಿಸದೆ ನೀಂ ತಿಳಿಪುದೆಂದಳ್ ದೇವಕಿಗೆ ಮತ್ತೆ ಸತ್ಯಭಾಮೆ||49||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ನಿಮ್ಮ ಬಂಧನವ ಬಿಡಿಸಿದವರಿಗೆ ತವೆ ಬಂಧ ನಮ್ಮಗುಳದೇಕಾಯ್ತು=[ನಿಮ್ಮ ಬಂಧನವ ಬಿಡಿಸಿದ ಇವರಿಗೆ ಮತ್ತೆ ನಮ್ಮಿಂದ (ವಿವಾಹ) ಬಂಧನವು ಅದು ಏಕಾಯ್ತು ?]; ದಿವಿಜರಂ ಪೊರೆವವಂ ಚಮ್ಮಟಿಗೆವಿಡಿಯಲೇತಕೆ ನರನ ಕುರುಹುಗಾಣಿಸಿದವಂ ಪೆಳವಿಗೊಲ್ದು ಸುಮ್ಮನೇತಕೆ ಸಿಕ್ಕಿದಂ=[ದೇವತೆಗಳನ್ನು ಕಾಪಾಡವವನು ಕುದುರೆ ರಥದ ಚಮ್ಮಟಿಗೆಯನ್ನು ಹಿಡಿದು ಸಾರಥಿಕೆಲಸ ಮಾಡುವುದೇತಕ್ಕೆ? ಕುರುಹುಗಾಣಿಸದವಂ ಪೆಳವಿಗೆ ಒಲ್ದು ಸುಮ್ಮನೇತಕೆ ಸಿಕ್ಕಿದಂ ನರನ(ಮಾನವನ) ಕುರುಹು ಕಾಣಿಸದವನು ಹೆಳವಿ ಕುಬ್ಜೆಗೆ ಸುಮ್ಮನೆ ಏತಕ್ಕೆ ಸಿಕ್ಕಿದ]; ಜಗದ್ಗುರುವೆನಲ್ ನಮ್ಮ ಜಗದೊಳಗಿಹಿರಿ ನೀವು ನಿಗೆಯು ಗುರುವೆ ನಮ್ಮ ನಂಜಿಸದೆ ನೀಂ ತಿಳಿಪುದೆಂದಳ್ ದೇವಕಿಗೆ ಮತ್ತೆ ಸತ್ಯಭಾಮೆ=[ಇವನನ್ನು ಜಗದ್ಗುರುವೆನ್ನಲು, ನಮ್ಮ ಈ ಜಗದೊಳಗೆ ನೀವು ನನಗೆ ಗುರುವು, ನಮ್ಮನ್ನು ಗದರಿ ಅಂಜಿಸದೆ ನೀವು ಇದರ ರಹಸ್ಯ ತಿಳಿಸಬೇಕು ಎಂದು ದೇವಕಿಗೆಮತ್ತೆ ಸತ್ಯಭಾಮ ಹೇಳಿದಳು];
 • ತಾತ್ಪರ್ಯ:*ನಿಮ್ಮ ಬಂಧನವ ಬಿಡಿಸಿದ ಇವರಿಗೆ ಮತ್ತೆ ನಮ್ಮಿಂದ (ವಿವಾಹ) ಬಂಧನವು ಅದು ಏಕಾಯ್ತು ?; ದೇವತೆಗಳನ್ನು ಕಾಪಾಡವವನು ಕುದುರೆ ರಥದ ಚಮ್ಮಟಿಗೆಯನ್ನು ಹಿಡಿದು ಸಾರಥಿ ಕೆಲಸ ಮಾಡುವುದೇತಕ್ಕೆ? ನರನ(ಮಾನವನ) ಕುರುಹು ಕಾಣಿಸದವನು ಹೆಳವಿ ಕುಬ್ಜೆಗೆ ಸುಮ್ಮನೆ ಏತಕ್ಕೆ ಸಿಕ್ಕಿದ; ಇವನನ್ನು ಜಗದ್ಗುರುವೆನ್ನಲು, ನಮ್ಮ ಈ ಜಗದೊಳಗೆ ನೀವು ನನಗೆ ಗುರುವು, ನಮ್ಮನ್ನು ಗದರಿ ಅಂಜಿಸದೆ ನೀವು ಇದರ ರಹಸ್ಯ ತಿಳಿಸಬೇಕು ಎಂದು ದೇವಕಿಗೆ ಮತ್ತೆ ಸತ್ಯಭಾಮ ಹೇಳಿದಳು;

(ಪದ್ಯ -೪೯)XXVIII

ಪದ್ಯ :-:೫೦[ಸಂಪಾದಿಸಿ]

ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿ | ಗತ್ಯಂತಹರ್ಷಮಂ ತಾಳ್ದದಕೆ ನಸುನಗುತೆ | ಪ್ರತ್ಯುತ್ತರಂಗುಡುವೆನೆಂಬನಿತರೊಳ್ ಭೀಮಸೇನನೈತರುತಿಹುದನು ||
ಭೃತ್ಯರೆಚ್ಚರಿಸಿದೊಡೆ ಭಾವಮೈದುತನದ | ಕೃತ್ಯದಿಂದಚ್ಚ್ಯತಂ ಸೂಚಿಸಲ್ ತಡೆದಳೌ | ಚಿತ್ಯಮ್ಲಲೊಳವುಗುವೊಡಾರೋಗಣೆಯ ಸಮಯಮೆಂದು ಸೈರಂಧ್ರಿ ಬಂದು ||50||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿಗತ್ಯಂತ ಹರ್ಷಮಂ ತಾಳ್ದು=[ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿಗೆ ಅತ್ಯಂತ ಹರ್ಷಪಟ್ಟು ]; ಅದಕೆ ನಸುನಗುತೆ ಪ್ರತ್ಯುತ್ತರಂ ಗುಡುವೆನೆಂಬ ಅನಿತರೊಳ್ ಭೀಮಸೇನನು ಐತರುತಿಹುದನು ಭೃತ್ಯರೆಚ್ಚರಿಸಿದೊಡೆ=[ಅದಕ್ಕೆ ನಸುನಗುತ್ತಾ ಪ್ರತ್ಯುತ್ತರವನ್ನು ಕೊಡಬೇಕು ಎನ್ನತ್ತಿರುವ ಸಮಯದಲ್ಲಿ ಅನಿತರೊಳ್ ಭೀಮಸೇನನು ಬರರುತ್ತರುವುದನ್ನು, ಸೇವಕರು ತಿಳಿಸಿದಾಗ,]; ಭಾವಮೈದುತನದ ಕೃತ್ಯದಿಂದ ಅಚ್ಚ್ಯತಂ ಸೂಚಿಸಲ್ ತಡೆದಳು ಔಚಿತ್ಯಮ್ಲಲ್ಲ ಒಳವುಗುವೊಡೆ ಆರೋಗಣೆಯ ಸಮಯಮೆಂದು ಸೈರಂಧ್ರಿ ಬಂದು=[ಅತ್ತೆಕುಂತಿಯ ಮಗ ಭಾವಮೈದುನನೆಂಬ ಸಲಿಗೆಯಿಂದ ಅಚ್ಚ್ಯತನು ಅವನನ್ನು ತಡೆಯಲು ಸೂಚಿಸಲು, ಸೈರಂಧ್ರಿ ಬಂದು ಒಳಹೋಗಲು ಅಚ್ಯುತನು ಊಟ ಮಾಡುತ್ತಿರುವನು,ಭೇಟಿ ಔಚಿತ್ಯಮ್ಲಲ್ಲವೆಂದು ಭೀಮನನ್ನು ತಡೆದಳು].
 • ತಾತ್ಪರ್ಯ:*ಸತ್ಯಭಾಮಾದೇವಿ ನುಡಿದ ಕಟಕಿಯ ಮಾತಿಗೆ ಅತ್ಯಂತ ಹರ್ಷಪಟ್ಟು, ಅದಕ್ಕೆ ನಸುನಗುತ್ತಾ ಪ್ರತ್ಯುತ್ತರವನ್ನು ಕೊಡಬೇಕು ಎನ್ನತ್ತಿರುವ ಸಮಯದಲ್ಲಿ ಅನಿತರೊಳ್ ಭೀಮಸೇನನು ಬರರುತ್ತರುವುದನ್ನು, ಸೇವಕರು ತಿಳಿಸಿದಾಗ, ಪರಿಹಾಸದಿಂದ, ಅತ್ತೆಕುಂತಿಯ ಮಗ ಭಾವಮೈದುನನೆಂಬ ಸಲಿಗೆಯಿಂದ ಅಚ್ಚ್ಯತನು ಅವನನ್ನು ತಡೆಯಲು ಸೂಚಿಸಲು, ಸೈರಂಧ್ರಿ ಬಂದು ಒಳಹೋಗಲು ಅಚ್ಯುತನು ಊಟ ಮಾಡುತ್ತಿರುವನು,ಭೇಟಿ ಔಚಿತ್ಯಮ್ಲಲ್ಲವೆಂದು ಭೀಮನನ್ನು ತಡೆದಳು].

(ಪದ್ಯ -೫೦)

ಪದ್ಯ :-:೫೧[ಸಂಪಾದಿಸಿ]

ಆರೋಗಣೆಯ ಸಮಯಮಾರ್ಗೆ ಭೂತಂ ಪೊಯ್ದು | ದಾರನೀ ಮನೆಯೊಳಿಂತೀಗಳೇತಕೆ ಮೌನ | ಮಾರುಮಿಲ್ಲವೆ ಪೊರೆಯೊಳಿಹಳೇ ದೇವಕಿ ಸತ್ಯಭಾಮೆಗಾವುದುಮಿಲ್ಲಲಾ ||
ಆರೆನ್ನನಿಂತು ತಡೆಸಿದರಾಯ್ತೆ ದುರ್ಭಿಕ್ಷ || ಮೂರೊಳ್ ಬೆಳೆಯದೆ ಧಾನ್ಯಂ ಕರೆಯದೇ ವೃಷ್ಟಿ | ನಾರಿಯರನಿನಿಬರಂ ಕಟ್ಟಿಕೊಳಲೇಕೆ ಬಿಡಲೆಂದು ಮಾರುತಿ ನುಡಿದನು ||51||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಆರೋಗಣೆಯ ಸಮಯಂ ಆರ್ಗೆ ಭೂತಂ ಪೊಯ್ದುದು ಆರನು ಈ ಮನೆಯೊಳು ಇಂತು ಈಗಳು ಏತಕೆ ಮೌನಂ=[ಊಟದ ಸಮಯ ಯಾರಿಗೆ? ಭೂತವು ಹೊಡೆದಿದೆಯೇ ಯಾರಿಗಾದರೂ? ಈ ಮನೆಯಲ್ಲಿ ಈ ಬಗೆಯ ಈಗ ನಿಶ್ಶಬ್ದ ಏಕೆ? ಕೃಷ್ಣನು ಭೀಮನನ್ನು ಒಳಗೆ ಕರೆಯದೇ ಬಾಗಿಲಲ್ಲಿ ತಡೆಲು ಹೇಳಿದುದನ್ನು ನೋಡಿ ಉಳಿದವರೆಲ್ಲಾ ಅವನ ಪರಿಹಾಸ ತಿಳಿಯದೇ ದಿಗ್ಮೂಢರಾದಂತೆ ಮೌನವಹಿಸಿದರು]; ಆರುಂ ಇಲ್ಲವೆ ಪೊರೆಯೊಳು ಇಹಳೇ ದೇವಕಿ ಸತ್ಯಭಾಮೆಗೆ ಆವುದುಂ ಇಲ್ಲಲಾ=[ಯಾರೂ ಇಲ್ಲವೇ ಕೃಷ್ನನ ಹತ್ತಿರ ತನ್ನನ್ನು ಬರಮಾಡಿಕೊಳ್ಳಲು, ದೇವಕಿ ಇದ್ದಾಳೆಯೇ? ಸತ್ಯಭಾಮೆಗೆ ಯಾವದೂ ಶಿಶ್ಟಾಚಾರ ಇಲ್ಲವಲಾ!];ಆರು ಎನ್ನನು ಇಂತು ತಡೆಸಿದರು ಆಯ್ತೆ ದುರ್ಭಿಕ್ಷಂ ಊರೊಳ್ ಬೆಳೆಯದೆ ಧಾನ್ಯಂ ಕರೆಯದೇ ವೃಷ್ಟಿ=[ಯಾರು ನನ್ನನ್ನು ಹೀಗೆ ತಡೆಯಿಸಿದರು? ಆಗಲಿ,ಊಟದಸಮಯಕ್ಕೆ ಬಂದರೆ ಅತಿಥಿಗಳಿಗೆ ಕರೆದು ಜೊತೆಯಲ್ಲಿ ಊಟ ಹಾಕಬೇಕು,ಅದಿಲ್ಲದೆ ಇದೇನು? ಊಟಹಾಕಲಾರದಷ್ಟು ದುರ್ಭಿಕ್ಷ ಬಂದಿದೆಯೇ ಈ ಊರಲ್ಲಿ? ಬೆಳೆಯದೆ ದವಸ ಧಾನ್ಯ? ಸುರಿಯದೇ ಮಳೆ]; ನಾರಿಯರನು ಇನಿಬರಂ ಕಟ್ಟಿಕೊಳಲೇಕೆ ಬಿಡಲೆಂದು ಮಾರುತಿ ನುಡಿದನು=[ಬಂದವರನ್ನು ಸ್ವಾಗತಿಸಲು ಬಿಡುವು ಇರದಂತಿರಲು ಇಷ್ಟೊಂದು ಹೆಂಡತಿಯರನ್ನು ಏಕೆ ಕಟ್ಟಿಕೊಳ್ಳಬೇಕು? ಅವರನ್ನೆಲ್ಲಾ ಬಿಡಲಿ! ಎಂದು ಭೀಮ ನುಡಿದನು ].
 • ತಾತ್ಪರ್ಯ:*ಊಟದ ಸಮಯ ಯಾರಿಗೆ? ಭೂತವು ಹೊಡೆದಿದೆಯೇ ಯಾರಿಗಾದರೂ? ಈ ಮನೆಯಲ್ಲಿ ಈ ಬಗೆಯ ಈಗ ನಿಶ್ಶಬ್ದ ಏಕೆ? ಯಾರೂ ಇಲ್ಲವೇ ಕೃಷ್ನನ ಹತ್ತಿರ ತನ್ನನ್ನು ಬರಮಾಡಿಕೊಳ್ಳಲು, ದೇವಕಿ ಇದ್ದಾಳೆಯೇ? ಸತ್ಯಭಾಮೆಗೆ ಯಾವದೂ ಶಿಶ್ಟಾಚಾರ ಇಲ್ಲವಲಾ! ಯಾರು ನನ್ನನ್ನು ಹೀಗೆ ತಡೆಯಿಸಿದರು? ಆಗಲಿ,ಊಟದಸಮಯಕ್ಕೆ ಬಂದರೆ ಕರೆದು ಜೊತೆಯಲ್ಲಿ ಊಟ ಹಾಕಬೇಕು,ಅದಿಲ್ಲದೆ ಇದೇನು? ಕರೆದು ಊಟ ಹಾಕಲಾರದಷ್ಟು ದುರ್ಭಿಕ್ಷ ಬಂದಿದೆಯೇ ಈ ಊರಲ್ಲಿ? ಬೆಳೆಯದೆ ದವಸ ಧಾನ್ಯ? ಸುರಿಯದೇ ಮಳೆ? ಬಂದವರನ್ನು ಸ್ವಾಗತಿಸಲು ಬಿಡುವು ಇರದಹಾಗೆ ಇಷ್ಟೊಂದು ಹೆಂಡತಿಯರನ್ನು ಏಕೆ ಕಟ್ಟಿಕೊಳ್ಳಬೇಕು? ಅವರನ್ನೆಲ್ಲಾ ಬಿಡಲಿ! ಎಂದು ಭೀಮ ನುಡಿದನು .

(ಪದ್ಯ -೫೧)

ಪದ್ಯ :-:೫೨[ಸಂಪಾದಿಸಿ]

ಭೀಮನಾಡಿದ ನುಡಿಯ ಕೇಳಿ ರುಕ್ಮಿಣೀ ಸತ್ಯ | ಭಾಮೆಯರ ಮೊಗನೋಡಿ ನಸುನಗುತೆ ಮುರಹರಂ | ತಾ ಮತ್ತೆ ರಭಸದಿಂ ಭೋಜನಂಗೆಯ್ಯು ತೊಡನೊಡನೆ ಭರ್ರನೆ ತೇಗಲು ||
ತಾಮಸಮಿದೇಕೆ ನಾಂ ಬಂದನೊರ್ವನೆ ಮುಳಿದೊ | ಡೀಮೂಜಗಂ ನಿನ್ನ ಬಾಯ್ಗೊಂದು ತುತ್ತಾಗ | ದೀ ಮನುಜಗಿನುಜರಂ ಬಲ್ಲರಾರೆನ್ನನುಳುಹೆಂದನಿಲಜಂ ಚೀರ್ದನು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಭೀಮನಾಡಿದ ನುಡಿಯ ಕೇಳಿ ರುಕ್ಮಿಣೀ ಸತ್ಯಭಾಮೆಯರ ಮೊಗನೋಡಿ ನಸುನಗುತೆ ಮುರಹರಂ (ಕೃಷ್ಣನು)=[ಭೀಮ ದೊಡ್ಡದಾಗಿ ಹೇಳಿದಮಾತುಗಳನ್ನು ಕೃಷ್ಣ ಕೇಳಿ, ರುಕ್ಮಿಣೀ ಸತ್ಯಭಾಮೆಯರ ಮುಖವನ್ನು ನೋಡಿ ನಸುನಗುತ್ತಾ ]; ತಾ ಮತ್ತೆ ರಭಸದಿಂ ಭೋಜನಂಗೆಯ್ಯು ತೊಡನೊಡನೆ ಭರ್ರನೆ ತೇಗಲು=[ಅವನು ಮತ್ತೆ ರಭಸದಿಂದಭೀಮನಿಗೆ ಕೇಳುವಂತೆ ಭೋಜನಮಾಡುವಾಗ ಮಧ್ಯೆ ಮಧ್ಯೆ ಭರ್ರನೆ ತೇಗುತ್ತಿದ್ದ]; [ತಾಮಸಂ ಇದೇಕೆ ನಾಂ ಬಂದನು ಓರ್ವನೆ ಮುಳಿದೊಡೆ ಈ ಮೂಜಗಂ ನಿನ್ನ ಬಾಯ್ಗೆ ಒಂದು ತುತ್ತಾಗದೆ=[ನಾನು ಒಬ್ಬನೇ ಬಂದಿದ್ದೇನೆ (ನಿನ್ನ ಮಿತ್ರ ಅರ್ಜುನ ಬಂದಿಲ್ಲ), ಉದಾಸೀನ ಇದೇಕೆ, ನಿನಗೆ ಸಿಟ್ಟುಬಂದರೆ ಈ ಮೂರಲೋಕಗಳೂ ನಿನ್ನ ಬಾಯಿಗೆ ಒಂದು ತುತ್ತಾಗುವುದೆಲ್ಲವೇ?]; ಈ ಮನುಜಗಿನುಜರಂ ಬಲ್ಲರು ಆರು ಎನ್ನನು ಉಳುಹು ಎಂದು ಅನಿಲಜಂ ಚೀರ್ದನು=[ಈ ನನ್ನಂಥ ಸಾಮನ್ಯ ಮನುಷ್ಯರನ್ನು ಯಾರು ಕೇಳುವರು? ನನ್ನನ್ನು ಕಾಪಾಡು ಸಿಟ್ಟುಮಾಡಬೇಡ ಎಂದು ಭೀಮ ಕೋಗಿಕೊಂಡನು].
 • ತಾತ್ಪರ್ಯ:*ಭೀಮ ದೊಡ್ಡದಾಗಿ ಹೇಳಿದಮಾತುಗಳನ್ನು ಕೃಷ್ಣ ಕೇಳಿ, ರುಕ್ಮಿಣೀ ಸತ್ಯಭಾಮೆಯರ ಮುಖವನ್ನು ನೋಡಿ ನಸುನಗುತ್ತಾ, ಅವನು ಮತ್ತೆ ರಭಸದಿಂದಭೀಮನಿಗೆ ಕೇಳುವಂತೆ ಭೋಜನಮಾಡುವಾಗ ಮಧ್ಯೆ ಮಧ್ಯೆ ಭರ್ರನೆ ತೇಗುತ್ತಿದ್ದ; ನಾನು ಒಬ್ಬನೇ ಬಂದಿದ್ದೇನೆ (ನಿನ್ನ ಮಿತ್ರ ಅರ್ಜುನ ಬಂದಿಲ್ಲ), ಉದಾಸೀನ ಇದೇಕೆ, ನಿನಗೆ ಸಿಟ್ಟುಬಂದರೆ ಈ ಮೂರಲೋಕಗಳೂ ನಿನ್ನ ಬಾಯಿಗೆ ಒಂದು ತುತ್ತಾಗುವುದೆಲ್ಲವೇ? ಈ ನನ್ನಂಥ ಸಾಮನ್ಯ ಮನುಷ್ಯರನ್ನು ಯಾರು ಕೇಳುವರು? ನನ್ನನ್ನು ಕಾಪಾಡು ಸಿಟ್ಟುಮಾಡಬೇಡ ಎಂದು ಭೀಮ ಕೋಗಿಕೊಂಡ.

(ಪದ್ಯ -೫೨)

ಪದ್ಯ :-:೫೩[ಸಂಪಾದಿಸಿ]

ಬಿಡದೆ ಕಳವಿಂದೆ ಲೋಗರ ಮನೆಗಳಂ ಪೊಕ್ಕು | ತುಡುತಿಂದವನ ಭೋಜನಕ್ಕೆ ಮೃಷ್ಟಾನ್ನಮಾ | ದೊಡೆ ಕೆಲಬಲಂಗಳಂ ನೋಡುವನೆ ಗೋವಳಂಗರಸುತನಮಾದ ಬಳಿಕ ||
ಪೊಡೆವಿಯಂ ಕಂಡು ನಡೆವನೆ ಮುಳಿದು ಮಾವನಂ | ಬಡಿದವಂ ನೆಂಟರನರಿವನೆ ಮೊಲೆಗೊಟ್ಟಳಸು | ಗುಡಿದವಂ ಪುರುಷಾರ್ಥಿಯಾದಪನೆ ನಾವಜ್ಞರೆಂದು ಮಾರುತಿ ಜರೆದನು ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ಬಿಡದೆ ಕಳವಿಂದೆ ಲೋಗರ ಮನೆಗಳಂ ಪೊಕ್ಕು ತುಡುತಿಂದವನ ಭೋಜನಕ್ಕೆ ಮೃಷ್ಟಾನ್ನಮ್ ಆದೊಡೆ=[ಒಂದೂ ಬಿಡದೆ ಜನರ ಮನೆ ಹೊಕ್ಕು ಕದ್ದು ತುಡುವು(ಬಾಯಿಚಪಲಕ್ಕೆ ತನ್ನುವುದು) ತಿಂದವನ ಭೋಜನಕ್ಕೆ ಮೃಷ್ಟಾನ್ನವೇ ಸಿಕ್ಕದರೆ,] ಕೆಲಬಲಂಗಳಂ ನೋಡುವನೆ, ಗೋವಳಂಗೆ ಅರಸುತನಮಾದ ಬಳಿಕ ಪೊಡೆವಿಯಂ ಕಂಡು ನಡೆವನೆ=[ಆಕರೆ ಈಕಡೆ ಇರುವವರ ಗಮನ ಇರುವುದೇ? ದನಕಾಯುತ್ತಿದ್ದವನಿಗೆ ಅರಸುತನ ಬಂದ ಬಳಿಕ ಭೂಮಿಯನ್ನು ನೋಡಿ ನಡೆಯುವನೆ?ತಲೆಎತ್ತಿ, ದೃಷ್ಟಿ ಮೇಲೆ ಆಕಾಶದಕಡೆ ಇರುವುದು]; ಮುಳಿದು ಮಾವನಂ ಬಡಿದವಂ ನೆಂಟರನು ಅರಿವನೆ ಮೊಲೆಗೊಟ್ಟಳ ಅಸುಗುಡಿದವಂ ಪುರುಷಾರ್ಥಿಯಾದಪನೆ=[ಸಿಟ್ಟಿನಿಂದ ಮಾವನನ್ನು ಬಡಿದು ಕೊಂದವನು ನೆಂಟರನ್ನು ಆದರಿಸುವುದನ್ನು ಅರಿವನೆ? ಮಗುವಾಗಿದ್ದಾಗ ಎದೆಹಾಲುಣಿಸಿದವಳ ಪ್ರಾಣವನ್ನೇ ಕುಡಿದ(ತೆಗೆದ) ಇವನು ಪುರುಷಾರ್ಥದ ಕೆಲಸಮಾಡುವನೆ? ಎಂದು ಕೃಷ್ಣನಿಗೆ ಕೇಳುವಂತೆ ದಾಸಿಗೆ ಹೇಳಿದ]; ನಾವು ಅಜ್ಞರೆಂದು ಮಾರುತಿ ಜರೆದನು=[ನಾವು ತಿಳಿದವರಲ್ಲ ಎಂದು ಭೀಮನು ಕೃಷ್ನನ್ನು ಅವನ ಕೀಟಲೆಗೆ ಉತ್ತರಿಸಿ ಛೇಡಿಸಿದನು.]
 • ತಾತ್ಪರ್ಯ:*ಒಂದೂ ಬಿಡದೆ ಜನರ ಮನೆ ಹೊಕ್ಕು ಕದ್ದು ತುಡುವು(ಬಾಯಿಚಪಲಕ್ಕೆ ತನ್ನುವುದು) ತಿಂದವನ ಭೋಜನಕ್ಕೆ ಮೃಷ್ಟಾನ್ನವೇ ಸಿಕ್ಕದರೆ, ಆಕಡೆ ಈಕಡೆ ಇರುವವರ ಗಮನ ಇರುವುದೇ? ದನಕಾಯುತ್ತಿದ್ದವನಿಗೆ ಅರಸುತನ ಬಂದ ಬಳಿಕ ಭೂಮಿಯನ್ನು ನೋಡಿ ನಡೆಯುವನೆ? ತಲೆಎತ್ತಿ, ದೃಷ್ಟಿ ಮೇಲೆ ಆಕಾಶದಕಡೆ ಇರುವುದು; ಸಿಟ್ಟಿನಿಂದ ಮಾವನನ್ನು ಬಡಿದು ಕೊಂದವನು ನೆಂಟರನ್ನು ಆದರಿಸುವುದನ್ನು ಅರಿಯುವನೆ? ಮಗುವಾಗಿದ್ದಾಗ ಎದೆಹಾಲುಣಿಸಿದವಳ ಪ್ರಾಣವನ್ನೇ ಕುಡಿದ(ತೆಗೆದ) ಇವನು ಪುರುಷಾರ್ಥದ ಕೆಲಸ ಮಾಡುವನೆ?(ಅತಿಥಿಗಳನ್ನು ಆದರಿಸುವುದು ಪುರುಷಾರ್ಥವಾದ ಧರ್ಮದ ಕಾರ್ಯ) ಎಂದು ಕೃಷ್ಣನಿಗೆ ಕೇಳುವಂತೆ ದಾಸಿಗೆ ಹೇಳಿದ; ಕೊನೆಗೆ, ನಾವು ತಿಳಿದವರಲ್ಲ ಮೂಢರು,ಎಂದು ಭೀಮನು ಕೃಷ್ನನ್ನು ಅವನ ಕೀಟಲೆಗೆ ಉತ್ತರಿಸಿ ಛೇಡಿಸಿದನು.

(ಪದ್ಯ -೫೩)

ಪದ್ಯ :-:೫೪[ಸಂಪಾದಿಸಿ]

ದೇವತನಮಂ ಬಿಟ್ಟು ನರನಾದವಂಗೆ ಬಳಿ | ಕಾವ ಗೌರವಮಿಹುದಿವಂ ನಾಚುವನೆ ಸಾಕು | ನಾವೀತನಂ ಕಾಣ್ಬುದುಚಿತಮಲ್ಲೆಂದು ಭೀಮಂ ವಿಭಾಡಿಸಲಿತ್ತಲು ||
ಶ್ರೀವರಂ ನಸುನಗೆಯೊಳಾಗಳರಿದಂದದಿಂ | ದಾವಾಗ ಬಂದನನಿಲಜನಿತ್ತ ಕರೆ, ತಡೆದ | ಳಾವಳೇತಕೆ ಕೋಪಮನೆ ಮತ್ತೆ ಪವನಸುತನೊಳವುಗುತ್ತಿಂತೆಂದನು ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ದೇವತನಮಂ ಬಿಟ್ಟು ನರನಾದವಂಗೆ ಬಳಿಕಾವ ಗೌರವಂ ಇಹುದು, ಇವಂ ನಾಚುವನೆ=[ದೇವತನವನ್ನು ಬಿಟ್ಟು ಮನುಷ್ಯನಾದ ಬಳಿಕ ಯಾವ ಗೌರವ ನಡತೆ ಇರುತ್ತದೆ, ಮೇಲಿಂದ ಕೇಳಗೆ ಬಂದ,ಇವನು ನಾಚುಗೆ ಪಡುವುದಿಲ್ಲ]; ಸಾಕು ನಾವು ಈತನಂ ಕಾಣ್ಬುದು ಉಚಿತಮಲ್ಲ ಎಂದು ಭೀಮಂ ವಿಭಾಡಿಸಲಿತ್ತಲು=[ಸಾಕು ನಾವು ಈತನನ್ನು ಕಾಣುವಿದು ಉಚಿತವಲ್ಲ ಎಂದು ಭೀಮನು ನಿಂದಿಸಲು,ಈ ಕಡೆ];ಶ್ರೀವರಂ ನಸುನಗೆಯೊಳು ಆಗಳು ಅರಿದಂದದಿಂದ ಆವಾಗ ಬಂದನು ಅನಿಲಜನು ಇತ್ತ ಕರೆ=[ಕೃಷ್ಣನು ನಸುನಗೆಯಿಂದ ಆಗ ತಾನೇ ಅವನ ಬರುವನ್ನು ತಿಳಿದಂತೆ, ಭೀಮ ಯಾವಾಗ ಬಂದ? ಅವನನ್ನು ಈ ಕಡೆ ಕರೆ =[], ತಡೆದಳು ಆವಳು ಏತಕೆ ಕೋಪಂ ಎನೆ ಮತ್ತೆ ಪವನಸುತನು ಒಳವುಗುತ್ತ ಇಂತೆಂದನು=[ ಯಾವಳು ಅವನನ್ನು ತಡೆದಳು?, ಏತಕ್ಕೆ ಕೋಪ? ಎನ್ನಲು, ಮತ್ತೆ ಭೀಮನು ಒಳಹೋಗುತ್ತಾ ಹೀಗೆ ಹೇಲಿದನು.]
 • ತಾತ್ಪರ್ಯ:*ದೇವತನವನ್ನು ಬಿಟ್ಟು ಮನುಷ್ಯನಾದ ಬಳಿಕ ಯಾವ ಗೌರವ ನಡತೆ ಇರುತ್ತದೆ, ಮೇಲಿಂದ ಕೇಳಗೆ ಬಂದ,ಇವನು ನಾಚುಗೆ ಪಡುವುದಿಲ್ಲ; ಸಾಕು ನಾವು ಈತನನ್ನು ಕಾಣುವಿದು ಉಚಿತವಲ್ಲ ಎಂದು ಭೀಮನು ನಿಂದಿಸಲು, ಈ ಕಡೆ ಕೃಷ್ಣನು ನಸುನಗೆಯಿಂದ ಆಗ ತಾನೇ ಅವನ ಬರುವನ್ನು ತಿಳಿದಂತೆ, ಭೀಮ ಯಾವಾಗ ಬಂದ? ಅವನನ್ನು ಈ ಕಡೆ ಕರೆ, ಯಾವಳು ಅವನನ್ನು ತಡೆದಳು? ಏತಕ್ಕೆ ಕೋಪ? ಎನ್ನಲು, ಮತ್ತೆ ಭೀಮನು ಒಳಹೋಗುತ್ತಾ ಹೀಗೆ ಹೇಳಿದನು.]

(ಪದ್ಯ -೫೪)

ಪದ್ಯ :-:೫೫[ಸಂಪಾದಿಸಿ]

ದೇವ ನಿಮ್ಮರ್ಜುನನ ಸಲುಗೆ ನಮಗುಂಟೆ ಸಂ | ಭಾವಿಸುವರಿಲ್ಲೆಮ್ಮನಿಲ್ಲಿ ನಿಲಿಸಿದರೆನಲ್ | ನಾವು ತಡೆಸಿದೆವಿತ್ತ ಬಾಯೆನುತೆ ಸೆರಗುವಿಡಿದೊಡನೆ ಕುಳ್ಳಿರಿಸಿಕೊಂಡು ||
ಆ ವಿವಿಧ ಭೋಜ್ಯದಿಂದಾರೋಗಿಸಿದ ಬಳಿಕ | ತೀವಿದ ಸುಗಂಧ ಕರ್ಪೂರ ತಾಂಬೂಲ ಪು | ಷ್ಟಾವಳಿಗಳಿಂದೆ ಸತ್ಕರಿಸಿದಂ ಭೀಮನಂ ಸುರಪುರದ ಲಕ್ಷ್ಮೀಶನು ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
 • ದೇವ ನಿಮ್ಮ ಅರ್ಜುನನ ಸಲುಗೆ ನಮಗೆ ಉಂಟೆ ಸಂಭಾವಿಸುವರು ಇಲ್ಲ ಎಮ್ಮನು ಇಲ್ಲಿ ನಿಲಿಸಿದರು ಎನಲ್=[ದೇವ ನಿಮ್ಮ ಗೆಳೆಯ ಅರ್ಜುನನ ಸಲುಗೆ ನಮಗೆ ನಿಮ್ಮಲ್ಲಿ ಇಲ್ಲ. ಇಲ್ಲಿ ನಮ್ಮನ್ನು ಗೌರವಿಸುವರು ಇಲ್ಲ; ಬಾಗಿಲ್ಲಿ ತಡೆದು ನಿಲ್ಲಿಸಿದರು ಎನ್ನಲು,] ನಾವು ತಡೆಸಿದೆವು ಇತ್ತ ಬಾ ಯೆನುತೆ ಸೆರಗುವಿಡಿದು ಒಡನೆ ಕುಳ್ಳಿರಿಸಿಕೊಂಡು=['ನಾನೇ ಪರಿಹಾಸ್ಯಕ್ಕಾಗಿ ತಡೆಸಿದೆ, ಬೇಸರಪಡಬೇಡ ಇತ್ತ ಬಾ', ಎನ್ನುತ್ತಾ, ಭೀಮನ ಹೊದೆದ ಶಾಲಿನ ಸೆರಗನ್ನು ಹಿಡಿದು ಎಳೆದುಕೊಂಡು ಪಕ್ಕದಲ್ಲಿ ಕುಳ್ಳಿರಿಸಿಕೊಂಡು,] ಆ ವಿವಿಧ ಭೋಜ್ಯದಿಂದ ಆರೋಗಿಸಿದ ಬಳಿಕ ತೀವಿದ ಸುಗಂಧ ಕರ್ಪೂರ ತಾಂಬೂಲ ಪುಷ್ಟಾವಳಿಗಳಿಂದೆ ಸತ್ಕರಿಸಿದಂ ಭೀಮನಂ ಸುರಪುರದ ಲಕ್ಷ್ಮೀಶನು=[ ಕೃಷ್ಣನು, ಆಗಲೇ ತಯಾರಿದ್ದ ವಿವಿಧ ಭೋಜ್ಯಗಳಿಂದ ಊಟಮಾಡಿಸಿದ ಬಳಿಕ, ಹೆಚ್ಚಿನ ಸುಗಂಧ ಕರ್ಪೂರ ತಾಂಬೂಲ ಪುಷ್ಟಗಳಿಂದ ಭೀಮನನ್ನು ಸತ್ಕರಿಸಿದನು.(ಸುರಪುರದ ಲಕ್ಷ್ಮೀಶನು)].
 • ತಾತ್ಪರ್ಯ:*'ದೇವ ನಿಮ್ಮ ಗೆಳೆಯ ಅರ್ಜುನನ ಸಲುಗೆ ನಮಗೆ ನಿಮ್ಮಲ್ಲಿ ಇಲ್ಲ. ಇಲ್ಲಿ ನಮ್ಮನ್ನು ಗೌರವಿಸುವರು ಇಲ್ಲ; ಬಾಗಿಲ್ಲಿ ತಡೆದು ನಿಲ್ಲಿಸಿದರು' ಎನ್ನಲು, 'ನಾನೇ ಪರಿಹಾಸ್ಯಕ್ಕಾಗಿ ತಡೆಸಿದೆ, ಬೇಸರಪಡಬೇಡ ಇತ್ತ ಬಾ', ಎನ್ನುತ್ತಾ, ಭೀಮನು ಹೊದೆದ ಶಾಲಿನ ಸೆರಗನ್ನು ಹಿಡಿದು ಎಳೆದುಕೊಂಡು ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಕೃಷ್ಣನು, ಆಗಲೇ ತಯಾರಿದ್ದ ವಿವಿಧ ಭೋಜ್ಯಗಳಿಂದ ಭೀಮನನ್ನು ಊಟಮಾಡಿಸಿದ ಬಳಿಕ, ಹೆಚ್ಚಿನ ಸುಗಂಧ ಕರ್ಪೂರ ತಾಂಬೂಲ ಪುಷ್ಟಗಳಿಂದ ಭೀಮನನ್ನು ಸತ್ಕರಿಸಿದನು.(ಇವನು ಸುರಪುರದ ಲಕ್ಷ್ಮೀಶನು)].

(ಪದ್ಯ -೫೫)XXIX

♥♥♥ ॐ ♥♥♥
 • ಸಂಧಿ ಆರಕ್ಕೆ ಒಟ್ಟು ಪದ್ಯ:೩೨೧;

ನೋಡಿ[ಸಂಪಾದಿಸಿ]

-ಸಂಧಿಗಳು[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


 1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
 2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.