ಪ್ರಿಯತಮೆಗೆ

ವಿಕಿಸೋರ್ಸ್ ಇಂದ
Jump to navigation Jump to search

ಸೀಲಿಯಾಳಿಗೆ[ಸಂಪಾದಿಸಿ]

 • ಮಧುವನೀಂಟೆಲೆ ಸಖಿಯೆ
 • (ನನಗಾಗಿ) ನಯನಗಳಲೇ,
 • ಮುದದೆ ನಾ ಸ್ಪರ್ಧಿಸುವೆ
 • ನನ್ನ ಕ್ಷಿಗಳಲೇ ;
 • ಮತ್ತೆ ನಿನ್ನಧರ ಮಧುವನು
 • ನೀ ನೀಡಲೆನಗೆ
 • ಅದನುಳಿದು ಮದಿರೆಯನು
 • ನಾ ನೋಡೆನೆಲಗೆ;
 • ಹೃ ದಯದಲುದಿಸಿದೀ(ಈ)
 • ದಾಹ ವೆಲೆ ಚಲುವೆ,
 • ಬಯಸುತಿದೆ ತಾ ಸ್ವರ್ಗಸೀಮೆಯ
 • ಮಧುವ ಸಖಿಯೇ,
 • ಸವಿದಿರಲಿ ಸೋಮವನು (ಅಮೃತ)
 • ಈ ಮುನ್ನ ರನ್ನೆ ,
 • ಸೇವಿಸೆನದನು ನಿನ್ನುಳಿದು
 • ನಾನಿನ್ನು ಚನ್ನೆ .
 • -
 • ಕಳುಹಿದೆನು ರೋಜ ಗುಚ್ಛವನೊಂದ
 • ನಾ ನಿನ್ನ ಬಳಿಗೆ,
 • ತಿಳಿದಿರುವೆ ದೋಷವನು ಅಲ್ಲವೆಂದದು
 • ತ ಕ್ಕ ಸನ್ಮಾನ ನಿನಗೆ
 • ಎನ್ನೊಲವು ನಿನ್ನ ಬಳಿ ಬಾಡದಿರಲೆಂಬಾಸೆ
 • ಯಿಂದ ಸದಯೆ,
 • ಕಳುಹಿದೆನು ಎನ್ನ ಪ್ರೇಮದ ಗುಚ್ಛ
 • ಬೆಳೆಯಲೆಂದಲ್ಲಿ ಸಖಿಯೆ,
 • ಆದರದಿ ಅದನೊಮ್ಮೆ ನೀನಾಘ್ರಾಣಿಸಿ
 • ಕಳುಹಿರಲೆನಗೆ ಮುಗುದೆ
 • ಅಂದಿನಿಂದದು ಬೆಳೆಯುವುದು
 • ಬೀರುವುದು ಗಂಧವನೆನ್ನಹೃದಯೇ
 • ಆ ಪರಿಮಳವು ಅಲ್ಲವದರದು ನುಡಿವೆ
 • -ನೆನ್ನಾಣೆ ಸದಯೇ,
 • ಸತ್ಯವಿದು ; ಅಂದಿನಿಂದದು ನಿಜದೆ
 • ನಿನ್ನದೇ ಪ್ರಾಣ ಪ್ರಿಯಳೇ!
-ಟಿಪ್ಪಣಿ: ಅದನುಳಿದು ; ಅದನು + ಉಳಿದು (ಬಿಟ್ಟು)

ಮೂಲ[ಸಂಪಾದಿಸಿ]

TO CELIA
 • Drink to me only with thine eyes,
 • And I will pledge with mine;
 • Or leave a kiss but in the cup
 • And I ‘ll not look for wine.
 • The thirst that from the soul doth rise
 • Doth ask a drink divine;
 • But might I of Jove’s necter sup,
 • I would not change for thine.
 • I sent thee late a rosy wreath,
 • Not so much honouring thee
 • As giving it a hope that there
 • It could not wither’d be ;
 • But thou thereon didst only breathe
 • And sent’st it back to me;
 • Since when it grows, and smells; I sware,
 • Not of itself but thee!
 • B. Jonson
 • (A 17th c. poet )

[೨]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ|ಜೀವನ ಚರಿತ್ರೆ|ಸ್ತೋತ್ರಗಳು


ಉಲ್ಲೇಖ[ಸಂಪಾದಿಸಿ]

 1. (Golden Treasury 1874 Edition, poem 140(xc) pg 75)(Edited by FRANCIS TURNER PALGRAVE)೧೭ ನೇ ಶತಮಾನದ ಕವಿ ಬಿ..ಜಾನ್ಸನ್ ತನ್ನ ಪ್ರಿ ಯತಮೆ ಸೀಲಿಯಾಳಿಗೆ ಬರೆದ ಕವನ; ಭಾವಾನುವಾದ;ಬಿ. ಎಸ್ . ಚಂದ್ರಶೇಖರ)
 2. [Golden Treasury 1874 Edition, poem 140(xc) pg 75); (Edited by FRANCIS TURNER PALGRAVE) Bschandrasgr]