ಕರುಣಾಳು ಬಾ ಬೆಳಕೆ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕರುಣಾಳು ಬಾ ಬೆಳಕೆ[ಸಂಪಾದಿಸಿ]

  • ಕಾರ್ಡಿನಲ್ ನ್ಯೂಮನ್‍ರವರು (1801-90) ಗೊಂದಲ ಮತ್ತು ಮಾನಸಿಕ ಯಾತನೆ, ಮತ್ತು ದೈಹಿಕ ನೋವಿನ ಒತ್ತಡದಲ್ಲಿದ್ದಾಗ ಅವರು ಬರೆದ "ಲೀಡ್,ಕೈಂಡ್ಲೀ ಲೈಟ್" ("Lead, Kindly Light") ಎಂಬ ಈ ಕವಿತೆಯು ಸಾವಿರಾರು ಜನರಿಗೆ ಕತ್ತಲೆಯಲ್ಲಿ ಒಂದು ನಕ್ಷತ್ರವಾಗಿದೆ. ಇದು ಅಧ್ಯಕ್ಷ ಮೆಕಿನ್ಲೆ ಅವರ ನೆಚ್ಚಿನ ಕವಿತೆ. ಬಿ.ಎಂ.ಶ್ರೀ. ಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದು ಮೂಲಕ್ಕಿಂತ ಉತ್ತಮವಾಗಿ ಬಂದಿದೆ. ಅದರಲ್ಲಿ ಸ್ವಲ್ಪ ಅರ್ಥಬದಲಾವಣೆ ಮಾಡಿ ಬೆಳಕನ್ನು ತೋರು ಬದಲಿಗೆ ದೇವರೂಪನಾದ ಬೆಳಕೇ ನನಗೆ ದಾರಿತೋರು ಎಂದು ಭಾರತದ ವೇದಾಂತಕ್ಕೆ ಹತ್ತಿರವಾಗುವಂತೆ ಅರ್ಥ ಮಾಡಿರುವುದು ವಿಶೇಷ, ಅದು ಮೂಲಕ್ಕೂ ಭಂಗತರದಂತೆ ಹೆಚ್ಚಿನ ವಿಶಾಲ ಅರ್ಥಮೊಡುವುದು.
ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು|| ಪ ||

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳೆನೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು|| 1 ||

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?|| 2 ||

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ(ನಗುವ)|| 3 ||
            ♣♣♣

ಇಂಗ್ಲಿಷ್ ಮೂಲ[ಸಂಪಾದಿಸಿ]

  • ಮೂಲ:Lead, Kindly Light
  • Poems That Every Child Should Know/-Oneof them:'Lead, Kindly Light';
  • "Lead, Kindly Light," by John Henry Newman (1801-90), was written when Cardinal Newman was in the stress and strain of perplexity and mental distress and bodily pain. The poem has been a star in the darkness to thousands. It was the favourite poem of President McKinley.
John Henry Newman by Sir John Everett Millais, 1st Bt

      Lead, Kindly Light.
Lead, kindly Light, amid th' encircling gloom,
⁠Lead Thou me on;
The night is dark, and I am far from home,
⁠Lead Thou me on.
Keep Thou my feet; I do not ask to see
The distant scene; one step enough for me.

I was not ever thus, nor prayed that Thou
⁠Shouldst lead me on;
I loved to choose and see my path; but now
⁠Lead Thou me on.
I loved the garish day; and, spite of fears,
Pride ruled my will: remember not past years.

So long Thy power hath blest me, sure it still
⁠Will lead me on
O'er moor and fen, o'er crag and torrent, till
⁠The night is gone,
And with the morn those angel faces smile,
Which I have loved long since, and lost a while

[೨]

  • By- John Henry Newman.
  • Text is available under the Creative Commons.

ನೋಡಿ[ಸಂಪಾದಿಸಿ]

ಪೂರಕ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕನ್ನಡ ನುಡಿ
  2. A Service of EWTN;The desk of John Henry Newman at Birmingham Oratory (Mazur/cbcew.org.uk