ಕೈಲಾಸಂ ಚುಟುಕಗಳು
ಗೋಚರ
- ಕೈಲಾಸಂರವರ ಪದ್ಯದ/ ಚುಟುಕದ ತುಣುಕೊಂದು ಹೀಗಿದೆ.
ಕಲ್ಲೇ- ಇದ್ದಿಲು
[ಸಂಪಾದಿಸಿ]- "ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ
- ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ
- ಕಲ್ಲಲ್ಲದೊಂದಿಲ್ಲ ! ಬಲ್ಲೆ--
- ಕಲ್ಲೇ ಇದ್ದಿಲೆಂದನಲ್ಪಜ್ಞ ".
- --*--*
- ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ,
ಕಣ್ಣಹನಿ ಸನ್ಮಾನ
[ಸಂಪಾದಿಸಿ]- "ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ?
- ಕವಿ ಬಯಸನಿಂಥದೇ ಪ್ರತಿಫಲವೆ ಬೇಕು !
- ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು
- ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು" !.
- (ಕಣ್ಣ ಹನಿಯಿತ್ತರೆ+ ಎನಗೆ+ ಅದು ಅನಿತೆ ಸಾಕು")
- (ಕಣ್ಣ ಹನಿ = ಆನಂದ ಭಾಷ್ಪ)
ಹಾಸ್ಯದ ಹರಿಗೋಲು
[ಸಂಪಾದಿಸಿ]- ಕಿರಿ ಆಳದ ತಿಳಿನೀರಿನ ಮೇಲೆ,
- ತೇಲುತ ತಿರುಗುತ ಬಹುವೇಳೆ,
- ಕಣ್ಣೀರಿನ ಕಡಲಿನ ಪಾಲು,
- ತಿಳಿ ಹಾಸ್ಯದ ಹರಿಗೋಲು!
- (ಹರಿಗೋಲು = ದೋಣಿ)
- (ಎಲ್ಲವೂ ೧೯೪೦ ಕ್ಕೂ ಹಿಂದಿನ ಪ್ರಕಟಣೆಗಳು )
ಕಭಿನೈ ಹಟಿಯಾ
[ಸಂಪಾದಿಸಿ]- “ಕಸರತ್ ಘಟಿಯಾ
- ಕಭಿನೈ ಹಟಿಯಾ!
- ಅಭಿತಕ್ ಪಹಿಲ್ವಾನ್
- ಕಭಿನೈ ಹಟಿಯಾ!”…
ನೋಡಿ
[ಸಂಪಾದಿಸಿ]ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
[ಸಂಪಾದಿಸಿ]- ↑ ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು;ಪದ್ಮಾ ಶ್ರೀರಾಮd: 18 ಸೆಪ್ಟೆಂಬರ್ 2016,
- ↑ ಟಿ.ಪಿ.ಕೈಲಾಸಂ
- ↑ ಕೈಲಾಸಂ ರವರ 'ಪೋಲಿಕಿಟ್ಟಿ' ನಾಟಕದಲ್ಲಿ ಕಿಟ್ಟಿಯ ಘೋಷಣೆ