ಮಂತ್ರಪುಷ್ಪ

ವಿಕಿಸೋರ್ಸ್ದಿಂದ

ಪೀಠಿಕೆ[ಸಂಪಾದಿಸಿ]

ಮಂತ್ರ ಪುಷ್ಪಂ ಎಂಬುದು ವೈದಿಕ ಸ್ತೋತ್ರವಾಗಿದ್ದು, ಪೂಜೆಗಳ ಕೊನೆಯಲ್ಲಿ ಹಿಂದೂ ದೇವತೆಗಳಿಗೆ ಹೂವುಗಳನ್ನು ಅರ್ಪಿಸುವ ಸಮಯದಲ್ಲಿ ಹಾಡಲಾಗುತ್ತದೆ. ಮಂತ್ರವನ್ನು ವೈದಿಕ ಪಠಣಗಳ ಸುಂದರ ಹೂ ಎಂದು ಪರಿಗಣಿಸಲಾಗುತ್ತದೆ.
  • ಈ ಮಂತ್ರವನ್ನು ಯಜುರ್ ವೇದದ ತೈತ್ತರಿಯಾ ಅರಣ್ಯಕದಿಂದ ತೆಗೆದುಕೊಳ್ಳಲಾಗಿದೆ (ಕೃಷ್ಣ ಯಜುರ್ವೇದದ ತೈಟ್ಟಿರಿಯಾ ಅರಣ್ಯಕ ಭಾಗದ ಅಡಿಯಲ್ಲಿ ಬರುತ್ತದೆ). ಇದು ನೀರು, ಬೆಂಕಿ, ಗಾಳಿ, ಸೂರ್ಯ, ಚಂದ್ರ, ನಕ್ಷತ್ರಗಳು, ಮೋಡಗಳು ಮತ್ತು ಸಮಯದ ರಹಸ್ಯ ಜ್ಞಾನದಿಂದ ನೀಡಲಾಗುವ ಅನಿಯಮಿತ ಪ್ರಯೋಜನಗಳ ಬಗ್ಗೆ ಹೇಳುತ್ತದೆ. ಯಾವುದೇ ಪೂಜೆ (ಪೂಜೆ) ಅಥವಾ ಯಜ್ಞವನ್ನು ಮಾಡಿದ ನಂತರ ಇದನ್ನು ಸಾಮಾನ್ಯವಾಗಿ ಎಲ್ಲಾ ಪೂಜಾರಿಗಳು (ಪುರೋಹಿತರು) ಒಟ್ಟಾಗಿ ಯಜ್ಞ ಮಾಡಿಸಿದ ಯಜಮಾನನಿಗೆ ಆಶಿರ್ವಾದ ಪುರ್ವಕ ಹಾಡುತ್ತಾರೆ. ವಾಚ್ಯಾರ್ಥದಲ್ಲಿ ನೀರು ಈ ಬ್ರಹ್ಮಾಂಡದ ಆಧಾರವಾಗಿದೆ ಎಂದು ಅದು ಸಂಕ್ಷಿಪ್ತವಾಗಿ ಹೇಳುತ್ತದೆ.

ಮಂತ್ರಪುಷ್ಪಮ್[ಸಂಪಾದಿಸಿ]

  • (ಅಂತರಾರ್ಥ)

[ಸಂಪಾದಿಸಿ]

|| ಯೋs ಪಾಂ ಪುಷ್ಪಂ ವೇದ ||ಯಃ ಆಪಾಂ, ಪುಷ್ಪಂ ವೇದ,
  • ಅರ್ಥ:ಆಪಃ -> ನೀರು -> ಅಮೃತತ್ವ/ಸತ್/ಬ್ರಹ್ಮನ್, ಪುಷ್ಪಂ -> ಹೂ -> ಆನಂದ (ಹೂವು ಆನಂದವನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ), ಯೋ = ಯಾರು ವೇದ = ತಿಳಿದುಕೊಂಡಿದ್ದಾರೋ / ಅರಿತಿರುವರೋ - ಅಮೃತತ್ವದಲ್ಲಿರುವ ಆನಂದವನ್ನು ಯಾರು ತಿಳಿದು ಕೊಂಡಿದ್ದಾರೋ
  • ಟಿಪ್ಪಣಿ:ಇದು- ಈ ಮಂತ್ರವು ವೇದಾಂತ ತತ್ತ್ವಕ್ಕೆ ಹೊಂದಿಸಿ ಹೇಳಿದ ಭಾವಗೀತೆಯಂತಿದೆ.:-(ಸಂಕೇತ:(ಪುಷ್ಪವು 'ಆನಂದ' ಕ್ಕೆ ಪ್ರತಿಮೆ- ರೂಪಕ)- ಯಾರು ಆಪವನ್ನು ನೀರನ್ನು ಬ್ರಹ್ಮ , ಆನಂದ ಎಂದು ತಿಳಿಯುವರೋ( ಅವರು ಎಲ್ಲವನ್ನೂ ಪಡೆಯುತ್ತಾರೆ.)

(ಉದಾ:ಒಂದು ಮಂತ್ರ: ಓಂ ಆಪೋವಾ ಇದಗ್ಂ ಸರ್ವಂ | ವಿಶ್ವಾ ಭೂತಾನ್ಯಾಪಃ ಪ್ರಾಣಾವ ಆಪಃ| ಪಶವ ಆಪೋSನ್ನಮಾಪೋSಮೃತಮಾಪಃ|ಸಮ್ರಾಡಾಪೋ ವಿರಾಡಾಪಃ| ಸ್ವರಾಡಾಪಃ| ಶ್ಚಂದಾಗುಸ್ಯಾಪೋ ಜ್ಯೋತಿಗುಸ್ಯಾಪೋ ಯಜೂಗುಸ್ಯಾಪಃ| ಸತ್ಯಮಾಪಃ| ಸರ್ವಾ ದೇವತಾ ಆಪೋ ಭೂರ್ಭುವಸ್ಸುವರಾಪ ಓಂ || ಆನಂದಂ ಬ್ರಹ್ಮೇತಿ ವ್ಯಜನಾತ್|| ಆಪವು- ನೀರು ಇಲ್ಲಿರುವ ಸರ್ವವೂ ಆಗಿದೆ| ವಿಶ್ವದ ಪಂಚಭೂತಗಳೂ ಆಗಿದೆ; ಪ್ರಣವ - ಓಕಾರವೂ 'ಆಪ'ವಾಗಿದೆ, ಪಶುಗಳು, ಅನ್ನ, ಅಮೃತ, ಸಮ್ರಾಟ್, ವಿರಾಟ್, ಸ್ವರಾಟ್, ಛಂದಸ್ಸು. ಜ್ಯೋತಿ, ಯಜುಸ್- ಯಜ್ಞ, ಸತ್ಯ,ಸರ್ವದೇವತೆಗಳೂ, ಭೂಃ, ಭುವಃ, ಸುವಃ, ಖೊಡಾ ಆಪವು ಜಲತತ್ತ್ವವು.)

|| ಪುಷ್ಪವಾನ್ ಪ್ರಜವಾನ್ ಭವತಿ ಪಶುಮಾನ್ ಭವತಿ ||
  • ಅಂತವರು, ಪುಷ್ಪವಾನ್ = ಆನಂದವನ್ನು ಪಡೆಯುವನು; ಭೌತಿಕವಾಗಿ ಪ್ರಜವಾನ್ ಭವತಿ = ಮಕ್ಕಳನ್ನು, ಪಶುಗಳನ್ನೂ ಪಡೆಯುವನು = (ಆಧ್ಯಾತ್ಮಿಕ ಸಂಪತ್ತನ್ನು ಪಡೆಯುತ್ತಾನೆ.

(ಆ ಪರಬ್ರಹ್ಮವು ಆನಂದದ ರೂಪ; ಹೂವನ್ನು ಉಳ್ಳವನು- ಆನಂದದಿಂದ ಅರಳಿದವನು. ಹಾಗೆಂದು ತಿಳಿಯಬೇಕು. ಈ ರೀತಿಯಾಗಿ ಯಾರು ತಿಳಿದುಕೊಳ್ಳುತ್ತಾರೋ ಅವರು ಎಲ್ಲವನ್ನೂ ಪಡೆಯುತ್ತಾರೆ/ ಅಥವಾ ಅವನನ್ನು ಪರಬ್ರಹ್ಮನನ್ನು ಪಡೆಯುತ್ತಾನೆ)

  • ತಾತ್ಪರ್ಯ:-ಯಾರು ಜಲವನ್ನು ಪುಷ್ಪ- ಆನಂದ ಎಂದು ತಿಳಿಯುತ್ತಾನೋ ಅವನು ಆನಂದವನ್ನು ಪಡೆಯುತ್ತಾನೆ; ಮಕ್ಕಳನ್ನು ಪಡೆಯುತ್ತಾನೆ; ಪಶುಮಾನ್ ಭವತಿ/ಪಶುವಾನ್ ಭವತಿ?-> ಪಶುಸಂಪತ್ತನ್ನು ಪಡೆಯುತ್ತಾನೆ.
  • ಟಿಪ್ಪಣಿ:(ಆ ಪರಬ್ರಹ್ಮವು ಆನಂದವು ಸ್ವರೂಪವು. ಆನಂದಕ್ಕೆ ಹೂವು ಪ್ರತಿಮೆ- ಅಥವಾ ಪ್ರತೀಕವಾಗಿ ಉಪಯೋಗಿಸಲ್ಪಟ್ಟಿದೆ. ಹಾಗೆಂದು ತಿಳಿಯಬೇಕು. ಪುಷ್ಪವನ್ನು ತಿಳಿದವನು 'ಎಲ್ಲವನ್ನೂ ಪೆಡೆಯುತ್ತಾನೆ' ಎಂದು ಶಬ್ದಾರ್ಥ ಮಾಡಿದರೆ - ಅದಕ್ಕೆ ಅರ್ಥವಿಲ್ಲ. ಇದು ವೇದ ಮಂತ್ರವಾದ್ದರಿಂದ ಕೇವಲ ಜ್ಞಾನವನ್ನು ಹೇಳದೆ. ಇಹ ಮತ್ತು ಪರ ಎರಡನ್ನೂ ಸಾದಿಸುವುದೆಂದು ಹೇಳಿದೆ. ವೇದಮಂತ್ರಗಳು - ಇಹ ಮತ್ತು ಪರ ಸುಖವನ್ನು ಸಾಧಿಸುವ ಮಾರ್ಗವನ್ನು ಹೇಳುತ್ತವೆ.

[ಸಂಪಾದಿಸಿ]

|| ಚಂದ್ರಮಾ ವಾ ಅಪಾಂ ಪುಷ್ಪಂ ||

(ಚಂದ್ರ -> ಭಗವಂತನ ಸಂಕಲ್ಪ -cosmic mind) ಆ ಅಮೃತತ್ವದಿಂದ ಭಗವಂತನ ಸಂಕಲ್ಪವು (ಚಂದ್ರ) ಹುಟ್ಟಿದೆ/ಅರಳಿದೆ) ಎಂದು ಯಾರು ತಿಳಿಯುತ್ತಾರೋ ಅಂತವರು

|| ಪುಷ್ಪವಾನ್ ಪ್ರಜವಾನ್ ಭವತಿ ಪಶುಮಾನ್ ಭವತಿ ||

ಅರ್ಥ:-ಆನಂದವನ್ನು, ಜನರಿಂದ ಗೌರವವನ್ನು ಮತ್ತು ಆಧ್ಯಾತ್ಮಿಕ ಸಂಪತ್ತನ್ನು ಪಡೆಯುತ್ತಾರೆ.

  • ತಾತ್ಪರ್ಯ:- ಚಂದ್ರನು ಆನಂದ; ಮಕ್ಕಳನ್ನು ಪಡೆಯುತ್ತಾರೆ; ಪಶುಮಾನ್ ಭವತಿ/ಪಶುವಾನ್ ಭವತಿ?-> ಪಶುಸಂಪತ್ತನ್ನು ಪಡೆಯುತ್ತಾರೆ.
| ಯ ಏವಂ ವೇದ | – ಈ ರೀತಿಯಾಗಿ ತಿಳಿದುಕೋ.
| ಯೋ ಪಾಂ ಆಯತನಂ ವೇದ | ಆಯತನವಾನ್ ಭವತಿ ||
  • ಅರ್ಥ:-ಆಯತನಂ -> ಮನೆ, ಸ್ಥಾನ, ಆಶ್ರಯ
  • ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
  • ಟಿಪ್ಪಣಿ:ತಿದ್ದುಪಡಿ:-ಯಾರು ಆಪವನ್ನು ಬ್ರಹ್ಮ, ಆಶ್ರಯವೆಂದು ತಿಳಿಯುರೋ, ಅವರು ಮನೆಯುಳ್ಳವನು ಆಗುತ್ತಾನೆ. (ಪ್ರಾಪಂಚಿಕ ಸಂಪತ್ತನ್ನು ಪಡೆಯತ್ತಾನೆ)

[ಸಂಪಾದಿಸಿ]

1. | ಅಗ್ನಿರ್ವಾ ಅಪಾಮಾಯತನಮ್ | ಆಯತನವಾನ್ ಭವತಿ | ಯೋs ಗ್ನೇರಾಯತನಮ್ ವೇದ | ಆಯತನವಾನ್ ಭವತಿ |

ಅರ್ಥ:-ಅಗ್ನಿ – ದಿವ್ಯ ಚೈತನ್ಯ

  • ಅಮೃತತ್ವವು ಆ ದಿವ್ಯ ಚೈತನ್ಯಕ್ಕೆ(ಅಗ್ನಿಗೆ*) ಆಶ್ರಯವಾಗಿದೆ (ಹುಟ್ಟಿದೆ). ಅಗ್ನಿಯು ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. (ಅಗ್ನಿಯು/ಚೈತನ್ಯ ಬ್ರಹ್ಮನ್ ನಿಂದಲೇ ಬಂದಿದೆ)
|ಆಪೋ ವಾ ಅಗ್ನೇರಾಯತನಂ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯಾತನವಾನ್ ಭವತಿ |
  • ಅರ್ಥ:-ಅಗ್ನಿಗೆ (ದಿವ್ಯ ಚೈತನ್ಯ) ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಗ್ನಿಯನ್ನು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
  • ಟಿಪ್ಪಣಿ:-ಯಾರು ಅಗ್ನಿಯನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.

[ಸಂಪಾದಿಸಿ]

2. | ಯೋ ವಾಯುರ್ವಾ ಅಪಾಮಾಯತನಮ್ | ಆಯತನವಾನ್ ಭವತಿ |
  • ಅರ್ಥ:-ವಾಯು – ಪ್ರಾಣಶಕ್ತಿ
  • ಅಮೃತತ್ವವು ಆ ಪ್ರಾಣಶಕ್ತಿಗೆ (ವಾಯು) ಆಶ್ರಯವಾಗಿದೆ (ಹುಟ್ಟಿದೆ).
  • ಯಾವ ಪ್ರಾಣಶಕ್ತಿಯು (ವಾಯು) ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
| ಆಪೋ ವೈ ವಾಯೋರಾಯತನಮ್ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯಾತನವಾನ್ ಭವತಿ |
  • ಅರ್ಥ:-ಗಾಳಿಗೆ (ಪ್ರಾಣ ಶಕ್ತಿ) ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
  • ಟಿಪ್ಪಣಿ:-ಯಾರು ವಾಯುವನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.

[ಸಂಪಾದಿಸಿ]

3. ಅಸೌ ವೈ ತಪನ್ನಪಾಮಾಯತನಮ್ | ಆಯತನವಾನ್ ಭವತಿ |

ಅರ್ಥ:-ತಪನ್ನ = ಸುಡುವ ಬೆಂಕಿ = ವೈಶ್ವಾನರ ಅಗ್ನಿ/ ಸೂರ್ಯ/ಬೆಳಕು (ವೈ -> ಯಾವನು? ತಪನ್ನಂ -> ಅಗ್ನಿ; ತಪನ= "ಸೂರ್ಯ",ರವಿ; ಬಿಸಿ)

  • ಎಲ್ಲಾ ಜೀವಿಯಲ್ಲೂ ವಾಸವಾಗಿರುವ ಬೆಂಕಿಗೆ/ಬೆಳಕಿಗೆ ಅಮೃತತ್ವವೇ ಆಶ್ರಯವಾಗಿದೆ.
  • ವೈಶ್ವಾನರ ಅಗ್ನಿಯು/ಬೆಳಕು ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
    • ಟಿಪ್ಪಣಿ:;ತಾತ್ಪರ್ಯ:- ಯಾರು ಸೂರ್ಯನನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ. (ಮುಂದೆ ಚಂದ್ರನನ್ನು ಹೇಳಿದೆ, ಈಗ ಸೂರ್ಯನನ್ನು ಹೇಳಿದೆ)
| ಯೋsಮುಷ್ಯ ತಪತ ಆಯತನಂ ವೇದ | ಆಯತನವಾನ್ ಭವತಿ| ಆಪೋ ವಾ ಅಮುಷ್ಯ ತಪತ ಆಯತನಮ್ | ಆಯತನವಾನ್ ಭವತಿ | ಯ ಏವಂ ವೇದ ;| ಯೋsಪಾಮಾಯತನಂ ವೇದ ;| ಆಯಾತನವಾನ್ ಭವತಿ |
  • ವೈಶ್ವಾನರ ಅಗ್ನಿ/ಬೆಳಕಿಗೆ ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. (ವೈಶ್ವಾನರ= ಬೆಂಕಿ, ಅಗ್ನಿ, ೨ ಅಗ್ನಿಯ ಅಧಿದೇವತೆ)
    • ಟಿಪ್ಪಣಿ:;ತಾತ್ಪರ್ಯ:-:-ಯಾರು ತಪತವನ್ನು- ಅಗ್ನಿಯನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.

[ಸಂಪಾದಿಸಿ]

4. | ಚಂದ್ರಮಾ ವಾ ಅಪಾಮಾಯತನಮ್ | ಆಯತನವಾನ್ ಭವತಿ |

ಅರ್ಥ:-ಚಂದ್ರ -> ಮನಸ್ಸು -> ಭೂಮಿಯಲ್ಲಿ ಮನಸ್ಸಿರುವ ಜೀವಿಗಳು/ ಭಗವಂತನನ್ನು ಪಡೆಯಲು ಬೇಕಾದ ಉಪಕರಣ

  • ಅಮೃತತ್ವವು ಮನಸ್ಸಿಗೆ ಆಶ್ರಯವಾಗಿದೆ(ಹುಟ್ಟಿದೆ/ಅರಳಿದೆ)
  • ಮನಸ್ಸು ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
    • ಟಿಪ್ಪಣಿ:;*ತಾತ್ಪರ್ಯ:- ಯಾರು ಚಂದ್ರನನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ. (ಹಿಂದೆ ಸೂರ್ಯನನ್ನು ಹೇಳಿದೆ; ಈಗ ಚಂದ್ರನನ್ನು ಹೇಳಿದೆ)
| ಯಶ್ಚಂದ್ರಮಸ ಆಯತನಂ | ಆಯತನವಾನ್ ಭವತಿ | ಆಪೋ ವೈ ಚಂದ್ರಮಸ ಆಯತನಂ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯಾತನವಾನ್ ಭವತಿ |

ಅರ್ಥ:-ಮನಸ್ಸಿಗೆ(ಚಂದ್ರ) ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.

    • ಟಿಪ್ಪಣಿ:/ ತಾತ್ಪರ್ಯ:-:-ಯಾರು ಚಂದ್ರನನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.
5. | ನಕ್ಷತ್ರಾಣಿ ವಾ ಅಪಾಮಾಯತನಮ್ | ಆಯತನವಾನ್ ಭವತಿ |

[ಸಂಪಾದಿಸಿ]

  • ಅರ್ಥ:- ನಕ್ಷತ್ರಾಣಿ -> ಅಂತರಿಕ್ಷದಲ್ಲಿರುವ ಲೋಕಗಳು. (ಆಕಾಶ)
  • ಅಮೃತತ್ವವು ಎಲ್ಲಾ ಲೋಕಗಳಿಗೆ ಆಶ್ರಯವಾಗಿದೆ(ಹುಟ್ಟಿದೆ/ಅರಳಿದೆ).
  • ಅಂತರಿಕ್ಷದ ಲೋಕಗಳು (ನಕ್ಷತ್ರಗಳು) ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
| ಯೋ ನಕ್ಷತ್ರಾಣಾಮಾಯತನಂ ವೇದ | ಆಯತನವಾನ್ ಭವತಿ | ಆಪೋ ವೈ ನಕ್ಷತ್ರಾಣಾಮಾಯತನಮ್ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯಾತನವಾನ್ ಭವತಿ |
  • ಅಂತರಿಕ್ಷ ಲೋಕಗಳಿಗೆ ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
    • ಟಿಪ್ಪಣಿ:/ ತಾತ್ಪರ್ಯ:-:-ಯಾರು ನಕ್ಷತ್ರಗಳನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.

[ಸಂಪಾದಿಸಿ]

6. | ಪರ್ಜನ್ಯೋ ವಾ ಅಪಾಮಾಯತನಮ್ | ಆಯತನವಾನ್ ಭವತಿ |
  • ಅರ್ಥ:-ಪರ್ಜನ್ಯ -> ಮಳೆ (ಋತುಗಳು)/ನೀರು
  • ಅಮೃತತ್ವವು ಮಳೆಗೆ (ಋತುಗಳಿಗೆ) ಆಶ್ರಯವಾಗಿದೆ(ಹುಟ್ಟಿದೆ/ಅರಳಿದೆ).
  • ಮಳೆ/ಋತುಗಳು/ನೀರು ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
| ಯಃ ಪರ್ಜನ್ಯಸ್ಯಾಯಂತನಂ ವೇದ | ಆಯತನವಾನ್ ಭವತಿ | ಆಪೋ ವೈ ಪರ್ಜನ್ಯಸ್ಯಾಯತನಮ್ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯಾತನವಾನ್ ಭವತಿ |
  • ಅರ್ಥ:-ಮಳೆ/ಋತುಗಳಿಗೆ/ನೀರಿಗೆ ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
    • ಟಿಪ್ಪಣಿ:/ ತಾತ್ಪರ್ಯ:-ಯಾರು ಪರ್ಜನ್ಯವನ್ನು/ ಮಳೆಯನ್ನ ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.

[ಸಂಪಾದಿಸಿ]

7. | ಸಂವತ್ಸರೋ ವಾ ಅಪಾಮಾಯತನಮ್ | ಆಯತನವಾನ್ ಭವತಿ |
  • ಅರ್ಥ:-ಸಂವತ್ಸರ = ವರ್ಷಗಳು -> ಕಾಲ (ಸಮಯ)
  • ಅಮೃತತ್ವವು ವರ್ಷಗಳಿಗೆ /ಕಾಲಕ್ಕೆ ಆಶ್ರಯವಾಗಿದೆ(ಹುಟ್ಟಿದೆ/ಅರಳಿದೆ).
  • ವರ್ಷಗಳು/ಕಾಲವು ಅಮೃತತ್ವವನ್ನು ಆಶ್ರಯಿಸಿದೆ ಎಂದು ಯಾರು ತಿಳಿಯುತ್ತಾರೋ ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
|ಯಸ್ಸಂವತ್ಸರಸ್ಯಾಯತನಂ ವೇದ | ಆಯತನವಾನ್ ಭವತಿ | ಆಪೋ ವೈ ಸ್ಸಂವತ್ಸರಸ್ಯಾಯತನಂ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯಾತನವಾನ್ ಭವತಿ
  • ಅರ್ಥ:-ಕಾಲಕ್ಕೆ /ವರ್ಷಗಳಗೆ ಅಮೃತತ್ವವೇ ಆಧಾರವೆಂದು ಯಾರು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ. ಈ ರೀತಿಯಾಗಿ ತಿಳಿದುಕೋ, ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
  • ತಾತ್ಪರ್ಯ:-:-ಯಾರು ಸಂವತ್ಸರವನ್ನು ಆಪವೆಂದು- ಬ್ರಹ್ಮವೆಂದು- ಆನಂದವೆಂದು ತಿಳಿಯುವರೋ ಅವರು ಮನೆ ಭೂಮಿ ಆಶ್ರಯವನ್ನು ಪಡೆಯತ್ತಾರೆ.
| ಯೋsಪ್ಸುನಾವಂ ಪ್ರತಿಷ್ಠಿತಾಂ ವೇದ | ಪ್ರತ್ಯೇವ ತಿಷ್ಠತಿ |
  • ಅರ್ಥ:-ಅಂತಹ ಭಗವಂತನ ಮಹಿಮೆಯನ್ನು ತಿಳಿದು, ಅವನ ಅನುಗ್ರಹಕ್ಕೆ ಪಾತ್ರರಾಗೋಣ.
  • [ಬ್ರಹ್ಮನ್/ ಪ್ರಜ್ಞೆ/ಆನಂದದಿಂದ ಈ ಲೋಕಗಳು ಸೃಷ್ಟಿಯು ಆಗಿದೆ. ಪಂಚಭೂತಗಳು, ಎಲ್ಲಾ ಜೀವಿಗಳೂ ಅವನ ಸೃಷ್ಟಿಯೇ. ಸಮಯ/ಕಾಲವೂ ಅವನ ಸೃಷ್ಟಿಯೇ ಆಗಿದೆ. ಇದನ್ನು ತಿಳಿದುಕೋ. ಆಗ ಅವನನ್ನು ಪಡೆಯಬಹುದು.]
  • ಟಿಪ್ಪಣಿ: ಆಪ, ವಾಯು, ಅಗ್ನಿ, ಪರ್ಜನ್ಯ, ಸಂವತ್ಸರ - ಕಾಲ, ಇವೆಲ್ಲವೂ ಆಪ-ನೀರು, ಬ್ರಹ್ಮ, ಆನಂದ, -ಪ್ರತಿಮೆಯು ಪುಷ್ಪ; -ಪ್ರತಿಮಾಲಂಕಾರ- ಅಥವಾ ರೂಪಕಾಲಂಕಾರದ ಕವಿತೆ.
  • ಇದನ್ನು ಆಶಿರ್ವಚನಪೂರ್ವಕ ಹೇಳುವುದರಿಂದ ಹೀಗೆ ತಿಳಿದವನು ಈ ಲೋಕದಲ್ಲಿ ಮನೆ, ಮಕ್ಕಳು, ಭೂಮಿ, ಸಂಪತ್ತು ಮತ್ತು ಪುಷ್ಪ - ಆನಂದವನ್ನು ಪಡೆಯತ್ತಾನೆ. ಯಜ್ಞವನ್ನು ದೇವತಾಕಾರ್ಯವನ್ನು ಮಾಡಿದ ಯಜಮಾನನು ಇಹದ ಸಂಪತ್ತು ಮತ್ತು ಸೌಖ್ಯವನ್ನೂ, ಪರದ ಆನಂದವನ್ನೂ ಪಡೆಯಲಿ ಎಂಬ ಆಶೀರ್ವಚನ, ಇದು ಉತ್ಸಾಹಭರಿತ ಏರುದನಿಯಲ್ಲಿ (ತಾರಕದಲ್ಲಿ ಎತ್ತರದ ಶೃತಿಯಲ್ಲಿ ರಾಗಬದ್ಧವಾಗಿ ಆಶೀರ್ವಾದಮಾಡಲು ಜೋಡಿಸಿದ ಭಾವಗೀತೆಯಂತಿರುವ ಒಂದು ವಿಶಿಷ್ಟ ರಾಗದ ವೇದಮಂತ್ರ. ಇಹ-ಪರದಲ್ಲಿ ಯಜಮಾನನಿಗೆ ಸುಖವಾಗಲಿ ಎಂಬ ಹರಕೆ- ಆಶೀರ್ವಾದ- ವಿಸ್ತಾರವಾದ ಅರ್ಥವನ್ನು ಅವರವರ ಭಾವನೆಗೆ ತಕ್ಕಂತೆ ಮಾಡಿಕೊಳ್ಳಬಹುದು.[೧][೨]

[೩]; [೪]

ಕುಬೇರನ ಸ್ತೋತ್ರ[ಸಂಪಾದಿಸಿ]

ಉಪಸಂಹಾರ:
  • ಮಂತ್ರಪುಷ್ಪದ ಕೊನೆಯಲ್ಲಿ ಸಂಪತ್ತನ್ನು ಕೊಡಲು ಕುಬೇರನ ಸ್ತೋತ್ರ; ಅಂತಿಮದಲ್ಲಿ ಬ್ರಹ್ಮ ವಚನ.
  • ಕೊನೆಯಲ್ಲಿ ಸಂಪತ್ತನು ಕೊಡಲು ಕೋರಿ ಕುಬೇರನ ಪ್ರಾರ್ಥನೆ:

ಓಂ ರಾಜಾಧಿರಾಜಾಯ’ ಪ್ರಸಹ್ಯ ಸಾಹಿನೇ” |
ನಮೋ’ ವಯಂ ವೈ”ಶ್ರವಣಾಯ’ ಕುರ್ಮಹೇ |
ಸಮೇ ಕಾಮಾನ್ ಕಾಮ ಕಾಮಾ’ಯ ಮಹ್ಯಮ್” |
ಕಾಮೇಶ್ವರೋ ವೈ”ಶ್ರವಣೋ ದ’ದಾತು |
ಕುಬೇರಾಯ’ ವೈಶ್ರವಣಾಯ’ |
ಮಹಾರಾಜಾಯ ನಮಃ’ |

  • (ಈ ಮಂತ್ರವು ಅರುಣ ಪ್ರಶ್ನದ ಅಂತಿಮ ಭಾಗದಲ್ಲಿ ಬರುತ್ತದೆ. 127 ನೇ ಮಂತ್ರದ ಅರ್ಧ ಭಾಗ. ಇದರ ಕೊನೆಯಲ್ಲಿ ಕೇತುವಿಗೆ, ಸರಸ್ವತಿಗೆ ಶಿವನಿಗೆ ನಮಸ್ಕಾರ ಬರುತ್ತದೆ.)

ಓಂ ತತ್ಸತ್ [೫]
ಓಂ” ತದ್ಬ್ರಹ್ಮ | ಓಂ” ತದ್ವಾಯುಃ | ಓಂ” ತದಾತ್ಮಾ |
ಓಂ” ತದ್ಸತ್ಯಮ್ | ಓಂ” ತತ್ಸರ್ವಮ್” | ಓಂ” ತತ್-ಪುರೋರ್ನಮಃ ||

೦೦೦-೦೦೦-೦೦೦

ನೋಡಿ[ಸಂಪಾದಿಸಿ]

  1. .ಶ್ರೀರಾಮರಕ್ಷಾಸ್ತೋತ್ರ
  2. .ಆದಿತ್ಯಹೃದಯಂ
  3. .ದಕ್ಷಿಣಾ ಮೂರ್ತಿ ಸ್ತೋತ್ರಮ್
  4. *ಈ ಮಂತ್ರದ ಕೇವಲ ಪಠ್ಯಕ್ಕೆ ಮತ್ತು ಅದರ ಜೊತೆಗೆ ಹೇಳುವ ಇತರ ಶ್ಲೋಕಗಳಿಗಾಗಿ ಚರ್ಚೆಪುಟ ನೋಡಿ.

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಮಂತ್ರ ಪುಷ್ಪಮ್
  2. ವೇದ ಶ್ಲೋಕಗಳು
  3. ಅರ್ಥ:ಶ್ರೀಮತಿ ಪ್ರವೀಣಾ ಬಿ.ಎಂ.
  4. ಟಿಪ್ಪಣಿ: ಬಿಎಸ್.ಚಂದ್ರಶೇಖರಅ ಸಾಗರ.
  5. Mantra Pushpam Lyrics (Slokas) in Kannada