ವಿಷಯಕ್ಕೆ ಹೋಗು

ಹಾಲುಜೇನು - ಹಾಯಾಗಿ ಕುಳಿತಿರು ನೀನು

ವಿಕಿಸೋರ್ಸ್ದಿಂದ

ಚಿತ್ರ: ಹಾಲುಜೇನು
ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ. ರಾಜ್‍ಕುಮಾರ್, ಸರಿತಾ
ಸಂಗೀತ: ಜಿ.ಕೆ.ವೆಂಕಟೇಶ್



ಗಂಡು: ಲೇ ಲೇ..
ಹೆಣ್ಣು: ಏನ್ರೀ..

ಗಂ: ಒಂದ್ ಮಾತು
ಹೆ: ಹೇಳಿ
ಗಂ: ಹೇಳಿದ್ರೆ ಕೇಳ್ತ್ಯ?
ಹೆ: ನಿಂ ಮಾತ್ ಯಾವತ್ ಕೇಳಿಲ್ಲ?
ಗಂ: ಹಾಗಿದ್ರೆ, ಆ ಪಾತ್ರೆ ಅಲ್ಲಿಡು
ಹೆ: ಇಟ್ಟೆ

ಗಂ: ಬಾ ಇಲ್ಲಿ
ಹೆಣ್ಣು: ಹಿಮ್..
ಗಂ: ಬಾರೆ ಅಂದ್ರೆ
ಹೆ: ಹಿಮ್..
ಗಂ: ಕೂತ್ಕೋ ಇಲ್ಲಿ ಮಂಚದ್ ಮೇಲೆ
ಹೆ: ಏನ್ರೀ ಇದು ಇಷ್ಟೊತ್‍ನಲ್ಲಿ

ಗಂ: ಅಯ್ಯೋ! ಅದಕ್ಕಲ್ವೇ..

ಗಂ: ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಹೆ: ಮನೆ ಕೆಲ್ಸ ಯಾರ್ರಿ ಮಾಡೋದು ನಿಮ್ಮಾವನ?
ಗಂ: ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ

ನೀನೇ ಆಗಾ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ

ಹೆ: ಅಯ್ಯಯ್ಯೋ ಏನ್ರೀ ಇದು ಅವತಾರ?

ಗಂಡ್ಸಾಗ್ ಹುಟ್ಟಿ ನೀವ್ ಅಡುಗೆ ಮಾಡ್ತೀರ?

ಗಂ: ಹ್ಮ್....ಭೀಮಸೇನ ನಳಮಹರಾಜರು ಗಂಡಸರಲ್ಲವೇ? |೨||
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ? ಮಹನೀಯರಲ್ಲವೇ?
ನೆನ್ನೆಯ ತನಕೆ ನೀನೆ ದುಡಿದೆ, ಈ ಸಂಸಾರಕೇ ಜೀವ ತೇದೆ
ಈ ದಿನವಾದರು ನಿನ್ನ, ಸೇವೆಯ ಮಾಡುವೆ ಚಿನ್ನ


ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ

ತರರಂ ತರರಂ ತರರಂ

ಹೆ: ಯಾ..ಯಾಕ್ರೀ ಕಣ್ಣೀರು
ಗಂ: ಇದು ಕಣ್ಣೀರಲ್ವೇ, ಪನ್ನೀರು ಪನ್ನೀರು
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ? |೨|
ಮನಸನು ಅರಿತು ನಡೆಯಲು ಚಿಂತೆಯ ಮಾತೇಕೆ

ನೀನಗುತಲಿರಲೂ ನನ್ನೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿ ಅಲ್ಲ, ಗಂಡನು ದೇವರು ಅಲ್ಲ
ಪಬಂಪಂ ಪಬಂಪಂ ಪಬಂಪಂ
ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ

ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಂಪಂ ಪಬಂಪಂ ಪಬಂಪಂ


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ