ಈ ಪುಟವನ್ನು ಪ್ರಕಟಿಸಲಾಗಿದೆ
೬೦
ಸತೀಹಿತೈಷಿಣಿ
ಅದರ ಬಲವಾದ ಏಟು ಗುರಿತಪ್ಪಿ ಹೋಗಿ ಚಪಲೆಯ ಮೇಲೆಯೇ ಬಿದ್ದು ಅವಳು ವಿಗತಪ್ರಾಣಳಾಗಿ ಕೆಳಗೆ ಬೀಳುವಂತೆ ಮಾಡಿಬಿಟ್ಟಿತು. ವಿನೋದನು; ತಂತ್ರನಾಥನನ್ನು ಕೊಲ್ಲಹೋದನು. ಆದರೆ ತಂತ್ರನಾಥನು ಚಪಲೆಯ ಕೊಲೆಗೆ ತಾನೇ ಕಾರಣನೆಂದರಿತೂ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲಿ ನಿಲ್ಲದೆ ಬೀದಿಗೆ ಬಂದು, 'ಕೊಲೆ, ಕೊಲೆ'! ಎಂದು ಕೂಗಿಕೊಂಡನು. ಹತ್ತಿರದಲ್ಲಿಯೇ ಬರುತ್ತಿದ್ದ ಪೋಲೀಸಿನವರು ಆಗಲೇ ಮನೆಯೊಳಹೊಕ್ಕು ನೋಡಿದರು. ಅಷ್ಟರಲ್ಲಿ ತಂತ್ರನಾಥನು ಹೊರಟುಹೋಗಿದ್ದುದರಿಂದ ಮನೆಯಲ್ಲಿ ಚಪಲೆಯ ಮೃತದೇಹದ ಬಳಿಯಲ್ಲಿಯೇ ಸಂಭ್ರಾಂತನಾಗಿ ನಿಂತಿದ್ದ ವಿನೋದನನ್ನು ಕಂಡರು. ಆಬಳಿಕ ವಿನೋದನು ಅವರಿಂದ ಬಂಧಿತನಾಗಿ ಒಯ್ಯಲ್ಪಟ್ಟನೆಂಬುದನ್ನು ಹೇಳಬೇಕಾದುದಿಲ್ಲವಷ್ಟೆ.
ಮಹೋದಯರೇ!
ವಿಚಾರಶೂನ್ಯರಿಗಾಗುವ ಫಲವೆಂತಹುದೆಂಬುದು, ಈಗಳಲ್ಲವೇ ತಿಳಿಯಬೇಕು? ಮಾಡತಕ್ಕುದೇನು? ಕರ್ತವ್ಯ ಜ್ಞಾನಶೂನ್ಯತೆಯಿಂದ ವಿನೋದನಿಗುoಟಾದ ವಿಪತ್ತಿಗಾಗಿ ಮರುಮರುಗುವುದೊಂದೇ ಮಾಡತಕ್ಕುದು; ಮುಂದೆಯಾದರೂ ಜ್ಞಾನಾಮೃತವರ್ಷದಿಂದ ಸುಖ ಸಂಗತಿ ಸಂಗಡಿಸಬೇಕಲ್ಲವೇ (ಅ೦ತಾಗಲಿ.)
-----*-----