ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಮಗ್ಗೆಯ ಮಾಯಿದೇವ.
ರ್ಜಲಮಂ ಮಾಡಿ ವಿಮೋಹದಿಂದಕಟ ಪುಣ್ಯಕ್ಕೋಸುಗಂ ಪಾಪಮಂ| ವಿಲಸದ್ಭಕ್ತಿವಿಶುದ್ದಿ ಹೀನಭವಿಗಳ ಮಾಟ್ಸರ್ ಶಿವಾವಲ್ಲಭಾ || ಮೊದಲಿಲ್ಲೆಂದೆಲೆ ಕರ್ಮಮಂ ಬಡುದೆ ಮತ್ತುಂಟೆಂದು ಮತ್ತ೦ತದ | ಕ್ಕಿದುಪಾಯಂ ಪರಿಹಾರಮೆಂದು ಬಡುದೊಂದಂ ಮಾಡಿ ಮತ್ತಾಗಳಂ|| ತದು ಹೋಯಿತ್ತು ವಿಮುಕ್ತರೆಂದು ಬಡುದೇ ತಮ್ಮಲ್ಲಿ ತಾವೇ ಎಮೋ| ಹದ ಸಂಕಲ್ಪದ ಕರ್ಮಿಗಳ್ ಗಟಿಹುವರ್ ನೋಡಾ ಶಿವಾವಲ್ಲಭಾ || ಪರೆಯೇ ಮಾನಸಭಕ್ತಿ ಚಾಕ್ಷುಷಪದಂ ಪಶ್ಯಂತಿಯೇ ವಾಚಿಕ | ಸ್ಫರಣಂ ಮಧ್ಯಮೆಯೇ ಗುರೂಕ್ತಿಮತದಿಂ ಸತ್ಕಾಯಿಕಂ ಭಕ್ತಿ ಮೈ || ಖರಿಯೇ ನೋಟ್ಟೂಡದಿಂತು ನಾಲ್ಕುತೆಚಿನಾಗಿರ್ಕು೦ ಮನಶ್ಚಕ್ಷುರು | ತ್ತರವಾಕ್ಕಾಯಚತುರ್ವಿಧಪ್ರಣಿಧಿಯೊಳ್ ತಾನೇ ಶಿವಾವಲ್ಲಭಾ ||
ಐವುರೀಶ್ವರಶತಕ ಇದರಲ್ಲಿ 113 ವೃತ್ತಗಳಿವೆ; ಪ್ರತಿಪದ್ಯವೂ ಮಹದೈಪುರೀಶ್ವರಾ ಎಂದು ಮುಗಿಯುತ್ತದೆ. ಆರಂಭದಲ್ಲಿ ಐಪುರೀಶ್ವರಸ್ತುತಿ ಇದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ._ ಅಂದಪೆನೆಂಬವಂಗಅರಿಯಬಾರದು ನಿನ್ನ ನಿಜಪ್ರಯತ್ನದಿಂ | ದಡುದಪೆನೆನ್ನದಂಗಡಯಬರ್ಪುದು ನೀಂ ಕೃಪೆಮಾಡೆ ಹೋದ್ಯಮೇ || ನಲಸುವವಂಗೆ ಸಿಲ್ಕದು ನಿಧಾನಮಯತ್ನಪರಂಗೆ ಭಾಗ್ಯದಿಂ | ದಲಸದೆ ಸಿಲ್ಕುವಂತೆ ಪರಮಪ್ರಭುವೇ ಮಹದೈಪುರೀಶ್ವರಾ || ಕ್ಷೀರಸಮುದ್ರಸನ್ನಿಧಿಯೊಳಿರ್ದು ಪಿಪಾಸಿತನಾಗಿ ಭೂಮಿಯಂ | ಹಾರೆಯನಾಂತಗುಲ್ವಿವನೊಲಾಯ್ತು ಸಮಸ್ತಸುಬೈಕಸಿದ್ಧಿವಿ || ಸ್ತಾರಕನಪ್ಪ ನಿನ್ನನುಪದಾವಿಸದಸ್ಯ ಮನುಷ್ಯ ಮಾತ್ರವಂ | ಹಾರುವ ಬುದ್ಧಿಯೆನ್ನ ಪರಮಪ್ರಭುವೇ ಮಹದೈಪುರೀಶ್ವರಾ || ತನ್ನ ಸತೀಸುತಾನುಚರಬಂಧುಜನಂಗಳುಮಿನ್ನು ಮತ್ತೆ ಮಿ | ಕ್ಕನ್ಯರುಮಾತ್ಮದೇಹಕರಣಾದಿಗಳುಂ ಸಲೆ ತಾನುಮೆಲ್ಲರುಂ || ನಿನ್ನವರೆಂದು ನಿನ್ನೊಡವೆಯೆಂದು ನಿಜೇಶ್ವರಪೂಜೆಗೆಯ್ಯವಂ | ಧನ್ಯನದೀಗ ಪೂಜೆ ಪರಮಪ್ರಭುವೇ ಮಹದೈಪುರೀಶ್ವರಾ || ಇವನ ಇತರಗ್ರಂಥಗಳು ನಮಗೆ ದೊರೆತಿಲ್ಲ. 10