ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ಚಾಟುವಿಠಲನಾಧ. 223

             ಸದಮಳಾಚ್ಯುತಕೃಷ್ಣರಾಯನ | ಹೃದಯವೆನಿಸುವ ಭಾಗವತಶಾ |
             ಸ್ತ್ರದ ಮಹಾಸತ್ಕೀರ್ತಿಲಕ್ಷ್ಮಿಯ ವಿಜಯಮಂದಿರವ ||
             ತುದಿಯ ಕಲಶಸ್ಥಾನವೆನಲೊ | ಪ್ಪಿದನು ಪಾಲಿಸುತೊಲಿದು ತನ್ನಯ | 
             ಪದವಿತೊಲುಮೆಯೊಳಚ್ಯುತಾರಣ್ಯಾಖ್ಯಯತಿರಾಯ ||
             ನಿರುಪಮಾಚ್ಯುತಕೃಷ್ಣರಾಯನ | ಪರಮತೇಜಃಪುಂಜವೇ ಜೇ |
             ತರಿಸಿ ಗುರುರೂಪಾಗಿ ಭಾಗವತಾಂತರಂಗವನು || 
             ಧರೆಗೆ ಕನ್ನಡವಾಗಿ ತೆಗೆದು | ದ್ದರಿಸಿ ಕಡೆಗಾಣಿಸಿದನತ್ಯಾ |
             ಶ್ಚರಿಯವೆನಲು ಸದಾಚ್ಯುತಾರಣ್ಯಾಖ್ಯ ಯತಿರಾಯ ||
                   ಕುಮಾರವ್ಯಾಸನ ಭಾರತದಲ್ಲಿ ಸೂಕ್ಷ್ಮವಾಗಿ ಹೇಳಿರುವ ಕೆಲವು ಅಂಶಗಳನ್ನು ಈತನು ಆಸ್ತೀಕ ಮೌಲೋಮಪರ್ವಗಳಾಗಿ ವಿಸ್ತರಿಸಿ ಬರೆದಿರುವುದರಿಂದ ಅವನ ಕಾಲಕ್ಕಿಂತ (ಸು. 1430) ಈಚೆಯವನು ಎಂದು ತಿಳಿಯಬಹುದಾಗಿದೆ. ಅಲ್ಲದೆ ಮೇಲಣ ಪದ್ಯಗಳಿಂದ ಈ ಕವಿ ವಿಜಯ ನಗರದ (ವಿಜಯಮಂದಿರ) ಕೃಷ್ಣರಾಯ (1509-1529), ಅಚ್ಯುತರಾಯ (1530-1542) ಇವರುಗಳ ಕಾಲದಲ್ಲಿ ಭಾಗವತವನ್ನು ಬರೆದಿರಬಹುದು ಎಂದು ಊಹಿಸಲು ಅವಕಾಶವಿದೆ. ಈ ಊಹೆಯ ಪ್ರಕಾರ ಕವಿಯ ಕಾಲವು ಸುಮಾರು 1530 ಆಗಬಹುದು, ಇವನಿಗೆ ನಿತ್ಯಾತ್ಮಶುಕಯೋಗಿ ಎಂಬ ಬಿರುದುಂಟು ಎಂದು ಹೇಳುತ್ತಾರೆ.
         ಇವನ ಗ್ರಂಥಗಳಲ್ಲಿ
                                              1. ಭಾಗವತ
 ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ; ಸಂಧಿ 280, ಪದ್ಯ 12235, ಇದರಲ್ಲಿ 
           ಭಾಗವತದರ್ಧವನು ಸಂಗ್ರಹ | ವಾಗಿ ಬಲ್ಲಂದದಲಿ ವಿಷಯವಿ |
           ಭಾಗವನು ತತ್ವಪ್ರಯೋಜನಜನಿತಸಿದ್ಧಿಯನು ||
           ರಾಗದಿಂದಳಾಪುವೆನು.

ಎಂದು ಕವಿ ಹೇಳುತ್ತಾನೆ, ವರ್ಣನೀಯಾಂಶಗಳನ್ನು ಈ ಪದ್ಯದಲ್ಲಿ ಹೇಳಿದ್ದಾನೆ--

           ಹರಿಗುಣಸ್ತುತಿ ಹರಿಪದಾಂಬುಜ | ಶರಣಜನಸಂಕೀರ್ತನಸ್ತುತಿ |
           ಹರಿಪದಾನತಭಕ್ತಿ ತತ್ಸಾಧನದ ವಿಸ್ತಾರ ||