ಈ ಪುಟವನ್ನು ಪರಿಶೀಲಿಸಲಾಗಿಲ್ಲ.
170 ಕರ್ಣಾಟಕ ಕವಿಚರಿತೆ [15ನೆಯ
ಸೌರಾಷ್ಟ್ರ೦ ಸೋಮನಾಧಂ ಪ್ರಭು ಗಿರಿಶಪದಕ್ಷೇಪಿತಂ ಚಿತ್ತಭಕ್ತಿ | ಶ್ರೀರಾಮಂ ಗುಮ್ಮಟಾರ್ಯ೦ ವಿರಚಿತವೆನಿಪರ್ಧೆ೦ದುಳಿಸ್ತ್ರವಾಖ್ಯಂ || ಎಂಬ ಅಶುದ್ಧವಾದ ಭಾಗದಿಂದ ತಿಳಿಯುತ್ತದೆ. ಇದರಿಂದ ಕವಿ ಸೌರಾಷ್ಟ್ರದ ಸೋಮನಾಥನ ಭಕ್ತನೆಂದು ತೋರುತ್ತದೆ. ಗುಮ್ಮಟಾರ್ಯ ಎಂಬ ಹೆಸರಿದ್ದರೂ ಜೈನಕವಿಯಲ್ಲವೆಂದು ತಿಳಿಯಬಹುದಾಗಿದೆ. ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ | ಅರ್ಧೇ೦ದುಮೊಳಿಶತಕ ಇದು 108 ವೃತ್ತಗಳನ್ನು ಒಳಗೊಂಡಿದೆ ; ಕೆಲವು ಪದ್ಯಗಳು ಅ ರ್ಧೆ೦ದುಮೌಳಿ ಎಂದೂ ಕೆಲವು ಅತ್ಯಂತಶುದ್ಧ ಎಂದೂ ಮುಗಿಯುತ್ತವೆ.
ಗ್ರಂಥವು ಭಕ್ತಿವೈರಾಗ್ಯಗಳನ್ನು ಬೋಧಿಸುತ್ತದೆ ; ಶೈವಾಗಮೋಕ್ತಂ, ಶಮದಮುನಿಯತಾರ್ಥಪ್ರದಂ ಎಂದು ಕವಿ ಇದನ್ನು ವಿಶೇಷಿಸಿ ಹೇಳಿದ್ದಾನೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ_
ಮಸಿಯಂ ಪಾಲಿಂದೆ ಕರ್ಚಲ್ ಬಿಳಿದೆನಿಕುಮೆ ಕಲ್ ನೀರೊಳೆಂತಿರ್ದೊಡಂ ಮೆ | ಲ್ಪ ಸಮಂತೇನಕ್ಕು ಮೇ ಕಂಬಿಯೊಳವಸಿ ಚಿರಂ ಕಟ್ಟಿರಲ್ ನಾಯ ಬಾಲಂ || ಸಸಿನಂ ತಾನಕ್ಕುಮೇ ದುರ್ಗುಣದೊಳನುದಿನಂ ಮೆಚ್ಚುವಟ್ಟಿರ್ದನಂ ಮಾ | ಣಿಸಲೆನ್ನಂ ಬರ್ಕುಮೇ ಸದ್ವಚನಶತದೊಳಂ ನೋಟ್ಟೂಡತ್ಯಂತಶುದ್ಧಾ || ಆಸತ್ತುಂ ನಿದ್ರೆಗೆಯು೦ ಪಸಿದುಮಲಸಿಯುಂ ದುಃಖದೊಳ್ ಚಿಂತಿಸುತ್ತುಂ | ಬೇಸತ್ತುಂ ಸರ್ವರೋಗಗ್ರಹಭಯಚಕಿತಾವಸ್ಥೆಯೊಳ್ ಕೂಡಿದಂದುಂ || ಕೂಸಾಗಿರ್ದಂದು ಮಾಯಾವ್ಯಸನಭರದೊಳಂ ಮುತ್ತೊಡಂ ನಿಮ್ಮಶತ್ವಾ | ಭ್ಯಾಸ೦ ಮುಚಿತ್ತದೊಳ್ ಸಂಕ್ರಮಿಸುಗೆಯೆನಗೆಂದೆಂದುಮರ್ಧೇಂದುಮಳೀ || ಆನಾರ್ಗೆನಪ್ಪೆನೆಲ್ಲಿಂದೊದೆದೆನೆನಗೆ ನಂಟರ್ಕಳಾರೆನ್ನ ಪೋಪ |
ಸ್ಥಾನಂ ತಾನಾವುದೆನ್ನಂ ಪಿಡಿದು ತಿರಿಪತಿರ್ದಸ್ಪರಾರೆನ್ನ ಜನ್ಮಂ || ತಾನೇತಕ್ಕಾದುದೆಂದಿಂತಿದ ಮೊದಲ ಬೇರಾವುದೇನೆಂದು ತನ್ನಿಂ | ತಾನೇ ನಿಶ್ಚಸಿ ತನ್ನಂ ತಿಳಿಯೆ ನಿಜಪದಂ ತೋರ್ಪದತ್ಯಂತಶುದ್ಧಾ|| ಅಳೆಪಾರಾರಾಯುಮಂ ಕಂಧಿಸದು ಕದಡದಾರಾರ ಗುಣ್ಪುಳ್ಳ ಧೈಯ್ಯಂ | ಗಳನಾರಾರೊಳ್ಳನಳ್ಳೆಸದು ಮಸುಳಿಸದಾರಾರ ಪೆರ್ಚಿರ್ದ ತೇಜಂ ||