ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನಕ್ಕೆ ಹಿಂದೆ] ಬ್ರಹ್ಮ ಶಿವ 18 ಪತಿರಾಮಸ್ಥಾಪಿತೋದ್ಯತ್ತ್ರಿಭುವನತಿಲಕಾಲಂಕೃತಖ್ಯಾತಿನಾಮಾಂ | ಕಿತಮಾಗೊಪ್ಪಿರ್ಪ ಪೆಣ್ಣೆಂಗಡಲಪುರವರಾಧೀಶ್ವರಂ ಚಂದ್ರನಾಧಾ || ಎಂಬ ಪದ್ಯದಿಂದ ಈ ಅಶ್ಟಕವನ್ನು ಬರೆದವನು ಮೌಕ್ತಿಕ ಕವಿಯೆಂದು ತೋರುತ್ತದೆ. ಇಲ್ಲಿ ಹೇಳಿರುವ ಪೆಣ್ಣೆಂಗಡಲು ಅಥವಾ ಹೆಣ್ಣೆಗಡಲು ಎಂಬ ಸ್ಥಳವು ಜೈನರಾದ ಕೊಂಗಾಳ್ವರ ರಾಜ್ಯಕ್ಕೆ ಸೇರಿ ದ್ದಿತು. ಇದನ್ನು ವೀರಕೊಂಗಾಳ್ವದೇವನು ಸುಮಾರು 1120ರಲ್ಲಿ ಮೇಘಚಂದ್ರನ ಶಿಷ್ಯನಾದ ಪ್ರಭಾಚಂದ್ರಸಿದ್ದಾಂತದೇವನಿಗೆ ದಾನವಾಗಿ ಕೊಟ್ಟಂತೆ ಒಂದು ಶಾಸನದಿಂದ 1 ತಿಳಿಯುತ್ತದೆ. ಸುಮಾರು 1189ರಲ್ಲಿ ಈ ಸ್ಥಳದೊಳಗೆ ಶೈವರು ಪ್ರಬಲರಾಗಿದ್ದಂತೆ ಇತರಶಾಸನಗಳಿಂದ 2 ತಿಳಿ ವುದರಿಂದ ಅಲ್ಲಿ ಜೈನರ ಪ್ರಾಬಲ್ಯದ ಕಾಲವು ಸುಮಾರು 1120 ಆಗಿರಬ ಹುದು. ಆಕಾಲವನ್ನೇ ಕವಿಗೆ ಕೊಟ್ಟಿದ್ದೇವೆ. ಈ ಗ್ರಂಥದಲ್ಲಿ 9 ವೃತ್ತಗಳಿವೆ , ಪ್ರತಿವೃತವೂ ಚಂದ್ರನಾಥ ಎಂದು ಮುಗಿಯುತ್ತದೆ. ಇದರಿಂದ ಒಂದು ಪದ್ಯವನ್ನು ಉದ್ಧರಿಸಿ ಬರೆಯುತ್ತೇವೆ:- ಕುಮತೋಗ್ರಗ್ರೀಷ್ಮತಸ್ತಂಗಿದು ಹಿಮಕರಬಿಂಬಂ ಪರಸ್ತೋತ್ರಪಿತ್ತ | ಭ್ರಮಹ್ರುಜ್ಜೆಹ್ವಂಗ ಸೌಧಂ ಕಬಳಮನ್ರುತದುರ್ವಾಸನಾವಾಸಿತಾತ್ಮಂ || ಗಮಳಾಂಭೋಜಂ ಕುದೃಷ್ಟ್ಯಾಮಯಿಗಿದು ಘನಸಾರಾಂಜನಂ ಕುಶ್ರುತಾನ್ಯಾ| ಗಮದುರ್ಮಂತ್ರಂಗೆ ನಿನ್ನಾಕೃತಿಯಿದಮೃತಬೀಜಾಕ್ಷರಂ ಚಂದ್ರನಾಧಾ || ----- ಬ್ರಹ್ಮಶಿವ ಸು. 1125 ಈತನು ತ್ರೈಲೋಕ್ಯ ಚೂಡಾಮಣಿಸ್ತೋತ್ರವನ್ನೂ ಬರೆದಿರುವಂತೆ ತೋರುತ್ತದೆ. ಈ ಗ್ರಂಥದ 20ನೆಯದಾದ “ಪಡೆದಾಡಂ ತವೆ ಕೊಂದು” ಎಂಬ ಪದ್ಯವು 4 ಈ ಕವಿಯ ಸಮಯಪರೀಕ್ಷೆಯಲ್ಲಿ ದೊರೆಯುತ್ತದೆ. ಇದರ ಅಂತ್ಯಭಾಗವನ್ನು ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ಉದಾಹರಿ ಸಿದ್ದಾನೆ, ಸಮಯಪರೀಕ್ಷೆಯಲ್ಲಿ ಇರುವಂತೆಯೇ ಈ ಗ್ರಂಥದಲ್ಲಿಯೂ ಅನ್ಯಮತದೂಷಣವು ವಿಶೇಷವಾಗಿದೆ. ಗ್ರಂಥಾಂತ್ಯದಲ್ಲಿರುವ --------------------------------------------- I, Mysore Archeological Report for I912 13, pala 64 2 Arkalgud 79 and 81 3. Vol. I, 108 4. lbtd , 109.