ಕಲಿಯಾತಂ ಕಾಂತನಾತಂ ಸುಮನಚರಿತನಾತಂ ಕಲಾಕಲ್ಪನಾತಂ
ಕಲೆಯಾತಂ ಭೋಗಿಯಾತಂ ಚತುರವಿನುತನಾತಂ ಚಿದಾನಂದನಾತಂ
ಛಲಿಯಾತಂ ಸತ್ಯನಾತಂ ಬುಧಜನಹಿತನಾತಂ ಜಗತ್ ಪೂಜ್ಯನಾತಂ
ಸಲೆ ನಿಮ್ಮಂ ನಂಬಿ ನಿಚ್ಚಂ ಮರೆಯದೆ ನೆನವಾತಂ ವಿರೂಪಾಕ್ಷಲಿಂಗಂ‖ ೫೨
‖
ನೋಡಿತೆ ಮಂಗಳಂ ೩ನೆನಪೆ೩ ಮಂಗಳ೪ಮಿರ್ದೆಡೆ೪ ಮಂಗ೫ಳಂ ಕರಂ೫
ಪಾಡಿತೆ ಮಂಗಳಂ ಶರಣರೆಂದುದೆ ಮಂಗಳ೬ಮೊಲ್ದವರ್ ಮನಂ
ಗೂಡಿತೆ೬ಮಂಗಳಂ ನಡೆಯೆ ಮಂಗಳಂ ಮಾ೭ಡಿತೆ ಮಂಗಳಾತ್ಮಕಂ
ಮಾಡಿತೆ ಮಂಗಳಂ ಪರಮಮಂಗಳ೮ವೈ ಎಲೆ೮ ಹಂಪೆಯಾಳ್ದನೇ ‖ ೫೩ ‖
ಕಲಿಯಾವಂ ಶಿವಭಕ್ತನಚ್ಚಸುಖಿಯಾವಂ ಭಕ್ತನಾವರ್ತದಿಂ
ಛಲಿಯಾವಂ ಶಿವಭಕ್ತನುತ್ತಮನದಾವಂ ಭಕ್ತನೆಲ್ಲಂದದಿಂ
ಬಲಿಯಾವಂ ಶಿವಭಕ್ತನೂರ್ಜಿತನದಾವಂ ಭಕ್ತನೀಶಂಗೆ ಬೇ-
ಳ್ಪೊಲನಾವಂ ಶಿವಭಕ್ತನಾತನೆಲೆ ಸದ್ಭಕ್ತಂ೯ ವಿರೂಪಾಕ್ಷನಾ
‖ ೫೪ ‖
ಕೊಂದಂ ಭಕ್ತಿಪುರಸ್ಸರಂ ೧ಮಗನನಾ ಶ್ರೀಯಾಳ೧ಗೇನಾಯ್ತು೨ ಮೇಣ್
ಕೊಂದಂ ಭಕ್ತಿಪುರಸ್ಸರಂ ೩ಜನಕನಂ೩ ಚಂಡೇಶಗೇನಾಯ್ತು ೪ಪೋ೪
ಕೊಂದಂ ಭಕ್ತಿಪುರಸ್ಸರಂ ಜನನಿಯಂ ರಾಮಂಗದೇನಾಯ್ತು ಕೇಳ್
ಕುಂದೇ ತಾನದು ಭಕ್ತಿಯುಳ್ಳೊಡೆ ಸದಾಚಾರಂ ವಿರೂಪಾಕ್ಷನಾ‖ ೫೫ ‖
ಮದಮಂ ಮಾಣ್ದು ದುರಾಶೆಯಂ ಪರೆದು ಕಾಮಾಸಕ್ತಿಯಂ ಬಿಟ್ಟು ಸ-
ಮ್ಮುದದಿಂ ಲಿಂಗಮನೊಲ್ದು ನೋಡಿ ನಲಿವಾ ಸದ್ಭಕ್ತನಂತಾತನಿ-
ರ್ದುದೆ ತಾರಾಚಲಮಾತನಿರ್ದುದೆ೫ ಹಿಮಾದ್ರೀಂದ್ರಂ ಬಳಿಕ್ಕಾತನಿ-
ರ್ದುದೆ ವಾರಾಣಸಿಯಾತನಿರ್ದುದೆ ವಿರೂಪಾಕ್ಷಂಗೆ ಪಂಪಾಪುರಂ ‖ ೫೬ ‖
ಪುಟ:ಶತಕ ಸಂಪುಟ.pdf/೭೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೧