ಜಗದೊಡೆಯ ನಿನ್ನ ನಾಮವ ನುತಿಪ ಪುಣ್ಯಾತ್ಮ
ರಿಗೆ ದೋಷವಿ೩ರಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೪
‖
ಸಂಗೀತಸವಿಯು ಬಧಿರಂಗೆ ೧ತೋರು೧ವುದುಂಟೆ
ಕಂಗುರುಡನಿಗೆ ಕನ್ನಡಿಯ ಹಂಬಲಿರಲುಂಟೆ
ರಂಗು೨ದುಟಿ೨ ಮಾಣಿಕ್ಯ ಥಳಥಳಿಸುತಿ೩ರಲು೩ ಗೋಲಾಂಗುಲಗೆ ಪರಿಖೆ೪ಯುಂಟೆ
ಕಂಗೊಳಿಸು೫ವಿನಿಗೋಲ ರುಚಿಯು ಬೋಡನಿಗುಂಟೆ
ಮಂಗಳಾತ್ಮಕ ನಿನ್ನ ದಿವ್ಯನಾಮವನರಿಯ
ದಂಗೆ ಭವ ಬಿಡಲುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೫ ‖
ಮರಣಕಾಲಕೆ ಪಿರಿದು ಅರಸುತನ ಬರಲೇನು
ಪರಮರೋಗದೊಳು ಘೃತಪರಮಾನ್ನ ಬರಲೇನು
ಹರಿಣಾಕ್ಷಿ ವೃದ್ಧನಾಗಿರುವಾಗ ಬರಲೇನು ಧರಣಿಯೊಳು ಬೆಳೆದ ಫಲವು
ಉರಿದು ಹಾರಿದ ಬಳಿಕ ಭರದಿ ಮಳೆ ೬ಬರಲೇನು೬
ಹರಣ ಹಿಂಗದ ಮುನ್ನ ನಿನ್ನ ಸ್ಮರಿಸದ ಮನುಜ
ನಿರಲೇನು ಧರೆಯೊಳಗೆ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೩೬ ‖
ಪತಿಯ ನಿಂದಿಸುತಿಪ್ಪ ಸತಿಯಿದ್ದು೭ ಫಲವೇನು
ಅತಿಮಂದಮತಿಯಾದ ಸುತನಿದ್ದು೭ ಫಲವೇನು
ಮತಿಯಿಲ್ಲದವನ ಸಂಗತಿಯಿದ್ದು೭ ಫಲವೇನು ಹಿತವಿಲ್ಲದರ ಬಳಿಯಲಿ
ಸತತ ಮನಮುಟ್ಟಿ ಧಾವತಿಯ ಮಾಡಿದಡೇನು
ಚತುರಾಸ್ಯನಮಿತ ನಿನ್ನಯ ಪುಣ್ಯನಾಮವನು
ನುತಿಸದವನಿದ್ದೇನು ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೩೭ ‖
ಚೋರ ನಿಂದಿಸಲಾಗಿ ಚಂದಿರಗೆಕುಂದೇನು
ಪೋರ ನಿಂದಿಸಲಾಗಿ ಪ್ರಾಜ್ಞರಿಗೆ ಕುಂದೇನು
ದಾರಿದ್ರ ನಿಂದಿಸಲು ದಾನಶೂರಗೆ ಬಂದ ಕುಂದೇನು ಹುಟ್ಟಂಧಕ
ಪುಟ:ಶತಕ ಸಂಪುಟ.pdf/೧೧೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೭೧